Tag: vinay

  • Bigg Boss Kannada- ಅದೊಂದು ನೋವು ಕಾಡುತ್ತಿದೆ: ವಿನಯ್ ಬಿಚ್ಚಿಟ್ಟ ಹೃದಯಂತರಾಳ

    Bigg Boss Kannada- ಅದೊಂದು ನೋವು ಕಾಡುತ್ತಿದೆ: ವಿನಯ್ ಬಿಚ್ಚಿಟ್ಟ ಹೃದಯಂತರಾಳ

    ವಿನಯ್ (Vinay) ಮೊದಲ ಬಾರಿ ಮನಸಿನ ಮಾತನ್ನು ಹಂಚಿಕೊಂಡಿದ್ದಾರೆ. ಬಿಗ್‌ ಬಾಸ್‌ನಿಂದ (Bigg Boss Kannada) ಹೊರ ಬಂದ ಮೇಲೆ ಒಳಗಿದ್ದ ಸಂತಸ, ನೋವು, ಎಲ್ಲವನ್ನು ಹರವಿಟ್ಟಿದ್ದಾರೆ. ಗೆಲ್ಲಲೇಬೇಕೆಂದು ಅಖಾಡಕ್ಕೆ ಇಳಿದಿದ್ದ ಆನೆ ಈಗ ಏನನ್ನು ಹೇಳಿದ್ದಾರೆ ? ಯಾರನ್ನು ದೂರಿದ್ದಾರೆ ? ಯಾರನ್ನು ಹತ್ತಿರ ಬಿಟ್ಟುಕೊಂಡಿದ್ದಾರೆ ? ಸುದೀಪ್, ಸಂಗೀತಾ ಸೇರಿದಂತೆ ಎಲ್ಲರ ಬಗ್ಗೆ ಏನೇನು ಅನಿಸಿಕೆ ಹರವಿಟ್ಟಿದ್ದಾರೆ ? ಅದರ ಎಕ್ಸ್ ಕ್ಲ್ಯೂಸಿವ್  ಮಾಹಿತಿ ಇಲ್ಲಿದೆ.


    ಆನೆ ಘೀಳಿಟ್ಟಿದೆ. ಅಫ್‌ಕೋರ್ಸ್ ಬಿಗ್‌ಬಾಸ್ ಮನೆಯಲ್ಲಿದ್ದಾಗಲೇ ಆನೆ ಸುಮ್ಮನಿರಲಿಲ್ಲ. ಆಟ ಆಡುತ್ತಾ ಆಡುತ್ತಾ ರೊಚ್ಚೆಗೇಳುತ್ತಿದ್ದರು. ಸೇಮ್ ಟೈಮ್ ಇನ್ನೊಬ್ಬರನ್ನು ಅದೇ ರೀತಿ ಕೆಣಕುತ್ತಿದ್ದರು. ಅದನ್ನು ಉದ್ದೇಶ ಪೂರ್ವಕವಾಗಿ ಮಾಡಿರಲಿಲ್ಲ. ಆದರೆ ಕೆಲವರು ಹಾಗಂದುಕೊಂಡರು. ಏನಾದರೂ ಆಗಲಿ, ಕೊನೆಗೂ ಬಿಗ್‌ ಬಾಸ್ ಟಾಪ್ ಫೈವ್ ಸ್ಪರ್ಧಿಗಳಲ್ಲಿ ಒಬ್ಬರಾದರು. ಕರುನಾಡಿನಿಂದ ಶಬ್ಬಾಶ ಎನಿಸಿಕೊಂಡರು. ದಟ್ ಈಸ್ ವಿನಯ್ ಪವರ್.

    ಬಿಗ್‌ ಬಾಸ್ ಮನೆಯಲ್ಲಿ ವಿನಯ್ ಕೊನೇವರೆಗೂ ಇದ್ದರು. ಆರಂಭದಲ್ಲಿ ಇವರು ಅಷ್ಟು ದಿನ ಇರುವುದಿಲ್ಲ ಎಂದು ಎಲ್ಲರೂ ತಿಳಿದಿದ್ದರು. ಆದರೆ ಆ ನಂಬಿಕೆಯನ್ನು ಆನೆ ಸುಳ್ಳು ಮಾಡಿತು. ದಿನ ದಿನಕ್ಕೆ ಇವರು ಜನರ ಮೆಚ್ಚುಗೆ ಪಡೆಯುತ್ತಾ ಹೋದರು. ಉಳಿದ ಸ್ಪರ್ಧಿಗಳನ್ನು ಹಿಂದಿಕ್ಕಿದರು. ಅಷ್ಟೇ ಅಲ್ಲ, ಇನ್ನೇನು ಟ್ರೋಫಿ ಇವರ ಕೈಗೆ ಕಿಚ್ಚ ಕೊಡುತ್ತಾರೆ ಎಂದು ಅಂದುಕೊಂಡಿದ್ದರು ಜನರು. ಆದರೆ ಹಾಗಾಗಲಿಲ್ಲ. ಅದಕ್ಕೆ ವಿನಯ್‌ಗೆ ಬೇಸರ ಅಗುಳಿನಷ್ಟೂ ಇಲ್ಲ. ಕಾರಣ ನಾಡಿನ ತುಂಬಾ ಸಿಕ್ಕ ಪ್ರೀತಿ ಹಾಗೂ ಗೌರವ.

    ವಿನಯ್ ಮೊದಲಿಂದಲೂ ಯಾರ ಮುಲಾಜಿಗೂ ಬೀಳಲಿಲ್ಲ. ಯಾರ ಜೊತೆಯೂ ಹೀಗೆ ಇರಬೇಕೆಂದು ನಾಟಕ ಮಾಡಲಿಲ್ಲ. ನಾನು ಇರುವುದೇ ಹೀಗೆ. ಇದೇ ರೀತಿ ಆಡುತ್ತೇನೆ ಎನ್ನುತ್ತಲೇ ಎಲ್ಲರ ಮನಸನ್ನು ಗೆದ್ದರು. ಅಫ್‌ಕೋರ್ಸ್ ಇದನ್ನೇ ಸ್ಪರ್ಧಿಗಳಿಗೆ ಹೇಳಲು ಬರುವುದಿಲ್ಲ. ಯಾಕೆಂದರೆ ಸಂಗೀತಾ ಹಾಗೂ ವಿನಯ್ ಬಿಗ್‌ಬಾಸ್‌ಗೆ ಬರುವ ಮುನ್ನವೇ ಜತೆಯಾಗಿ ಕೆಲಸ ಮಾಡಿದ್ದರು. ಆದರೆ ಮನೆ ಒಳಗೆ ಕಾಲಿಟ್ಟಾಗ ಇಬ್ಬರೂ ವೈರಿಗಳು ಅನ್ನೋ ರೀತಿ ವರ್ತಿಸಲು ಆರಂಭಿಸಿದರು. ಅದಕ್ಕೆ ಕಾರಣ ಏನು?

    ಸಂಗೀತಾ ಹಾಗೂ ವಿನಯ್ ಒಂದು ಮನೆಯಲ್ಲಿ ಅಲ್ಲ. ಒಂದು ಊರಿನಲ್ಲಿ ಇರಲೂ ಸಾಧ್ಯ ಇಲ್ಲ. ಆ ಮಟ್ಟಕ್ಕೆ ಇಬ್ಬರೂ ಹಲ್ಲಲ್ಲು ಕಡಿಯುತ್ತಿದ್ದರು. ಟಾಸ್ಕ್ಗಳಲ್ಲಿ ಇಬ್ಬರೂ ಅದು ಯಾವ ರೀತಿ ಹಾಕ್ಯಾಟಕ್ಕೆ ಬಿದ್ದಿದ್ದರೆಂದು ಎಲ್ಲರಿಗೂ ಗೊತ್ತು. ಬಳೆ ಟಾಸ್ಕ್ನಲ್ಲಂತೂ ಅದು ತಾರಕಕ್ಕೆ ಮುಟ್ಟಿತ್ತು. ಸುದೀಪ್ ಕೂಡ ಇವರ ನಡುವೆ ಎಂಟ್ರಿ ಕೊಡಬೇಕಾಯಿತು. ಸಂಗೀತ ವರ್ತನೆಯೇ ನನ್ನ ಹಾಗೂ ಅವರ ನಡುವೆ ಜಗಳಕ್ಕೆ ಬುನಾದಿ ಹಾಕಿತು ಎಂದು ಸತ್ಯವನ್ನು ಒಪ್ಪಿಕೊಂಡಿದ್ದಾರೆ ವಿನಯ್. ಆನೆ.. ಇದು ಬಿಗ್‌ಬಾಸ್ ಮನೆಗೆ ಹೋದ ಮೇಲೆ ವಿನಯ್‌ಗೆ ಸಿಕ್ಕ ಬಿರುದು. ಮೊದಮೊದಲು ಅದನ್ನು ಪಾಸಿಟಿವ್ ಆಗಿಯೇ ಉಳಿದ ಸ್ಪರ್ಧಿಗಳು ಬಳಸಿಕೊಂಡರು. ವಿನಯ್ ಕೂಡ ಆನೆ ಪದವನ್ನು ಹೆಮ್ಮೆಯಿಂದ ಹೆಗಲ ಮೇಲೆ ಹೊತ್ತುಕೊಂಡರು. ಆದರೆ ದಿನ ಕಳೆದಂತೆ ಸ್ಪರ್ಧಿಗಳು ಆನೆಯನ್ನೇ ಟಾರ್ಗೆಟ್ ಮಾಡಿದರು. ಆ ಪದದಿಂದಲೇ ವಿನಯ್‌ರನ್ನು ಹಣಿಯಲು ಸಜ್ಜಾದರು. ಅದ್ಯಾಕೆ ಹಾಗಾಯಿತು? ಏನಾಯಿತು ? ಅದರಿಂದ ಒಳ್ಳೆಯದಾಯಿತಾ?

    ಇದೆಲ್ಲದರ ನಡುವೆ ವಿನಯ್ ಅದೊಂದು ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಇವರನ್ನೇನೊ ಆನೆ ಎಂದು ಕರೆದು ಬಿಟ್ಟರು. ಇದನ್ನು ಜೀವನದ ಕೊನೆವರೆಗೂ ಉಳಿಸಿಕೊಳ್ಳುತ್ತೇನೆ ಎಂದೂ ವಿನಯ್ ಹೇಳಿದ್ದಾರೆ. ಆದರೆ ಈ ಆನೆಗೆ ನಿಜವಾದ ಮಾವುತ ಯಾರು? ಯಾರಿಂದ ವಿನಯ್ ಕೊನೇವರೆಗೂ ಆಟದಲ್ಲಿ ಉಳಿದರು, ಬೆಳೆದರು, ತಪ್ಪಿದ್ದಲ್ಲಿ ತಿದ್ದಿಕೊಂಡರು? ಅದಕ್ಕೆ ಉತ್ತರ ಒಂದೇ. ಅದೇ ಕಿಚ್ಚ ಸುದೀಪ್. ಆ ಮಹಾ ಮಾವುತ ಇದ್ದದ್ದಕ್ಕಾಗಿಯೇ ನಾನು ಕರುನಾಡನ್ನು ಗೆದ್ದಿದ್ದೇನೆ ಎನ್ನುತ್ತಾರೆ ವಿನಯ್.

