Tag: Villan

  • 90ರ ದಶಕದ ಬಾಲಿವುಡ್ ಖಳನಟನ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

    90ರ ದಶಕದ ಬಾಲಿವುಡ್ ಖಳನಟನ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

    ಮುಂಬೈ: 90ರ ದಶಕದ ಬಾಲಿವುಡ್ ಖಳನಟ ಮಹೇಶ್ ಆನಂದ್ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಮಹೇಶ್ ಆನಂದ್ 80 ಹಾಗೂ 90ರ ದಶಕದಲ್ಲಿ ಹಿಂದಿ ಚಿತ್ರಗಳಲ್ಲಿ ಖಳನಟರಾಗಿ ಅಭಿನಯಿಸಿದ್ದಾರೆ. ಮಹೇಶ್ ಅವರ ಸಾವಿನ ವಿಷಯ ಅಧಿಕೃತವಾಗಿ ತಿಳಿದು ಬಂದಿಲ್ಲ. ಸದ್ಯ ಅವರ ಮೃತದೇಹವನ್ನು ಕೋಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಂತರ ಇದು ಆತ್ಮಹತ್ಯೆಯೋ ಅಥವಾ ಸಹಜ ಸಾವೋ ಎಂಬುದು ತಿಳಿದು ಬರಲಿದೆ.

    ಮಹೇಶ್ ಆನಂದ್ ಮುಂಬೈನ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು, ಅವರ ಪತ್ನಿ ಮಾಸ್ಕೋದಲ್ಲಿ ವಾಸಿಸುತ್ತಿದ್ದಾರೆ. ವರದಿಗಳ ಪ್ರಕಾರ ಮಹೇಶ್ ಆರ್ಥಿಕವಾಗಿ ಕಷ್ಟಪಡುತ್ತಿದ್ದರು ಎಂದು ಹೇಳಲಾಗಿದೆ. ಸಂದರ್ಶನವೊಂದರಲ್ಲಿ ಮಹೇಶ್ ಅವರು, “ನನಗೆ 18 ವರ್ಷದಿಂದ ಯಾವುದೇ ಸಿನಿಮಾ ಆಫರ್ ಗಳು ಬರಲಿಲ್ಲ. ಕೆಲವು ಬಾರಿ ನಾನು ಊಟಕ್ಕಾಗಿ ವ್ರೆಸ್ಲಿಂಗ್ ಮ್ಯಾಚ್ ಆಡುತ್ತಿದೆ” ಎಂದು ಹೇಳಿಕೊಂಡಿದ್ದರು.

    ಮಹೇಶ್ ಕೊನೆಯದಾಗಿ ನಟ ಗೋವಿಂದ ಅವರ ‘ರಂಗೀಲಾ ರಾಜಾ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಕಳೆದ ತಿಂಗಳು ಜನವರಿಯಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾ ಬಿಡುಗಡೆ ಆದ ನಂತರ ಮಹೇಶ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ, “18 ವರ್ಷಗಳ ನಂತರ ನನ್ನ ರಂಗೀಲಾ ರಾಜಾ ಸಿನಿಮಾ ಬಿಡುಗಡೆ ಆಗಿದೆ. ನಾನು ತುಂಬಾ ಖುಷಿ ಆಗಿದ್ದೇನೆ. ನಾನು ಆ ಸಿನಿಮಾದ ಕೊನೆಯಲ್ಲಿ ಕೇವಲ 6 ನಿಮಿಷ ನಟಿಸಿದ್ದೇನೆ. ನೀವು ನನ್ನನ್ನು ಮತ್ತೆ ಸ್ವಾಗತಿಸುತ್ತೀರಿ ಎಂದುಕೊಂಡಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು.

    ಮಹೇಶ್ ಆನಂದ್ ಅವರು ಈ ಹಿಂದೆ ಕುರುಕ್ಷೇತ್ರ, ಸ್ವರ್ಗ್, ಕೂಲಿ ನಂ. 1, ವಿಜೇತ್, ಶೆಹೆನ್‍ಶಾ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮಹೇಶ್ ಬಾಲಿವುಡ್ ಹಿರಿಯ ಕಲಾವಿದರಾದ ಧರ್ಮೆಂದ್ರ, ಸನ್ನಿ ಡಿಯೋಲ್, ಸಂಜಯ್ ದತ್, ಗೋವಿಂದ ಹಾಗೂ ಅಮಿತಾಬ್ ಬಚ್ವನ್ ಸೇರಿದಂತೆ ಹಲವು ಹಿಂದಿ ಸೂಪರ್ ಸ್ಟಾರ್‍ಗಳ ಜೊತೆ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಲ್ಮಾನ್ ಖಾನ್‍ಗೆ ವಿಲನ್ ಆದ ಕಿಚ್ಚ ಸುದೀಪ್..!

