Tag: Villupuram

  • ದಲಿತರ ಪ್ರವೇಶಕ್ಕೆ ನೋ ಎಂದ ಜನ – ದೇವಸ್ಥಾನಕ್ಕೆ ಬೀಗ ಜಡಿದ ತಹಶಿಲ್ದಾರ್

    ದಲಿತರ ಪ್ರವೇಶಕ್ಕೆ ನೋ ಎಂದ ಜನ – ದೇವಸ್ಥಾನಕ್ಕೆ ಬೀಗ ಜಡಿದ ತಹಶಿಲ್ದಾರ್

    ವಿಲ್ಲುಪುರಂ: ವೈಕಾಸಿ ಹಬ್ಬದ ವೇಳೆ ದಲಿತರನ್ನ (Dalits) ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡದೆ ತಾರತಮ್ಯ ಎಸಲಾಗಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನಲೆ ತಮಿಳುನಾಡಿನ (Tamil Nadu) ವಿಲ್ಲುಪುರಂ (Villupuram) ಜಿಲ್ಲೆಯ ವೀರನಂಪಟ್ಟಿಯ ಕಾಳಿಯಮ್ಮನ ದೇವಸ್ಥಾನವನ್ನು (Kaliamman Temple) ತಾತ್ಕಾಲಿಕವಾಗಿ ಮುಚ್ಚಲಾಗಿದೆ.

    ಕಾಳಿಯಮ್ಮನ್ ದೇವಾಲಯವು ಈ ಭಾಗದಲ್ಲಿ ಪ್ರಸಿದ್ದಿಯಾಗಿದ್ದು, ಇಲ್ಲಿ ಕಾಳಿ ದೇವಿಯ ಮರದ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ದೇವಾಲಯವು ಪ್ರತಿ ವರ್ಷ ತಮಿಳುನಾಡು ಮತ್ತು ಪುದುಚೇರಿಯ ಭಕ್ತರನ್ನು ಆಕರ್ಷಿಸುತ್ತದೆ. ಈ ವರ್ಷ ವೈಕಾಸಿ ಹಬ್ಬದ ಪ್ರಯುಕ್ತ ಸುತ್ತಲಿನ ಎಂಟು ಗ್ರಾಮಗಳ ಜನರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ರಾಹುಲ್ ಮೊಹಬ್ಬತ್ ಹಿಂದೂ ಜೀವನ ಶೈಲಿಯನ್ನು ಖಂಡಿಸುತ್ತದೆಯೇ? : ಸ್ಮೃತಿ ಇರಾನಿ

    ಈ ಭಾಗದಲ್ಲಿ 80 ಕುಟುಂಬಗಳು ಪರಿಶಿಷ್ಟ ಜಾತಿಗೆ ಸೇರಿದ್ದು, ಈ ಪೈಕಿ ಕೆಲವು ಕುಟುಂಬಗಳು ದೇವಸ್ಥಾನದಲ್ಲಿ ನಮಗೆ ನಿರಂತರವಾಗಿ ಜಾತಿ ತಾರತಮ್ಯ ಮಾಡಲಾಗುತ್ತಿದೆ ಮತ್ತು ವೈಕಾಶಿ ಉತ್ಸವದಲ್ಲಿ ಭಾಗವಹಿಸಲು ಸಹ ಅನುಮತಿಸಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿವೆ. ತಾರತಮ್ಯ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.

    ಪ್ರತಿಭಟನೆ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಕಡವೂರು ತಹಶಿಲ್ದಾರ್ ಮುನಿರಾಜ್ ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಿದರು. ಸೌಹಾರ್ದಯುತ ಮಾತುಕತೆಗೆ ಒಪ್ಪದ ಹಿನ್ನಲೆ ಪರಿಹಾರ ಸಿಗುವವರೆಗೆ ದೇವಸ್ಥಾನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಘೋಷಿಸಲಾಗಿದೆ. ದೇವಸ್ಥಾನ ಯಾವಾಗ ತೆರೆಯಬಹುದು ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಇದನ್ನೂ ಓದಿ: 500 ರೂ. ನೋಟ್ ಬ್ಯಾನ್ ಮಾಡಲ್ಲ – 1,000 ರೂ. ನೋಟ್ ಪರಿಚಯಿಸುವ ಉದ್ದೇಶ ಇಲ್ಲ: RBI

    ಕಳೆದ ಎಪ್ರಿಲ್‌ನಿಂದ ಪ್ರಬಲ ಜಾತಿ ಮತ್ತು ದಲಿತರ ನಡುವೆ ಜಗಳ‌ ಹೆಚ್ಚುತ್ತಿದ್ದು, ತಮ್ಮ‌ ಮೇಲೆ ಶೋಷಣೆಯಾಗುತ್ತಿದೆ ಎಂದು ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು ಆರೋಪಿಸುತ್ತಿವೆ.