    ಈ ಎಲ್ಲ ಕಿತ್ತಾಟ, ಜಗಳಾಟದ ನಡುವೆ ಅದೊಂದು ನೋವು ಇವರನ್ನು ಕಾಡುತ್ತಿದೆ. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಮೇಲೂ ಜೀವವನ್ನು ಹಿಂಡುತ್ತಿದೆ. ಅದೇನು ಗೊತ್ತೆ? ಬಿಗ್‌ ಬಾಸ್‌ನ ಟಾಪ್ 2 ಸ್ಥಾನದಲ್ಲಿ ನಾನೂ ಒಬ್ಬನಾಗಿರಬೇಕಿತ್ತು. ಅದೊಂದು ಕನಸು ಕಂಡಿದ್ದೆ. ಅದ್ಯಾಕೆ ಹಾಗಾಯಿತೊ ಗೊತ್ತಾಗಲಿಲ್ಲ. ಇದು ವಿನಯ್‌ರನ್ನು ಕಾಡುತ್ತಿರುವ ನೋವು. ಕೊನೇ ಇಬ್ಬರು ಸ್ಪರ್ಧಿಗಳಲ್ಲಿ ವಿನಯ್ ಖಂಡಿತ ಇರುತ್ತಾರೆ ಎಂದೇ ಜನರು ತಿಳಿದಿದ್ದರು. ಆದರೆ ಹಾಗಾಗಲಿಲ್ಲ.

     

    ಇದು ವಿನಯ್ ಬಿಗ್‌ ಬಾಸ್ ಸೀಸನ್ 10ರ ಪಯಣ. ಇಲ್ಲಿಗೆ ಇದು ಮುಗಿದಿದೆ. ಆದರೆ ಈ ಅರಮನೆಯಿಂದ ವಿನಯ್ ಅನೇಕ ಸಂಗತಿಗಳನ್ನು ಹೊತ್ತುಕೊಂಡು ಹೊರ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಕಿಚ್ಚನ ಜೊತೆ ಬೆಳ್ಳಿ ತೆರೆ ಮೇಲೆ ಮೆರವಣಿಗೆ ಹೊರಟರೂ ಅಚ್ಚರಿ ಇಲ್ಲ. ಅದೊಂದು ಕನಸು ಈಗಲೂ ಇವರನ್ನು ನಿದ್ದೆ ಮಾಡಲು ಬಿಡುತ್ತಿಲ್ಲ. ಏನಾದರಾಗಲಿ ಬಿಗ್ ಆನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಹೊಸ ಸಾಹಸ ಮಾಡಲಿ. ಕರುನಾಡನ್ನು ಬೇರೊಂದು ರೀತಿ ಗೆದ್ದು ಬೀಗಲಿ.

  • ದೊಡ್ಮನೆಯ ಹೀರೋ, ಹೀರೋಯಿನ್, ವಿಲನ್ ಇವರೇ ಎಂದ ತುಕಾಲಿ

    ದೊಡ್ಮನೆಯ ಹೀರೋ, ಹೀರೋಯಿನ್, ವಿಲನ್ ಇವರೇ ಎಂದ ತುಕಾಲಿ

    ‘ಬಿಗ್ ಬಾಸ್’ ಕನ್ನಡ ಸೀಸನ್ 10ನಲ್ಲಿ (Bigg Boss Kannada 10) ಎಲ್ಲ ಸ್ಪರ್ಧಿಗಳ ನಗುವಿನ ಮೊತ್ತ ತೆಗೆದರೆ ಅದರ ಬಹುಪಾಲು ತುಕಾಲಿ ಸಂತೋಷ್ ಅವರಿಗೆ ಹೋಗುತ್ತದೆ. ಅಷ್ಟೇ ಅಲ್ಲ, ಮನೆಯೊಳಗಿನ ಭಿನ್ನಾಭಿಪ್ರಾಯಗಳ ಮೂಲಗಳನ್ನು ಹುಡುಕಿಕೊಂಡು ಹೋದರೆ ಅದರಲ್ಲಿಯೂ ತುಕಾಲಿ ಸಂತೋಷ್ ಅವರ ಕೊಡುಗೆ ಸಣ್ಣದಲ್ಲ. ಹೀಗೆ ನಗುನಗಿಸುತ್ತಲೇ ಚಾಣಾಕ್ಷ ತಂತ್ರವನ್ನೂ ಹೆಣೆಯುವ ವ್ಯಕ್ತಿತ್ವ ತುಕಾಲಿ ಸಂತೋಷ್ ಅವರದ್ದು. ಬಿಗ್ ಬಾಸ್‌ನ 5ನೇ ರನ್ನರ್ ಅಪ್ ಆಗಿ ಹೊಮ್ಮಿರುವ ತುಕಾಲಿ (Tukali Santhosh) ಅವರು ಜಿಯೋ ಸಿನಿಮಾ ಜೊತೆಗೆ ನಡೆಸಿದ ಸಂದರ್ಶನ ಇಲ್ಲಿದೆ.

    ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಸಂತೋಷ್ ಕುಮಾರ್ ಎಚ್.ಜಿ. ಅಲಿಯಾಸ್ ತುಕಾಲಿ ಸಂತೋಷ್ ಅವರೇ ನಿಮ್ಮ ಪ್ರೀತಿ ಪಾತ್ರ. ಈ ಸೀಸನ್‌ನಲ್ಲಿ ಟಾಪ್ 6 ಫಿನಾಲೆ ಸ್ಪರ್ಧಿಗಳಲ್ಲಿ ನಾನೂ ಒಬ್ಬ. 5ನೇ ರನ್ನರ್ ಅಪ್ ಆಗಿದ್ದೇನೆ. ನಿಮ್ಮೆಲ್ಲರ ಪ್ರೀತಿಯಿಂದ ನಾನು ಈ ಜಾಗದಲ್ಲಿದ್ದೀನಿ. ಇದನ್ನೂ ಓದಿ:ನಾನು ಫೇಕ್ ಅಲ್ಲ, ವಿಲನ್ ಅಂದ್ಕೊಂಡರೂ ಪರವಾಗಿಲ್ಲ: ವಿನಯ್ ಗೌಡ

    ಸಿಕ್ಕಾಪಟ್ಟೆ ಎಕ್ಸೈಟ್‌ಮೆಂಟ್ ಇದೆ. ನಾನು ಮನೆಗೆ ಹೋಗುವಾಗಲೇ ಅಂದುಕೊಂಡಿದ್ದೆ. ಶೋ ಮುಗಿಯುವ ದಿನವೇ ಮನೆಯಿಂದ ಹೊರಗೆ ಬರಬೇಕು ಅಂತ. ಹಾಗೇ ಆಗಿದೆ. ಗ್ರ‍್ಯಾಂಡ್ ಫಿನಾಲೆ ದಿನ ವೇದಿಕೆಯ ಮೇಲಿಂದ ಬೀಳ್ಕೊಟ್ಟು ಅಲ್ಲಿಂದ ಹೋಗಿದ್ದೇನೆ. ತುಂಬ ಖುಷಿಯಾಗುತ್ತಿದೆ.

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಪ್ರತಿಯೊಂದೂ ವಿಷಯವೂ ಸವಾಲೇ. ಆ ಎಲ್ಲ ಸವಾಲುಗಳನ್ನು ಎದುರಿಸಿ ಫಿನಾಲೆಯವರೆಗೆ ಬಂದು ಕಾಮಿಡಿಯಲ್ಲಿ ನನ್ನದೇ ಆದ ಛಾಪು ಮೂಡಿಸಿದ್ದೀನಿ. ಫೇವರೇಟ್ ಮೊಮೆಂಟ್ ಅಂದ್ರೆ ಬಿಗ್ ಬಾಸ್ ಮನೆಯಲ್ಲಿ ಮಾತ್ರೆ ತಂದುಕೊಡುತ್ತಿದ್ದದ್ದು. ಇನ್ಮೇಲಿಂದ ಮಾತ್ರೆ ತಂದ್ಕೊಡೋರು ಯಾರೋ ಅಣ್ಣಾ? ತಿಂದ್ಯಾ ಮಲಗಿದ್ಯಾ ಏನು ಮಾಡ್ದೆ ಅಂತೆಲ್ಲ ಕೇಳೋರು ಯಾರೂ ಇಲ್ಲ ಇನ್ಮೇಲೆ ಎಂದು ತುಕಾಲಿ ಮಾತನಾಡಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಅಲಾರ್ಮ್ ರೀತಿಯಲ್ಲಿ ಒಂದು ಹಾಡು ಬರುತ್ತಿತ್ತು. ನಿದ್ದೆಗಣ್ಣಲ್ಲಿದ್ರೂ ಆ ಹಾಡು ಕೇಳಿದ ತಕ್ಷಣ ರಪ್ ಅಂತ ಎಚ್ಚರ ಆಗಿಬಿಡುತ್ತದೆ. ಅದನ್ನು ತುಂಬ ಮಿಸ್ ಮಾಡ್ಕೋತೀನಿ. ಹಾಗೆಯೇ ಎಲ್ಲ ಸ್ಪರ್ಧಿಗಳನ್ನೂ ಮಿಸ್ ಮಾಡ್ಕೋತೀನಿ. ನನ್ನ ಹೆಂಡತಿ ಯಾವ್ದೋ ಲೆಟರ್ ಬರೆದಿದ್ದಾಳೆ ಅಂತ ಹೇಳಿ ತಲೆ ಮೇಲೆ ಡಬ್ಬ ಇಟ್ಕೊಂಡು ಟಾಸ್ಕ್ ಗೆದ್ದೆ. ಆ ಲೆಟರ್ ಬಂದ್ಮೇಲೆ ಗೊತ್ತಾಯ್ತು, ಏನೇನು ಬರ್ದವ್ಳೆ ಅಂತ.

    ಈ ನೂರಾ ಹನ್ನೊಂದು ದಿನಗಳಲ್ಲಿ ಮಿಸ್ ಮಾಡ್ಕೊಳ್ಳೋದು ತುಂಬ ಇದೆ. ಎಲ್ಲವನ್ನೂ ಮಿಸ್ ಮಾಡ್ಕೋತೀನಿ. ಆ ಮೆಮರಿ ಬರೀಬೇಕು ಅಂದ್ರೆ ನೂರಾಹನ್ನೊಂದು ಪಿಚ್ಚರ್ ಸ್ಟೋರಿ ಹೇಳ್ಬೇಕಾಗತ್ತೆ. ಈ ಸಲದ ಸೀಸನ್‌ನಲ್ಲಿ ಕಾರ್ತೀಕ್ (Karthik) ಹೀರೋ ಸಿನಿಮಾದಲ್ಲಿ ಹೀರೋ ಎಷ್ಟು ಮುಖ್ಯನೋ ಹಾಗೆ. ಪ್ರತಾಪ್ ಪೋಷಕ ನಟ. ಸಂಗೀತಾ ಶೃಂಗೇರಿ (Sangeetha Sringeri) ಆ ಸಿನಿಮಾದ ಹೀರೊಯಿನ್ ಇದ್ದ ಹಾಗೆ. ಹೀಯೋ- ಹೀರೋಯಿನ್ ಇದ್ದ ಮೇಲೆ ವಿನಯ್ ವಿಲನ್ ಆಗಿರಲೇಬೇಕಲ್ಲಾ ವರ್ತೂರು ಸಂತೋಷಣ್ಣ ನ್ಯಾಯ ಕೊಡುವ ದೇವರ ಥರ. ಕರ್ಣನ ಥರ ಅವರ ಬಗ್ಗೆ ಹೇಳೋಕೆ ಒಂದಾ ಎರಡಾ ಇರೋದು ತುಂಬ ಹೇಳಬಹುದು.