    ಸಲ್ಮಾನ್ ಖಾನ್‍ಗೆ ವಿಲನ್ ಆದ ಕಿಚ್ಚ ಸುದೀಪ್..!

    ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ನಟನೆ ‘ದಬಾಂಗ್ 3’ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಲನ್ ಆಗಿ ನಟಿಸುತ್ತಿದ್ದಾರೆ.

    ಸಲ್ಮಾನ್ ಖಾನ್ ನಟನೆಯ ದಬಾಂಗ್ ಹಾಗೂ ದಬಾಂಗ್ -2 ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಯಶಸ್ಸು ಕಂಡ ಸಿನಿಮಾಗಳು. ಈಗ ಈ ಸಿನಿಮಾದ ಮೂರನೇ ಭಾಗ ಬರುತ್ತಿದ್ದು, ಈ ಚಿತ್ರದಲ್ಲಿ ಸುದೀಪ್ ಅವರು ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಸುದೀಪ್ ಹಾಗೂ ಸಲ್ಮಾನ್ ಖಾನ್ ಅವರು ಬಹಳ ದಿನದಿಂದ ಸಿನಿಮಾದಲ್ಲಿ ಒಟ್ಟಿಗೆ ನಟಿಸಬೇಕೆಂದು ಪ್ಲಾನ್ ಮಾಡಿಕೊಂಡಿದ್ದರು. ಆದರೆ ಈಗ ಇಬ್ಬರಿಗೂ ಒಂದೇ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.

    ನಿರ್ದೇಶಕ ಪ್ರಭುದೇವ ಅವರು ಈಗಾಗಲೇ ಸುದೀಪ್ ಅವರಿಗೆ ಈ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಸುದೀಪ್ ಕೂಡ ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ದಬಾಂಗ್-3 ಚಿತ್ರವನ್ನು ಸಲ್ಮಾನ್ ಸಹೋದರ, ನಿರ್ಮಾಪಕ ಅರ್ಬಾಜ್ ಖಾನ್ ನಿರ್ಮಿಸುತ್ತಿದ್ದು, ಏಪ್ರಿಲ್‍ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ನಟಿ ಸೋನಾಕ್ಷಿ ಸಿನ್ಹಾ ಈ ಚಿತ್ರದಲ್ಲೂ ಕೂಡ ಸಲ್ಮಾನ್ ಖಾನ್‍ಗೆ ಪತ್ನಿಯಾಗಿ ನಟಿಸುತ್ತಿದ್ದಾರೆ.

    ಇತ್ತೀಚೆಗೆ ಸಲ್ಮಾನ್ ಖಾನ್ ಅವರು ಟ್ವೀಟ್ ಮಾಡುವ ಮೂಲಕ ನಟ ಸುದೀಪ್ ಅವರಿಗೆ `ಪೈಲ್ವಾನ್’ ಸಿನಿಮಾದ ಟೀಸರ್ ಗಾಗಿ ಅಭಿನಂದನೆ ತಿಳಿಸಿದ್ದರು. ಸಿನಿಮಾ ಟೀಸರ್ ನ ಯೂಟ್ಯೂಬ್ ಲಿಂಕ್ ಹಾಕಿ, ಕಿಚ್ಚ ಸುದೀಪ್ ನೀವು ನಮ್ಮ ಪ್ರಯತ್ನವನ್ನು ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಆಲ್ ದಿ ಬೆಸ್ಟ್ ಪೈಲ್ವಾನ್ ಹಾಗೂ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದರು.

    ಈ ಟ್ವೀಟ್‍ಗೆ ಕಿಚ್ಚ ಸುದೀಪ್ ಆಶ್ಚರ್ಯಗೊಂಡು, “ಸರ್ ಇದು ನಿಜಾನಾ. ಸುಲ್ತಾನ್ ನನಗೆ ಟ್ವೀಟ್ ಮಾಡಿದ್ದಾರೆ. ನೀವು ನನ್ನ ಈ ದಿನವನ್ನು ಅದ್ಭುತವಾಗಿ ಮಾಡಿದ್ದೀರಿ. ಧನ್ಯವಾದಗಳು” ಎಂದು ಸಲ್ಮಾನ್ ಅವರ ಟ್ವೀಟ್‍ಗೆ ರೀ-ಟ್ವೀಟ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್ ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ ಯಶ್ ವಿಲನ್‍ಗಳು!

