Tag: Vinayakan

  • ‘ಜೈಲರ್’ ನಟ ವಿನಾಯಕನ್ ಅಸಭ್ಯ ವರ್ತನೆ- ಚಿತ್ರರಂಗದಿಂದ ನಿಷೇಧಿಸಿ ಎಂದ ನೆಟ್ಟಿಗರು

    ‘ಜೈಲರ್’ ನಟ ವಿನಾಯಕನ್ ಅಸಭ್ಯ ವರ್ತನೆ- ಚಿತ್ರರಂಗದಿಂದ ನಿಷೇಧಿಸಿ ಎಂದ ನೆಟ್ಟಿಗರು

    ‘ಜೈಲರ್’ (Jailer) ಖ್ಯಾತಿಯ ನಟ ವಿನಾಯಕನ್ (Vinayakan) ಸದಾ ಒಂದಲ್ಲಾ ಒಂದು ಕಾಂಟ್ರವರ್ಸಿ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ನೆರೆಮನೆಯವರ ಎದುರು ಅಶ್ಲೀಲವಾಗಿ ನಟ ವರ್ತಿಸಿದ್ದಾರೆ. ನಟನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:‘ಪುಷ್ಪ 2’ ಸಕ್ಸಸ್ ಬಳಿಕ ಮರಾಠಿ ಕ್ವೀನ್ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ

    ವಿನಾಯಕನ್ ನೆರೆಮನೆಯವರಿಗೆ ಬೈಯುತ್ತಾ ಅಶ್ಲೀಲವಾಗಿ ನಡೆದುಕೊಂಡಿರುವ ವಿಡಿಯೋ ನೋಡಿ ಅನೇಕರು ಟೀಕಿಸಿದ್ದಾರೆ. ಮನೆಯ ಬಾಲ್ಕನಿಯಲ್ಲಿ ನೆರೆಮನೆಯವರಿಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಈ ವೇಳೆ, ಸೊಂಟದ ಮೇಲಿಂದ ಲುಂಗಿ ಬಿದ್ದು ಹೋಗಿದ್ರೂ ಲೆಕ್ಕಿಸದೇ ಕುಡಿದು ಜಗಳಕ್ಕೆ ನಿಂತಿದ್ದಾರೆ. ನಟನ ಈ ನಡೆ ನೋಡಿದ ಅನೇಕರು ಇವರನ್ನು ಚಿತ್ರರಂಗದಿಂದ ನಿಷೇಧ ಮಾಡಿ ಎಂದು ಅಗ್ರಹಿಸಿದ್ದಾರೆ.

    ಈ ಹಿಂದೆ ಕೂಡ ನಟ ವಿನಾಯಕನ್ ಅವರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕುಡಿದು ರಂಪಾಟ ಮಾಡಿದ್ದರು. ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು. ಹೀಗೆ ಇತ್ತೀಚೆಗೆ ಸಾಕಷ್ಟು ಕಾಂಟ್ರವರ್ಸಿ ಮೂಲಕ ಅವರು ಸದ್ದು ಮಾಡಿದ್ದರು.

  • ಕುಡಿದು ರಂಪಾಟ – ʻಜೈಲರ್ʼ ಸಿನಿಮಾ ವಿಲನ್ ವಿನಾಯಕನ್ ಅರೆಸ್ಟ್!

    ಕುಡಿದು ರಂಪಾಟ – ʻಜೈಲರ್ʼ ಸಿನಿಮಾ ವಿಲನ್ ವಿನಾಯಕನ್ ಅರೆಸ್ಟ್!

    2023ರಲ್ಲಿ ತೆರೆ ಕಂಡಿದ್ದ ಸೂಪರ್ ಹಿಟ್ ಸಿನಿಮಾ ʻಜೈಲರ್ʼನಲ್ಲಿ (Jailer) ರಜನಿಕಾಂತ್ ಎದುರು ವಿಲನ್ ಆಗಿ ಅಬ್ಬರಿಸಿದ್ದ ಮಲಯಾಳಂ ನಟ ವಿನಾಯಕನ್ (Vinayakan) ಅವರನ್ನು ಅರೆಸ್ಟ್ ಮಾಡಲಾಗಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಠಪೂರ್ತಿ ಕುಡಿದಿದ್ದ ವಿನಾಯಕನ್, ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

