Tag: Vinayak Damodar Savarkar

  • ಹಿಂದೂಗಳನ್ನ ಟೀಕೆ ಮಾಡೋದನ್ನ ಕಾಂಗ್ರೆಸ್ ಬ್ರ‍್ಯಾಂಡ್ ಮಾಡಿಕೊಂಡಿದೆ: ಅಶೋಕ್

    ಹಿಂದೂಗಳನ್ನ ಟೀಕೆ ಮಾಡೋದನ್ನ ಕಾಂಗ್ರೆಸ್ ಬ್ರ‍್ಯಾಂಡ್ ಮಾಡಿಕೊಂಡಿದೆ: ಅಶೋಕ್

    ಬೆಂಗಳೂರು: ಕಾಂಗ್ರೆಸ್‌ನವರಿಗೆ (Congress) ಹಿಂದೂಗಳೇ (Hindu) ಟಾರ್ಗೆಟ್. ಹಿಂದೂಗಳನ್ನ ಟೀಕೆ ಮಾಡೋದನ್ನ ಕಾಂಗ್ರೆಸ್ ಬ್ರ‍್ಯಾಂಡ್ ಮಾಡಿಕೊಂಡಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸಾವರ್ಕರ್ (Vinayak Damodar Savarkar) ದನದ ಮಾಂಸ ತಿನ್ನುತ್ತಿದ್ದರು ಎಂಬ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಅವರಿಗೆ ಸಾವರ್ಕರ್ ವಿಲನ್ ಆಗಿದ್ದಾರೆ. ಅದಕ್ಕೆ ಹೀಗೆಲ್ಲ ಮಾತನಾಡುತ್ತಾರೆ. ಸಾವರ್ಕರ್ ಕಾಲಾಪಾನಿ ಶಿಕ್ಷೆ ಒಳಗಾಗಿದ್ದವರು, ಸ್ವಾತಂತ್ರ‍್ಯ ಹೋರಾಟಗಾರರು. ಈಗ ಅವರು ಸತ್ತು ಸ್ವರ್ಗದಲ್ಲಿ ಇದ್ದಾರೆ. ಯಾಕೆ ಅವರ ಬಗ್ಗೆ ಅಪಾದನೆ ಮಾಡುತ್ತಿದ್ದೀರಾ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾನು ರಾಜೀನಾಮೆ ಕೊಡ್ತೀನಿ, ಸಿದ್ದರಾಮಯ್ಯನವರೂ ನೈತಿಕತೆ ಹೊತ್ತು ರಾಜೀನಾಮೆ ನೀಡಲಿ – ಆರ್.ಅಶೋಕ್‌

    ಕಾಂಗ್ರೆಸ್ ಅವರಿಗೆ ಕೇಸರಿ ಶಾಲು ಹಾಕಬಾರದು. ನಾಮ ಹಾಕಬಾರದು. ಕುಂಕುಮ ಇಡೋದು ಆಗಲ್ಲ. ಮುಂದೆ ಹೆಣ್ಣುಮಕ್ಕಳು ಬಳೆ, ಕುಂಕುಮ ಹಾಕೋದಕ್ಕೂ ವಿರೋಧ ಮಾಡುತ್ತಾರೆ. ಕಾಂಗ್ರೆಸ್ ಅವರು ಮೊದಲು ಹಿಂದೂಗಳನ್ನು ತೆಗಳೋದು ಬಿಡಬೇಕು. ಹಿಂದೂಗಳನ್ನ ಮಾತ್ರ ಯಾಕೆ ಟೀಕೆ ಮಾಡುತ್ತೀರಾ? ಮುಸ್ಲಿಮರಿಗೆ ಒಂದು ಮಾತು ಆಡಿದ್ದೀರಾ ನೀವು? ಹಿಂದೂಗಳನ್ನು ಮಾತ್ರ ಟಾರ್ಗೆಟ್ ಯಾಕೆ ಮಾಡುತ್ತೀರಿ ಎಂದು ಹರಿಹಾಯ್ದರು. ಇದನ್ನೂ ಓದಿ: ಚಾರಣಕ್ಕೆ ಅನ್‌ಲೈನ್‌ ಟಿಕೆಟ್‌ – ಅರಣ್ಯ ವಿಹಾರ ವೆಬ್‌ಸೈಟ್‌ ಲೋಕಾರ್ಪಣೆ