    ಈ ನೂರಾಹನ್ನೊಂದು ದಿನಗಳ ಮೆಮರಿಯನ್ನು ಒಂದೇ ಸಾಲಿನಲ್ಲಿ ಹೇಳಬೇಕು ಅಂದ್ರೆ, ನೆನಪುಗಳ ಮಾತು ಮಧುರ. ಬಿಗ್ ಬಾಸ್ ಐ ಮಿಸ್ ಯೂ, ಐ ಲವ್ ಯೂ ನಿಮ್ಮ ಧ್ವನಿ ನನ್ನನ್ನು ತುಂಬ ಎಚ್ಚರಗೊಳಿಸ್ತು. ಒಂದು ಅಶರೀರವಾಣಿ ನಮ್ಮನ್ನೆಲ್ಲ ಕಂಟ್ರೋಲ್ ಮಾಡಿತು ಅಂದ್ರೆ ನೀವು ಎಷ್ಟು ಸ್ಟ್ರಾಂಗ್ ಇರಬೇಕು. ನಿಮ್ಮ ಮೆಂಟಾಲಿಟಿ ಎಷ್ಟು ಸ್ಟ್ರಾಂಗ್ ಇರಬೇಕು. ನಿಮ್ಮ ಮನಸ್ಸು ಎಂಥದ್ದಿರಬೇಕು.

    ನನಗೆ ಸ್ಪಷ್ಟವಾಗಿ ಇದ್ದ ಆಸೆಗಳನ್ನು ಪೂರೈಸಿದ್ದಾರೆ. ನಾನು ಅಂದುಕೊಂಡಿದ್ದೆಲ್ಲ ಕೊಟ್ಟಿದೀರಾ. ಅದಕ್ಕಿಂತ ಹೆಚ್ಚು ಕೊಟ್ಟಿದೀರಾ. ನಾನು ನಕ್ಕಾಗ ನೀವೂ ನಕ್ಕಿದ್ದೀರಾ. ನೋವಲ್ಲಿ ನೋವು ಪಟ್ಕೊಂಡಿದ್ದೀರಾ. ನನ್ನ ಜೀವಮಾನದಲ್ಲಿ ಬಿಗ್ ಬಾಸ್ ಅನ್ನೋದು ಒಂದು ಇತಿಹಾಸ.

  • Bigg Boss Kannada: ಕಾರ್ತಿಕ್, ವಿನಯ್ ಬಗ್ಗೆ ಸಂಗೀತಾ ಹೇಳಿದ್ದೇನು?

    Bigg Boss Kannada: ಕಾರ್ತಿಕ್, ವಿನಯ್ ಬಗ್ಗೆ ಸಂಗೀತಾ ಹೇಳಿದ್ದೇನು?

    ಬಿಗ್ ಬಾಸ್ (Bigg Boss Kannada) ಮನೆಯ ಫ್ರೆಂಡ್ ಶಿಪ್ ಮತ್ತು ಜರ್ನಿಯ ಕುರಿತು ಸಂಗೀತಾ (Sangeetha) ಸಾಕಷ್ಟು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅವರ ಮನದಾಳದ ಮಾತು ಇಲ್ಲಿದೆ. ನನಗೆ ಫ್ರೆಂಡ್‌ಷಿಪ್ ಆಗೋದು ತುಂಬ ಕಷ್ಟ. ಈ ಮನೆಯಲ್ಲಿ ಪ್ರಾರಂಭದಲ್ಲಿಯೇ ಕಾರ್ತಿಕ್ ಮತ್ತು ತನಿಷಾ ಜೊತೆಗೆ ಫ್ರೆಂಡ್‌ಷಿಪ್ ಆಯ್ತು. ಸಡನ್ ಆಗಿ ಆದ ಫ್ರೆಂಡ್‌ಷಿಪ್ ಅಷ್ಟೇ ಸಡನ್ ಆಗಿ ಹೋಗುವ ಸಾಧ್ಯತೆಯೂ ಸಾಕಷ್ಟು ಇರುತ್ತವೆ. ಹಾಗೇ ಆಯ್ತು. ನನ್ನದು ಮತ್ತು ಅವರದು ಕೆಲವು ಚಕಮಕಿ ನಡೆಯಿತು. ಅದು ಕೊನೆಯವರೆಗೂ ಮುಂದುವರಿಯಿತು.

    ಅವರ ಕಡೆಯಿಂದ ಸರಿಪಡಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಅದನ್ನು ಒಪ್ಪಿಕೊಳ್ಳಲು ನಾನು ಸಿದ್ಧಳಿಲ್ಲ. ಯಾಕೆಂದರೆ ನಾನು ಅಲ್ಲಿ ಬರೀ ಗೇಮ್ ಆಡ್ತಾ ಇರ್ಲಿಲ್ಲ. ನನಗೆ ಬೇಜಾರಾಯ್ತು, ಹರ್ಟ್‌ ಆಯ್ತು ಅಂದರೆ ಅವರನ್ನು ಮಾತಾಡಿಸಲು ತುಂಬ ಕಷ್ಟವಾಗುತ್ತದೆ. ಅದನ್ನೆಲ್ಲ ಬದಿಗಿಟ್ಟು ಅವರನ್ನು ವಿನ್ನರ್ ಅಂತ ನೋಡಿದಾಗ, ಖಂಡಿತ ಅವರು ಅವ್ರ ಗೇಮ್ ಅನ್ನು ತುಂಬ ಚೆನ್ನಾಗಿ ಆಡಿದಾರೆ. ಅವರಿಗೆ ಕಂಗ್ರಾಜುಲೇಷನ್ಸ್ ಹೇಳ್ತೀನಿ.

    ವಿನಯ್ (Vinay) ನಾನು ಈ ಮೊದಲು ಒಂದು ಧಾರಾವಾಹಿಯಲ್ಲಿ ನಟಿಸಿದ್ದೆವು. ಅಲ್ಲಿಯೂ ನನಗೂ ಅವರಿಗೂ ಸುಮಾರು ಗಲಾಟೆಗಳು ನಡೆದಿದಾವೆ. ಆದರೆ ಅವ್ರು ಸಹಜವಾಗಿ ಒಳ್ಳೆಯವರು. ಒಳ್ಳೆಯ ವ್ಯಕ್ತಿತ್ವದವರು. ಸ್ವಲ್ಪ ಗಲಾಟೆಗಳು ಆಗ್ತವೆ. ನಾನೂ ಸ್ವಲ್ಪ ನೇರ ವ್ಯಕ್ತಿತ್ವದವರು. ಮುಖದ ಮೇಲೇ ಹೇಳುತ್ತೇನೆ. ಹಾಗಾಗಿಯೇ ಸ್ವಲ್ಪ ಗಲಾಟೆಗಳು ನಡೆಯುತ್ತಿತ್ತು. ಅದೇ ರೀತಿ ಮನೆಯಲ್ಲಿಯೂ ಗಲಾಟೆಗಳು ಆಗಿವೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕು ಅಂದರೆ, ಪರಸ್ಪರರ ಬಗ್ಗೆ ನಮಗೆ ಗೌರವ ಇದೆ. ಅದು ಯಾವತ್ತೂ ಇರುತ್ತದೆ ಎಂದು ಭಾವಿಸುತ್ತೇನೆ.

    ಮುಂದಿನ ದಿನಗಳಲ್ಲಿ ಫ್ರೆಂಡ್‌ಷಿಪ್‌ಗಳು ಹೇಗೆ ಮುಂದುವರಿಯುತ್ತದೆ ಎಂದು ಹೇಳುವುದು ಕಷ್ಟ. ಯಾಕೆಂದರೆ ನಾನು ಈಗಷ್ಟೇ ನೂರಹನ್ನೆರಡು ದಿನಗಳನ್ನು ಕಳೆದು ಹೊರಗೆ ಬರ್ತಿದೀನಿ. ಮನೆಯವರನ್ನು, ಸ್ನೇಹಿತರನ್ನು, ಜನರನ್ನು ಭೇಟಿಯಾಗಬೇಕು. ಹೊರಗೆ ಏನು ನಡೆಯತ್ತಿದೆ ಎಂದು ತಿಳಿದುಕೊಳ್ಳಬೇಕು. ಮನೆಯೊಳಗೆ ಒಂದು ಗೇಮ್ ಆಡ್ತಿದ್ವಿ ಅಂದುಕೊಂಡು, ಅಲ್ಲಿನ ಪ್ರೆಸ್ಟ್ರೇಷನ್, ಕೋಪ, ಸಿಟ್ಟು ಎಲ್ಲವನ್ನೂ ಅಲ್ಲೇ ಬಿಟ್ಟು ಹೊರಗೆ ಹೊಸ ಜೀವನ ಶುರುವಾಗಬಹುದು. ನೋಡಬೇಕು.

    ಜಿಯೊಸಿನಿಮಾ ಫನ್‌ಫ್ರೈಡೆ ಟಾಸ್ಕ್‌ಗಳು ನನಗೆ ಇಷ್ಟ. ಕೆಲವು ಇಟ್ಟಿಗೆಗಳನ್ನು ಇಟ್ಟುಕೊಂಡು ಪಾಸ್ ಮಾಡಿಕೊಂಡು ಹೋಗುವ ಟಾಸ್ಕ್‌ ನಂಗೆ ತುಂಬ ಇಷ್ಟವಾಗಿತ್ತು. ಅದರಲ್ಲಿ ನಾನು ಗೆದ್ದಿದ್ದೇನೆ ಕೂಡ. ಪ್ರತಿ ಸಲ ಜಿಯೊಸಿನಿಮಾ ಟಾಸ್ಕ್‌ಗೆ ಕಾಯುತ್ತಿದ್ದೆವು. ಮ್ಯೂಸಿಕಲ್ ಪಾಟ್‌ ಕೂಡ ಇಷ್ಟವಾಗಿತ್ತು. ಅದರಲ್ಲಿ ನಾನು ಪೌಲ್ ಮಾಡಿದೆ. ಆದರೆ ಹೇಳಲಿಲ್ಲ. ಆದರೂ ನಾನೇ ಒಪ್ಪಿಕೊಂಡು ಹೊರಗೆ ಬಂದಿದ್ದೆ.