    ವಿನಾಯಕನ್ ಅವರು ಕೊಚ್ಚಿಯಿಂದ ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ಗೆ (Hyderabad Airport) ಆಗಮಿಸಿದ್ದರು. ಅಲ್ಲಿ ಇಂಡಿಗೋ ಸಿಬ್ಬಂದಿ ಜೊತೆಗೆ ಮೊದಲು ಅನುಚಿತವಾಗಿ ವರ್ತಿಸಿದ್ದಾರೆ. ಅವರು ವಿಪರೀತ ಕುಡಿದಿದ್ದರಿಂದ ಮೈಮೇಲೆ ಅರಿವೇ ಇಲ್ಲದಂತೆ ನಡೆದುಕೊಂಡಿದ್ದಾರೆ. ಅಲ್ಲಿನ ಸಿಬ್ಬಂದಿಗೆ ಅವರನ್ನು ನಿಯಂತ್ರಿಸುವುದು ಕಷ್ಟವಾಗಿದೆ. ಅಲ್ಲದೇ ಪ್ರಯಾಣಿಕರೊಂದಿಗೂ ಅಸಭುವಾಗಿ ವರ್ತಿಸಿದ್ದಾರೆ. ಈ ಬಗ್ಗೆ ದೂರು ನೀಡಿದ ಬಳಿಕ ಏರ್‌ಪೋರ್ಟ್ ಸಿಐಎಸ್‌ಎಫ್ (CISF) ಭದ್ರತಾ ಸಿಬ್ಬಂದಿ ವಿನಾಯಕನ್ ಅವರನ್ನು ವಶಕ್ಕೆ ಪಡೆದು, ಸ್ಥಳೀಯ ಏರ್‌ಪೋರ್ಟ್ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಅರೆಬೆತ್ತಲಾಗಿ ಕುಳಿತಿದ್ದ ನಟ:
    ವಿಮಾನ ನಿಲ್ದಾಣದಲ್ಲಿ ಧರಿಸಿದ್ದ ಶರ್ಟ್ ಬಿಚ್ಚಿ ಅರೆಬೆತ್ತಲಾಗಿ ಕುಳಿತಿದ್ದ ವಿನಾಯಕನ್ ಅವರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸದ್ಯ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಏರ್‌ಪೋರ್ಟ್ ಪೊಲೀಸ್ ಠಾಣೆಯ ಸಿಐ ಬಾಲರಾಜ್, ಪ್ರಕರಣ ದಾಖಲಾಗಿದ್ದು, ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷವನ್ನು ಅಧಿಕೃತಗೊಳಿಸಿದ ಚುನಾವಣಾ ಆಯೋಗ

    ಉತ್ತಮ ನಟ:
    ಕಳೆದ 28 ವರ್ಷಗಳಿಂದ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ವಿನಾಯಕನ್ ಅವರು ಮಲಯಾಳಂನ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ, ಉತ್ತಮ ನಟ ಎನಿಸಿಕೊಂಡಿದ್ದಾರೆ. ʻಜೈಲರ್‌ʼ ಸಿನಿಮಾದಲ್ಲಿ ರಜನಿಕಾಂತ್ ಎದುರು ಖಳನಾಗಿ ನಟಿಸಿದ ಮೇಲೆ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು. 2016ರಲ್ಲಿ ತೆರೆಕಂಡ ಮಲಯಾಳಂನ ʻಕಮ್ಮಟ್ಟಿಪಾಡಂʼ ಸಿನಿಮಾದ ನಟನೆಗಾಗಿ ವಿನಾಯಕನ್‌ಗೆ ಭಾರೀ ಮೆಚ್ಚುಗೆ ಸಿಕ್ಕಿತ್ತು. ಅದಕ್ಕಾಗಿ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದರು. ಇದನ್ನೂ ಓದಿ: ಸದ್ದು ಮಾಡುತ್ತಿದೆ ಅನೀಶ್, ಮಿಲನಾ ನಾಗರಾಜ್ ನಟನೆಯ ‘ಆರಾಮ್ ಅರವಿಂದ ಸ್ವಾಮಿ’ ಚಿತ್ರದ ಪೋಸ್ಟರ್