    ಮುಸ್ಲಿಮರು ಒಂದೇ ದೇವರು ಅಂತಾರೆ. ನಾವು ಮುಕ್ಕೋಟಿ ದೇವರನ್ನು ಪೂಜೆ ಮಾಡುತ್ತೇವೆ. ಬೆಳೆಯನ್ನು ನಾವು ಪೂಜೆ ಮಾಡುತ್ತೇವೆ. ನಮ್ಮ ಧರ್ಮ ಯಾಕೆ ಅವಹೇಳನ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾನು ಬಳ್ಳಾರಿ ಹೋಗೋವಾಗ ಪಾದಯಾತ್ರೆ ಮಾಡಿ ಸಿಎಂ ಆದವರು ಮನ:ಶಾಂತಿ ಕಳೆದುಕೊಂಡಿದ್ದಾರೆ: ಜನಾರ್ದನ ರೆಡ್ಡಿ

  • ಸುವರ್ಣ ಸೌಧದಲ್ಲಿ ನಾಳೆ ಸಾವರ್ಕರ್ ಫೋಟೋ ಅನಾವರಣ – ಬಿಜೆಪಿಯಿಂದ ಸಿದ್ಧತೆ

    ಸುವರ್ಣ ಸೌಧದಲ್ಲಿ ನಾಳೆ ಸಾವರ್ಕರ್ ಫೋಟೋ ಅನಾವರಣ – ಬಿಜೆಪಿಯಿಂದ ಸಿದ್ಧತೆ

    ಬೆಳಗಾವಿ: ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಈ ವೇಳೆ ಸಾವರ್ಕರ್ ಫೋಟೋ ಅನಾವರಣ ಮಾಡಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ. ಈ ಮೂಲಕ ಮತ್ತೆ ಸಾವರ್ಕರ್ ಸಮಯ ಜೋರಾಗುವ ಸಾಧ್ಯತೆ ಇದೆ.

    ರಾಜ್ಯ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿಯಿದ್ದು, ಈ ಬಾರಿ ಬಿಜೆಪಿಗೆ ಹಿಂದೂ ಅಸ್ತ್ರದ ಜೊತೆಗೆ ಸಾವರ್ಕರ್ ಕೂಡ ಒಂದು ಅಜೆಂಡಾ ಆಗುವ ಸಾಧ್ಯತೆ ಇದೆ. ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಮತ್ತೆ ಸಾವರ್ಕರ್ ಸಮಯ ಜೋರಾಗುವ ಸಾಧ್ಯತೆ ಇದೆ. ವಿಧಾನಸಭೆಯಲ್ಲಿ ಗಾಂಧೀಜಿ, ನೆಹರೂ, ಅಂಬೇಡ್ಕರ್, ಸ್ವಾಮಿ ವಿವೇಕಾನಂದರ ಜೊತೆಗೆ ಸಾವರ್ಕರ್ ಫೋಟೋ ಅನಾವರಣ ಮಾಡಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ.

