Tag: vinay

  • ಇದುವರೆಗೂ ನಮ್ರತಾ ಕುಟುಂಬವನ್ನು ಕಾಂಟ್ಯಾಕ್ಟ್ ಮಾಡದ ಸ್ನೇಹಿತ್- ಅಸಲಿ ಕಾರಣವೇನು?

    ಇದುವರೆಗೂ ನಮ್ರತಾ ಕುಟುಂಬವನ್ನು ಕಾಂಟ್ಯಾಕ್ಟ್ ಮಾಡದ ಸ್ನೇಹಿತ್- ಅಸಲಿ ಕಾರಣವೇನು?

    ಬಿಗ್ ಬಾಸ್ ಮನೆಯ (Bigg BossKannada 10) ಆಟ ಫಿನಾಲೆಗೆ ಸಮೀಪಿಸುತ್ತಿದೆ. ದೊಡ್ಮನೆಯಲ್ಲಿ ಫ್ಯಾಮಿಲಿ ರೌಂಡ್ ಶುರುವಾಗಿದೆ. ಇದೀಗ ಮನೆಗೆ ನಮ್ರತಾ (Namratha Gowda) ತಾಯಿಯ ಆಗಮನವಾಗಿದೆ. ಮಗಳಿಗೂ ಮನೆಮಂದಿಗೂ ತಮ್ಮ ಮನೆಯ ಅಡುಗೆ ಊಟ ಬಡಿಸಿ ಸಂಭ್ರಮಿಸಿದ್ದಾರೆ. ಇದರ ನುಡವೆ ಮತ್ತೆ ಮನೆಯಲ್ಲಿ ಸ್ನೇಹಿತ್ ಕುರಿತು ಬಿಸಿ ಬಿಸಿ ಚರ್ಚೆ ನಡೆದಿದೆ.

    ‘ಬಿಗ್ ಬಾಸ್’ (Bigg Boss Kannada) ಪಾಸ್ & ಪ್ಲೇ ಎಂದು ಟಾಸ್ಕ್ ನೀಡಿದರು. ಇದನ್ನು ನೀವೆಲ್ಲರೂ ಶಿಸ್ತಿನಿಂದ ಪಾಲಿಸಬೇಕು ಅಂತ ಸ್ಪರ್ಧಿಗಳಿಗೆ ಬಿಗ್ ಬಾಸ್ ಎಚ್ಚರಿಕೆ ಕೂಡ ನೀಡಿದ್ದರು. ಅದರಂತೆ ಒಂದಷ್ಟು ಸಮಯ ಪಾಸ್, ಪ್ಲೇ ಅಂತ `ಬಿಗ್ ಬಾಸ್’ ಹೇಳಿ ಸ್ಪರ್ಧಿಗಳಿಗೆ ಸರಿಯಾಗಿ ಆಟ ಆಡಿಸಿದರು. ಈ ಟಾಸ್ಕ್ ನಿಜಕ್ಕೂ ಮನರಂಜನಾದಾಯಕವಾಗಿತ್ತು.

    ಬಿಗ್ ಬಾಸ್‌ನಲ್ಲಿದ್ದಾಗಲೇ ನಮ್ರತಾ ಹಿಂದೆ ಬಿದ್ದಿದ್ದರೂ ಸ್ನೇಹಿತ್. ಹಲವು ಪ್ರೇಮ ನಿವೇದನೆ ಮಾಡಿದ್ದರು. ಆದರೆ ನಮ್ರತಾ, ಸ್ನೇಹಿತ್ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ. ಸ್ನೇಹಿತ್ (Snehith Gowda) ಎಲಿಮಿನೇಷನ್ ನಂತರ ಮಿಸ್ಸಿಂಗ್ ಫೀಲಿಂಗ್‌ನಲ್ಲಿದ್ರೂ ನಮ್ರತಾ. ಸ್ನೇಹಿತ್ ಮೇಲೆ ನಮ್ರತಾಗೆ ಲವ್ ಆಯ್ತಾ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಿದ್ದು ಸುಳ್ಳಲ್ಲ. ಇದೀಗ ಮತ್ತೆ ಸ್ನೇಹಿತ್ ಕುರಿತು ತಾಯಿ ಬಳಿ ನಮ್ರತಾ ಮಾತನಾಡಿದ್ದಾರೆ. ಇದನ್ನೂ ಓದಿ:ಕಾರಿನಲ್ಲೇ ಶವವಾಗಿ ಪತ್ತೆಯಾದ ಆಸ್ಕರ್ ಪ್ರಶಸ್ತಿ ವಿಜೇತ ನಟ

    ಆ ವೇಳೆ ಸ್ನೇಹಿತ್ ಅವರು ನಮ್ಮನ್ನು ಕಾಂಟ್ಯಾಕ್ಟ್‌ ಮಾಡಿಲ್ಲ ಅಂತ ನಮ್ರತಾ ತಾಯಿ ಹೇಳಿದ್ದಾರೆ. ಸ್ನೇಹಿತ್‌ಗೆ ಭಯ ಆಗಿರತ್ತೆ ಅಂತ ನಮ್ರತಾ ಹೇಳಿದ್ದಾರೆ. ನಮ್ರತಾ ಗೌಡ ಮನೆಯ ಸರ್ಕಲ್‌ನಲ್ಲಿ ನಿನ್ನ ಫೋಟೋವನ್ನು ಹಾಕಿಡ್ತಾರೆ, ಬಂದ್ರೆ ಬಿಡಲ್ಲ ಅಂತ ಹೇಳಿ ಹೆದರಿಸಿದ್ದೆ ಎಂದು ವಿನಯ್ ಗೌಡ (Vinay Gowda) ಹೇಳಿದ್ದಾರೆ.

    ಈ ವೇಳೆ, ಎಪಿಸೋಡ್ ನೋಡುವಾಗ ಮಂಜುಳಾ ಅವರು ನಮ್ರತಾ ಗೌಡ ಅಳೋದನ್ನು ನೋಡಿ ಅವರ ತಂದೆ ಅಳುತ್ತಾರೆ. ನಮ್ರತಾ ಬಿಗ್ ಬಾಸ್ ಮನೆಗೆ ಬಂದ ಮೇಲೆ ನಾನು ಮಾಂಸಾಹಾರ ತಿನ್ನೋದು ಬಿಟ್ಟೆ ಅಂತ ಹೇಳಿದ್ದಾರೆ. ಬಳಿಕ ಜಗಳ ಮಾಡಬೇಡ, ಕೆಟ್ಟು ಮಾತುಗಳನ್ನ ಆಡಬೇಡ ಎಂದು ನಮ್ರತಾಗೆ ತಾಯಿ ಸಲಹೆ ನೀಡಿ ಬಂದಿದ್ದಾರೆ.

  • ಬಿಗ್ ಬಾಸ್ ಮನೆಯಲ್ಲಿ ಗಾಯಗೊಂಡ ವಿನಯ್: ವೈದ್ಯರ ಸಲಹೆ ಏನು?

    ಬಿಗ್ ಬಾಸ್ ಮನೆಯಲ್ಲಿ ಗಾಯಗೊಂಡ ವಿನಯ್: ವೈದ್ಯರ ಸಲಹೆ ಏನು?

