Tag: Vinay Guruji

  • ಯಾವ ಸ್ವಾಮೀಜಿ, ಗುರೂಜಿಗಳು ಭವಿಷ್ಯ ನುಡಿಯೋದು ಬೇಕಿಲ್ಲ: ಡಿಕೆಶಿ

    ಯಾವ ಸ್ವಾಮೀಜಿ, ಗುರೂಜಿಗಳು ಭವಿಷ್ಯ ನುಡಿಯೋದು ಬೇಕಿಲ್ಲ: ಡಿಕೆಶಿ

    – ಪವರ್‌ ಶೇರಿಂಗ್‌ ವಿಚಾರಕ್ಕೆ ಡಿಸಿಎಂ ಹೇಳಿದ್ದೇನು?

    ಬೆಂಗಳೂರು: ನಮ್ಮ ಸರ್ಕಾರ ಸುಭದ್ರವಾಗಿದೆ, ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಆಗಿ ಕೆಲಸ ಮಾಡ್ತಿದ್ದಾರೆ. ಯಾವ ಸ್ವಾಮೀಜಿ, ಗುರೂಜಿಗಳು ಭವಿಷ್ಯ ನುಡಿಯೋದು ಬೇಕಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ತಿಳಿಸಿದರು.

    ಬೆಂಗಳೂರಿನಲ್ಲಿಂದು (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʻಇದೇ ಅವಧಿಯಲ್ಲಿ ಡಿಕೆಶಿ ಸಿಎಂ ಆಗ್ತಾರೆʼ ಎಂಬ ನಯ್ ಗುರೂಜಿ ಭವಿಷ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದರು. ನಾನು ಎಲ್ಲಾ ಸ್ವಾಮೀಜಿ, ಗುರೂಜಿಗಳಿಗೆ ವಿನಂತಿ ಮಾಡ್ತೀನಿ. ನಮ್ಮ ಸರ್ಕಾರದ ವಿಚಾರದಲ್ಲಿ ತಮ್ಮ ಯಾವ ಹೇಳಿಕೆ ಬೇಡ. ನಮ್ಮ ಸರ್ಕಾರ (Congress Government) ಸುಭದ್ರವಾಗಿ ನಡೆಯುತ್ತಿದೆ. ರಾಜ್ಯದ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಅವರು ಕೆಲಸ ಮಾಡ್ತಿದ್ದಾರೆ. ಅವರ ನೇತೃತ್ವದಲ್ಲಿ ನಾವೆಲ್ಲ ಒಟ್ಟಿಗೆ ಕೆಲಸ ಮಾಡ್ತಿದ್ದೇವೆ. ಯಾರೂ ಭವಿಷ್ಯ ನುಡಿಯೋದು ಬೇಕಿಲ್ಲ ಎಂದು ಎಂದು ಕುಟುಕಿದರು. ಇದನ್ನೂ ಓದಿ: ಡಿಕೆಶಿ ಸಿಎಂ ಆಗುವುದು ನಿಶ್ಚಿತ: ವಿನಯ್ ಗುರೂಜಿ ಭವಿಷ್ಯ

    ಪವರ್‌ ಶೇರಿಂಗ್‌ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಪವರ್ ಇಲ್ಲ, ಯಾವ ಶೇರಿಂಗೂ ಇಲ್ಲ. 5 ವರ್ಷ ಕಾಂಗ್ರೆಸ್ ಸರ್ಕಾರ ಇರಲಿದೆ ಎಂದರು. ಇದನ್ನೂ ಓದಿ: ಹೋಟೆಲ್‌ಗಳ ಮೇಲೆ ಲಾರಿ ಪಲ್ಟಿ – ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿ

    ಜಾತಿ ಜನಗಣತಿಗೆ ಪ್ರಬಲ ಸಮುದಾಯಗಳ ವಿರೋಧ ವಿಚಾರ ಕುರಿತು ಮಾತನಾಡಿ, ಜಾತಿ ಜನಗಣತಿಗೆ ಸಂಬಂಧಿಸಿದಂತೆ ಯಾವ ಸಭೆಯೂ ಇಲ್ಲ. ಸಿಎಂ ಕ್ಯಾಬಿನೆಟ್ ಸಭೆಗೆ ತರ್ತೀನಿ ಅಂತ ಹೇಳಿದ್ದಾರೆ. ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಲಿದೆ ಎಂದು ಹೇಳಿದರು.

    ಅಲ್ಲದೇ, ನಾನು, ಸಿಎಂ ಸಭೆ ಕರೆದಿದ್ದೇವೆ. ಎಲ್ಲಾ ಸಭೆ ರದ್ದು ಮಾಡಿ ಸಂಜೆ ಪದಾಧಿಕಾರಿಗಳ ಇತರೆ ಸಭೆ ಇದೆ. ಸುರ್ಜೇವಾಲ ಬರ್ತಾರೆ, ಸಂಜೆ ಶಾಸಕಾಂಗ ಪಕ್ಷದ ಸಭೆ ಇದೆ. ಎಂಎಲ್‌ಎ, ಮಂತ್ರಿಗಳಿಗೆ ಜವಾಬ್ದಾರಿ ಕೊಡಬೇಕಿದೆ. ನಾಳೆ ಸಿಎಂ, ನಾನು ದೆಹಲಿಗೆ ಹೋಗ್ತಿದ್ದೇವೆ. ದೆಹಲಿಯಲ್ಲಿ ಹೊಸ ಕಟ್ಟಡ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಅಯೋಧ್ಯೆಯ ಶ್ರೀರಾಮನ ಮೂರ್ತಿಗೆ `ರಾಮಲಲ್ಲಾʼ ಅಂತ ಕರೆಯುವುದೇಕೆ?

    ಎಲ್ಲಾ ಇಲಾಖೆಯಲ್ಲಿ ರೇಟ್ ಕಾರ್ಡ್ ಫಿಕ್ಸ್ ಮಾಡಿದ್ದಾರೆ ಅಂತ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೌದಾ.? ಅವರ ರೇಟ್ ಕಾರ್ಡಾ? ಅವರ ಕಾರ್ಡ್ ಫಿಕ್ಸ್ ಇರಬೇಕು. ಅವರ ಅನುಭವ ಮಾತಾಡ್ತಿದ್ದಾರೆ, ನನಗೆ ಗೊತ್ತಿಲ್ಲ. ಅದ್ಯಾವ್ದೋ ಪೂಜೆದೆಲ್ಲಾ ಹೇಳಿದ್ದಾರೆ ಅಲ್ವಾ.? ಅದು ಅವರ ಅನುಭವ. ಅವರು ಕದ್ದು ಮಾಡ್ತಾರೆ, ನಾನು ಓಪನ್ ಆಗಿ ಮಾಡ್ತೀನಿ, ದಿನಾ ಬೆಳಗ್ಗೆ ಪೂಜೆ ಮಾಡ್ತೀನಿ. ನಿಮ್ಮಂತವರು ತೊಂದರೆ ಕೊಡ್ತಾರೆ, ರಕ್ಷಣೆ ಕೊಡಪ್ಪಾ ಅಂತ ಮನವಿ ಮಾಡ್ತೀನಿ ಎಂದು ಹೆಚ್‌ಡಿಕೆಗೆ ಕುಟುಕಿದರು.

