Tag: villagers

  • ಮಹಿಳೆಯರೊಂದಿಗೆ ಅಸಭ್ಯ ವರ್ತನೆ -ಯುವಕನನ್ನು ಅರೆಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

    ಮಹಿಳೆಯರೊಂದಿಗೆ ಅಸಭ್ಯ ವರ್ತನೆ -ಯುವಕನನ್ನು ಅರೆಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

    ರಾಯಚೂರು: ಮಹಿಳೆಯರೊಂದಿಗೆ ಅಸಭ್ಯ ವರ್ತನೆ ತೋರುತ್ತಿದ್ದ ಕಾಮುಕನೋರ್ವನನ್ನು ಗ್ರಾಮಸ್ಥರು ಅರೆಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ರಾಯಚೂರಿನ ಲಿಂಗಸುಗೂರಿನ ಗುರುಗುಂಟಾದಲ್ಲಿ ನಡೆದಿದೆ.

    ಬಸಟೆಪ್ಪ ಥಳಿತಕ್ಕೊಳಗಾದ ಯುವಕ. ಗ್ರಾಮದ ಅಮರೇಶ್ವರ ದೇವಸ್ಥಾನದ ಬಳಿ ಕಾಮುಕನನ್ನ ಕಂಬಕ್ಕೆ ಕಟ್ಟಿ ಗ್ರಾಮಸ್ಥರು ಥಳಿಸಿದ್ದಾರೆ. ಈತ ದೇವಸ್ಥಾನದಲ್ಲಿ ಮಹಿಳೆಯರ ಪಕ್ಕ ಮಲಗಿ ಅಸಭ್ಯವಾಗಿ ವರ್ತಿಸುತ್ತಿದ್ದ. ಇದರಿಂದ ಬೇಸತ್ತ ಮಹಿಳೆಯರು ಗ್ರಾಮಸ್ಥರಿಗೆ ತಿಳಿಸಿದ್ದರು.

    ಯುವಕನ ಪುಂಡಾಟಿಕೆ ಮಿತಿಮೀರಿದ್ದರಿಂದ ಗ್ರಾಮಸ್ಥರು ಥಳಿಸಿದ್ದಾರೆ. ನಂತರ ಯುವಕ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ್ದಕ್ಕೆ ಪೊಲೀಸರಿಗೆ ಒಪ್ಪಿಸದೇ ಹಾಗೇ ಕಳುಹಿಸಿದ್ದಾರೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಈ ರೋಡಲ್ಲಿ ಡ್ಯೂಕ್ ಬೈಕ್ ಸವಾರರಿಗೆ ಸಖತ್ ಹೊಡೆತ ಗ್ಯಾರಂಟಿ- ಯಾಕೆ ಗೊತ್ತಾ? ಈ ಸ್ಟೋರಿ ಓದಿ

    ಈ ರೋಡಲ್ಲಿ ಡ್ಯೂಕ್ ಬೈಕ್ ಸವಾರರಿಗೆ ಸಖತ್ ಹೊಡೆತ ಗ್ಯಾರಂಟಿ- ಯಾಕೆ ಗೊತ್ತಾ? ಈ ಸ್ಟೋರಿ ಓದಿ

    ಚಿಕ್ಕಬಳ್ಳಾಪುರ: ಡ್ಯೂಕ್ ಬೈಕ್ ಗೆ ಬಾಲಕಿ ಬಲಿಯಾದ ಕಾರಣ ಆಕ್ರೋಶಗೊಂಡ ಗ್ರಾಮಸ್ಥರು ಹೆದ್ದಾರಿಯಲ್ಲಿ ಸಾಗುತ್ತಿದ್ದ ಡ್ಯೂಕ್ ಬೈಕ್ ಸವಾರರನ್ನ ಅಡ್ಡಗಟ್ಟಿ ಥಳಿಸಿರೋ ವಿಡಿಯೋ ವೈರಲ್ ಆಗಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ರಾಷ್ಟ್ರೀಯ ಹೆದ್ದಾರಿ 7ರ ಬುಳ್ಳಹಳ್ಳಿ ಗೇಟ್ ಬಳಿ ಭಾನುವಾರ ಈ ಘಟನೆ ನಡೆದಿತ್ತು. ತಂದೆಯೊಂದಿಗೆ ತೆರಳುತ್ತಿದ್ದ 11 ವರ್ಷದ ಅಂಜು ಡ್ಯೂಕ್ ಬೈಕ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಆಪಘಾತದ ನಂತರ ಆಕ್ರೋಶಗೊಂಡ ಗ್ರಾಮಸ್ಥರು ಡ್ಯೂಕ್ ಬೈಕ್ ಚಾಲಕನನ್ನ ಹಿಡಿದು ಮರಕ್ಕೆ ಕಟ್ಟಿ ಹಾಕಿ ಥಳಿಸಿ ಹೆದ್ದಾರಿ ತಡೆ ಕೂಡ ನಡೆಸಿದ್ದರು.

