Tag: Vinod Dondale

  • ಮರಾಠ ಸಂಪ್ರದಾಯದಂತೆ ನೆರವೇರಿದ ನಿರ್ದೇಶಕ ವಿನೋದ್ ಅಂತ್ಯಕ್ರಿಯೆ

    ಮರಾಠ ಸಂಪ್ರದಾಯದಂತೆ ನೆರವೇರಿದ ನಿರ್ದೇಶಕ ವಿನೋದ್ ಅಂತ್ಯಕ್ರಿಯೆ

    ನ್ನರಸಿ ರಾಧೆ, ಕರಿಮಣಿ (Karimani) ಸೀರಿಯಲ್ ನಿರ್ದೇಶಕ ವಿನೋದ್ ದೊಂಡಾಲೆ  (Vinod Dondale) ಅವರ ಅಂತ್ಯಕ್ರಿಯೆ ಇಂದು (ಜು.21) ಮರಾಠ ಸಂಪ್ರದಾಯದಂತೆ ನೆರವೇರಿದೆ. ಇದನ್ನೂ ಓದಿ:ಅದೆಷ್ಟೋ ಜನರಿಗೆ ವಿನೋದ್ ಬದುಕಿನ ದಾರಿ ಹೇಳಿ ಕೊಟ್ಟಿದ್ದಾರೆ: ನಟಿ ಲಕ್ಷ್ಮಿ ಸಿದ್ದಯ್ಯ

    ನಾಗರಭಾವಿ ನಿವಾಸದಲ್ಲಿ ಆಪ್ತರಿಗೆ ಇಂಡಸ್ಟ್ರಿಯವರಿಗೆ ವಿನೋದ್ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇಂದು (ಜು.21) ಮಧ್ಯಾಹ್ನ ನಗರದ ಚಾಮರಾಜೇಟೆಯ ಟಿ.ಆರ್ ಮಿಲ್‌ನಲ್ಲಿ ಹಿಂದೂ ಮರಾಠ ಸಂಪ್ರದಾಯದಂತೆ ವಿನೋದ್ ಅಂತ್ಯಕ್ರಿಯೆ ಜರುಗಿದೆ.

    ಅಂದಹಾಗೆ, ಸಾಲದ ಸುಳಿಯಲ್ಲಿ ಸಿಲುಕಿದ್ದ ವಿನೋದ್ ಜು.20ರಂದು ತಮ್ಮ ನಿವಾಸದಲ್ಲಿ  ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿರ್ದೇಶಕ ವಿನೋದ್ ಅವರ ಸಿನಿಮಾ ಮಾಡುವ ಕನಸು ಮಾತ್ರ ಅರ್ಧದಲ್ಲೇ ಕಮರಿ ಹೋಗಿರೋದು ದುರಂತವೇ ಸರಿ. ವಿನೋದ್ ಇನ್ನು ಕೇವಲ ನೆನಪು ಮಾತ್ರ.

  • ವಿನೋದ್‌ ಇಲ್ಲದೇ ಇರೋದು ಕಿರುತೆರೆಗೆ ದೊಡ್ಡ ನಷ್ಟ: ನಟ ಅಭಿಜಿತ್ ಭಾವುಕ

    ವಿನೋದ್‌ ಇಲ್ಲದೇ ಇರೋದು ಕಿರುತೆರೆಗೆ ದೊಡ್ಡ ನಷ್ಟ: ನಟ ಅಭಿಜಿತ್ ಭಾವುಕ

    ನಿರ್ದೇಶಕ ವಿನೋದ್ ದೊಂಡಾಳೆ (Vinod Dondale) ನಾಗರಭಾವಿಯಲ್ಲಿರುವ ನಿವಾಸಕ್ಕೆ ಹಿರಿಯ ನಟ ಅಭಿಜಿತ್ (Actor Abhijith) ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ವಿನೋದ್ ಅವರ ಸಾವು ನೋವು ಕೊಟ್ಟಿದೆ. ಅವರು ಹೀಗೆ ನಿರ್ಧಾರ ತೆಗೆದುಕೊಂಡಿದ್ದಾರೆ ಅಂದರೆ ನಂಬೋಕೆ ಆಗ್ತಿಲ್ಲ ಎಂದು ನಟ ಅಭಿಜಿತ್ ಭಾವುಕರಾಗಿದ್ದಾರೆ. ಇದನ್ನೂ ಓದಿ:ಅದೆಷ್ಟೋ ಜನರಿಗೆ ವಿನೋದ್ ಬದುಕಿನ ದಾರಿ ಹೇಳಿ ಕೊಟ್ಟಿದ್ದಾರೆ: ನಟಿ ಲಕ್ಷ್ಮಿ ಸಿದ್ದಯ್ಯ