    ಬಿಗ್‌ಬಾಸ್‌ ಮನೆ ನಾನು ತುಂಬ ಅಂದ್ರೆ ತುಂಬ ನೊಂದುಕೊಂಡಿದ್ದ ಜಾಗ. ಯಾವಾಗ ಹೊರಗಡೆ ಬರ್ತೀನೋ ಅಂತ ಕಾಯ್ತಿದ್ದೆ. ಯಾಕೆಂದರೆ ಕೊನೆಯ ಕೆಲವು ವಾರಗಳನ್ನು ಬಿಟ್ಟರೆ ಉಳಿದೆಲ್ಲ ದಿನಗಳಲ್ಲಿ ಇಡೀ ಮನೆಯೇ ನನ್ನ ವಿರುದ್ಧವಿತ್ತು. ಎಲ್ಲರ ಎದುರಿನಲ್ಲಿಯೂ ನಾನು ಪ್ರೂವ್ ಮಾಡಿಕೊಳ್ಳಬೇಕಾಗುತ್ತಿತ್ತು. ಆದರೆ, ಆ ಬಾತ್‌ರೂಮ್‌ ಏರಿಯಾ ಮತ್ತು ಟ್ರಿಯನ್ನು ಮಿಸ್ ಮಾಡ್ಕೋತೀನಿ. ಎಲ್ಲದಕ್ಕಿಂತ ಹೆಚ್ಚಾಗಿ ಮಿರರ್ ಅನ್ನು ಮಿಸ್ ಮಾಡ್ಕೋತೀನಿ. ನನ್ನ ಅರ್ಧ ಜರ್ನಿ ನಾನು ಅದರ ಜೊತೆಗೇ ಕಳೆದಿದ್ದೇನೆ. ಅಲ್ಲಿರುವ ದೇವಿ ವಿಗ್ರಹವನ್ನು ಮಿಸ್ ಮಾಡ್ಕೋತೀನಿ. ಅದರಿಂದ ತುಂಬ ಶಕ್ತಿ ಪಡೆದುಕೊಂಡಿದ್ದೇನೆ.

     

    ನನಗೆ ಬಿಗ್‌ಬಾಸ್‌ ಮನೆಯ ಧ್ವನಿಯ ಮೇಲೆ ಎಷ್ಟು ಕ್ರಶ್ ಇತ್ತು ಎಂದರೆ, ಕೊನೆಯ ಗಳಿಗೆಯಲ್ಲಿಯೂ ಅವರಿಗೆ ಏನಾದ್ರೂ ಮಾತಾಡಿಬಿಗ್‌ಬಾಸ್ ಎಂದು ಕೇಳಿಕೊಳ್ಳುತ್ತಿದ್ದೆ. ಅಲ್ಲದೆ ನಾನು ಯಾವಾಗ ಕುಗ್ಗಿದ್ದೆನೋ ಆಗೆಲ್ಲ ಬಿಗ್‌ಬಾಸ್ ನನಗೆ ಅಕ್ಷರಶಃ ತುಂಬ ಸಪೋರ್ಟ್‌ ಮಾಡಿದಾರೆ. ನನ್ನ ಇಡೀ ಜರ್ನಿಯಲ್ಲಿ ಅವರ ಸಪೋರ್ಟ ತುಂಬ ಇದೆ. ಅದನ್ನು ನಾನು ಎಂದೆಂದಿಗೂ ಮರೆಯಲ್ಲ.

  • ನಾನು ಫೇಕ್ ಅಲ್ಲ, ವಿಲನ್ ಅಂದ್ಕೊಂಡರೂ ಪರವಾಗಿಲ್ಲ: ವಿನಯ್ ಗೌಡ

    ನಾನು ಫೇಕ್ ಅಲ್ಲ, ವಿಲನ್ ಅಂದ್ಕೊಂಡರೂ ಪರವಾಗಿಲ್ಲ: ವಿನಯ್ ಗೌಡ

    ಬಿಗ್ ಬಾಸ್ (Bigg Boss Kannada)  ಮನೆಯಿಂದ ಹೊರ ಬಂದ ನಂತರ ಸಂಗೀತಾ ಕುರಿತಾಗಿಯೂ ಹಲವಾರು ವಿಚಾರಗಳನ್ನು ವಿನಯ್ (Vinay) ಹಂಚಿಕೊಂಡಿದ್ದಾರೆ. ಸಂಗೀತಾ ವಿಷಯ ತಗೊಂಡ್ರೆ ಸಂಗೀತಾ ಪಾರ್ವತಿಯಾಗಿ, ಸತಿಯಾಗಿ ನನ್ನ ಜೊತೆಗೆ ನಟಿಸಿದ್ದಳು. ಇಲ್ಲಿ ಬಂದಾಗ, ಮೊದಲ ವಾರದ ನಾಮಿನೇಷನ್‌ನಲ್ಲಿ ಅವ್ರು ನನ್ನ ಫ್ರೆಂಡ್ಸು, ಹಾಗಾಗಿ ನಾಮಿನೇಟ್ ಮಾಡ್ಬಾರ್ದು ಅಂತ ಇರ್ಲಿಲ್ಲ. ನಾನು ಇಲ್ಲಿಗೆ ಗೇಮ್ ಆಡೋದಿಕ್ಕೆ ಬಂದಿದ್ದೆ. ಅವರು ಮಾಡಿರುವ ತಪ್ಪುಗಳಿಗೆ ನಾಮಿನೇಟ್ ಮಾಡಿದೆ. ಫ್ರೆಂಡ್ಸ್, ಗೊತ್ತಿರೋರು, ಬಿಟ್ಟುಬಿಡೋಣ ಅಂತ ಅಂದುಕೊಳ್ಳಲಿಲ್ಲ. ಅವರಿಬ್ಬರೂ ತಪ್ಪು ಮಾಡಿದ್ರು, ನಾನು ಹೇಳಿದ ಮೇಲೂ ತಪ್ ಮಾಡಿದ್ರು, ನಾಮಿನೇಟ್ ಮಾಡಿದೆ. ಅದರಿಂದ ಅವರು ನನ್ನ ಬಗ್ಗೆ ನಕಾರಾತ್ಮಕವಾಗಿ ತಿಳಿದುಕೊಂಡರು. ಗೊತ್ತಿರೋರನ್ನೇ ನಾಮಿನೇಟ್ ಮಾಡ್ತಾನೆ. ಫ್ರೆಂಡ್ಸ್‌ನೇ ನಾಮಿನೇಟ್ ಮಾಡ್ತಾನೆ ಎಂದುಕೊಂಡರು.

    ನೂರಕ್ಕೂ ಹೆಚ್ಚು ದಿನಗಳ ಕಾಲ ಆಕ್ಟಿಂಗ್ ಮಾಡೋದಕ್ಕೆ ಆಗುವುದಿಲ್ಲ. ನೂರಕ್ಕೂ ಹೆಚ್ಚು ದಿನ ಆಕ್ಟ್ ಮಾಡಿದ್ರೂ ಆ ಆಕ್ಟಿಂಗ್‌ನ ಲೈಫ್‌ಲಾಂಗ್ ಹಾಗೇ ಮಾಡಿಕೊಂಡು ಹೋಗಬೇಕು. ಇಷ್ಟರಲ್ಲೇ ಆ ಆಕ್ಟಿಂಗ್ ಮುಗಿಯತ್ತೆ. ಯಾರು ಯಾರು ಮನೆಯೊಳಗೆ ಫೇಕ್ ಆಗಿದ್ರು ಎಂದು ನಿಮಗೆ ಗೊತ್ತಾಗತ್ತೆ. ಯಾಕೆಂದರೆ ಜೀವನಪರ್ಯಂತ ಆಕ್ಟಿಂಗ್ ಮಾಡಿಕೊಂಡು ಹೋಗೋದಕ್ಕೆ ಸಾಧ್ಯವಿಲ್ಲ. ಮನಸಾರೆ ಎಲ್ಲರಿಗೂ ಬೆಸ್ಟ್ ವಿಶಸ್ ಹೇಳ್ತೀನಿ. ಆಕ್ಟಿಂಗ್ ಕಂಟಿನ್ಯೂ ಮಾಡಿ ಲೈಫ್‌ನಲ್ಲಿ ಚೆನ್ನಾಗಿರಿ.

    ನಾನು ಎಲ್ಲಿಗೂ ಫೇಕ್ ಆಗಿಲ್ಲ. ಯಾರಿಗೆ ಎಷ್ಟು ಬೇಜಾರಾದ್ರೂ ಪರವಾಗಿಲ್ಲ. ಯಾರು ಎಷ್ಟೇ ಅಹಂಕಾರ ಎಂದು ಹೇಳಿದರೂ ಪರವಾಗಿಲ್ಲ. ಯಾರು ಎಷ್ಟೇ ವಿಲನ್ ಅಂದ್ರೂ ಪರವಾಗಿಲ್ಲ… ನಾನದನ್ನು ಒಪ್ಕೋತೀನಿ. ನಾನು ವಿಲನ್ನೇ. ಮನೆಯೊಳಗೆ ಜೆನ್ಯೂನ್ ಆಗಿ ಆಡಿದ್ದು, ನಮ್ರತಾ, ಪವಿ… ಮೈಕಲ್ ಜಂಟಲ್‌ಮನ್. ಸಿರಿ, ವರ್ತೂರು ಸಂತೋಷ್ ಹೀಗೆ ಬೆರಳೆಣಿಕೆಯಷ್ಟು ಜನರು ಮಾತ್ರವೇ ಜೆನ್ಯೂನ್ ಆಗಿದ್ರು. ಕಾರ್ತಿಕ್, ಸಂಗಿತಾ, ಮತ್ತು ಪ್ರತಾಪ್ ಟಾಪ್‌ 3ಗೆ ಹೋಗಿದ್ದಾರೆ ಅಂದ್ರೆ ಅದರ ಕ್ರೆಡಿಟ್ ನನಗೇ ಸಲ್ಲಬೇಕು. ಆ ಮೂವರೂ ನನ್ನ ಜೊತೆಗೆ ಜಗಳ ಮಾಡಿಕೊಂಡೇ, ಫೈಟ್ ಮಾಡಿಕೊಂಡೇ ಅಲ್ಲಿಗೆ ತಲುಪಿರುವುದು. ನನಗೆ ಕಾರ್ತೀಕ್ ಗೆಲ್ಲಬೇಕು ಅಂತಲೇ ಆಸೆ ಇತ್ತು.

    ಜಿಯೊಸಿನಿಮಾ ಫನ್‌ ಫ್ರೈಡೆ ಬಂತು ಅಂದ್ರೇ ಕುತೂಹಲ ನಮಗೆ. ಜಗಳ ಎಲ್ಲ ಮಾಡದೆ ಮಜಾ ಮಾಡೋಕೆ ಸಿಗತ್ತೆ ಅಂತ. ಮೊದಲ ವಾರದ ಮ್ಯೂಸಿಕಲ್ ಪಾಟ್ ಗೇಮ್ ನನಗೆ ತುಂಬ ಇಷ್ಟವಾಗಿತ್ತು. ಲಾಸ್ಟ್‌ನಲ್ಲಿ ಬಾಲ್‌ನ ಆ ಕಡೆ ಈ ಕಡೆ ತಳ್ಳುವ ಟಾಸ್ಕ್ ಚೆನ್ನಾಗಿತ್ತು. ಎಲ್ಲ ಫ್ರೈಡೇಗಳೂ ಸಖತ್ತಾಗಿದ್ದವು. ಅದಕ್ಕಾಗಿ ಕಾಯುತ್ತಿದ್ದೆವ ನಾವು. ಯಾರಿಗೆ ಏನು ಅನಿಸಿತೋ ನನಗೆ ಗೊತ್ತಿಲ್ಲ. ನಾನು ನನ್ನ ಮನಸ್ಸಿಗೆ ಮತ್ತು ನನ್ನ ಫ್ಯಾಮಿಲಿಗೆ ನಿಷ್ಠನಾಗಿದ್ದೆ. ಅಷ್ಟೇ ಸಾಕು. ಬಿಗ್‌ಬಾಸ್‌ ಮನೆಯಲ್ಲಿ ನನ್ನ ಫೆವರೇಟ್ ಮೊಮೆಂಟ್ ಅಂದರೆ ಕ್ಯಾಪ್ಟನ್ ಆಗಿದ್ದು. ಹಾಗೆಯೇ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಇನ್ನೊಂದು ಅವಿಸ್ಮರಣೀಯ ಗಳಿಗೆ. ಯಾಕೆಂದರೆ ನೂರಕ್ಕೂ ಹೆಚ್ಚು ದಿನಗಳ ಕಾಲ ಕಾದು ಕಾದು, ಇನ್ನು ಸಿಗುವುದಿಲ್ಲ ಎಂಬ ಹಂತದಲ್ಲಿ ಸಿಕ್ಕಿದ ಚಪ್ಪಾಳೆ ಅದು. ಅದರಲ್ಲಿಯೂ ಅವರು ಹೇಳಿದ ಒಂದಿಷ್ಟು ಮಾತುಗಳು ಆಳಕ್ಕೆ ನಾಟಿತು.

