ಸಿನಿಮಾ ಶೂಟಿಂಗ್ ಮುಗಿಸಿಕೊಂಡು ನಿಶ್ಚಿತಾರ್ಥಕ್ಕೆ ಬರುತ್ತಿದ್ದ ಛತ್ತೀಸ್ ಗಢದ ಖ್ಯಾತ ಖಳನಟ (Villain) ಸೂರಜ್ ಮೆಹರ್ (Suraj Mehr) ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. 40ರ ವಯಸ್ಸಿನ ನಟ ಅಖ್ರಿ ಫೈಸ್ಲಾ ಸಿನಿಮಾದ ಚಿತ್ರೀಕರಣ ಮುಗಿಸಿಕೊಂಡು ಮನೆಗೆ ಬರುವಾಗ ಈ ಅವಘಡ ನಡೆದಿದೆ.
ಛತ್ತೀಸಗಢ ಸಿನಿಮಾ ರಂಗದಲ್ಲಿ ಬಹುಬೇಡಿಕೆಯ ನಟರಾಗಿದ ಸೂರಜ್, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಲನ್ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಬುಧವಾರ ಅವರ ಎಂಗೇಜ್ ಮೆಂಟ್ ಆಗಬೇಕಿತ್ತು. ಆದರೆ, ಕಾರು ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ನಟನು ಪ್ರಯಾಣಿಸುತ್ತಿದ್ದ ಕಾರಿಗೆ ವೇಗವಾಗಿ ಬಂದ ಟ್ರಕ್ ಗುದ್ದಿರುವ ಪರಿಣಾಮ, ಸೂರಜ್ ತೀವ್ರವಾಗಿ ಗಾಯಗೊಂಡಿದ್ದರು. ಹಾಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇನ್ನೋರ್ವರಿಗೂ ಗಂಭೀರ ಗಾಯಗಳು ಆಗಿವೆಯಂತೆ.
ಕನ್ನಡವೂ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿರುವ ಆಶಿಷ್ ವಿದ್ಯಾರ್ಥಿ (Ashish Vidyarthi) ತಮಗೆ ಅವಕಾಶ ನೀಡುತ್ತಿಲ್ಲವೆಂದು ಅಳಲು ಹೇಳಿಕೊಂಡಿದ್ದಾರೆ. ತಾವು ಹಲವಾರು ಭಾಷೆಗಳಲ್ಲಿ ನಟಿಸಿದ್ದರೂ, ವಿವಿಧ ಪಾತ್ರಗಳನ್ನು ಮಾಡಿದ್ದರೂ, ತಮ್ಮನ್ನು ಚಿತ್ರೋದ್ಯಮ ಮರೆತಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ನನ್ನನ್ನು ಎಲ್ಲರೂ ವಿಲನ್ (Villain) ರೀತಿಯಲ್ಲಿ ನೋಡುತ್ತಿದ್ದಾರೆ. ನಾನು ಸಾಕಷ್ಟು ಪಾತ್ರಗಳಲ್ಲಿ ನಟಿಸಿದ್ದೇನೆ. ಬೇರೆ ಬೇರೆ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಅವೆಲ್ಲವನ್ನೂ ಜನರು ಮತ್ತು ಉದ್ಯಮ ಮೆಚ್ಚಿಕೊಂಡಿದೆ. ಆದರೂ, ನನಗೆ ಕೆಲಸ ಕೊಡುತ್ತಿಲ್ಲ. ದಯವಿಟ್ಟು ಅವಕಾಶ ನೀಡಿ ಎಂದು ಅವರು ಕೇಳಿಕೊಂಡಿದ್ದಾರೆ.
ಆಶಿಷ್ ವಿದ್ಯಾರ್ಥಿ ಇತ್ತೀಚೆಗಷ್ಟೇ 2ನೇ ಮದುವೆ ಆಗಿದ್ದರು. ಮದುವೆ ನಂತರ ಬಂದ ಟೀಕೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ತಮಗೆ ಅವಕಾಶ ಸಿಗುತ್ತಿಲ್ಲವೆಂದು ಅವರು ಅಳಲು ತೋಡಿಕೊಂಡಿದ್ದಾರೆ.