  • ತಮಿಳುನಾಡಿನಲ್ಲಿ ಕಳ್ಳಭಟ್ಟಿ ಸೇವಿಸಿ 10 ಸಾವು – 30ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ತಮಿಳುನಾಡಿನಲ್ಲಿ ಕಳ್ಳಭಟ್ಟಿ ಸೇವಿಸಿ 10 ಸಾವು – 30ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    – 7 ಪೊಲೀಸರು ಅಮಾನತು

    ಚೆನ್ನೈ: ತಮಿಳುನಾಡಿನ (Tamil Nadu) ವಿಲ್ಲುಪುರಂ (Villupuram) ಹಾಗೂ ಚೆಂಗಲ್‌ಪೇಟ್ (Chengelpet) ಜಿಲ್ಲೆಗಳಲ್ಲಿ ನಡೆದ 2 ಪ್ರತ್ಯೇಕ ಘಟನೆಗಳಲ್ಲಿ ಕಳ್ಳಭಟ್ಟಿ (Spurious liquor) ಸೇವಿಸಿ ಮೂವರು ಮಹಿಳೆಯರು ಸೇರಿದಂತೆ ಒಟ್ಟು 10 ಮಂದಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

    ವಿಲ್ಲುಪುರಂ ಜಿಲ್ಲೆಯ ಮರಕ್ಕನಂ ಪ್ರದೇಶದಲ್ಲಿ 6 ಜನರು ಸಾವನ್ನಪ್ಪಿದ್ದು, 30 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾನುವಾರ ಸಂಜೆಯ ವೇಳೆಗೆ ಚೆಂಗಲ್‌ಪೇಟ್ ಜಿಲ್ಲೆಯ ಮಧುರಾಂತಕಂ ಬಳಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    spurious_liquor

    ತಮಿಳುನಾಡಿನಲ್ಲಿ ಕಳ್ಳಭಟ್ಟಿ ದುರಂತದ ಬಳಿಕ ಒಟ್ಟು 7 ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಮರಕ್ಕನಂ ಮತ್ತು ಮದುರಾಂತಕಂ ಪ್ರದೇಶಗಳ ನಡುವೆ ಕೇವಲ 50 ಕಿಮೀ ಅಂತರವಿದ್ದು, ಎರಡು ಘಟನೆಗಳಿಗೆ ಸಂಬಂಧವಿದೆಯೇ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿಗೆ ಕರೆ ಮಾಡಿ ಸಾಂತ್ವನ ಹೇಳಿದ ಡಿಕೆ ಶಿವಕುಮಾರ್

    ವರದಿಗಳ ಪ್ರಕಾರ ಮರಕ್ಕನಂ ಬಳಿಯ ಎಕ್ಕಿಯಾರ್ ಕುಪ್ಪಂನ ನಿವಾಸಿಗಳು ಶನಿವಾರ ಸಂಜೆ ಕಳ್ಳಭಟ್ಟಿ ಸೇವಿಸಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಹಲವರು ಅಸ್ವಸ್ಥಗೊಂಡಿದ್ದು, ಅವರನ್ನು ಪುದುಚೇರಿ ಮತ್ತು ವಿಲ್ಲುಪುರಂನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಆಸ್ಪತ್ರೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಮತ್ತೊಂದು ಗ್ರಾಮದಿಂದಲೂ ಸಾವಿನ ಸುದ್ದಿಗಳು ಕೇಳಿಬಂದಿದೆ. ಇನ್ನೂ ಹಲವು ಪ್ರದೇಶದ ವಿವಿಧ ಆಸ್ಪತ್ರೆಗಳಿಗೆ ಜನರು ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಅಮ್ರಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಕೆಲವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮೃತರ ಕುಟುಂಬಗಳಿಗೆ ಸರ್ಕಾರ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಭಾರತೀಯ ಸಿಮ್‌ಕಾರ್ಡ್, ಒಟಿಪಿ ಹಂಚಿಕೆ – ಮೂವರು ಅರೆಸ್ಟ್