ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟ ಭರವಸೆಯ ನಟ ಧನ್ವೀರ್. ಮೊದಲ ಸಿನಿಮಾದಲ್ಲೇ ಮಾಸ್ ಪ್ರೇಕ್ಷಕರ ಮನ ಗೆದ್ದ ಧನ್ವೀರ್ ಈಗ ಎರಡನೇ ಚಿತ್ರ ‘ಬಂಪರ್’ಗೆ ಸಿದ್ಧರಾಗುತ್ತಿದ್ದಾರೆ. ಹರಿ ಸಂತೋಷ್ ನಿರ್ದೇಶನದ ಬಂಪರ್ ಚಿತ್ರದಲ್ಲಿ ಧನ್ವೀರ್ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
ಇದೀಗ ಬಂಪರ್ ಚಿತ್ರತಂಡದಿಂದ ‘ಬಂಪರ್’ ಸುದ್ದಿಯೊಂದು ಹೊರ ಬಿದ್ದಿದೆ. ಕೆಜಿಎಫ್ ಚಿತ್ರದಲ್ಲಿ ಗರುಡನಾಗಿ ಮಿಂಚಿದ್ದ ರಾಮ್ ಬಂಪರ್ ಚಿತ್ರದಲ್ಲಿ ವಿಲನ್ ಆಗಿ ಧನ್ವೀರ್ ಎದುರು ಸೆಣಸಾಡೋದು ಕನ್ಫರ್ಮ್ ಆಗಿದೆ.
ಹೌದು, ಕೆಜಿಎಫ್ ಚಿತ್ರದಲ್ಲಿ ಗರುಡ ಪಾತ್ರದಲ್ಲಿ ಖಡಕ್ ವಿಲನ್ ಆಗಿ ಬಣ್ಣ ಹಚ್ಚಿದ್ದ ರಾಮ್ ಸಖತ್ ಫೇಮಸ್ ಆಗಿದ್ರು. ಮೊದಲ ಚಿತ್ರದಲ್ಲೇ ರಾಮ್ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡು ಜನಪ್ರಿಯತೆ ಗಳಿಸಿಕೊಂಡ್ರು. ಟಾಲಿವುಡ್, ಕಾಲಿವುಡ್ ಅಂಗಳದಿಂದಲೂ ರಾಮ್‍ಗೆ ವಿಲನ್ ಆಗಿ ನಟಿಸಲು ಆಫರ್ ಬರತೊಡಗಿತ್ತು. ಇದೀಗ ಹರಿ ಸಂತೋಷ್ ನಿರ್ದೇಶನದ ಬಂಪರ್ ಚಿತ್ರಕ್ಕೆ ರಾಮ್ ವಿಲನ್ ಆಗಿ ಆಯ್ಕೆ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.
‘ಬಂಪರ್’ ಚಿತ್ರ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಭರಾಟೆ ಖ್ಯಾತಿಯ ನಿರ್ಮಾಪಕ ಸುಪ್ರಿತ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಚಿತ್ರವಾಗಿರೋ ಬಂಪರ್ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದೆ.
ನವದೆಹಲಿ: ಮದುವೆಗೆ ಮುನ್ನವೇ ಗಂಡು ಮಗುವಿಗೆ ಜನ್ಮ ನೀಡಿರುವ ವಿಲನ್ ಬ್ಯೂಟಿ ಆ್ಯಮಿ ಜಾಕ್ಸನ್ ಹೆರಿಗೆಯಾದ ಮೂರು ದಿನದಲ್ಲೇ ಔಟಿಂಗ್ ಹೋಗಿದ್ದಾರೆ.
ಹೌದು. ಸೋಮವಾರ ಸಂಜೆ ಆ್ಯಮಿ ಜಾಕ್ಸನ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬುಧವಾರ ತಮ್ಮ ಮಗನ ಜೊತೆ ಮೊದಲ ಬಾರಿಗೆ ಔಟಿಂಗ್ ಹೋಗಿದ್ದಾರೆ. ತಮ್ಮ ಮಗನನ್ನು ಹಿಡಿದುಕೊಂಡು ನಿಂತಿರುವ ಫೋಟೋವನ್ನು ನಟಿ ತಮ್ಮ ಇನ್ ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ `ಬೇಬಿಯ ಮೊದಲ ಔಟಿಂಗ್’ ಎಂದು ಬರೆದುಕೊಂಡಿದ್ದಾರೆ. ಮಗನಿಗೆ ಆ್ಯಂಡ್ರಿಯಾಸ್ ಎಂದು ನಾಮಕರಣ ಕೂಡ ಮಾಡಿದ್ದಾರೆ.
