Tag: Vinay Kumar Sorake

  • ನಾಲ್ಕು ಸ್ಥಾನ ಕಳೆದುಕೊಳ್ಳುವ ಮೂಲಕ ಜೆಡಿಎಸ್ ರಾಜ್ಯದಲ್ಲಿ ಮುಕ್ತವಾಗುತ್ತೆ: ವಿನಯ್‌ಕುಮಾರ್ ಸೊರಕೆ

    ನಾಲ್ಕು ಸ್ಥಾನ ಕಳೆದುಕೊಳ್ಳುವ ಮೂಲಕ ಜೆಡಿಎಸ್ ರಾಜ್ಯದಲ್ಲಿ ಮುಕ್ತವಾಗುತ್ತೆ: ವಿನಯ್‌ಕುಮಾರ್ ಸೊರಕೆ

    ರಾಯಚೂರು: ಬಿಜೆಪಿ (BJP) ಮತ್ತು ಜೆಡಿಎಸ್ (JDS) ಮೈತ್ರಿಕೂಟದ ಮೂಲಕ ಯಾರನ್ನು ಮುಕ್ತ ಮಾಡುತ್ತಾರೋ ಗೊತ್ತಿಲ್ಲ. ಜೆಡಿಎಸ್ ಅಭ್ಯರ್ಥಿಗಳು ಮೂರು ಕಡೆಯೂ ಸೋಲುತ್ತಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯ್‌ಕುಮಾರ್ ಸೊರಕೆ (Vinay Kumar Sorake) ಹೇಳಿದ್ದಾರೆ.

    ರಾಯಚೂರಿನಲ್ಲಿ (Raichur) ಮಾತನಾಡಿದ ಅವರು, ಹಾಸನ, ಮಂಡ್ಯ, ಕೋಲಾರ ಅಭ್ಯರ್ಥಿ ಗೆಲ್ಲೋದು ಕಷ್ಟ. ದೇವೇಗೌಡರ ಅಳಿಯ ಬಿಜೆಪಿಯಲ್ಲಿ ನಿಂತಿದ್ದಾರೆ. ನಾಲ್ಕು ಸ್ಥಾನ ಕಳೆದುಕೊಳ್ಳುವ ಮೂಲಕ ಜೆಡಿಎಸ್ ಮುಕ್ತವಾಗುತ್ತೆ. ಆಗ ಕುಮಾರಸ್ವಾಮಿ ಜೆಡಿಎಸ್‌ಗೆ ಕೊನೆಮೊಳೆ ಹೊಡೆಯುತ್ತಾರೆ. ಜೆಡಿಎಸ್, ಬಿಜೆಪಿ ಜೊತೆ ವಿಲೀನ ಆಗೋ ಲಕ್ಷಣ ಕಾಣುತ್ತಿವೆ ಎಂದರು. ಇದನ್ನೂ ಓದಿ: ವಿದ್ಯುತ್ ಕಂಬಕ್ಕೆ ಕ್ರೂಸರ್ ಡಿಕ್ಕಿ – ಮೂವರು ದುರ್ಮರಣ

    ಪ್ರಜ್ವಲ್ ರೇವಣ್ಣನನ್ನು (Prajwal Revanna) ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ ಎಂಬ ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರೇ ವಿಡಿಯೋ ಕೊಟ್ಟಿದ್ದು ಎಂಬ ಮಾಹಿತಿ ನಮಗೆ ಬಂದಿದೆ. ಚಾಲಕನಿಗೆ ಯಾರಾದ್ರೂ ವಿಡಿಯೋ ಕೊಟ್ಟಿರಬೇಕಲ್ಲಾ, ಕುಮಾರಸ್ವಾಮಿ ಕೊಟ್ಟಿದ್ದಾರೆ ಅನ್ನೋ ಮಾಹಿತಿ ಬಂದಿದೆ ಎಂದು ಹೇಳಿದರು. ಇದನ್ನೂ ಓದಿ: ಮಾಸ್ ರೇಪಿಸ್ಟ್ ಪರ ಪ್ರಧಾನಿ ಮತ ಯಾಚಿಸಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ: ರಾಹುಲ್ ಗಾಂಧಿ

    ಹತ್ತು ವರ್ಷದಲ್ಲಿ ಮೋದಿ ಅವರ ಸಾಧನೆ ಏನು? ಸಂತೆಯಲ್ಲಿ ಜಾನುವಾರುಗಳನ್ನು ಖರೀದಿ ಮಾಡೋ ರೀತಿ ಶಾಸಕರನ್ನ ಖರೀದಿ ಮಾಡುತ್ತಿದ್ದಾರೆ. ಗೋವಾ, ಮಹಾರಾಷ್ಟ್ರದಲ್ಲಿ ಆಯಿತು. ಐಟಿ, ಇಡಿ, ಸಿಬಿಐ ಮೂಲಕ ವಿರೋಧ ಪಕ್ಷಗಳನ್ನು ಧಮನ ಮಾಡುತ್ತಿದ್ದಾರೆ. ಹತ್ತು ವರ್ಷದಲ್ಲಿ ಸುಮಾರು 400 ಶಾಸಕರನ್ನ ಖರೀದಿ ಮಾಡಿದ್ದಾರೆ. ಚುನಾವಣೆ ವೇಳೆ ಎರಡೆರಡು ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕಿದರು ಎಂದು ಕಿಡಿಕಾರಿದರು. ಇದನ್ನೂ ಓದಿ: ಜರ್ಮನಿಯಿಂದ ದುಬೈಗೆ ಬಂದಿಳಿದ ಪ್ರಜ್ವಲ್‌ ರೇವಣ್ಣ

