Tag: Vinay Rajkumar

  • ತಂದೆ ಆರಾಮಾಗಿದ್ದಾರೆ, ಯಾರೂ ಆತಂಕ ಪಡಬೇಡಿ: ವಿನಯ್ ರಾಜ್‍ಕುಮಾರ್

    ತಂದೆ ಆರಾಮಾಗಿದ್ದಾರೆ, ಯಾರೂ ಆತಂಕ ಪಡಬೇಡಿ: ವಿನಯ್ ರಾಜ್‍ಕುಮಾರ್

    ಬೆಂಗಳೂರು: ತಂದೆ ಆರಾಮಾಗಿದ್ದಾರೆ. ಶೂಟಿಂಗ್ ಇತ್ತು ವೇಳೆ ಸುಸ್ತಾಗಿತ್ತು. ಅದಕ್ಕೆ ಆಡ್ಮಿಟ್ ಮಾಡಿದ್ದಾರೆ ಅಷ್ಟೇ ಎಂದು ನಟ ರಾಘವೇಂದ್ರ ರಾಜ್ ಕುಮಾರ್ ಮಗ ವಿನಯ್ ರಾಜ್ ಕುಮಾರ್ ಹೇಳಿದ್ದಾರೆ.

    ಇಂದು ಸಂಜೆ ರಾಘಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್, ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸ್ವಲ್ಪ ಸುಸ್ತಾದರು. ಹೀಗಾಗಿ ಚೆಕಪ್‍ಗೆ ಅಂತ ಆಸ್ಪತ್ರೆಗೆ ಬಂದಿದ್ದಾರೆ. ಇದು ರೇಗುಲರ್ ಚೆಕ್ ಅಪ್ ತರಾನೇ ಆಗಿದ್ದು, ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ತಂದೆಯ ಆರೋಗ್ಯದ ಬಗ್ಗೆ ತಿಳಿಸಿದ್ದಾರೆ. ಅಲ್ಲದೆ ನಾಳೆವರೆಗೂ ಅಬ್ಸರ್ವೇಷನಲ್ಲಿ ಇದ್ದು ಬೆಳಗ್ಗೆ ಡಿಸ್ಚಾರ್ಜ್ ಆಗ್ತಾರೆ ಎಂದು ವಿನಯ್ ಸ್ಪಷ್ಟಪಡಿಸಿದ್ದಾರೆ.

    ರಾಘಣ್ಣ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಇಂದು ಸಂಜೆ 6 ಗಂಟೆಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದು, ನಾಳೆ ಬೆಳಗ್ಗೆ ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿವೆ. ಸದ್ಯ ರಾಘಣ್ಣನ ಜೊತೆ ನಟ ಪುನೀತ್ ಆಸ್ಪತ್ರೆಯಲ್ಲಿದ್ದಾರೆ.

    ಇಂದು ಸಿನಿಮಾ ಶೂಟಿಂಗ್ ವೇಳೆ ಸುಸ್ತಾಗಿದ್ದ ರಾಘವೇಂದ್ರ ರಾಜ್‍ಕುಮಾರ್, ನಿನ್ನೆಯಷ್ಟೇ ಹೊಸ ಸಿನಿಮಾ ‘ಬೆಳಕು’ ವಿನ ಮುಹೂರ್ತ ಆಗಿತ್ತು. ಈ ಸಂಬಂಧ ಇಂದು ನಟ ಸುದ್ದಿಗೋಷ್ಟಿ ನಡೆಸಿದ್ದರು. ಅಲ್ಲದೆ ಮೊನ್ನೆಯಷ್ಟೇ ದಾವಣಗೆರೆಗೆ ತೆರಳಿ ಪೊಗರು ಆಡಿಯೋ ಲಾಂಚ್ ನಲ್ಲಿ ಭಾಗಿಯಾಗಿದ್ದರು.

    ಆಸ್ಪತ್ರೆಗೆ ಆಗಮಿಸಿದ ರಾಘವೇಂದ್ರ ರಾಜಕುಮಾರ್ ಅಕ್ಕ ಲಕ್ಷ್ಮಿ, ಬಾವ ಗೋವಿಂದ್ ಆಗಮಿಸಿ ರಾಘಣ್ಣನ ಆರೋಗ್ಯ ವಿಚಾರಿಸಿದ್ದಾರೆ.