     

    ಬಿಗ್‌ಬಾಸ್‌ಗೆ ತುಂಬ ತುಂಬ ಥ್ಯಾಂಕ್ಸ್ ಹೇಳುವುದಕ್ಕೆ ಇಷ್ಟಪಡ್ತೀನಿ. ಎಲ್ಲೋ ಇದ್ದಿದ್ದ ನನ್ನನ್ನು ಕರೆದುಕೊಂಡು ಬಂದು, ಇಷ್ಟುದೊಡ್ಡ ವೇದಿಕೆ ಕೊಟ್ಟಿದೆ. ಇಷ್ಟು ದಿನ ನನ್ನನ್ನು ಮಹದೇವ, ಶಿವ ಎಂದು ನನ್ನ ಪಾತ್ರಗಳ ಮೂಲಕ ಗುರುತು ಹಿಡಿಯುತ್ತಿದ್ದರು. ಈಗ ಹೊರಗೆ ಬಂದಾಗ ಜನರು ನನ್ನನ್ನು ವಿನಯ್ ಎಂದು ಗುರ್ತು ಹಿಡಿಯುತ್ತಾರೆ. ಆ ವಿಷಯಕ್ಕೆ ನಾನು ಬಿಗ್‌ಬಾಸ್‌ಗೆ ಕೃತಜ್ಞನಾಗಿರುತ್ತೇನೆ.

  • Bigg Boss Kannada: ಎದುರಾಳಿ ಆನೆಯನ್ನು ಕಾರ್ತಿಕ್ ಸೋಲಿಸಿದ್ದು ಹೇಗೆ?

    Bigg Boss Kannada: ಎದುರಾಳಿ ಆನೆಯನ್ನು ಕಾರ್ತಿಕ್ ಸೋಲಿಸಿದ್ದು ಹೇಗೆ?

    ಕಾರ್ತಿಕ್ (Karthik) ಅವರ ಬಿಗ್‌ಬಾಸ್ (Bigg Boss Kannada) ಜರ್ನಿಯಲ್ಲಿ ವಿನಯ್ ಗೌಡ  (Vinay)ಅವರ ಪಾಲು ದೊಡ್ಡದಿದೆ. ಬಿಗ್‌ಬಾಸ್‌ ಷೋಗಿಂತಲೂ ಮೊದಲಿನಿಂದ, ಅಂದರೆ ಕಳೆದ ಹತ್ತು ವರ್ಷಗಳಿಂದ ಸ್ನೇಹಿತರಾಗಿದ್ದ ವಿನಯ್ ಮತ್ತು ಕಾರ್ತೀಕ್ ಸ್ನೇಹಿತರು. ಮೊದಲ ಬಾರಿಗೆ ಬಿಗ್‌ಬಾಸ್ ಮನೆಯಲ್ಲಿ ಭೇಟಿಯಾದಾಗ ವಿನಯ್, ‘ಫಿನಾಲೆ ದಿನ ಸುದೀಪ್ ಅವರ ಒಂದು ಕೈಯಲ್ಲಿ ನಿನ್ನ ಕೈ ಇದ್ದರೆ, ಇನ್ನೊಂದು ಕೈಯಲ್ಲಿ ನನ್ನ ಕೈ ಇರಬೇಕು’ ಎಂದು ಕಾರ್ತಿಕ್ ಅವರ ಹೆಗಲು ತಟ್ಟಿದ್ದರು. ಹಾಗೆಂದು ಅವರು ಎಂದು ಹೆಗಲೆಣೆಯಾಗಿ ಆಡಿಲ್ಲ. ಸದಾ ಎದುರಾಳಿಗಳಾಗಿ ಒಬ್ಬರಿಗೊಬ್ಬರು ಕೌಂಟರ್ ಕೊಟ್ಟುಕೊಂಡೇ ಆಡಿದರು. ಅದು ಕೆಲವೊಮ್ಮೆ ಅತಿರೇಕಕ್ಕೆ ಹೋಗಿದ್ದೂ ಇದೆ.

    ಹಳ್ಳಿ ಟಾಸ್ಕ್ ಆಗುವಾಗ ವಿನಯ್ ಮತ್ತು ಕಾರ್ತಿಕ್ ನಡುವೆ ಜಗಳ ತಾರಕಕ್ಕೇರಿತ್ತು. ಸಂಗೀತಾ ಮತ್ತು ವಿನಯ್ ನಡುವಿನ ಜಗಳ ನಿಲ್ಲಿಸುವಲ್ಲಿಯೂ ಕಾರ್ತಿಕ್ ಮುಖ್ಯಪಾತ್ರ ವಹಿಸಿದ್ದರು. ನಂತರ ರಾಕ್ಷಸರು ಗಂಧರ್ವರು ಟಾಸ್ಕ್‌ನಲ್ಲಿ ಇದು ಇನ್ನೊಂದು ಹಂತಕ್ಕೆ ಹೋಗಿತ್ತು. ವಿನಯ್ ರಾಕ್ಷಸನಾದಾಗ, ಕಾರ್ತಿಕ್ ಮುಖಕ್ಕೆ ಹಿಟ್ಟು ಎರೆಚಿದ್ದು ಕಾರ್ತಿಕ್ ಸಹನೆಯನ್ನು ಕೆಣಕಿತ್ತು. ಅವರು ಕೋಪದಲ್ಲಿ ನೆಲಕ್ಕೆಸೆದ ಚಪ್ಪಲಿ ವಿನಯ್ ಮೇಲೆ ಹೋಗಿ ಬಿದ್ದಿತ್ತು. ಇದು ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿತ್ತು.

    ಇಷ್ಟೆಲ್ಲ ಆದರೂ ವಿನಯ್ ಜೊತೆಗಿನ ಕಾರ್ತಿಕ್ ಸ್ನೇಹಕ್ಕೆ ಕುಂದು ಬಂದಿಲ್ಲ. ಇತ್ತೀಚೆಗಷ್ಟೇ, ‘ನಿಮ್ಮ ಜೊತೆಗೆ ಫಿನಾಲೆಯಲ್ಲಿ ಇರುವ ಇನ್ನೊಬ್ಬ ಸ್ಪರ್ಧಿ ಯಾರಾಗಿರಬೇಕು?’  ಎಂಬ ಬಿಗ್‌ಬಾಸ್ ಪ್ರಶ್ನೆಗೆ ಕಾರ್ತಿಕ್ ಆರಿಸಿಕೊಂಡಿದ್ದು ವಿನಯ್ ಅವರ ಹೆಸರನ್ನೇ.

    ಕಳೆದ ಕೆಲವು ವಾರಗಳ ಹಿಂದೆ ಕಾರ್ತಿಕ್ ನಮ್ರತಾ ನಡುವೆ ತಮಾಷೆಯ ಮಾತುಕತೆಗಳು ನಡೆಯುತ್ತಿದ್ದವು. ಕಾರ್ತಿಕ್‌, ನಮ್ರತಾ ಜೊತೆಗೆ ಡೇಟಿಂಗ್ ಹೋಗುವ ಟ್ರ್ಯಾಕ್‌ ತುಂಬ ವಾರಗಳಿಂದಲೂ ನಡೆಯುತ್ತಲೇ ಬಂದಿತ್ತು. ಹಲವು ಸಲ ಕಾರ್ತಿಕ್ ತಮಾಷೆಗಾಗಿ, ನಮ್ರತಾ ಜೊತೆಗೆ ಫ್ಲರ್ಟ್ ಮಾಡುತ್ತಿರುವಂತೆಯೇ ನಡೆದುಕೊಳ್ಳುತ್ತಿದ್ದರು. ಅದನ್ನು ನಮ್ರತಾ ಕೂಡ ಅಷ್ಟೇ ಹೆಲ್ದಿಯಾಗಿ ತೆಗೆದುಕೊಂಡು ಫ್ರಾಂಕ್ ಮಾಡುತ್ತಿದ್ದರು. ‘ಕಾರ್ತೀಕ್ ಕೈ ಹಿಡಿದುಕೊಂಡಾಗ ನನಗೇನೋ ಕಂಫರ್ಟ್‌ ಫೀಲ್ ಆಗುತ್ತದೆ. ನನಗೆ ಎಂದೂ ಅವರ ಟಚ್ ಬ್ಯಾಡ್ ಎನಿಸಿಲ್ಲ’ ಎಂದು ನಮ್ರತಾ ಹಲವು ಬಾರಿ ಹೇಳಿದ್ದರು.

    ಆದರೆ ಈ ಎಲ್ಲದಕ್ಕೂ ಹೊಸದೇ ತಿರುವು ಬಂದಿದ್ದು, ಈ ಸೀಸನ್‌ನ ಹಳೆಯ ಸ್ಪರ್ಧಿಗಳು ಮತ್ತೆ ಮನೆಯೊಳಗೆ ಬಂದಾಗ. ಒಂದೆಡೆ ಸ್ನೇಹಿತ್‌, ಮನೆಯೊಳಗೆ ಬಂದು ನಮ್ರತಾಳನ್ನು ನಿರ್ಲಕ್ಷಿಸಿದರು. ‘ನೀವು ಕಾರ್ತಿಕ್ ನಡೆಗಳು ಹೊರಗಡೆ ಅಗ್ಲಿಯಾಗಿ ಕಾಣಿಸುತ್ತಿವೆ’ ಎಂದು ಪದೇ ಪದೇ ಹೇಳಿದ್ದರು. ಕಾರ್ತೀಕ್‌ಗೆ ಕೂಡ, ‘ನಿಮ್ಮೊಳಗೊಬ್ಬ ಜಂಟಲ್‌ಮೆನ್ ನೋಡಿದ್ದೀನಿ. ಹಾಗೇ ಇರಿ’ ಎಂದಿದ್ದರು. ಸಿರಿ, ಕಾರ್ತಿಕ್ ಅವರನ್ನು ಪಕ್ಕಕ್ಕೆ ಕರೆದು ‘ನಮ್ರತಾ ಜೊತೆಗೆ ಹಾಗೆ ನಡೆದುಕೊಳ್ಳುವುದನ್ನು ಬಿಡು’ ಎಂದು ಬುದ್ಧಿ ಹೇಳಿದ್ದರು. ಇದು ತಮ್ಮ ನಡವಳಿಕೆ ಹೊರಗಿನಿಂದ ನೋಡುವವರಿಗೆ ಅಗ್ಲಿಯಾಗಿ ಕಾಣಿಸುತ್ತಿದೆ ಎಂದು ಅನಿಸುವಂತೆ ಆಯಿತು. ಅದು ಅವರನ್ನು ಸಾಕಷ್ಟು ಕುಗ್ಗಿಸಿತು ಕೂಡ.