    ಈಗಾಗಲೇ ವಿಧಾನಸಭೆಯ ಸಿಬ್ಬಂದಿ ಎಲ್ಲಾ ಫೋಟೋಗಳಿಗೆ ಕರ್ಟನ್ ಹಾಕಿ ಮುಚ್ಚಿದ್ದಾರೆ. ನಾಳೆ ಬೆಳಗ್ಗೆ 10:30ಕ್ಕೆ ಸ್ಪೀಕರ್ ಕಾಗೇರಿ ನೇತೃತ್ವದಲ್ಲಿ ಅಧಿವೇಶನ ಆರಂಭಕ್ಕೂ ಮುನ್ನವೇ ಸಾವರ್ಕರ್ ಫೋಟೋ ಅನಾವರಣವಾಗಲಿದೆ ಎನ್ನಲಾಗಿದೆ. ಬಿಜೆಪಿ ಸಾವರ್ಕರ್ ಫೋಟೋ ಅಸ್ತ್ರಕ್ಕೆ ಕಾಂಗ್ರೆಸಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ತಂದೆಯ ಆತ್ಮ ವಿಲವಿಲ ಅಂತ ಒದ್ದಾಡುತ್ತಿರಬಹುದು : ಸಿ.ಟಿ.ರವಿ

    ಮಾಹಿತಿ ಬಂದಿದೆ. ನಾಳೆ ಮಾತಾಡ್ತೇನೆ ಅಂತ ಸಿದ್ದರಾಮಯ್ಯ ಹೇಳಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಾವರ್ಕರ್‍ಗೂ ಕರ್ನಾಟಕಕ್ಕೂ ಏನ್ ಸಂಬಂಧ ಎಂದು ಕಿಡಿಕಾರಿದ್ದಾರೆ. ಮಾಜಿ ಡಿಸಿಎಂ ಪರಮೇಶ್ವರ್ ಕೂಡ ಬಿಜೆಪಿಯವರು ವಿವಾದಗಳನ್ನೇ ಹುಟ್ಟುಹಾಕಿದ್ದಾರೆ. ಏಕಾಏಕಿ ಇಂಥಹ ತೀರ್ಮಾನ ಮಾಡ್ತಾರೆ ಅಂದರೆ ಏನರ್ಥ? ಕನಿಷ್ಠ ಜ್ಞಾನವೂ ಇಲ್ವಾ ಅಂತ ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ಒಬ್ಬ ಕೃತಜ್ಞತೆ ಇಲ್ಲದ ಕೃತಘ್ನ; ಮೆದುಳು, ನಾಲಿಗೆಗೆ ಕಂಟ್ರೋಲ್ ತಪ್ಪಿದೆ: ಕೆ.ಜಿ ಬೋಪಯ್ಯ

    Live Tv
    [brid partner=56869869 player=32851 video=960834 autoplay=true]

  • ಸಾವರ್ಕರ್, ಗೃಹ ಸಚಿವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಕಾಂಗ್ರೆಸ್

    ಸಾವರ್ಕರ್, ಗೃಹ ಸಚಿವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಕಾಂಗ್ರೆಸ್

    ಧಾರವಾಡ: ವಿ.ಡಿ ಸಾವರ್ಕರ್ ಅವರ ಭಾವಚಿತ್ರದ ವಿವಾದ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ಧಾರವಾಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿ.ಡಿ ಸಾವರ್ಕರ್ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅಪಮಾನ ಮಾಡಿದ್ದಾರೆ.

    ಪ್ರತಿಭಟನೆ ನೆಪದಲ್ಲಿ ಸಾವರ್ಕರ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಮೊಟ್ಟೆ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಾವರ್ಕರ್ ಅವರ ಭಾವಚಿತ್ರವನ್ನು ಬೂಟುಗಾಲಿನಿಂದ ತುಳಿದು ಅಪಮಾನ ಮಾಡಿ, ಧಿಕ್ಕಾರ ಕೂಗಿದ್ದಾರೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಕರ್ತವ್ಯ ಲೋಪ ಆರೋಪ – 1,500 ಪುಟಗಳ ದಾಖಲೆ ಸಲ್ಲಿಸಿದ ಸಾ.ರಾ.ಮಹೇಶ್

