ಈ ವಾರದ (Bigg Boss Kannada) ಟಾಸ್ಕ್‌ನಲ್ಲಿ ಸೋತು ಒಳಗೊಳಗೇ ಕುದಿಯುತ್ತಿರುವ ಸಂಗೀತಾ ತಂಡ, ಶುಕ್ರವಾರ JioCinema ವತಿಯಿಂದ ನೀಡಲಾದ Fun Friday ಟಾಸ್ಕ್‌ನಲ್ಲಿ ಗೆದ್ದು ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಈ ವಾರದ ಕ್ಯಾಪ್ಟನ್ ಆಗಿ ವಿನಯ್ ಆಯ್ಕೆಯಾಗಿದ್ದಾರೆ. ಅದು ಸಂಗೀತಾ (Sangeetha) ಗ್ಯಾಂಗ್‌ನ ತಳಮಳಕ್ಕೂ ಕಾರಣವಾಗಿದೆ. ಟಾಸ್ಕ್‌ನ ನಂತರ ಮನೆಯವರೆಲ್ಲರ ಬಹುಮತದ ಅಭಿಪ್ರಾಯದ ಮೇರೆಗೆ ವಿನಯ್ (Vinay) ‘ಅತ್ಯುತ್ತಮ ಪ್ರದರ್ಶನ’ದ ಪದಕ ಕೊರಳಿಗೇರಿಸಿಕೊಂಡರೆ, ಸಂಗೀತ ಜೈಲಿನುಡುಗೆ ತೊಟ್ಟು ಬಂಧಿಯಾಗಿದ್ದಾರೆ.
ಈ ನಡುವೆ ಜಿಯೊ ಸಿನಿಮಾ ಮನೆಯ ಸ್ಪರ್ಧಿಗಳಿಗೆ ‘ಏಳೋಂದ್ಲ ಏಳು’ ಎಂಬ ಟಾಸ್ಕ್ ನೀಡಿತ್ತು. ಅದರ ನಿರ್ವಹಣೆಯ ಜವಾಬ್ದಾರಿಯನ್ನು ಭಾಗ್ಯಶ್ರೀ ಅವರಿಗೆ ನೀಡಿತ್ತು. ತುಕಾಲಿ ಸಂತೋಷ್ ಅವರು ಸಂಗೀತಾ ಅವರ ತಂಡದಿಂದ ಆಡಿದರು.
‘ಏಳೊಂದ್ಲ ಏಳು’ ಇದು ಸಂಖ್ಯೆಗಳ ಆಟ. ಸಂಗೀತಾ ತಂಡದವರು ನೀಲಿ ಬಣ್ಣದ ಟೀ- ಶರ್ಟ್ ಮತ್ತು ವಿನಯ್ ತಂಡದವರು ಕೆಂಪು ಬಣ್ಣದ ಟೀ- ಶರ್ಟ್ ಧರಿಸಿದ್ದರು. ಅವರ ಟೀ- ಶರ್ಟ್ ಮೇಲೆ ಒಂದೊಂದು ಅಂಕಿ ಬರೆಯಲಾಗಿತ್ತು. ಭಾಗ್ಯಶ್ರೀ (Bhagyashree) ಒಮ್ಮೆ ಒಂದಿಷ್ಟು ಸಂಖ್ಯೆಗಳನ್ನು ಹೇಳುತ್ತಾರೆ. ತಂಡದ ಸದಸ್ಯರೆಲ್ಲ ತಮ್ಮ ಟೀ- ಶರ್ಟ್ ಮೇಲಿನ ಅಂಕಿಗಳಿಗೆ ಅನುಗುಣವಾಗಿ ಭಾಗ್ಯಶ್ರೀ ಹೇಳಿದ ಸಂಖ್ಯೆಯಂತೆ ತಮ್ಮನ್ನು ತಾವು ಜೋಡಿಸಿಕೊಳ್ಳಬೇಕು.
ತಂಡದ ಸದಸ್ಯರ ನಡುವಿನ ಹೊಂದಾಣಿಕೆಯನ್ನು ಬಿಂಬಿಸುವ ಈ ಆಟಕ್ಕೆ ಎರಡೂ ತಂಡದವರು ಸಾಕಷ್ಟು ಉತ್ಸಾಹದಿಂದಲೇ ಸಿದ್ಧರಾದರು. ಒಂದು ಕಡೆಯಲ್ಲಿ ವಿನಯ್, ಸಿರಿ, ನೀತು, ಸ್ನೇಹಿತ್, ಇಶಾನಿ, ರಕ್ಷಕ್, ನಮ್ರತಾ ನಿಂತಿದ್ದರೆ ಮತ್ತೊಂದು ಕಡೆಯಲ್ಲಿ ಸಂಗೀತಾ, ತನಿಷಾ, ವರ್ತೂರು ಸಂತೋಷ್, ತುಕಾಲಿ ಸಂತೋಷ್, ಮೈಕಲ್, ಡ್ರೋಣ್ ಪ್ರತಾಪ್, ಕಾರ್ತಿಕ್ ನಿಂತಿದ್ದರು.
ಭಾಗ್ಯಶ್ರೀ ಹೇಳಿದ ನಂಬರ್‌ಗೆ ಅನುಗುಣವಾಗಿ ತಮ್ಮನ್ನು ತಾವು ಜೋಡಿಸಿಕೊಂಡು ನಿಲ್ಲುವಲ್ಲಿ ಮೊದಲು ಯಶಸ್ವಿಯಾಗಿದ್ದು ಸಂಗೀತಾ ತಂಡ. ಹಾಗಾಗಿ ಸಂಗೀತಾ ತಂಡದವರು ಈ ಆಟದಲ್ಲಿ ಗೆಲುವು ಸಾಧಿಸಿದರು. ಆದರೆ ಅವರ ಗೆಲುವು ಸಂಭ್ರಮವಾಗಿ ಬದಲಾಗುವ ಸ್ಥಿತಿಯಲ್ಲಿ ಅವರಿರಲಿಲ್ಲ. ಯಾಕೆಂದರೆ ಇಡೀ ಮನೆಯ ಕ್ಯಾಪ್ಟನ್ ಆಗಿ ವಿನಯ್ ಆಯ್ಕೆಯಾಗಿದ್ದರು. ಹಾಗಾಗಿ ಆಗಲೇ ಸೋತುಹೋಗಿದ್ದ ಸಂಗೀತಾ ತಂಡಕ್ಕೆ ತಾತ್ಕಾಲಿಕ ನೆಮ್ಮದಿಯನ್ನಷ್ಟೇ ಈ ಗೆಲುವು ನೀಡಿತು.
ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಏನಾಗುತ್ತಿದೆ ಎನ್ನುವ ಆತಂಕ ನೋಡುಗರಿಗೆ ಎದುರಾಗಿದೆ. ಇಂದು ಬೆಳಗ್ಗೆ ವಾಹಿನಿಯು ಪ್ರೊಮೊವೊಂದನ್ನು ರಿಲೀಸ್ ಮಾಡಿದ್ದು, ಮನೆಮಂದಿ ಮೇಲೆ ವಿನಯ್ ಜೋರಾಗಿಯೇ ಕೂಗಾಡಿದ್ದಾರೆ. ಅವರು ಧ್ವನಿ ಬಿಗ್ ಬಾಸ್ ಮನೆಯನ್ನೇ ಬೀಳಿಸುವಷ್ಟು ದೊಡ್ಡದಾಗಿತ್ತು. ವಿನಯ್ ಹಾಗೆ ಕೂಗಾಡಲು ಕಾರಣ ನಟಿ ಸಂಗೀತಾ ಶೃಂಗೇರಿ (Sangeetha Sringeri). ಇಡೀ ಮನೆ ಸಂಗೀತಾ ಪರವಾಗಿ ಮಾತನಾಡುತ್ತಿದೆ. ವಿನಯ್ (Vinay) ಕಡೆ ಬೆಟ್ಟು ಮಾಡುತ್ತಿದೆ. ಇದರಿಂದಾಗಿ ವಿನಯ್ ರುದ್ರಾವತಾರ ತಾಳಿದ್ದಾರೆ.