  • ಡಿಕೆಶಿ ಸಿಎಂ ಆಗುವುದು ನಿಶ್ಚಿತ: ವಿನಯ್ ಗುರೂಜಿ ಭವಿಷ್ಯ

    ಡಿಕೆಶಿ ಸಿಎಂ ಆಗುವುದು ನಿಶ್ಚಿತ: ವಿನಯ್ ಗುರೂಜಿ ಭವಿಷ್ಯ

    ಚಿಕ್ಕೋಡಿ: ಡಿ.ಕೆ ಶಿವಕುಮಾರ್ (D.K Shivakumar) ಸಿಎಂ ಆಗುವುದು ನಿಶ್ಚಿತ ಎಂದು ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ವಿನಯ್‌ ಗುರೂಜಿ (Vinay Guruji) ಭವಿಷ್ಯ ನುಡಿದಿದ್ದಾರೆ.

    ಹುಕ್ಕೇರಿ ಪಟ್ಟಣದಲ್ಲಿ ʻಪಬ್ಲಿಕ್‌ ಟಿವಿ ಜೊತೆ ಅವರು ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಡಿಕೆಶಿ ಬಹಳ ಕೆಲಸ ಮಾಡಿದ್ದಾರೆ. ಅವರು ನಾಟಕ ಮಾಡದ ರಾಜಕಾರಣಿ, ಅವರಿಗೆ ನಾಟಕ ಮಾಡಲು ಬರುವುದಿಲ್ಲ. ಅವರು ಸಿಎಂ ಆದರೆ ಖುಷಿ ಪಡುತ್ತೇವೆ‌. ಅವರು ಸಿಎಂ ಆಗಲಿ ಎಂದು ವೈಕುಂಠ ಏಕಾದಶಿ ದಿನ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.

    ಅಜ್ಜಯ್ಯನ ಮೇಲೆ ನಿಷ್ಠೆ, ಧರ್ಮದ ಮೇಲೆ ಗೌರವ ಅವರಿಗಿದೆ. ಗುರುಗಳ ಅನುಗ್ರಹದಿಂದ ಇದೇ ಸರ್ಕಾರದ ಅವಧಿಯಲ್ಲಿ ಅವರು ಸಿಎಂ ಸೀಟಲ್ಲಿ ಕೂರುತ್ತಾರೆ ಎಂದಿದ್ದಾರೆ.

  • ತಮಿಳುನಾಡು ಸಿಎಂ ಆಗಿ ಅಣ್ಣಾಮಲೈ ಪ್ರಮಾಣವಚನ ಸ್ವೀಕರಿಸ್ತಾರೆ: ವಿನಯ್‌ ಗುರೂಜಿ

    ತಮಿಳುನಾಡು ಸಿಎಂ ಆಗಿ ಅಣ್ಣಾಮಲೈ ಪ್ರಮಾಣವಚನ ಸ್ವೀಕರಿಸ್ತಾರೆ: ವಿನಯ್‌ ಗುರೂಜಿ

    ಚಿಕ್ಕಮಗಳೂರು: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಣ್ಣಾಮಲೈ (Anna Malai) ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ ಎಂದು ಅವಧೂತ ವಿನಯ್‌ ಗುರೂಜಿ ಭವಿಷ್ಯ ನುಡಿದಿದ್ದಾರೆ.

    ಚಿಕ್ಕಮಗಳೂರು (Chikkamagaluru) ಕಾರಗೃಹದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣ್ಣಾಮಲೈ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವುದನ್ನು ನಾನು ನೋಡ್ತೀನಿ, ನೀವು ನೋಡ್ತೀರಾ. ಅಣ್ಣಾಮಲೈ ಎಸ್‌ಪಿ ಆಗಿದ್ದಾಗ ಬಂದಾಗಲೇ 2 ಸೇಬು ಕೊಟ್ಟು ಹೇಳಿದ್ದೆ. ಖಾಕಿಯಿಂದ ಖಾದಿ ಉಡ್ತಾರೆ ಎಂದು ಹೇಳಿದ್ದೆ. ಅದು ನಿಜವಾಗುತ್ತದೆ ಎಂದು ವಿನಯ್‌ ಗುರೂಜಿ ಹೇಳಿದ್ದಾರೆ.

    ಮೊನ್ನೆಯಷ್ಟೆ ಅಯೋಧ್ಯೆಯಲ್ಲಿ ರಾಮನ ಪಟ್ಟಾಭಿಷೇಕ (Ayodhya Ram Mandir) ಮುಗಿದಿದೆ. ಸದ್ಯದಲ್ಲೇ ಮೋದಿಯ (Narendra Modi) ಪಟ್ಟಾಭಿಷೇಕವನ್ನೂ ಎಲ್ಲರೂ ನೋಡ್ತೀವಿ ಎಂದು ವಿನಯ್‌ ಗುರೂಜಿ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಸಂಸತ್ತಿನಲ್ಲಿ ಸದ್ದು ಮಾಡಿದ ಡಿಕೆ ಸುರೇಶ್ ‌ʼಪ್ರತ್ಯೇಕ ರಾಷ್ಟ್ರʼ ಹೇಳಿಕೆ- ಕಾಂಗ್ರೆಸ್‌ ಕ್ಷಮೆ ಕೇಳುವಂತೆ ಆಗ್ರಹ

    ಇದೆ ವೇಳೆ ಮಾತನಾಡಿದ ಅವರು, ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ ಅಸಮಾಧಾನ ಹೊರಹಾಕಿದ್ದಾರೆ. ಮಹಮದ್ ಜಿನ್ನಾ ಈ ತಪ್ಪು ಮಾಡಿದ್ದರು. ಗಾಂಧೀಜಿ ಅದನ್ನ ಬರೆದಿಡುತ್ತಾರೆ. ನೆಹರೂ-ಜಿನ್ನಾ ಇಬ್ಬರನ್ನೂ ಕೂರಿಸಿಕೊಂಡು ಮಹಾತ್ಮ ಗಾಂಧಿ, ನಾನಿರುವವರೆಗೂ ನನ್ನನ್ನ ಭಾಗ ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಆದರೆ ಆವತ್ತು ಗಾಂಧಿ ಮಾತನ್ನ ಯಾರೂ ಕೇಳಲಿಲ್ಲ. ಇಂದಿನ ಹಿಂದೂ-ಮುಸ್ಲಿಂ ಗಲಾಟೆ, ಹಳ್ಳಿ-ಹಳ್ಳಿಯಲ್ಲೂ ಪ್ರತಿಬಿಂಬಿಸುತ್ತೆ ಅಂತ ಹೇಳಿದ್ರು.