    ಬಿಜೆಪಿ ಆಡಳಿತದಲ್ಲಿ ಬಡತನ, ಬೆಲೆ ಏರಿಕೆ, ನಿರುದ್ಯೋಗ ಕಾಣುತ್ತಿವೆ. ನೋಟು ಬ್ಯಾನ್, ಜಿಎಸ್‌ಟಿ ಮೂಲಕ ಅನಾನುಕೂಲ ಆಯಿತೇ ಹೊರತು ಪ್ರಯೋಜನವಾಗಿಲ್ಲ. ನೀರಾವರಿ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ರಾಜ್ಯಕ್ಕೆ ಬರ ಪರಿಹಾರವನ್ನು ಸರಿಯಾಗಿ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರಜ್ವಲ್ ಮೊಬೈಲ್‍ನಿಂದ ವೀಡಿಯೋ ಲೀಕ್ ಆಗಿದ್ದೇ ರೋಚಕ!

  • ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದಿದ್ದು ಬೆಂಕಿ ಹಚ್ಚಲು: ಸೊರಕೆ

    ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದಿದ್ದು ಬೆಂಕಿ ಹಚ್ಚಲು: ಸೊರಕೆ

    ಮಡಿಕೇರಿ: ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದಿದ್ದು ಬೆಂಕಿ ಹಚ್ಚಲು ಎಂದು ಕೆಪಿಸಿಸಿ ಉಪಾಧ್ಯಕ್ಷ ವಿನಯ್ ಕುಮಾರ್ ಟೀಕಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಗೆ ಅಗತ್ಯದ ಮತ ಇಲ್ಲ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಕಂಡರೆ ಬಿಜೆಪಿಗೆ ಭಯ. ಅದಕ್ಕೆ ಇಡಿ ಬಿಟ್ಟು ಕಾಂಗ್ರೆಸ್ಸನ್ನು ಭಯಪಡಿಸಲು ಯತ್ನಿಸುತ್ತಿದೆ. ಅದಕ್ಕೆಲ್ಲಾ ಕಾಂಗ್ರೆಸ್ ತಲೆಕೆಡಿಸಿಕೊಳ್ಳುವುದಿಲ್ಲ, ಹೆದರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅಗ್ನಿಪಥ್ ಜಾರಿಯಿಂದ ದೇಶದ ಸೈನಿಕರ ಆತ್ಮಸ್ಥೈರ್ಯ ಕುಗ್ಗುತ್ತೆ: ಧೃವನಾರಾಯಣ್

    ವಿದೇಶಗಳ ಜೊತೆಗಿನ ಭಾರತದ ಸಂಬಂಧ ಹಾಳಾಗಿ ಹೋಗಿದೆ. ಅಗ್ನಿಪಥ್ ಯೋಜನೆ ವಿರುದ್ಧ ದೇಶದ ಜನ ದಂಗೆ ಎದ್ದಿದ್ದಾರೆ. ಇದಕ್ಕೆಲ್ಲಾ ಕೇಂದ್ರದ ನರೇಂದ್ರ ಮೋದಿ ಸರ್ಕಾರವೇ ಕಾರಣ ಎಂದು ತಿಳಿಸಿದರು.

    Live Tv

  • 5 ಶಾಸಕರು, 3 ಸಚಿವರಿರುವ ದಕ್ಷಿಣ ಕನ್ನಡಕ್ಕೆ ಬೊಮ್ಮಾಯಿ ಬಜೆಟ್‍ನಲ್ಲಿ ಕೊಟ್ಟಿದ್ದೇನು: ಸೊರಕೆ ಪ್ರಶ್ನೆ

    5 ಶಾಸಕರು, 3 ಸಚಿವರಿರುವ ದಕ್ಷಿಣ ಕನ್ನಡಕ್ಕೆ ಬೊಮ್ಮಾಯಿ ಬಜೆಟ್‍ನಲ್ಲಿ ಕೊಟ್ಟಿದ್ದೇನು: ಸೊರಕೆ ಪ್ರಶ್ನೆ

    ಉಡುಪಿ: 5 ಶಾಸಕರು ಇಬ್ಬರು ಪ್ರಭಾವಿ ಸಚಿವರು ಒಬ್ಬರು ಕೇಂದ್ರ ಸಚಿವೆ, ರಾಷ್ಟ್ರಮಟ್ಟದ ಪ್ರಭಾವಿ ನಾಯಕ ಬಿ.ಎಲ್ ಸಂತೋಷ್ ಇರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ಸರ್ಕಾರ ಬಜೆಟ್‍ನಲ್ಲಿ ಕೊಟ್ಟಿದ್ದೇನು? ಎಂದು ಕಾಂಗ್ರೆಸ್ ನಾಯಕ ವಿನಯ್ ಕುಮಾರ್ ಸೊರಕೆ ಪ್ರಶ್ನೆ ಮಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸೊರಕೆ, ಕರಾವಳಿ ಭಾಗದಲ್ಲಿ ಅಭಿವೃದ್ಧಿಗೆ ಒತ್ತು ಕೊಟ್ಟರೆ ಯಾವುದೇ ರಾಜಕೀಯ ಲಾಭ ಸಿಗುವುದಿಲ್ಲ. ಭಾವನಾತ್ಮಕ ವಿಚಾರಗಳೇ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಶ್ರೀರಕ್ಷೆ ಎಂದು ಗೊತ್ತಿದ್ದು ಸಿಎಂ ಬೊಮ್ಮಾಯಿ ಬಜೆಟ್‍ನಲ್ಲಿ ಉಡುಪಿ ಜಿಲ್ಲೆಗೆ ಯಾವುದೇ ಅನುದಾನ ಕೊಟ್ಟಿಲ್ಲ ಎಂದು ವ್ಯಂಗ್ಯದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಕಾಶಿ ಯಾತ್ರೆ ಕೈಗೊಳ್ಳುವವರಿಗೆ 5 ಸಾವಿರ ರೂ.ಸಹಾಯಧನ