    ಟಾಸ್ಕ್ ನಲ್ಲಿ ಗಾಯಗಳಾಗೋದು ಸಹಜ. ಎಷ್ಟೋ ಬಾರಿ ವಿಪರೀತ ಏಟು ಮಾಡಿಕೊಂಡು ಬಿಗ್ ಬಾಸ್ (Bigg Boss Kannada) ಮನೆಯಿಂದ ಆಚೆ ಬಂದವರು ಇದ್ದಾರೆ. ಈ ಸೀಸನ್ ನಲ್ಲಿ ತನಿಷಾ ಏಟು ಮಾಡಿಕೊಂಡು ಆಸ್ಪತ್ರೆ ಪಾಲಾಗಿದ್ದರು. ಹುಷಾರಾಗಿ ಮತ್ತೆ ಮನೆ ಪ್ರವೇಶ ಮಾಡಿದರು. ಮೊನ್ನೆ ಮೊನ್ನೆಯಷ್ಟೇ ಪ್ರತಾಪ್ ಮತ್ತು ಸಂಗೀತಾ ಕೂಡ ಕಣ್ಣಿಗೆ ಕೆಮಿಕಲ್ ನೀರು ಹಾಕಿಸಿಕೊಂಡು ಆಸ್ಪತ್ರೆ ಸೇರಿಕೊಂಡಿದ್ದರು. ನಿನ್ನೆ ನಡೆದ ಟಾಸ್ಕ್ ನಲ್ಲಿ ವಿನಯ್ ಮತ್ತು ಕಾರ್ತಿಕ್ ಇಬ್ಬರೂ ಗಾಯಗೊಂಡಿದ್ದಾರೆ. ಅದರಲ್ಲೂ ವಿನಯ್ ಬೆರಳಿಗೆ ಬಲವಾಗಿಯೇ ಏಟು ಬಿದ್ದಿದೆ.

    ಟಾಸ್ಕ್ ನಲ್ಲಿ ವಿನಯ್ (Vinay) ಗೌಡ ಸಿಕ್ಕಾಪಟ್ಟೆ ಅಗ್ರೆಸಿವ್ ಆಗಿ ಆಡುತ್ತಾರೆ. ಅವರನ್ನು ಕಂಟ್ರೋಲ್ ಮಾಡೋದು ತುಂಬಾ ಕಷ್ಟ. ಕುಸ್ತಿ ಪಟುವಿನಂತೆ ಸದಾ ಮುಸಿಮುಸಿ ಅನ್ನುತ್ತಲೇ ಇರುತ್ತಾರೆ. ನಿನ್ನೆ ನಡೆದ ಕಲೆ ಒಳ್ಳೆಯದಲ್ಲ ಟಾಸ್ಕ್ ನಲ್ಲೂ ಅವರು ಸಖತ್ ಅಗ್ರೆಸಿವ್ ಆಗಿಯೇ ಆಟವಾಡಿದರು. ಪರಿಣಾಮ ಬೆರಳಿಗೆ ಏಟು ಮಾಡಿಕೊಂಡರು. ಅದಕ್ಕಾಗಿ ಅವರು ಆ ಟಾಸ್ಕ್ ನಿಂದಲೇ ಹೊರ ಬರಬೇಕಾಯಿತು. ಬೆರಳಿಗೆ ತೀವ್ರ ತರಹದ ಗಾಯವಾಗಿದ್ದರಿಂದ ಟಾಸ್ಕ್ ನಲ್ಲಿ ಭಾಗಿ ಆಗದಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಟಾಸ್ಕ್ ನಲ್ಲಿ ಭಾಗಿಯಾಗಬೇಡಿ ಎಂದು ಬಿಗ್ ಬಾಸ್ ಕೂಡ ಅನೌನ್ಸ್ ಮಾಡಿದ್ದಾರೆ.

    ಅಗ್ರೆಸಿವ್ ಕಾರಣದಿಂದಾಗಿಯೇ ಈ ಹಿಂದೆಯೂ ಆಟ ರದ್ದಾದ ಉದಾಹರಣೆ ಇದೆ. ಅದು ವಿನಯ್ ಕಾರಣದಿಂದಾಗಿಯೇ ಟಾಸ್ಕ್ ರದ್ದಾಗಿದೆ.  ಹಾಗಾಗಿ ವಿನಯ್ ಆಡುವಾಗ ಪದೇ ಪದೇ ತುಕಾಲಿ ಸಂತು, ಅದನ್ನು ನೆನಪಿಸುತ್ತಲೇ ಇದ್ದರು. ತುಕಾಲಿ ಏನೇ ಹೇಳಿದರೂ, ಅವರ ಮಾತನ್ನು ಕೇಳಲಿಲ್ಲ ವಿನಯ್. ಹಾಗಾಗಿ ಬೆರಳಿಗೆ ಏಟು ಮಾಡಿಕೊಳ್ಳುವಂತಹ ಪ್ರಸಂಗ ಎದುರಾಯಿತು. ಅದರಲ್ಲೂ ವಿನಯ್, ಕಾರ್ತಿಕ್ ಮತ್ತು ಅವಿನಾಶ್ ಶೆಟ್ಟಿ ನಡುವಿನ ಗಲಾಟೆ ತಾರಕಕ್ಕೇರಿತ್ತು. ಮೂವರು ಪರಸ್ಪರ ಕಿತ್ತಾಡಿಕೊಂಡ ಪರಿಣಾಮ ಕಾರ್ತಿಕ್ ಅವರಿಗೆ ಬೆನ್ನಿಗೆ ಏಟಾಗಿದೆ. ಅವರು ಕೂಡ ಆರೈಕೆಯಲ್ಲಿದ್ದಾರೆ.

    ಟಾಸ್ಕ್ ಗೆಲ್ಲಲು ಹೋರಾಡೋದು ಸಹಜ. ಆದರೆ, ಅದನ್ನು ಜಟ್ಟಿಗಳಂತೆ ಕಿತ್ತಾಡುವುದು ಸರಿಯಾದ ಕ್ರಮವಲ್ಲ. ವಿನಯ್ ವಿಷಯದಲ್ಲಿ ಟಾಸ್ಕ್ ಅಂದರೆ, ಅದೊಂದು ಕುಸ್ತಿ ಪಂದ್ಯವೇ. ಜಗಳಕ್ಕೆ ಅವರು ಯಾವತ್ತಿಗೂ ಮುಂದು. ಒಟ್ಟಾರೆ ಪರಿಣಾಮ ಗಾಯ ಮಾಡಿಕೊಳ್ಳೋದು. ವಿನಯ್ ಗಾಯ ಮಾಡಿಕೊಂಡಿದ್ದಾರೆ. ಟಾಸ್ಕ್ ನಲ್ಲಿ ಭಾಗಿ ಆಗಬಾರದು ಎಂದು ವೈದ್ಯರು (Doctor) ಸಲಹೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ವಿನಯ್, ಹೇಗೆ ಇರಲಿದ್ದಾರೆ ಎನ್ನುವ ಕುತೂಹಲ ಎಲ್ಲರದ್ದು.

  • ಬಿಗ್ ಬಾಸ್ ಮನೆಯಲ್ಲಿ ಗಲಾಟೆ: ಮತ್ತೋರ್ವ ಸ್ಪರ್ಧಿ ಆಸ್ಪತ್ರೆಗೆ ದಾಖಲು

    ಬಿಗ್ ಬಾಸ್ ಮನೆಯಲ್ಲಿ ಗಲಾಟೆ: ಮತ್ತೋರ್ವ ಸ್ಪರ್ಧಿ ಆಸ್ಪತ್ರೆಗೆ ದಾಖಲು

    ಬಿಗ್ ಬಾಸ್ (Bigg Boss Kannada) ಮನೆಯ ಬಣ್ಣದ ಟಾಸ್ಕ್ ಅನಾಹುತಕ್ಕೆ ದಾರಿ ಮಾಡಿಕೊಟ್ಟಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ವಿನಯ್ ಮತ್ತು ಅವಿನಾಶ್ ಶೆಟ್ಟಿ (Avinash Shetty) ಜಗಳ ತಾರಕಕ್ಕೇರಿದ್ದು, ಇದರ ಮುಂದುವರಿಕೆಯಾಗಿ ವಿನಯ್ (Vinay) ಬೆರಳು ಮುರಿದುಕೊಂಡಿದ್ದಾರೆ. ಕಾರ್ತಿಕ್ ಮತ್ತು ಅವಿನಾಶ್ ನಡುವೆ ನಡೆದ ಕಾಳಗದಲ್ಲಿ ಕಾರ್ತಿಕ್ (Karthik) ಏಟು ಮಾಡಿಕೊಂಡು ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ ಎನ್ನಲಾಗುತ್ತಿದೆ. ಬಣ್ಣದ ಟಾಸ್ಕ್‌ನಲ್ಲಿ ಎರಡೂ ತಂಡಗಳ ನಡುವೆ ಮಾರಾಮಾರಿಯೇ ನಡೆದಿದೆ ಎನ್ನುವುದು ಹರಿದಾಡುತ್ತಿರುವ ಸುದ್ದಿ.