    ಇವತ್ತು ದೇಶದಲ್ಲಿ ಆಗ್ತಿರೋದು ಅದೇ ಎಂದು ಆತಂಕ ಹೊರಹಾಕಿದ್ದಾರೆ. ನಮ್ಮ ಅಧಿಕಾರದ ಆಸೆಗೆ ಜಾತಿ-ಧರ್ಮವನ್ನ ಬದಿಗಿಡಬೇಕು. ನಿಮ್ಮ ರಾಜಕೀಯವನ್ನ ಕೆಲಸ-ಟ್ಯಾಲೆಂಟ್ ನಲ್ಲಿ ತೋರಿಸಿ ಎಂದು ರಾಜಕಾರಣಿಗಳಿಗೆ ಕಿವಿಮಾತು ಹೇಳಿದ್ದಾರೆ. ಅವರಿಬ್ಬರನ್ನ ಬೈದುಕೊಂಡೇ ವಿಧಾನಸಭೆ ಕಲಾಪ ಮುಗಿಸ್ತೀರಾ. ಜನರ ಸಮಯ, ದುಡ್ಡು, ಟ್ಯಾಕ್ಸ್ ನಿಂದ ರಾಜಕಾರಣಿ, ಅಧಿಕಾರಿಗಳ ಸಂಬಳ ನಡೆಯುತ್ತಿದೆ. ಎಲ್ಲರೂ ಆ ಪರಿಜ್ಞಾನ ಇಟ್ಟುಕೊಳ್ಳಬೇಕು, ಆಗ ಇಂತಹಾ ಭಾಷಣ ಮಾಡಲ್ಲ ಎಂದು ಪರೋಕ್ಷವಾಗಿ ಡಿ.ಕೆ.ಸುರೇಶ್ ವಿರುದ್ಧ ಕಿಡಿಕಾರಿದ್ದಾರೆ.ನಾನು-ನೀನು ಅನ್ನೋ ಭೇದ ಹಿಂಸೆ, ನಾನು-ನೀನು ಒಂದು ಅನ್ನೋದು ಅಹಿಂಸೆ ಎಂದಿದ್ದಾರೆ.

  • 2022ರಲ್ಲೇ ಹುಲಿ ಚರ್ಮ ಹಿಂದಿರುಗಿಸಲಾಗಿದೆ- ವಿನಯ್ ಗುರೂಜಿ ಆಶ್ರಮದಿಂದ ಸ್ಪಷ್ಟನೆ

    2022ರಲ್ಲೇ ಹುಲಿ ಚರ್ಮ ಹಿಂದಿರುಗಿಸಲಾಗಿದೆ- ವಿನಯ್ ಗುರೂಜಿ ಆಶ್ರಮದಿಂದ ಸ್ಪಷ್ಟನೆ

    ಚಿಕ್ಕಮಗಳೂರು: ಹುಲಿ ಉಗುರುಗೆ ಸಂಬಂಧಿಸಿದಂತೆ ಬಿಗ್ ಬಾಸ್ ಸ್ಪರ್ಧಿ ಹಳ್ಳಿಕಾರ್ ಸಂತೋಷ್ (Bigg Boss Santhosh) ಅವರನ್ನು ಅರಣ್ಯಾಧಿಕಾರಿಗಳು ಅರೆಸ್ಟ್ ಮಾಡಿದ ಬೆನ್ನಲ್ಲೇ ಇದೀಗ ಲಾಕೆಟ್, ಚರ್ಮ ಬಳಕೆ ಮಾಡಿದ ಆರೋಪದ ಮೇಲೆ ಎಲ್ಲರ ಫೋಟೋ ವೀಡಿಯೋಗಳು ಒಂದೊಂದಾಗಿಯೇ ಹೊರಗೆ ಬರುತ್ತಿವೆ. ಅಂತೆಯೇ ವಿನಯ್ ಗುರೂಜಿ (Vinay Guruji) ಅವರು ಕೂಡ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

    ವಿನಯ್ ಗುರೂಜಿ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಆಶ್ರಮದಿಂದ ಸ್ಪಷ್ಟನೆ ಕೊಡಲಾಗಿದೆ. 2 ವರ್ಷದ ಹಿಂದೆ ಶಿವಮೊಗ್ಗ ಮೂಲದ ಅಮರೇಂದ್ರ ಕಿರೀಟಿ ಎಂಬವರು ವಿನಯ್ ಗುರೂಜಿಗೆ ಉಡುಗೊರೆ ನೀಡಿದ್ದರು. ಕಿರೀಟಿಯವರು ಅರಣ್ಯ ಅಧಿಕಾರಿಗಳ ಅನುಮತಿ ಪಡೆದು ಉಡುಗೊರೆ ನೀಡಿದ್ದರು. ಅಮರೇಂದ್ರ ಅವರ ತಂದೆ ಕಾಲದಿಂದಲೂ ಹುಲಿ ಚರ್ಮ ಮನೆಯಲ್ಲಿತ್ತು. ಆ ಹುಲಿ ಚರ್ಮವನ್ನ ವಿನಯ್ ಗುರೂಜಿಗೆ ನೀಡಿದ್ದರು. ಇದನ್ನೂ ಓದಿ: ಹುಲಿ ಉಗುರು ಕಂಟಕ: ದರ್ಶನ್, ಜಗ್ಗೇಶ್, ನಿಖಿಲ್ ಕ್ರಮಕ್ಕೆ ಒತ್ತಾಯ

    ಈ ಹಿಂದೆಯೂ ಅವಧೂತ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕೂತಿರೋ ಫೋಟೋ ವೈರಲ್ ಆಗಿತ್ತು. ಹೀಗಾಗಿ 2022 ರಲ್ಲಿ ಅದನ್ನ ಅರಣ್ಯ ಇಲಾಖೆಗೆ ಹಿಂದಿರುಗಿಸಲಾಗಿದೆ ಎನ್ನುವ ಮೂಲಕ ಹುಲಿ ಚರ್ಮದ ಬಗ್ಗೆ ಸ್ಪಷ್ಟನೆ ಕೊಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಿಕೆಶಿ ಸಿಎಂ ಆಗುವಂತೆ ಆಶೀರ್ವದಿಸಿ – ವಿನಯ್ ಗುರೂಜಿಗೆ ಶಾಸಕ ತಮ್ಮಯ್ಯ ಮನವಿ