  • Bigg Boss: 5 ಫೈನಲಿಸ್ಟ್‌ಗಳ ನಡುವೆ ಟಫ್ ಫೈಟ್- ಯಾರಿಗೆ ಸಿಗಲಿದೆ ಗೆಲುವು?

    Bigg Boss: 5 ಫೈನಲಿಸ್ಟ್‌ಗಳ ನಡುವೆ ಟಫ್ ಫೈಟ್- ಯಾರಿಗೆ ಸಿಗಲಿದೆ ಗೆಲುವು?

    ಅಂತೂ ಇಂತೂ ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ (Bigg Boss Kannada 10) ತೆರೆ ಬೀಳುವ ಸಮಯ ಬಂದಿದೆ. ದೊಡ್ಮನೆಯ ವಿನ್ನರ್ ಯಾರಾಗಬಹುದು ಎಂದು ಕನ್ನಡಿಗರು ಎದುರು ನೋಡ್ತಿದ್ದಾರೆ. ಅದಕ್ಕೆ ಉತ್ತರ, ಇಂದು (ಜ.28) ರಾತ್ರಿ ಬಿಗ್ ಬಾಸ್ ಫಿನಾಲೆ ಎಪಿಸೋಡ್‌ನಲ್ಲಿ ಸಿಗಲಿದೆ. ತುಕಾಲಿ ಸಂತು ನಂತರ ಇನ್ನೂಳಿದ 5 ಫೈನಲಿಸ್ಟ್‌ಗಳ ನಡುವೆ ಗೆಲುವಿಗಾಗಿ ಟಫ್ ಫೈಟ್ ಶುರುವಾಗಿದೆ.

    ಈ ಬಾರಿ 6 ಜನ ಸ್ಪರ್ಧಿಗಳು ಫೈನಲಿಸ್ಟ್‌ಗಳಾಗಿ ಫಿನಾಲೆಗೆ ಎಂಟ್ರಿ ಪಡೆದುಕೊಂಡಿದ್ದರು. ಇದು ಸುದೀಪ್ ಅವರು ಸ್ಪರ್ಧಿಗಳಿಗೆ ನೀಡಿದ ಉಡುಗೊರೆಯಾಗಿತ್ತು. ನಿನ್ನೆ ಎಪಿಸೋಡ್‌ನಲ್ಲಿ (ಜ.27) 6ನೇ ರನ್ನರ್ ಅಪ್ ಆಗಿ ತುಕಾಲಿ ಸಂತೋಷ್ ಹೊರಬಂದಿದ್ದಾರೆ. ಇದನ್ನೂ ಓದಿ:ಇಂದು ಹಾಸ್ಯನಟ ನಾಗಭೂಷಣ್ ಮದುವೆ

    ಸದ್ಯ ಫಿನಾಲೆ ಹಣಾಹಣಿಯಲ್ಲಿ ಕಾರ್ತಿಕ್ ಮಹೇಶ್ (Karthik Mahesh), ಸಂಗೀತಾ (Sangeetha), ಡ್ರೋನ್ ಪ್ರತಾಪ್, ವಿನಯ್, ವರ್ತೂರು ಸಂತೋಷ್ ಇದ್ದಾರೆ. ಈ 5 ಸ್ಪರ್ಧಿಗಳಲ್ಲಿ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.‌ ಇದನ್ನೂ ಓದಿ:ಹನುಮಾನ್ ಶಕ್ತಿಗೆ ಬಾಕ್ಸ್ ಆಫೀಸ್ ಉಡೀಸ್: 14 ದಿನಕ್ಕೆ 250 ಕೋಟಿ ಲೆಕ್ಕ

    5 ಜನ ಸ್ಪರ್ಧಿಗಳು ಸ್ಟ್ರಾಂಗ್ ಇದ್ದಾರೆ. ಮೈಂಡ್ ಗೇಮ್, ಜನ ಬಲ, ಟಾಸ್ಕ್ ಅಂತ ಬಂದಾಗ ಠಕ್ಕರ್ ಕೊಡುವ ಗುಣ ಎಲ್ಲವೂ ಇದೆ. ಹೀಗಿರುವಾಗ ಯಾರಿಗೆ ಗೆಲುವಿನ ಲಕ್ಷ್ಮಿ ಒಲಿಯುತ್ತಾಳೆ ಎಂಬುದು ಅಭಿಮಾನಿಗಳ ಯಕ್ಷ ಪ್ರಶ್ನೆಯಾಗಿದೆ.

    ಈ ಸೀಸನ್‌ನಲ್ಲಿರೋ ಎಕೈಕ ಮಹಿಳಾ ಸ್ಪರ್ಧಿ ಎಂದರೆ ಅದು ಸಂಗೀತಾ ಶೃಂಗೇರಿ. ಮೊದಲ ದಿನದಿಂದಲೂ ಟಫ್ ಫೈಟ್ ನೀಡುತ್ತಲೇ ಬಂದಿದ್ದಾರೆ. ವಿನಯ್, ಕಾರ್ತಿಕ್ ಏನು ಕಮ್ಮಿಯಿಲ್ಲ. ಎದುರಾಳಿಗಳಿಗೆ ಠಕ್ಕರ್ ಕೊಟ್ಟು ಬರುವ ಸ್ಪರ್ಧಿಗಳು. ವರ್ತೂರು ಸಂತೋಷ್, ಪ್ರತಾಪ್ ಸೈಲೆಂಟ್ ಆಗಿದ್ರು ಕೂಡ ಸಮಯ ಬಂದಾಗ ವೈಲೆಂಟ್ ಆಗಿ ಆಟ ಆಡಿದ್ದು ಇದೆ. ಹಾಗಾಗಿ ವಿನ್ನರ್ ಘೋಷಣೆಗೆ ಬಿಗ್ ಬಾಸ್ ಫಿನಾಲೆ ಎಪಿಸೋಡ್ ಪ್ರಸಾರ ಆಗುವವರೆಗೂ ಕಾಯಬೇಕಿದೆ.

  • Bigg Boss Kannada 10: ಫಿನಾಲೆಗೆ ಕೌಂಟ್‌ಡೌನ್, ಯಾರಾಗ್ತಾರೆ ‘ಬಿಗ್ ಬಾಸ್’ ವಿನ್ನರ್?

    Bigg Boss Kannada 10: ಫಿನಾಲೆಗೆ ಕೌಂಟ್‌ಡೌನ್, ಯಾರಾಗ್ತಾರೆ ‘ಬಿಗ್ ಬಾಸ್’ ವಿನ್ನರ್?

    ‘ಬಿಗ್ ಬಾಸ್ ಸೀಸನ್ 10′ (Bigg Boss Kannada 10) ರಿಯಾಲಿಟಿ ಶೋ ಮುಗಿಯಲು ದಿನಗಣನೆ ಶುರುವಾಗಿದೆ. ಸ್ಪರ್ಧಿಗಳೆಲ್ಲರೂ ಎಲಿಮಿನೇಟ್ ಆಗಿ ಈಗ 6 ಸ್ಪರ್ಧಿಗಳು ಫಿನಾಲೆ ವೇದಿಕೆಗೆ ತಲುಪಿದ್ದಾರೆ. ಇವರಲ್ಲಿ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

    ಫಿನಾಲೆ ದಿನ ಅಂತಿಮವಾಗಿ ಇಬ್ಬರು ಸ್ಪರ್ಧಿಗಳು ಸುದೀಪ್ ಜೊತೆ ಇರಲಿದ್ದಾರೆ. ಅವರಲ್ಲಿ ಒಬ್ಬರಿಗೆ ಮಾತ್ರ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ. ಇದೀಗ ಅಂತಿಮವಾಗಿ ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ (Drone Prathap), ವಿನಯ್, ಕಾರ್ತಿಕ್, ತುಕಾಲಿ ಸಂತೂ, ವರ್ತೂರು ಸಂತೋಷ್ (Varthur Santhosh) ಫಿನಾಲೆಗೆ ಎಂಟ್ರಿ ಪಡೆದಿದ್ದಾರೆ.

    ಇದರ ಮಧ್ಯೆ ಒಬ್ಬರ ಎಲಿಮಿನೇಷನ್ ಈ ವಾರದ ಮಧ್ಯೆ ನಡೆಯಲಿದೆ ಎಂದು ಹೇಳಲಾಗಿತ್ತು. ಅದು ಫಿನಾಲೆ ದಿನವೇ ತಿಳಿಯಲಿದೆ ಎನ್ನಲಾಗುತ್ತಿದೆ. ಸದ್ಯ ಉಳಿದುಕೊಂಡಿರುವ 6 ಜನ ಸ್ಪರ್ಧಿಗಳಲ್ಲಿ ಸಖತ್ ಪೈಪೋಟಿ ಇದೆ. ಇದನ್ನೂ ಓದಿ:ಸ್ನೇಹಿತ್ ಜೊತೆ ಫ್ರೆಂಡ್‌ಶಿಪ್ ಕಂಟಿನ್ಯೂ ಮಾಡ್ತಾರಾ? ನಮ್ರತಾ ಸ್ಪಷ್ಟನೆ

    ಈ ಹಿಂದಿನ ಸೀಸನ್‌ನಲ್ಲಿ ಹಿರಿಯ ನಟಿ ಶೃತಿ ವಿನ್ನರ್ ಆಗಿದ್ದರು. ಈ ಸೀಸನ್‌ನಲ್ಲಿ ಮಹಿಳಾ ಸ್ಪರ್ಧಿ ಸಂಗೀತಾ ಶೃಂಗೇರಿ (Sangeetha Sringeri) ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಅವರೇ ವಿನ್ನರ್ ಆಗುವ ಸಾಧ್ಯತೆಯಿದೆ ಎಂದು ಅಭಿಮಾನಿಗಳು ಲೆಕ್ಕಾಚಾರವಾಗಿದೆ. ಉಳಿದುಕೊಂಡಿರುವ ಪ್ರತಿ ಸ್ಪರ್ಧಿಗಳು ಕೂಡ ಟಫ್ ಫೈಟ್ ಕೊಡುತ್ತಿದ್ದಾರೆ.