    ಬಜೆಟ್‍ನಲ್ಲಿ ಉಡುಪಿಯನ್ನು ಸಂಪೂರ್ಣವಾಗಿ ನಿರ್ಲಕ್ಷ ಮಾಡಲಾಗಿದೆ. ಆರ್ಥಿಕ ಪರಿಸ್ಥಿತಿಯನ್ನು ಉತ್ತೇಜನ ಗೊಳಿಸುವ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಬಜೆಟ್ ಗಾತ್ರ ಶೇಕಡ ಹೆಚ್ಚಾಗಿದೆ. ಎಷ್ಟು ಸಾಲ ಪಡೆದು ಬಜೆಟ್ ಮಂಡಿಸಬಹುದೋ ಅದೆಲ್ಲವನ್ನು ಬಸವರಾಜ ಬೊಮ್ಮಾಯಿ ಬಳಸಿಕೊಂಡಿದ್ದಾರೆ. ಹಿಂದಿನ ಸರ್ಕಾರವು ಈ ಪ್ರಯೋಜನ ಬಳಸಿಕೊಂಡಿದೆ ಆದರೆ ಬೊಮ್ಮಾಯಿಯಷ್ಟು ಅಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: 1 ರೂ. ಬಂದಿದ್ದು ಹೇಗೆ? ಹೋಗಿದ್ದು ಹೇಗೆ? – ಯಾವ ವಲಯಕ್ಕೆ ಎಷ್ಟು ಕೋಟಿ?

    ರಾಜ್ಯ ಸರ್ಕಾರ 26 ಸಾವಿರ ಕೋಟಿ ರೂಪಾಯಿ ಬಡ್ಡಿ ಕಟ್ಟುತ್ತದೆ. ಕೇಂದ್ರ ಸರ್ಕಾರದಿಂದ ಬರುವ ಯೋಜನೆ ಹಣವನ್ನು ಇಟ್ಟುಕೊಂಡು ಬಜೆಟ್ ಗಾತ್ರವನ್ನು ಹಿಗ್ಗಿಸಲಾಗಿದೆ. ಕೇಂದ್ರದಿಂದ ನಮಗೆ ಸಹಜವಾಗಿ ಬರಬೇಕಾದ ನಮ್ಮ ಹಕ್ಕು ಜಿಎಸ್‍ಟಿಯನ್ನು ನಿರ್ಲಕ್ಷ್ಯ ಮಾಡಲಾಗಿದೆ. ಎಲ್ಲಾ ಇಲಾಖೆಗಳಿಗೆ ಹಣವನ್ನು ಹಂಚಿಕೆ ಮಾಡಲಾಗಿದೆ. ಹೊಸ ಯೋಜನೆ ಏನು ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಒಲಿಂಪಿಕ್ಸ್‌ಗೆ ಸಿದ್ಧತೆ – 75 ಕ್ರೀಡಾಪಟುಗಳಿಗೆ ತಲಾ 10 ಲಕ್ಷ

    ನಾರಾಯಣ ಗುರು ನಿಗಮ ಆಗಬೇಕು ಎಂಬ ಬೇಡಿಕೆ ಇತ್ತು. ನಿಗಮ ಮಾಡಿಯೇ ಮಾಡುತ್ತೇವೆ ಎಂಬ ಅಭಿಪ್ರಾಯಗಳು ಬಿಜೆಪಿ ಕಡೆಯಿಂದ ಕೇಳಿಬರುತ್ತಿತ್ತು. ನಿಗಮದ ಬೇಡಿಕೆ ಇರುವಾಗ ನಾಲ್ಕು ವಸತಿ ಶಾಲೆಗಳು ಮಾತ್ರ ಸಿಕ್ಕಿದೆ. ಸಿದ್ದರಾಮಯ್ಯ ಸರ್ಕಾರ ಅಲ್ಪಸಂಖ್ಯಾತರಿಗೆ 100 ಕೋಟಿ ರೂಪಾಯಿ ಕೊಟ್ಟಿದ್ದರು. ಬಿಜೆಪಿ ಎಲ್ಲಾ ಅನುದಾನವನ್ನು ಕಡಿತ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

  • ಕರಾವಳಿಯಲ್ಲಿ ಸರ್ಕಾರ, ಕಾನೂನು ಇಲ್ಲ: ಸೊರಕೆ ಚಾಟಿ

    ಕರಾವಳಿಯಲ್ಲಿ ಸರ್ಕಾರ, ಕಾನೂನು ಇಲ್ಲ: ಸೊರಕೆ ಚಾಟಿ

    ಉಡುಪಿ: ಜಿಲ್ಲೆ ಕಾರ್ಕಳ ತಾಲೂಕಿನ ನಕ್ರೆಯಲ್ಲಿ ಹಿಂದೂ ಜಾಗರಣ ವೇದಿಕೆ ಮತಾಂತರ ಪ್ರಕ್ರಿಯೆ ನಡೆಯುತ್ತಿದ್ದ ಕೇಂದ್ರದ ಮೇಲೆ ದಾಳಿ ಮಾಡಿದ್ದನ್ನು ಕಾಂಗ್ರೆಸ್ ಹಿರಿಯ ನಾಯಕ ವಿನಯ್ ಕುಮಾರ್ ಸೊರಕೆ ಖಂಡಿಸಿದ್ದಾರೆ. ಕರಾವಳಿಯಲ್ಲಿ ಸರ್ಕಾರ ಕಾನೂನು ಇಲ್ಲ ಎನ್ನುವುದಕ್ಕೆ ಇದು ಉದಾಹರಣೆ ಎಂದು ಚಾಟಿ ಬೀಸಿದ್ದಾರೆ.