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಕೊಡಗಿನ ಮಳೆಹಾನಿ ಪ್ರದೇಶಗಳ ಭೇಟಿಗೆ ತೆರಳಿದ್ದ ಸಂದರ್ಭದಲ್ಲಿ ಹಿಂದೂಪರ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದರು. ಇದಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಿ, ರಾತ್ರಿಯೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಘಟನೆ ಸಂಬಂಧ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಆಕ್ರೋಶ ಮುಂದುವರಿಸಿದ್ದು, ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

    ಧಾರವಾಡ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಬಂದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಪ್ರತಿಕೃತಿಯನ್ನೂ ದಹಿಸಿದರು. ಈ ವೇಳೆ ವೀರ ಸಾವರ್ಕರ್ ಅವರ ಭಾವಚಿತ್ರವನ್ನೂ ಸುಟ್ಟು, ಅದರ ಮೇಲೆ ಮೊಟ್ಟೆ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗಾಂಧಿ ಭಾವಚಿತ್ರಕ್ಕೆ ಹಾನಿ – ರಾಹುಲ್‌ ಗಾಂಧಿ ಕಚೇರಿ ಸಿಬ್ಬಂದಿ ಸೇರಿ 4 ಮಂದಿ ಅರೆಸ್ಟ್‌

    ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಸಾವರ್ಕರ್ ಭಾವ ಚಿತ್ರ ಸುಟ್ಟಿದ್ದು ನಾನು ನೋಡಿಲ್ಲ ಎಂದಿದ್ದಾರೆ. ಅಲ್ಲದೇ ನಮ್ಮ ಕಾರ್ಯಕರ್ತರು ಅದನ್ನು ಮಾಡಿಲ್ಲ, ಬಿಜೆಪಿ ಕಾರ್ಯಕರ್ತರೇ ಅದನ್ನ ಮಾಡಿರಬೇಕು, ಅಂತಹ ಸಂಸ್ಕೃತಿ ನಮ್ಮದಲ್ಲ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ – `ಗೋ ಬ್ಯಾಕ್ ಸಿದ್ದುಖಾನ್’ ಎಂದು ಆಕ್ರೋಶ

    ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ – `ಗೋ ಬ್ಯಾಕ್ ಸಿದ್ದುಖಾನ್’ ಎಂದು ಆಕ್ರೋಶ

    ಮಡಿಕೇರಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದ ವೇಳೆ ಇಲ್ಲಿನ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಘೇರಾವ್ ಕೂಗಿದ್ದಾರೆ

    ಕೊಡಗಿನ ಗಡಿ ಭಾಗದ ಪೋನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಪ್ರತಿಭಟಿಸಿದರು.

    ಸಿದ್ದರಾಮಯ್ಯ ಅವರಿದ್ದ ಕಾರನ್ನು ಅಡ್ಡಗಟ್ಟಿ ಸಾವರ್ಕರ್ ಭಾವಚಿತ್ರವನ್ನು ಕಾರಿನೊಳಕ್ಕೆ ಹಾಕಿದಲ್ಲದೇ ಕಪ್ಪು ಬಾವುಟ ಪ್ರದರ್ಶಿಸಿ `ಗೋ ಬ್ಯಾಕ್ ಸಿದ್ದುಖಾನ್, ಗೋ ಬ್ಯಾಕ್ ಸಿದ್ದರಾಮಯ್ಯ’ ಘೋಷಣೆ ಕೂಗಿದರು. ಇದನ್ನೂ ಓದಿ: Exclusive: ಮುಖಕ್ಕೆ ಮಾಸ್ಕ್ ಧರಿಸಿ ಕಲ್ಲು ಹೊಡೆಯಿರಿ – ಶಿವಮೊಗ್ಗ ಗಲಾಟೆಯ ಪ್ಲ್ಯಾನ್ ವೀಡಿಯೋ ಔಟ್