  • 3 ಸಿನಿಮಾ ನಂತ್ರ ಬಿಗ್ ಹಿಟ್‍ಗಾಗಿ ಚಿಕ್ಕಮಗಳೂರಿನಲ್ಲಿ ವಿನಯ್ ರಾಜ್‍ಕುಮಾರ್ ಸೆಟ್ಲ್!

    3 ಸಿನಿಮಾ ನಂತ್ರ ಬಿಗ್ ಹಿಟ್‍ಗಾಗಿ ಚಿಕ್ಕಮಗಳೂರಿನಲ್ಲಿ ವಿನಯ್ ರಾಜ್‍ಕುಮಾರ್ ಸೆಟ್ಲ್!

    ಚಿಕ್ಕಮಗಳೂರು: ಮೂರು ಸಿನಿಮಾಗಳಲ್ಲಿ ನಟಿಸಿ ಒಂದು ಬಿಗ್ ಹಿಟ್‍ಗಾಗಿ ಕಾಯುತ್ತಿರುವ ಡಾ. ರಾಜ್‍ಕುಮಾರ್ ಅವರ ಕುಟುಂಬದ ಕುಡಿ, ರಾಘವೇಂದ್ರ ರಾಜ್ ಕುಮಾರ್ ಮಗ ವಿನಯ್ ರಾಜ್‍ಕುಮಾರ್ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸೆಟ್ಲ್ ಆಗಿದ್ದಾರೆ.

    ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣ ಚಿತ್ರಕ್ಕಾಗಿ ಚಿಕ್ಕಮಗಳೂರಿನಲ್ಲಿ ಲೋಕೇಶನ್ ಹುಡುಕಿದ್ದು, ಇನ್ನೊಂದು ವಾರದಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಚಿಕ್ಕಮಗಳೂರು, ಕಡೂರು ಸುತ್ತಮುತ್ತ ಹತ್ತಾರು ಲೋಕೇಶನ್ ಫೈನಲ್ ಮಾಡಿಡುವ ಚಿತ್ರತಂಡ ಇದೇ 23ರಿಂದ ಕಡೂರು ತಾಲೂಕಿನ ದೇವನೂರಿನಿಂದ ಚಿತ್ರೀಕರಣವನ್ನ ಸ್ಟಾರ್ಟ್ ಮಾಡಲಿದೆ.

    ಈ ಚಿತ್ರ ಸಂಪೂರ್ಣ ಹಳ್ಳಿ ಸೊಗಡಿನ ಚಿತ್ರವಾಗಿದ್ದು, ಆಧುನಿಕ ಜಗತ್ತಿನ ಯುವಜನತೆಗೆ ಹಳ್ಳಿಗಳೆಂದರೆ ಇರುವ ಭಾವನೆಯೇ ಚಿತ್ರದ ಒಲ್ ಲೈನ್ ಸ್ಟೋರಿ. ತಮಿಳಿನಲ್ಲಿ ಎರಡು ಚಿತ್ರಗಳಲ್ಲಿ ನಟಿಸಿರುವ ಅಮೃತ ನಟ ವಿನಯ್‍ಗೆ ನಾಯಕಿಯಾಗಿದ್ದಾರೆ.

    ಹುಡುಗರು ಎಲ್ಲಾ ಕೆಲಸವನ್ನು ಮಾಡ್ತಾರೆ, ನಾನ್ಯಾಕೆ ಮಾಡೋದಕ್ಕೆ ಆಗೋದಿಲ್ಲ, ನಾನು ಮಾಡಬಲ್ಲೇ ಎನ್ನುವುದು ನಾಯಕಿ ಅಮೃತಾ ಅವರ ಪಾತ್ರವಾಗಿದೆ. ಈ ಚಿತ್ರದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಗಳಾಗಿ ಸ್ಥಳಿಯರನ್ನೇ ಬಳಸಿಕೊಳ್ಳಲು ಚಿತ್ರತಂಡ ಮುಂದಾಗಿದೆ. ಏಕೆಂದರೆ ಸ್ಥಳಿಯರಿಗೆ ಹಳ್ಳಿ ಸೊಗಡಿನ ಜೀವನ ಶೈಲಿ, ಕಷ್ಟ-ಕಾರ್ಪಣ್ಯಗಳ ಅರಿವಿರುತ್ತೆಂದು ಸ್ಥಳಿಯರನ್ನೇ ಬಳಸಿಕೊಳ್ಳಲು ಚಿತ್ರತಂಡ ಯೋಚಿಸಿದೆ. ಅಷ್ಟೇ ಅಲ್ಲದೇ ಗ್ರಾಮಸ್ಥರು ಕೂಡ ಚಿತ್ರತಂಡಕ್ಕೆ ಬೇಕಾದ ಸೌಲಭ್ಯ, ಹಬ್ಬದ ವಾತಾವರಣ ನಿರ್ಮಾಣ ಸೇರಿದಂತೆ ಚಿತ್ರಕ್ಕೆ ಬೇಕಾದ ಪೂರಕ ವ್ಯವಸ್ಥೆ ಕಲ್ಪಿಸಿಕೊಡೋ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜಣ್ಣನ ಸಮಾಧಿ ಮುಂದೆ ಚಂದನ್ ಶೆಟ್ಟಿ ಜೀವನಕ್ಕೆ ಸಿಕ್ತು ತಿರುವು