    ಇದೇ ವೇಳೆ ಹೆದ್ದಾರಿಯಲ್ಲಿ ಹಾದು ಹೋಗುತ್ತಿದ್ದ ಇತರೆ ಡ್ಯೂಕ್ ಬೈಕ್ ಸವಾರರನ್ನ ಅಡ್ಡಗಟ್ಟಿದ ಆಕ್ರೋಶಿತ ಗ್ರಾಮಸ್ಥರು, ಡ್ಯೂಕ್ ಬೈಕ್ ಸವಾರರನ್ನ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈ ವಿಡಿಯೋ ಈಗ ವಾಟ್ಸಪ್ ಹಾಗೂ ಫೇಸ್ ಬುಕ್‍ನಲ್ಲಿ ವೈರಲ್ ಆಗಿದ್ದು, ರಾಷ್ಟ್ರೀಯ ಹೆದ್ದಾರಿ 7 ಚಿಕ್ಕಬಳ್ಳಾಪುರದ ಕಡೆಗೆ ಯಾರೂ ಡ್ಯೂಕ್ ಬೈಕ್ ಸವಾರರು ತೆರಳಬೇಡಿ. ಅಪಘಾತ ಆಗಿದೆ, ಗ್ರಾಮಸ್ಥರು ಹಲ್ಲೆ ಮಾಡುತ್ತಾರೆ ಎಂದು ಮಾಹಿತಿ ಶೇರ್ ಮಾಡುತ್ತಿದ್ದಾರೆ.

    ಡ್ಯೂಕ್ ಬೈಕ್ ಸವಾರರು ಸೇರಿದಂತೆ ಇತರೆ ಕಾಸ್ಟ್ಲೀ ಬೈಕ್ ಹೊಂದಿರುವ ಸಿಲಿಕಾನ್ ಸಿಟಿ ಜನ ವಿಕೇಂಡ್ ಸೇರಿದಂತೆ ರಜಾ ದಿನಗಳಲ್ಲಿ ರೇಸಿಂಗ್ ಎಂದು ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಅತೀ ವೇಗದ ಚಾಲನೆ ಮಾಡೋದು ಮಾಮೂಲಿಯಾಗಿದೆ. ಇದರಿಂದಲೇ ಬಾಲಕಿ ಬಲಿಯಾದಳು ಎಂದು ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ.


  • ಮಹಿಳೆ ಜೊತೆ ಚೆಲ್ಲಾಟವಾಡ್ತಾ ಸಿಕ್ಕಿಬಿದ್ದ ಗುಡ್ಡಪ್ಪ- ಅರೆಬೆತ್ತಲೆ ಮಾಡಿ ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

    ಮಹಿಳೆ ಜೊತೆ ಚೆಲ್ಲಾಟವಾಡ್ತಾ ಸಿಕ್ಕಿಬಿದ್ದ ಗುಡ್ಡಪ್ಪ- ಅರೆಬೆತ್ತಲೆ ಮಾಡಿ ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

    ಮೈಸೂರು: ಮಹಿಳೆಯ ಜೊತೆ ಚೆಲ್ಲಾಟವಾಡುತ್ತಾ ಗುಡ್ಡಪ್ಪ ಸಿಕ್ಕಿಬಿದ್ದಿದ್ದು ಗ್ರಾಮಸ್ಥರು ಆತನನ್ನು ಅರೆಬೆತ್ತಲೆ ಮಾಡಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದಲ್ಲಿ ನಡೆದಿದೆ.