    ರಾಜ್ಯದಲ್ಲಿ ಮತಾಂಧ ಟಿಪ್ಪುವಿನ ಜಯಂತಿ ಆಚರಣೆ ಜಾರಿಗೆ ತಂದು ಅಮಾಯಕರ ಕೊಲೆಗೆ ಕಾರಣರಾದ ಟಿಪ್ಪು ಭಕ್ತ ಸಿದ್ದರಾಮಯ್ಯ ಕೊಡಗಿಗೆ ಕಾಲಿಡುವುದರಿಂದ ಮತ್ತೆ ಕೊಡಗಿನ ಶಾಂತಿ ಭಂಗವಾಗಲಿದೆ. ಅಷ್ಟೇ ಅಲ್ಲದೇ ಕೊಡವರನ್ನು ಗೋಮಾಂಸ ಭಕ್ಷಕರೆಂದು ಬಿಂಬಿಸಿದ್ದಾರೆ. ಹಿಂದೂ ವಿರೋಧಿ ಸಿದ್ದರಾಮಯ್ಯ ಕೊಡಗಿಗೆ ಕಾಲಿಡಲು ಅಯೋಗ್ಯರಾಗಿದ್ದಾರೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಆರ್ಡರ್ ಮಾಡಿದ್ದ ಆಹಾರದಲ್ಲಿ ಹುಳಗಳು – ರೆಸ್ಟೋರೆಂಟ್ ವಿರುದ್ಧ ಮಹಿಳೆ ದೂರು

    ಈ ಸಂದರ್ಭ ಪೋಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿ ಸಿದ್ದರಾಮಯ್ಯರ ವಾಹನ ಮುಂದೆ ಚಲಿಸಲು ಅನುವುಮಾಡಿಕೊಟ್ಟರು.

    Live Tv
    [brid partner=56869869 player=32851 video=960834 autoplay=true]

  • ನಾನೇ ಖುದ್ದು ಭೇಟಿಯಾಗಿ, ಸಿದ್ದರಾಮಯ್ಯಗೆ ಸಾವರ್ಕರ್ ಪುಸ್ತಕ ನೀಡುತ್ತೇನೆ- ಸಿಟಿ ರವಿ

    ನಾನೇ ಖುದ್ದು ಭೇಟಿಯಾಗಿ, ಸಿದ್ದರಾಮಯ್ಯಗೆ ಸಾವರ್ಕರ್ ಪುಸ್ತಕ ನೀಡುತ್ತೇನೆ- ಸಿಟಿ ರವಿ

    ಧಾರವಾಡ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವ ಸಿ.ಟಿ.ರವಿ ಮಧ್ಯೆ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ಕುರಿತು ವಾಗ್ವಾದ ಮುಂದುವರಿದಿದೆ. ಸಿದ್ದರಾಮಯ್ಯನವರಿಗೆ ಪುಸ್ತಕ ತಲುಪಿಸಲು ಸಾಧ್ಯವಾಗಿಲ್ಲ, ನಾನೇ ಖುದ್ದಾಗಿ ತೆರಳಿ ಪುಸ್ತಕ ನೀಡುತ್ತೇನೆ ಸಿ.ಟಿ.ರವಿ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಪುಸ್ತಕವನ್ನು ಸಿದ್ದರಾಮಯ್ಯನವರಿಗೆ ತಲುಪಿಸುತ್ತೇನೆಂದು ಹೇಳಿದ್ದೆ. ಕೆಲಸದ ಒತ್ತಡದಿಂದ ಪುಸ್ತಕ ತಲುಪಿಸಲು ಸಾಧ್ಯವಾಗಿಲ್ಲ. ಶೀಘ್ರದಲ್ಲೇ ಸಿದ್ದರಾಮಯ್ಯನವರನ್ನು ಖುದ್ದು ಭೇಟಿಯಾಗಿ ಪುಸ್ತಕ ನೀಡಿ, ಮಾತನಾಡುತ್ತೇನೆ ಎಂದರು.