ಸಾಮಾನ್ಯವಾಗಿ ಹೆರಿಗೆಯಾದ ಬಳಿಕ ಮಹಿಳೆಯರು ಕೆಲ ತಿಂಗಳು ಮನೆಯಿಂದ ಹೊರ ಬರಲ್ಲ. ಮಗುವಿಗೆ ಚುಚ್ಚುಮದ್ದು, ಔಷಧಿ ಎಂದು ಹೋಗುತ್ತಾರೆಯೇ ವಿನಃ ಹೀಗೆ ಶಾಪಿಂಗ್ ಮಾಡಲು ಹೋಗುವುದಿಲ್ಲ. ಆದರೆ ಇದೀಗ ನಟಿ ಮಾತ್ರ ಹೆರಿಗೆಯಾದ 3 ದಿನದಲ್ಲೇ ಪುಟ್ಟ ಮಗನನ್ನು ಹಿಡಿದುಕೊಂಡು ಹೊರ ಹೋಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಗರ್ಭಿಣಿಯಾದಾಗಿನಿಂದಲೂ ಆ್ಯಮಿ ಫೋಟೋಶೂಟ್ ಮಾಡಿಸಿಕೊಂಡು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸದಾ ಸುದ್ದಿಯಲ್ಲಿದ್ದರು. ಸೋಮವಾರ ಹೆರಿಗೆಯಾದ ಕೂಡಲೇ ನಟಿ ಮಗನಿಗೆ ಹಾಲುಣಿಸುತ್ತಿರುವಾಗ ಪ್ರಿಯತಮ ಮುತ್ತಿಕ್ಕುವ ಫೋಟೋವನ್ನು ಇನ್ ಸ್ಟಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಹೆರಿಗೆಯಾದ ವಿಚಾರವನ್ನು ತಿಳಿಸಿದ್ದರು. ಅಲ್ಲದೆ ಮಗು ಹಾಗೂ ತಾಯಿ ಇಬ್ಬರೂ ಕ್ಷೇಮವಾಗಿದ್ದಾರೆ. ಗಂಡು ಮಗುವಾಗಿರುವುದು ಖುಷಿ ತಂದಿದೆ ಎಂದು ಬರೆದುಕೊಂಡಿದ್ದರು. ಗರ್ಭಿಣಿಯಾಗಿದ್ದಾಗಲೇ ತಮಗೆ ಗಂಡು ಮಗು ಎಂದರೆ ತುಂಬಾ ಇಷ್ಟ ಎಂದು ನಟಿ ಹೇಳಿಕೊಂಡಿದ್ದರು.
2018 ಜನವರಿ 1ರಂದು ಆ್ಯಮಿ ಜಾಕ್ಸನ್ ಉದ್ಯಮಿ ಜಾರ್ಜ್ ಪನಯೌಟು ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಘೋಷಿಸಿದ್ದರು. ಬ್ರಿಟನ್ ಮದರ್ಸ್ ಡೇಯಂದು ನಟಿ ತಮ್ಮ ಗೆಳೆಯನೊಂದಿಗೆ ಕುಳಿತ ಬೇಬಿ ಬಂಪ್ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಳ್ಳುವ ಮೂಲಕ ತಾಯಿ ಆಗುತ್ತಿರುವ ವಿಷಯವನ್ನು ತಿಳಿಸಿದ್ದರು. ಗರ್ಭಿಣಿಯಾದ ಬಳಿಕ ಗೆಳೆಯ ಜಾರ್ಜ್ ಜೊತೆ ಮೇ 5ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಪೈಲ್ವಾನ್ ಸಿನಿಮಾ ಮುಗಿಸಿ ಕೋಟಿಗೊಬ್ಬ-3 ಸಿನಿಮಾದ ಶೂಟಿಂಗ್‍ನಲ್ಲಿ ತೊಡಗಿಕೊಂಡಿರುವ ಸುದೀಪ್ ಮುಂದಿನ ಸಿನಿಮಾ ಯಾವುದು? ರಂಗಿತರಂಗ, ರಾಜರಥ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದಲ್ಲಿ ‘ಬಿಲ್ಲಾರಂಗ’ದಲ್ಲಿ ನಟಿಸುತ್ತಾರೆ ಅನ್ನೋದು ಈಗಾಗಲೇ ಹೊರಬಿದ್ದಿರುವ ವಿಚಾರ. ಇದಕ್ಕೂ ಮುಂದೆ ಸರಿಸುಮಾರು ಎಂಭತ್ತು ದಿನಗಳ ಡೇಟ್ಸ್ ಅನ್ನು ದಬಾಂಗ್-3 ಗಾಗಿ ಸುದೀಪ್ ನೀಡಿದ್ದಾರೆ. ಸಲ್ಮಾನ್ ಖಾನ್ ನಟನೆಯ ಈ ಸಿನಿಮಾವನ್ನು ಪ್ರಭುದೇವಾ ನಿರ್ದೇಶಿಸುತ್ತಿದ್ದು, ಇದರಲ್ಲಿ ಸುದೀಪ್ ಅವರಿಗೆ ಹೀರೋಗೆ ಸರಿಸಮನಾಗಿರುವ ವಿಲನ್ ಪಾತ್ರ ಎಂದು ಹೇಳಲಾಗುತ್ತಿದೆ.
ಕನ್ನಡದಲ್ಲಿ ಸೂಪರ್ ಸ್ಟಾರ್‍ಗಳಾಗಿರುವ ಸುದೀಪ್, ಉಪೇಂದ್ರರಂಥಾ ನಟರು ಪರಭಾಷೆಗಳಲ್ಲಿ ವಿಲನ್ನುಗಳಾಗಿ ಹೆಸರು ಮಾಡುತ್ತಿರೋದು ವಿಚಿತ್ರವಾದರೂ ವಿಶೇಷವಾಗಿದೆ. ಅಂದಹಾಗೆ ಸುದೀಪ್ ಹಾಲಿವುಡ್ ಸಿನಿಮಾವೊಂದರಲ್ಲಿ ನಟಿಸುವುದಾಗಿ ಸುದ್ದಿಯಾಗಿತ್ತಲ್ಲಾ? ಅದು ಖುದ್ದು ಸುದೀಪ್ ಅವರ ಕಾರಣಕ್ಕೇ ಒಮ್ಮೆ ಮುಂದೂಡಲಾಗಿದೆಯಂತೆ.