    ತನಿಷಾ ಮತ್ತು ಸಂಗೀತಾ ಇಬ್ಬರ ತಂಡಗಳ ಸದಸ್ಯರನ್ನು ನೋಡಿದಾಗ ಗ್ಯಾರಂಟಿ ಜಗಳ ಆಗುತ್ತದೆ ಎಂದು ಅಂದಾಜಿಸಲಾಗಿತ್ತು. ತನಿಷಾ ಕಡೆ ಸ್ಟ್ರಾಂಗ್ ಕಂಟೆಸ್ಟೆಂಟ್ ಇದ್ದಾರೆ. ಸಂಗೀತಾ ಅವರ ಟೀಮ್‌ನಲ್ಲಿ ಇರೋದು ಅಷ್ಟೇನೂ ಬಲಿಷ್ಠರಲ್ಲದ ಪಡೆ. ಹೀಗಾಗಿ ಕಾರ್ತಿಕ್ ಮತ್ತು ವಿನಯ್ ಗೆಲ್ಲುವುದಕ್ಕಾಗಿ ಏನು ಬೇಕಾದರೋ ಮಾಡೋಕೆ ರೆಡಿ ಎನ್ನೋದು ಗೊತ್ತಿರೋ ವಿಚಾರ. ಇವತ್ತು ಟಾಸ್ಕ್‌ನಲ್ಲಿ ಅದೇ ಆಗಿದೆ. ಹಾಗಾಗಿ ವಿನಯ್ ಮತ್ತು ಕಾರ್ತಿಕ್ ಇಬ್ಬರೂ ಏಟು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಬಣ್ಣ ಮತ್ತು ಬಟ್ಟೆ ಟಾಸ್ಕ್‌ನಲ್ಲಿ ಬೆಳ್ಳಂಬೆಳಗ್ಗೆ ಗುದ್ದಾಟ ನಡೆದಿತ್ತು. ಅದರ ಪ್ರೊಮೋ ಕೂಡ ರಿಲೀಸ್ ಆಗಿತ್ತು. ಕಾರ್ತಿಕ್, ವಿನಯ್ ಮತ್ತು ಅವಿನಾಶ್ ನಡುವೆ ಭಾರೀ ಪೈಪೋಟಿಯೇ ಏರ್ಪಟ್ಟಿತ್ತು. ಒಬ್ಬರ ಮೇಲೆ ಒಬ್ಬರು ಬಿದ್ದು ಆಟ ಆಡುತ್ತಿದ್ದರು. ವಿನಯ್ ತುಂಬಾನೇ ಅಗ್ರೆಸಿವ್‌ ಆಗಿ ಆಟ ಆಡುತ್ತಿದ್ದರು. ಅವಿನಾಶ್ ಮೇಲೆ ಮುಗಿಬಿದ್ದಿದ್ದರು. ವಿನಯ್ ನಡೆ ಸ್ವತಃ ಅವರ ಟೀಮ್‌ಗೆ ಇಷ್ಟವಾಗಿರಲಿಲ್ಲ. ವಿನಯ್ ಆಡಿದ ಆಟ ಮತ್ತು ಅದಕ್ಕೆ ಕಾರ್ತಿಕ್ ನೀಡಿದ್ದ ಸಾಥ್ ಅನಾಹುತಕ್ಕೆ ಕಾರಣವಾಗಿದೆಯಂತೆ.

    ಬಲ್ಲ ಮೂಲಗಳ ಪ್ರಕಾರ ಕಾರ್ತಿಕ್ ಆಸ್ಪತ್ರೆ ಸೇರಿದ್ದಾರೆ. ವಿನಯ್ ಅವರ ಬೆರಳು ಮೂಳೆ ಮುರಿತವಾಗಿದೆ. ಅವಿನಾಶ್ ಕೂಡ ಏಟು ಮಾಡಿಕೊಂಡಿದ್ದಾರೆ. ಟಾಸ್ಕ್ ನಲ್ಲಿ ಇದೆಲ್ಲವೂ ಕಾಮನ್ ಆದರೂ, ಇವತ್ತು ಮತ್ತು ಈ ಹಿಂದೆ ಗಂಧರ್ವರು ಹಾಗೂ ರಾಕ್ಷಸರ ನಡುವಿನ ಟಾಸ್ಕ್ ಇಂಥದ್ದೇ ಜಗಳಕ್ಕೆ ಕಾರಣವಾಗಿತ್ತು. ಅವತ್ತು ಕೂಡ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಆಸ್ಪತ್ರೆ ಪಾಲಾಗಿದ್ದರು. ಈಗ ಕಾರ್ತಿಕ್ ಸರದಿಯಾಗಿದೆ. ಆದರೆ, ಈ ಕುರಿತು ವಾಹಿನಿಯಾಗಲಿ ಅಥವಾ ಸಂಬಂಧಿಸಿದವರಾಗಲಿ ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ. ಯಾವುದು ನಿಜ, ಯಾವುದು ಸುಳ್ಳು ಎನ್ನುವುದು ಇಂದು ರಾತ್ರಿ ಗೊತ್ತಾಗಲಿದೆ.

  • ದುಡುಕಿದ ‘ಚಾರ್ಲಿ’ ನಟಿ- ಮತ್ತೆ ಸ್ಪರ್ಧಿಗಳ ಕೆಂಗಣ್ಣಿಗೆ ಸಂಗೀತಾ ಗುರಿ

    ದುಡುಕಿದ ‘ಚಾರ್ಲಿ’ ನಟಿ- ಮತ್ತೆ ಸ್ಪರ್ಧಿಗಳ ಕೆಂಗಣ್ಣಿಗೆ ಸಂಗೀತಾ ಗುರಿ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಇದೀಗ ಸಂಗೀತಾ ಶೃಂಗೇರಿ (Sangeetha Sringeri) ಅವರು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದಕ್ಕೆ ಕಾರಣ, ಸಂಗೀತಾ ಅವರು ಮಾಡಿರುವ ಯಡವಟ್ಟು. ಇಡೀ ಮನೆಗೆ ದಿನಸಿ ಪಡೆಯಲು ಬಿಗ್ ಬಾಸ್ ಟಾಸ್ಕ್‌ವೊಂದನ್ನ ನೀಡಿದ್ದರು. ಅದರಲ್ಲಿ ಸಂಗೀತಾ ದುಡುಕಿದ್ದಾರೆ. ಇದರಿಂದ ಮನೆಮಂದಿಯೆಲ್ಲಾ ಉಪವಾಸ ಬೀಳುವ ಪರಿಸ್ಥಿತಿ ಎದುರಾಗಿದೆ.

