Tag: Vinay Katiyar

  • ಮುಸ್ಲಿಮರು ಭಾರತದಲ್ಲಿ ಏತಕ್ಕೀರಬೇಕು ಅಂತಾ ಹೇಳಿಕೆ ನೀಡಿದ್ದ ಬಿಜೆಪಿ ಸಂಸದನಿಗೆ ಫಾರುಖ್ ಅಬ್ದುಲ್ಲಾ ತಿರುಗೇಟು

    ಮುಸ್ಲಿಮರು ಭಾರತದಲ್ಲಿ ಏತಕ್ಕೀರಬೇಕು ಅಂತಾ ಹೇಳಿಕೆ ನೀಡಿದ್ದ ಬಿಜೆಪಿ ಸಂಸದನಿಗೆ ಫಾರುಖ್ ಅಬ್ದುಲ್ಲಾ ತಿರುಗೇಟು

    ನವದೆಹಲಿ: ಬುಧವಾರ ಬಿಜೆಪಿ ಸಂಸದ ವಿನಯ್ ಕಟಿಯಾರ್ ಮುಸ್ಲಿಮರು ಭಾರತದಲ್ಲಿ ಏತ್ತಕ್ಕೀರಬೇಕು? ಬೇಕಾದರೆ ಪಾಕಿಸ್ತಾನ, ಬಾಂಗ್ಲಾದೇಶಗಳಿಗೆ ಹೋಗಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹಾಗೆಯೇ ವಂದೇ ಮಾತರಂ ಮತ್ತು ರಾಷ್ಟ್ರ ಗೀತೆಗೆ ಗೌರವ ನೀಡಲು ಇಚ್ಚಿಸದವರು ಪಾಕಿಸ್ತಾನಕ್ಕೆ ತೆರಳಬಹುದು ಅಂತಾ ಅಂದಿದ್ದರು.

    ಎಂಐಎಂ ಪಕ್ಷದ ಅಧ್ಯಕ್ಷ ಅಸಾವುದ್ದೀನ್ ಓವೈಸಿ, ಭಾರತೀಯ ಮುಸ್ಲಿಂರನ್ನು ಪಾಕಿಸ್ತಾನಿ ಎಂದು ಕರೆಯುವವರನ್ನು ಶಿಕ್ಷಿಸಿ ಹೇಳಿಕೆ ನೀಡಿದ್ದರು. ಓವೈಸಿ ಹೇಳಿಕೆಗೆ ಪ್ರತ್ಯುತ್ತರ ನೀಡುವ ವೇಳೆ ಮುಸ್ಲಿಮರು ಭಾರತದಲ್ಲಿ ಯಾಕಿರಬೇಕು? ಜನಸಂಖ್ಯೆ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡಿದ ಮೇಲೆಯೂ ಮುಸ್ಲಿಂರನ್ನು ಭಾರತದಲ್ಲಿರುವ ಅವಶ್ಯಕತೆ ಏನಿದೆ ಅಂತಾ ಕಟಿಯಾರ್ ಪ್ರಶ್ನೆ ಮಾಡಿದ್ದರು.

    ಭಾರತವೇನು ವಿನಯ್ ಕಟಿಯಾರ್ ತಂದೆಯ ಆಸ್ತಿಯೇ? ಇದು ನಮ್ಮೆಲ್ಲರ ದೇಶವಾಗಿದೆ. ಕೆಲವರು ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ಇದು ಧಾರ್ಮಿಕ ಹಿಂಸೆ ಆಗಲಾರದು, ಎಲ್ಲ ಧರ್ಮಗಳು ಪ್ರೀತಿ ಮತ್ತು ಶಾಂತಿಯ ಸಂದೇಶಗಳನ್ನು ಹೇಳುತ್ತವೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲಾ ತಿರುಗೇಟು ನೀಡಿದ್ದಾರೆ.