ಈಗ ದಬಾಂಗ್-3ಗಾಗಿ ಎಂಭತ್ತು ದಿನ ಡೇಟ್ಸ್ ಕೊಟ್ಟಿರುವ ಸುದೀಪ್ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಾರಾ ಇಲ್ಲವಾ ಅನ್ನೋದು ಇದೇ ಏಪ್ರಿಲ್‍ನಲ್ಲಿ ಗೊತ್ತಾಗಲಿದೆಯಂತೆ. ಒಂದು ವೇಳೆ ಹಾಲಿವುಡ್ ಸಿನಿಮಾದಲ್ಲಿ ನಟಿಸುವುದು ಪಕ್ಕಾ ಆದರೆ ಕನ್ನಡದ ಬಿಲ್ಲಾರಂಗ ಶುರುವಾಗೋದು ಲೇಟು. ಅಲ್ಲಿಗೆ 2019ರಲ್ಲಿ ಪೈಲ್ವಾನ್ ಮತ್ತು ಕೋಟಿಗೊಬ್ಬ-3 ರಿಲೀಸಾದರೆ, 2020ರಲ್ಲಿ ಸುದೀಪ್ ನಟನೆಯ ಯಾವ ಕನ್ನಡ ಸಿನಿಮಾಗಳೂ ಬಿಡುಗಡೆಯಾಗೋದು ಡೌಟು!
* ವಿಶೇಷ ವರದಿ ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ 5 ಭಾಷೆಗಳಲ್ಲಿ ತೆರೆಕಂಡು ಈಗಾಗಲೇ ರಾಜ್ಯ, ದೇಶ ಹಾಗೂ ಹೊರದೇಶಗಳಲ್ಲಿ ಧೂಳೆಬ್ಬಿಸುತ್ತಿದೆ. ಈ ಶುಭ ಸಂದರ್ಭದಲ್ಲಿಯೇ ಪಬ್ಲಿಕ್ ಟಿವಿ ಜೊತೆ ಖಳನಟರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು.
ಕೆಜಿಎಫ್ “ಕೇಡೀಸ್” ಎಂಬ ಪಬ್ಲಿಕ್ ಟಿವಿ ಕಾರ್ಯಕ್ರಮದಲ್ಲಿ ಮಾತನಾಡಿದ ಖಳನಾಯಕ ವಿನಯ್, ಚಿತ್ರೀಕರಣದ ಸಂದರ್ಭದಲ್ಲಿ ನಡೆದ ದುಃಖ ಹಾಗೂ ಸಂತಸದ ವಿಚಾರವನ್ನು ಹಂಚಿಕೊಂಡರು. ಅಲ್ಲದೇ ಇದೇ ವೇಳೆ ಕೆಜಿಎಫ್ ಸಿನಿಮಾ ತಂಡ ಅನ್ನೋದಕ್ಕಿಂತ ಅದೊಂದು ನನ್ನ ಕುಟುಂಬ ಅನ್ನುವ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಧನ್ಯವಾದ ಅರ್ಪಿಸಿದ್ರು.
ವಿನಯ್ ಹೇಳಿದ ಬ್ಯಾಡ್ ನ್ಯೂಸ್ ಏನು..?
ಸಿನಿಮಾದಿಂದ ಹೊರಗಡೆ ಕುಟುಂಬ ಪಾಲನೆ ಮುಖ್ಯವಾಗುತ್ತದೆ. ಹೆರಿಗೆಯಾದ ಬಳಿಕ 20 ದಿನದಲ್ಲೇ ನಾವು ನಮ್ಮ ಮೊದಲ ಮಗುವನ್ನು ಕಳೆದುಕೊಂಡಿದ್ದೆವು. ಹೀಗಾಗಿ ನಾನು ಕುಟುಂಬ ಬಗ್ಗೆ ತುಂಬಾ ಕೇರ್ ತೆಗೆದುಕೊಳ್ಳುತ್ತಿದ್ದೆ. ಮಗು ಕಳೆದುಕೊಂಡಿರುವ ನೋವು ನಂಗೆ ಎಷ್ಟು ಇತ್ತೋ ಅಷ್ಟೇ ನೋವು ನಮ್ಮ ತಾಯಿ, ಪತ್ನಿ, ಅತ್ತೆ-ಮಾವ ಹಾಗೂ ನಮ್ಮ ಸಂಬಂಧಿಕರಿಗೂ ಇತ್ತು. ಪತ್ನಿಗೆ ಹೆರಿಗೆಯಾಗಿ ಮಗು 20 ದಿನ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿತ್ತು ಎಂದು ದುಃಖದ ಸುದ್ದಿಯೊಂದನ್ನು ಹಂಚಿಕೊಂಡರು. ಇದನ್ನೂ ಓದಿ:ಯಶ್ ಬಗ್ಗೆ ಕೆಜಿಎಫ್ ಕೇಡೀಸ್ ಖಡಕ್ ಮಾತು