    ವೀಕೆಂಡ್ ಎಪಿಸೋಡ್‌ನಲ್ಲಿ ಸುದೀಪ್ (Sudeep) ಮನೆಯ ದಿನಸಿಗಳನ್ನು ಗಳಿಸುವ ಚಟುವಟಿಕೆಯ ಬಗ್ಗೆ ಹಲವು ಕಿವಿಮಾತುಗಳನ್ನು ಹೇಳಿದ್ದರು. ಹಿಂದಿನ ಹಲವು ವಾರಗಳಲ್ಲಿ ತಪ್ಪು ಲೆಕ್ಕಾಚಾರದಿಂದ, ಸಿಲ್ಲಿ ತಪ್ಪುಗಳಿಂದ ದಿನಸಿಗಳನ್ನು ಕಳೆದುಕೊಳ್ಳುತ್ತಿರುವುದರ ಬಗ್ಗೆ ಸೂಕ್ಷ್ಮವಾಗಿ ಎಚ್ಚರಿಸಿದ್ದರು. ಅಷ್ಟೇ ಅಲ್ಲ, ಅದನ್ನು ಹೇಗೆ ನಿರ್ವಹಿಸಬೇಕು ಎಂಬ ಟಿಪ್ಸ್ ಕೂಡ ಕೊಟ್ಟಿದ್ದರು. ಇದನ್ನೂ ಓದಿ:ಪಡ್ಡೆಹುಡುಗರ ಎದೆಬಡಿತ ಹೆಚ್ಚಿಸಿದ ತೃಪ್ತಿ ದಿಮ್ರಿ ನಯಾ ಫೋಟೋಶೂಟ್

    ಆಗ ಯಾರಿಗೂ ಸುದೀಪ್ ಯಾಕೆ ಇದನ್ನು ಹೇಳುತ್ತಿದ್ದಾರೆ ಎಂದು ಅರ್ಥವಾಗಿರಲಿಲ್ಲ. ಅವರ ಮಾತಿನ ಅರ್ಥ ಈಗ ಅಂದರೆ, ವಾರದ ಮೊದಲ ದಿನ ಅರ್ಥವಾಗಿದೆ. ಅದೂ ಕಾಲಮಿಂಚಿ ಹೋದಮೇಲೆ.. ಹಾಗಾದರೆ ಆಗಿದ್ದೇನು? ಬಿಗ್‌ಬಾಸ್ ದಿನಸಿ ಪಡೆದುಕೊಳ್ಳುವ ಕುರಿತು ಒಂದು ಟಾಸ್ಕ್ ನೀಡಿದ್ದಾರೆ. ನಾಲ್ಕು ಸ್ಪರ್ಧಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಝರ್ ಎದುರು ನಿಂತುಕೊಂಡಿದ್ದಾರೆ. ಬಿಗ್‌ಬಾಸ್ ಮನೆಗೆ ಬೇಕಾದ ದಿನಸಿಗಳನ್ನು ಮತ್ತು ಅವುಗಳ ಪ್ರಮಾಣವನ್ನು ಹೇಳುತ್ತ ಹೋಗುತ್ತಾರೆ. ಆಗ ಬೇಕಾದ ದಿನಸಿಗಳ ಹೆಸರು-ಪ್ರಮಾಣ ಬಂದಾಗ ಬಝರ್ ಒತ್ತಬೇಕು.

    ಈ ಟಾಸ್ಕ್ ಮೂಲಕ ಲಾಜಿಕ್ ಗೊತ್ತಾಗದೆ ಸದಸ್ಯರು ಯಡವಟ್ಟು ಮಾಡಿಕೊಂಡಿರುವಂತಿದೆ. ಪ್ರಮಾಣ ನೋಡಿಕೊಂಡು ಬಝರ್ ಒತ್ತುವಲ್ಲಿ ಎಡವಿರುವ ಸಂಗೀತಾ ಅಕ್ಕಿ ಐದು ಕೆಜಿ ಎಂದು ಬಿಗ್‌ಬಾಸ್ (Bigg Boss) ಘೋಷಿಸಿದ ತಕ್ಷಣ ಬಝರ್ ಒತ್ತಿಬಿಟ್ಟಿದ್ದಾರೆ. ಇದರಿಂದ ಇಡೀ ಮನೆ ಐದು ಕೆಜಿ ಅಕ್ಕಿಯಲ್ಲಿ ವಾರ ಕಳೆಯಬೇಕಾಗಿದೆ. ಜೊತೆಗೆ ಎಂಟು ಕೆಜಿ ಗೋದಿಹಿಟ್ಟು ಸಿಕ್ಕಿದೆ. ಉಳಿದ ಹಲವು ದಿನಸಿಗಳು ಒಂದು ಎರಡು ಕೆಜಿಗಳಷ್ಟೇ ದೊರಕಿವೆ.

    ಇಲ್ಲಿ ಎಲ್ಲರೂ ಅಹಂಕಾರದಿಂದಲೇ ಸಾಯ್ತಾರೆ. ಮನೆಗೆ ದಿನಸಿ ಬೇಕು ಎಂದು ಹೇಳಿ ಕಳುಹಿಸಿದ್ದೀನಿ ಎಂದು ಸಿಡಿದಿದ್ದಾರೆ ವಿನಯ್. ಈ ವೇಳೆ ತುಕಾಲಿ ಸಂತೋಷ್, ಹೊಟ್ಟೆ ಹಸಿವು ಕಂಟ್ರೋಲ್ ಮಾಡಿಕೊಂಡು ಬಿಡೋಣ ಎಂದು ಅಸಮಾಧಾನ ಹೊರಹಾಕಿದ್ದಾರೆ. ಹಸಿವಿನಿಂದಲೇ ಎಲ್ಲ ಗಲಾಟೆಗಳೂ ಶುರುವಾಗುವುದು ಎಂಬ ಕಿಚ್ಚನ ಮಾತಿಗೆ ವಾರದ ಮೊದಲ ದಿನವೇ ಪುರಾವೆ ಸಿಕ್ಕಿದೆ. ಇಡೀ ವಾರ ಇದೀಗ ಸಿಕ್ಕಿರೋ ಕಡಿಮೆ ದಿನಸಿಗಳಲ್ಲಿ ಬಿಗ್‌ಬಾಸ್ ಮನೆಯವರು ಹೇಗೆ ಕಳೆಯುತ್ತಾರೆ? ಇದಕ್ಕೆ ಏನು ಪರಿಹಾರ ಕಂಡುಕೊಳ್ಳುತ್ತಾರೆ? ಅಥವಾ ಬಿಗ್‌ಬಾಸ್ ಅವರ ಸಹಾಯಕ್ಕೆ ಬರುತ್ತಾರಾ? ಕಾಯಬೇಕಿದೆ.

  • ಮನುಷ್ಯರಾ ಇವರು- ವಿನಯ್‌ ಟೀಮ್‌ ವಿರುದ್ಧ ಗುಡುಗಿದ ಡ್ರೋನ್

    ಮನುಷ್ಯರಾ ಇವರು- ವಿನಯ್‌ ಟೀಮ್‌ ವಿರುದ್ಧ ಗುಡುಗಿದ ಡ್ರೋನ್

    ದೊಡ್ಮನೆಗೆ ಸಂಗೀತಾ, ಡ್ರೋನ್ ಪ್ರತಾಪ್ (Drone Prathap) ಎಂಟ್ರಿ ಕೊಟ್ಟು, ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಕಣ್ಣಿಗೆ ಆಗಿರುವ ಪೆಟ್ಟಿನಿಂದ ಚೇತರಿಕೊಳ್ತಿದ್ದಾರೆ. ಮಾನವೀಯತೆ ಇಲ್ಲದೇ ರಾಕ್ಷಸರಂತೆ ಆಟ ಆಡಿದ ವಿನಯ್ ಟೀಮ್ ಬಗ್ಗೆ ಡ್ರೋನ್ ಅಸಮಾಧಾನ ಹೊರ ಹಾಕಿದ್ದಾರೆ. ನೀವೆಲ್ಲಾ ಮನುಷ್ಯರಾ? ಸಂಗೀತಾ (Sangeetha Sringeri) ಏನು ಕೊಲೆ ಮಾಡಿ ಬಂದಿದ್ದಾರಾ? ಎಂದು ವರ್ತೂರು ಸಂತೋಷ್‌ಗೆ (Varthur Santhosh) ಪ್ರತಾಪ್ ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ.