    ಕೆಜಿಎಫ್ ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ ಯಶ್ ವಿಲನ್‍ಗಳು!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಕೆಜಿಎಫ್ ಚಿತ್ರದ ಸೆಟ್‍ನಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಚಿತ್ರದಲ್ಲಿ ಯಶ್ ವಿಲನ್‍ಗಳ ದೊಡ್ಡ ಗುಂಪಿನ ಜೊತೆ ಸೆಣಸಾಡಿದೆ.

    ಸಿನಿಮಾಗಳಲ್ಲಿ ನಾಯಕ ನಟರ ಜೊತೆ ಮೂರ್ನಾಲ್ಕು ಜನ ವಿಲನ್‍ಗಳು ಹೊಡೆದಾಡ್ತಾರೆ. ಆದರೆ ಕೆಜಿಎಫ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ವಿಲನ್‍ಗಳ ದೊಡ್ಡ ಗುಂಪುವೊಂದು ಹೊಡೆದಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

    ಕೆಜಿಎಫ್ ಸಿನಿಮಾ ಲಾರ್ಜ್ ಸ್ಕೇಲ್‍ನಲ್ಲಿ ಪಿರಿಯಾಡಿಕ್ ಕಾನ್ಸೆಪ್ಟ್ ನಲ್ಲಿ ತಯಾರಾಗುತ್ತಿದೆ. 70-80ರ ದಶಕದ ಚಿತ್ರದ ಹೀರೋ ಆಗಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ ಪವರ್ ಖದರ್ ಗೆ ಸರಿಹೊಂದುವ ಕಟ್ಟುಮಸ್ತಾದ ದೇಹ ಒಂದೇ ನೋಟಕ್ಕೆ ಸಿನಿಪ್ರಿಯರು ಥ್ರಿಲ್ಲಾಗುವಂತಹ ಖಳನಟರನ್ನು ನಿರ್ದೇಶಕ ಪ್ರಶಾಂತ್ ನೀಲ್ ಹುಡುಕಿ ತಂದಿದ್ದಾರೆ.

    ದೈತ್ಯದೇಹ, ಎಣ್ಣೆಗೆಂಪು ಬಣ್ಣದ ನೂರಾರು ಜನ ವಿಲನ್‍ಗಳು ಕೆಜಿಎಫ್‍ನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜಬರ್ದಸ್ತ್ ಆಗಿರುವ ಕೆಜಿಎಫ್ ವಿಲನ್‍ಗಳ ಫೋಟೋ ಸಖತ್ ವೈರಲ್ ಆಗುತ್ತಿದೆ. ವಿಶೇಷವೆನೆಂದರೆ ಯಶ್ ಜೊತೆ ಹೊಡೆದಾಡಿರುವ ಎಲ್ಲ ವಿಲನ್‍ಗಳು ಹೊಸ ಪ್ರತಿಭೆಗಳು ಎಂದು ಹೇಳಲಾಗಿದೆ.

    ಹಳೆಯ ಕಲಾವಿದರ ಜೊತೆ ನೂರಾರು ಹೊಸ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಒಟ್ಟಿನಲ್ಲಿ ವಿಲನ್ ಗಳ ಸಂಖ್ಯೆ ಕೆಜಿಎಫ್ ಸಿನಿಮಾದಲ್ಲಿ ದೊಡ್ಡದಿದ್ದು, ರಾಖಿ ಭರ್ಜರಿಯಾಗಿಯೇ ಶತ್ರುಗಳ ಜೊತೆ ಹೊಡೆದಿದ್ದಾರೆ. ಭರಪೂರ ಮನರಂಜನೆ ಜೊತೆಗೆ ಕಿಕ್ ಕೊಡುವ ಸಾಹಸ ದೃಶ್ಯಗಳು ಈ ಸಿನಿಮಾದಲ್ಲಿದೆ ಎಂಬುದು ತಿಳಿದುಬಂದಿದೆ.