ಕೆಜಿಎಫ್ ನನಗೆ ಹೊಸ ತಂಡವಾಗಿದೆ. ರಾಮ್, ಲಕ್ಕಿ, ಅವಿನಾಶ್ ಸರ್ ಇವರೆಲ್ಲರೂ ನನಗೆ ನೈತಿಕವಾಗಿ ಬೆಂಬಲಿಸಿದ್ದಾರೆ. ಇವರೆಲ್ಲರೂ ಬೆಂಗಳೂರಿನಲ್ಲಿದ್ದರು. ನಾನು ಮಾತ್ರ ಮೈಸೂರಿನಲ್ಲಿದೆ. ಆದ್ರೆ ಎಲ್ಲರೂ ನನಗೆ ಬೆಂಬಲ ನೀಡುತ್ತಿದ್ದರು. ನಾನು ಮಾತನಾಡುವಾಗ ಸ್ವಲ್ಪ ಎಮೋಷನಲ್ ಆಗಿದ್ದೇನೆ ಅಂತ ಗೊತ್ತಾದ ತಕ್ಷಣ ಇವರೆಲ್ಲರೂ ಮರುದಿನವೇ ಆಸ್ಪತ್ರೆಗೆ ಬರುತ್ತಿದ್ದರು. ನನ್ನ ಜೊತೆ ಇದ್ದು, ನನಗೆ ಸಪೋರ್ಟ್ ಮಾಡುತ್ತಿದ್ದರು ಎಂದು ಹೇಳಿದ್ರು. ಇದನ್ನೂ ಓದಿ: ಕೆಜಿಎಫ್ ನಟರ ಗಡ್ಡದ ಹಿಂದಿದೆ ರೋಚಕ ಕಥೆ
ನಂತರ ಪ್ರಶಾಂತ್ ಸರ್ ಯಾವಾಗ ಬೆಂಗಳೂರಿಗೆ ಬರುತ್ತಿದ್ದೀಯಾ ಅಂತ ಕೇಳಿದ್ರು. ಆವಾಗ ನಾನು ಸರ್, ನಾಳೆ, ನಾಡಿದ್ರಲ್ಲಿ ಬರುತ್ತೇನೆ ಅಂದಾಗ, ಹೇಗೆ ಬರ್ತಿಯಾ..? ಗಾಡಿ ಕಳುಹಿಸಲಾ..? ಕಾರ್ ಕಳುಹಿಸ್ತೇನೆ. ನನ್ನ ಪತ್ನಿ ಎಲ್ಲರೂ ಮೈಸೂರಿನಲ್ಲಿದ್ದರು. ಆದ್ರೆ ನೀನು ನಿನ್ನ ಮನೆಗೆ ಹೋಗಬೇಡ ಎಂದು ಹೇಳಿದ್ದರು. ಸಂಜೆ ವರ್ಕ್ ಶಾಪ್ ಗೆ ಬಂದೆ. ಅಲ್ಲಿ ಸರಿ ಸುಮಾರು 3-4 ದಿನ ಇದ್ದೆ. ಪ್ರಶಾಂತ್ ಅವರು ಅಷ್ಟೊಂದು ಬ್ಯುಸಿಯಾಗಿದ್ದರೂ ಕೂಡ 7 ಗಂಟೆಯಿಂದ ನನ್ನ ಜೊತೆ ಕುಳಿತು ಪ್ರೇರೆಪಣೆಯ ಮಾತುಗಳನ್ನಾಡುತ್ತಿದ್ದರು. ಈ ಮೂಲಕ ನನ್ನ ಯೋಚನೆಗಳನ್ನು ಬದಲಾಯಿಸುತ್ತಿದ್ದರು. ಶೂಟಿಂಗ್ ನಲ್ಲಿ ಯಾರು ಇರಲಿ ಬಿಡಲಿ, ನೀನು ಅಲ್ಲಿಗೆ ಬಂದುಬಿಡು ಎಂದು ಹೇಳುತ್ತಿದ್ದರು ಅಂದ್ರು. ಇದನ್ನೂ ಓದಿ: ರಣ ರಣ ಲುಕ್‍ನಲ್ಲಿ ಮಿಂಚಿರುವ ಕೆಜಿಎಫ್ ಕಿಲಾಡಿಗಳ ಸಿನಿಮಾ ಜರ್ನಿ ಆರಂಭದ ಕಥೆ
ಯಶ್ ಅಣ್ಣನೂ ಕರೆ ಮಾಡುತ್ತಿದ್ದರು. ರಾಮ್ ಎಲ್ಲಾ ಸಮಯದಲ್ಲಿಯೂ ಜೊತೆಗಿದ್ದರು. ಟೈಮ್ ಸಿಕ್ಕಾಗ ಅವನನ್ನು ಕರೆದುಕೊಂಡು ಬಾ, ಶೂಟಿಂಗ್ ನಲ್ಲಿ ಅವನು ನಮ್ಮ ಜೊತೆ ಇರಲಿ ಎಂದು ರಾಮ್ ಜೊತೆ ಯಶ್ ಅಣ್ಣ ಹೇಳುತ್ತಿದ್ದರು. ಹೀಗಾಗಿ ಇದನ್ನು ಬರೀ ಸಿನಿಮಾ ಕೆಜಿಎಫ್ ಟೀಂ ಎಂದು ಹೇಳೋದಕ್ಕಿಂತ ನನ್ನ ಕುಟುಂಬ ಎಂದು ಹೇಳಿಕೊಳ್ಳಲು ಇಷ್ಟಪಡುತ್ತೇನೆ ಎಂದು ವಿನಯ್ ಹೇಳಿದ್ರು.