    ಮಾನವೀಯತೆ ಮರೆಯು ವಿನಯ್, ನಮ್ರತಾ ಟೀಮ್ ರಾಕ್ಷಸರಾದಾಗ ಟಾಸ್ಕ್ವೊಂದು ಬಂದಾಗ ಆರಂಭದಿಂದಲೇ ನೀರಿನಲ್ಲಿ ಸೋಪು ಪುಡಿ ಸುರಿದು, ಸಂಗೀತಾ ತಲೆ ಮೇಲೂ ಸೋಪು ಪುಡಿ ಹಾಕಿ. ಉಸಿರಾಡದಂತೆ ನೀರನ್ನ ಜೋರಾಗಿ ಎರಚಿದ್ದರು. ಇದನ್ನೂ ಓದಿ:‘ಸಲಾರ್’ ಸಿನಿಮಾಗೆ ಐದೂ ಭಾಷೆಗಳಿಗೂ ತಾವೇ ಡಬ್ ಮಾಡಿದ ಪೃಥ್ವಿರಾಜ್

    ಹೆಚ್ಚು ನೀರು ಎರಚಿಸಿಕೊಂಡಿದ್ರಿಂದ ಸಿಟ್ಟಿನಲ್ಲಿ ಪವಿ (Pavi Povappa) ಹಾಗೂ ವರ್ತೂರು ಸಂತೋಷ್ ಸೇಡು ತೀರಿಸಿಕೊಂಡರು. ಆದರೆ, ವಿನಯ್ ಹಾಗೂ ನಮ್ರತಾ ಚೇರ್ ಮೇಲೆ ಕೂತು ನೀರು ಎರಚಿಸಿಕೊಳ್ಳಲಿಲ್ಲ. ಅಂದ್ಮೇಲೆ, ಇವರಿಬ್ಬರಿಗೆ ಯಾಕೆ ಸಂಗೀತಾ ಮೇಲೆ ಅಷ್ಟೋಂದು ಸಿಟ್ಟು ಇತ್ತು. ಸಂಗೀತಾ ಮೇಲೆ ಟಾರ್ಗೆಟ್ ಮಾಡಿ ಆಟವಾಡಿದ್ದಾರೆ ಎಂದು ವೀಕ್ಷಕರು ಕೂಡ ಕಿಡಿಕಾರಿದ್ದಾರೆ. ಮಾಡಿದ್ದ ತಪ್ಪಿನ ಅರಿವಿಗೆ ಬಂದಿದ್ರೂ ಕೂಡ ತೆಪ್ಪಗೆ ಇರುವ ವಿನಯ್ ಟೀಮ್ ವಿರುದ್ಧ ಪ್ರತಾಪ್ ಸಿಡಿದೆದ್ದಾರೆ. ಸಂಗೀತಾ, ಪ್ರತಾಪ್ ಪರ ನಿಂತು ವಿನಯ್ ಟೀಮ್‌ಗೆ ಕ್ಯಾಕರಿಸಿ ಉಗಿದಿದ್ದಾರೆ.

    ಇದನ್ನೆಲ್ಲಾ ಡ್ರೋನ್ ಪ್ರತಾಪ್ ಕೂಡ ಗಮನಿಸಿದ್ದು, ನೀವೆಲ್ಲಾ ಮನುಷ್ಯರಾ? ಸಂಗೀತಾ ಏನು ಕೊಲೆ ಮಾಡಿ ಬಂದಿದ್ದಾರಾ? ಎಂದು ವರ್ತೂರು ಸಂತೋಷ್‌ಗೆ (Varthur Santhosh) ಕಟುವಾಗಿ ಪ್ರಶ್ನೆ ಮಾಡಿದ್ದಾರೆ. ಇಷ್ಟೇಲ್ಲಾ ಆದರೂ ವಿನಯ್, ನಮ್ರತಾ, ಮೈಕಲ್ ಮಾನವೀಯತೆಗೂ ಹೇಗಿದ್ದೀರಾ ಎಂದು ಕೇಳಲಿಲ್ಲ. ಸೌಜನ್ಯ ಆರೋಗ್ಯದ ಬಗ್ಗೆ ವಿಚಾರಿಸಲಿಲ್ಲ.

    ಅಸಲಿಗೆ, ಯಾರ ಮೇಲೂ ಡ್ರೋನ್ ಪ್ರತಾಪ್ ಕ್ರೂರವಾಗಿ ನೀರು ಎರಚಿರಲಿಲ್ಲ. ಸೊಪ್ಪಿನ ಹುಳ ಅಂತ್ಹೇಳಿ ವರ್ತೂರು ಸಂತೋಷ್‌ರನ್ನ ಡ್ರೋನ್ ಪ್ರತಾಪ್ ಹೆದರಿಸಿದ್ದರು. ಚಿಲ್ಲಿ ವಾಟರ್ ಅಂತ್ಹೇಳಿ ಸೊಪ್ಪಿನ ರಸ ತಂದಿದ್ದರು. ಆದರೂ, ಡ್ರೋನ್ ಪ್ರತಾಪ್ ಮೇಲೂ ಸೋಪಿನ ನೀರನ್ನ ದಾಳಿ ಮಾಡಿದರು. ಒಟ್ನಲ್ಲಿ ಯಾರದ್ದೋ ಸಿಟ್ಟಿಗೆ, ಯಾರದ್ದೋ ವೈಯಕ್ತಿಕ ದ್ವೇಷಕ್ಕೆ, ಯಾರೋ ಸೇಡು ತೀರಿಸಿಕೊಳ್ಳುವ ಸಲುವಾಗಿ ಇನ್ಯಾರೋ ಏಟು ತಿದ್ದರು.

  • ವಿನಯ್ ಭವಿಷ್ಯದಂತೆ ಬಿಗ್ ಬಾಸ್ ಗೆಲ್ಲೋರು ಯಾರು?

    ವಿನಯ್ ಭವಿಷ್ಯದಂತೆ ಬಿಗ್ ಬಾಸ್ ಗೆಲ್ಲೋರು ಯಾರು?

    ದೊಡ್ಮನೆಯಲ್ಲಿ ಮತ್ತೆ ವಿನಯ್ ಗುಡುಗಿದ್ದಾರೆ. ಬಲು ಆತ್ಮ ವಿಶ್ವಾಸದಿಂದ ಅವರು ಮಾತನಾಡಿದ್ದಾರೆ. ಬಳೆ ಪ್ರಕರಣದ ನಂತರ ವಿನಯ್ (Vinay) ತಣ್ಣಗಾಗುತ್ತಾರೆ ಎಂದು ನಂಬಲಾಗಿತ್ತು. ಆ ರೀತಿಯಲ್ಲಿ ಸುದೀಪ್ ಝಾಡಿಸಿದ್ದರು. ಕಿಚ್ಚನ ಮಾತಿಗೆ ಕ್ಯಾರೆ ಎನ್ನದೇ ಮತ್ತೆ ತಮ್ಮ ಫಾರ್ಮಗೆ ಮರಳಿದ್ದಾರೆ ವಿನಯ್. ಹಾಗಾಗಿ ಈ ವಾರ ದೊಡ್ಮನೆಯಲ್ಲಿ ವಿನಯ್ ಆರ್ಭಟ ಜೋರಾಗಿತ್ತು. ಜೊತೆಗೆ ಅವರ ಟೀಮ್ ನಲ್ಲೇ ಕಿತ್ತಾಟ ಕೂಡ ನಡೆದಿತ್ತು. ಏನೇ ಆದರೂ, ತಲೆ ಕೆಡಿಸಿಕೊಳ್ಳದೇ ಈ ಬಾರಿ ಬಿಗ್ ಬಾಸ್ ಟೈಟಲ್ ಗೆಲ್ಲೋದು (Win) ನಾನೇ ಎಂದು ಘೋಷಿಸಿಕೊಂಡಿದ್ದಾರೆ.

    ಬಿಗ್ ಬಾಸ್ (Bigg Boss Kannada) ಮುಗಿಯೋಕೆ ಇನ್ನೂ ಅರ್ಧ ಜರ್ನಿ ಬಾಕಿ ಇದೆ. ಯಾರು ಮನೆಯಲ್ಲಿ ಉಳಿಯುತ್ತಾರೋ, ಇಲ್ಲವೋ ಒಂದೂ ಗೊತ್ತಿಲ್ಲ. ವಾರದಿಂದ ವಾರಕ್ಕೆ ಅಚ್ಚರಿ ಕಂಟೆಸ್ಟೆಂಟ್ ಗಳು ಎಲಿಮಿನೇಟ್ ಆಗುತ್ತಿದ್ದಾರೆ. ಇದಾವುದನ್ನೂ ಲೆಕ್ಕಿಸದೇ ವಿನಯ್, ಧೈರ್ಯವಾಗಿ ತಾವೇ ಗೆಲುವಿನ ಕುದುರೆ ಎಂದು ಹೇಳಿಕೊಂಡಿದ್ದಾರೆ. ವಿನಯ್ ಮಾತಿಗೆ ಮತ್ತೋರ್ವ ಸ್ಪರ್ಧಿ ಸ್ನೇಹಿತ್ ಕೂಡ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಹಾಗಾಗಿ ಆನೆಗೆ ಮತ್ತಷ್ಟು ಬಲ ಬಂದಿದೆ. ತಾನು ನಡೆದದ್ದೇ ಹಾದಿ ಎಂದು ಹೇಳಿಕೊಂಡಿದೆ.