    ಡಿಕೆಶಿ ಸಿಎಂ ಆಗುವಂತೆ ಆಶೀರ್ವದಿಸಿ – ವಿನಯ್ ಗುರೂಜಿಗೆ ಶಾಸಕ ತಮ್ಮಯ್ಯ ಮನವಿ

    ಚಿಕ್ಕಮಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಅವರಿಗೆ ಸಿಎಂ ಆಗುವಂತೆ ಆಶೀರ್ವದಿಸಿ ಎಂದು ಚಿಕ್ಕಮಗಳೂರು ಕಾಂಗ್ರೆಸ್ ಶಾಸಕ ಹೆಚ್.ಡಿ ತಮ್ಮಯ್ಯ (HD Thammaiah) ಮನವಿ ಮಾಡಿದ್ದಾರೆ.

    ಜಿಲ್ಲೆಯ ಕೊಪ್ಪ ತಾಲೂಕಿನ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದಲ್ಲಿ ಮಾತನಾಡಿದ ಅವರು, ಡಿಕೆಶಿ ಸಿಎಂ ಆಗುವ ಆಸೆಯನ್ನ ನೂರಾರು ಜನರ ಮುಂದೆ ಹೊರಹಾಕಿದ್ದಾರೆ. ನಮಗೆಲ್ಲ ಟಿಕೆಟ್ ನೀಡಿ ತುಂಬಾ ಸಹಾಯ ಮಾಡಿದ್ದಾರೆ. ಅವರಿಗೆ ಸಿಎಂ ಆಗುವಂತೆ ಆಶೀರ್ವದಿಸಿ ಎಂದು ಅವಧೂತ ವಿನಯ್ ಗುರೂಜಿ (Vinay Guruji) ಬಳಿ ಮನವಿ ಮಾಡಿದ್ದಾರೆ.

    ಇದೇ ವೇಳೆ ಜೆಡಿಎಸ್ (JDS) ವಿಧಾನ ಪರಿಷತ್ ಸದಸ್ಯ ಶರವಣ ಮಾತನಾಡಿ, ಕೂಡ ಅವಧೂತ ವಿನಯ್ ಗುರೂಜಿ ಮೂರು ಉಂಗುರ ಮಾಡಿಸಿದ್ದರು. 2018ರಲ್ಲಿ ಒಂದನ್ನು ಕುಮಾರಸ್ವಾಮಿಗೆ ಕೊಟ್ಟಿದ್ದರು. ಮತ್ತೊಂದನ್ನ ಯಡಿಯೂರಪ್ಪನವರಿಗೆ ನೀಡಿದ್ದರು, ಇಬ್ಬರೂ ಸಿಎಂ ಆಗಿದ್ದರು. ಉಳಿದೊಂದು ಉಂಗುರವನ್ನ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದ್ದಾರೆ. ಇದಕ್ಕೆ ನಾನೇ ಸಾಕ್ಷಿ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಬಡವರಿಗೆ ಬೇಕಾಗಿರುವುದು ಅಕ್ಕಿ, ದುಡ್ಡಲ್ಲ: ಸಿಟಿ ರವಿ ವಿರುದ್ಧ ಜಾರ್ಜ್ ವಾಗ್ದಾಳಿ

    ಚುನಾವಣೆಗೂ ಮುನ್ನವೇ ನಾನು ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲವಾ? ಕುಮಾರಸ್ವಾಮಿಯವರು ಸಿಎಂ ಆಗುವುದಿಲ್ಲವಾ? ಎಂದು ಕೇಳಿದ್ದೆಕ್ಕೆ ಇಲ್ಲ ಇಲ್ಲ ಈ ಬಾರಿ ಡಿಕೆಶಿ ಸರ್ಕಾರ ಬರುವುದು ಎಂದು ಹೇಳಿದ್ದರು. ಡಿಕೆಶಿ ಕೂಡ ಮುಖ್ಯಮಂತ್ರಿ ಅಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಅಂಬೇಡ್ಕರ್ ಅಷ್ಟೆ ಅಲ್ಲ, ಭಗತ್ ಸಿಂಗ್, ರಾಜಗುರು, ಸುಖದೇವ್ ಸಹ ವಿರೋಧಿಗಳು: ಸಿ.ಟಿ ರವಿ

    ದೇವರು ಇರುವುದೇ ಬಂಡೆ ಮೂರ್ತಿಯಲ್ಲಿ:
    ಶಾಸಕ ತಮ್ಮಯ್ಯ ಹಾಗೂ ಶರವಣ ಅವರ ಮನವಿ ಪುರಸ್ಕರಿಸಿದ ವಿನಯ್ ಗುರೂಜಿ ಅವರು ಡಿಕೆಶಿ ಸಿಎಂ ಆಗುವುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಶಾಸಕ ತಮ್ಮಯ್ಯ ಮನವಿ ಮಾಡಿದ್ದು, ಅವರ ಆ ಬಯಕೆ ಈಡೇರಿಕೆಯ ದಿನಗಳು ದೂರವಿಲ್ಲ. ಡಿ.ಕೆ.ಶಿವಕುಮಾರ್ ಮಗುವಿನಂತಹ ಮನಸ್ಸಿನವರು, ಅವರು ಮಠಕ್ಕೆ ಚಿರಪರಿಚಿತರು. ದೇವರು ಇರುವುದೇ ಬಂಡೆಯ ಮೂರ್ತಿಯಲ್ಲಿ, ನಾವು ಮೊದಲು ಅದನ್ನ ಕರೆಯುವುದೇ ಬಂಡೆ ಎಂದು. ಬಂಡೆಯೊಳಗೊಂದು ಮುಗ್ಧ ಮನಸ್ಸು ಇದೆ ಎಂದು ಡಿಕೆಶಿ ಅವರನ್ನ ಹಾಡಿ ಹೊಗಳಿದ್ದಾರೆ.

  • 45 ದಿನದಲ್ಲಿ ನಿಮಗೆ ದೋಷ ಇದೆ- ವಿನಯ್ ಗುರೂಜಿ ಹೆಸರಲ್ಲಿ ಹಣ ಪೀಕೋ ದಂಧೆ

    45 ದಿನದಲ್ಲಿ ನಿಮಗೆ ದೋಷ ಇದೆ- ವಿನಯ್ ಗುರೂಜಿ ಹೆಸರಲ್ಲಿ ಹಣ ಪೀಕೋ ದಂಧೆ

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಗ್ರಾಮದ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ (Vinay Guruji) ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಕಿಡಿಗೇಡಿಗಳು ಹಣ ಪೀಕಲು ಮುಂದಾದ ಪ್ರಸಂಗ ನಡೆದಿದೆ.

