Tag: Vineeth

  • ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂತು ಖ್ಯಾತ ನಿರ್ದೇಶಕನ ಹೆಸರು: ಡಿಸಿಪಿ ಪ್ರತಿಕ್ರಿಯೆ

    ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂತು ಖ್ಯಾತ ನಿರ್ದೇಶಕನ ಹೆಸರು: ಡಿಸಿಪಿ ಪ್ರತಿಕ್ರಿಯೆ

    ನ್ನಡವೂ ಸೇರಿದಂತೆ ಸಿನಿಮಾ ರಂಗದಲ್ಲಿ ಡ್ರಗ್ಸ್ (Drugs) ಹಾವಳಿ ಜಾಸ್ತಿಯಾಗಿದೆ. ಕನ್ನಡದ ಕೆಲ ನಟಿಯರು ಈ ಪ್ರಕರಣದಲ್ಲಿ ಬಂಧನವಾಗುತ್ತಿದ್ದಂತೆಯೇ ಸ್ಯಾಂಡಲ್ ವುಡ್ ಡ್ರಗ್ಸ್ ಸಹವಾಸಕ್ಕೆ ಹೋಗುತ್ತಿಲ್ಲ. ಆದರೆ, ತೆಲುಗು ಮತ್ತು ಮಲಯಾಳಂ ಸಿನಿಮಾ ರಂಗದಲ್ಲಿ ಸ್ವತಃ ಪೊಲೀಸರೇ ಕಾರ್ಯಾಚರಣೆಗೆ ಇಳಿಯುವಷ್ಟರ ಮಟ್ಟಿಗೆ ಚಿತ್ರೋದ್ಯಮವನ್ನು ಡ್ರಗ್ಸ್ ಕಾಡುತ್ತಿದೆ. ಇದೀಗ ಡ್ರಗ್ಸ್‍ ಪ್ರಕರಣದಲ್ಲಿ ಪವನ್ ಕಲ್ಯಾಣ್ ರಂಥ ದಿಗ್ಗಜ ನಟರಿಗೆ ನಿರ್ದೇಶನ ಮಾಡಿರುವ ಖ್ಯಾತ ನಿರ್ದೇಶಕನ ಹೆಸರು ಕೇಳಿ ಬಂದಿದೆ.

    ಆಂಧ್ರದ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್‍ ಸೇವಿಸಿದ್ದಾರೆ ಎನ್ನುವ ಆರೋಪದಡಿ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣ ಚಿತ್ರೋದ್ಯಮದಲ್ಲಿ ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಈ ಒಂಬತ್ತು ಜನರಲ್ಲಿ ಖ್ಯಾತ ನಿರ್ದೇಶಕ ಕ್ರಿಶ್ (Krish) ಕೂಡ ಇದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಇವರನ್ನು 8ನೇ ಆರೋಪಿಯನ್ನಾಗಿ ಮಾಡಿದ್ದಾರೆ ಎನ್ನುವ ಸುದ್ದಿಯೂ ಇದೆ.

    ಈ ಕುರಿತಂತೆ ಸ್ವತಃ ತೆಲಂಗಾಣದ (Telangana) ಡಿಸಿಪಿ ವಿನೀತ್ (Vineeth) ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಪೆಡ್ಲರ್ ಅಬ್ಬಾಸ್ ಎನ್ನುವವನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಶ್ವೇತಾ, ಸಂದೀಪ್ ಸೇರಿದಂತೆ ಹಲವರು ತಪ್ಪಿಸಿಕೊಂಡಿದ್ದಾರೆ. ನಿರ್ದೇಶಕ ಕ್ರಿಶ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಅವರು ಡ್ರಗ್ಸ್ ತೆಗೆದುಕೊಂಡಿದ್ದಾರೋ ಎಲ್ಲವೋ ಎನ್ನುವುದು ತನಿಖೆ ಆಗುತ್ತಿದೆ ಎಂದಿದ್ದಾರೆ ಡಿಸಿಪಿ.