    ನಕ್ರೆ ಪರಿಸರದಲ್ಲಿ ಮತಾಂತರ ನಡೆಯುತ್ತದೆ ಎಂಬ ಮಾಹಿತಿ ಸಂಘಟನೆಗಳಿಗೆ ಇದ್ದರೆ, ಅವರು ಕಾನೂನು ರೀತಿಯ ಪ್ರಯತ್ನ ಮಾಡಬೇಕಿತ್ತು. ಕಾನೂನು ಉಲ್ಲಂಘನೆ ಕಾರ್ಕಳದಿಂದ ಆರಂಭವಾಗಿದೆ. ಕಾನೂನು ಉಲ್ಲಂಘನೆ ಆಗಿದ್ದರೆ, ಮತಾಂತರ ನಡೆಯುತ್ತಿದ್ದರೆ ಪೊಲೀಸರ ಮೂಲಕ ಕ್ರಮ ಕೈಗೊಳ್ಳಬಹುದಿತ್ತು. ಕೇಂದ್ರದಲ್ಲಿ, ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಇದೆ. ಕಾರ್ಕಳ ಶಾಸಕರೇ ಉಸ್ತುವಾರಿ ಸಚಿವರಾಗಿದ್ದಾರೆ. ಹಿಂದೂ ಜಾಗರಣ ವೇದಿಕೆ ದಾಂದಲೆ ದೌರ್ಜನ್ಯ ಮಾಡಿದ್ದು ಎಷ್ಟು ಸರಿ? ಎಂದು ಸೊರಕೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಉರುಳಾಡುವ ಶೋಭಾ ಕರಂದ್ಲಾಜೆ ಎಲ್ಲಿ..?: ಸೊರಕೆ

    ಕಾನೂನು ಉಲ್ಲಂಘಿಸಿದವರ ಮೇಲೆ ದಾಂಧಲೆಯೇ ಉತ್ತರನಾ..? ಪೊಲೀಸರಿಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಹಿಂದೂ ಜಾಗರಣ ವೇದಿಕೆಗೆ ಗೌರವ ಇಲ್ಲವೆ..? ಕಾರ್ಕಳದಲ್ಲಿ ಧಾರ್ಮಿಕ ಪ್ರವಚನಗಳು ನಡೆಯುತ್ತಿತ್ತು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಕೂಡ ಸತ್ಯಾಸತ್ಯತೆಯನ್ನು ಪರಾಮರ್ಶಿಸಬೇಕಿದೆ ಎಂದು ಸೊರಕೆ ಒತ್ತಾಯಿಸಿದ್ದಾರೆ.

  • ರಸ್ತೆಯಲ್ಲಿ ಉರುಳಾಡುವ ಶೋಭಾ ಕರಂದ್ಲಾಜೆ ಎಲ್ಲಿ..?: ಸೊರಕೆ

    ರಸ್ತೆಯಲ್ಲಿ ಉರುಳಾಡುವ ಶೋಭಾ ಕರಂದ್ಲಾಜೆ ಎಲ್ಲಿ..?: ಸೊರಕೆ

    ಉಡುಪಿ: ದೇಶಾದ್ಯಂತ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ. ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಪೆಟ್ರೋಲ್-ಡೀಸೆಲ್ ಹಾಕದ ಪರಿಸ್ಥಿತಿ ಎದುರಾಗಿದೆ. ನಮ್ಮ ಅಧಿಕಾರ ಅವಧಿಯಲ್ಲಿ ರಸ್ತೆಯಲ್ಲಿ ಸಿಲಿಂಡರ್ ನಂತೆ ಉರುಳಾಡಿ ಪ್ರತಿಭಟನೆ ಮಾಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈಗೆಲ್ಲಿ ಎಂದು ಕಾಂಗ್ರೆಸ್ ನಾಯಕ ವಿನಯ್ ಕುಮಾರ್ ಸೊರಕೆ ಪ್ರಶ್ನೆ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎತ್ತಿನಗಾಡಿ ಪ್ರತಿಭಟನೆ ಮಾಡಿದ್ದಾರೆ. ಎತ್ತಿನಗಾಡಿಯಲ್ಲದೆ ಈಗ ಮತ್ಯಾವುದರಲ್ಲಿ ಹೋಗಬೇಕು? ಮೂವತ್ತು ರೂಪಾಯಿ ಪೆಟ್ರೋಲ್ ಕೊಡ್ತೇವೆ ಎಂದು ವಾಗ್ದಾನ ಮಾಡಿದ್ದರು. ಕ್ರೂಡ್ ಆಯಿಲ್(ಕಚ್ಛಾ ತೈಲ) ದರ ಇಳಿಕೆಯಾದರೂ ಪೆಟ್ರೋಲ್ ದರ ಇಳಿಸಲಿಲ್ಲ. ರಸ್ತೆಯಲ್ಲಿ ಹೊರಳಾಡುತ್ತಿದ್ದ ಬಿಜೆಪಿ ಕಾರ್ಯಕರ್ತರು ಎಲ್ಲಿಗೆ ಹೋಗಿದ್ದಾರೆ? ಸಿಲಿಂಡರ್ ಥರ ಹೊರಳಾಡಿದ ಸಂಸದೆ ಎಲ್ಲಿದ್ದಾರೆ? ಎಂದು ಸೊರಕೆ ವ್ಯಂಗ್ಯದ ಮೂಲಕ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಗುಜರಾತ್‍ನ 17ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣವಚನ ಸ್ವೀಕಾರ