    ರಾಜಣ್ಣನ ಸಮಾಧಿ ಮುಂದೆ ಚಂದನ್ ಶೆಟ್ಟಿ ಜೀವನಕ್ಕೆ ಸಿಕ್ತು ತಿರುವು

    ಬೆಂಗಳೂರು: ಬಿಗ್‍ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರು ತಮ್ಮ ಜೀವನದಲ್ಲಿ ತಿರುವು ಸಿಕ್ಕ ಬಗ್ಗೆ ಹೇಳಿಕೊಂಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕನ್ನಡ ಕೋಗಿಲೆ’ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಅವರು ತಮ್ಮ ಜೀವನದಲ್ಲಿ ನಡೆದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಾರದ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ನಟ ರಾಘವೇಂದ್ರ ರಾಜ್‍ಕುಮಾರ್ ಮತ್ತು ಅವರ ಪುತ್ರ ವಿನಯ್ ರಾಜ್ ಕುಮಾರ್ ಆಗಮಿಸಿದ್ದರು. ಈ ವೇಳೆ ತಮ್ಮ ಹಿಂದಿನ ಜೀವನದಲ್ಲಿ ತಿರುವು ಸಿಕ್ಕ ಬಗ್ಗೆ ನೆನೆದು ಮಾತನಾಡಿದ್ದಾರೆ.

    ಚಂದನ್ ಹೇಳಿದ್ದೇನು?
    ಇಂದಿಗೂ ನಾನು ರಾಜಣ್ಣ ಅವರ ಸಮಾಧಿ ಮುಂದೆ ಹೋಗುವಾಗ ಗಾಡಿ ನಿಲ್ಲಿಸಿ ನಮಸ್ಕಾರ ಮಾಡಿ ಮುಂದೆ ಹೋಗುತ್ತೇನೆ. ಅವರಲ್ಲಿ ಅಷ್ಟು ಶಕ್ತಿ ಇದೆ ಎಂದು ನಾನು ನಂಬುತ್ತೇನೆ. ಇಲ್ಲವಾದರೆ ಇಷ್ಟೊಂದು ಎನರ್ಜಿ ನಮಗೆಲ್ಲಾ ತುಂಬಲು ಸಾಧ್ಯನೇ ಇಲ್ಲ. ಆದ್ದರಿಂದ ಅವರಲ್ಲಿ ಅಪಾರವಾದ ಎನರ್ಜಿ ಇದೆ ಎಂದು ಹೇಳಿದ್ರು.

    ಒಂದು ದಿನ ನಾನು ಗೊರಗುಂಟೆಪಾಳ್ಯದಲ್ಲಿ ಹೆಬ್ಬಾಳಕ್ಕೆ ಹೋಗಲು ಬಸ್ಸಿಗೆ ಕಾಯುತ್ತಿದ್ದೆ. ಆಗ ಬಸ್ ಬರಲು ತಡವಾಗುತ್ತಿತ್ತು. ಈ ಸಂದರ್ಭದಲ್ಲಿ ಮೊದಲ ಬಾರಿಗೆ ನಾನು ಅಣ್ಣರವರ ಸಮಾಧಿ ಬಳಿ ಹೋಗಿದ್ದೆ. ಸಮಾಧಿ ಬಳಿ ಹೋಗುತ್ತಿದ್ದಂತೆ ಅಳು ಬಂತು, ನಂತರ ಇಷ್ಟು ದೊಡ್ಡ ಬೆಂಗಳೂರಿನಲ್ಲಿ ನನಗೆ ಒಂದು ಕೆಲಸ ಕೊಡಿಸಿ ಎಂದು ಕೇಳಿಕೊಂಡು ಮನೆಗೆ ಬಂದೆ.