  • ನಿರ್ದೇಶಕ ಸೂರಿಗೆ ಬೆದರಿಕೆ ಹಾಕಿದ ಹುಚ್ಚ ವೆಂಕಟ್!- ವಿಡಿಯೋ

    ನಿರ್ದೇಶಕ ಸೂರಿಗೆ ಬೆದರಿಕೆ ಹಾಕಿದ ಹುಚ್ಚ ವೆಂಕಟ್!- ವಿಡಿಯೋ

    ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ `ಟಗರು’ ಚಿತ್ರ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದರೆ, ಇತ್ತ ಚಿತ್ರದ ನಿರ್ದೇಶಕರ ವಿರುದ್ಧ ಹುಚ್ಚ ವೆಂಕಟ್ ಕಿಡಿಕಾರಿದ್ದಾರೆ. ಸದ್ಯ ವೆಂಕಟ್ ಸೂರಿಗೆ ಎಚ್ಚರಿಕೆ ನೀಡಿರೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಿನಿಮಾದಲ್ಲಿ ವಿಲನ್ ಗಳು ನಾಯಕ ನಟ ಶಿವರಾಜ್ ಕುಮಾರ್ ಅವರಿಗೆ ಅವಾಚ್ಯ ಪದಗಳಿಂದ ಬೈಯ್ಯುವ ಸನ್ನಿವೇಶಗಳಿವೆ. ಇದರಿಂದ ಶಿವಣ್ಣ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದೀಗ ಹುಚ್ಚ ವೆಂಕಟ್ ಕೂಡಾ ರೊಚ್ಚಿಗೆದ್ದಿದ್ದಾರೆ. ಇದನ್ನೂ ಓದಿ: ಪೊಗದಸ್ತಾದ ಟಗರು!

    ವಿಲನ್‍ಗಳು ಶಿವಣ್ಣನಿಗೆ ಹೇಳಿದ ಡೈಲಾಗ್ ಕೇಳಿ ಹುಚ್ಚ ವೆಂಕಟ್ ನಿರ್ದೇಶಕ ಸೂರಿ ಅವರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಚಿತ್ರದಲ್ಲಿ ಶಿವಣ್ಣನಿಗೆ ಉಪಯೋಗಿಸಿದ ಅವಾಚ್ಯ ಪದಗಳನ್ನು ಮ್ಯೂಟ್ ಮಾಡಬೇಕು. ಇಲ್ಲದಿದ್ದರೆ ನನ್ನ ಹುಡುಗರು ನಿನ್ನನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪೊಗದಸ್ತಾದ ಟಗರು ನೋಡಿ ಜಬರ್ದಸ್ತಾದ ಹೇರ್ ಕಟ್ ಮಾಡಿಸ್ಕೊಂಡ ಅಭಿಮಾನಿ

    ಈ ಡೈಲಾಗ್‍ಗಳನ್ನು ನೀನು ಕೂಡಲೇ ಮ್ಯೂಟ್ ಮಾಡದಿದ್ದರೆ ಮುಂದಾಗುವ ಪರಿಣಾಮಗಳಿಗೆ ನಾನು ಜವಾಬ್ದಾರನಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಶಿವರಾಜ್‍ಕುಮಾರ್ ಎಂದರೆ ನನಗೆ ಇಷ್ಟ. ಇಷ್ಟಪಡುವವರಿಗೆ ಪ್ರಾಣ ಬೇಕಾದ್ರೂ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಗರು ನಿರ್ದೇಶಕ ಸೂರಿ ವಿರುದ್ಧ ಶಿವರಾಜ್ ಕುಮಾರ್ ಅಭಿಮಾನಿಗಳು ಗರಂ

    https://www.youtube.com/watch?v=p6H6cBKSaPQ

  • ಕನ್ನಡಕ್ಕೆ ಬರಲಿದ್ದಾರಾ ಬಾಲಿವುಡ್ ಸಂಜಯ್ ದತ್?

    ಕನ್ನಡಕ್ಕೆ ಬರಲಿದ್ದಾರಾ ಬಾಲಿವುಡ್ ಸಂಜಯ್ ದತ್?

    ಬೆಂಗಳೂರು: ಬಾಲಿವುಡ್ ಕಲಾವಿದರು ಸಾಕಷ್ಟು ಮಂದಿ ಸ್ಯಾಂಡಲ್‍ ವುಡ್ ನಲ್ಲಿ ನಟಿಸಿದ್ದಾರೆ. ಆದರೆ ಈಗ ಸಂಜಯ್ ದತ್ ಕನ್ನಡ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.