    ಸಿದ್ದರಾಮಯ್ಯನವರು ಸಾವರ್ಕರ್ ಅವರ ಆತ್ಮಾಹುತಿ ಪುಸ್ತಕವನ್ನು ಓದಲಿ, ಅಭಿನವ ಭಾರತ ಸಂಘಟನೆ ಯಾಕೆ ಕಟ್ಟಿದರು ತಿಳಿದು ನಂತರ ಅವರ ಬಗ್ಗೆ ಮಾತನಾಡಲಿ. ಅಧಿಕಾರ ಹಿಡಿಯುತ್ತಿದ್ದ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಕುಟುಂಬವನ್ನೇ ಸಾವರ್ಕರ್ ಅರ್ಪಿಸಿದರು. ಸತ್ಯ ಸಂಗತಿ ತಿಳಿದರೆ ಸಾವರ್ಕರ್ ಗೆ ಅಪಮಾನ ಮಾಡುವ ಕೆಲಸವಾಗುವುದಿಲ್ಲ. ಇದು ಸಾವರ್ಕರ್ ಗೆ  ಮಾಡುವ ಅಪಮಾನ ಅಲ್ಲ, ಅವರಷ್ಟಕ್ಕೆ ಅವರೇ ಮಾಡಿಕೊಂಡ ಅಪಮಾನ ಎಂದರು.

    ಸಾವರ್ಕರ್ ಬಗ್ಗೆ ಸತ್ಯ ಸಂಗತಿ ತಿಳಿದರೆ ಭಾರತ ಮಾತೆಗೆ ಅವಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುವುದಿಲ್ಲ. ಇದು ಅವರಿಗೆ ಮಾಡುವ ಅಪಮಾನ ಅಲ್ಲ. ಇಂಥವರ ಬಗ್ಗೆ ಮಾತನಾಡಿದರೆ ಅವರ ಮುಖಕ್ಕೆ ಅವರೇ ಉಗಿದುಕೊಂಡಂತೆ ಎಂದು ಕಿಡಿಕಾರಿದರು.

    ಇನ್ನೊಂದು ವಿಚಾರವೆಂದರೆ ನಾಥೂರಾಮ್ ಗೋಡ್ಸೆ ಗಾಂಧಿ ದೇಹಕ್ಕೆ ಮಾತ್ರ ಗುಂಡು ಹಾಕಿದ. ಆದರೆ ಮಹಾತ್ಮ ಗಾಂಧಿ ತತ್ವಾದರ್ಶಗಳನ್ನು ಜನಮಾನಸದಿಂದ ದೂರ ಮಾಡಿದವರು ಯಾರು ಎಂದು ಚರ್ಚೆಯಾಗಬೇಕು. ಗಾಂಧೀಜಿಯ ಪಕ್ಷದವರು ನಾವು ಎಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಇವರು ಗಾಂಧೀಜಿಯ ತತ್ವದ ವಾರಸುದಾರರಾಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

    ಮಹಾರಾಷ್ಟ್ರ, ಹರಿಯಾಣ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ಸೋಲುತ್ತೇವೆ ಎಂದು ಗೊತ್ತಾಗಿಯೇ ಮುಂಚಿತವಾಗಿಯೇ ಇವಿಎಂ ಮೇಲೆ ಬೆರಳು ಮಾಡುತ್ತಿದ್ದಾರೆ. ಅವರು ಗೆದ್ದರೆ ಜನಾದೇಶ, ಬಿಜೆಪಿ ಗೆದ್ದರೆ ಇವಿಎಂ ದೋಷ ಎನ್ನುತ್ತಾರೆ. ಇವರು ಸೋತ ತಕ್ಷಣ ಇವಿಎಂನಲ್ಲಿ ಲೋಪ ಎನ್ನುತ್ತಾರೆ. ಹಿಂದೆ ಗಾಂಧೀಜಿ ಕಾಂಗ್ರೆಸ್ ವಿಸರ್ಜನೆ ಮಾಡಿ ಅಂದಿದ್ದರು. ಅದನ್ನು ಈಗ ಜನರೇ ಮಾಡುತ್ತಿದ್ದಾರೆ ಎಂದು ಹೇಳಿ ತಿರುಗೇಟು ನೀಡಿದರು.