ರಜನಿಕಾಂತ್ ಮತ್ತು ಲೋಕೇಶ್ ಕನಗರಾಜ್ ಕಾಂಬಿನೇಷನ್ ನ ಹೊಸ ಸಿನಿಮಾದಲ್ಲಿ ದಕ್ಷಿಣದ ಖ್ಯಾತ ನಟ ಪೃಥ್ವಿ ರಾಜ್ ಸುಕುಮಾರನ್ (Prithviraj Sukumaran) ವಿಲನ್ (Villain) ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಸಲಾರ್ ಸಿನಿಮಾದ ನಂತರ ಮತ್ತೊಂದು ಹೊಸ ಬಗೆಯ ಪಾತ್ರವನ್ನು ಈ ಸಿನಿಮಾದಲ್ಲಿ ಮಾಡಲಿದ್ದಾರಂತೆ ಸುಕುಮಾರನ್.
ಈ ಸಿನಿಮಾದ ಬಗ್ಗೆ ಸಾಕಷ್ಟು ಗೊಂದಲಗಳು ಶುರುವಾಗಿದ್ದವು. ರಜನಿಕಾಂತ್ (Rajinikanth) ಮತ್ತು ಲೋಕೇಶ್ ಕನಗರಾಜ್ (Lokesh Kanagaraj) ಇಬ್ಬರೂ ಮಧ್ಯ ಯಾವುದೂ ಸರಿ ಇಲ್ಲ ಎನ್ನುವ ಮಾತು ಹರಿದಾಡುತ್ತಿತ್ತು. ರಜನಿ ಜೈಲರ್ ಸಕ್ಸಸ್ ಬೆನ್ನಲ್ಲೇ ಅದು ಜೋರಾಗಿತ್ತು. ಲೋಕೇಶ್ ಕನಗರಾಜ್ ಅವರು ವಿಜಯ್ ನಟನೆಯ ಲಿಯೋ ಸಿನಿಮಾದ ನಿರ್ದೇಶಕರಾಗಿದ್ದ ಕಾರಣಕ್ಕೆ ರಜನಿ ಮತ್ತು ದಳಪತಿ ವಿಜಯ್ ಅಭಿಮಾನಿಗಳ ಮಧ್ಯ ಸ್ಟಾರ್ ವಾರ್ ಕೂಡ ಶುರುವಾಗಿತ್ತು. ಹಾಗಾಗಿ ರಜನಿ ಸಿನಿಮಾಗೆ ಲೋಕೇಶ್ ನಿರ್ದೇಶಕರಾಗುವುದು ಅನುಮಾನ ಎಂದು ಹೇಳಲಾಗಿತ್ತು.
ಈ ಎಲ್ಲ ಸುದ್ದಿಗೂ ಟಕ್ಕರ್ ಕೊಡುವಂತಹ ನಿರ್ಮಾಣ ಸಂಸ್ಥೆಯು 171ನೇ ಸಿನಿಮಾಗೆ ಲೋಕೇಶ್ ಕನಗರಾಜ್ ಅವರೇ ನಿರ್ದೇಶನ ಮಾಡಲಿದ್ದಾರೆ ಎಂದು ಘೋಷಣೆ ಮಾಡಿತ್ತು. ಈ ಸಿನಿಮಾವನ್ನು ಜೈಲರ್ ಚಿತ್ರದ ನಿರ್ಮಾಪಕರೇ ನಿರ್ಮಾಣ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಈ ಸಿನಿಮಾದ ಅನೌನ್ಸ್ ಕೂಡ ಆಗಿದೆ. ಸದ್ಯಕ್ಕೆ ಚಿತ್ರಕ್ಕೆ ‘ತಲೈವರ 171’ ಎಂದು ಟೈಟಲ್ ಇಡಲಾಗಿದೆ.
ವಿಕ್ರಮ್ ಸಿನಿಮಾದ ಯಶಸ್ಸಿನ ನಂತರ ಲೋಕೇಶ್, ಲಿಯೋ ಸಿನಿಮಾವನ್ನು ಕೈಗೆತ್ತಿಕೊಂಡಿದ್ದರು. ಲಿಯೋ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸಿನಲ್ಲೂ ಅದರ ಸದ್ದು ಜೋರಾಗಿದೆ. ಸಿನಿಮಾ ರಿಲೀಸ್ ಆಗಲು 40 ದಿನಗಳು ಬಾಕಿ ಇರುವಾಗಲೇ ಹತ್ತು ಸಾವಿರಕ್ಕೂ ಹೆಚ್ಚು ಟಿಕೆಟ್ ಗಳು 24 ಗಂಟೆಗಳಲ್ಲಿ ಮಾರಾಟವಾಗಿ ದಾಖಲೆ ಬರೆದಿತ್ತು.
ಲೀಯೋ ಮತ್ತು ಜೈಲರ್ ಸಿನಿಮಾವನ್ನು ಹೋಲಿಕೆ ಮಾಡಿ, ಬಾಕ್ಸ್ ಆಫೀಸ್ ಗೆಲುವಿನ ಬಗ್ಗೆ ಚರ್ಚೆ ಶುರುವಾಗಿದೆ. ಜೈಲರ್ ಗಿಂತಲೂ ಹೆಚ್ಚು ಹಣವನ್ನು ಲಿಯೋ ಮಾಡಲಿದೆ ಎಂದು ಅಂದಾಜಿಸಲಾಗುತ್ತಿದೆ. ಹೀಗಾಗಿ ರಜನಿ ಮತ್ತು ಲೋಕೇಶ್ ಜೋಡಿಯನ್ನು ಈ ಚರ್ಚೆಯಲ್ಲಿ ಎಳೆತರಲಾಗಿತ್ತು.
ನಾಯಕನಾಗಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ಬಾಲಿವುಡ್ ನಟ ಸಂಜಯ್ ದತ್, ಇತ್ತೀಚಿನ ದಿನಗಳಲ್ಲಿ ಹೆಚ್ಚು ವಿಲನ್ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಲ್ಲಿ ಮಾತ್ರವಲ್ಲ, ಇತರ ಭಾಷಾ ಸಿನಿಮಾ ರಂಗಗಳೂ ಕೂಡ ಅವರನ್ನು ಖಳ ಪಾತ್ರಕ್ಕೆ ಕೈ ಬೀಸಿ ಕರೆಯುತ್ತಿವೆ. ಹಾಗಾಗಿ ಸಂಜತ್ ದತ್ ವಿಲನ್ ಪಾತ್ರಗಳಿಗೆ ಫಿಕ್ಸ್ ಆದರಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.
ಕೆಜಿಎಫ್ 2 ಸಿನಿಮಾದಲ್ಲಿ ಅಧೀರನ ಪಾತ್ರ ಮಾಡಿದ್ದ ಸಂಜಯ್ ದತ್, ಈ ಮೂಲಕ ದೇಶದ ನಾನಾ ಭಾಷೆಯ ಅಭಿಮಾನಿಗಳನ್ನು ಏಕಕಾಲಕ್ಕೆ ಅವರದ್ದೇ ಭಾಷೆಯಲ್ಲಿ ತಲುಪಿದರು. ಸಿನಿಮಾ ಕೂಡ ದೊಡ್ಡ ಹಿಟ್ ಆಯಿತು. ಈ ಸಿನಿಮಾದ ಮೂಲಕ ಸಂಜಯ್ ಆಯಾ ಭಾಷೆಯ ಕಲಾವಿದರಾಗಿಯೇ ನೋಡುಗನ ಮನಸ್ಸಲ್ಲಿ ಉಳಿದುಕೊಂಡರು. ಹೀಗಾಗಿ ತಮಿಳು, ತೆಲುಗು ಸಿನಿಮಾ ರಂಗದಿಂದಲೂ ಅವರಿಗೆ ಕರೆಗಳು ಬರುತ್ತಿವೆಯಂತೆ. ಇದನ್ನೂ ಓದಿ:ಅಪ್ಪು ಹೆಸರಿನಲ್ಲಿ ಮಕ್ಕಳ ಚಿತ್ರೋತ್ಸವ: ಅದ್ಧೂರಿ ಚಾಲನೆ
ಕೆಜಿಎಫ್ 2 ಸಿನಿಮಾದ ನಂತರ ಮತ್ತೊಂದು ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಸಂಜಯ್ ದತ್, ಈ ಸಿನಿಮಾದಲ್ಲೂ ಅವರದ್ದು ಖಳನ ಪಾತ್ರವಂತೆ. ಈಗಾಗಲೇ ಒಂದು ಹಂತದ ಚಿತ್ರೀಕರಣಕ್ಕೂ ಅವರು ಬಂದು ಹೋಗಿದ್ದಾರೆ. ಈ ಸಿನಿಮಾ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿದೆ. ಎರಡು ವಾರಗಳ ಹಿಂದೆಯಷ್ಟೇ ಧ್ರುವ ಮತ್ತು ಸಂಜಯ್ ದತ್ ಕಾಂಬಿನೇಷನ್ ನ ದೃಶ್ಯಗಳನ್ನು ಪ್ರೇಮ್ ಸೆರೆ ಹಿಡಿದ್ದಾರೆ.
ಈ ಸಿನಿಮಾದ ಬೆನ್ನಲ್ಲೇ ಬಾಲಿವುಡ್ ನ ಮತ್ತೊಂದು ಪಾತ್ರವನ್ನು ಒಪ್ಪಿಕೊಂಡಿದ್ದಾರಂತೆ ಸಂಜಯ್ ದತ್. ‘ಹೇರಾ ಫೇರಿ 4’ ಹೆಸರಿನ ಸಿನಿಮಾದಲ್ಲೂ ಅವರು ವಿಲನ್ ಪಾತ್ರ ನಿರ್ವಹಿಸಲಿದ್ದಾರಂತೆ. ಸಿನಿಮಾದ ಪ್ರೋಮೋ ಶೂಟ್ ಆಗಿದ್ದು, ಇನ್ನೆರಡು ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಶುರು ಮಾಡಲಿದೆಯಂತೆ ಚಿತ್ರತಂಡ.
ಕಿರುತೆರೆಯ ಬಿಗ್ ಶೋ ಬಿಗ್ ಬಾಸ್‌ನ ಲವ್ ಬರ್ಡ್ಸ್ ಆಗಿ ಮಿಂಚುತ್ತಿರುವ ಸಾನ್ಯ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಸಾನ್ಯ ತಂಟೆಗೆ ಬಂದ್ರೆ ರೂಪೇಶ್ ವಿಲನ್ ಆಗುತ್ತಾನೆ ಎಂದು ಸಂಬರ್ಗಿ ಮಾತನಾಡಿರುವ ಮಾತು ಹೈಲೆಟ್ ಆಗಿದೆ.
ಸಾನ್ಯ ಮತ್ತು ರೂಪೇಶ್ ಲವ್ವಿ ಡವ್ವಿ ವಿಚಾರ ಮನೆಮಂದಿಗೆ ಮಾತ್ರವಲ್ಲ ನೋಡುಗರಿಗೆ ಈ ಜೋಡಿ ಇಷ್ಟವಾಗಿದೆ. ಹಾಗೆಯೇ ಮನೆಯಲ್ಲಿ ಈ ಜೋಡಿಯನ್ನು ಕಂಡ್ರೆ ಉರಿದುಕೊಳ್ಳುವವರು ಇದ್ದಾರೆ. ಸದ್ಯ ರೂಪೇಶ್ ಮತ್ತು ಸಾನ್ಯ ಬಗ್ಗೆ ರಾಕೇಶ್ ಬಳಿ ಸಂಬರ್ಗಿ ಚರ್ಚಿಸಿದ್ದಾರೆ. ಮನೆಮಂದಿಯ ಬಗ್ಗೆ ಈ ಮೊದಲೇ ತಿಳಿದುಕೊಂಡು ಬಂದಿದ್ದೇನೆ. ಅವರ ಪಾಸಿಟಿವ್ & ನೆಗೆಟಿವ್ ಗೊತ್ತು ಎಂದು ರಾಕಿ ಬಳಿ ಪ್ರಶಾಂತ್ ಸಂಬರ್ಗಿ ಚರ್ಚೆ ಮಾಡಿದ್ದಾರೆ. ಇದನ್ನೂ ಓದಿ:ತಮಿಳು ಬಿಗ್ ಬಾಸ್‌ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ
ಮನೆಮಂದಿಯ ಪಾಸಿಟಿವ್ ಮತ್ತು ನೆಗೆಟಿವ್ ಬಗ್ಗೆ ರಾಕಿ ಮತ್ತು ಸಂಬರ್ಗಿ ಡಿಸ್ಕಸ್ ಮಾಡಿದ್ದಾರೆ. ಈ ವೇಳೆ ಸಾನ್ಯ, ರೂಪೇಶ್ ಬಗ್ಗೆ ಸಂಬರ್ಗಿ ಮಾತನಾಡಿದ್ದಾರೆ. ಸಾನ್ಯ ಒಳ್ಳೆಯ ಹುಡುಗಿ, ರೂಪೇಶ್ ಹಾರ್ಟ್ಲಿ ಒಳ್ಳೆಯ ಹುಡುಗ. ಆದರೆ ಅವನ ಕೆಲವೊಂದು ವೈಯಕ್ತಿಕ ವಿಚಾರಕ್ಕೆ ಕೈ ಹಾಕಿದ್ರೆ ಅವನಿಗೆ ಆಗಲ್ಲ. ಊಟ, ಸ್ನಾನ, ಸಾನ್ಯ ವಿಚಾರಕ್ಕೆ ರೂಪೇಶ್ ವಿಲನ್ ಆಗುತ್ತಾರೆ ಎಂದು ಸಂಬರ್ಗಿ ರಾಕೇಶ್ ಅಡಿಗ ಬಳಿ ಹೇಳಿದ್ದಾರೆ. ಸಾನ್ಯ ತಂಟೆಗೆ ಬಂದ್ರೆ ಶೆಟ್ರು ವಿಲನ್ ಆಗುತ್ತಾರೆ ಎಂಬ ಮಾತನ್ನ ಸಂಬರ್ಗಿ ಮಾತನಾಡಿದ್ದಾರೆ.
ಕೆಲ ದಿನಗಳ ಹಿಂದೆ ರೂಪೇಶ್ ಯಾವಾಗಲೂ ಶೌಚಾಲಯದಲ್ಲಿಯೇ ಇರುತ್ತಾರೆ ಎಂದು ದೊಡ್ಡ ಚರ್ಚೆ ಆಗಿತ್ತು. ಆಗ ರೂಪೇಶ್ ಖಡಕ್ ಆಗಿಯೇ ಉತ್ತರ ನೀಡಿದ್ದರು. ಹಾಗಾಗಿ ರೂಪೇಶ್ ಆದ್ಯತೆ ಕೊಡುವ ಸ್ಥಾನದಲ್ಲಿ ಸಾನ್ಯ ಕೂಡ ಇದ್ದಾರೆ ಎಂಬ ಮಾತನ್ನ ಸಂಬರ್ಗಿ ಆಡಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಮನೆ ಆಟ ಯಾವ ರೀತಿ ತಿರುವು ಪಡೆಯಲಿದೆ ಎಂಬುದನ್ನ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ನವೀನ್ ರೆಡ್ಡಿ ಬಿ ಸಾರಥ್ಯದಲ್ಲಿ ಮೂಡಿ ಬರ್ತಿರುವ ಮಾದೇವ (Madeva) ಸಿನಿಮಾ ಅಖಾಡಕ್ಕೆ ಇದೀಗ ಶ್ರೀನಗರ ಕಿಟ್ಟಿ ಎಂಟ್ರಿ ಕೊಟ್ಟಿದ್ದಾರೆ. 80 ರ ದಶಕದ ಕಥೆಯನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿದ್ದು, ವಿನೋದ್ (Vinod Prabhakar) ಎದುರು ಶ್ರೀನಗರ ಕಿಟ್ಟಿ (Shrinagar Kitty) ಖಳನಾಯಕನಾಗಿ ತೊಡೆ ತಟ್ಟಿದ್ದಾರೆ. ಸಮುದ್ರ ಎಂಬ ಪವರ್ ಫುಲ್ ಪಾತ್ರದ ಮೂಲಕ ಶ್ರೀನಗರ ಕಿಟ್ಟಿ ಗ್ಯಾಂಗ್ ಸ್ಟಾರ್ ಆಗಿ ಅಬ್ಬರಿಸಲಿದ್ದಾರೆ.
ಭಂಟಿ ಎಂಬ ಸಿನಿಮಾ ನಿರ್ಮಾಣ ಮಾಡಿರುವ ಆರ್ ಕೇಶವ್ ದೇವಸಂದ್ರ ಮಾದೇವ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಲವ್ ಗುರು ಸಮಂತ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶೃತಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ನಟಿಸುತ್ತಿರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಗೆ ಜೋಡಿಯಾಗಿ ಸೋನಲ್ ಮೊಂಥೆರೋ (Sonal Monthero) ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಬಾಲಕೃಷ್ಣ ಥೋಟ ಛಾಯಾಗ್ರಹಣ, ಪ್ರದ್ಯೋತ್ಥನ್ ಸಂಗೀತ ಸಿನಿಮಾಕ್ಕಿದೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್
ಹೈದ್ರಾಬಾದ್ ರಾಮೋಜಿ ಫಿಲ್ಮ್ ಸಿಟಿ, ಮದ್ದೂರು, ಕನಕಪುರ, ಚನ್ನಪಟ್ಟಣ ಭಾಗದಲ್ಲಿ ಶೇಕಡ ಐವತ್ತರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಉಳಿದ ಭಾಗದ ಚಿತ್ರೀಕರಣವನ್ನು ಮಲೆನಾಡು ಶಿವಮೊಗ್ಗ ಸೇರಿದಂತೆ ಇತರೆ ಭಾಗಗಳಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದೆ.
Live Tv
[brid partner=56869869 player=32851 video=960834 autoplay=true]
ತೀಕ್ಷ್ಣ ನೋಟ, ಗಮನ ಸೆಳೆಯುವ ಅಭಿನಯ, ಕೇಳುಗರನ್ನು ಮಂತ್ರ ಮುಗ್ದರನ್ನಾಗಿ ಮಾಡುವ ಕಂಚಿನ ಕಂಠದ ಗಾಯಕ ಕಂ ನಾಯಕ ವಸಿಷ್ಠ ಸಿಂಹ ‘ಓದೆಲಾ ರೇಲ್ವೇ ಸ್ಟೇಷನ್’ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರೋದು ಗೊತ್ತೇ ಇದೆ. ಈ ಚಿತ್ರ ಈಗ ಆಹಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಚಿಟ್ಟೆ ಅಭಿನಯಕ್ಕೆ ತೆಲುಗು ಸಿನಿ ಪ್ರೇಕ್ಷಕ ಫಿದಾ ಆಗಿದ್ದಾರೆ.
ಈ ಸಿನಿಮಾದಲ್ಲಿ ವಸಿಷ್ಠ ಸಿಂಹ, ತಿರುಪತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧೋಬಿಯಾಗಿ ಮಿಂಚಿದ್ದಾರೆ. ಇದೂವರೆಗೂ ಮಾಡಿರದಂತಹ ವಿಶಿಷ್ಟ ಪಾತ್ರದಲ್ಲಿ ವಸಿಷ್ಠ ಅಮೋಘವಾಗಿ ಅಭಿನಯಿಸಿದ್ದು, ಚೊಚ್ಚಲ ತೆಲುಗು ಸಿನಿಮಾದಲ್ಲಿಯೇ ಸಿಂಹ ಗೆದ್ದಿದ್ದಾರೆ. ಈ ಚಿತ್ರದಲ್ಲಿ ವಸಿಷ್ಠ ನಾಯಕನಾಗಿಯೂ ಹಾಗೂ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಅಂದಹಾಗೇ ‘ಓದೆಲಾ ರೇಲ್ವೇ ಸ್ಟೇಷನ್’ ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಖರೀಮ್ ನಗರದಲ್ಲಿ ನಡೆದ ಘಟನೆಯೊಂದನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಯುವ ನಿರ್ದೇಶಕ ಅಶೋಕ್ ತೇಜ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಹೆಬಾ ಪಟೇಲ್ ವಸಿಷ್ಠನಿಗೆ ಜೋಡಿಯಾಗಿ ನಟಿಸಿದ್ದಾರೆ. ಇದನ್ನೂ ಓದಿ:ಅವಳು ನನ್ನನ್ನ ಯೂಸ್ ಮಾಡೋಕೆ ಟಿಶ್ಯೂ ಪೇಪರ್ ಅಲ್ಲ ಎನ್ನುವ ಮಾತಿಗೆ ಗಳಗಳನೆ ಅತ್ತ ಸಾನ್ಯ
ಗಾಯಕನಾಗಿ ತೆಲುಗು ಚಿತ್ರಕ್ಕೆ ಪರಿಚಿತರಾಗಿದ್ದ ವಸಿಷ್ಠ ಸಿಂಹ ಈಗ ನಾಯಕನಾಗಿ ತೆಲುಗು ಸಿನಿಮಂದಿಯ ಹೃದಯ ಗೆದ್ದಿದ್ದಾರೆ. ಈ ಮೂಲಕ ತೆಲುಗು ನೆಲದಲ್ಲಿ ಗಾಯನದ ಜೊತೆಗೆ ಕಲಾ ಸೇವೆಯನ್ನೂ ಮುಂದುವರೆಸಲಿದ್ದಾರೆ. ಸದ್ಯ ವಸಿಷ್ಠ Love..ಲಿ, ಹೆಡ್ ಬುಷ್, ಸಿಂಬಾ, ತಲ್ವಾರ್ ಪೇಟೆ, ಡೇವಿಲ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ನಿವೀನ್ ಪೌಳಿ ನಟನೆಯ ಆಕ್ಷನ್ ಹೀರೋ ಬಿಜು ಸಿನಿಮಾದಲ್ಲಿ ವಿಲನ್ ಆಗಿ ಮಿಂಚಿದ್ದ ಮಲಯಾಳಂ ನಟ ಎನ್.ಡಿ. ಪ್ರಸಾದ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾರತೀಯ ಸಿನಿಮಾ ರಂಗದಲ್ಲಿ ಸರಣಿಯ ಆತ್ಮಹತ್ಯೆ ಪ್ರಕರಣಗಳು ಬೆಚ್ಚಿ ಬೀಳಿಸುತ್ತಿವೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುವ ಪ್ರಸಾದ್ ಕುಟುಂಬದ ಕಲಹದಿಂದ ಬೇಸತ್ತಿದ್ದರು ಎಂದು ಹೇಳಲಾಗುತ್ತಿದೆ.
ಮಕ್ಕಳು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡಿರುವ ಪ್ರಸಾದ್, ಮನೆಗೆ ಬಂದ ಮಕ್ಕಳು ತಂದೆಯ ಸಾವನ್ನು ನೆರೆಹೊರೆಯವರಿಗೆ ತಿಳಿಸಿದ್ದ, ಆನಂತರ ಪೊಲೀಸರು ಆಗಮಿಸಿ, ಪ್ರಾಥಮಿಕ ತನಿಖೆ ಕೂಡ ಕೈಗೊಂಡಿದ್ದಾರೆ. ಖಳನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಪ್ರಸಾದ್, ಹಲವು ವರ್ಷಗಳಿಂದ ಹೆಂಡತಿಯಿಂದ ದೂರವಿದ್ದರಂತೆ. ಹಾಗಾಗಿ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ:ಅಂಡರ್ ವರ್ಲ್ಡ್ ನಿಂದಾಗಿ ಬಾಲಿವುಡ್ ನಟಿ ಸೋನಾಲಿ ಬೇಂದ್ರೆಗೆ ಹಿನ್ನೆಡೆ
ಖಿನ್ನತೆಯ ಕಾರಣದಿಂದಾಗಿ ಡ್ರಗ್ಸ್ ಕೂಡ ಸೇವಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಡ್ರಗ್ ಪ್ರಕರಣದಲ್ಲಿ ಈ ಹಿಂದೆ ಇವರ ಹೆಸರು ಸೇರಿಕೊಂಡಿತ್ತು. ಇವರ ಬಳಿ ಡ್ರಗ್ಸ್ ಪತ್ತೆಯಾದ ಕಾರಣಕ್ಕಾಗಿ ಬಂಧನ ಕೂಡ ಆಗಿತ್ತು ಎನ್ನುವ ಸುದ್ದಿಯೂ ಇದೆ.
ಚಿಕ್ಕಮಗಳೂರು: ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಇಡೀ ರಾಜ್ಯಕ್ಕೆ ಖ್ಯಾತಿಯಾಗಿ ಜೋಡೆತ್ತಿನ ಗಾಡಿ ಸ್ಪರ್ಧೆಯ ವಿಲನ್ ಎಂದೇ ಖ್ಯಾತಿಯಾಗಿದ್ದ ಎತ್ತು ಅನಾರೋಗ್ಯ ಕಾರಣದಿಂದ ಸಾವನ್ನಪ್ಪಿದೆ.
ಚಿಕ್ಕಮಗಳೂರು, ಮೈಸೂರು, ತುಮಕೂರು, ಹಾಸನ, ಅಜ್ಜಂಪುರ, ಕಡೂರು ಹಾಗೂ ತರೀಕೆರೆ ಸೇರಿದಂತೆ ರಾಜ್ಯದ್ಯಾಂತ ಜೋಡೆತ್ತಿನ ಗಾಡಿ ಸ್ಪರ್ಧೆಗಳಲ್ಲಿ ಸಾಕಷ್ಟು ಘಟಾನುಘಟಿ ಹೋರಿಗಳಿಗೆ ಸೋಲಿನ ರುಚಿ ತೋರಿಸಿದ್ದ ವಿಲನ್ ಇಂದು ಸಾವನ್ನಪ್ಪಿದೆ. ಎತ್ತಿನ ಮಾಲೀಕ ನಿಂಗೇಗೌಡ ಕಳೆದ ಎರಡ್ಮೂರು ವರ್ಷಗಳಿಂದ ಎತ್ತಿನ ಹಾರೈಕೆಯಲ್ಲಿ ನಿರತರಾಗಿದ್ದರು. ಈ ಎತ್ತನ್ನು ಸ್ಪರ್ಧೆಗೆ ಬಿಟ್ಟು ಬೇರೆ ಕೆಲಸಕ್ಕೆ ಬಳಸುತ್ತಿರಲಿಲ್ಲ.
ಸುಮಾರು ನಾಲ್ಕುವರೆ ಲಕ್ಷ ಬೆಲೆ ಬಾಳುವ ಈ ಎತ್ತಿಗೆ ಕಳೆದ 2 ವಾರಗಳ ಹಿಂದಷ್ಟೆ ರಾಜ್ಯದ ಬೇರೆ-ಬೇರೆ ಹೋರಿ ಮಾಲೀಕರು 4 ಲಕ್ಷಗಳಷ್ಟು ಬೆಲೆಗೆ ಕೇಳಿದ್ದರು. ಸದೃಢ ಮೈಕಟ್ಟು ಹಾಗೂ ಸಾಕಷ್ಟು ಎತ್ತರವಿದ್ದ ವಿಲನ್ ಅಖಾಡದಲ್ಲಿ ತನ್ನದೇ ಆದ ಹೆಸರು ಗಳಿಸಿತ್ತು. ಕಳೆದೊಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಈ ಹೋರಿಯನ್ನ ಉಳಿಸಿಕೊಳ್ಳಲಾಗದೆ ಮಾಲೀಕ ನಿಂಗೇಗೌಡನ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಮಲ್ಲೇನಹಳ್ಳಿಯ ಪಶು ವೈದ್ಯಕೀಯ ಚಿಕಿತ್ಸಾಲಯದಲ್ಲಿ ಮಹಿಳಾ ವೈದ್ಯರು ನೇಮಕಗೊಂಡಿದ್ದಾರೆ. ಈ ವೈದ್ಯರು ಹಾಗೂ ಕಾಂಪೌಂಡರ್ ಎಲ್ಲ ಸಮಯದಲ್ಲೂ ಆಸ್ಪತ್ರೆಯಲ್ಲಿ ಲಭ್ಯವಿರುವುದಿಲ್ಲ. ಗ್ರಾಮದ ದನಕರುಗಳ ಪೋಷಣೆ ಹಾಗೂ ಚಿಕಿತ್ಸೆಯಲ್ಲಿ ನಿಗಾವಹಿಸದ ವೈದ್ಯಾಧಿಕಾರಿಗಳನ್ನು ವಜಾಗೊಳಿಸುವಂತೆ ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ:ಸೌದಿ ಮಿನಿಸ್ಟರ್ ಜೊತೆ ಔತಣ ಸವಿದ ಶಾರೂಖ್, ಸಲ್ಮಾನ್, ಅಕ್ಷಯ್ – ಅಸಲಿ ಕಾರಣವೇನು
ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳನ್ನ ನೇಮಕ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಲಕ್ಷಾಂತರ ಮೌಲ್ಯದ ರಾಸುವನ್ನು ಕಳೆದುಕೊಂಡ ರೈತ, ಸರ್ಕಾರದ ನೆರವನ್ನು ಎದುರು ನೋಡುತ್ತಿದ್ದಾರೆ.
ಇತ್ತೀಚೆಗಷ್ಟೆ ಕೆಜಿಎಫ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಿನಿಮಾ ಕುರಿತು ಶೀಘ್ರದಲ್ಲೆ ಅಪ್‍ಡೇಟ್ ನೀಡುವುದಾಗಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಇಂದು ಯಶ್ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ತುಣುಕನ್ನು ಶೇರ್ ಮಾಡಿಕೊಳ್ಳುವ ಮೂಲಕ ಸಿನಿಮಾದ ಅಪ್‍ಡೇಟ್ ಏನೆಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಯಶ್ ಶೇರ್ ಮಾಡಿರುವ ವಿಡಿಯೋದಲ್ಲಿ ಇದೇ 17 ರಂದು ಅಂದರೆ ಸೋಮವಾರ ಸಿನಿಮಾದ ಹೀರೋ ಅಲ್ಲ. ವಿಲನ್ ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಕೂಡ “ಹೀರೋ ಅಲ್ಲ, ವಿಲನ್ ಬರುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸೋಮವಾರ ಕೆಜಿಎಫ್ ಸಿನಿಮಾದ ಖಳನಟನ ಪೋಸ್ಟರ್ ರಿಲೀಸ್ ಮಾಡುವ ಸಾಧ್ಯತೆ ಇದೆ.
‘ಕೆಜಿಎಫ್-1’ ಧೂಳೆಬ್ಬಿಸಿದ ಬಳಿಕ ಬಹುನಿರೀಕ್ಷಿತ ‘ಕೆಜಿಎಫ್-2’ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಯಶ್ ಅಭಿನಯದ ಈ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದ್ದು, ದೇಶ ವಿದೇಶಗಳಲ್ಲಿ ಚಿತ್ರದ ಕುರಿತು ಕುತೂಹಲ ಹೆಚ್ಚಿದೆ. ಬಾಲಿವುಡ್ ನಟರಾದ ಸಂಜಯ್ ದತ್ ಹಾಗೂ ರವೀನಾ ಟಂಡನ್ ಅವರು ಚಿತ್ರ ತಂಡ ಸೇರಿರುವುದು ಇನ್ನೂ ಕುತೂಹಲಕ್ಕೆ ಕಾರಣವಾಗಿದೆ. ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.