    ವಿನೋದ್ ಪ್ರಭಾಕರ್ ಅಭನಯಿಸುತ್ತಿರುವ `ಮುಧೋಳ’ ಚಿತ್ರದಲ್ಲಿ ಸಂಜಯ್ ದತ್ತ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಚಿತ್ರತಂಡ ಈ ಸುದ್ದಿಯ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

    ಈ ಚಿತ್ರವನ್ನು ನಟ ಕಮ್ ನಿರ್ದೇಶಕ ಮೋಹನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರಕ್ಕೆ ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಕರೆತರಲು ಮೋಹನ್ ಪ್ರಯತ್ನಿಸಿದ್ದಾರೆ. ಆದರೆ ಈ ಚಿತ್ರಕ್ಕೆ ಸಂಜಯ್ ಅವರು ಅಭಿನಯಿಸುತ್ತಾರಾ ಅಥವಾ ಇಲ್ಲವೋ ಎನ್ನುವುದು ಇನ್ನೂ ದೃಢಪಟ್ಟಿಲ್ಲ.

  • ಇದೇ ಶುಕ್ರವಾರ ತೆರೆಗೆ ಬರಲಿದೆ ರಾಕ್‍ಲೈನ್ ನಿರ್ಮಾಣದ ಮೋಹನ್‍ಲಾಲ್ ಅಭಿನಯದ ವಿಲನ್

    ಇದೇ ಶುಕ್ರವಾರ ತೆರೆಗೆ ಬರಲಿದೆ ರಾಕ್‍ಲೈನ್ ನಿರ್ಮಾಣದ ಮೋಹನ್‍ಲಾಲ್ ಅಭಿನಯದ ವಿಲನ್

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ 25ಕ್ಕೂ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ರಾಕ್‍ಲೈನ್ ವೆಂಕಟೇಶ್ ಈಗ ಭಾರತೀಯ ಚಿತ್ರರಂಗದ ಹೆಸರಂತ ನಿರ್ಮಾಪಕರಾಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ರವಿತೇಜ, ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಚಿತ್ರಗಳಿಗೆ ಬಂಡವಾಳ ಹೂಡಿದ ಹೆಗ್ಗಳಿಕೆ ರಾಕ್‍ಲೈನ್ ವೆಂಕಟೇಶ್‍ಗೆ ಸಲ್ಲುತ್ತದೆ. ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್‍ನಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ರಾಕ್‍ಲೈನ್ ಈಗ ಮಲೆಯಳಂ ನಟ ಮೋಹನ್ ಲಾಲ್ ನಟನೆಯ `ವಿಲನ್’ ನಿರ್ಮಾಪಕರಾಗಿದ್ದು ಚಿತ್ರ ಇದೇ 28ಕ್ಕೆ ಬಿಡುಗಡೆಯಾಗಲಿದೆ.

    ಒಬ್ಬ ಸಾಮಾನ್ಯ ಸಹ ಕಲಾವಿದನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಕ್‍ಲೈನ್ ವೆಂಕಟೇಶ್ ಅವರು ಇಂದು ಆಕಾಶದೇತ್ತರಕ್ಕೆ ಬೆಳೆದು ನಿಂತಿದ್ದಾರೆ. ತಮಗೇ ಯಾವುದೇ ಬೌಂಡರಿ ಲೈನ್ ಹಾಕಿಕೊಳ್ಳದೆ ಟಾಲಿವುಡ್, ಕಾಲಿವುಡ್ ಹಾಗೂ ದೂರದ ಬಾಲಿವುಡ್ ತನಕ ತಮ್ಮ ಛಾಪನ್ನು ಈಗಾಗಲೇ ಮೂಡಿಸಿದ್ದಾರೆ. ಇನ್ನೂ ಭಾರತೀಯ ಚಿತ್ರರಂಗದಲ್ಲೇ ಸ್ಟೋರಿ ಬೆಸ್ಟ್ ಸಿನಿಮಾಗಳಿಗೆ ಹೆಸರು ವಾಸಿಯಾಗಿರುವ ಮಾಲಿವುಡ್ ಚಿತ್ರರಂಗಕ್ಕೆ ರಾಕ್‍ಲೈನ್ ವೆಂಕಟೇಶ್ ವಿಲನ್ ಮೂಲಕ ಪ್ರವೇಶವನ್ನು ಪಡೆಯುತ್ತಿದ್ದಾರೆ.