ಸಂಗೀತಾ ಮತ್ತು ವಿನಯ್ ನಡುವೆ ಇಷ್ಟೊಂದು ವೈಷಮ್ಯ ಬೆಳೆಯುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಸೀರಿಯಲ್ ನಲ್ಲಿ ಒಟ್ಟಿಗೆ ಕೆಲಸ ಮಾಡಿದವರು. ಗುಡ್ ಫ್ರೆಂಡ್ಸ್.. ನೂರಾರು ದಿನಗಳ ಕಾಲ ಒಟ್ಟಿಗೆ ಕಳೆದಿದ್ದಾರೆ. ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ನಟಿಸಿದ್ದಾರೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ಬದ್ಧ ವೈರಿಗಳಂತೆ ಕಿತ್ತಾಡುತ್ತಿದ್ದಾರೆ. ನಾಮಿನೇಟ್ ವಿಚಾರದಲ್ಲಿ ಶುರುವಾದ ಇಬ್ಬರ ನಡುವಿನ ವಾಕ್ಸಮರ ಇದೀಗ ಮಾನಸಿಕ ಖಿನ್ನತೆಗೆ ಜಾರುವಂತೆ ಮಾಡಿದ್ದು ವಿಪರ್ಯಾಸ.
ಹೌದು, ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಶೃಂಗೇರಿ ಖಿನ್ನತೆಗೆ (Depression) ಜಾರಿದ್ದಾರಂತೆ. ಹಾಗಂತ ಅವರೇ ಈ ಮಾಹಿತಿಯನ್ನು ಇತರ ಕಂಟೆಸ್ಟೆಂಟ್ ಮುಂದೆ ಹೇಳಿಕೊಂಡಿದ್ದಾರೆ. ಸಂಗೀತಾ ಅವರು ಒಬ್ಬೊಬ್ಬರೇ ಕ್ಯಾಮೆರಾ ಮುಂದೆ ನಿಂತು ಮಾತನಾಡೋದನ್ನ, ಒಬ್ಬೊಬ್ಬರೇ ಕೂತು ಅಳೋದನ್ನು ಮನೆಮಂದೆ ನೋಡಿದ್ದಾರೆ. ಇಷ್ಟಕ್ಕೆಲ್ಲ ಕಾರಣ ವಿನಯ್ ಎನ್ನುವುದು ಎಲ್ಲರ ಆರೋಪವಾಗಿದೆ. ಹೀಗಾಗಿ ಸಂಗೀತಾ ವಿಷಯದಲ್ಲಿ ವಿನಯ್ ಟಾರ್ಗೆಟ್ ಆಗಿದ್ದಾರೆ.
ಸಂಗೀತಾ ಮತ್ತು ವಿನಯ್ ನಡುವಿನ ಗಲಾಟೆಯಲ್ಲಿ ಭಾಗ್ಯಶ್ರೀ ಅವರು ಪ್ರಶ್ನಿಸುತ್ತಾರೆ. ಇಬ್ಬರ ಮಧ್ಯ ಏನಾಗುತ್ತಿದೆ ಎಂದು ವಿನಯ್ ನ ಕೇಳುತ್ತಾರೆ. ಭಾಗ್ಯಶ್ರೀ ಅವರ ಪ್ರಶ್ನೆಯನ್ನು ಕೇಳುತ್ತಿದ್ದಂತೆಯೇ ವಿನಯ್ ಗರಂ ಆಗುತ್ತಾರೆ. ‘ಅವಳನ್ನು ಸಮಾಧಾನ ಮಾಡೋಕೆ, ನನ್ನ ಲವ್ವರ್?’ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ತನ್ನ ಮತ್ತು ಸಂಗೀತಾ ಮಧ್ಯ ಏನಾಗುತ್ತಿದೆ ಎಂದು ಶಾಂತ ರೀತಿಯಲ್ಲಿ ಕೂತುಕೊಂಡು ಯೋಚಿಸಬೇಕಿದ್ದ ವಿನಯ್, ತಾಳ್ಮೆ ಕಳೆದುಕೊಂಡಿದ್ದಾರೆ. ಹಾಗಾಗಿ ಅವರು ಕೂಗಾಟ ಮನೆಮಂದಿಗೆಲ್ಲ ಆತಂಕ ಮೂಡಿಸಿದೆ.
ಒಂದು ಕಡೆ ‘ನನಗೆ ಈ ಮನೆಯಲ್ಲಿ ಇರೋಕೆ ಭಯವಾಗುತ್ತಿದೆ’ ಎನ್ನುತ್ತಿದ್ದಾರೆ ಸಂಗೀತಾ. ಇನ್ನೊಂದು ಕಡೆ ‘ನನ್ನ ಧ್ವನಿ ಬಂದಾಗ ಕಿವಿ ಮುಚ್ಕೊಳ್ಳಿ’ ಎನ್ನುತ್ತಿದ್ದಾರೆ ವಿನಯ್. ಯಾರೇ ಹೇಳಿದರೂ, ವಿನಯ್ ಶಾಂತವಾಗುವಂತೆ ಕಾಣುತ್ತಿಲ್ಲ. ರಂಪಾಟ ಮನೆಯಲ್ಲಿ ಇನ್ನೂ ಜಾಸ್ತಿಯೇ ಆಗುತ್ತಿದೆ. ಮನೆಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಈ ಕೋಪವನ್ನು ಬಿಗ್ ಬಾಸ್ ಹೇಗೆ ತಣ್ಣಗೆ ಮಾಡುತ್ತಾರೆ ಎನ್ನುವುದು ಸದ್ಯದ ಕುತೂಹಲ.
ನಿನ್ನೆ ಸಂಗೀತಾಗೆ (Sangeetha Sringeri) ಎಲ್ರೂ ನನ್ನ ಟಾರ್ಗೆಟ್ ಮಾಡ್ತಿದಾರೆ ಅನಿಸ್ತಿದ್ರೆ, ಈವತ್ತು ವಿನಯ್ (Vinay) ಪಾಳಿ. ಇದುವರೆಗೂ ಸ್ಟ್ರಾಂಗ್ ಆಗಿಯೇ ಇದ್ದ ವಿನಯ್ ಕಣ್ಣುಗಳಲ್ಲಿ ಇಂದು ನೀರು ಉಕ್ಕಿದೆ. ಹಾಗೆಯೇ ಅವರ ಧ್ವನಿಯೂ ಜೋರಾಗಿದೆ. ‘ಅವ್ಳು ನನ್ನಿಂದ ಡಿಪ್ರೆಶನ್‌ಗೆ ಹೋಗ್ತಿದಾಳೆ ಅಂತಾರೆ. ಅವ್ಳು ನೋಡಿದ್ರೆ ನನ್ನಿಂದ ಥ್ರೆಟ್ ಇದೆ ಅಂತಿದಾಳೆ. ಯಾರಿಗ್ ಏನ್ ಮಾಡಿದೀನಿ ಗುರು ನಾನು?’ ಎಂದು ವಿನಯ್, ಕಾರ್ತಿಕ್ ಬಳಿ ಕೂಗಾಡಿದ್ದಾರೆ.