    ದೇಶ ಕಟ್ಟಬೇಕು- ದೇಶ ಉಳಿಯಬೇಕು- ಹಾಗಾಗಿ ಏನಾದರೂ ಸಹಿಸಿಕೊಳ್ಳಬೇಕು. 70 ವರ್ಷದಲ್ಲಿ ಮಾಡಿದ ಸರ್ಕಾರಿ ಸ್ವತ್ತು ಮಾರಾಟವಾದರೂ ಬಾಯಿ ಮುಚ್ಚಿ ಕೂರಬೇಕು. ವಿರೋಧ ಪಕ್ಷ ಏನು ಮಾಡಿದರೂ ದೇಶದ್ರೋಹ. ದೇಶ ಕಟ್ಟುವವರಿಗೆ ಪ್ರತ್ಯೇಕ ಪೆಟ್ರೋಲ್ ಬಂಕ್ ಮಾಡಿ. ಈ ಬಗ್ಗೆ ಮನವಿ ಕೊಟ್ಟರೂ ಸರ್ಕಾರ ಸ್ಪಂದಿಸಿಲ್ಲ. ಜನಸಾಮಾನ್ಯರಿಗೆ 100 ರೂ. ದೇಶಭಕ್ತರಿಗೆ 200 ರೂ. ಪೆಟ್ರೋಲ್ ಕೊಡಿ ಎಂದು ಸೊರಕೆ ಬೆಲೆ ಏರಿಕೆ ವಿರುದ್ಧ ವ್ಯಂಗ್ಯವಾಡಿದರು.  ಇದನ್ನೂ ಓದಿ:  ಮೋದಿ ಸರ್ಕಾರದಿಂದ ಲವ್ ಲೆಟರ್ ಬಂದಿದೆ – ಆಪ್ ನಾಯಕ

  • ಪ್ರಧಾನಿ ಮೋದಿ ದೊಡ್ಡ ಬಂಡಲ್ ಬಡಾಯಿ: ಸೊರಕೆ ಕಿಡಿ

    ಪ್ರಧಾನಿ ಮೋದಿ ದೊಡ್ಡ ಬಂಡಲ್ ಬಡಾಯಿ: ಸೊರಕೆ ಕಿಡಿ

    ಉಡುಪಿ: ಪ್ರಧಾನಿ ನರೇಂದ್ರ ಮೋದಿ ದೊಡ್ಡ ಬಂಡಲ್ ಬಡಾಯಿ ವ್ಯಕ್ತಿ. ಬಾಯಲ್ಲಿ ಮಾತನಾಡುವುದನ್ನು ಬಿಟ್ಟು, ಕಳೆದ ಏಳು ವರ್ಷದಲ್ಲಿ ಯಾವುದಾದರೂ ಒಂದು ಸಾಧನೆ ಮಾಡಿದ್ದರೆ, ತೋರಿಸಲಿ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಗುಡುಗಿದ್ದಾರೆ.

    ಪೆಟ್ರೋಲ್ ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಉಡುಪಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ಬೆಲೆ ಏರಿಕೆ ನೀತಿಯನ್ನು ಖಂಡಿಸಿದ್ದಾರೆ. ಇದನ್ನೂ ಓದಿ: ಲಸಿಕೆ ದುರ್ಬಳಕೆ ಮಾಡುತ್ತಿರೋ ಅಶ್ವಥ್ ನಾರಾಯಣರನ್ನು ಕೂಡಲೇ ವಜಾಗೊಳಿಸಿ: ಮೋಹನ್ ದಾಸರಿ ಆಗ್ರಹ

    ಈ ವೇಳೆ ಮಾತನಾಡಿದ ವಿನಯ್ ಕುಮಾರ್ ಸೊರಕೆಯವರು, ಪ್ರಧಾನಿ ನರೇಂದ್ರ ಮೋದಿ ರೀಲ್ ಬಿಡುವುದರಲ್ಲಿ ನಿಸ್ಸೀಮ. ಹೇಳಿದ್ದನ್ನು ಒಂದು ಮಾಡಿಲ್ಲ. 30 ರೂಪಾಯಿಗೆ ಪೆಟ್ರೋಲ್ ಕೊಡುತ್ತೇನೆ ಎಂದು ಹೇಳಿ ನೂರು ರೂಪಾಯಿ ಮಾಡಿದರು. 15 ಲಕ್ಷ ಖಾತೆಗೆ ಜಮಾ ಮಾಡುತ್ತೇನೆ ಎಂದು ಸುಳ್ಳು ಹೇಳಿ ತಿರುಗಾಡುತ್ತಿದ್ದಾರೆ. ಇಮೇಜ್ ಬಿಲ್ಡ್ ಮಾಡುವುದರಲ್ಲಿ ಏಳು ವರ್ಷ ಕಳೆದು ಹೋಯಿತು ಎಂದು ಹೇಳಿ ಕಿಡಿಕಾರಿದರು.