    ಬಿಗ್ ಬಾಸ್ ಕನ್ನಡ 10 ಫಿನಾಲೆ ಇದೇ ಜನವರಿ 27, 28ರಂದು ನಡೆಯಲಿದೆ. ಅಂದು ಬಿಗ್ ಬಾಸ್ ವಿನ್ನರ್ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

  • ನೀವಿಲ್ಲ ಅಂದ್ರೆ ಈ ಸೀಸನ್ ಅಪೂರ್ಣ- ಸಂಗೀತಾ, ವಿನಯ್‌ಗೆ ಕಿಚ್ಚನ ಚಪ್ಪಾಳೆ

    ನೀವಿಲ್ಲ ಅಂದ್ರೆ ಈ ಸೀಸನ್ ಅಪೂರ್ಣ- ಸಂಗೀತಾ, ವಿನಯ್‌ಗೆ ಕಿಚ್ಚನ ಚಪ್ಪಾಳೆ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಕೊನೆಯ ಕಿಚ್ಚನ ಪಂಚಾಯಿತಿ ನಡೆದಿದೆ. ಈ ಬಾರಿ ಸಾಕಷ್ಟು ವಿಚಾರಗಳ ಬಗ್ಗೆ ಸುದೀಪ್ ಸ್ಪರ್ಧಿಗಳ ಜೊತೆ ಚರ್ಚಿಸಿದ್ದಾರೆ. ಇಡೀ ಸೀಸನ್‌ನಲ್ಲಿ ಉತ್ತಮವಾಗಿ ಆಡಿದವರಿಗೆ ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಬ್ಬರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಸಂಗೀತಾ (Sangeetha) ಮತ್ತು ವಿನಯ್‌ಗೆ (Vinay) ಕಿಚ್ಚನ ಕೊನೆಯ ಚಪ್ಪಾಳೆ ಸಿಕ್ಕಿದೆ.

    ದೊಡ್ಮನೆ ಆಟದಲ್ಲಿ ಸಂಗೀತಾ ಶೃಂಗೇರಿ, ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಫಿನಾಲೆಗೆ ಟಿಕೆಟ್ ಪಡೆದು ಫೈನಲಿಸ್ಟ್ ಆಗಿದ್ದಾರೆ. ಇನ್ನೂ ಇಬ್ಬರಿಗೆ ಮಾತ್ರ ಫಿನಾಲೆಗೆ ಬರಲು ಅವಕಾಶ ಸಿಗಲಿದೆ. ಇದರ ನಡುವೆ ಈ ಸೀಸನ್‌ನಲ್ಲಿ ವಿನಯ್- ಸಂಗೀತಾ ಇಲ್ಲ ಅಂದ್ರೆ ಸಂಪೂರ್ಣ ಅಂತ ಅನಿಸೋದಿಲ್ಲ ಎಂದು ಇಬ್ಬರಿಗೆ ಮೆಚ್ಚುಗೆ ಸಲ್ಲಿಸುತ್ತಾ ಕಿಚ್ಚನ ಚಪ್ಪಾಳೆ ನೀಡಿದ್ದಾರೆ ಸುದೀಪ್.

    ಈ ವಾರಾಂತ್ಯ ಸುದೀಪ್‌ ಮಾತನಾಡಿ,  ಕೆಲ ವಾರ ಕಿಚ್ಚನ ಚಪ್ಪಾಳೆ ಕೊಟ್ಟೆ, ಇನ್ನೂ ಕೆಲ ವಾರ ಚಪ್ಪಾಳೆ ಕೊಡಬೇಕು ಅಂತ ಅನಿಸಿರಲಿಲ್ಲ, ಕೊಡಲಿಲ್ಲ. ಈ ಜರ್ನಿಯಲ್ಲಿ ಬೈಸಿಕೊಂಡಿದ್ದಾರೆ, ತಪ್ಪು ಮಾಡಿದ್ದಾರೆ, ಅತ್ತಿದ್ದಾರೆ, ನಕ್ಕಿದ್ದಾರೆ. ಈ ಸೀಸನ್‌ನಲ್ಲಿ ವಿನಯ್, ಸಂಗೀತಾ ಇಲ್ಲ ಅಂದ್ರೆ ಸಂಪೂರ್ಣ ಅಂತ ಅನಿಸೋದಿಲ್ಲ. ಈ ಜರ್ನಿಯಲ್ಲಿ ಇಬ್ಬರಿಗೆ ಚಪ್ಪಾಳೆ ಕೊಡಲು ಇಷ್ಟಪಡ್ತಿದೀನಿ. ಅಭಿಪ್ರಾಯಗಳನ್ನು ಹೇಳಿದ್ರಿ, ಜಗಳ ಆಡಿದ್ರಿ, ತಪ್ಪು ಮಾಡಿದ್ರಿ, ಸರಿಯೂ ಮಾಡಿದ್ರಿ, ಕಿರುಚಾಡಿದ್ರಿ, ಕೆಟ್ಟವರಾಗಿದ್ರಿ. ಇಡೀ ಸೀಸನ್‌ನಲ್ಲಿ ಅದ್ಭುತವಾಗಿ ಕೊಡುಗೆ ಕೊಟ್ಟಿದ್ದೀರಿ. ಈ ಸೀಸನ್‌ನ ಕೊನೆಯ ಚಪ್ಪಾಳೆ ಸಂಗೀತಾ, ವಿನಯ್‌ಗೆ ಎಂದು ಸುದೀಪ್ ಹೇಳಿದ್ದಾರೆ.

    ಈ ಸೀಸನ್‌ನಲ್ಲಿ ಬಿದ್ದಿದ್ದೀರಿ, ಎದ್ದಿದ್ದೀರಿ. ಸೋತಿದ್ದಿರಿ, ಗೆದ್ದಿದ್ದೀರಿ ನಿಮ್ಮಿಬ್ಬರನ್ನು ಈ ಸೀಸನ್‌ನಿಂದ ತೆಗೆದು ಇಟ್ಟರೆ ಈ ಸೀಸನ್ ಅಪೂರ್ಣ. ಈ ಸೀಸನ್‌ನ್ನು ಅದ್ಭುತ ಮಾಡಿದ್ದಕ್ಕೆ ಅಭಿನಂದನೆಗಳು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ:ಜ.22 ರಂದು ಅಯೋಧ್ಯೆಗೆ ಹೋಗುತ್ತಿದ್ದು, ಬರ್ತ್‌ ಡೇ ಆಚರಿಸಿಕೊಳ್ತಿಲ್ಲ: ನಿಖಿಲ್‌

    ಕಿಚ್ಚನ ಚಪ್ಪಾಳೆ ಹೆಸರು ಬಂದಾಗ ನನಗೆ ಚಪ್ಪಾಳೆ ಸಿಗಬಹುದಾ ಅಂತ ಕಾಯುತ್ತಿದ್ದೆ. ಉತ್ತಮವೇ ಸಿಗೋದಿಲ್ಲ, ಅಂಥದರಲ್ಲಿ ಪ್ರತಿ ಸಲ ನನಗೆ ಯಾಕೆ ಚಪ್ಪಾಳೆ ಸಿಗತ್ತೆ ಅಂತ ಯೋಚನೆ ಮಾಡುತ್ತಿದ್ದೆ, ಅಮ್ಮನ ಫೋಟೋ ನೋಡಿ ದಿನಾ ಇದರ ಬಗ್ಗೆ ಹೇಳುತ್ತಿದ್ದೆ.ಈಗ ನನಗೆ ತುಂಬ ಖುಷಿಯಾಗುತ್ತಿದೆ. ಇದಕ್ಕೋಸ್ಕರ ನಾವು ಕೆಲಸ ಮಾಡಬೇಕಿಲ್ಲ, ನಾವು ನಾವಾಗಿದ್ದರೆ ಚಪ್ಪಾಳೆ ಸಿಗುತ್ತದೆ ಅಂತ ಅರ್ಥ ಆಗಿದೆ. ನನಗೂ, ವಿನಯ್‌ಗೂ ಒಟ್ಟಿಗೆ ಚಪ್ಪಾಳೆ ಸಿಕ್ಕಿರೋದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಸಂಗೀತಾ ಶೃಂಗೇರಿ ಅವರು ಹೇಳಿದ್ದಾರೆ. ಬಳಿಕ ವಿನಯ್ ಮಾತನಾಡಿ, ಎಲ್ಲಿ ಕಿಚ್ಚನ ಚಪ್ಪಾಳೆ ಕೊನೆವರೆಗೂ ಸಿಗೋದಿಲ್ವೋ ಎಂದು ಭಾವಿಸಿದ್ದೆ, ಕೊನೆಗೂ ಸಿಕ್ಕಿದೆ ಎಂದು ಸಂಭ್ರಮಿಸಿದ್ದರು.

  • ಕಾರ್ತಿಕ್‌ ಸಖತ್‌ ಕೇರಿಂಗ್‌, ಒಳ್ಳೆಯ ಹುಡುಗ ಎಂದ ನಮ್ರತಾ ಕಾಲೆಳೆದ ವಿನಯ್

    ಕಾರ್ತಿಕ್‌ ಸಖತ್‌ ಕೇರಿಂಗ್‌, ಒಳ್ಳೆಯ ಹುಡುಗ ಎಂದ ನಮ್ರತಾ ಕಾಲೆಳೆದ ವಿನಯ್

    ಬಿಗ್ ಬಾಸ್ ಶೋನ (Bigg Boss Kannada 10)  ಪ್ರತಿ ಸೀಸನ್‌ನಲ್ಲಿಯೂ ಒಬ್ಬರಲ್ಲ ಒಬ್ಬರು ಜೋಡಿಗಳಾಗಿ ಹೈಲೆಟ್‌ ಆಗುತ್ತಾರೆ. ಸ್ನೇಹಿತ್‌ ಜೊತೆ ನಮ್ರತಾ ಲವ್ವಿ ಡವ್ವಿ ಇತ್ತು. ಆದರೆ ಅವರ ಎಲಿಮಿನೇಷನ್‌ ನಂತರ ಕಾರ್ತಿಕ್‌ (Karthik) ಜೊತೆ ನಮ್ರತಾಗೆ (Namratha) ಸಲುಗೆ ಜಾಸ್ತಿ ಆಗಿದೆ. ಇದೀಗ ಕಾರ್ತಿಕ್ ಬಗೆಗಿನ ಮನದಾಳದ ಮಾತನ್ನು ವಿನಯ್‌ ಬಳಿ ಹೇಳಿಕೊಂಡಿದ್ದಾರೆ. ಆಗ ಕಾರ್ತಿಕ್‌ಗೆ ಬೀಳಬೇಡ ಅಂತ ನಮ್ರತಾಗೆ, ವಿನಯ್ (Vinay Gowda) ಕಿವಿಹಿಂಡಿದ್ದಾರೆ.

    ದೊಡ್ಮನೆಗೆ ಬರುವ ಮುನ್ನವೇ ನಮ್ರತಾ, ವಿನಯ್ ಅವರು ಒಳ್ಳೆಯ ಸ್ನೇಹಿತರು. ವಿನಯ್ ಟೀಂನಲ್ಲಿದ್ದುಕೊಂಡು ನಮ್ರತಾ ಆಟ ಆಡುತ್ತಿದ್ದಾರೆ. ಸ್ವಂತ ಅಸ್ತಿತ್ವ ಇಲ್ಲ, ವಿನಯ್ ನೆರಳಿನಲ್ಲಿ ಬದುಕುತ್ತಿದ್ದಾರೆ ಎಂದು ಮನೆಯ ಸ್ಪರ್ಧಿಗಳೇ ನಮ್ರತಾ ವಿರುದ್ಧ ಅಪಸ್ವರ ಎತ್ತಿದ್ದರು. ಯಾರು ಏನೇ ಹೇಳಿದ್ರೂ ಕೂಡ ನಾನು ನನ್ನ ಆಟವನ್ನೇ ಆಡ್ತಿದ್ದೀನಿ ಎಂದು ಹೇಳಿದ್ದರು ನಮ್ರತಾ. ಆಟ ಬೇರೆ ಫ್ರೆಂಡ್‌ಶಿಪ್ ಬೇರೆ ಎಂದು ನಮ್ರತಾ ಸಮರ್ಥನೆ ನೀಡಿದ್ದರು.