    ಮಹದೇವಸ್ವಾಮಿ ಗುಡ್ಡಪ್ಪ ಸಿಕ್ಕಿಬಿದ್ದ ವ್ಯಕ್ತಿ. ಮಹದೇವಸ್ವಾಮಿ ತನ್ನ ಮೈಮೇಲೆ ಸಿದ್ದಪ್ಪಾಜಿ ದೇವರು ಬರುತ್ತಾರೆಂದು ಎಲ್ಲರನ್ನು ನಂಬಿಸಿದ್ದ. 15 ವರ್ಷಗಳಿಂದ 16 ಗ್ರಾಮಗಳಲ್ಲಿ ದೇವಸ್ಥಾನ ಕಟ್ಟಿಕೊಂಡಿರೋ ಮಹದೇವಸ್ವಾಮಿ, ಐಷಾರಾಮಿ ಮನೆಯಲ್ಲಿ ಜೀವನ ನಡೆಸುತ್ತಿದ್ದ.

    ಗುಡ್ಡಪ್ಪ ಇಮ್ಮಾವು ಗ್ರಾಮದ ಮಹಿಳೆ ಜೊತೆಗಿದ್ದಾಗ ಸಿಕ್ಕಿಬಿದ್ದಿದ್ದಾನೆ. ಮಹಿಳೆ ಒಂದು ವರ್ಷದಿಂದ ತನ್ನ ಪತಿಯಿಂದ ದೂರವಾಗಿದ್ದಾರೆ. ಅವರಿಗೆ ಒಂದು ಹೆಣ್ಣು ಮಗು ಕೂಡ ಇದೆ. ನಂಜನಗೂಡು ಗ್ರಾಮಾಂತರ ಪೊಲೀಸರು ಗುಡ್ಡಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಪುರಾತನ ಹತ್ತಿ ಮರದಿಂದ ಸುರಿಯುತ್ತಿರುವ ನೀರು- ಗ್ರಾಮಸ್ಥರಲ್ಲಿ ಅತಂಕ

    ಪುರಾತನ ಹತ್ತಿ ಮರದಿಂದ ಸುರಿಯುತ್ತಿರುವ ನೀರು- ಗ್ರಾಮಸ್ಥರಲ್ಲಿ ಅತಂಕ

    ಬೆಂಗಳೂರು: ನೂರಾರು ವರ್ಷ ಹಳೆಯ ಪುರಾತನ ಕಾಲದ ಹತ್ತಿ ಮರವೊಂದರಲ್ಲಿ ಇದ್ದಕ್ಕಿದ್ದ ಹಾಗೆ ನೀರು ಬರುತ್ತಿರುದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿರುವ ಘಟನೆ ನೆಲಮಂಗಲ ತಾಲೂಕಿನ ಕೂಲಿಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿರುವ ಸುಮಾರು 200 ವರ್ಷದ ಹಳೆಯ ಪುರಾತನ ಹತ್ತಿ ಮರ ಇದಾಗಿದ್ದು, ಸಾಕಷ್ಟು ವರ್ಷಗಳಿಂದ ಗ್ರಾಮ ದೇವತೆ ಎಂಬ ಭಾವನೆಯಲ್ಲಿ ಗ್ರಾಮಸ್ಥರು ಈ ಮರವನ್ನು ಪೂಜಿಸುತ್ತಿದ್ದರು. ಆದರೆ ಇದಕ್ಕಿದ್ದ ಹಾಗೇ ಮರದಲ್ಲಿ ನೀರು ಬರುತ್ತಿರುವುದರಿಂದ ಆತಂಕಗೊಂಡಿದ್ದಾರೆ. ಮರದಲ್ಲಿ ನೀರು ಬರುತ್ತಿರುವ ಸುದ್ದಿ ತಿಳಿದ ಹಲವರು ಇದನ್ನ ನೋಡಲು ಮರದ ಬಳಿ ಆಗಮಿಸುತ್ತಿದ್ದಾರೆ.