    ಬಿಗ್ ಬಾಸ್ ಮನೆಯಲ್ಲಿ ನಮ್ರತಾ, ಸ್ನೇಹಿತ್ ಮತ್ತು ವಿನಯ್ ಅವರದ್ದು ಒಂದು ಗುಂಪು. ಈ ಮೂವರು ಒಬ್ಬರನ್ನೊಬ್ಬರು ಬಿಟ್ಟು ಕೊಡದೇ ಆಟವಾಡುತ್ತಾ ಬಂದಿದ್ದಾರೆ. ಒಬ್ಬರಿಗೊಬ್ಬರು ಸಪೋರ್ಟ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕೊನೆವರೆಗೂ ನಾವು ಮೂವರೇ ಇರಬೇಕು ಎಂದು ಮಾತನಾಡಿಕೊಂಡಿದ್ದಾರೆ. ಆದರೆ, ಈ ವಾರ ನಮ್ರತಾ ಅವರು ವಿನಯ್ ಗೆ ಸಖತ್ ಠಕ್ಕರ್ ಕೊಟ್ಟಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ವಿನಯ್ ವಿರುದ್ಧ ಮತ ಚಲಾಯಿಸಿದ್ದಾರೆ. ಹಾಗಾಗಿ ಈ ಗುಂಪಿನಿಂದ ಹೊರ ನಡೆದಿದ್ದಾರೆ.

    ನಮ್ರತಾ ಗುಂಪಿನಿಂದ ಹೊರ ಹೋಗುತ್ತಿದ್ದಂತೆಯೇ ಸ್ನೇಹಿತ್ ಮತ್ತು ವಿನಯ್ ಬಿಗ್ ಬಾಸ್ ಗೆಲುವಿನ ಬಗ್ಗೆ ಮಾತನಾಡಿಕೊಂಡಿದ್ದಾರೆ. ಈ ಬಾರಿ ಫಿನಾಲೆ ವೇದಿಕೆಯ ಮೇಲೆ ನಾವೇ ಇರಬೇಕು ಅಂತಾರೆ ಸ್ನೇಹಿತ್. ನಾವೇ ಇರಬೇಕು. ಆದರೆ, ನಾನೇ ವಿನ್ ಆಗಬೇಕು ಎಂದು ವಿನಯ್ ನುಡಿಯುತ್ತಾರೆ. ಅದಕ್ಕೆ ಸ್ನೇಹಿತ್ ಖುಷಿಯಿಂದಲೇ, ನಿಜಕ್ಕೂ ಇದಕ್ಕಿಂತ ಸಂತೋಷ ಏನಿದೆ ಎನ್ನುತ್ತಾರೆ. ಈ ಮಾತು ಕೇಳಿಸಿಕೊಂಡ ಬಿಗ್ ಬಾಸ್ ನೋಡುಗರು, ನಮ್ರತಾಗಿಂತಾನೂ ಸ್ನೇಹಿತ್ ಸಖತ್ ಚಮಚಾ ಎಂದು ಕಾಮೆಂಟ್ ಮಾಡಿದ್ದಾರೆ.

    ಸದ್ಯ ವಿನಯ್ ತಮ್ಮನ್ನು ತಾವು ಗೆಲುವಿನ ಕುದುರೆ ಅಂದುಕೊಂಡಿದ್ದಾರೆ. ನಿಜವಾಗಿಯೂ ಅವರು ಕನಸು ಈಡೇರತ್ತಾ? ಅಥವಾ ಅರ್ಧಕ್ಕೆ ವಾಪಸ್ಸು ಬರ್ತಾರಾ? ಎಂದು ಕಾದು ನೋಡಬೇಕು.

  • ಬಿಗ್ ಬಾಸ್ ಕನ್ನಡ: ಗುದ್ದಾಡಿಕೊಂಡ ಸ್ನೇಹಿತ್-ತುಕಾಲಿ

    ಬಿಗ್ ಬಾಸ್ ಕನ್ನಡ: ಗುದ್ದಾಡಿಕೊಂಡ ಸ್ನೇಹಿತ್-ತುಕಾಲಿ

    ಬಿಗ್‌ಬಾಸ್ (Bigg Boss Kannada) ಮನೆಯೊಳಗೆ ಇಬ್ಬರು ಹೊಸ ಕಂಟೆಸ್ಟೆಂಟ್‌ಗಳು ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟಿದ್ದಾರೆ. ಅವರು ಮನೆಯೊಳಗಿನ ಸದಸ್ಯರ ಮನಸ್ಥಿತಿಯನ್ನು ಅರಿವು ಮಾಡಿಕೊಳ್ಳುತ್ತಿರುವಾಗಲೇ ಬಿಗ್‌ಬಾಸ್‌ ಟಾಸ್ಕ್‌ ಕೊಟ್ಟಿದ್ದಾರೆ.

    ಸ್ವಿಮಿಂಗ್ ಫೂಲ್‌ನಲ್ಲಿರುವ ನೀರನ್ನು ಬಕೆಟ್‌ನಲ್ಲಿ ತೆಗೆದುಕೊಂಡು ಕೊಳವೆಯ ಒಳಗೆ ಎಸೆಯಬೇಕು. ಎದುರಾಳಿ ತಂಡದವರು ಅವರ ಗುರಿ ತಪ್ಪುವಂತೆ ಅವರನ್ನು ತಡೆಯಬೇಕು. ಇದು ಟಾಸ್ಕ್‌. ಆದರೆ ಈ ನೀರಾಟದ ಟಾಸ್ಕ್‌. ನೀರಿನಾಟದಲ್ಲಿ ಕಿಡಿಹೊತ್ತಿಕೊಂಡಿರುವುದು JioCinemaಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಬಹಿರಂಗಗೊಂಡಿದೆ.

    ನೀರಿನ ಆಟ ಆಡುತ್ತಾಡುತ್ತ ಹೋರಾಟವನ್ನೇ ಶುರುಮಾಡಿದ್ದಾರೆ ಮನೆಯ ಸದಸ್ಯರು. ತುಕಾಲಿ ಸಂತೋಷ್ (Tukali Santu) ಅವರನ್ನು ಸ್ನೇಹಿತ್‌ ತಮ್ಮ ಗುರಾಣಿಯಿಂದ ನೂಕಿದ್ದಾರೆ. ವಿನಯ್ (Vinay) ಅವರಂತೂ ಸಂತೋಷ್ ಅವರನ್ನು ಬೀಳಿಸಿಯೇ ಬಿಟ್ಟಿದ್ದಾರೆ. ಮತ್ತೊಂದು ದೃಶ್ಯದಲ್ಲಿ ಸ್ನೇಹಿತ್ ಮತ್ತು ತುಕಾಲಿ ಪರಸ್ಪರ ಡಿಕ್ಕಿ ಹೊಡೆದು ಬಿದ್ದೇ ಬಿಟ್ಟಿದ್ದಾರೆ.