ಅವರ ಮಾತುಗಳನ್ನು ಕೇಳಿದ ಸಂಗೀತಾ ಶೃಂಗೇರಿ ನೇರವಾಗಿ ವಿನಯ್ ಎದುರಿಗೇ ಬಂದು ಕೂತು, ‘ನಿಮ್ಮಿಂದ ನನಗೆ ಡೇಂಜರ್ ಅಂತ ನಂಗೆ ಅನಿಸುತ್ತದೆ’ ಎಂದು ತಣ್ಣಗೇ ಹೇಳಿದ್ದಾರೆ. ವಿನಯ್ ಅವಳ ಜೊತೆಗೆ ಮಾತನಾಡದೆ ಕಾರ್ತಿಕ್ (Karthik) ಬಳಿಯೇ ತಿರುಗಿ, ‘ನನ್ನ ವೈಸ್ ಕೇಳಿದ್ರೆ ಕಿವಿ ಮುಚ್ಕೊಳೋಕೆ ಹೇಳು. ಇಲ್ಲಾ ದೂರ ಇರೋದಕ್ಕೆ ಹೇಳು’ ಎಂದು ಹೇಳಿ ಸಂಗೀತಾ ಕಡೆಗೆ ತಿರುಗಿ, ‘ಪ್ಲೀಸ್ ಡಿಲೀಟ್ ಮೀ ಇನ್ ಯುವರ್ ಹೆಡ್’ ಎಂದಿದ್ದಾರೆ.
ಸಂಗೀತಾ, ‘ಸ್ಟೋರ್ ಆಗಿದ್ರೆ ಡಿಲೀಟ್ ಮಾಡ್ಬೋದು’ ಎಂದು ಮತ್ತೆ ಕೆಣಕಿದ್ದಾರೆ. ವಿನಯ್ ಸಹನೆಯ ಕಟ್ಟೆಯೊಡೆದು, ‘ಯಾರ್ ಹೆಂಗಾದ್ರೂ ಸತ್ರೆ, ವೈ ಶುಡ್ ಐ ಕೇರ್’ ಎಂದು ಕಿರುಚಿದ್ದಾರೆ. ಈ ಮಾತುಗಳು ಬಿಗ್ ಬಾಸ್ ಮನೆಯನ್ನೇ ಬೆಚ್ಚಿ ಬೀಳಿಸಿವೆ.
ಹಾಗಾದ್ರೆ ಮನೆಯೊಳಗೆ ಏನು ನಡೀತಿದೆ? ಸಂಗೀತಾ ಮತ್ತು ವಿನಯ್ ನಡುವೆ ಹೊತ್ತಿಕೊಂಡಿರುವ ಬೆಂಕಿಕಿಡಿಯನ್ನು ಆರಿಸ್ತಾರಾ ಕಾರ್ತಿಕ್? ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ? ಇಂತಹ ಸಾಕಷ್ಟು ಬೆಂಕಿ ಕಿಡಿಗಳ ದೃಶ್ಯಗಳು JioCinemaದಲ್ಲಿ ಲಭ್ಯವಿವೆ.
ಬಿಗ್‌ಬಾಸ್ (Bigg Boss Kannada) ಮನೆ ದಿನದಿನಕ್ಕೆ, ಅಲ್ಲಲ್ಲ ಕ್ಷಣಕ್ಷಣಕ್ಕೂ ಕಾವೇರುತ್ತಿದೆ. ಸ್ಪರ್ಧಿಗಳ ಹನಿಮೂನ್ ಪೀರಿಯಡ್ ಮುಗಿದಂತಿದೆ. ಅಸಲಿ ಆಗ ಈಗ ಶುರುವಾಗಿದೆ. ಅದರ ನಿಚ್ಛಳ ಸುಳಿವು ಈಗಷ್ಟೇ ಬಿಡುಗಡೆಯಾಗಿರುವ ಪ್ರೊಮೊದಲ್ಲಿ ಹೆಚ್ಚಾಗಿಯೇ ಕಾಣಿಸುತ್ತಿದೆ.
ಮನೆಯೊಳಗೆ ಹೋದಾಗಿನಿಂದಲೂ ಸಂಗೀತಾ (Sangeetha Sringeri) ಮತ್ತು ಕಾರ್ತಿಕ್ (Karthik) ಚೆನ್ನಾಗಿದ್ದರು. ಪ್ರತಿಯೊಂದು ಸಂದರ್ಭದಲ್ಲಿಯೂ, ನಾಮಿನೇಷನ್ ಗಳಿಗೆಯಲ್ಲಿಯೂ ಅವರಿಬ್ಬರೂ ಪರಸ್ಪರ ಸಪೋರ್ಟೀವ್ ಆಗಿಯೇ ನಡೆದುಕೊಂಡಿದ್ದರು. ಅವರ ಆಪ್ತ ಸಂಬಂಧಕ್ಕೆ ಈಗ ಒಂದು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ.
‘ಎಲ್ಲರೂ ಒಂದ್ ಕಡೆ ಇದ್ರೆ ನೀನು ಮಾತ್ರ ಒಂದ್ ಕಡೆ ಇರ್ತೀಯಾ. ಹದಿನಾರು ಜನರಲ್ಲಿ ಬೇರೆ ಯಾರೂ ಕಾಣಿಸ್ಲಿಲ್ವಾ? ನಾನು ಏನ್ ಮಾಡಿದೀನಿ ನಿಂಗೆ?’ ಎಂದು ಒಂದು ಕಡೆ ವಿನಯ್ (Vinay)ಏರುದನಿಯಲ್ಲಿ ಕಾರ್ತಿಕ್ ಅವರನ್ನು ಪ್ರಶ್ನಿಸುತ್ತಿದ್ದಾರೆ.
ಇನ್ನೊಂದು ಕಡೆ ಸಂಗೀತಾ, ‘ಅವ್ರಿಗೆ ಯಾರೂ ಬೆರಳು ತೋರಿಸಬಾರದು. ತೋರಿಸಿದರೆ ಅವರು ಸಿಟ್ಟಿಗೇಳ್ತಾರೆ’ ಎಂದು ತಣ್ಣಗೇ ಕೇಳುತ್ತಿದ್ದಾರೆ. ‘ಸಗಣಿ ಮೇಲೆ ಕಾಲಿಟ್ರೆ ಏನು ಮಾಡ್ತೀಯಾ?’ ಇದು ವಿನಯ್ ಪ್ರಶ್ನೆ. ‘ಐ ನೋ… ಇಲ್ಲಿ ಯಾರೂ ನಮ್ಮೋರಲ್ಲ ಅಂತ’ ಇದು ಸಂಗೀತಾ ಕಾರ್ತಿಕ್‌ಗೆ ಹೇಳುತ್ತಿರುವ ಭಾವುಕ ನುಡಿ. ‘ಇಲ್ಲಾ ನಾನಾ.. ಇಲ್ಲಾ ಅವಳಾ?’ ಇದು ವಿನಯ್ ಖಡಕ್ ನುಡಿ.