    ಕಳೆದ ವರ್ಷ `ಪುಲಿ ಮುರುಗನ್’ ಚಿತ್ರದ ಮೂಲಕ ಬಾಕ್ಸಾಫೀಸ್‍ನಲ್ಲಿ ಸೆಂಚುರಿ ಬಾರಿಸಿದ ಮೋಹನ್ ಲಾಲ್‍ಗೆ ಈ ಬಾರಿ ಕ್ರೈಂ ಥ್ರಿಲ್ಲರ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ಈ ಚಿತ್ರದಲ್ಲಿ ಕೇವಲ ಮೋಹನ್ ಲಾಲ್ ಮಾತ್ರವಲ್ಲ ಕಾಲಿವುಡ್‍ನ ಪ್ರಮುಖ ನಟರಾದ ವಿಶಾಲ್, ನಟಿ ಮಂಜು ವಾರಿಯರ್, ಹನ್ಸಿಕಾ ಮೊಟ್ವಾನಿ, ರಾಶಿ ಖನ್ನಾ ರಂಥ ಫೇಮಸ್ ಸ್ಟಾರ್‍ಗಳು ಬಣ್ಣ ಹಚ್ಚಿದ್ದಾರೆ.

    ಮಾಲಿವುಡ್‍ನ ಖ್ಯಾತ ನಿರ್ದೇಶಕ ಬಿ.ಉನ್ನಿಕೃಷ್ಣನ್ ಸಾರಥ್ಯದಲ್ಲಿ ವಿಲನ್ ಮೂಡಿಬಂದಿದ್ದು, ಕೆಲ ದಿನಗಳ ಹಿಂದೆ ಬಿಡುಗಡೆಯಾದ ಟ್ರೇಲರ್ ಸೋಷಿಯಲ್ ಮಿಡಿಯದಲ್ಲಿ ಸಖತ್ ಸದ್ದು ಮಾಡಿತ್ತು.

    ರಾಕ್‍ಲೈನ್ ವೆಂಕಟೇಶ್‍ರವರ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ವಿಷಯ ನಿಮಗೇ ಹೇಳಲೇ ಬೇಕು. ಏಕೆಂದರೆ ಇದು ಕನ್ನಡ ಚಿತ್ರರಸಿಕರಿಗೆ ಹೆಮ್ಮೆಯಾಗುವ ಸಮಾಚಾರ. ನಿರ್ಮಾಣದ ಜೊತೆಗೆ ಕೆಲ ಸಿನಿಮಾಗಳಲ್ಲಿ ಡಿಫರೆಂಟ್ ಪಾತ್ರಗಳನ್ನ ಮಾಡುತ್ತಿರುವ ವೆಂಕಟೇಶ್ ಮತ್ತೊಂದು ಸಾಧನೆಯ ಮೈಲುಗಲ್ಲು ಹತ್ತಲೂ ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ ರಾಕ್‍ಲೈನ್ ಚೀನಾ ಭಾಷೆಯಲ್ಲೊಂದು ಅದ್ದೂರಿ ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರಂತೆ. ಚೀನಾದಲ್ಲಿಯೇ ಒಬ್ಬ ಹೊಸ ಪ್ರತಿಭೆಯೊಬ್ಬನನ್ನು ತಯಾರಿ ಮಾಡುತ್ತಿದ್ದಾರಂತೆ. ಚೀನಾ ಭಾಷೆಯ ಜೊತೆಗೆ ಜಗತ್ತಿನ ಬೇರೆ ಬೇರೆ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಮಾಡುವ ಮಹತ್ತರ ಯೋಜನೆಯಲ್ಲಿ ರಾಕ್‍ಲೈನ್ ಇದ್ದಾರೆ ಎನ್ನಲಾಗುತ್ತಿದೆ.

    ಈಗಾಗಲೇ `ವಿಲನ್’ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳು ಮೂಡಿಸಿರುವ ಸಂದರ್ಭದಲ್ಲಿ ಹೊಸ ಸುದ್ದಿ ಎಲ್ಲರನ್ನು ಹೆಮ್ಮೆ ಪಡುವಂತೆ ಮಾಡಿದೆ. `ವಿಲನ್’ ಸಿನಿಮಾದ ಪೋಸ್ಟರ್ ಹಾಗೂ ಟ್ರೇಲರ್‍ನ ನೋಡಿದ ಸೂಪರ್ ಸ್ಟಾರ್ ರಜನಿಕಾಂತ್, ಈ ಸಿನಿಮಾವನ್ನು ನಾನು ಖಂಡಿತ ಮೋಡುತ್ತೇನೆ ಎಂದು ತಿಳಿಸಿದ್ದಾರೆ.