     

    ಕ್ರಿಶ್ ಹೆಸರಾಂತ ಚಿತ್ರಗಳ ನಿರ್ದೇಶಕರು. ಪವನ್ ಕಲ್ಯಾಣ್ ನಟನೆಯ ಹರಿ ಹರ ವೀರ ಮಲ್ಲು ಚಿತ್ರವನ್ನು ಸದ್ಯ ನಿರ್ದೇಶನ ಮಾಡುತ್ತಿದ್ದಾರೆ. ಮಣಿಕರ್ಣಿಕಾ ಸೇರಿದಂತೆ ಭಾರೀ ಬಜೆಟ್ ಚಿತ್ರಗಳನ್ನು ಡೈರೆಕ್ಟ್ ಮಾಡಿದ್ದಾರೆ. ಹೀಗಾಗಿ ಡ್ರಗ್ಸ್ ಪ್ರಕರಣ ಬೇರೆ ಬೇರೆ ತಿರುವುದು ಪಡೆದುಕೊಳ್ಳುತ್ತಿದೆ.

  • ಪುತ್ರನಿಗೆ ಕುದುರೆ ಸವಾರಿ ಹೇಳಿಕೊಟ್ಟ ದರ್ಶನ್- ವಿಡಿಯೋ ನೋಡಿ

    ಪುತ್ರನಿಗೆ ಕುದುರೆ ಸವಾರಿ ಹೇಳಿಕೊಟ್ಟ ದರ್ಶನ್- ವಿಡಿಯೋ ನೋಡಿ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಪುತ್ರ ವಿನೀತ್‍ರನ್ನು ಈಗಾಗಲೇ ಬಾಲ ನಟನಾಗಿ ಸ್ಯಾಂಡಲ್‍ವುಡ್‍ಗೆ ಪರಿಚಯ ಮಾಡಿಸಿದ್ದಾರೆ. ಹೊಸ ವರ್ಷದ ಸಂಭ್ರಮದಲ್ಲಿ ದರ್ಶನ್ ಅವರು ಪುತ್ರನೊಂದಿಗೆ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ದರ್ಶನ್ ಪಾರ್ಮ್ ಹೌಸ್‍ನಲ್ಲಿ ಕುದುರೆ ಸವಾರಿಯನ್ನು ಮಾಡಲಾಗಿದ್ದು, 4:47 ನಿಮಿಷದ ವಿಡಿಯೋವನ್ನು ದರ್ಶನ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅಪ್ಪನ ಸೂಚನೆಗಳಂತೆ ವಿನೀತ್ ಕುದುರೆ ಸವಾರಿ ಕಲಿಯುತ್ತಿರುವುದನ್ನು ಕಾಣಬಹುದಾಗಿದೆ.

    ದರ್ಶನ್ ಅವರ ಈ ಟ್ವೀಟ್ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದು, ಇಬ್ಬರ ಕುದುರೆ ಸವಾರಿ ನೋಡಲು ತುಂಬಾ ಚೆನ್ನಾಗಿದೆ. ಸದಾ ತಮ್ಮ ನೆಚ್ಚಿನ ನಟನ ಕುಟುಂಬದಲ್ಲಿ ಸಂತೋಷ ತುಂಬಿರಲಿ ಎಂದು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

    ಹೊಸ ವರ್ಷದ ಮೊದಲ ದಿನ ದರ್ಶನ್ ತಮ್ಮ ಕುಟುಂಬದೊಂದಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ದರ್ಶನ್ ಪತ್ನಿ ಹಾಗೂ ಪುತ್ರನೊಂದಿಗೆ ನಿರ್ಮಾಪಕಿ ಶೈಲಜಾ ನಾಗ್ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ ಅವರನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಈ ಫೋಟೋವನ್ನು ದರ್ಶನ್ ಅವರ ಟ್ವೀಟ್ ಖಾತೆಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿರುವ ಅಭಿಮಾನಿಗಳು ‘ಅಣ್ಣ-ಅತ್ತಿಗೆ ಜೊತೆಗಿರುವುದನ್ನು ನೋಡಲು ಎರಡು ಸಾಲದು’ ಎಂದು ಹೇಳಿದ್ದಾರೆ.