    ಸಾಮಾಜಿಕ ಜಾಲತಾಣ (Social Media) ದಲ್ಲಿ ನಕಲಿ ಖಾತೆ ಸೃಷ್ಟಿಸಿರೋ ಕಿಡಿಗೇಡಿಗಳು, ಬದುಕಿನ ಬಗ್ಗೆ ಭಯ ಹುಟ್ಟಿಸುವ ಸಂದೇಶಗಳನ್ನ ಹಾಕುವ ಮೂಲಕ ಹಣಕ್ಕಾಗಿ ಪೀಡಿಸುತ್ತಿದ್ದಾರೆ.

    ಅವಧೂತ ವಿನಯ್ ಗುರೂಜಿಯೇ ಮೆಸೇಜ್ (Message) ಮಾಡಿದಂತೆ ಮಾಡಿ ನಿಮ್ಮ ಡೇಟ್ ಆಫ್ ಬರ್ತ್ ಏನು?. ನಿಮಗೆ ಕಾಳಸರ್ಪ ದೋಷವಿದೆ. ನೀವು ಒಂದು ವಾರ ಮನೆ ಬಿಟ್ಟು ಹೋಗಬಾರದು, ಪಾರ್ಕ್, ಹೊರಗಡೆ ಎಲ್ಲೂ ಹೋಗಬಾರದು. ನಿಮಗೆ ದೇವರ ಮೇಲೆ ನಂಬಿಕೆ ಇಲ್ಲ ಅನಿಸತ್ತೆ. ನಿಮ್ಮನ್ನು ದೇವರೇ ಕಾಪಾಡಬೇಕು. 45 ದಿನದಲ್ಲಿ ನಿಮಗೆ ದೋಷ ಇದೆ ಎಂದು ಭಯ ಹುಟ್ಟಿಸುವಂತಹ ಸಂದೇಶಗಳನ್ನು ಕಳುಹಿಸಿ ಹಣ ಕೀಳುವ ದಂಧೆ ಆರಂಭಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಇಲಾಖೆಯನ್ನು ಕೇಸರೀಕರಣಗೊಳ್ಳಲು ಬಿಡುವುದಿಲ್ಲ: ಡಿಕೆಶಿ

    ಈ ಸಂದೇಶಗಳ ಬಗ್ಗೆ ಸ್ಪಷ್ಟಪಡಿಸಿರೋ ಮಠದ ಸಿಬ್ಬಂದಿ ಆ ರೀತಿ ಗುರುಗಳು ಯಾರಿಗೂ ಮೆಸೇಜ್ ಮಾಡುವುದಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ಸಾಮಾಜಿಕ ಜಾಲತಾಣವನ್ನ ದುರುಪಯೋಗಪಡಿಸಿಕೊಂಡು ಮಠ, ಸ್ವಾಮಿಜಿಯ ಹೆಸರನ್ನ ಹಾಳು ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ದೂರು ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

    ಅವಧೂತ ವಿನಯ್ ಗುರೂಜಿಯವರನ್ನ ನಡೆದಾಡುವ ದೈವ ಎಂದೇ ಭಕ್ತಗಣ ಕರೆಯುತ್ತದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಹಲವು ರಾಜಕಾರಣಿಗಳು ವಿನಯ್ ಗುರೂಜಿ ಪಾದಪೂಜೆ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ವಿನಯ್ ಗುರೂಜಿ ಭಕ್ತರಾಗಿದ್ದು, ಹಲವು ಬಾರಿ ಮಠಕ್ಕೆ ಭೇಟಿ ನೀಡಿದ್ದಾರೆ.

  • ಸೀತಾಮಾತೆಗೂ ಅಗ್ನಿಪರೀಕ್ಷೆ ತಪ್ಲಿಲ್ಲ, ಇನ್ನು ನಾನ್ಯಾವ ಲೆಕ್ಕ: ಲಕ್ಷ್ಮೀ ಹೆಬ್ಬಾಳ್ಕರ್

    ಸೀತಾಮಾತೆಗೂ ಅಗ್ನಿಪರೀಕ್ಷೆ ತಪ್ಲಿಲ್ಲ, ಇನ್ನು ನಾನ್ಯಾವ ಲೆಕ್ಕ: ಲಕ್ಷ್ಮೀ ಹೆಬ್ಬಾಳ್ಕರ್

    ಚಿಕ್ಕಮಗಳೂರು: ಸೀತಾಮಾತೆಗೂ ಅಗ್ನಿಪರೀಕ್ಷೆ ತಪ್ಪಿಲ್ಲ. ಇನ್ನೂ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಯಾವ ಲೆಕ್ಕ ಎಂದು ಬೆಳಗಾವಿ (Belagavi) ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭಾವುಕದ ಮಾತುಗಳನ್ನಾಡಿದರು.

    ಭಾನುವಾರ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿ ನಯನಾ ಮೋಟಮ್ಮ ಅವರು ಮಹಿಳೆಯರಿಗಾಗಿ ಆಯೋಜಿಸಿದ್ದ ಆಶಾಕಿರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ (Ramesh Jarkiholi) ಆರೋಪ ಹಾಗೂ ಸಿಡಿ ಬಾಂಬ್ ವಿಚಾರದಿಂದ ಮನನೊಂದಂತೆ ಕಂಡ ಲಕ್ಷ್ಮೀ ಹೆಬ್ಬಾಳ್ಕರ್ ಪರೋಕ್ಷವಾಗಿ ಮಹಿಳೆಯರ ಹೋರಾಟದ ಬದುಕಿನ ಹಾದಿಯಲ್ಲಿ ಅಗ್ನಿಪರೀಕ್ಷೆ ಸಾಮಾನ್ಯ ಎಂಬ ರೀತಿಯಲ್ಲಿ ಮಾತನಾಡಿದರು. ರಾಜಕಾರಣದಲ್ಲಿ ಮಹಿಳೆಯರಿಗೆ ಬಹಳ ಕಷ್ಟ. ನಾವು ಪ್ರತಿ ಹಂತದಲ್ಲೂ ಅಗ್ನಿಪರೀಕ್ಷೆ ಎದುರಿಸಬೇಕು ಎಂದು ಭಾವನಾತ್ಮಕವಾಗಿ ಮಾತನಾಡಿದರು. ಇದನ್ನೂ ಓದಿ: ಹಳೆ ದೋಸ್ತಿಗಳ ಹೊಸ ಕುಸ್ತಿ – ಮಾತೃ ಪಕ್ಷವನ್ನು ಟಾರ್ಗೆಟ್ ಮಾಡಿದ ಗುರು, ಶಿಷ್ಯ