‘ನೀವು ನನ್ ಜೊತೆ ಇರಿ, ಇಲ್ದೆ ಇರಿ… ಐ ಫೈಟ್ ಮೈ ಫೈಟ್’!’ ಎಂದು ಕೊನೆಯ ಮಾತು ಎಂಬಂತೆ ಹೇಳಿ ಸಂಗೀತಾ ಎದ್ದು ಹೋಗಿದ್ದಾರೆ. ‘ವಾರ್ ಡಿಕ್ಲೇರ್ ಮಾಡಿದ್ದಾರೆ. ವಾರ್ ಮಾಡೋಣ’ ಇದು ವಿನಯ್ ಕೊನೆಯ ಮಾತು.
ಇವರಿಬ್ಬರ ಮಾತುಗಳನ್ನೂ ಮೌನವಾಗಿ ಕೇಳಿಸಿಕೊಳ್ಳುತ್ತ ಕೂತ ಕಾರ್ತಿಕ್ ಮನಸ್ಸಿನೊಳಗಿನ ತೊಳಲಾಟ ಮುಖದಲ್ಲಿಯೂ ಎದ್ದು ಕಾಣಿಸುತ್ತಿದೆ. ಬೆಸ್ಟ್ ಫ್ರೆಂಡ್ ಸಂಗೀತಾ ಜೊತೆಗೆ ನಿಲ್ತಾರಾ? ಅಥವಾ ವಿನಯ್‌ಗೆ ಸಾಥ್ ಕೊಡ್ತಾರಾ? ಈ ಪ್ರಶ್ನೆಯಷ್ಟೇ ಈಗ ಉಳಿದಿದೆ. ಇಂತಹ ಸಾಕಷ್ಟು ರೋಚಕ ವಿಷಯಗಳನ್ನು JioCinemaದಲ್ಲಿ ಸೆರೆಹಿಡಿಯಲಾಗುತ್ತಿದೆ.
ಅಂತರರಾಷ್ಟ್ರೀಯ ಖ್ಯಾತಿಯ ಹಾಲಿವುಡ್ ಹಾಗೂ ಬಾಲಿವುಡ್ ನಟ ಕಬೀರ್ ಬೇಡಿ (Kabir Bedi) ಅವರು ಮೊಟ್ಟಮೊದಲ ಬಾರಿಗೆ ವಿನಯ್ (Vinay) ನಿರ್ದೇಶನದ “ಹಂಟರ್” (Hunter) ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಲಿವುಡ್ ನಲ್ಲಿ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಕಬೀರ್ ಬೇಡಿ ಅಲ್ಲಿ ಜೇಮ್ಸ ಬಾಂಡ್, ಮೈಕಲ್ ಕೇನ್ ಮೊದಲಾದ ಖ್ಯಾತ ನಾಮರೊಂದಿಗೆ ಅಭಿನಯಿಸಿರುತ್ತಾರೆ. ಇದೀಗ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ರವರು ನಮ್ಮ ಭಾಷೆಯ ಚಿತ್ರಕ್ಕೂ ಅವರನ್ನು ಪರಿಚಯಿಸಿರುವುದು ಚಿತ್ರದ ಕುತೂಹಲವನ್ನು ಹೆಚ್ಚಿಸಿದೆ.
ಪ್ಯಾನ್ ಇಂಡಿಯಾ ಮಾದರಿಯ ಈ ಸಿನಿಮಾದಲ್ಲಿ ನಿರಂಜನ್ ಮತ್ತು ಸೌಮ್ಯ ಮೆನನ್ ನಾಯಕ-ನಾಯಕಿಯರಾಗಿದ್ದು ಪ್ರಕಾಶ್ ರಾಜ್, ನಾಝರ್ ಮತ್ತು ಸುಮನ್ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಯುರೋಪ್ ನಾದ್ಯಂತ ಧೂಳೆಬ್ಬಿಸಿದ್ದ ನಂಬರ್ 1 ಟಿವಿ ಸೀರಿಸ್ “ಸಂದೋಕನ್” ನಲ್ಲಿ ನಟಿಸಿದ್ದ ಬೇಡಿಯವರಿಗೆ ಕಳೆದ ಸೆಪ್ಟೆಂಬರ್ ನಲ್ಲಿ ಇಟೆಲಿಯ ವೆನಿಸ್ ನಲ್ಲಿ “Life time achievement award” ಬಂದ ನಂತರ, ಇದೇ ಮೊದಲ ಬಾರಿಗೆ ಚಿತ್ರ ವೊಂದರಲ್ಲಿ ಅಭಿನಯಿಸಿರುತ್ತಾರೆ. ಅದೂ ನಮ್ಮ ಕನ್ನಡ ಭಾಷೆಯ ಚಿತ್ರ. ಇದನ್ನೂಓದಿ:ರಿಲೇಶನ್ ಶಿಪ್ ಇಟ್ಕೊಳ್ಳೋಕೆ ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟ ನಟಿ ಮಯೂರಿ
ಇದಲ್ಲದೆ ಕಬೀರ್ ಬೇಡಿಯವರು ತ್ರಿವಿಕ್ರಮ ಸಾಪಲ್ಯರವರ ಮತ್ತೊಂದು ಚಿತ್ರದಲ್ಲೂ ಅಭಿನಯಿಸುತ್ತಿರುವ ಮಾಹಿತಿ ಹೊರಬಿದ್ದಿದೆ. ಅಕ್ಟೋಬರ್ 7 ರಿಂದ ಚಿತ್ರೀಕರಣ ಆರಂಭಗೊಳ್ಳಲಿರುವ ಸುಮಾರು 800 ವರ್ಷಗಳ ಹಿಂದಿನ ಕಥೆಯಾಧಾರಿತ ಪಿರಿಯಾಡಿಕ್ ಸಿನಿಮಾದಲ್ಲಿ ಬೆಂಗಾಲಿ ನಟ ಸೌಮಿಕ್ ಚಟರ್ಜಿ ಪ್ರಮುಖ ಪಾತ್ರದಲ್ಲಿದ್ದು ಕನ್ನಡದ ಖ್ಯಾತ ಹಿರಿಯ ನಟಿಯರಾದ ಶ್ರುತಿ ಹಾಗೂ ಭವ್ಯ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಒಟ್ಟಿನಲ್ಲಿ ತ್ರಿವಿಕ್ರಮ (Trivikram) ರವರು ಎರಡು ಸಿನಿಮಾಗಳನ್ನು ಜಂಟಿಯಾಗಿ ಚಿತ್ರೀಕರಿಸಿ, ಅದೆರಡರಲ್ಲೂ ಕಬೀರ್ ಬೇಡಿಯಂತಹ ವಿಶ್ವದ ಪ್ರಖ್ಯಾತ ನಟನನ್ನು ಕರೆತಂದು ಚಿತ್ರರಂಗದಲ್ಲಿ ಹೊಸ ಸಂಚಲನ ಸ್ರಷ್ಟಿಸಿರುತ್ತಾರೆ. ಅವರೊಬ್ಬ ದಿಟ್ಟ ನಿರ್ಮಾಪಕ ಎನ್ನುವುವುದಕ್ಕೆ ಇದು ಸಾಕ್ಷಿ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಪೆನ್ ಡ್ರೈವ್ ಸಂಕಷ್ಟ ಎದುರಾಗಿದೆ.