ಗೆಳೆಯರು, ಸಂಬಂಧಿಕರು ಎಲ್ಲರೂ ಇದ್ದರು. ಅವರೆಲ್ಲರೂ ನನ್ನ ಬಾಲ್ಯದ ಗೆಳೆಯರು. ಅವರಿಗೆ ವಿನಯ್ ಯಾರು, ಹೇಗೆ ಅಂತ ಎಲ್ಲವೂ ಗೊತ್ತು. ಆದ್ರೆ ಕೆಜಿಎಫ್ ಟೀಂ ಗೆ ನನ್ನ ಪರಿಚಯವಾಗಿದ್ದು ಕೇವಲ 2 ಅಥವಾ ಎರಡೂವರೆ ವರ್ಷದಳಿಂದೀಚೆಗೆ ಅಷ್ಟೇ. ಲಕ್ಕಿ ಭಾಯ್, ರಾಮ್ ಬಿಟ್ರೆ ಉಳಿದವರಿಗೆಲ್ಲ ನಾನು ಹೊಸಬನಾಗಿದ್ದೆನು. ಆದ್ರೆ ಎಲ್ಲರೂ ನನ್ನನ್ನು ಚೆನ್ನಾಗಿ ನೋಡಿಕೊಂಡರು. ಹೀಗಾಗಿ ಒಂದು ಒಳ್ಳೆಯ ಕುಟುಂಬಕ್ಕೆ ನನ್ನನ್ನು ಪರಿಚಯಿಸಿದ್ದಕ್ಕೆ ಪ್ರಶಾಂತ್ ಸರ್ ಗೆ ಅಭಿನಂದನೆಗಳನ್ನು ವಿನಯ್ ಸಲ್ಲಿಸಿದ್ರು. ಇದನ್ನೂ ಓದಿ: ಕೆಜಿಎಫ್ ಅರೆಹುಚ್ಚ ಪಾತ್ರಧಾರಿ ಲಕ್ಷ್ಮೀಪತಿ ಇನ್ನಿಲ್ಲ!
ಗುಡ್ ನ್ಯೂಸ್:
ಮಗು ತೀರಿಕೊಂಡ ನಂತರ ಪತ್ನಿ ಎರಡನೇ ಬಾರಿ ಪ್ರೆಗ್ನೆಂಟ್ ಆದ್ರು. 9ನೇ ತಾರೀಕಿನಂದು ಒರಾಯನ್ ಮಾಲ್ ನಲ್ಲಿ ಟ್ರೇಲರ್ ರಿಲೀಸ್ ಕಾರ್ಯಕ್ರಮವಿತ್ತು. ಹೀಗಾಗಿ ನಾಳೆ ಟ್ರೇಲರ್ ರಿಲೀಸ್ ಎಂದು ರಾತ್ರಿಯೆಲ್ಲ ನಿದ್ದೇನೆ ಬರುತ್ತಿರಲಿಲ್ಲ. 9ರಂದು ಕಾರ್ಯಕ್ರಮಕ್ಕೆ ಹೊರಡಲು ರೆಡಿಯಾಗುತ್ತಿದ್ದೆ. ಈ ಸಮಯದಲ್ಲಿ ಪತ್ನಿಗೆ ಪ್ರಸವ ನೋವು ಬಂದಿದೆ. ಆದ್ರೆ ಕೆಜಿಎಫ್ ಮೂವಿ ಟ್ರೇಲರ್ ರಿಲೀಸ್ ಕಾರ್ಯಕ್ರಮವಿದೆ ಎಂದು ಆಕೆ ನನ್ನ ಬಳಿ ಹೇಳಿಕೊಂಡಿಲ್ಲ. ಹೀಗಾಗಿ ಅತ್ತೆ ಬಂದು ನನ್ನ ಬಳಿ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಹೇಳಿದ್ರು. ಆವಾಗ ನಾನು ಟ್ರೇಲರ್ ಆದ್ರೆ ಏನಂತೆ ಇನ್ನೊಂದು ದಿನ ನೋಡುವೆ ಎಂದು ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆ. ಅಚ್ಚರಿ ಹಾಗೂ ಖುಷಿಯ ವಿಚಾರವೆಂದರೆ 2.30 ಟ್ರೇಲರ್ ರಿಲೀಸ್, 3.30ಗೆ ನನಗೆ ಗಂಡು ಮಗುವಾಯಿತು. ಹೀಗಾಗಿ ಎಲ್ಲರೂ ಎರಡೂವರೆಗೆ ಟ್ರೇಲರ್, ಮೂರೂವರೆಗೆ ಮಗು ರಿಲೀಸ್ ಆಯ್ತು ಎಂದು ತಮಾಷೆ ಮಾಡಿರುವುದಾಗಿ ವಿನಯ್ ತನ್ನ ಸಂತಸ ಹಂಚಿಕೊಂಡರು.