    ಮಹಿಳೆ ಅಂದರೆ ಸಂಘರ್ಷ. ಅದು ಮಹಿಳೆಯ ಜೊತೆಯೇ ಬರುತ್ತೆ. ಹುಟ್ಟಿನಿಂದ ಸಾಯೋವರೆಗೂ ಪರೀಕ್ಷೆಗಳನ್ನು ಹೊತ್ತುಕೊಂಡೇ ಇರಬೇಕು, ಎದುರಿಸಬೇಕು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮುಂದಿನ ಮೂರು ತಿಂಗಳು ಕೆಟ್ಟದ್ದನ್ನು ನೋಡಲ್ಲ, ಕೇಳಲ್ಲ, ಮಾತನಾಡಲ್ಲ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಬಹಳ ಸಹನೆ, ತಾಳ್ಮೆಯಿಂದ ಚುನಾವಣೆ ಎದುರಿಸಬೇಕಾಗಿದೆ. ರಮೇಶ್ ಜಾರಕಿಹೊಳಿ ಅವರು ಸಿಡಿ ವಿಚಾರದಲ್ಲಿ ನೀಡಿರುವ ಹೇಳಿಕೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಈ ಸಂಬಂಧ ಈಗಾಗಲೇ ಮಾಧ್ಯಮದವರಿಗೆ ಸ್ಪಷ್ಟನೆಯನ್ನೂ ನೀಡಿದ್ದೇನೆ. ಚುನಾವಣೆ ಹಿನ್ನೆಲೆ ಮುಂದಿನ ಮೂರು ತಿಂಗಳು ನಾನು ತಾಳ್ಮೆಯಿಂದ ಕೆಲಸ ಮಾಡಬೇಕಿದೆ. ನನ್ನ ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳಿಂದಲೇ ಮತ್ತೆ ಚುನಾವಣೆಯಲ್ಲಿ ಗೆಲ್ಲಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಕಾಂಗ್ರೆಸ್ ಸರ್ಕಾರ ಬಂದಲ್ಲಿ ಮಾತ್ರ ಮಹಿಳೆಯರಿಗೆ ಎಲ್ಲ ರೀತಿಯ ಹಕ್ಕುಗಳು ಸಿಗಲು ಸಾಧ್ಯ. ಮಹಿಳೆಯರ ಪರ ಇರುವ ಪಕ್ಷ ಕಾಂಗ್ರೆಸ್ ಆಗಿದ್ದು, ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಪಕ್ಷದಿಂದ ಮಾತ್ರ ಮಹಿಳೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು. ಇದನ್ನೂ ಓದಿ: ನನ್ನನ್ನು ಟಗರು ಅಂತಾರೆ.. ಆದ್ರೆ ನಾನು ಎಲ್ಲಾ ಜಾತಿಯ ಬಡವರ ಪರ – ಸಿದ್ದರಾಮಯ್ಯ

    ಮಾಜಿ ಸಿಎಂ ಕುಮಾರಸ್ವಾಮಿ (H.D Kumaraswamy) ಅವರು ಹೆಬ್ಬಾಳ್ಕರ್ ಬಗ್ಗೆ ನೀಡಿರುವ ಹೇಳಿಕೆ ಸಂಬಂಧ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ನನ್ನ ಅಣ್ಣನಿದ್ದಂತೆ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಯಾವ ಆಶಯವಿಟ್ಟುಕೊಂಡು ನನ್ನ ಬಗ್ಗೆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಅವರು ಏನು ಹೇಳಿದ್ದಾರೆಂಬುದನ್ನೂ ನಾನು ನೋಡಿಲ್ಲ, ಕೇಳಿಲ್ಲ. ಆದ್ದರಿಂದ ನಾನು ಅದಕ್ಕೆ ಪ್ರತಿಕ್ರಿಯೆಯನ್ನೂ ನೀಡಲ್ಲ ಎಂದರು.

    ವಿನಯ್ ಗುರೂಜಿಯವರ (Vinay guruji) ಬಗ್ಗೆ ಮಾತನಾಡಿದ ಅವರು, ವಿನಯ್ ಗೂರೂಜಿ ಹೇಳಿದಂತೆ ಆಗುತ್ತೆ. ನನ್ನ ಸೊಸೆ ಮನೆಯಲ್ಲಿ ಸೀಮಂತಕ್ಕೆ ಬರುತ್ತೇನೆ ಎಂದಿದ್ದರು. ಆಗ ನಮಗೆ ಏನೂ ಗೊತ್ತಿರಲಿಲ್ಲ. ಅವರು ಹೇಳಿದ ಮೂರೇ ದಿನಕ್ಕೆ ಸೊಸೆ ಕನ್ಸೀವ್ ಆಗಿದ್ದಳು. ನೀವು ನಗಬೇಡಿ. ನನಗೆ ನಾಚಿಕೆ ಆಗುತ್ತೆ. ನಾನು ಅಜ್ಜಿ ಆಗುತ್ತಿದ್ದೇನೆ. ಅದಕ್ಕೆ ಈಗಲೇ ವಿನಯ್ ಗೂರೂಜಿಗೆ ಆಹ್ವಾನ ನೀಡುತ್ತೇನೆ ಎಂದು ವೇದಿಕೆ ಮೇಲೆ ಸೊಸೆ ಸೀಮಂತಕ್ಕೆ ವಿನಯ್ ಗುರೂಜಿಗೆ ಆಹ್ವಾನ ನೀಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿನಯ್ ಗುರೂಜಿ ವಿರುದ್ಧ ಅಪಪ್ರಚಾರ – ಪ್ರತಿಭಟನೆಗೆ ಸಜ್ಜಾದ ಭಕ್ತವೃಂದ