ಯಡಿಯೂರಪ್ಪಗೆ ಸಂಬಂಧಿಸಿದ ಡೈರಿ, ಪೆನ್ ಡ್ರೈವ್ ಅನ್ನು ತನಿಖಾಧಿಕಾರಿ ಮತ್ತು ನ್ಯಾಯಾಲಯದ ಮುಂದೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಡೈರಿ, ಪೆನ್ ಡ್ರೈವ್ ನೀಡಲು ಈಶ್ವರಪ್ಪ ಆಪ್ತ ವಿನಯ್ ಒಪ್ಪಿಕೊಂಡಿದ್ದು, ನನಗೆ ಭದ್ರತೆ ಕೊಟ್ಟರೆ ಮಾತ್ರ ಪೆನ್ ಡ್ರೈವ್ ನೀಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಿಎಸ್‍ವೈ ಡೈರಿ ಪ್ರಕರಣ- ಈಶ್ವರಪ್ಪ ಆಪ್ತ ವಿನಯ್ ಪ್ರತಿಕ್ರಿಯೆ
ವಿನಯ್ ಬಳಿ ಯಡಿಯೂರಪ್ಪಗೆ ಸಂಬಂಧಪಟ್ಟ ಡೈರಿಯ ಅಸಲಿ ಪೆನ್ ಡ್ರೈವ್ ಇದೆಯಂತೆ. ರಾಜ್ಯ ಪೊಲೀಸರು ಭದ್ರತೆಯನ್ನು ನೀಡಿದರೆ ತನಿಖಾಧಿಕಾರಿ ಅಥವಾ ನ್ಯಾಯಾಲಯಕ್ಕೆ ಡೈರಿ ನೀಡುತ್ತೇನೆ ಎಂದು ತೀರ್ಮಾನ ಮಾಡಿದ್ದಾರೆ. ನನ್ನ ಬಳಿ ಪ್ರಮುಖ ಸಾಕ್ಷ್ಯಾಧಾರಗಳು ಇವೆ. ಅದನ್ನು ನಾನು ನ್ಯಾಯಾಲಯದ ಮುಂದೆ ಇಡಬೇಕು. ಆ ಸಾಕ್ಷ್ಯ ಬಯಲಾದ ಬಳಿಕ ನನ್ನ ಜೀವಕ್ಕೆ ಕುತ್ತು ಬರುತ್ತದೆ. ಈ ಹಿನ್ನೆಲೆಯಲ್ಲಿ ಭದ್ರತೆ ನೀಡುವಂತೆ ಇಂದು ಅಮೃತಹಳ್ಳಿ ಪೊಲೀಸ್ ಠಾಣೆಯ ಪೊಲೀಸರಿಗೆ ಪತ್ರ ನೀಡಿ ವಿನಯ್ ಮನವಿ ಮಾಡಿಕೊಳ್ಳಲಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿನಯ್, ಯಡಿಯೂರಪ್ಪ ಅವರ ಪಿಎ ಸಂತೋಷ್ ನನ್ನನ್ನು ಕಿಡ್ನಾಪ್ ಮಾಡಿ ವಿಫಲವಾಗಿದ್ದನು. ಬಳಿಕ ಆತ ಪೊಲೀಸ್ ಠಾಣೆಗೆ ಕೆಲವು ಅಗತ್ಯವಾದ ಮಾಹಿತಿ, ಪೆನ್‍ಡ್ರೈವ್ ಇದಕ್ಕೋಸ್ಕರ ಕಿಡ್ನಾಪ್ ಮಾಡಿಸಿದೆ ಎಂದು ಹೇಳಿಕೆ ಕೊಟ್ಟಿದ್ದನು. ಈ ಆಧಾರದ ಮೇಲೆ ಪೊಲೀಸರು ನನಗೆ ಒಂದು ನೋಟಿಸ್ ನೀಡಿದ್ದರು ಎಂದು ಹೇಳಿದ್ರು.
ನಿಮ್ಮ ಬಳಿ ಯಾವುದಾದರೂ ದಾಖಲಾತಿ ಇದ್ದರೆ ಅದನ್ನು ನಮಗೆ ಕೊಡಿ ಎಂದು ನೋಟಿಸ್‍ನಲ್ಲಿ ಕೇಳಿದ್ದಾರೆ. ಹೀಗಾಗಿ ನನ್ನ ಬಳಿಯಿರುವ ದಾಖಲಾತಿ, ಪೆನ್‍ಡ್ರೈವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಡಲು ತೀರ್ಮಾನ ಮಾಡಿದ್ದೇನೆ. ಆದರೆ ಸೂಕ್ತ ದಾಖಲೆ ಕೊಡಲು ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಪೊಲೀಸರ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಆದರೆ ತನಿಖೆಯಲ್ಲಿರುವ ವಿಚಾರದ ವೇಳೆ ಮಾಹಿತಿಯನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಸಂತೋಷ್ ಕಿಡ್ನಾಪ್ ಮಾಡಿರುವ ಕುರಿತು ಪೆನ್ ಡ್ರೈವ್ ನಲ್ಲಿ ಇದೆ. ಬೇರೆ ವಿಚಾರ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ರು.
ಪೊಲೀಸ್ ಭದ್ರತೆ ಏಕೆ?
ಈಗಾಗಲೇ ಒಮ್ಮೆ ನಮ್ಮ ಮೇಲೆ ಹಲ್ಲೆ ನಡೆದಿದೆ. ಈಗ ಅಪರಿಚಿತ ವ್ಯಕ್ತಿಗಳು ಓಡಾಡುತ್ತಿದ್ದಾರೆ. ಪಿಎ ಸಂತೋಷ್ ಇನ್ನೂ ಕೂಡ ಯಡಿಯೂರಪ್ಪ ಅವರ ಬಳಿಯೇ ಇದ್ದಾರೆ. ಹೀಗಾಗಿ ಅವರು ಮತ್ತೆ ನನ್ನ ಮೇಲೆ ಹಲ್ಲೆ ಮಾಡುವ ಅನುಮಾನ ಇದೆ. ಈ ನಿಟ್ಟಿನಲ್ಲಿ ಪೊಲೀಸ್ ಭದ್ರತೆ ಕೋರಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇಂದ್ರಕ್ಕೆ ಹಣ ಸಂದಾಯ ಮಾಡಿದ್ದಾರೆ ಎಂದು ಹೇಳಲಾದ ಡೈರಿಯೊಂದನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ತಲ್ಲಣವೇರ್ಪಟ್ಟಿದೆ. ಈ ಕುರಿತು ಈಶ್ವರಪ್ಪ ಆಪ್ತ ವಿನಯ್ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ವಿನಯ್ ಅವರೇ ಡೈರಿ ನೀಡಿದ್ದಾರೆ ಎಂಬ ವಿಚಾರ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅವರವರ ವೈಯಕ್ತಿಕ ವಿಚಾರವಾಗಿದೆ. ಅಲ್ಲಿ ಏನೇನ್ ಆಗಿದೆ ಎಂದು ನನಗೆ ಗೊತ್ತಿಲ್ಲ. ಇತ್ತೀಚೆಗೆ ಒಂದು ಆಡಿಯೋ ಕೂಡ ರಿಲೀಸ್ ಆಗಿತ್ತು. ಇದೀಗ ಡೈರಿ ಕೇಸ್ ನಲ್ಲಿ ಸಿಕ್ಕಾಕ್ಕೊಂಡಿದ್ದಾರೆ. ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.