     

    ಕೊನೆಗೆ ತುಕಾಲಿ ಅವರು, ‘ಬೇಕಂತ್ಲೇ ಮಾಡ್ತಿದ್ದಾರೆ. ನಾನು ಆಟ ಆಡಲ್ಲ ಎಂದು ಹೊರಟುಹೋಗಿದ್ದಾರೆ. ವಿನಯ್‌, ‘ಸತ್ಯವಾಗ್ಲೂ ಬೇಕಂತ ಮಾಡಿಲ್ಲ’ ಎಂದರೂ ಅವರು ಕೇಳಿಲ್ಲ. ವಿನಯ್ ಮತ್ತು ತುಕಾಲಿ ನಡುವೆ ಹೊತ್ತಿಕೊಂಡ ಕಿಡಿ ಏರುತ್ತಲೇ ಹೋಗಿದೆ. ನೀರಿನಾಟದ ಈ ಟಾಸ್ಕ್ ನಲ್ಲಿ ಕೊನೆಗೂ ಗೆದ್ದವರು ಯಾರು? ಸೋತವರು ಯಾರು? ಇಂದು ರಾತ್ರಿ ಗೊತ್ತಾಗಲಿದೆ.

  • ‘ಬಿಗ್ ಬಾಸ್’ ಮನೆಯಲ್ಲಿ ಕಾರ್ತಿಕ್, ವಿನಯ್ ನಡುವೆ ಗುದ್ದಾಟ

    ‘ಬಿಗ್ ಬಾಸ್’ ಮನೆಯಲ್ಲಿ ಕಾರ್ತಿಕ್, ವಿನಯ್ ನಡುವೆ ಗುದ್ದಾಟ

    ಬಾರೋ ಅಂದ್ರೆ ಬರದೆ ಇರ್ತೀವಾ ನಾವು?’ ‘ಇದು ನಿಮ್ಮ ಆಟ… ನಿಮ್ಮನ್…’ ‘ಏನೋ ನಿಮ್ಮನ್… ಹೇಳೋ… ಮುಂದಕ್ಕೆ ಹೇಳೋ…’ ‘ಅಗ್ರೆಸಿವ್ ಆಗಿ ಆಡ್ಬೇಕಾ? ಡರ್ಟಿ ಗೇಮ್ ನಾನ್ ತೋರಿಸ್ತೀನಿ’ ಬಿಗ್‌ಬಾಸ್ (Bigg Boss Kannada) ಮನೆಯಲ್ಲಿ ಮಾತುಗಳ ಚಕಮಕಿ ತಾರಕಕ್ಕೇರಿದೆ. ಮಾತಿನ ಜೊತೆಗೆ ಕೈ ಕೈ ಮಿಲಾಯಿಸುವ, ಎದುರಾಬದಿರು ನಿಂತು ಕೆಣಕುವ ಪ್ರಸಂಗಗಳೂ ನಡೆದಿವೆ.

    ವಿನಯ್‌ (Vinay) ಮತ್ತು ಕಾರ್ತಿಕ್ (Karthik) ಮಧ್ಯೆ ಮತ್ತೆ ಬೆಂಕಿ ಹೊತ್ತಿಕೊಂಡಿದೆ. JioCinema ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಈ ಬೆಂಕಿಯ ಕಿಡಿಗಳು ಸಿಡಿಯುತ್ತಿರುವುದು ಜಾಹೀರಾಗಿದೆ. ಬಿಗ್‌ಬಾಸ್ ಮನೆಯ ಸದಸ್ಯರಿಗೆ ‘ಮಣ್ಣಿನಲ್ಲಿ ಬಣ್ಣದ ಹೂಗಳನ್ನು ನೆಟ್ಟು, ಎದುರಾಳಿ ತಂಡದಿಂದ ಅವುಗಳನ್ನು ಕಾಪಾಡಿಕೊಳ್ಳಬೇಕು’ ಎಂಬ ಟಾಸ್ಕ್ ನೀಡಲಾಗಿದೆ. ಹೂವಿನಿಂದ ಶುರುವಾದ ಈ ಆಟ ಸ್ವಲ್ಪವೇ ಹೊತ್ತಿನಲ್ಲಿ ಜಿದ್ದಾಜಿದ್ದಿಯ ಬೆಂಕಿಯಾಗಿ ಬೆಳೆದಿದೆ.

    ಒಂದು ತಂಡದ ಹೂವನ್ನು ಇನ್ನೊಂದು ತಂಡ ಕಿತ್ತುಕೊಳ್ಳಲು ಹಾಳುಗೆಡವಲು ಯತ್ನಿಸಿದ್ದು ಮಾತಿನ ಚಕಮಕಿಗೆ ಕಾರಣವಾಗಿದೆ. ಒಬ್ಬರು ಇನ್ನೊಬ್ಬರನ್ನು ಎಳದಾಡಿ, ಜಗಳವಾಡಿಕೊಳ್ಳುವವರೆಗೂ ಮುಟ್ಟಿದೆ. ತುಕಾಲಿ ಸಂತೋಷ್, ಪ್ರತಾಪ್ ಅವರನ್ನು  ನೆಲಕ್ಕುರುಳಿಸಿ ಹೂ ಹಾಳು ಮಾಡಿದ್ದಾರೆ. ಕಾರ್ತಿಕ್ ಎದುರಾಳಿ ತಂಡದ ಹೂಬುಟ್ಟಿಯನ್ನು ಹೊತ್ತೊಯ್ದಿದ್ದಾರೆ. ಅವರನ್ನು ಹಿಂಬಾಲಿಸಿದ ವಿನಯ್ ಅವರನ್ನು ಜಗ್ಗಾಡಿದ್ದಾರೆ. ಮೈಕಲ್ ಹೂಬುಟ್ಟಿ ಗಟ್ಟಿಯಾಗಿ ಹಿಡಿದುಕೊಂಡರೆ ಉಳಿದವರೆಲ್ಲ ಅವರ ಮೇಲೆ ಬಿದ್ದಿದ್ದಾರೆ.

     

    ಕಳೆದ ಒಂದೆರಡು ವಾರಗಳಲ್ಲಿ ಸೈಲೆಂಟ್ ಆಗಿದ್ದ ವಿನಯ್ ಈ ವಾರ ಸಖತ್ ಅಗ್ರೆಸಿವ್ ಆಗಿದ್ದಾರೆ. ಅದರ ಪರಿಣಾಮ ಈ ಗೇಮ್‌ನಲ್ಲಿ ಸ್ಪಷ್ಟವಾಗಿಯೇ ಕಾಣಿಸಿಕೊಳ್ಳುತ್ತಿದೆ.

  • ಸುನಿ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್: ಶೂಟಿಂಗ್ ಮುಗಿಸಿದ ಟೀಮ್

    ಸುನಿ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್: ಶೂಟಿಂಗ್ ಮುಗಿಸಿದ ಟೀಮ್

    ನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಛಾಪೂ ಮೂಡಿಸಿರುವ ಸಿಂಪಲ್ ಸುನಿ ಹಾಗೂ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಬರ್ತಿರುವ ಬಹುನಿರೀಕ್ಷಿತ ಸಿನಿಮಾ ಒಂದು ಸರಳ ಪ್ರೇಮ ಕಥೆ. ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಶೂಟಿಂಗ್ (Shooting) ಕಂಪ್ಲೀಟ್ ಆಗಿದೆ. ಮೈಸೂರಿನಲ್ಲಿ ಕೊನೆಯ ಹಂತದ ಚಿತ್ರೀಕರಣ ಮುಗಿಸಿ ಚಿತ್ರತಂಡ ಕುಂಬಳಕಾಯಿ ಹೊಡೆದಿದೆ. ವಿಶೇಷ ಅಂದರೆ ವಿನಯ್ ಸಿನಿಮಾದಲ್ಲಿ ಅಪ್ಪ ರಾಘಣ್ಣ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರೀಕರಣ ಮುಗಿಸಿ ಮಾಧ್ಯಮದವರೊಂದಿಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