    ಈ ಕುರಿತು ಮಾತನಾಡಿರುವ ಗ್ರಾಮಸ್ಥರು, ಕೆಲ ದಿನಗಳ ಹಿಂದೆ ಬೇರೆ ಮರಕ್ಕೆ ಪೂಜೆ ಮಾಡಲು ತೀರ್ಮಾನ ಮಾಡಿದ್ದೆವು. ಹೀಗಾಗಿ ಗ್ರಾಮದೇವತೆ ಈ ರೀತಿ ಕಣ್ಣೀರು ಸುರಿಸುತ್ತ ಅಳಲನ್ನು ತೋಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಘಟನೆ ನಡೆದ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಗ್ರಾಮಸ್ಥರೆಲ್ಲರೂ ಮರದ ಬಳಿ ಬಂದು ಪೂಜೆ ಸಲ್ಲಿಸಿ ಗ್ರಾಮಕ್ಕೆ ಕೆಡುಕಾಗದಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ.

  • ಮೈಸೂರಿನ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷ

    ಮೈಸೂರಿನ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷ

    ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆಯ ಶಿಂಡೇನಹಳ್ಳಿಯಲ್ಲಿ ಕಬ್ಬು ಕಟಾವು ಮಾಡುತ್ತಿದ್ದಾಗ 2 ಚಿರತೆ ಮರಿಗಳು ಪತ್ತೆಯಾಗಿವೆ.

    ಗ್ರಾಮದ ಸತ್ತಿಗೇಗೌಡ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆ ಕಟಾವು ಮಾಡುತ್ತಿದ್ದಾಗ 15 ದಿನಗಳ ಹಿಂದೆ ಜನಿಸಿರುವ 2 ಚಿರತೆ ಮರಿಗಳು ಕಂಡ ಬಂದವು. ತಕ್ಷಣ ಚಿರತೆ ಮರಿಗಳನ್ನು ಸಂರಕ್ಷಿಣೆ ಮಾಡಿ ಹೆಚ್.ಡಿ.ಕೋಟೆ ವಲಯ ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಒಪ್ಪಿಸಿದ್ದಾರೆ.

    ಚಿರತೆ ಮರಿಗಳು ದೊರೆತ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಗೊಂಡಿದ್ದು, ಕೂಡಲೇ ತಾಯಿ ಚಿರತೆಯನ್ನು ಸೆರೆಹಿಡಿಯುವಂತೆ ಒತ್ತಾಯ ಮಾಡಿದ್ದಾರೆ.

  • ರಾಗಿ ಕಟಾವು ಮಾಡುತ್ತಿದ್ದ ರೈತನ ಮೇಲೆ ಆನೆ ದಾಳಿ- ಗಂಭೀರ ಗಾಯ

    ರಾಗಿ ಕಟಾವು ಮಾಡುತ್ತಿದ್ದ ರೈತನ ಮೇಲೆ ಆನೆ ದಾಳಿ- ಗಂಭೀರ ಗಾಯ

    ಮಂಡ್ಯ: ರಾಗಿ ಕಟಾವು ಮಾಡುತ್ತಿದ್ದ ರೈತನ ಮೇಲೆ ಒಂಟಿ ಸಲಗವೊಂದು ದಾಳಿ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರೈತ ನಾಗೇಗೌಡ ಎಂಬವರೇ ಆನೆ ದಾಳಿಗೊಳಗಾಗಿ ಗಾಯಗೊಂಡಿರುವ ರೈತ. ತನ್ನ ಜಮೀನಿನಲ್ಲಿ ರಾಗಿ ಕಟಾವು ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಆನೆ ನಾಗೇಗೌಡರನ್ನ ಜೋರಾಗಿ ಗುದ್ದಿ ಬೀಳಿಸಿದೆ.