    ವಿವಾದಗಳಿಂದಲೇ ಫೇಮಸ್‌:
    ನಟ ವಿನಾಯಕನ್‌ ಅವರ ವಿವಾದ ಇದೇ ಮೊದಲೇನಲ್ಲ. 2023ರ ಅಕ್ಟೋಬರ್‌ನಲ್ಲಿ ಮಲಯಾಳಂ ಕೇರಳದ ಎರ್ನಾಕುಲಂನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಬಂಧಿಸಲಾಗಿತ್ತು. 2022ರಲ್ಲಿ ಮೀಟೂ ಆಂದೋಲನದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಇದನ್ನೂ ಓದಿ: ಗುರುದತ್‌ ಗಾಣಿಗ ನಿರ್ದೇಶನದ ‘ಜುಗಾರಿ ಕ್ರಾಸ್’ ಸಿನಿಮಾ ಅನೌನ್ಸ್- ಕುತೂಹಲ ಹೆಚ್ಚಿಸಿದ ಫಸ್ಟ್ ಲುಕ್

    ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ವಿನಾಯಕನ್‌, ಸದ್ಯ ವಿಕ್ರಮ್‌ ನಟನೆಯ ಆಕ್ಷನ್‌ ಥ್ರಿಲ್ಲರ್‌ ಸಿನಿಮಾ ʻಧ್ರುವನಚ್ಚತ್ತಿರಂʼ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಬಳಿಕ ತೆಕ್ಕು ವಡಕ್ಕು, ಕರಿಂತಂದನ್‌ ಮಲಯಾಳಂ ಸಿನಿಮಾಗಳಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಕಾಲ್‌ಶೀಟ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಅಂಬಾನಿ ಮನೆಯ ಗಣೇಶ ಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ಸ್ಟಾರ್ಸ್

  • ಸೆಕ್ಸ್ ಮಾಡುವಂತೆ ಕೇಳುವುದೇ ಮೀಟೂ ಆದರೆ, ನಾನು ಅದನ್ನು ಕೇಳುತ್ತೇನೆ : ಖ್ಯಾತ ಖಳನಟನ ಶಾಕಿಂಗ್ ಮಾತು

    ಸೆಕ್ಸ್ ಮಾಡುವಂತೆ ಕೇಳುವುದೇ ಮೀಟೂ ಆದರೆ, ನಾನು ಅದನ್ನು ಕೇಳುತ್ತೇನೆ : ಖ್ಯಾತ ಖಳನಟನ ಶಾಕಿಂಗ್ ಮಾತು

    ಮಾಲಿವುಡ್ ಜನಪ್ರಿಯ ಖಳನಾಯಕ ವಿನಾಯಕನ್ ನೇರವಾಗಿ ತಮ್ಮ ಲೈಂಗಿಕ ಸಂಬಂಧದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಇವರ ವಿವಾದಿತ ಮಾತಿನಿಂದಾಗಿ ಅಭಿಮಾನಿಗಳು ಬೇಸರಗೊಂಡಿದ್ದು ಮಲಯಾಳಂ ಸಿನಿಮಾ ರಂಗದಲ್ಲಿ ಇವರ ಮಾತು ಭಾರೀ ವಿವಾದಕ್ಕೆ ಕಾರಣವಾಗಿದೆ.

    ಕೇರಳ ಮೂಲದ ವಿನಾಯಕನ್ ತಮಿಳು ಸಿನಿಮಾಗಳಾದ ‘ತಿಮಿರು’, ‘ಸಿರುತೈ’, ‘ಮರಿಯಾನ್’ ಮುಂತಾದ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿದ್ದರು. ಆದರೆ ಇತ್ತೀಚೆಗೆ ನಡೆದ ಇವೆಂಟ್ವೊಂದರಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿರುವ ಇವರು ಮಹಿಳೆಯರ ಕೋಪಕ್ಕೆ ಗುರಿಯಾಗಿದ್ದಾರೆ. ವಿನಾಯಕನ್ ಕೇವಲ ನಟ ಮಾತ್ರವಲ್ಲ, ಸಂಗೀತ ನಿರ್ದೇಶಕ ಹಾಗೂ ಗಾಯಕರಾಗಿಯೂ ಗುರುತಿಸಿಕೊಂಡಿದ್ದು ತಮ್ಮ ಅದ್ಭುತ ಪ್ರತಿಭೆಯಿಂದಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನೂ ಹೊಂದಿದ್ದಾರೆ. ಇದನ್ನೂ ಓದಿ: ‘ಗಂಗೂಬಾಯಿ’ ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ ಪಾಕ್ ನಟ