    ವಿನಯ್ ಗುರೂಜಿ ವಿರುದ್ಧ ಅಪಪ್ರಚಾರ – ಪ್ರತಿಭಟನೆಗೆ ಸಜ್ಜಾದ ಭಕ್ತವೃಂದ

    ಶಿವಮೊಗ್ಗ: ಗೌರಿಗದ್ದೆಯ ವಿನಯ್ ಗುರೂಜಿ (Vinay Guruji) ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಅಪಪ್ರಚಾರ ಮಾಡುತ್ತಿದ್ದು, ಇದರ ವಿರುದ್ಧ ನ.14 ರಂದು ಪ್ರತಿಭಟನಾ (Protest) ಮೆರವಣಿಗೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ವಿನಯ್ ಗುರೂಜಿ ಭಕ್ತವೃಂದ ತಿಳಿಸಿದೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಘವೇಂದ್ರ ಹೆಬ್ಬಾರ್ ಮತ್ತು ಶಂಕರ್, ವಿನಯ್ ಗುರೂಜಿಯವರು (Vinay Guruji) ಈ ನಾಡಿನ ಧಾರ್ಮಿಕ ನಾಯಕರು. ಈ ದೇಶದ ಸಂಸ್ಕೃತಿಯ ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ದೇಶ-ವಿದೇಶಗಳಲ್ಲೂ ಅವರಿಗೆ ಭಕ್ತರಿದ್ದಾರೆ. ಇಂತಹ ವ್ಯಕ್ತಿಯ ಬಗ್ಗೆ ಇತ್ತೀಚೆಗೆ ಅಪಪ್ರಚಾರ ನಡೆಯುತ್ತಿದೆ. ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ. ಇದು ಅವರ ಭಕ್ತವೃಂದಕ್ಕೆ ತುಂಬಾ ನೋವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕರೆಂಟ್‌ ತಗುಲಿ ಕಾಮಗಾರಿ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಬಲಿ – ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ

    ಸಾಮಾಜಿಕ ಜಾಲತಾಣಗಳಲ್ಲಿ ಗುರೂಜಿಯವರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಆಪಾದನೆ ಮಾಡುವವರು ದಾಖಲೆಗಳಿದ್ದರೆ ನ್ಯಾಯಾಲಯದ ಮೊರೆ ಹೋಗಲಿ. ಸರ್ಕಾರ ಸಹ ಈ ಬಗ್ಗೆ ತನಿಖೆ ನಡೆಸಿ, ಕಾಣದ ಕೈಗಳನ್ನು ಮಟ್ಟಹಾಕಲಿ. ಸುಖಾಸುಮ್ಮನೇ ಆರೋಪ ಮಾಡುವುದು ಶೋಭೆ ತರುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ಬಾಲಕಿ ರೇಪ್‌ಕೇಸ್ – ಪ್ರಕರಣ ಭೇದಿಸಿದ ತನಿಖಾ ತಂಡಕ್ಕೆ 1 ಲಕ್ಷ ಬಹುಮಾನ

    ಆಶ್ರಮದ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುವುದು ಹವ್ಯಾಸವಾಗಿಬಿಟ್ಟಿದೆ. ಗುರೂಜಿಯವರನ್ನು ಅಪರಾಧಿ ಎಂದು ಬಿಂಬಿಸಿ ಭಕ್ತರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲಾಗುತ್ತಿದೆ. ಗುರೂಜಿಯವರ ಬೆಂಬಲಕ್ಕೆ ಭಕ್ತರಿದ್ದಾರೆ. ವಿನಯ್ ಗುರೂಜಿ ಭಕ್ತರಲ್ಲಿ ಆತ್ಮಸ್ಥೈರ್ಯ ತುಂಬಲು ನ.14ರ ಬೆಳಗ್ಗೆ 10:30ಕ್ಕೆ ಶಿವಪ್ಪನಾಯಕ ಪ್ರತಿಮೆ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ (Protest) ನಡೆಸಲಾಗುವುದು ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಂದ್ರು ಸಾವು ಪ್ರಕರಣದ ತನಿಖೆ ಚುರುಕು- ತನಿಖಾ ತಂಡದಿಂದ ವಿನಯ್ ಗುರೂಜಿ ಭೇಟಿ

    ಚಂದ್ರು ಸಾವು ಪ್ರಕರಣದ ತನಿಖೆ ಚುರುಕು- ತನಿಖಾ ತಂಡದಿಂದ ವಿನಯ್ ಗುರೂಜಿ ಭೇಟಿ

    ಚಿಕ್ಕಮಗಳೂರು: ಹೊನ್ನಾಳಿ ಶಾಕ ಎಂ.ಪಿ ರೇಣುಕಾಚಾರ್ಯ (MP Renukacharya) ಸಹೋದರನ ಪುತ್ರ ಚಂದ್ರಶೇಖರ್ (Chandashekhar) ಸಾವಿಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಸಾಕಷ್ಟು ಅನುಮಾನಗಳು ಎದ್ದಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವರದಿ ಕೇಳಿದ್ದಾರೆ.

    ಸಿಎಂ ವರದಿ ಬೆನ್ನಲ್ಲೇ ತನಿಖೆ ಚುರುಕುಗೊಂಡಿದ್ದು, ತನಿಖಾ ತಂಡ ಈಗಾಗಲೇ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿರುವ ಗೌರಿಗದ್ದೆಯ ವಿನಯ್ ಗುರೂಜಿ (Vinay Guruji) ಆಶ್ರಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದೆ. ಚನ್ನಗಿರಿ ಪಿಎಸ್‍ಐ ನೇತೃತ್ವದ ನಾಲ್ವರ ತಂಡ ಆಶ್ರಮಕ್ಕೆ ಭೇಟಿ ಕೊಟ್ಟಿದೆ. ಪ್ರಕರಣ ಸಂಬಂಧ ಈವರೆಗೂ 4 ಬಾರಿ ಪೊಲೀಸರು ಭೇಟಿ ನೀಡಿದ್ದಾರೆ. ಆಶ್ರಮದ ಸಿಬ್ಬಂದಿ, ಉಸ್ತುವಾರಿ ವಹಿಸಿರುವ ಭಕ್ತರ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಚಂದ್ರಶೇಖರ್ ಸಾವಿನ ಪ್ರಕರಣ- ಇಂದು ಹೊರಬೀಳುತ್ತಾ ಪೋಸ್ಟ್‌ ಮಾರ್ಟಂ ರಿಪೋರ್ಟ್?