    ಇದು ದುಃಖಕರ ಸನ್ನಿವೇಶ ಆಗಿದೆ. ವಿನೋದ್ ನಿರ್ದೇಶನದಲ್ಲಿ ‘ಗಂಗೆ ಗೌರಿ’ ಸೀರಿಯಲ್‌ನಲ್ಲಿ (Gange Gowri Serial) ಆ್ಯಕ್ಟ್ ಮಾಡ್ತಿದ್ದೇನೆ. ಅವರು ಸೌಮ್ಯ ಸ್ವಭಾವದವರಾಗಿದ್ದರು. ಸೆಟ್‌ನಲ್ಲಿ ಸಿಟ್ಟು  ಮಾಡಿಕೊಂಡಿರೋದನ್ನು ನಾನು ನೋಡೇ ಇಲ್ಲ. ಇಂದು ಈ ರೀತಿಯ ನಿರ್ಧಾರ ತೆಗೆದುಕೊಂಡಿರೋದನ್ನ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಅವರ ಸಾವು ಇಡೀ ಫ್ಯಾಮಿಲಿಗೆ ತುಂಬಾ ನೋವಾಗಿದೆ. ವಿನೋದ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ. ವಿನೋದ್‌ ಇಲ್ಲದೇ ಇರೋದು ಕಿರುತೆರೆ ಮತ್ತು ಹಿರಿತೆರೆಗೆ ದೊಡ್ಡ ಲಾಸ್ ಎಂದು ಹಿರಿಯ ನಟ ಅಭಿಜಿತ್ ಮಾತನಾಡಿದ್ದಾರೆ.

    ‘ಗಂಗೆ ಗೌರಿ’ಯಲ್ಲಿ ಮದುವೆ ಸೀನ್ ಶೂಟಿಂಗ್ ಮಾಡುವಾಗ ಹೆಚ್ಚು ಸಮಯ ಕಳೆದಿದ್ದೇನೆ. ನನಗೆ ತುಂಬಾ ಗೌರವ ಕೊಡುತ್ತಿದ್ದರು. ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಇನ್ನೂ ಅವರು ಒಂದು ಸಿನಿಮಾ ಮಾಡ್ತಿದ್ದರು ಅದು ಇತ್ತೀಚೆಗೆ ಸ್ಟಾಪ್ ಆಗಿತ್ತು ಅನ್ನೋ ವಿಚಾರ ಗೊತ್ತಿತ್ತು ಎಂದಿದ್ದಾರೆ. ಯಾಕೆ ಏನು ಎಂದು ಹಿಂದಿನ ಸತ್ಯ ನಮಗೂ ಗೊತ್ತಿಲ್ಲ ಎಂದು ನಟ ಅಭಿಜಿತ್ ಮಾತನಾಡಿದ್ದಾರೆ.

    ಅಂದಹಾಗೆ, ನಿರ್ದೇಶಕ ವಿನೋದ್ ದೊಂಡಾಳೆ ಜು.20ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು (ಜು.21) ಚಾಮರಾಜಪೇಟೆ ಟಿ.ಆರ್ ಮಿಲ್‌ನಲ್ಲಿ ವಿನೋದ್ ದೊಂಡಾಳೆ ಅಂತ್ಯಕ್ರಿಯೆ ನಡೆಯಲಿದೆ.