ಆ ಡೈರಿ ಎಲ್ಲಿತ್ತು ಅನ್ನೋದೇ ನನಗೆ ಗೊತ್ತಿಲ್ಲ. ಆ ಡೈರಿಗೂ ನಮಗೂ ಸಂಬಂಧವಿಲ್ಲ. ನಾನೇ ಆ ಡೈರಿಯನ್ನು ನೋಡಿಲ್ಲ. ಹೀಗಾಗಿ ನಾನು ಕೊಟ್ಟಿದ್ದೀನಿ ಎಂದು ಹೇಗೆ ಹೇಳುತ್ತಾರೆ. ಅದಕ್ಕೆ ಅರ್ಥನೂ ಇಲ್ಲ ಅಂದ್ರು.
ನನ್ನನ್ನು ಕಿಡ್ನಾಪ್ ಮಾಡಿಸಿದ್ದು ಇದೇ ಯಡಿಯೂರಪ್ಪ ಅವರ ಪಿಎ. ಅದರಲ್ಲಿ ಯಾವುದೇ ಅನುಮಾನನೇ ಇಲ್ಲ. ಅದಾದ ಬಳಿಕ ನಾನು ಕಿಡ್ನಾಪ್ ವಿಚಾರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕೇಸ್ ಇತ್ತೀಚೆಗೆ ಸಿಸಿಬಿ ಹಸ್ತಾಂತರ ಆದ ಬಳಿಕ ಎಲ್ಲ ವಿಚಾರಣೆ ಆರಂಭವಾದ ನಂತರ ಸಂತೋಷ್, ಸಿಸಿಬಿಗೆ ಹಸ್ತಾಂತರ ಮಾಡಿದುದರ ಬಗ್ಗೆ ಪ್ರಶ್ನೆ ಮಾಡಿ ಹೈ ಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ. ಹೀಗಾಗಿ ಈ ಲೈನ್ ನಲ್ಲಿ ನಾನು ಹೋರಾಟ ಮಾಡುತ್ತಾ ಬರುತ್ತಿದ್ದೇನೆ. ಈ ಮಧ್ಯೆ ಯಾವುದೋ ಡೈರಿ ವಿಚಾರದ ಕುರಿತು ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ ಅಂದ್ರು.
ಡೈರಿ ಬಗ್ಗೆ ನನಗೇನೂ ಗೊತ್ತಿಲ್ಲ. ಈ ಬಗ್ಗೆ ನಾನು ಎಲ್ಲಿ ಬೇಕಾದ್ರೂ ಪ್ರಮಾಣ ಮಾಡಲು ರೆಡಿಯಾಗಿದ್ದೇನೆ. ನಾನು ಇಂದಿನವರೆಗೂ ಡಿಕೆ ಶಿವಕುಮಾರ್ ಅವರನ್ನು ಭೇಟಿಯೇ ಮಾಡಿಲ್ಲ. ನನ್ನನ್ನು ಕಿಡ್ನಾಪ್ ಮಾಡಲು ಸುಪಾರಿ ಕೊಟ್ಟಿದ್ದೇ ಸಂತೋಷ್. ಆತ ಯಾಕೆ ಮಾಡಿದ ಅನ್ನೋದಕ್ಕೆ ಅವನೇ ಬಾಯಿ ಬಿಡಬೇಕು ಎಂದು ವಾಗ್ದಾಳಿ ನಡೆಸಿದ್ರು.
ಇದೇ ವೇಳೆ ಅವರು ಕಾಂಗ್ರೆಸ್ ನವರು ಬಿಡುಗಡೆ ಮಾಡಿರುವ ಡೈರಿಯ ಮೂಲ(ಒರಿಜಿನಲ್) ಕಾಪಿ ಎಲ್ಲಿದೆ ಎಂದು ಪ್ರಶ್ನಿಸಿದ್ರು. ಐಟಿ ದಾಳಿಯಾದ ಸಂದರ್ಭದಲ್ಲಿ ಅವರ ಮನೆಯಿಂದ ವಶಪಡಿಸಿಕೊಂಡಿರುವ ಎಲ್ಲದಕ್ಕೂ ಒಂದು ನೋಟ್ ಮಾಡಿ ದಾಖಲಾತಿಗಳನ್ನು ಎಂಟ್ರಿ ಮಾಡುತ್ತಾರೆ. ಅಲ್ಲದೆ ಆ ದಾಖಲಾತಿಗೆ ಇವರ ಬಳಿ ಸಹಿ ಹಾಕಿಸಿಕೊಂಡು ಹೋಗುತ್ತಾರೆ. ಹೀಗಾಗಿ ಆ ಮಹರು ಪಟ್ಟಿಯಲ್ಲಿ ಡೈರಿ ವಿಚಾರ ಇರಬೇಕಲ್ವ ಎಂದು ವಿನಯ್ ಹೇಳಿದ್ರು.
ಇಂದು ಯಡಿಯೂರಪ್ಪ ಅವರಿಗೆ ಈ ಪರಿಸ್ಥಿತಿ ಬರಲು ಅವರು ಪಕ್ಕದಲ್ಲಿ ಇಟ್ಟುಕೊಂಡ ಶನಿಯೇ ಕಾರಣ. ಆ ಶನಿ ಪ್ರಭಾವ ಬಿಎಸ್‍ವೈ ಮೇಲೆ ಪರಿಣಾಮ ಬೀಳುತ್ತಿದೆ. ಹೀಗಾಗಿ ಅವರು ಮುಂದಿನ ದಿನಗಳಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಇನ್ನಷ್ಟು ಕಷ್ಟಗಳನ್ನು ಅನುಭವಿಸುತ್ತಾರೆ ಎಂದು ಹೇಳಿದ್ರು.
ಬಿಎಸ್‍ವೈ ಆಪ್ತ ಸಂತೋಷ್ ಹಾಗೂ ಈಶ್ವರಪ್ಪ ಆಪ್ತ ವಿನಯ್ ಒಡನಾಟ ಚೆನ್ನಾಗಿಯೇ ಇತ್ತು. ಆ ಸಂದರ್ಭದಲ್ಲಿ ಡೈರಿ ವಿನಯ್ ಬಳಿ ಇತ್ತು. ಹೀಗಾಗಿ ಆ ಡೈರಿ ಪಡೆದುಕೊಳ್ಳಲು ಸಂತೋಷ್ ವಿನಯ್ ನನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಕೆಲ ಬಿಜೆಪಿ ನಾಯಕರು ಸಹ ವಿನಯ್ ಸಂಪರ್ಕ ಮಾಡಿ ಡೈರಿ ಕೊಟ್ಬಿಡು ಎಂದಿದ್ದರು. ಡೈರಿಯನ್ನ ಬಿಎಸ್ ವೈ ಆಪ್ತರೇ ಕಾಂಗ್ರೆಸ್ ನಾಯಕರಿಗೆ ತಲುಪಿಸಿದ್ದಾರೆ ಎಂದು ಈಶ್ವರಪ್ಪ ಆಪ್ತ ವಿನಯ್ ಹೊಸ ಬಾಂಬ್ ಹಾಕಿದ್ದಾರೆ.
* ವಿಶೇಷ ವರದಿ ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ 5 ಭಾಷೆಗಳಲ್ಲಿ ತೆರೆಕಂಡು ಈಗಾಗಲೇ ರಾಜ್ಯ, ದೇಶ ಹಾಗೂ ಹೊರದೇಶಗಳಲ್ಲಿ ಧೂಳೆಬ್ಬಿಸುತ್ತಿದೆ. ಈ ಶುಭ ಸಂದರ್ಭದಲ್ಲಿಯೇ ಪಬ್ಲಿಕ್ ಟಿವಿ ಜೊತೆ ಖಳನಟರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು.