    ಆನೆ ದಾಳಿಗೆ ಒಳಗಾದ ರೈತ ಭಯದಿಂದ ಜೋರಾಗಿ ಕೂಗಿಗೊಂಡಿದ್ದಾರೆ. ಇದನ್ನು ನೋಡಿ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಜೋರಾಗಿ ಸದ್ದು ಮಾಡಿ ಆನೆಯನ್ನು ಓಡಿಸಿದ್ದಾರೆ. ತಕ್ಷಣ ಆನೆ ದಾಳಿಯಿಂದ ಗಾಯಗೊಂಡ ರೈತ ನಾಗೇಗೌಡರನ್ನ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಗ್ರಾಮದ ಸಮೀಪವಿರುವ ಕಾಡಿನಿಂದ ಆನೆ ಬಂದಿದ್ದು, ಹಲವಾರು ದಿನಗಳಿಂದ ರಸ್ತೆ ಬದಿ ಆರಾಮವಾಗಿ ಆನೆ ಓಡಾಡಿಕೊಂಡಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಆನೆ ದಾಳಿಗೊಳಗಾದ ರೈತ ನಾಗೇಗೌಡರಿಗೆ ಪರಿಹಾರ ನೀಡಿ, ಚಿಕಿತ್ಸಾ ವೆಚ್ಚ ಭರಿಸಬೇಕು ಎಂದು ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

  • ನೀರು ಕುಡಿಯಲು ಹೋಗಿ ಕೊಡದಲ್ಲಿ ಕತ್ತು ಸಿಲುಕಿಸಿಕೊಂಡ ನಾಯಿ

    ನೀರು ಕುಡಿಯಲು ಹೋಗಿ ಕೊಡದಲ್ಲಿ ಕತ್ತು ಸಿಲುಕಿಸಿಕೊಂಡ ನಾಯಿ

    ಕೊಪ್ಪಳ: ನಾಯಿಯೊಂದು ನೀರು ಕುಡಿಯಲು ಹೋಗಿ ತನ್ನ ಕತ್ತನ್ನು ಕೊಡದಲ್ಲಿ ಸಿಲುಕಿಸಿಕೊಂಡು ಬಳಿಕ ಗ್ರಾಮಸ್ಥರು ಹರಸಾಹಸಪಟ್ಟು ಕತ್ತಿನಿಂದ ಕೊಡ ಬೇರ್ಪಡಿಸಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ತಾಲೂಕಿನ ಮುದೇನೂರ ಗ್ರಾಮದಲ್ಲಿ ಶುಕ್ರವಾರ ಸಾಯಂಕಾಲ ನಾಯಿ ನೀರು ಕುಡಿಯಲು ಪ್ಲಾಸ್ಟಿಕ್ ಕೊಡದಲ್ಲಿ ಇಣುಕಿದೆ. ಆದರೆ ಕತ್ತು ಅದರಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಹೊರಗೆ ತೆಗೆಯಲು ಓಡಾಡಿದೆ. ಆಗ ಇದನ್ನ ಗಮನಿಸಿದ ಗ್ರಾಮಸ್ಥರು ಹರಸಾಹಸ ಪಟ್ಟು ಕೊಡದಿಂದ ಕತ್ತು ಬೇರ್ಪಡಿಸಿದ್ದಾರೆ.

    ಬಳಿಕ ಆ ನಾಯಿ ಬದುಕಿದೆ ಬಡಜೀವ ಎಂದು ನಿಟ್ಟುಸಿರು ಬಿಟ್ಟಿದೆ. ನಾಯಿಯ ಚಡಪಡಿಕೆಯನ್ನ ಕಂಡು ಮಮ್ಮಲ ಮರಗಿದ ಗ್ರಾಮಸ್ಥರು ಅಪಾಯದಿಂದ ಪಾರು ಮಾಡಿ ಮಾನವೀಯತೆ ತೋರಿದ್ದಾರೆ.

    https://www.youtube.com/watch?v=LVImoisdmyQ

  • ಗ್ರಾಮಸ್ಥರ ಸ್ಮಶಾನದ ಜಾಗ ಇದೀಗ ಕ್ರಿಕೆಟ್ ಸಂಸ್ಥೆ ಪಾಲು..!