ಸಂಬಂಧಿಕರು, ಫ್ರೆಂಡ್ಸ್ ಇದ್ದರೂ ಕೆಜಿಎಫ್ ಕುಟುಂಬದ ಬೆಂಬಲ ಪ್ರತಿ ನಿಮಿಷಕ್ಕೂ ಇಲ್ಲದಿದ್ದರೆ ಇಷ್ಟು ಬೇಗ ನಾನು ಕಳೆದುಕೊಂಡ ಮಗುವಿನ ದುಃಖದಿಂದ ರಿಕವರಿ ಆಗುತ್ತಿರಲಿಲ್ಲ ಎಂದು ವಿನಯ್, ಕೆಜಿಎಫ್ ಟೀಂ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ರಾಮಾಚಾರಿಯ ಜೀವನವನ್ನು 5 ನಿಮಿಷದಲ್ಲಿ ಬಿಚ್ಚಿಟ್ಟ ನಟ ವಿಶಾಲ್
ಒಟ್ಟಿನಲ್ಲಿ ನಾವು ಸಾಧಿಸಲು ಛಲ, ಹಠ ಜೊತೆಗೆ ಆ ವಾತಾವರಣನೂ ಬೇಕಾಗುತ್ತದೆ. ಆ ವಾತವಾರಣವನ್ನು ಕಟ್ಟಿಕೊಡೋರು ಬೇರಾರು ಅಲ್ಲ ಅದು ನಮ್ಮ ಹಿತೈಷಿಗಳು ಅಂತ ನಟ ವಶಿಷ್ಠ ಸಿಂಹ ಹೇಳಿದ್ರು.
ಬೆಂಗಳೂರು: ವಿಲನ್ ಚಿತ್ರ ಬಿಡುಗಡೆಯಾದ ಹಿನ್ನೆಲೆಯಲ್ಲಿ ಅಭಿಮಾನಿಗಳು ಕೋಣವನ್ನು ಬಲಿಕೊಟ್ಟಿದ್ದಾರೆ. ಥಿಯೇಟರ್ ಮುಂದೆ ಕೋಣದ ತಲೆಯನ್ನು ಒಂದೇ ಏಟಿಗೆ ಕತ್ತರಿಸಿ, ಬಳಿಕ ಆ ತಲೆಯನ್ನು ಹಿಡಿದು ಅಭಿಮಾನಿಯೊಬ್ಬ ವಿಲನ್ ಪೋಸ್ಟರ್ ಗೆ ರಕ್ತದ ಅಭಿಷೇಕ ಮಾಡಿದ್ದಾನೆ.
ಕೋಣ ಕಡಿದು ರಕ್ತದ ಅಭಿಷೇಕ ಮಾಡಿದ್ದು ಎಲ್ಲಿ ಎನ್ನುವುದು ಗೊತ್ತಿಲ್ಲ. ಫೋಟೋ ಮತ್ತು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಜೊತೆಯಲ್ಲೇ ಅಭಿಮಾನಿಗಳು ಕುರಿಯನ್ನು ಕಡಿದು ಸುದೀಪ್ ಭಾವಚಿತ್ರಕ್ಕೆ ರಕ್ತದ ಅಭಿಷೇಕ ಮಾಡಿದ್ದಾರೆ. ಕುರಿಯನ್ನು ಕಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಅಭಿಮಾನವಿದ್ರೆ ಅನಾಥಾಶ್ರಮದಲ್ಲಿರುವ ಮಕ್ಕಳಿಗೆ ನಟನ ಹೆಸರಿನಲ್ಲಿ ಆಹಾರ ನೀಡಲಿ ಅಥವಾ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲಿ. ಅದನ್ನು ಬಿಟ್ಟು ಪ್ರಾಣಿಗಳನ್ನು ಸಾರ್ವಜನಿಕವಾಗಿ ಕಡಿದು ಅಜ್ಞಾನಿಗಳಂತೆ ವರ್ತಿಸಿರುವುದು ಸರಿಯಲ್ಲ ಎಂದು ಜನ ಈ ಅಭಿಮಾನಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.
ಬೆಂಗಳೂರು: ಸುದೀಪ್ ಮತ್ತು ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರೋ ವಿಲನ್ ಚಿತ್ರ ಭಾರೀ ಅಬ್ಬರದೊಂದಿಗೆ ಬಿಡುಗಡೆಗೆ ರೆಡಿಯಾಗಿದೆ. ಪ್ರೇಮ್ ನಿರ್ದೇಶನದ ಈ ಚಿತ್ರ ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಸಾವಿರಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾಗುತ್ತಿರೋ ಈ ಚಿತ್ರದ ಮುಂದೆ ಬರಲು ಬಹುತೇಕ ಚಿತ್ರಗಳು ಕೊಸರಾಡಿವೆ. ಆದರೆ ರಾಗಿಣಿ ಅಭಿನಯದ ಟೆರರಿಸ್ಟ್ ಚಿತ್ರ ಮಾತ್ರ ಅಂಥಾದ್ದೊಂದು ಧೈರ್ಯ ಪ್ರದರ್ಶಿಸಿದೆ!
ರಾಗಿಣಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಟೆರರಿಸ್ಟ್. ಪಿಸಿ ಶೇಖರ್ ನಿರ್ದೇಶನದ ಈ ಚಿತ್ರ ಮಹಿಳಾ ಕೇಂದ್ರಿತವಾದ ರೋಚಕ ಕಥಾ ಹಂದರ ಹೊಂದಿದೆಯಂತೆ. ಈ ಚಿತ್ರವೂ ಯಾವಾಗ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆ ಹುಟ್ಟಿಕೊಂಡಿದ್ದದ್ದು ಸುಳ್ಳಲ್ಲ. ಆದರೆ ಈ ಚಿತ್ರ ಬಿಡುಗಡೆಯಾಗುತ್ತಿರೋ ಸಂದರ್ಭ ಕಂಡು ಎಲ್ಲರೂ ಹೌಹಾರುವಂತಾಗಿದೆ.
ಯಾಕೆಂದರೆ ಈ ಚಿತ್ರವನ್ನು ವಿಲನ್ ಅಬ್ಬರಕ್ಕೆ ಎದುರಾಗಿ ಬಿಡುಗಡೆ ಮಾಡಲು ನಿರ್ದೇಶಕ ಪಿ.ಸಿ. ಶೇಖರ್ ನಿರ್ಧರಿಸಿದ್ದಾರೆ. ವಿಲನ್ ಚಿತ್ರದ ಮುಂದೆ ನಿಲ್ಲಲು ಬಹುತೇಕ ಚಿತ್ರಗಳು ಹಿಂದೇಟು ಹಾಕಿರುವಾಗಲೇ ಟೆರರಿಸ್ಟ್ ಚಿತ್ರವನ್ನು ರಿಲೀಸ್ ಮಾಡಲು ಮುಂದಾಗಿರೋ ಶೇಖರ್ ಸಾಹಸವನ್ನು ಎಲ್ಲರೂ ಅಚ್ಚರಿಯಿಂದಲೇ ನೋಡುತ್ತಿದ್ದಾರೆ. ಈ ಸಾಹಸ ಫಲಿಸಬಹುದಾ? ವಿಲನ್ ಅಬ್ಬರವನ್ನು ಟೆರರಿಸ್ಟ್ ಚಿತ್ರ ಹೇಗೆ ತಡೆದುಕೊಳ್ಳುತ್ತದೆ ಎಂಬ ಪ್ರಶ್ನೆಯೇ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆದರೂ ಅಚ್ಚರಿಯೇನಿಲ್ಲ!
ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ `ಟಗರು’ ಚಿತ್ರ ಶುಕ್ರವಾರವಷ್ಟೇ ತೆರೆಕಂಡು ಪ್ರದರ್ಶನ ಕಾಣುತ್ತಿದ್ದರೆ, ಇತ್ತ ಚಿತ್ರದ ನಿರ್ದೇಶಕರ ವಿರುದ್ಧ ಶಿವಣ್ಣ ಅಭಿಮಾನಿಗಳು ಗರಂ ಆಗಿದ್ದಾರೆ.
ಈ ಬಗ್ಗೆ ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಸೇನಾ ಸಮಿತಿಯಿಂದ ಸುದ್ದಿಗೋಷ್ಠಿ ನಡೆಸಿ, ಸಿನಿಮಾದಲ್ಲಿ ವಿಲನ್ ಗಳು ನಾಯಕ ನಟ ಶಿವಣ್ಣನಿಗೆ ಅವಾಚ್ಯ ಪದಗಳಿಂದ ಬೈಯ್ಯುವ ಸನ್ನಿವೇಶಗಳಿವೆ. ಈ ಕಾರಣಕ್ಕೆ ಶಿವಣ್ಣ ಅಭಿಮಾನಿಗಳು ಸೂರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೊಗದಸ್ತಾದ ಟಗರು ನೋಡಿ ಜಬರ್ದಸ್ತಾದ ಹೇರ್ ಕಟ್ ಮಾಡಿಸ್ಕೊಂಡ ಅಭಿಮಾನಿ
ಟಗರು ಚಲನಚಿತ್ರದ ನಿರ್ದೇಶಕ ಸೂರಿಯವರು ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೋರಬೇಕಾಗಿ ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಸೇನಾ ಸಮಿಯ ಅಧ್ಯಕ್ಷ ಹೆಚ್ ಎಸ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪೊಗದಸ್ತಾದ ಟಗರು!
ಕ್ಷಮೆ ಕೇಳದೇ ಹೋದ ಪಕ್ಷದಲ್ಲಿ ಸೂರಿಯವರ ಮುಖಕ್ಕೆ ಮಸಿ ಬಳಿದು, ಅವರು ನಿರ್ದೇಶಿಸಿರುವ ಎಲ್ಲಾ ಚಿತ್ರಗಳನ್ನು ಬಹಿಷ್ಕರಿಸಲು ಕನ್ನಡ ಚಲಚನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟಿಸುತ್ತೇವೆ. ಸೂರಿಯವರನ್ನು ನಿರ್ದೇಶಕ ಸ್ಥಾನದಿಂದ ವಜಾ ಮಾಡುವವರೆಗೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಕುರಿತು ಭಾನುವಾರ ಸಂತೋಷ್ ಥಿಯೇಟರ್ ನಲ್ಲಿ ನಟ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಬುದ್ಧಿ ಹೇಳಿದ್ರು. ನಾನ್ ವಿಲನ್ ಗಳಿಗೆ ಬೈದಾಗ ನೀವುಗಳು ಸಿಳ್ಳೆ ಚಪ್ಪಾಳೆ ಹೊಡಿತೀರಾ. ಅದೇ ನನಗೆ ವಿಲನ್ ಗೆ ಬೈದಾಗ ಯಾಕೆ ಸಹಿಸಲ್ಲ ಅಂತ ಪ್ರಶ್ನಿಸಿದ್ದರು.
ಇದಕ್ಕೂ ಮುಂಚೆ `ಕಡ್ಡಿಪುಡಿ’ ಚಲನಚಿತ್ರದಲ್ಲಿ ಶಿವರಾಜ್ ಕುಮಾರ್ ಅವರನ್ನು ಅವಮಾನಕರ ರೀತಿಯಲ್ಲಿ ನಡೆಸಿಕೊಂಡು ಚಿತ್ರವನ್ನು ಮಾಡಿರುವುದು ಡಾ. ರಾಜ್ ಕುಮಾರ್ ಸೇನಾ ಸಮಿತಿಯು ಪ್ರತಿಭಟನೆ ಮಾಡಿತ್ತು.
ಟಗರು ಚಿತ್ರದಲ್ಲಿ ಪೊಲೀಸ್ ಪಾತ್ರ ಸೇರಿದಂತೆ ಹಲವಾರು ಗೆಟಪ್‍ಗಳಲ್ಲಿ ಶಿವಣ್ಣ ಮಿಂಚಿದ್ದರೆ, ಖಳನಾಯಕರ ಪಾತ್ರದಲ್ಲಿ ಧನಂಜಯ್ ಮತ್ತು ವಶಿಷ್ಠ ಸಿಂಹ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಭಾವನಾ ಮೆನನ್ ಮತ್ತು ಮಾನ್ವಿತಾ ಹರೀಶ್ ನಾಯಕಿಯರಾಗಿ ಅಭಿನಯಿಸಿದ್ದಾರೆ.
ಬೆಂಗಳೂರು: ಜ್ಯೂನಿಯರ್ ಎನ್‍ಟಿಆರ್ ಹೀರೊ ಆಗಿರುವ `ಜೈ ಲವ ಕುಶ’ ಸಿನಿಮಾದಲ್ಲಿ ವಿಜಯ್ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೊಂದು ದಿನದಲ್ಲಿ ಹೊರ ಬೀಳುವ ಸಾಧ್ಯತೆಯಿದೆ.
ಬಾಬ್ಬಿ ನಿರ್ದೇಶನದ ಈ ಚಿತ್ರದಲ್ಲಿ ಎನ್‍ಟಿಆರ್ ಫಸ್ಟ್ ಟೈಮ್ ತ್ರಿಬಲ್ ರೋಲ್‍ನಲ್ಲಿ ಕಾಣಿಸುತ್ತಿದ್ದಾರೆ. ಮೂರೂ ವಿಭಿನ್ನ ಗೆಟಪ್ ಗಳು ಕೂಡ ಈ ಚಿತ್ರದಲ್ಲಿವೆ. ಜೈ, ಲವ ಮತ್ತು ಕುಶ ಎನ್ನುವುದು ಪಾತ್ರಗಳ ಹೆಸರು. ಇಲ್ಲಿ ರಾಮ, ಲಕ್ಷ್ಮಣ ಮತ್ತು ರಾವಣನ ಹೋಲಿಕೆ ಪಾತ್ರಕ್ಕಿರುತ್ತವೆ ಎಂದು ಫಸ್ಟ್‍ಲುಕ್‍ನಲ್ಲಿ ರಿವೀಲ್ ಆಗಿದೆ.
ಟಾಲಿವುಡ್‍ನಲ್ಲಿ ಜ್ಯೂನಿಯರ್ ಎನ್‍ಟಿಆರ್‍ಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಸೀನಿಯರ್ ಎನ್‍ಟಿಆರ್ ಮೊಮ್ಮಗ ಎನ್ನುವ ಖ್ಯಾತಿ ಇದೆ. ಅಂಥ ಸ್ಟಾರ್ ಮುಂದೆ ವಿಲನ್ ಆಗುವುದು ಸಣ್ಣ ಮಾತೇನಲ್ಲ. ಅದರಲ್ಲೂ ಇಲ್ಲಿ ಹೀರೊ ಆಗಿರುವ ವಿಜಿ ಅಲ್ಲಿ ವಿಲನ್ ಆಗಿ ನಟಿಸುವುದು ರಿಸ್ಕ್ ಕೂಡ ಹೌದು. ಆದರೆ ಬಹುಶಃ ಇವರು ಮಾಡುತ್ತಿರುವ ಪಾತ್ರಕ್ಕೂ ಒಂದು ಗತ್ತು ಇದ್ದಿರಬೇಕು. ಹೀಗಾಗಿಯೇ ವಿಜಿ ಒಪ್ಪಿಕೊಂಡಿದ್ದಾರಂತೆ ಎನ್ನುವುದು ಗಾಂಧಿನಗರದ ಮಾತು.