ಕೆಜಿಎಫ್ “ಕೇಡೀಸ್” ಎಂಬ ಪಬ್ಲಿಕ್ ಟಿವಿ ಕಾರ್ಯಕ್ರಮದಲ್ಲಿ ಮಾತನಾಡಿದ ಖಳನಾಯಕ ವಿನಯ್, ಚಿತ್ರೀಕರಣದ ಸಂದರ್ಭದಲ್ಲಿ ನಡೆದ ದುಃಖ ಹಾಗೂ ಸಂತಸದ ವಿಚಾರವನ್ನು ಹಂಚಿಕೊಂಡರು. ಅಲ್ಲದೇ ಇದೇ ವೇಳೆ ಕೆಜಿಎಫ್ ಸಿನಿಮಾ ತಂಡ ಅನ್ನೋದಕ್ಕಿಂತ ಅದೊಂದು ನನ್ನ ಕುಟುಂಬ ಅನ್ನುವ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಧನ್ಯವಾದ ಅರ್ಪಿಸಿದ್ರು.
ವಿನಯ್ ಹೇಳಿದ ಬ್ಯಾಡ್ ನ್ಯೂಸ್ ಏನು..?
ಸಿನಿಮಾದಿಂದ ಹೊರಗಡೆ ಕುಟುಂಬ ಪಾಲನೆ ಮುಖ್ಯವಾಗುತ್ತದೆ. ಹೆರಿಗೆಯಾದ ಬಳಿಕ 20 ದಿನದಲ್ಲೇ ನಾವು ನಮ್ಮ ಮೊದಲ ಮಗುವನ್ನು ಕಳೆದುಕೊಂಡಿದ್ದೆವು. ಹೀಗಾಗಿ ನಾನು ಕುಟುಂಬ ಬಗ್ಗೆ ತುಂಬಾ ಕೇರ್ ತೆಗೆದುಕೊಳ್ಳುತ್ತಿದ್ದೆ. ಮಗು ಕಳೆದುಕೊಂಡಿರುವ ನೋವು ನಂಗೆ ಎಷ್ಟು ಇತ್ತೋ ಅಷ್ಟೇ ನೋವು ನಮ್ಮ ತಾಯಿ, ಪತ್ನಿ, ಅತ್ತೆ-ಮಾವ ಹಾಗೂ ನಮ್ಮ ಸಂಬಂಧಿಕರಿಗೂ ಇತ್ತು. ಪತ್ನಿಗೆ ಹೆರಿಗೆಯಾಗಿ ಮಗು 20 ದಿನ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿತ್ತು ಎಂದು ದುಃಖದ ಸುದ್ದಿಯೊಂದನ್ನು ಹಂಚಿಕೊಂಡರು. ಇದನ್ನೂ ಓದಿ:ಯಶ್ ಬಗ್ಗೆ ಕೆಜಿಎಫ್ ಕೇಡೀಸ್ ಖಡಕ್ ಮಾತು
ಕೆಜಿಎಫ್ ನನಗೆ ಹೊಸ ತಂಡವಾಗಿದೆ. ರಾಮ್, ಲಕ್ಕಿ, ಅವಿನಾಶ್ ಸರ್ ಇವರೆಲ್ಲರೂ ನನಗೆ ನೈತಿಕವಾಗಿ ಬೆಂಬಲಿಸಿದ್ದಾರೆ. ಇವರೆಲ್ಲರೂ ಬೆಂಗಳೂರಿನಲ್ಲಿದ್ದರು. ನಾನು ಮಾತ್ರ ಮೈಸೂರಿನಲ್ಲಿದೆ. ಆದ್ರೆ ಎಲ್ಲರೂ ನನಗೆ ಬೆಂಬಲ ನೀಡುತ್ತಿದ್ದರು. ನಾನು ಮಾತನಾಡುವಾಗ ಸ್ವಲ್ಪ ಎಮೋಷನಲ್ ಆಗಿದ್ದೇನೆ ಅಂತ ಗೊತ್ತಾದ ತಕ್ಷಣ ಇವರೆಲ್ಲರೂ ಮರುದಿನವೇ ಆಸ್ಪತ್ರೆಗೆ ಬರುತ್ತಿದ್ದರು. ನನ್ನ ಜೊತೆ ಇದ್ದು, ನನಗೆ ಸಪೋರ್ಟ್ ಮಾಡುತ್ತಿದ್ದರು ಎಂದು ಹೇಳಿದ್ರು. ಇದನ್ನೂ ಓದಿ: ಕೆಜಿಎಫ್ ನಟರ ಗಡ್ಡದ ಹಿಂದಿದೆ ರೋಚಕ ಕಥೆ
ನಂತರ ಪ್ರಶಾಂತ್ ಸರ್ ಯಾವಾಗ ಬೆಂಗಳೂರಿಗೆ ಬರುತ್ತಿದ್ದೀಯಾ ಅಂತ ಕೇಳಿದ್ರು. ಆವಾಗ ನಾನು ಸರ್, ನಾಳೆ, ನಾಡಿದ್ರಲ್ಲಿ ಬರುತ್ತೇನೆ ಅಂದಾಗ, ಹೇಗೆ ಬರ್ತಿಯಾ..? ಗಾಡಿ ಕಳುಹಿಸಲಾ..? ಕಾರ್ ಕಳುಹಿಸ್ತೇನೆ. ನನ್ನ ಪತ್ನಿ ಎಲ್ಲರೂ ಮೈಸೂರಿನಲ್ಲಿದ್ದರು. ಆದ್ರೆ ನೀನು ನಿನ್ನ ಮನೆಗೆ ಹೋಗಬೇಡ ಎಂದು ಹೇಳಿದ್ದರು. ಸಂಜೆ ವರ್ಕ್ ಶಾಪ್ ಗೆ ಬಂದೆ. ಅಲ್ಲಿ ಸರಿ ಸುಮಾರು 3-4 ದಿನ ಇದ್ದೆ. ಪ್ರಶಾಂತ್ ಅವರು ಅಷ್ಟೊಂದು ಬ್ಯುಸಿಯಾಗಿದ್ದರೂ ಕೂಡ 7 ಗಂಟೆಯಿಂದ ನನ್ನ ಜೊತೆ ಕುಳಿತು ಪ್ರೇರೆಪಣೆಯ ಮಾತುಗಳನ್ನಾಡುತ್ತಿದ್ದರು. ಈ ಮೂಲಕ ನನ್ನ ಯೋಚನೆಗಳನ್ನು ಬದಲಾಯಿಸುತ್ತಿದ್ದರು. ಶೂಟಿಂಗ್ ನಲ್ಲಿ ಯಾರು ಇರಲಿ ಬಿಡಲಿ, ನೀನು ಅಲ್ಲಿಗೆ ಬಂದುಬಿಡು ಎಂದು ಹೇಳುತ್ತಿದ್ದರು ಅಂದ್ರು. ಇದನ್ನೂ ಓದಿ: ರಣ ರಣ ಲುಕ್‍ನಲ್ಲಿ ಮಿಂಚಿರುವ ಕೆಜಿಎಫ್ ಕಿಲಾಡಿಗಳ ಸಿನಿಮಾ ಜರ್ನಿ ಆರಂಭದ ಕಥೆ
ಯಶ್ ಅಣ್ಣನೂ ಕರೆ ಮಾಡುತ್ತಿದ್ದರು. ರಾಮ್ ಎಲ್ಲಾ ಸಮಯದಲ್ಲಿಯೂ ಜೊತೆಗಿದ್ದರು. ಟೈಮ್ ಸಿಕ್ಕಾಗ ಅವನನ್ನು ಕರೆದುಕೊಂಡು ಬಾ, ಶೂಟಿಂಗ್ ನಲ್ಲಿ ಅವನು ನಮ್ಮ ಜೊತೆ ಇರಲಿ ಎಂದು ರಾಮ್ ಜೊತೆ ಯಶ್ ಅಣ್ಣ ಹೇಳುತ್ತಿದ್ದರು. ಹೀಗಾಗಿ ಇದನ್ನು ಬರೀ ಸಿನಿಮಾ ಕೆಜಿಎಫ್ ಟೀಂ ಎಂದು ಹೇಳೋದಕ್ಕಿಂತ ನನ್ನ ಕುಟುಂಬ ಎಂದು ಹೇಳಿಕೊಳ್ಳಲು ಇಷ್ಟಪಡುತ್ತೇನೆ ಎಂದು ವಿನಯ್ ಹೇಳಿದ್ರು.