    ಕೊರೊನಾ ಲಾಕ್ ಡೌನ್ ಸಂದರ್ಭದಲ್ಲೂ ಕೇಂದ್ರ, ರಾಜ್ಯ ಸರಕಾರದಿಂದ ಜನ ವಿರೋಧಿ ನೀತಿ ಜಾರಿಯಲ್ಲಿದೆ. ಸತತ ಬೆಲೆ ಏರಿಸುವ ಮೂಲಕ ಜನರ ಬದುಕಿನ ಮೇರೆ ಬರೆ ಎಳೆಯುತ್ತಿದ್ದಾರೆ. ಯುಪಿಎ ಸರ್ಕಾರ ಇದ್ದಾಗ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರು, ಈಗ ಇಂಧನ, ದಿನ ಬಳಕೆ ವಸ್ತುಗಳ ನಿರಂತರ ಬೆಲೆ ಏರಿಕೆಗೆ ಮೌನವಹಿಸಿದ್ದಾರೆ ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಒಟ್ಟಾರೆ ಇಂದು ಸಾಮಾಜಿಕ ಅಂತರ ಕಾಪಾಡಿ ಮಾಸ್ಕ್ ಧರಿಸಿ ಪ್ರತಿಭಟನೆ ಮಾಡಿದರು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಸಹಿತ ಜಿಲ್ಲಾ ಮುಖಂಡರು ಭಾಗಿಯಾಗಿದ್ದರು. ಇದನ್ನೂ ಓದಿ: ಡಿಸಿಎಂ ಜೊತೆ 30ಕ್ಕೂ ಹೆಚ್ಚು ವಿವಿಧ ಮಠಗಳ ಸ್ವಾಮೀಜಿಗಳಿಂದ ಚರ್ಚೆ

  • ಮುಂದಿನ ದಿನಗಳಲ್ಲಿ ಜನ ಮತ್ತೆ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ: ಸೊರಕೆ

    ಮುಂದಿನ ದಿನಗಳಲ್ಲಿ ಜನ ಮತ್ತೆ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ: ಸೊರಕೆ

    – ಪ್ರಧಾನಿ ಮೋದಿಗೆ ರೈತರಿಗಿಂತ ಉದ್ದಿಮೆದಾರರ ಹಿತ ಮುಖ್ಯ

    ಉಡುಪಿ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಹಾಗೂ ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿರುವುದರಿಂದ ಜನ ರೋಸಿ ಹೋಗಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಜನ ಮತ್ತೆ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ ಸೊರಕೆ ವಿಶ್ವಾಸ ವ್ಯಕ್ತಪಡಿಸಿದರು.

    ಗಾಂಧಿ ಜಯಂತಿ ಪ್ರಯುಕ್ತ ಕಾಂಗ್ರೆಸ್ ಕಚೇರಿಯಲ್ಲಿ ಸಭಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಂಘಟಿತರಾದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ದಿಢೀರ್ ಪ್ರತಿಭಟನಾ ರ್ಯಾಲಿ ನಡೆಸಿದರು. ಕೇಂದ್ರ ಸರಕಾರದ ಜನವಿರೋಧಿ ಮತ್ತು ರೈತ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

    ಈ ವೇಳೆ ಮಾತನಾಡಿದ ಸೊರಕೆ, ರೈತರನ್ನು ದಮನ ಮಾಡುವ ಉದ್ದೇಶದಿಂದ ಉದ್ದಿಮೆದಾರರ ಪರವಾಗಿ ರೈತ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ನರೇಂದ್ರ ಮೋದಿ ಸರ್ಕಾರಕ್ಕೆ ಈ ದೇಶದ ಬೆನ್ನೆಲುಬು ರೈತಾಪಿ ವರ್ಗದ ಹಿತ ಮುಖ್ಯ ಅಲ್ಲ. ಕಳೆದ ಆರು ವರ್ಷಗಳಿಂದಲೂ ಕೂಡ ರೈತ ವಿರೋಧಿಯಾಗಿಯೇ ಸರ್ಕಾರ ನಡೆದುಕೊಂಡು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೇಂದ್ರ ಸರ್ಕಾರದ ಅಜಾಗರೂಕತೆಯಿಂದ ವಿಶ್ವದಲ್ಲಿ ಭಾರತ ಕರೋನಾದಲ್ಲಿ ನಂಬರ್ 1 ಹಂತದಲ್ಲಿದೆ. ಹೀಗಾಗಿ ಜನ ರೋಸಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

    ಬ್ರಹ್ಮಗಿರಿ ಕಾಂಗ್ರೆಸ್ ಭವನದಿಂದ ಹುತಾತ್ಮ ಸ್ಮಾರಕದ ವರೆಗೆ ಕಾಂಗ್ರೆಸ್ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಸಾಗಿ ಘೋಷಣೆಗಳನ್ನು ಕೂಗಿದರು. ಉತ್ತರ ಪ್ರದೇಶದ ದಲಿತ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣದ ಕುರಿತು ಪ್ರತಿಭಟನಾಕಾರರು ಕಟುವಾದ ಮಾತುಗಳಲ್ಲಿ ಖಂಡಿಸಿದರು. ಅಲ್ಲದೆ ಕೊರೊನಾ ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ವಿಶ್ವಗುರು ಸ್ಥಾನದಲ್ಲಿರಬೇಕಾಗಿದ್ದ ಭಾರತ ಇಂದು ಕೊರೊನಾ ಪೀಡಿತರ ಸಂಖ್ಯೆಯಲ್ಲಿ ನಂಬರ್ 1 ಆಗಿರುವುದು ದುರಂತ ಎಂದು ಇದೇ ವೇಳೆ ಕಿಡಿಕಾರಿದರು.

  • ಮಂಗ್ಳೂರು `ಕೈ’ ನಾಯಕರಲ್ಲಿ ವೇಣುಗೋಪಾಲ್ ಮನವಿ!

    ಮಂಗ್ಳೂರು `ಕೈ’ ನಾಯಕರಲ್ಲಿ ವೇಣುಗೋಪಾಲ್ ಮನವಿ!

    ನವದೆಹಲಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಪಟ್ಟಿ ರಿಲೀಸ್ ಮಾಡಿದ್ದು, ಇತ್ತ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಪೈಪೋಟಿ ಜೋರಾಗಿದೆ. ಸಚಿವ ಯುಟಿ. ಖಾದರ್ ನೇತೃತ್ವದಲ್ಲಿ ಟಿಕೆಟ್ ಗಾಗಿ ಜಿಲ್ಲಾ ನಾಯಕರು ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ವೇಳೆ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಕೈ ನಾಯಕರಲ್ಲಿ ಮನವಿ ಮಾಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರೇ ಅಭ್ಯರ್ಥಿ ಆದ್ರೂ ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಅಭ್ಯರ್ಥಿ ಗೆಲ್ಲಿಸಬೇಕಿದೆ ಎಂದು ವೇಣುಗೋಪಾಲ್ ಕೈ ನಾಯಕರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಎಲ್ಲ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

    ವೇಣುಗೋಪಾಲ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ಮಂಗಳೂರು ಕಾಂಗ್ರೆಸ್ ಅಭ್ಯರ್ಥಿ ವಿಚಾರದ ಕುರಿತು ವೇಣುಗೋಪಾಲ್ ಬಳಿ ಒಗ್ಗಟ್ಟು ಪ್ರದರ್ಶನ ಮಾಡಿದ್ದೇವೆ. ವರಿಷ್ಠರ ಬಳಿ ಪಕ್ಷದ ಮುಖಂಡರು ಸಭೆ ಅಗಿದೆ. ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭ್ಯರ್ಥಿ ಗೆಲ್ಲಿಸಬೇಕಿದೆ. ಹಾಲಿ ಸಂಸದರ ವೈಫಲ್ಯದಿಂದ ಅಭಿವೃದ್ಧಿ ಕುಂಠಿತವಾಗಿದೆ. ವೇಣುಗೋಪಾಲ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಮೈತ್ರಿ ಸರಕಾರ ಅಭಿವೃದ್ಧಿ ಮಾಡಿದೆ.

    ಇದೇ ವೇಳೆ ಮಾಜಿ ಸಚಿವ ರಮಾನಾಥ್ ರೈ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಸಂಸದರಿದ್ದಾಗ ಮಂಗಳೂರು ಅಭಿವೃದ್ಧಿಯಾಗಿತ್ತು. ಬಿಜೆಪಿ ಸಂಸದರಿದ್ದಾಗ ಯಾವುದೇ ಅಭಿವೃದ್ಧಿಯಾಗಿಲ್ಲ. ಸಂಪೂರ್ಣವಾಗಿ ಕೆಲಸಗಳು ತಟಸ್ಥವಾಗಿದೆ. ಯಾವ ಅಭ್ಯರ್ಥಿಗೆ ಟಿಕೆಟ್ ನೀಡಿದ್ರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಬಿಜೆಪಿ ಸೋಲಿಸುವುದೇ ನಮ್ಮ ಹೋರಾಟವಾಗಿದೆ. ದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ನಾವೆಲ್ಲ ಟಿಕೆಟ್ ಆಕಾಂಕ್ಷಿಗಳು. ನಮ್ಮಲ್ಲಿ ಒಗ್ಗಟ್ಟಿದ್ರೆ ಬದಲಾವಣೆ ಸಾಧ್ಯ. ಸಂಘಪರಿವಾರವೇ ಹಾಲಿ ಸಂಸದರನ್ನು ಕಳಪೆ ಎಂದು ಹೇಳಿದೆ. ವಿಜಯಾ ಬ್ಯಾಂಕ್ ನ್ನು ಬರೋಡಾ ಬ್ಯಾಂಕ್ ಜೊತೆ ಹೊಂದಾಣಿಕೆ ಮಾಡ್ತಿದ್ದಾರೆ. ಮಂಗಳೂರು ಏರ್ ಪೋರ್ಟ್ ಖಾಸಗಿ ಕಂಪನಿಗೆ ನೀಡಿದೆ. ನಾವೆಲ್ಲ ಒಗ್ಗಟ್ಟಾಗಿ ಚುನಾವಣೆ ಮಾಡ್ತೇವೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಿದ್ದೇವೆ. ಸದ್ಯ ಮಂಗಳೂರಿನಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಸಂಸದ ನಳಿನ್ ಕುಮಾರ್ ಅಶಾಂತಿ ವಾತವರಣ ಸೃಷ್ಟಿ ಮಾಡಿದ್ದಾರೆ ಎಂದು ಹೇಳಿದ್ರು.

    https://www.youtube.com/watch?v=srybZEOyHLQ

  • ನಾಳೆ ರಾಹುಲ್ ಗಾಂಧಿ ಕರಾವಳಿ ಪ್ರವಾಸ – ರಾಜಕೀಯ ತರಬೇತಿ ಕೇಂದ್ರ ಉದ್ಘಾಟಿಸಿ ರೋಡ್ ಶೋ

    ನಾಳೆ ರಾಹುಲ್ ಗಾಂಧಿ ಕರಾವಳಿ ಪ್ರವಾಸ – ರಾಜಕೀಯ ತರಬೇತಿ ಕೇಂದ್ರ ಉದ್ಘಾಟಿಸಿ ರೋಡ್ ಶೋ

    ಉಡುಪಿ: ಉತ್ತರ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲಿ ಜನಾಶೀರ್ವಾದ ಯಾತ್ರೆ ನಡೆಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರದಿಂದ ಕರಾವಳಿ ಪ್ರವಾಸ ಕೈಗೊಳ್ಳಲಿದ್ದಾರೆ.