    ಇತ್ತ ಚಂದ್ರು ಸಾವಿಗೆ ನಿಖರವಾದ ಕಾರಣ ಇಂದು ಹೊರಬೀಳುವ ಸಾಧ್ಯತೆ ಇದೆ. ಈಗಾಗಲೇ ಇದು ಕೊಲೆಯಲ್ಲ, ಅಪಘಾತದಿಂದ ಉಂಟಾದ ಸಾವು ಎಂಬುದು ಪೊಲೀಸ್ ಹಾಗೂ ಎಫ್‍ಎಸ್‍ಎಲ್ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗುತ್ತಿದೆ. ಆದರೆ ರೇಣುಕಾಚಾರ್ಯ ಕುಟುಂಬಸ್ಥರು ಮಾತ್ರ ಇದೊಂದು ಪೂರ್ವನಿಯೋಜಿತ ಕೊಲೆ ಅಂತ ಆರೋಪ ಮಾಡಿರೋದೇ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿರೋದು. ಇಂದು ಚಂದ್ರು ಪೋಸ್ಟ್‍ಮಾರ್ಟಂ ವರದಿ ಹಾಗೂ ಎಫ್‍ಎಸ್‍ಎಲ್ ರಿಪೋರ್ಟ್ ಪೊಲೀಸರ ಕೈ ಸೇರುವ ಸಾಧ್ಯತೆ ಇದೆ.

    ಈಗಾಗಲೇ ಘಟನೆ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆ (Honnalli Police Station) ಯಲ್ಲಿ 302 ಹಾಗೂ 201 ಕೇಸ್ ಕೂಡ ದಾಖಲಾಗಿದೆ. ಚಂದ್ರುವಿನ ಕೊಲೆಯಾಗಿದೆ, ಅಲ್ಲದೆ ಆತನನ್ನು ಕೊಲೆ ಮಾಡಿ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇತ್ತ ಎಫ್‍ಎಸ್‍ಎಲ್ ಅಧಿಕಾರಿಗಳ ಎರಡು ತಂಡ ಅಪಘಾತ ನಡೆದ ಹೊನ್ನಾಳಿ ಬಳಿ ಇರುವ ತುಂಗಾ ಮೇಲ್ದಂಡೆ ಕಾಲುವೆ ಬಳಿ ಪರಿಶೀಲನೆ ಮಾಡಿ ಎವಿಡೆನ್ಸ್ ಕಲೆಕ್ಟ್ ಮಾಡಿದ್ದಾರೆ. ಪೊಲೀಸರು ಕೂಡ ಟೆಕ್ನಿಕಲ್ ಎವಿಡೆನ್ಸ್ ಕೂಡ ಕಲೆಕ್ಟ್ ಮಾಡಿಲಾಗಿದ್ದು, ಇದೊಂದು ಅಪಘಾತ, ಓವರ್ ಸ್ಪೀಡ್‍ನಲ್ಲಿ ಬಂದ ಹಿನ್ನೆಲೆ ಚಾನಲ್ ನಲ್ಲಿ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಈ ಹೊತ್ತಲ್ಲಿ ಯಾಕೋ ಬಂದಿದ್ದೀಯಾ ಅಂತಾ ಚಂದ್ರುನನ್ನು ವಿನಯ್ ಗುರೂಜಿ ಪ್ರಶ್ನಿಸಿದ್ರು: ಆಶ್ರಮದ ಸಿಬ್ಬಂದಿ

    ಈ ಹೊತ್ತಲ್ಲಿ ಯಾಕೋ ಬಂದಿದ್ದೀಯಾ ಅಂತಾ ಚಂದ್ರುನನ್ನು ವಿನಯ್ ಗುರೂಜಿ ಪ್ರಶ್ನಿಸಿದ್ರು: ಆಶ್ರಮದ ಸಿಬ್ಬಂದಿ

    ಚಿಕ್ಕಮಗಳೂರು: ಹೊನ್ನಾಳಿ ಶಾಸಕ ರೇಣುಕಾಚಾರ್ಯ (MP Renukacharya) ಸಹೋದರನ ಪುತ್ರ ಚಂದ್ರು ನಿಗೂಢವಾಗಿ ನಾಪತ್ತೆಯಾಗಿ ಸಾವನ್ನಪ್ಪುವ ಮುನ್ನ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ವಿನಯ್ ಗುರೂಜಿ (Vinay Guruji) ಅವರ ಆಶ್ರಮಕ್ಕೆ ಬಂದಿದ್ದರು. ಈ ವೇಳೆ ವಿನಯ್ ಗುರೂಜಿ ಕೂಡ ಭೇಟಿಯಾಗಿದ್ದರು.

    ಆಶ್ರಮದ ಭಕ್ತನಾಗಿದ್ದ ಚಂದ್ರು (Chandrashekhar) ವಿಗೆ ವಿನಯ್ ಗುರೂಜಿ ಈ ಹೊತ್ತಿನಲ್ಲಿ ಯಾಕೋ ಬಂದಿದ್ದೀಯಾ ಎಂದು ಪ್ರಶ್ನೆ ಮಾಡಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ಆಶ್ರಮದಲ್ಲಿದ್ದ ಚಂದ್ರು ಹಾಗೂ ಕಿರಣ್ ಗೆ ಕೈಗೆ ಒಂದು ಹಣ್ಣನ್ನು ನೀಡಿ ಟೈಂ ಆಗಿದೆ. ಹುಷಾರಾಗಿ ಹೋಗಿ ಎಂದಿದ್ದರು. ಚಂದ್ರು ಸಾವು ವಿನಯ್ ಗುರೂಜಿಗೂ ಕೂಡ ನೋವು ತಂದಿದೆ ಎಂದು ಆಶ್ರಮದ ಸಿಬ್ಬಂದಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದರು. ಇದನ್ನೂ ಓದಿ: ಚಂದ್ರು ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ: ಸಿದ್ದರಾಮಯ್ಯ ಆಗ್ರಹ

    ಆಶ್ರಮಕ್ಕೆ ನಿತ್ಯ ಸಾವಿರಾರು ಜನ ಬರುತ್ತಾರೆ. ನಾವು ಯಾರನ್ನೂ ವಿ.ಐ.ಪಿ. ಎಂದು ಪರಿಗಣಿಸಲ್ಲ. ಚಂದ್ರು ಕೂಡ ಕಿರಣ್ ಜೊತೆ ಬಂದಿದ್ದರು, ಬರುತ್ತಿದ್ದರು. ಅವರ ಸರಳತೆ ನೋಡಿ ಇಂದು ನಮಗೆ ತುಂಬಾ ಬೇಜಾರಾಗಿದೆ. ನಿನ್ನೆಯಿಂದ ಗುರುಗಳು ತುಂಬಾ ಬೇಜಾರಾಗಿದ್ದಾರೆ. ಆಶ್ರಮದಲ್ಲಿ ಚಂದ್ರು ಊಟ ಬಡಿಸುತ್ತಿದ್ದ, ತೆಂಗಿನಕಾಯಿ ಸುಲಿಯುತ್ತಿದ್ದ. ಆದರೆ ಇಂದು ಚಂದ್ರು ಸಾವು ನಮಗೆ ತುಂಬಾ ನೋವು ತಂದಿದೆ ಎಂದು ಸಿಬ್ಬಂದಿ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]