ಗೆಳೆಯರು, ಸಂಬಂಧಿಕರು ಎಲ್ಲರೂ ಇದ್ದರು. ಅವರೆಲ್ಲರೂ ನನ್ನ ಬಾಲ್ಯದ ಗೆಳೆಯರು. ಅವರಿಗೆ ವಿನಯ್ ಯಾರು, ಹೇಗೆ ಅಂತ ಎಲ್ಲವೂ ಗೊತ್ತು. ಆದ್ರೆ ಕೆಜಿಎಫ್ ಟೀಂ ಗೆ ನನ್ನ ಪರಿಚಯವಾಗಿದ್ದು ಕೇವಲ 2 ಅಥವಾ ಎರಡೂವರೆ ವರ್ಷದಳಿಂದೀಚೆಗೆ ಅಷ್ಟೇ. ಲಕ್ಕಿ ಭಾಯ್, ರಾಮ್ ಬಿಟ್ರೆ ಉಳಿದವರಿಗೆಲ್ಲ ನಾನು ಹೊಸಬನಾಗಿದ್ದೆನು. ಆದ್ರೆ ಎಲ್ಲರೂ ನನ್ನನ್ನು ಚೆನ್ನಾಗಿ ನೋಡಿಕೊಂಡರು. ಹೀಗಾಗಿ ಒಂದು ಒಳ್ಳೆಯ ಕುಟುಂಬಕ್ಕೆ ನನ್ನನ್ನು ಪರಿಚಯಿಸಿದ್ದಕ್ಕೆ ಪ್ರಶಾಂತ್ ಸರ್ ಗೆ ಅಭಿನಂದನೆಗಳನ್ನು ವಿನಯ್ ಸಲ್ಲಿಸಿದ್ರು. ಇದನ್ನೂ ಓದಿ: ಕೆಜಿಎಫ್ ಅರೆಹುಚ್ಚ ಪಾತ್ರಧಾರಿ ಲಕ್ಷ್ಮೀಪತಿ ಇನ್ನಿಲ್ಲ!
ಗುಡ್ ನ್ಯೂಸ್:
ಮಗು ತೀರಿಕೊಂಡ ನಂತರ ಪತ್ನಿ ಎರಡನೇ ಬಾರಿ ಪ್ರೆಗ್ನೆಂಟ್ ಆದ್ರು. 9ನೇ ತಾರೀಕಿನಂದು ಒರಾಯನ್ ಮಾಲ್ ನಲ್ಲಿ ಟ್ರೇಲರ್ ರಿಲೀಸ್ ಕಾರ್ಯಕ್ರಮವಿತ್ತು. ಹೀಗಾಗಿ ನಾಳೆ ಟ್ರೇಲರ್ ರಿಲೀಸ್ ಎಂದು ರಾತ್ರಿಯೆಲ್ಲ ನಿದ್ದೇನೆ ಬರುತ್ತಿರಲಿಲ್ಲ. 9ರಂದು ಕಾರ್ಯಕ್ರಮಕ್ಕೆ ಹೊರಡಲು ರೆಡಿಯಾಗುತ್ತಿದ್ದೆ. ಈ ಸಮಯದಲ್ಲಿ ಪತ್ನಿಗೆ ಪ್ರಸವ ನೋವು ಬಂದಿದೆ. ಆದ್ರೆ ಕೆಜಿಎಫ್ ಮೂವಿ ಟ್ರೇಲರ್ ರಿಲೀಸ್ ಕಾರ್ಯಕ್ರಮವಿದೆ ಎಂದು ಆಕೆ ನನ್ನ ಬಳಿ ಹೇಳಿಕೊಂಡಿಲ್ಲ. ಹೀಗಾಗಿ ಅತ್ತೆ ಬಂದು ನನ್ನ ಬಳಿ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಹೇಳಿದ್ರು. ಆವಾಗ ನಾನು ಟ್ರೇಲರ್ ಆದ್ರೆ ಏನಂತೆ ಇನ್ನೊಂದು ದಿನ ನೋಡುವೆ ಎಂದು ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆ. ಅಚ್ಚರಿ ಹಾಗೂ ಖುಷಿಯ ವಿಚಾರವೆಂದರೆ 2.30 ಟ್ರೇಲರ್ ರಿಲೀಸ್, 3.30ಗೆ ನನಗೆ ಗಂಡು ಮಗುವಾಯಿತು. ಹೀಗಾಗಿ ಎಲ್ಲರೂ ಎರಡೂವರೆಗೆ ಟ್ರೇಲರ್, ಮೂರೂವರೆಗೆ ಮಗು ರಿಲೀಸ್ ಆಯ್ತು ಎಂದು ತಮಾಷೆ ಮಾಡಿರುವುದಾಗಿ ವಿನಯ್ ತನ್ನ ಸಂತಸ ಹಂಚಿಕೊಂಡರು.
ಸಂಬಂಧಿಕರು, ಫ್ರೆಂಡ್ಸ್ ಇದ್ದರೂ ಕೆಜಿಎಫ್ ಕುಟುಂಬದ ಬೆಂಬಲ ಪ್ರತಿ ನಿಮಿಷಕ್ಕೂ ಇಲ್ಲದಿದ್ದರೆ ಇಷ್ಟು ಬೇಗ ನಾನು ಕಳೆದುಕೊಂಡ ಮಗುವಿನ ದುಃಖದಿಂದ ರಿಕವರಿ ಆಗುತ್ತಿರಲಿಲ್ಲ ಎಂದು ವಿನಯ್, ಕೆಜಿಎಫ್ ಟೀಂ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ರಾಮಾಚಾರಿಯ ಜೀವನವನ್ನು 5 ನಿಮಿಷದಲ್ಲಿ ಬಿಚ್ಚಿಟ್ಟ ನಟ ವಿಶಾಲ್
ಒಟ್ಟಿನಲ್ಲಿ ನಾವು ಸಾಧಿಸಲು ಛಲ, ಹಠ ಜೊತೆಗೆ ಆ ವಾತಾವರಣನೂ ಬೇಕಾಗುತ್ತದೆ. ಆ ವಾತವಾರಣವನ್ನು ಕಟ್ಟಿಕೊಡೋರು ಬೇರಾರು ಅಲ್ಲ ಅದು ನಮ್ಮ ಹಿತೈಷಿಗಳು ಅಂತ ನಟ ವಶಿಷ್ಠ ಸಿಂಹ ಹೇಳಿದ್ರು.