    ಇನ್ನೂ ಮೊನ್ನೆಯಷ್ಟೇ ಸದಾ ಫ್ಲಟ್ ಮಾಡೋ ಕಾರ್ತಿಕ್ ನಡೆಗೆ ನಮ್ರತಾ ಗುಡುಗಿದ್ದರು. ನನ್ನ ಮೇಲೆ ಫೀಲಿಂಗ್ಸ್ ಇಲ್ಲ ಅಂದ್ಮೇಲೆ ಯಾಕೆ ಫ್ಲರ್ಟ್ ಮಾಡುತ್ತೀರಿ ಎಂದು ಕಾರ್ತಿಕ್‌ಗೆ ನಮ್ರತಾ ಕ್ಲಾಸ್ ತೆಗೆದುಕೊಂಡಿದ್ದರು. ಬಳಿಕ ಕಾರ್ತಿಕ್, ಇನ್ನೂ ಮುಂದೆ ನಾನು ಹೀಗೆಲ್ಲಾ ವರ್ತಿಸೋದಿಲ್ಲ ಎಂದು ಕ್ಷಮೆಯಾಚಿಸಿದ್ದರು. ಈಗ ವಿನಯ್ ಬಳಿ ಕಾರ್ತಿಕ್ ಜೊತೆಗಿನ ಬಾಂಧವ್ಯದ ಬಗ್ಗೆ ನಮ್ರತಾ ಮಾತನಾಡಿದ್ದಾರೆ. ಇದನ್ನೂ ಓದಿ:ಒಟಿಟಿಯಿಂದ ನಯನತಾರಾ ನಟನೆಯ ಸಿನಿಮಾ ಡಿಲಿಟ್

    ನನಗೆ ಆರಂಭದಲ್ಲಿ ಕಾರ್ತಿಕ್ ತುಂಬಾ ಇರಿಟೇಟ್ ಅಂತ ಅನಿಸ್ತಿತ್ತು. ಈಗ ಅವರು ಒಳ್ಳೆಯ ಮನುಷ್ಯ ಅಂತ ಅನಿಸ್ತಿದೆ. ಅವರು ನನ್ನ ಕೈ ಹಿಡ್ಕೊಂಡು ಕೂತಾಗ ಕಂಫರ್ಟ್ ಅಂತ ಅನಿಸತ್ತೆ ಎಂದು ನಮ್ರತಾ ಅವರು ವಿನಯ್ ಗೌಡ ಮುಂದೆ ಹೇಳಿಕೊಂಡಿದ್ದಾರೆ. ಆಗ ವಿನಯ್ ಅವರು ನಮ್ರತಾಗೆ ಕಾರ್ತಿಕ್‌ಗೆ ಬೀಳಬೇಡ ಎಂದು ಕಿವಿಮಾತು ಹೇಳಿದ್ದಾರೆ.

    ಕಾರ್ತಿಕ್ ಸಖತ್ ಕೇರಿಂಗ್, ಸ್ವೀಟ್, ಒಳ್ಳೆಯ ಹುಡುಗ. ಮುಂಚಿನಂತೆ ಇರೀಟೇಟ್ ಆಗೋದು ನಿಂತಿದೆ. ಬಳಿಕ ಕಾರ್ತಿಕ್ ನನ್ನ ಕೈ ಹಿಡ್ಕೊಂಡು ಕೂತಾಗ ಕಂಫರ್ಟ್ ಅಂತ ಅನಿಸತ್ತೆ ಎಂದು ನಮ್ರತಾ ಅವರು ವಿನಯ್ ಬಳಿ ಹೇಳಿಕೊಂಡರು. ವಿನಯ್ ನಗುತ್ತಲೇ ನಮ್ರತಾ ಕಾಲೆಳೆದರು. ಕೂಡಲೇ ನಮ್ರತಾ, ನಮ್ಮದು ಫ್ರೆಂಡ್‌ಶಿಪ್ ಅಂತಹದ್ದೇನು ಇಲ್ಲ ಅಂತ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದರು. ಆದರೆ ನಮ್ರತಾ ನಡೆಗೆ ವೀಕ್ಷಕರು ಕನ್ಫೂಸ್‌ ಆಗಿದ್ದಾರೆ. ಕಾರ್ತಿಕ್‌ ಜೊತೆಗಿನ ನಮ್ರತಾ ಒಡನಾಟ ನೋಡಿ ಸ್ನೇಹಿತ್‌ ಕಥೆಯೇನು ಅಂತ ಕೇಳ್ತಿದ್ದಾರೆ ಅಭಿಮಾನಿಗಳು. ಎಲ್ಲದ್ದಕ್ಕೂ ಬಿಗ್‌ ಬಾಸ್‌ ಶೋ ಮುಗಿದ ಮೇಲೆಯೇ ಉತ್ತರ ಸಿಗಲಿದೆ.

  • Bigg Boss Kannada: ಡ್ರೋನ್ ಪ್ರತಾಪ್ ಎದುರು ನಿಂತು ಕ್ಷಮೆ ಕೇಳಿದ ವಿನಯ್

    Bigg Boss Kannada: ಡ್ರೋನ್ ಪ್ರತಾಪ್ ಎದುರು ನಿಂತು ಕ್ಷಮೆ ಕೇಳಿದ ವಿನಯ್

    ಬಿಗ್ ಬಾಸ್ (Bigg Boss Kannada) ಮನೆ ಅಚ್ಚರಿಗೆ ಕಾರಣವಾಗಿದೆ. ಫಿನಾಲೆಗೆ ಹೋಗೋಕೆ ಯಾರು ಅರ್ಹರು ಎನ್ನುವ ಟಾಸ್ಕ್ ವಿಚಾರವಾಗಿ ಡ್ರೋನ್ ಪ್ರತಾಪ್ (Drone Pratap) ಮತ್ತು ವಿನಯ್ (Vinay) ನಡುವೆ ಕೋಲಾಹಲವೇ ನಡೆದಿತ್ತು. ಬಿಗ್ ಬಾಸ್ ಮನೆಯಲ್ಲಿ ಜಗಳ ಕಾಮನ್ ಆಗಿದ್ದರೂ, ಈ ಬಾರಿಯ ಜಗಳ ನೋಡುಗರಿಗೂ ಅಸಹ್ಯ ಮೂಡಿಸಿತ್ತು. ಡ್ರೋನ್ ಪ್ರತಾಪ್ ಅವರಿಗೆ ವಿನಯ್ ಕೊಳಕು ಭಾಷೆಯಲ್ಲಿ ಬೈದಿದ್ದರು. ಆಡಬಾರದ ಮಾತುಗಳನ್ನು ಆಡಿದ್ದರು. ಹಾಗಾಗಿ ಮನೆಮಂದಿಯಲ್ಲ ವಿನಯ್ ಮೇಲೆ ಬೇಸರಿಸಿಕೊಂಡಿದ್ದರು.

    ಈವರೆಗೂ ಎಲಿಮಿನೇಟ್ ಆದವರಲ್ಲಿ ವಿನಯ್ ಗುಂಪಿನವರೇ ಹೆಚ್ಚಿದ್ದಾರೆ. ಇದನ್ನು ನೋಟಿಸ್ ಮಾಡಿದ್ದ ಪ್ರತಾಪ್, ‘ವಿನಯ್ ಅವರು ತಮ್ಮ ಸ್ನೇಹಿತರ ತಪ್ಪನ್ನು ತಿದ್ದಲು ಹೋಗಲಿಲ್ಲ. ಈ ಕಾರಣದಿಂದಾಗಿಯೇ ಅವರು ಮನೆಯಿಂದ ಆಚೆ ಹೋಗಬೇಕಾಯಿತು’ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಈ ಮಾತು ವಿನಯ್ ಅವರಿಗೆ ಸಾಕಷ್ಟು ಕೋಪ ತರಿಸಿತ್ತು. ಆ ಕೋಪ ಹೇಗಿತ್ತು ಅಂದರೆ, ತಮ್ಮ ಮುಂದೆ ಮೂವರು ಹುಡುಗಿಯರು ಇದ್ದಾರೆ, ಈ ಶೋ ಅನ್ನು ಕೋಟ್ಯಂತರ ಜನರು ವೀಕ್ಷಿಸ್ತಾರೆ ಎನ್ನೋದನ್ನು ಮರೆತು ಸೊಂಟದ ಕೆಳಗಿನ ಪದಗಳನ್ನು ಬಳಸಿದ್ದರು.

    ಹೌದು, ವಿನಯ್ ಅವರಿಗೆ ಕೋಪ ಬಂದರೆ, ನಾಲಿಗೆಯ ಮೇಲೆ ಹಿಡಿತವಿರುವುದಿಲ್ಲ. ಹಾಗಾಗಿ ಬಿಗ್ ಬಾಸ್ ಮನೆಯ ಬಹುತೇಕ ಸದಸ್ಯರನ್ನು ಅವರು ನಿಂದಿಸಿದ್ದಾರೆ. ಕೂಗಾಡಿ ಮನೆಯ ವಾತಾವರಣವನ್ನೇ ಹಾಳು ಮಾಡಿದ್ದಾರೆ. ಇವತ್ತು ದೋಸ್ತ್ ಅಂತ ಯಾರ ಹೆಗಲ ಮೇಲೆ ಕೈ ಹಾಕಿದ್ದರೋ, ಅವರನ್ನು ದುಸ್ಮನ್ ಅಂತಾನೂ ಕರೆದಿದ್ದಾರೆ. ತಪ್ಪಿನ ಅರಿವಾದ ನಂತರ ಮತ್ತೆ ಸ್ಸಾರಿ ಕೇಳಿದ್ದಾರೆ. ಡ್ರೋನ್ ಪ್ರತಾಪ್ ವಿಷಯದಲ್ಲೂ ಅದೇ ಆಗಿದೆ. ತಾನು ಮಾತನಾಡಿದ್ದು ತಪ್ಪು ಅಂತ ಅನಿಸಿ, ಡ್ರೋನ್ ಬಳಿ ಬಂದು ಕ್ಷಮೆ ಕೇಳಿದ್ದಾರೆ.

    ನೀನು ಫಿನಾಲೆ ವೇದಿಕೆಯ ಮೇಲೆ ಇರಬೇಕು ಅಂತ ನನಗೂ ಆಸೆ. ಅವತ್ತು ಕೋಪದಲ್ಲಿ ಬೈದೆ. ನನಗೆ ಕೋಪ ಬಂದರೆ ಏನು ಮಾಡ್ತೀನಿ ಅಂತ ಗೊತ್ತೇ ಇರಲ್ಲ. ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಇರಲಿ ಎಂದು ವಿನಯ್ ಮಾತನಾಡಿದ್ದಾರೆ. ಅಷ್ಟೇ ಪ್ರೀತಿಯಿಂದ ಡ್ರೋನ್ ಕೂಡ ಕ್ಷಮೆಯನ್ನು ಒಪ್ಪಿದ್ದಾರೆ. ಒಳ್ಳೆಯದಾಗಲಿ, ಬಿಗ್ ಬಾಸ್ ಗೆಲ್ಲಲಿ ಎಂದು ಹಾರೈಸಿದ್ದಾರೆ.