  • ಅದೆಷ್ಟೋ ಜನರಿಗೆ ವಿನೋದ್ ಬದುಕಿನ ದಾರಿ ಹೇಳಿ ಕೊಟ್ಟಿದ್ದಾರೆ: ನಟಿ ಲಕ್ಷ್ಮಿ ಸಿದ್ದಯ್ಯ

    ಅದೆಷ್ಟೋ ಜನರಿಗೆ ವಿನೋದ್ ಬದುಕಿನ ದಾರಿ ಹೇಳಿ ಕೊಟ್ಟಿದ್ದಾರೆ: ನಟಿ ಲಕ್ಷ್ಮಿ ಸಿದ್ದಯ್ಯ

    ಕಿರುತೆರೆಯ ಹಿಟ್ ನಿರ್ದೇಶಕ ವಿನೋದ್ ದೊಂಡಾಳೆ (Vinod Dondale) ಜು.20ರಂದು ನೇಣಿಗೆ ಕೊರಳೊಡ್ಡಿದ್ದಾರೆ. ಇದೀಗ ನಿರ್ದೇಶಕ ವಿನೋದ್ ಅಂತಿಮ ದರ್ಶನ ಪಡೆದ ಬಳಿಕ ನಟಿ ಲಕ್ಷ್ಮಿ ಸಿದ್ದಯ್ಯ (Lakshmi Siddaiah) ಮಾತನಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ನಿರ್ಧಾರ ಅವರು ತಗೊಂಡಿದ್ದಾರೆ ಅಂದರೆ ನಂಬೋಕೆ ಆಗ್ತಿಲ್ಲ ಎಂದು ನಟಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ರೊಟ್ಟಿ ಮೇಲೆ ಉಗುಳಿದ ಅನ್ಯಕೋಮಿನ ವ್ಯಾಪಾರಿ; ರಾಮ-ಶಬರಿಗೆ ಹೋಲಿಸಿದ ಸೋನು ಸೂದ್‌ ವಿರುದ್ಧ ಆಕ್ರೋಶ

    ವಿನೋದ್ ಸರ್ ಜೊತೆ ಕೆಲಸ ಮಾಡಿದ್ದು, ಇದೇ ಫಸ್ಟ್ ಪ್ರಾಜೆಕ್ಟ್ ‘ಗಂಗೆ ಗೌರಿ’ ಸೀರಿಯಲ್. ಆದರೆ ಅವರ ಬಗ್ಗೆ ತುಂಬಾ ವರ್ಷದಿಂದ ಕೇಳಿದ್ದೀನಿ. ಅವರು ಇಲ್ಲ ಅನ್ನೋದನ್ನು ನಂಬೋಕೆ ಆಗ್ತಿಲ್ಲ. ಅಷ್ಟು ಸರಳ ವ್ಯಕ್ತಿ. ನಮ್ಮಗಳ ಜೊತೆ ನಮ್ಮ ಹಾಗೆನೇ ಇರೋರು. ಡೈರೆಕ್ಟರ್ ಅನ್ನೋ ಭಾವನೆನೇ ಕೊಡ್ತಿರಲಿಲ್ಲ ಎಂದು ನಟಿ ಲಕ್ಷ್ಮಿ ಸಿದ್ದಯ್ಯ ಭಾವುಕರಾಗಿದ್ದಾರೆ.

    ಅವರ ಜೊತೆ ಸೆಟ್‌ನಲ್ಲಿ ತುಂಬಾ ಜಗಳ ಮಾಡಿಕೊಂಡು ಕೆಲಸ ಮಾಡಿದ್ದೀನಿ. ನಮಗೆ ಆಗಲ್ಲ ಅಂದರೆ ಆಯ್ತು, ಸರಿ ಬಿಡಿ ಅಂತಾ ಹೇಳುತ್ತಿದ್ದರು. ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರು ವಿನೋದ್ ಸರ್. ಈಗ ಅವರು ಹೀಗೆ ನಿರ್ಧಾರ ತಗೊಂಡಿದ್ದಾರೆ ಅಂದರೆ ನಂಬಲು ಕಷ್ಟ ಆಗ್ತಿದೆ ಎಂದಿದ್ದಾರೆ ನಟಿ ಲಕ್ಷ್ಮಿ.