    ಗ್ರಾಮಸ್ಥರ ಸ್ಮಶಾನದ ಜಾಗ ಇದೀಗ ಕ್ರಿಕೆಟ್ ಸಂಸ್ಥೆ ಪಾಲು..!

    ಮಡಿಕೇರಿ: ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎಂಬುದು ಹಳೇ ಗಾದೆ. ಆದರೆ ಶವ ಸಂಸ್ಕಾರ ಮಾಡದಿದ್ರೂ ಪರವಾಗಿಲ್ಲ, ಕ್ರಿಕೆಟ್ ಸ್ಟೇಡಿಯಂ ಬೇಕು ಎಂಬುದು ಹೊಸ ಗಾದೆ ಎಂದು ಅನಿಸುತ್ತಿದೆ. ಹೌದು. ಕೊಡಗಿನಲ್ಲಿ ಸ್ಮಶಾನದ ಜಾಗವನ್ನು ಕ್ರಿಕೆಟ್ ಸ್ಟೇಡಿಯಂಗೆ ನೀಡಿರುವುದು ಇದೀಗ ವಿವಾದವಾಗಿದೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹೊದ್ದೂರು ಪಂಚಾಯತಿ ವ್ಯಾಪ್ತಿಯ ದಲಿತ ಕುಟುಂಬಗಳು ಗೋರಿಗಳ ಪಕ್ಕದಲ್ಲೇ ಟೆಂಟ್ ಹಾಕಿ ಧರಣಿ ನಡೆಸುತ್ತಿವೆ. 2008ರಿಂದಲೂ ನೂರಾರು ಕುಟುಂಬಗಳು ಇಲ್ಲಿನ ಸರ್ವೆ ನಂ.167/1ಎ ಯಲ್ಲಿನ ಜಾಗವನ್ನು ಸ್ಮಶಾನಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ಸ್ಮಶಾನಕ್ಕೆ 2 ಏಕರೆ ಜಾಗದ ಆರ್‍ಟಿಸಿ ನೀಡಿತ್ತು. ಆದರೆ 2016ರಲ್ಲಿ ರಾಜ್ಯ ಸರ್ಕಾರ ಅದೇ ಸರ್ವೆ ನಂಬರಿನಲ್ಲಿ 12.70 ಏಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಿದ್ದು, ಪಾಲೆ ಮಾಡಿನ ಜನರು ಸ್ಮಶಾನವನ್ನು ಉಳಿಸಿಕೊಳ್ಳಲು ಹೋರಾಟದ ಹಾದಿ ಹಿಡಿದಿದ್ದಾರೆ.

    ಕ್ರಿಕೆಟ್ ಸ್ಟೇಡಿಯಂಗೆ ನೀಡಿರುವ ಜಾಗಕ್ಕೆ ಬದಲಾಗಿ ಸ್ಮಶಾನಕ್ಕೆ ಬೇರೆ ಜಾಗ ನೀಡುವುದಾಗಿ ಸರ್ಕಾರ ಹೇಳಿದೆ. ಆದರೆ ಗ್ರಾಮಸ್ಥರು ಮಾತ್ರ ಇದೇ ಜಾಗ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಸ್ಮಶಾನದ ಜಾಗಕ್ಕೆ ಆರ್‍ಟಿಸಿ ನೀಡಿದ್ದರೂ, ದುರಸ್ತಿ ಮಾಡಿ ನಕ್ಷೆ ಗುರುತಿಸಿರಲಿಲ್ಲ. ಹೀಗಾಗಿ ಕ್ರಿಕೆಟ್ ಸಂಸ್ಥೆ ತನಗೆ ಮಂಜೂರಾದ ಜಾಗವನ್ನು ಬೇಲಿ ಹಾಕಿ ಭದ್ರಪಡಿಸಿದೆ. ಇದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಕಳೆದೊಂದು ವಾರದಿಂದ ಅಹೋರಾತ್ರಿ ಉಪವಾಸ ಸತ್ಯಗ್ರಾಹ ನಡೆಸುತ್ತಿದ್ದು, ಕೆಲವರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.