    ಮಾರ್ಚ್ 20 ಮತ್ತು 21 ರಂದು ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಎರಡನೇ ಹಂತದ ಯಾತ್ರೆ ನಡೆಸಲಿದ್ದಾರೆ. ಪಕ್ಷದ ಮೀಟಿಂಗ್- ಸಾರ್ವಜನಿಕ ಸಭೆಯ ಜೊತೆ ರಾಗಾ ಹಿಂದೂ ಕ್ರಿಶ್ಚಿಯನ್ ಮತ್ತು ಮುಸಲ್ಮಾನ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೂ ಭೇಟಿ ಕೊಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷರನ್ನು ಮೊದಲ ಬಾರಿಗೆ ಕರಾವಳಿಗೆ ಸ್ವಾಗತಿಸಲು ಕಾಂಗ್ರೆಸ್ ಸಜ್ಜಾಗಿದೆ.

    ನಾಳೆ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ರಾಹುಲ್, ಎರಡು ದಿನ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಉಡುಪಿ ಜಿಲ್ಲೆಯ ತೆಂಕ ಎರ್ಮಾಳು ಎಂಬಲ್ಲಿ ರಾಜೀವ್ ಗಾಂಧಿ ರಾಜಕೀಯ ತರಬೇತಿ ಸಂಸ್ಥೆ ಉದ್ಘಾಟನೆ ಮಾಡಲಿದ್ದಾರೆ. ಸುಮಾರು 350 ಮಂದಿ ಸೇವಾದಳದ ಕಾರ್ಯಕರ್ತರನ್ನು ಉದ್ದೇಶಿಸಿ ರಾಗಾ ಮಾತನಾಡಲಿದ್ದಾರೆ. ಬಳಿಕ ಪಡುಬಿದ್ರೆ ತನಕ ಸುಮಾರು ನಾಲ್ಕು ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ಪಡುಬಿದ್ರೆ ಜಂಕ್ಷನ್ ನಲ್ಲಿ ಸುಮಾರು 15 ಸಾವಿರ ಜನರನ್ನು ಉದ್ದೇಶಿಸಿ ರಾಹುಲ್ ಮತ್ತು ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಗ್ರಾಮ ಮಟ್ಟದ ಸಭೆಗಳನ್ನು ಮಾಡಿದ್ದೇವೆ. ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಕಾರ್ಯಕರ್ತರನ್ನು ಜೋಡಣೆ ಮಾಡುವ ಕೆಲಸಕಾರ್ಯಗಳು ಆಗಿದೆ. ಪಡುಬಿದ್ರೆಯಲ್ಲಿ 15 ಸಾವಿರಕ್ಕೂ ಹೆಚ್ಚು ಜನ ಕಾರ್ನರ್ ಮೀಟಿಂಗ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಬಂದೋಬಸ್ತ್ ಮೀಟಿಂಗ್ ಆಗಿದೆ. 1983ರಲ್ಲಿ ರಾಜೀವ್ ಗಾಂಧಿ ನನ್ನ ಕ್ಷೇತ್ರ ಪುತ್ತೂರಲ್ಲಿ ಪ್ರಚಾರ ಭಾಷಣ ಉದ್ಘಾಟಿಸಿದ್ದರು. ಈಗ ರಾಹುಲ್ ಗಾಂಧಿ ಅವರು ನನ್ನ ಕಾಪು ಕ್ಷೇತ್ರಕ್ಕೆ ಬರುತ್ತಿರುವುದು ಸುಯೋಗ ಅಂತ ಹೇಳಿದ್ರು.

    ರಾಹುಲ್ ಕರಾವಳಿ ಪ್ರವಾಸದ ಹೊತ್ತಿಗೇ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುವ ಸುದ್ದಿ ಜೋರಾಗಿ ಚರ್ಚೆಯಾಗುತ್ತಿದೆ. ಇದೇ ತಿಂಗಳಾಂತ್ಯಕ್ಕೆ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎನ್ನಲಾಗುತ್ತಿದೆ. ಆದ್ರೆ ಇದನ್ನು ಸಾರಾ ಸಗಟಾಗಿ ಅಲ್ಲಗಳೆದಿರುವ ಅವರು ನಾನೇ ರಾಹುಲ್ ಗಾಂಧಿಯವರನ್ನು ಸ್ವಾಗತಿಸುವುದರಲ್ಲಿ ಮೊದಲಿಗ. ಸುಳ್ಳು ಅಪಪ್ರಚಾರಗಳಿಗೆ ಜನ ಕಿವಿಗೊಡಬಾರದು. ರಾಹುಲ್ ಗಾಂಧಿ ಕರಾವಳಿಗೆ ಬರುತ್ತಿರುವುದು ಯುವಕರಲ್ಲಿ ಉತ್ಸಾಹ ಹೆಚ್ಚಿಸಿದೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

    ರಾಜಕೀಯ ಸಮಾವೇಶದ ಜೊತೆ ಮಂಗಳೂರಿನ ಕುದ್ರೋಳಿ ಗೋಕರ್ಣಾಥೇಶ್ವರ ದೇವಸ್ಥಾನ, ರೋಜಾರಿಯೋ ಚರ್ಚ್, ಉಳ್ಳಾಲ ದರ್ಗಾಕ್ಕೆ ಭೇಟಿಯಾಗಲಿದ್ದಾರೆ. ಒಟ್ಟಿನಲ್ಲಿ ಕರಾವಳಿ ಜಿಲ್ಲೆಯಲ್ಲಿ ರಾಹುಲ್ ಪ್ರವಾಸ ಯುವಕರಲ್ಲಿ ಚೈತನ್ಯ ಹುಟ್ಟಿಸಿದೆ.