  • ಸಿದ್ದರಾಮಯ್ಯನವರಿಗೆ ಗಟ್ಸ್ ಇದ್ರೆ ಅಂಬೇಡ್ಕರ್‌ಗೆ ಮೊದಲೇ ಭಾರತರತ್ನ ಕೊಡಿ ಎನ್ನಬೇಕಿತ್ತು-ಜೋಶಿ

    ಸಿದ್ದರಾಮಯ್ಯನವರಿಗೆ ಗಟ್ಸ್ ಇದ್ರೆ ಅಂಬೇಡ್ಕರ್‌ಗೆ ಮೊದಲೇ ಭಾರತರತ್ನ ಕೊಡಿ ಎನ್ನಬೇಕಿತ್ತು-ಜೋಶಿ

    ಧಾರವಾಡ: ಮಾಜಿ ಸಿಎಂ ಸಿದ್ದರಾಮಯ್ಯನವರು ವೀರಸಾರ್ವಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರಿಗೆ ಗಟ್ಸ್ ಇದ್ದರೆ ಅಂಬೇಡ್ಕರ್‌ಗೆ ಮೊದಲೇ ಭಾರತರತ್ನ ಕೊಡಿ ಎಂದು ಕೇಳಬೇಕಿತ್ತು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಅವರಿಗೆ ಮೊದಲು ಭಾರತರತ್ನ ನೀಡದೇ ರಾಜೀವಗಾಂಧಿಯವರಿಗೆ ಕೊಡಲಾಯಿತು. ಅವರ ರಾಹುಲ್ ಗಾಂಧಿಯವರ ತಾತ, ತಾಯಿ ಪ್ರಧಾನಿಯಾಗಿದ್ದಕ್ಕೆ ಅವರಿಗೆ ಪ್ರಧಾನಿ ಸ್ಥಾನ ಬಳುವಳಿಯಾಗಿ ಕೊಡಲಾಯಿತು. ಆದರೆ ಸಂವಿಧಾನ ಬರೆದಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡಲಿಲ್ಲ ಎಂದು ಹರಿಹಾಯ್ದರು.

    ದೇಶಕಂಡ ಅಪ್ರತಿಮ ವೀರಸಾರ್ವಕರ್ ಅವರ ಬಗ್ಗೆ ಅಪಮಾನ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರ ಈ ನಡೆಯನ್ನು ನಾನು ಖಂಡಿಸುತ್ತೇನೆ. ಸಿದ್ದರಾಮಯ್ಯ ಅವರು ಮೊದಲು ಇತಿಹಾಸವನ್ನು ಸರಿಯಾಗಿ ಓದಿಕೊಂಡು ಮಾತನಾಡಲಿ. ಇನ್ನು ಮುಂದೆ ದಾವುದ್ ಇಬ್ರಾಹಿಂಗೂ ಕಾಂಗ್ರೆಸ್ ನವರು ಭಾರತ ರತ್ನ ಕೊಡಲಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯಮಾಡಿದರು.

    ಬೆಂಗಳೂರಿನಲ್ಲಿ ಮಹದಾಯಿ ಹೋರಾಟಗಾರರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜೋಶಿ, ಪ್ರತಿಭಟನೆಗೆ ಕುಳಿತಿರುವುದು ಗಮನಕ್ಕೆ ಇಲ್ಲ. ಮಹದಾಯಿ ಇತ್ಯರ್ಥಕ್ಕೆ ನಮ್ಮ ಕಡೆಯಿಂದ ನಾವು ಪ್ರಯತ್ನ ಮಾಡುತ್ತಿದ್ದೇವೆ. ಆದಷ್ಟು ಶೀಘ್ರ ಈ ವಿಚಾರ ಇತ್ಯರ್ಥಗೊಳ್ಳಲಿದೆ ಎಂದರು.