    ನಿರ್ದೇಶಕ ಸುನಿ (Simple Suni) ಮಾತನಾಡಿ, ಟೈಟಲ್ ಹೇಳುವಂತೆ ಇದೊಂದು ಸರಳ ಪ್ರೇಮಕಥೆ. ಸಂಗೀತ ನಿರ್ದೇಶಕನ ಪ್ರೇಮಕಥೆಯಾಗಿರುವುದರಿಂದ ಸಂಗೀತಮಯ ಜರ್ನಿ. ಅಂದರೆ ನಮ್ಮ ಆಲ್ಬಂ ತೆಗೆದುಕೊಂಡು ಹಾಕಿಕೊಂಡರೆ ಮೈಸೂರಿನಿಂದ ಬೆಂಗಳೂರು ತಲುಪುತ್ತೀರಾ. ಒಟ್ಟು ಸಿನಿಮಾದಲ್ಲಿ 11 ಸಾಂಗ್ ಗಳು ಇವೆ. ಎಲ್ಲಾ ಪ್ರಕಾರದ ಸಂಗೀತಗಳು ಹಾಡಿನಲ್ಲಿದೆ. ಖುಷಿ ವಿಷಯ ಏನಂದರೆ ಮೊದಲ ದಿನ ವಿನಯ್ ಸರ್ ಚಿತ್ರೀಕರಣ ಮಾಡಿದೆ. ಕೊನೆಯ ದಿನ ರಾಘಣ್ಣ ಅವರು ಚಿತ್ರೀಕರಣ ಮಾಡಿದ್ದೇನೆ. ದೊಡ್ಮನೆ ಕುಟುಂಬದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ಒಟ್ಟು 83 ದಿನ ಶೂಟ್ ನಡೆಸಿದ್ದೇವೆ. ಮುಂಬೈ, ರಾಜಸ್ತಾನ, ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು.

    ರಾಘಣ್ಣ (Raghavendra Rajkumar) ಮಾತನಾಡಿ, ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಸಿನಿಮಾ ನೋಡಿದ್ಮೇಲಿನಿಂದ ಸುನಿ ಅವರ ಸಿನಿಮಾಗಳಲ್ಲಿ ನಟಿಸಬೇಕು ಎನಿಸಿತ್ತು. ನನ್ನ ಮಗ ನಟಿಸುತ್ತಿದ್ದೇನೆ ಎಂದಾಗ ದೊಡ್ಡ ವಿಷಯ ಎನಿಸಿತು. ನನಗೆ ಟೈಟಲ್ ತುಂಬಾ ಇಷ್ಟವಾಯಿತು. ಸಂಗೀತ ಅಂದರೆ ಏಳು ಸ್ವರಗಳು ಇರುತ್ತವೆ. ನನ್ನ ಒಂದು ಸ್ವರವಾಗಿ ಸೇರಿಸಿಕೊಂಡಿದ್ದಾರೆ. ಅದು ನನಗೆ ಸಂತೋಷ ಕೊಡುತ್ತದೆ. ಕುಂಬಳಕಾಯಿ ಒಡೆದಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಚೆನ್ನಾಗಿ ಆಗಲಿ. ಸಿನಿಮಾ ನಿಮ್ಮ ಮುಂದೆ ಬರಲಿ. ನಿಮ್ಮ ಬೆಂಬಲ ಇರಲಿದೆ ಎಂದರು.

    ನಟ ವಿನಯ್ ರಾಜ್ ಕುಮಾರ್ (Vinay) ಮಾತನಾಡಿ, ಒಂದು ಸರಳ ಪ್ರೇಮಕಥೆ. ಈ ಸಿನಿಮಾದಲ್ಲಿ ನಟಿಸಿದ ಅನುಭವ ತುಂಬಾ ಚೆನ್ನಾಗಿತ್ತು. ಶೂಟಿಂಗ್ ಗೆ ಯಾವುದೇ ತೊಂದರೆ ಆಗದಂತೆ ನಿರ್ಮಾಪಕರಾದ ರಮೇಶ್ ಅವರು ಮಾಡಿಕೊಟ್ಟರು. ಸುನಿ ಅವರ ಜೊತೆ ಕೆಲಸ ಮಾಡಲು ಖುಷಿ ಕೊಡ್ತು. ಸುನಿ ಅವರಂತೂ ಒಬ್ಬ ಕಲಾವಿದನಿಗೆ ನಟಿಸಲು ತುಂಬ ಕಂಫರ್ಟ್ ಫೀಲ್ ಕೊಡ್ತಾರೆ. ಆಕ್ಟಿಂಗ್ ಮಾಡಲು ಟ್ರೈ ಮಾಡುವುದು ಬೇಡ. ಅದು ತಾನಾಗಿಯೇ ಬರುತ್ತದೆ. ಇಡೀ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಎಲ್ಲಾ ಕಲಾವಿದರ ಅದ್ಭುತವಾಗಿ ನಟಿಸಿದ್ದಾರೆ ಎಂದರು.

    ಸಂಗೀತ ನಿರ್ದೇಶಕ ವೀರ್ ಸಮರ್ಥ್ ಮಾತನಾಡಿ, ನನ್ನ ಸಿನಿಮಾ ಕರಿಯರ್ ನ ಅತ್ಯಂತ ಉತ್ಕೃಷ್ಟ ಮ್ಯೂಸಿಕ್ ಸಂಗೀತ ಸಿನಿಮಾ ಒಂದು ಸರಳ ಪ್ರೇಮ ಕಥೆ. ನನ್ನ ಎರಡನೇ ಸಿನಿಮಾದಲ್ಲಿ 10 ಹಾಡುಗಳಿದ್ದವು. ತುಂಬ ದೊಡ್ಡ ಹೆಸರು ತಂದುಕೊಟ್ಟಿತ್ತು. ಆ ನಂತರ ಯೋಗರಾಜ್ ಭಟ್ ಅವರ ಪ್ರೊಡಕ್ಷನ್ ನಲ್ಲಿ ದೇವ್ರೇ ಅಂತಾ ಮಾಡಿದ್ದೆ. ಅದು ಒಳ್ಳೆ ಹೆಸರು ತಂದುಕೊಟ್ಟಿತ್ತು. ಈಗ ಆ ಎರಡು ಸಿನಿಮಾಗಳನ್ನು ಈ ಚಿತ್ರ ಮೀರಿಸುತ್ತದೆ ಅನಿಸುತ್ತಿದೆ. ಯಾಕೆಂದರೆ ಈ ಸಿನಿಮಾದಲ್ಲಿ 11 ಹಾಡುಗಳಿವೆ. ಸಿನಿಮಾದ ನಡುವೆ ಚಿಕ್ಕ ಚಿಕ್ಕ ಬೀಟ್ ಬರುತ್ತದೆ. 2 ಗಂಟೆ 20 ನಿಮಿಷ ಸಿನಿಮಾದಲ್ಲಿ ಮ್ಯೂಸಿಕ್ ಜೊತೆ ಕನೆಕ್ಟ್ ಆಗುತ್ತದೆ ಎಂದರು.

    ನಿರ್ಮಾಪಕರಾದ ಮೈಸೂರು ರಮೇಶ್ ಮಾತನಾಡಿ, ನಾನು ಪುಣ್ಯವಂತ. ಕನ್ನಡ ಚಿತ್ರರಂಗದಲ್ಲಿ ಯಾರೇ ಏನೇ ಮಾಡಬೇಕು ಎಂದರೆ ದೊಡ್ಮನೆ ಆಶೀರ್ವಾದ ಬೇಕು. ನನ್ನ ಸಿನಿಮಾದಲ್ಲಿ ರಾಘಣ್ಣ ಹಾಗೂ ವಿನಯ್ ಅವರು ನಟಿಸಿರುವುದು ಖುಷಿ ಕೊಟ್ಟಿದೆ. ಈ ಸಿನಿಮಾವನ್ನು ತುಂಬಾ ಪ್ರೀತಿಯಿಂದ ಮಾಡಿದ್ದೇನೆ ಎಂದರು. ಸ್ವಾತಿಷ್ಠ ಕೃಷ್ಣನ್, ರಾಧಾ ಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಎಂಬ ಇಬ್ಬರು ಚೆಲುವೆಯರ ವಿನಯ್ ರಾಜ್ಕುಮಾರ್ ಗೆ ಜೋಡಿಯಾಗಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆದಿ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ನೀಡುತ್ತಿದ್ದು, ಕಾರ್ತಿಕ್ ಕ್ಯಾಮೆರಾ ಹಿಡಿದಿದ್ದಾರೆ.