    ಇತ್ತೀಚೆಗೆ ‘ಗಂಗೆ ಗೌರಿ’ ಸೀರಿಯಲ್‌ಗಾಗಿ ಎಲ್ಲರೂ ಕಾಶಿಗೆ ಶೂಟಿಂಗ್ ಹೋಗಿದ್ದೆವು. ಅವರ ಜೊತೆ ಒಟ್ಟಿಗೆ ಕೆಲಸ ಮಾಡಿದ್ದೇವೆ. ಈ ವೇಳೆ, ಅವರ ಜೊತೆ ಕೆಲಸ ಮಾಡಿದ್ವಿ ಅನ್ನೋ ಫೀಲ್ ಕೊಡಲಿಲ್ಲ. ಎಲ್ಲರೂ ಜೊತೆಯಾಗಿ ಫ್ಯಾಮಿಲಿ ಟ್ರಿಪ್ ಹೋದ ಹಾಗೆ ಅನಿಸುತ್ತಿತ್ತು. ಅದೆಷ್ಟೋ ಜನರಿಗೆ ಅವರು ಬದುಕಿನ ದಾರಿ ಹೇಳಿ ಕೊಟ್ಟಿದ್ದಾರೆ. ವಿನೋದ್ ಸರ್ ರೀತಿಯ ವ್ಯಕ್ತಿ ಇಲ್ಲದೇ ಇರೋದು ಕಿರುತೆರೆ ಮತ್ತು ಹಿರಿತೆರೆಗೆ ದೊಡ್ಡ ನಷ್ಟ ಎಂದು ನಟಿ ಮಾತನಾಡಿದ್ದಾರೆ.

    ಅಂದಹಾಗೆ, ನಿರ್ದೇಶಕ ವಿನೋದ್ ದೊಂಡಾಳೆ ಜು.20ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು (ಜು.21) ಚಾಮರಾಜಪೇಟೆ ಟಿ.ಆರ್ ಮಿಲ್‌ನಲ್ಲಿ ವಿನೋದ್ ದೋಂಡಾಳೆ ಅಂತ್ಯಕ್ರಿಯೆ ನಡೆಯಲಿದೆ.

  • ಚಾಮರಾಜಪೇಟೆಯಲ್ಲಿ ನಡೆಯಲಿದೆ ವಿನೋದ್ ದೊಂಡಾಳೆ ಅಂತ್ಯಕ್ರಿಯೆ

    ಚಾಮರಾಜಪೇಟೆಯಲ್ಲಿ ನಡೆಯಲಿದೆ ವಿನೋದ್ ದೊಂಡಾಳೆ ಅಂತ್ಯಕ್ರಿಯೆ

    ‘ಕರಿಮಣಿ’ (Karimani), ‘ಗಂಗೆ ಗೌರಿ’ ಸೇರಿದಂತೆ ಹಲವು ಸೀರಿಯಲ್‌ಗಳನ್ನು ನಿರ್ದೇಶಿಸಿದ್ದ ವಿನೋದ್ ದೊಂಡಾಳೆ (Vinod Dondale) ಜು.20ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು (ಜು.21) ಚಾಮರಾಜಪೇಟೆ ಟಿ.ಆರ್ ಮಿಲ್‌ನಲ್ಲಿ ವಿನೋದ್ ದೊಂಡಾಳೆ ಅಂತ್ಯಕ್ರಿಯೆ ನಡೆಯಲಿದೆ.

    ನಾಗರಭಾವಿಯಲ್ಲಿರುವ ನಿವಾಸದಲ್ಲಿ ನಿರ್ದೇಶಕ ವಿನೋದ್ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದ್ದು, ಇಂದು ಮಧ್ಯಾಹ್ನ 12 ಗಂಟೆಯ ನಂತರ ಚಾಮರಾಜಪೇಟೆ ಟಿ.ಆರ್ ಮಿಲ್‌ನಲ್ಲಿ ವಿನೋದ್ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ:ಸಿನಿಮಾ ಟಿಕೆಟ್, ಒಟಿಟಿ ಸಬ್‌ಸ್ಕ್ರಿಪ್ಶನ್ ಮೇಲೆ ಸೆಸ್‌ ವಿಧಿಸಲು ರಾಜ್ಯ ಸರ್ಕಾರ ಪ್ಲ್ಯಾನ್‌!