    ಇತ್ತೀಚೆಗೆ ಮಲಯಾಳಂನ ‘ಒರುಥಿ’ ಸಿನಿಮಾ ಪ್ರಚಾರದ ವೇಳೆ ಈ ನಟ ಮಾತನಾಡುತ್ತಾ, “ಈವರೆಗೂ ನಾನು 10 ಮಹಿಳೆಯರ ಜೊತೆ ಸೆಕ್ಸ್ ಮಾಡಿದ್ದೇನೆ. ನೇರವಾಗಿಯೇ ಅವರನ್ನು ನನ್ನ ಜೊತೆ ನೀವು ಮಲಗುತ್ತೀರಾ ಎಂದು ಕೇಳುತ್ತೇನೆ. ಅವರು ಸರಿ ಎಂದರೆ ಓಕೆ. ಇಲ್ಲವೆದರೆ ನಾನು ಅಲ್ಲಿಗೆ ಬಿಟ್ಟುಬಿಡುತ್ತೇನೆ. ಸೆಕ್ಸ್ ವಿಷಯದಲ್ಲಿ ನಾನು ಯಾರನ್ನೂ ಬಲವಂತ ಮಾಡುವುದಿಲ್ಲ. ಮಹಿಳೆ ಬಳಿ ಸೆಕ್ಸ್ ಬಗ್ಗೆ ಕೇಳುವುದು ‘ಮೀಟೂ’ ಎಂದಾದರೆ ನಾನದನ್ನು ಮುಂದುವರೆಸುತ್ತೇನೆ’ ಎಂದು ನೇರವಾಗಿ ಹೇಳಿದ್ದಾರೆ.

    ಈ ಹೇಳಿಕೆಯಿಂದ ವಿನಾಯಕನ್ ಅಭಿಮಾನಿಗಳು ಸೇರಿದಂತೆ ಸಿನಿರಂಗವೇ ಅಸಮಾಧಾನ ವ್ಯಕ್ತಪಡಿಸಿದೆ. ಅದರಲ್ಲಿಯೂ ಮಹಿಳೆಯರು ಇವರ ವಿರುದ್ಧ ರೋಚಿಗೆದ್ದಿದ್ದಾರೆ. ಅಲ್ಲದೇ ‘ಒರುಥಿ’ ಸಿನಿಮಾದಲ್ಲಿ ನಟಿ ನವ್ಯಾ ನಾಯರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ವಿನಾಯಕನ್ ಈ ಹೇಳಿಕೆ ನೀಡುವಾಗ ಅವರು ವೇದಿಕೆ ಮೇಲೆಯೇ ಇದ್ದರು. ಇದರಿಂದ ನವ್ಯಾ ಅಭಿಮಾನಿಗಳು ಸಹ ಬೇಸರ ವ್ಯಕ್ತಪಡಿಸಿದ್ದು, ಟೀಕೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಉಪ್ಪಿ, ರಾಮ್ ಗೋಪಾಲ್ ವರ್ಮಾ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿದೆ ಭೂಗತಲೋಕ

    Navya Nair pens a gratitude note as her debut film 'Ishtam' clocks 20 |  Malayalam Movie News - Times of India

    ಈ ಕುರಿತು ಪ್ರತಿಕ್ರಿಯಿಸಿರುವ ನಟಿ ನವ್ಯಾ, ‘ಅವರು ಹಾಗೆ ಮಾತನಾಡಿದಾಗ ನಾನು ಅಸಹಾಯಕಳಾಗಿದ್ದೆ. ಆ ವೇಳೆ ನಾನು ಏನ್ನನ್ನೂ ಮಾಡಲು ಆಗುತ್ತಿರಲಿಲ್ಲ. ಅರ್ಥ ಮಾಡಿಕೊಳ್ಳಿ’ ಎಂದು ಸಮರ್ಥಿಸಿಕೊಂಡಿದ್ದಾರೆ. ಬಳಿಕ ಅವರ ಹೇಳಿಕೆಯನ್ನು ವಿರೋಧಿಸಿದ್ದಾರೆ.