    ಅದಾದ ಎರಡು ದಿನದಲ್ಲಿ ನನಗೆ ಪವರ್ ಸ್ಟಾರ್ ಸಿನಿಮಾಗೆ ಲಿರಿಕ್ಸ್ ಬರೆಯುತ್ತೀರಾ ಅಂತ ಒಂದು ಕರೆ ಬಂತು. ಕೊನೆಗೆ ಲಿರಿಕ್ಸ್ ಬರೆದು ಹಾಡನ್ನು ಹಾಡಿದೆ. ಇದು ನನ್ನ ಜೀವನದಲ್ಲಿ ಆದ ಮಿರಾಕಲ್ ಎಂದು ಚಂದನ್ ಬಿಚ್ಚಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೊಡ್ಮನೆಯ ಕುಡಿ ನಟ ವಿನಯ್ ರಾಜ್‍ಕುಮಾರ್‍ಗೆ ಇಂದು ಹುಟ್ಟು ಹಬ್ಬದ ಸಂಭ್ರಮ

    ದೊಡ್ಮನೆಯ ಕುಡಿ ನಟ ವಿನಯ್ ರಾಜ್‍ಕುಮಾರ್‍ಗೆ ಇಂದು ಹುಟ್ಟು ಹಬ್ಬದ ಸಂಭ್ರಮ

    ಬೆಂಗಳೂರು: ರಾಜ್ ಕುಟುಂಬದ ಕುಡಿ ವಿನಯ್ ರಾಜ್‍ಕುಮಾರ್ ಅವರಿಗೆ 28ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ತಂದೆ ರಾಘವೇಂದ್ರ ರಾಜ್‍ಕುಮಾರ್, ತಾಯಿ ಹಾಗೂ ಅಭಿಮಾನಿಗಳೊಂದಿಗೆ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡರು.

    ಇಂದು ಬೆಳಗ್ಗೆ ಕುಟುಂಬ ಸಮೇತರಾಗಿ ಬಂದ ವಿನಯ್ ರಾಜ್‍ಕುಮಾರ್ ಡಾ. ರಾಜ್ ಕುಮಾರ್ ಅವರ ಸಮಾಧಿಗೆ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ತಂದೆ-ತಾಯಿಯ ಆಶೀರ್ವಾದವನ್ನು ಪಡೆದಿದ್ದೇನೆ. ನನಗೆ ದೇವರು ಅಂದ್ರೆ ನಮ್ಮ ತಾತ. ನಾವುಗಳು ಸಿನಿಮಾ ರಂಗಕ್ಕೆ ಬರುವುದಕ್ಕೆ ಅವರೇ ಕಾರಣ. ಇವಾಗ ಎರಡು ಸಿನಿಮಾಗಳು ತೆರೆಕಂಡಿವೆ. ಈ ವರ್ಷ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಅವುಗಳ ಹೆಸರು ಇನ್ನು ಫೈನಲ್ ಆಗಿಲ್ಲ. ನಮ್ಮ ತಾತನ ಕಾಲದಿಂದಲೂ ಅಭಿಮಾನಿಗಳು ಇಲ್ಲಿಗೆ ಬರ್ತಾರೆ. ಅವರ ಪ್ರೀತಿ ಅಭಿಮಾನಕ್ಕೆ ಧನ್ಯವಾದ ಎಂದು ವಿನಯ್ ರಾಜ್‍ಕುಮಾರ್ ಹೇಳಿದರು.

    ಸಿದ್ದಾರ್ಥ ಸಿನಿಮಾ ಮೂಲಕ ಸ್ಯಾಂಡಲ್‍ವುಡ್ ಅಂಗಳಕ್ಕೆ ಕಾಲಿಟ್ಟಿರುವ ದೊಡ್ಮನೆಯ ಕುಡಿ ವಿನಯ್ ರಾಜ್‍ಕುಮರ್ ಅತ್ಯಂತ ಸಂತೋಷದೊಂದಿಗೆ ತಮ್ಮ ಹುಟುಹಬ್ಬವನ್ನು ಆಚರಿಸಿಕೊಂಡರು.