    ಅಂದಹಾಗೆ, ಕಿರುತೆರೆಯಿಂದ ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ಟಿದ್ದ ಇವರು ಸದ್ಯ ನೀನಾಸಂ ಸತೀಶ್ ನಟನೆಯ ‘ಅಶೋಕ ಬ್ಲೇಡ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದರು. ಈಗಾಗಲೇ ಸಿನಿಮಾ ಶೇಕಡ 90ರಷ್ಟು ಚಿತ್ರೀಕರಣ ಮುಗಿಸಿದೆ. ಮುಂದಿನ ಹಂತದ ಚಿತ್ರೀಕರಣಕ್ಕೂ ವಿನೋದ್ ಸಿದ್ಧತೆ ಮಾಡಿಕೊಂಡಿದ್ದರು. ನಿನ್ನೆಯಷ್ಟೇ ಶೂಟಿಂಗ್ ಕುರಿತಂತೆ ನೀನಾಸಂ ಸತೀಶ್ ಜೊತೆ ಚರ್ಚೆ ಮಾಡಿದ್ದರು.

    ವಿನೋದ್ ದೊಂಡಾಳೆ ಅವರು ಅತಿಥಿ, ಬೇರು, ತುತ್ತೂರಿ, ವಿಮುಕ್ತಿ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದರು.

  • ಕನ್ನಡದ ಖ್ಯಾತ ಕಿರುತೆರೆ ನಿರ್ದೇಶಕ ವಿನೋದ್ ನೇಣಿಗೆ ಶರಣು

    ಕನ್ನಡದ ಖ್ಯಾತ ಕಿರುತೆರೆ ನಿರ್ದೇಶಕ ವಿನೋದ್ ನೇಣಿಗೆ ಶರಣು

    ಕರಿಮಣಿ ಸೇರಿದಂತೆ ಸಾಕಷ್ಟು ಧಾರಾವಾಹಿಗಳಿಗೆ ನಿರ್ದೇಶನ ಮಾಡಿರೋ ಕನ್ನಡದ ಹೆಸರಾಂತ ಕಿರುತೆರೆ ನಿರ್ದೇಶಕ ವಿನೋದ್ ದೊಂಡಾಲೆ (Vinod Dondale) ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ʻಕರಿಮಣಿʼ, ʻಶಾಂತಂ ಪಾಪಂʼ ಸೇರಿದಂತೆ ಹಲವು ಧಾರವಾಹಿಗಳಿಗೆ ವಿನೋದ್ ನಿರ್ದೇಶನ ಮಾಡಿದ್ದರು.

    ಕಿರುತೆರೆಯಿಂದ ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ಟಿದ್ದ ಇವರು ಸದ್ಯ ನಿನಾಸಮ್ ಸತೀಶ್ ನಟನೆಯ ʻಅಶೋಕ ಬ್ಲೇಡ್ʼ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದರು. ಈಗಾಗಲೇ ಸಿನಿಮಾ ಶೇಕಡಾ 90ರಷ್ಟು ಚಿತ್ರೀಕರಣ ಮುಗಿಸಿದೆ. ಮುಂದಿನ ಹಂತದ ಚಿತ್ರೀಕರಣಕ್ಕೂ ವಿನೋದ್ ಸಿದ್ಧತೆ ಮಾಡಿಕೊಂಡಿದ್ದರು. ನಿನ್ನೆಯಷ್ಟೇ ಶೂಟಿಂಗ್ ಕುರಿತಂತೆ ನೀನಾಸಂ ಸತೀಶ್ ಜೊತೆ ಚರ್ಚೆ ಮಾಡಿದ್ದರು.

     

    ನಗರಬಾವಿಯಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸದ್ಯ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಹಿರಿಯ ನಿರ್ದೇಶಕ ಜೊತೆಯೂ ಕೆಲಸ ಮಾಡಿದ್ದ ವಿನೋದ್ ಅತಿಥಿ,ಬೇರು,ತುತ್ತೂರಿ, ವಿಮುಕ್ತಿ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದರು