Tag: villagers

  • ಜಮೀನು ವಿವಾದ ಎರಡು ಗ್ರಾಮಗಳ ನಡುವೆ ಮಾರಾಮಾರಿ

    ಜಮೀನು ವಿವಾದ ಎರಡು ಗ್ರಾಮಗಳ ನಡುವೆ ಮಾರಾಮಾರಿ

    ದಾವಣಗೆರೆ: ಜಮೀನು ವಿವಾದ ಹಿನ್ನೆಲೆ ಎರಡು ಗ್ರಾಮಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ದೊಣ್ಣೆ, ಕುಡುಗೋಲುಗಳಿಂದ ಪರಸ್ಪರವಾಗಿ ಸಿನಿಮೀಯ ರೀತಿ ಹಲ್ಲೆ ನಡೆಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕಂಚಿಕೊಪ್ಪ ಹಾಗೂ ಹೊನ್ನಾಳಿಯ ತುಗ್ಗಲಹಳ್ಳಿ ಗ್ರಾಮಸ್ಥರ ನಡುವೆ ಮಾರಾಮಾರಿಯಾಗಿದೆ. ಕಂಚಿಕೊಪ್ಪ ಗ್ರಾಮದ 30 ದಲಿತ ಕುಟುಂಬಗಳು ತುಗ್ಗಲಹಳ್ಳಿ ಗ್ರಾಮದ ಬಳಿ ಇರುವ ಸರ್ವೇ ನಂಬರ್ 29- 30 ರಲ್ಲಿ 40 ಎಕರೆ ಜಮೀನನಲ್ಲಿ ಉಳುಮೆ ಮಾಡುತ್ತಿದ್ದು, ಸಾಗುವಳಿ ಚೀಟಿ, ಪಹಣೆ ಕೂಡ ನೀಡಲಾಗಿದೆ. ಇದನ್ನೂ ಓದಿ: ಸ್ಕೂಟರ್‌ನಲ್ಲಿ ಶಾಲೆಗೆ ತೆರಳುತ್ತಿದ್ದಾಗ ದೊಡ್ಡ ರಸ್ತೆ ಗುಂಡಿಗೆ ಬಿದ್ದ ವಿದ್ಯಾರ್ಥಿನಿಯರು!

     Davanagere

    ಈ ಜಮೀನು ಖಾತೆ ಮಾಡಿಕೊಡುವಂತೆ ಕಂಚಿಕೊಪ್ಪ ಗ್ರಾಮದ ದಲಿತ ಕುಟುಂಬಗಳು ಕೋರ್ಟ್ ಮೊರೆ ಹೋಗಿದ್ದವು. ಆದರೆ ಇದೇ ಸಂದರ್ಭದಲ್ಲಿ ತುಗ್ಗಲಹಳ್ಳಿ ಗ್ರಾಮದ ಕೆಲವರು ದಲಿತರು ಉಳುಮೆ ಮಾಡುತ್ತಿರುವ ಜಮೀನು ನಮಗೆ ಸೇರಿದ್ದು ಎಂದು ತಕರಾರು ತೆಗೆದಿದ್ದಾರೆ. ಬಳಿಕ ಬುಧವಾರ ಸಂಜೆ ಏಕಾಏಕಿ ಜಮೀನಿನಲ್ಲಿದ್ದ ಬೆಳೆಯನ್ನು ನಾಶ ಮಾಡಿದ್ದರು. ಇದರಿಂದ ಮಾತಿನ ಚಕಮಕಿಯಾಗಿ ನಡೆದಿದ್ದು, ನಂತರ ಎರಡು ಗ್ರಾಮದವರು ಕುಡಗೋಲು, ದೊಣ್ಣೆಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಗೃಹ ಸಚಿವರಿಗೆ ಒಂದೇ ವರ್ಷದಲ್ಲಿ ಎರಡು ಬಾರಿ ಕೊರೊನಾ ಪಾಸಿಟಿವ್

     Davanagere

    ಹಲ್ಲೆಗೊಳಗದ ಕಂಚಿಕೊಪ್ಪದ 13 ಜನರು ಆಸ್ಪತ್ರೆಗೆ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಹೊನ್ನಾಳಿ ಸಿಪಿಐ ದೇವರಾಜ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನೂ ಹಲ್ಲೆಗೊಳಗಾದವರಿಂದ ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತುಗ್ಗಲಹಳ್ಳಿ ಗ್ರಾಮದ ಇಬ್ಬರನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ.

  • ಒಡೆದು ಹೋಯ್ತು 4 ಕೆರೆ ಕಟ್ಟೆಗಳು – ಆತಂಕದಲ್ಲಿ ಶಿಡ್ಲಘಟ್ಟದ ಗ್ರಾಮಸ್ಥರು

    ಒಡೆದು ಹೋಯ್ತು 4 ಕೆರೆ ಕಟ್ಟೆಗಳು – ಆತಂಕದಲ್ಲಿ ಶಿಡ್ಲಘಟ್ಟದ ಗ್ರಾಮಸ್ಥರು

    ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಾಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರೋ ಧಾರಾಕಾರ ಮಳೆಗೆ ಜಿಲ್ಲೆಯ ಬಹುತೇಕ ಕೆರೆ ಕುಂಟೆ ನದಿ ನಾಲೆ ಜಲಾಶಯ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಈ ಹಿನ್ನೆಲೆ ಚಿಕ್ಕಳ್ಳಾಪುರ ಜಿಲ್ಲೆಯಲ್ಲಿ 4 ಕೆರೆ ಕಟ್ಟೆಗಳು ಒಡೆದು ಹೋಗಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.

    ಕಳೆದ ರಾತ್ರಿ ಸುರಿದ ಮಳೆಗೆ ಶಿಡ್ಲಘಟ್ಟ ತಾಲೂಕಿನ ಅನೆಮಡುಗು ಗ್ರಾಮದ ಬಳಿಯ ಅಗ್ರಹಾರ ಕೆರೆ, ಚೊಕ್ಕನಹಳ್ಳಿ ಗ್ರಾಮದ ಕೆರೆ, ಚಿಕ್ಕಬಂದರಘಟ್ಟ ಕರೆ ಹಾಗೂ ಪಾಪತಿಮ್ಮನಹಳ್ಳಿ ಕೆರೆ ಕಟ್ಟೆಗಳು ಒಡೆದು ಹೋಗಿದೆ. ಕೆರೆ ಕಟ್ಟೆಗಳು ಒಡೆದ ಪರಿಣಾಮ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕೆರೆಗಳ ಕೆಳ ಭಾಗದ ರೈತರು ಬೆಳೆದ ಬೆಳೆಗಳಲ್ಲೆವೂ ನೀರು ಪಾಲಾಗಿವೆ. ಇದನ್ನೂ ಓದಿ: ಪರ್ಸೆಂಟೇಜ್ ಆರೋಪ – ನನಗೂ, ಪಕ್ಷಕ್ಕೂ ಸಂಬಂಧವಿಲ್ಲದ ವಿಚಾರ ಅಂದ್ರು ಡಿಕೆಶಿ

    ಮೈದುಂಬಿದ ಕೆರೆಗೆಳಲ್ಲಿನ ನೀರೆಲ್ಲವೂ ಖಾಲಿಯಾಗಿ ಜನ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ವೇ? ಎಂದು ದುಃಖ ಪಟ್ಟುಕೊಳ್ಳುತ್ತಿದ್ದಾರೆ. ಕಣ್ಣೆದುರೇ ತಮ್ಮೂರಿನ ಕೆರೆಗಳ ನೀರು ಖಾಲಿಯಾಗಿ ಹರಿದು ಹೋಗಿದ್ದು, ಜನರಿಗೆ ನೋವು ತಂದಿದೆ. ಇನ್ನೂ ಗೋಣಿಮರದಹಳ್ಳಿ ಗ್ರಾಮದ ಜನರಿಗೆ ಕೆರೆ ಕಟ್ಟೆ ಒಡೆದು ಆತಂಕ ಶುರುವಾಗಿದೆ. ಲಗಿನಾಯಕನಹಳ್ಳಿ ಬಳಿಯ ಕೆರೆ ಕಟ್ಟೆಯ ಬಳಿ ಮಣ್ಣು ಕುಸಿತ ಆಗಿದೆ ಎನ್ನಲಾಗಿದ್ದು, ಕೆರೆ ಕಟ್ಟೆ ಒಡೆದು ಆತಂಕ ಶುರುವಾಗಿದೆ.

    ಗೋಣಿಮರದಹಳ್ಳಿ ಬೃಹತ್ ಕಾಲುವೆ ಇದ್ದು, ಕೆರೆ ಒಡೆದು ಹೋದರೆ ಅಪಾರ ಪ್ರಮಾಣದ ನೀರು ಗ್ರಾಮದೊಳಗೆ ನುಗ್ಗಲಿದೆ. ಕಳೆದ ರಾತ್ರಿ ಸಹ ಧಾರಾಕಾರ ಮಳೆಗೆ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ಕುರಿಗಳು ಹಾಗೂ ಪೆಟ್ಟಿಗೆ ಅಂಗಡಿಗಳು ಕೊಚ್ಚಿ ಹೋಗಿವೆ. ಲಗಿನಾಯಕನಹಳ್ಳಿ ಬಳಿ ಡಾಂಬರು ರಸ್ತೆ ಸಹ ಕೊಚ್ಚಿ ಹೋಗಿದೆ. ಇದನ್ನೂ ಓದಿ: ಡಿಕೆಶಿಯನ್ನು 4 ದಶಕಗಳಿಂದ ಬಲ್ಲೆ, ಒಬ್ಬ ಒಳ್ಳೆಯ ಆಡಳಿತಗಾರ: ಉಗ್ರಪ್ಪ

  • ಶಿರಸಿಯಲ್ಲಿ ಚಿರತೆ ಕಾಟ -ಮನೆಯಿಂದ ಹೊರ ಬರಲು ಹೆದರಿದ ಜನ

    ಶಿರಸಿಯಲ್ಲಿ ಚಿರತೆ ಕಾಟ -ಮನೆಯಿಂದ ಹೊರ ಬರಲು ಹೆದರಿದ ಜನ

    -ಚಿರತೆ ಸೆರೆಗೆ ಅರಣ್ಯಾಧಿಕಾರಿಗಳ ತಂಡ ದಿನವಿಡೀ ಗಸ್ತು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಅರಣ್ಯ ವಲಯ ವ್ಯಾಪ್ತಿಯ ಶಿವಳ್ಳಿ, ದಾನಂದಿ ಭಾಗದಲ್ಲಿ ಚಿರತೆ ಜಾನುವಾರುಗಳ ಮೇಲೆ ಕೆಲ ದಿನಗಳಿಂದ ಸತತ ದಾಳಿ ನಡೆಸುತ್ತಿದೆ. ಇದರಿಂದಾಗಿ ಗ್ರಾಮದ ಜನ ಮನೆಯಿಂದ ಹೊರ ಬರಲು ಹೆದರುತಿದ್ದು, ಅಪಾಯಕಾರಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.

    ಬಿಸಲಕೊಪ್ಪ, ಎಕ್ಕಂಬಿ, ಶಿವಳ್ಳಿ ಭಾಗದಲ್ಲಿ ಸಮೃದ್ದ ಅರಣ್ಯ ಪ್ರದೇಶ, ಸಾಗುವಾನಿ ನೆಡುತೋಪು ಹೆಚ್ಚಿದ್ದು ಪ್ರಾಣಿಗಳ ಓಡಾಟಕ್ಕೆ ಅನುಕೂಲವಾಗಿದೆ. ಹೀಗಾಗಿ ಚಿರತೆ, ಆನೆಗಳು ಈ ಪ್ರದೇಶಕ್ಕೆ ಲಗ್ಗೆ ಇಡುವುದು ಸಾಮಾನ್ಯವಾದಂತಾಗಿದೆ. ಹದಿನೈದು ದಿನಗಳಿಂದ ಈಚೆಗೆ ಬೊಪ್ಪನಳ್ಳಿ, ದಾನಂದಿ ಭಾಗದಲ್ಲಿ ಸುಮಾರು ನಾಲ್ಕು ಹಸುಗಳನ್ನು ಚಿರತೆ ಬಲಿ ಪಡೆದಿದೆ. ಈ ಪೈಕಿ ಎರಡು ಕರು ಮತ್ತು ಎರಡು ದೊಡ್ಡ ಆಕಳು ಸೇರಿದೆ. ಇದನ್ನೂ ಓದಿ: ಅರಣ್ಯ ಪ್ರದೇಶಕ್ಕೆ ಎಳೆದೊಯ್ದು 55ರ ಮಹಿಳೆ ಮೇಲೆ ಗ್ಯಾಂಗ್ ರೇಪ್

    cheetah

    ಕೊರ್ಸೆ, ದಾನಂದಿ, ಶಿವಳ್ಳಿ, ಬೊಪ್ಪನಳ್ಳಿ, ಸಂಬಯ್ಯನಜಡ್ಡಿ, ಗೇರಮನೆ ಸುತ್ತಮುತ್ತ ಚಿರತೆಗಳು ಹದಿನೈದು ದಿನಗಳಿಂದ ನಿರಂತರವಾಗಿ ಓಡಾಡುತ್ತಿದೆ. ಈಚೆಗೆ ಮೂರು ಚಿರತೆಗಳು ಒಟ್ಟೊಟ್ಟಿಗೆ ಇದ್ದಿದ್ದನ್ನು ಸ್ಥಳೀಯರು ನೋಡಿದ್ದಾರೆ. ಇನ್ನು ಸಂಜೆಯಾಗುತ್ತಿದ್ದಂತೆ ಚಿರತೆಗಳು ಗ್ರಾಮದ ಭಾಗದಲ್ಲಿ ಓಡಾಡುತಿದ್ದು, ಚಿರತೆ ಭಯದಿಂದ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಜನರು ಸೊಪ್ಪಿನ ಬೆಟ್ಟ, ತೋಟಕ್ಕೆ ತೆರಳಲು ಆತಂಕ ಪಡುತ್ತಿದ್ದು, ಸಂಜೆಯಾಗುತ್ತಿದ್ದಂತೆ ಭಯದಲ್ಲಿ ಗ್ರಾಮಗಳು ಖಾಲಿ ಹೊಡೆಯುತ್ತಿದೆ.

    ಪ್ರತಿ ದಿನ ಚಿರತೆಗಳು ಗ್ರಾಮದಲ್ಲಿ ಕಾಣಿಸುತ್ತಿರುವುದರಿಂದ ಗ್ರಾಮದಲ್ಲಿ ಭಯ ಆವರಿಸಿದೆ. ಜಾನುವಾರುಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಆಯ್ದ ಜಾಗಗಳನ್ನು ಗುರುತಿಸಿ ಅಲ್ಲಿ ಬೋನುಗಳನ್ನು ಇರಿಸಿದೆ. ಅರಣ್ಯ ರಕ್ಷಕರು ಗಸ್ತು ತಿರುಗಲು ಆರಂಭಿಸಿದ್ದಾರೆ. ಇದನ್ನೂ ಓದಿ: ಮದುವೆಗಾಗಿ ಮತಾಂತರ ತಪ್ಪು: ಮೋಹನ್ ಭಾಗವತ್

    ಜನರ ಆತಂಕ ದೂರ ಮಾಡಲು ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಪ್ರಾಣಿ ಸೆರೆ ಹಿಡಿಯುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಯಕ್ಕುಂಬಿ ವಿಭಾಗದ ಡೆಪ್ಯುಟಿ ಆರ್.ಎಫ್.ಓ ರವೀಂದ್ರ ಎಸ್.ಕರ್ನಲ್ ಮಾಹಿತಿ ನೀಡಿದ್ದಾರೆ. ಚಿರತೆ ದಾಳಿಗೆ ಮೃತಪಟ್ಟ ಆಕಳುಗಳ ವಾರಸುದಾರರಿಗೆ ಇಲಾಖೆಯಿಂದ ಪರಿಹಾರ ಒದಗಿಸಲಾಗುವುದು. ಗ್ರಾಮಗಳತ್ತ ಚಿರತೆ ನುಗ್ಗದಂತೆ ಎಚ್ಚರವಹಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಗ್ಗತ್ತಲಲ್ಲಿ ಕರ್ನಾಟಕ ಮುಳುಗುವ ಆತಂಕ – ಇಂಧನ ಸಚಿವರು ಹೇಳಿದ್ದೇನು?

    ಶಿರಸಿ ವಿಭಾಗದ ಡಿಸಿಎಫ್ ಎಸ್.ಜಿ ಹೆಗಡೆ ಮಾರ್ಗದರ್ಶನದಲ್ಲಿ ಎ.ಸಿ.ಎಫ್. ಅಶೋಕ್ ಅಲಗೇರ್, ಬನವಾಸಿ ಆರ್.ಎಫ್.ಒ. ಉಷಾ ಕಬ್ಬೇರರವರ ತಂಡ ರಚನೆ ಮಾಡಿ ಚಿರತೆ ಹಿಡಿಯುವ ಕಾರ್ಯಾಚರಣೆ ನಡೆದಿದೆ.

  • ಕಲಬುರಗಿಯಲ್ಲಿ ಮತ್ತೆ ಕಂಪಿಸಿದ ಭೂಮಿ – ಗ್ರಾಮಸ್ಥರಲ್ಲಿ ಆತಂಕ

    ಕಲಬುರಗಿಯಲ್ಲಿ ಮತ್ತೆ ಕಂಪಿಸಿದ ಭೂಮಿ – ಗ್ರಾಮಸ್ಥರಲ್ಲಿ ಆತಂಕ

    ಕಲಬುರಗಿ: ಕಲಬುರಗಿ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಮತ್ತೆ ಲಘು ಭೂಮಿ ಕಂಪನ ಅನುಭವ ಆಗಿದೆ.

    ಇಂದು ಮುಂಜಾನ 6 ಗಂಟೆ ಸುಮಾರಿಗೆ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಹಲಚೇರಾ, ಗಡಿಕೇಶ್ವರ್, ರಾಜಾಪುರ ಸೇರಿದಂತೆ ಕೆಲವಡೆ ಲಘು ಭೂ ಕಂಪನ ಸಂಭವಿಸಿದೆ. ಕಳೆದ ಎರಡು ದಿನಗಳಿಂದ ಈ ಗ್ರಾಮಗಳಲ್ಲಿ ಮೇಲಿಂದ ಮೇಲೆ ಲಘು ಭೂ ಕಂಪನ ಉಂಟಾಗುತ್ತಿದ್ದು, ಇದೀಗ ಜನರು ಭಯದಲ್ಲಿಯೇ ಕಾಲ ಕಲಿಯುತ್ತಿದ್ದಾರೆ.

    earthquake

    ಶನಿವಾರ ಕೂಡ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಹಾಗೂ ಯರಕೊಂಡ ಗ್ರಾಮಗಳಲ್ಲಿ ನಸುಕಿನ ಜಾವ 5.40ರ ಸಮಯದಲ್ಲಿ ಎರಡು ಬಾರಿ ಲಘು ಭೂಕಂಪನ ಅನುಭವ ಆಗಿದ್ದು, ಕಂಪನಕ್ಕೆ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿತ್ತು. ಅಲ್ಲದೇ ಜನರು ಆತಂಕದಿಂದ ಮನೆಯಿಂದ ಹೊರಬಂದಿದ್ದರು. ಇದನ್ನೂ ಓದಿ: ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ

    ಶುಕ್ರವಾರ ಕೂಡಾ ಗ್ರಾಮದಲ್ಲಿ ಲಘು ಭೂ ಕಂಪನವಾಗಿತ್ತು. ಕಳೆದ ಕೆಲ ವರ್ಷಗಳಲ್ಲಿ ಹಲವಾರು ಬಾರಿ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಭಾರಿ ಸದ್ದು ಕೇಳಿ ಬರ್ತಿತ್ತು. ಇದೀಗ ಜನರಿಗೆ ಮೇಲಿಂದ ಮೇಲೆ ಲಘು ಭೂಕಂಪನ ಅನುಭವ ಆಗುತ್ತಿದೆ. ಅಲ್ಲದೇ ಈ ವಿಚಾರವಾಗಿ ಕೂಡಲೇ ಸರ್ಕಾರ ನಿಖರ ಮಾಹಿತಿ ತಿಳಿಸಬೇಕು. ಒಂದು ವೇಳೆ ಭೂಕಂಪ ಕೇಂದ್ರ ಸ್ಥಾನ ಆಗಿದ್ದರೆ ಎರಡು ಗ್ರಾಮ ಸ್ಥಳಾಂತರಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದರು. ಇದನ್ನೂ ಓದಿ: ಕಲಬುರಗಿಯ ಎರಡು ಗ್ರಾಮಗಳಲ್ಲಿ ಮತ್ತೆ ಭೂಕಂಪನ

  • ಮತಾಂತರಕ್ಕೆ ಯತ್ನ- ಮೂವರನ್ನು ಕೂಡಿ ಹಾಕಿದ ಗ್ರಾಮಸ್ಥರು

    ಮತಾಂತರಕ್ಕೆ ಯತ್ನ- ಮೂವರನ್ನು ಕೂಡಿ ಹಾಕಿದ ಗ್ರಾಮಸ್ಥರು

    ಧಾರವಾಡ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸುತ್ತಿದ್ದವರನ್ನು ಗ್ರಾಮಸ್ಥರೇ ಕೂಡಿಹಾಕಿ, ಬಳಿಕ ಮೂವರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಜಿಲ್ಲೆಯ ನರೇಂದ್ರ ಗ್ರಾಮದ ಜನ ಮತಾಂತರ ಮಾಡುತ್ತಿದ್ದ ಮೂವರನ್ನು ಕೂಡಿ ಹಾಕಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಶಾಂತವ್ವ, ಪ್ರಸಾದ್ ಹಾಗೂ ಅನ್ನಪೂರ್ಣ ಅವರಿಂದ ನರೇಂದ್ರ ಗ್ರಾಮದ ಮನೆಯೊಂದರಲ್ಲಿ ಪ್ರಾರ್ಥನೆ ನಡೆದಿತ್ತು. ಈ ವೇಳೆ ಗ್ರಾಮದ ರಾಮ ಸೇನೆ ಹಾಗೂ ಆರ್‍ಎಸ್‍ಎಸ್ ಕಾರ್ಯಕರ್ತರು ದಾಳಿ ಮಾಡಿ ಹಿಡಿದಿದ್ದಾರೆ. ಅಲ್ಲದೆ ಇವರ ಬಳಿ ಇದ್ದ ಹಣವನ್ನು ತೆಗೆದುಕೊಂಡು, ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ.

    ಈ ವೇಳೆ ಪ್ರಾರ್ಥನೆ ಮಾಡುತ್ತಿರುವುದಾಗಿ ಒಪ್ಪಿಕೊಂಡಿರುವ ಇವರು, ಪ್ರತಿ ವಾರ ಧಾರವಾಡದ ಶ್ರೀರಾಮನಗರದಲ್ಲಿ ಕೂಡ ಪ್ರಾರ್ಥನೆಗೆ ಹೋಗುತಿದ್ದರು ಎಂದು ಹೇಳಿದ್ದಾರೆ. ಗ್ರಾಮಸ್ಥರು ಇವರನ್ನು ಪೊಲೀಸರಿಗೆ ಒಪ್ಪಿಸಿದ್ದು, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಶಾರುಖ್ ಖಾನ್ ಪುತ್ರನ ಬಂಧನ- ರಮ್ಯಾಗೆ ಅನುಮಾನ

    ಹಿಂದೂ ಧರ್ಮದ ಬಡವರನ್ನೇ ಟಾರ್ಗೆಟ್ ಮಾಡಿ ಮತಾಂತರ ಮಾಡುತಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು, ಹೈದರಾಬಾದ್‍ನಿಂದ ಇವರಿಗೆ ಹಣ ಬರುತ್ತೆ ಎಂದು ಆರೋಪ ಮಾಡಿದ್ದಾರೆ. ಮತಾಂತರಕ್ಕೆ ಬಂದಿದ್ದ ಪ್ರಸಾದ್ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ನಾವು ಪ್ರಾರ್ಥನೆ ಮಾಡಲು ಮಾತ್ರ ಅಲ್ಲಿ ಕುಳಿತಿದ್ದೆವು ಎಂದಿದ್ದಾರೆ.

  • ಒಂದು ಬಿಂದಿಗೆ ನೀರಿಗಾಗಿ ಐದು ಕಿ.ಮೀ.ನಡೀಬೇಕು- ಹನಿ ನೀರಿಗಾಗಿ ಗ್ರಾಮದಲ್ಲಿ ಹಾಹಾಕಾರ

    ಒಂದು ಬಿಂದಿಗೆ ನೀರಿಗಾಗಿ ಐದು ಕಿ.ಮೀ.ನಡೀಬೇಕು- ಹನಿ ನೀರಿಗಾಗಿ ಗ್ರಾಮದಲ್ಲಿ ಹಾಹಾಕಾರ

    – ಉರಿ ಬಿಸಿಲಿನಲ್ಲಿ, ಮಳೆಯಲ್ಲಿ ನೀರಿಗಾಗಿ ಬಿಂದಿಗೆ ಹಿಡಿದು ಕಿ.ಮೀ.ಗಟ್ಟಲೇ ಹೋಗಬೇಕು
    – ವಯಸ್ಸಾದವರಿಗೆ, ಅಸಹಾಯಕರಿಗೆ ಹಳ್ಳದ ಕೆಸರು ನೀರೇ ಗತಿ

    ಯಾದಗಿರಿ: ಸುಮಾರು 5 ಕಿ.ಮೀ.ದೂರದಲ್ಲಿರುವ ಬೋರ್ ವೆಲ್‍ನಿಂದ ಗ್ರಾಮದ ಜನ ನೀರು ತರುತ್ತಾರೆ. ಹನಿ ನೀರಿಗಾಗಿ ಈ ಗ್ರಾಮದಲ್ಲಿ ಹಾಹಾಕಾರವಿದೆ. ವಯಸ್ಸಾದವರಂತೂ ಹಳ್ಳದ ಕೆಸರು ನೀರನ್ನೇ ಕುಡಿದು ಬದುಕುತ್ತಿದ್ದಾರೆ.

    ಕುಡಿಯುವ ನೀರಿಗಾಗಿ ಜಿಲ್ಲೆಯ ಶಹಾಪೂರ ತಾಲೂಕಿನ ನಂದಿಹಳ್ಳಿ ಜೆ ಗ್ರಾಮದ ಜನರ ಪರಿಸ್ಥಿತಿ ಹೇಳತಿರದಾಗಿದೆ. ಗ್ರಾಮದಲ್ಲಿ ಸುಮಾರು 400 ಮನೆಗಳಿವೆ, ಹಲವಾರು ವರ್ಷಗಳಿಂದ ಈ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಎಷ್ಟೋ ಚುನಾವಣೆಗಳು, ಎಷ್ಟೋ ಜನಪ್ರತಿನಿಧಿಗಳು ಈ ಗ್ರಾಮಕ್ಕೆ ಬಂದು ಹೋದರೂ ಗ್ರಾಮಕ್ಕೆ ಮಾತ್ರ ಹನಿ ಶುದ್ಧ ನೀರು ನೀಡಲು ಆಗಿಲ್ಲ. ಇದನ್ನೂ ಓದಿ: ನಿವೃತ್ತ ನೌಕರನ ಸ್ನೇಹ ಬೆಳೆಸಿದ ಕಾಗೆ- ಮನೆಯ ಸದಸ್ಯನಾದ ಕಥೆ!

    ನಂದಿಹಳ್ಳಿ ಜೆ ಗ್ರಾಮದಲ್ಲಿ ಸಿಗುವ ನೀರಿನಲ್ಲಿ ಅತಿಯಾದ ಫ್ಲೋರೈಡ್ ಮತ್ತು ಉಪ್ಪಿನ ಅಂಶವಿದೆ. ಹೀಗಾಗಿ ಈ ನೀರು ನಿತ್ಯದ ಬಳಕೆಗೆ ಯೋಗ್ಯ ಹೊರತು, ಕುಡಿಯಲು ಮತ್ತು ಅಡುಗೆಗಲ್ಲ. ಹೀಗಾಗಿ ಗ್ರಾಮಸ್ಥರು ಶುದ್ಧ ನೀರಿಗಾಗಿ ಐದು ಕಿಲೋಮೀಟರ್ ದೂರದಲ್ಲಿರುವ ಮರಿಯಮ್ಮ ತಾಯಿ ದೇವಸ್ಥಾನದ ಬಳಿಯಲ್ಲಿರುವ ಬೋರ್ ವೆಲ್ ನ್ನು ನೆಚ್ಚಿಕೊಂಡಿದ್ದಾರೆ. ಬೈಕ್ ಇರುವವರು ಬೈಕ್ ನಲ್ಲಿ ನೀರು ತರತ್ತಾರೆ. ಬಡವರು, ಅಸಹಾಯಕರು ಮತ್ತು ವಯಸ್ಸಾದವರು ಬಿಂದಿಗೆ ನೀರಿಗಾಗಿ ಪಡುವ ಪಡಿಪಾಟಲು ಅಷ್ಟಿಷ್ಟಲ್ಲ. ಉರಿ ಬಿಸಿಲಿನಲ್ಲಿ, ಮಳೆಯಲ್ಲಿ ನಡೆದುಕೊಂಡು ಹೋಗಿ ನೀರು ತರಬೇಕಾದ ಪರಿಸ್ಥಿತಿಯಿದೆ. ಬೆಳಗ್ಗೆ ಎದ್ದು ಒಂದು ಬಿಂದಿಗೆ ನೀರು ತರೋದೆ ಇಲ್ಲಿ ಹರಸಹಾಸದ ಕೆಲಸವಾಗಿದೆ.

    ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೇವಲ ಚುನಾವಣೆ ಸಮಯದಲ್ಲಿ ನೆನಪಾಗುವ ಈ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ನೆನಪಾಗೋದು ಮತ್ತೆ ಚುನಾವಣೆ ಬಂದಾಗ. ಗ್ರಾಮದ ಪಕ್ಕದಲ್ಲಿ ಹಳ್ಳವಿದೆ. ಈ ಹಿಂದೆ ಹಳ್ಳದಲ್ಲಿ ಒರತೆ ತೋಡಿ ಅಲ್ಲಿಂದ ನೀರು ತರಲಾಗುತ್ತಿತ್ತು. ಆದರೆ ಸದ್ಯ ಹಳ್ಳ ಕಲುಷಿತಗೊಂಡಿದ್ದು, ಆ ನೀರು ಸಹ ಕುಡಿಯಲು ಯೋಗವಿಲ್ಲ. ಮುಖ್ಯ ರಸ್ತೆ ಬಳಿ ಇರುವ ಮರಿಯಮ್ಮ ತಾಯಿ ದೇವಸ್ಥಾನದ ಬೋರವೇಲ್ ನಿಂದ ಪೈಪ್ ಲೈನ್ ಮೂಲಕ ಗ್ರಾಮಕ್ಕೆ ನೀರು ತರಬಹುದು. ಆದರೆ ಇದನ್ನು ಮಾಡುವ ಇಚ್ಛಾಶಕ್ತಿ ಮಾತ್ರ ಅಧಿಕಾರಿಗಳಿಗಾಲಿ, ಜನಪ್ರತಿನಿಧಿಗಳಿಗಾಲಿ ಇಲ್ಲ.

  • ಗ್ರಾಮಕ್ಕೆ ಇಲ್ಲ ಸ್ಮಶಾನ – ರಸ್ತೆಯ ಪಕ್ಕದಲ್ಲೇ ನಡೀತು ವ್ಯಕ್ತಿ ಅಂತ್ಯಕ್ರಿಯೆ

    ಗ್ರಾಮಕ್ಕೆ ಇಲ್ಲ ಸ್ಮಶಾನ – ರಸ್ತೆಯ ಪಕ್ಕದಲ್ಲೇ ನಡೀತು ವ್ಯಕ್ತಿ ಅಂತ್ಯಕ್ರಿಯೆ

    ಹಾವೇರಿ: ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ಇಲ್ಲದ್ದರಿಂದ ರಸ್ತೆ ಪಕ್ಕದಲ್ಲಿಯೇ ಮೃತ ರೈತನ ಅಂತ್ಯಕ್ರಿಯೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶೀಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    Haveri

    ಗ್ರಾಮದ ಬಳಿ ಇರುವ ಹಾವೇರಿ-ಹಾನಗಲ್ ರಸ್ತೆಯ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡಲಾಗಿದ್ದು, ಮೃತ ವ್ಯಕ್ತಿಯನ್ನು ಗ್ರಾಮದ ಹನುಮಂತಪ್ಪ ಹೊಸಮನಿ(57) ಎಂದು ಗುರುತಿಸಲಾಗಿದೆ. ಹಾವು ಕಡಿದ ರೈತ ಹನುಮಂತಪ್ಪ ಮೃತಪಟ್ಟಿದ್ದ. ಇದನ್ನೂ ಓದಿ: 40 ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಕುರಿತು ಚರ್ಚೆ ನಡೆಯುತ್ತಿದೆ: ಜಾರಕಿಹೊಳಿ ಬಾಂಬ್

    Haveri

    ಶೀಗಿಹಳ್ಳಿ ಗ್ರಾಮಕ್ಕೆ ಅಂತ್ಯಕ್ರಿಯೆ ಮಾಡಲು ಸೂಕ್ತ ಜಾಗದಲ್ಲಿ ಸ್ಮಶಾನ ವ್ಯವಸ್ಥೆ ಕಲ್ಪಿಸುವಂತೆ ಹತ್ತಾರು ಬಾರಿ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಆದರೂ ಈವರೆಗೂ ಸ್ಮಶಾನ ಜಾಗದ ವ್ಯವಸ್ಥೆ ಆಗದ್ದರಿಂದ ರಸ್ತೆ ಪಕ್ಕದಲ್ಲೇ ಅಂತ್ಯಕ್ರಿಯೆಯನ್ನು ಗ್ರಾಮಸ್ಥರು ಮಾಡುತ್ತಿದ್ದಾರೆ. ಈಬಗ್ಗೆ ಕೂಡಲೇ ಜಿಲ್ಲಾಡಳಿತ ಸೂಕ್ತ ಸ್ಥಳ ಗುರುತಿಸಿ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನೆರೆಮನೆಯ ಹೆಣ್ಣು ನಾಯಿಯನ್ನು ರೇಪ್ ಮಾಡಿದ 67ರ ವೃದ್ಧ

  • ದಾಖಲೆಗಳಲ್ಲಿ ಗ್ರಾಮದ ಹೆಸರು ಮಾಯ- ಗ್ರಾಮಸ್ಥರ ಪರದಾಟ

    ದಾಖಲೆಗಳಲ್ಲಿ ಗ್ರಾಮದ ಹೆಸರು ಮಾಯ- ಗ್ರಾಮಸ್ಥರ ಪರದಾಟ

    ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಪಗಡೆಕಲ್ಲಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿರುವ ಎಲ್ಲ ನಾಗರೀಕರ ದಾಖಲೆಗಳಲ್ಲಿ ಗ್ರಾಮದ ಹೆಸರು ಬಿಟ್ಟು ಹೋಗಿ, ಬೇರೆ ಗ್ರಾಮದ ಹೆಸರು ಬರುತ್ತಿದ್ದು, ಇದರಿಂದ ತುಂಬಾ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗ್ರಾಮಸ್ಥರು, ಗ್ರಾಮದಲ್ಲಿ 50 ಕುಟುಂಬಗಳಿದ್ದು, 250 ಮಂದಿ ಮತದಾರರಿದ್ದಾರೆ. ಆದರೆ ಕಳೆದ 5 ವರ್ಷಗಳಿಂದ ಗ್ರಾಮದಲ್ಲಿ ವಾಸವಾಗಿರುವ ಎಲ್ಲ ನಾಗರೀಕರ ಪಡಿತರ ಚೀಟಿ, ಮತದಾರರ ಚೀಟಿ, ಇ-ಸ್ವತ್ತು ಹಾಗೂ ಜಾತಿ, ಆದಾಯ ದೃಢೀಕರಣ ಪತ್ರ, ನರೇಗಾ ಜಾಬ್ ಕಾರ್ಡ್ ಗಳಲ್ಲಿ ಗ್ರಾಮದ ಹೆಸರು ಬಿಟ್ಟು ಹೋಗಿದೆ. ಪಕ್ಕದ ಕನಗೋನಹಳ್ಳಿ ಗ್ರಾಮದ ಹೆಸರು ಬರುತ್ತಿದೆ ಎಂದರು. ಇದನ್ನೂ ಓದಿ: ಪಲ್ಸ್ ಪೋಲಿಯೋ ಮಾದರಿಯಲ್ಲಿ ಜಾನುವಾರುಗಳಿಗೆ ಲಸಿಕೆ: ಪ್ರಭು ಚವ್ಹಾಣ್

    ಬೇರೆ ಗ್ರಾಮದ ಹೆಸರು ಬರುತ್ತಿರುವುದರಿಂದ ರೈತರು, ವಿದ್ಯಾರ್ಥಿಗಳು, ಬಡವರು ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಶಾಲಾ ದಾಖಲಾತಿಗಳಲ್ಲಿ ಮಾತ್ರ ಪಗಡೆಕಲ್ಲಹಳ್ಳಿ ಎಂದು ತೋರಿಸಲಾಗಿದೆ. ಉಳಿದ ದಾಖಲಾತಿಗಳಲ್ಲಿ ಬೇರೆ ಗ್ರಾಮದ ಹೆಸರು ಬರುತ್ತಿದೆ ಎಂದು ಅಳಲು ತೋಡಿಕೊಂಡರು.

    ಈ ಬಗ್ಗೆ ಪಾಂಡವಪುರ ತಾಲೂಕು ಪಂಚಾಯಿತಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೆ ಎಲ್ಲ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಸಮಸ್ಯೆ ಸರಿಪಡಿಸುವಂತೆ ಮನವಿ ಮಾಡಲಾಗಿದೆ. ಆದರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಗ್ರಾಮ ತುಂಬಾ ಹಿಂದುಳಿದಿದ್ದು, ಸರ್ಕಾರದಿಂದ ಸಿಗುವ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಗ್ರಾಮದ ರಸ್ತೆಗಳು ಕಲ್ಲು, ಮಣ್ಣಿನಿಂದ ಕೂಡಿದ್ದು, ಓಡಾಡಲು ತೊಂದರೆಯಾಗಿದೆ. ಒಳಚರಂಡಿಗಳು ಆಗಿಲ್ಲ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿ ಕ್ರಮ ಕೈಗೊಂಡು ಗ್ರಾಮದ ಸಮಸ್ಯೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.

  • ರಾತ್ರೋರಾತ್ರಿ ಪ್ರತಿಷ್ಠಾಪಿಸಿದ್ದ ವಿಶ್ವಗುರುಬಸವಣ್ಣ ಮೂರ್ತಿ ತೆರವು

    ರಾತ್ರೋರಾತ್ರಿ ಪ್ರತಿಷ್ಠಾಪಿಸಿದ್ದ ವಿಶ್ವಗುರುಬಸವಣ್ಣ ಮೂರ್ತಿ ತೆರವು

    ಹಾವೇರಿ: ರಾತ್ರೋರಾತ್ರಿ ಪ್ರತಿಷ್ಠಾಪನೆ ಆಗಿದ್ದ ಬಸವಣ್ಣನ ಮೂರ್ತಿ ತೆರವು ಮಾಡಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪ್ರಮುಖ ವೃತ್ತದಲ್ಲಿ ಭಾನುವಾರ ರಾತ್ರಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು.

    basavanna

    ರಾಜಕೀಯ ನಾಯಕರ ಮೂರ್ತಿ ಪ್ರತಿಷ್ಠಾಪನೆಗೆ ಯೋಜನೆ ರೂಪಿಸಿಲಾಗಿದೆ ಅಂದುಕೊಂಡು ಗ್ರಾಮದ ಕೆಲವರು ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆಯನ್ನು ಮಾಡಿದ್ದರು. ಸ್ಥಳಕ್ಕೆ ಹಾವೇರಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಭೇಟಿ ನೀಡಿ ಯಾವುದೇ ಮೂರ್ತಿ ಸ್ಥಾಪನೆ ಮಾಡಬೇಕಾದರೆ ಅನುಮತಿ ಪಡೆಯಬೇಕು. ಯಾರು ಬೇಕಾದರೂ ಮೂರ್ತಿ ಸ್ಥಾಪನೆ ಮಾಡಲು ಆಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ರಾತ್ರಿಯೆಲ್ಲಾ ಸುರಿದ ಮಳೆ – ಜೈನ್ ಆಸ್ಪತ್ರೆಗೆ ನುಗ್ಗಿದ ನೀರು

    basavanna

    ಸರ್ಕಾರದ ಅನುಮತಿ ಪಡೆದು ಗೌರವಯುತವಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡೋಣ ಅಂತಾ ತಿಳಿ ಹೇಳಿ ಬಸವಣ್ಣನ ಮೂರ್ತಿಯನ್ನು ತೆರವು ಮಾಡಿಸಿದ್ದಾರೆ. ಭಾನುವಾರ ರಾತ್ರಿ ಪ್ರತಿಷ್ಠಾಪನೆ ಆಗಿದ್ದ ಮೂರ್ತಿಯನ್ನು ಸೋಮವಾರ ರಾತ್ರಿ ಅಧಿಕಾರಿಗಳು ತೆರವು ಮಾಡಿಸಿ, ಮೂರ್ತಿ ಪ್ರತಿಷ್ಠಾಪನೆ ಗಲಾಟೆಗೆ ತೆರೆ ಎಳೆದಿದ್ದಾರೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಕಾಲಿನಲ್ಲಿ ತುಳಿಯುವುದಲ್ಲದೆ ನೆಕ್ಕಿ ರಸ್ಕ್ ಪ್ಯಾಕ್ – ವೀಡಿಯೋ ವೈರಲ್

  • ಅನುಮತಿ ಇಲ್ಲದೇ ಬಿಸಿಯೂಟದ ಕೋಣೆ ನೆಲಸಮ – ಅಧ್ಯಕ್ಷನ ದರ್ಪಕ್ಕೆ ಗ್ರಾಮಸ್ಥರ ಆಕ್ರೋಶ

    ಅನುಮತಿ ಇಲ್ಲದೇ ಬಿಸಿಯೂಟದ ಕೋಣೆ ನೆಲಸಮ – ಅಧ್ಯಕ್ಷನ ದರ್ಪಕ್ಕೆ ಗ್ರಾಮಸ್ಥರ ಆಕ್ರೋಶ

    ಯಾದಗಿರಿ: ಮಾಜಿಯಾಗಿದ್ದರು ತಾನೇ ಎಸ್‍ಡಿಎಂಸಿ ಹಾಲಿ ಅಧ್ಯಕ್ಷನೆಂದು ಯಾವುದೇ ಅನುಮತಿ ಇಲ್ಲದೇ ಶಾಲೆಯ ಅಡುಗೆ ಕೋಣೆಯನ್ನು ಜೆಸಿಬಿ ಮೂಲಕ ನೆಲಸಮ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಇದನ್ನೂ ಓದಿ: ಭಕ್ತರಿಗೆ ಘಾಸಿಯಾಗಿದೆ, ಸರಿದೂಗಿಸುವ ಪ್ರಯತ್ನ ಮಾಡುತ್ತೇನೆ: ಬೊಮ್ಮಾಯಿ

    yadagiri school

    ಗುರುಮಠಕಲ್ ತಾಲೂಕಿನ ಪುಟಪಾಕ್ ತಾಂಡಾದಲ್ಲಿ ಈ ಘಟನೆ ಜರುಗಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಯನ್ನು ಏಕಾಏಕಿ ಯಾರಿಗೂ ಮಾಹಿತಿ ನೀಡದೇ ಎಸ್‍ಡಿಎಂಎಸಿ ಮಾಜಿ ಅಧ್ಯಕ್ಷ ಕಿಶಾನ್ ರಾಠೋಡ ನೆಲಸಮ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ಒಂದಾಗಲಿರುವ ರಾಜಕುಮಾರ ಜೋಡಿ – ಸೆಟ್ಟೇರಲಿದೆ ಪುನೀತ್, ಸಂತೋಷ್ ಕಾಂಬಿನೇಷನ್‍ನ ಹೊಸ ಸಿನಿಮಾ

    yadagiri school

    ಶಿಕ್ಷಣ ಇಲಾಖೆಯು ಅಡುಗೆ ಕೋಣೆ ನಿರ್ಮಾಣ ಮಾಡಲು 4 ಲಕ್ಷ ರೂ. ಅನುದಾನ ಮಂಜೂರು ಮಾಡಿತ್ತು, ಆದರೆ ಹಳೇ ಅಡುಗೆ ಕೋಣೆಯು 2009ರ ಸಾಲಿನಲ್ಲಿ ನಿರ್ಮಾಣ ಮಾಡಲಾಗಿದ್ದು, ಕಟ್ಟಡ ಸುಸಜ್ಜಿತವಾಗಿದ್ದ ಹಿನ್ನೆಲೆ ತಾಲೂಕು ಪಂಚಾಯತಿ ಇಂಜಿನಿಯರ್ ಅಧಿಕಾರಿಯವರು ಹಳೆಯ ಅಡುಗೆ ಕೋಣೆ ತೆರವು ಮಾಡಲು ಯಾವುದೇ ಅನುಮತಿ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಕಿಶಾನ್ ರಾಠೋಡ ಅಡುಗೆ ಕೋಣೆ ಡೆಮಾಲಿಷ್ ಮಾಡಲು ಯಾವುದೇ ಅನುಮತಿ ನೀಡದಿದ್ದರು, ಜೆಸಿಬಿ ಮೂಲಕ ಅಡುಗೆ ಕೋಣೆ ಡೆಮಾಲಿಷ್ ಮಾಡಿ ದರ್ಪ ಮೆರೆದಿದ್ದಾರೆ. ಅಡುಗೆ ಕೋಣೆ ಡೆಮಾಲಿಷ್ ಮಾಡಿದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.