    ಜಿಲ್ಲಾಧಿಕಾರಿಗಳು ಬಡ ಗ್ರಾಮಸ್ಥರನ್ನು ನಿರ್ಲಕ್ಷಿಸಿದ ಪರಿಣಾಮ ಇವರ ಸ್ಮಶಾನದ ಜಾಗ ಇದೀಗ ಶ್ರೀಮಂತ ಕ್ರಿಕೆಟ್ ಸಂಸ್ಥೆ ಪಾಲಾಗಿದೆ.

  • ಕಾಡಿನಿಂದ ನಾಡಿಗೆ ಬಂದು ಮೇಕೆ, ಕುರಿಗಳನ್ನು ಕೊಂದು ತಿನ್ನುತ್ತಿದ್ದ ಚಿರತೆ ಸೆರೆ

    ಕಾಡಿನಿಂದ ನಾಡಿಗೆ ಬಂದು ಮೇಕೆ, ಕುರಿಗಳನ್ನು ಕೊಂದು ತಿನ್ನುತ್ತಿದ್ದ ಚಿರತೆ ಸೆರೆ

    ರಾಮನಗರ: ಕಾಡಿನಿಂದ ನಾಡಿಗೆ ಬಂದು ಮೇಕೆ ಹಾಗು ಕುರಿಗಳನ್ನು ಕೊಂದು ತಿನ್ನುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ರಾಮನಗರ ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕಳೆದ ಒಂದು ವಾರದಿಂದ ಚಿರತೆಯ ಉಪಟಳ ಜಾಸ್ತಿಯಾಗಿತ್ತು. ಒಂದು ವಾರದಲ್ಲಿ ನಾಲ್ಕು ಮೇಕೆ ಹಾಗೂ 2 ಕುರಿಗಳನ್ನು ಗ್ರಾಮಕ್ಕೆ ನುಗ್ಗಿ ತಿಂದು ಹಾಕಿತ್ತು. ಇದರಿಂದ ಆತಂಕಕ್ಕೆ ಒಳಗಾಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.

    ಗ್ರಾಮದ ಹೊರವಲಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೂರು ಬೋನುಗಳನ್ನು ಇಟ್ಟಿದರು. ಗ್ರಾಮದ ಚಿಕ್ಕ ಮರೀಗೌಡ ಎಂಬುವವರ ತೋಟದಲ್ಲಿ ಇಟ್ಟಿದ್ದ ಬೋನಿನಲ್ಲಿ ಎರಡುವರೆ ವರ್ಷದ ಗಂಡು ಚಿರತೆ ಸೆರೆಯಾಗಿದೆ.

    ಘಟನೆ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬನ್ನೇರುಘಟ್ಟ ವನ್ಯಜೀವಿ ಧಾಮಕ್ಕೆ ಬಿಡಲು ಚಿರತೆಯನ್ನು ರವಾನಿಸಿದ್ದಾರೆ.

     

  • ಕೆರೆಯ ನೀರಿನ ಮಧ್ಯೆ ಮುಳ್ಳಿನ ಮೇಲೆ ಸ್ವಾಮೀಜಿ ಜಪ

    ಕೆರೆಯ ನೀರಿನ ಮಧ್ಯೆ ಮುಳ್ಳಿನ ಮೇಲೆ ಸ್ವಾಮೀಜಿ ಜಪ

    ಬಾಗಲಕೋಟೆ: ಸ್ವಾಮೀಜಿಯೊಬ್ಬರು ಎರಡು ದಿನಗಳಿಂದ ನೀರಿನಲ್ಲಿಯೇ ಮುಳ್ಳಿನ ಮೇಲೆ ಕುಳಿತು ಧ್ಯಾನ ಮಾಡಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜಂಬಗಿ ಗ್ರಾಮದ ಮಹಾ ಸಿದ್ದೇಶ್ವರ ಮಠದ ಪೀಠಾಧಿಪತಿ ಸುರೇಶ ಸ್ವಾಮೀಜಿ ಎರಡು ದಿನಗಳ ಹಿಂದೆ ಏಕಾಏಕಿ ಕಾರಣ ಹೇಳದೆ ತುಂಗಳ ಗ್ರಾಮದ ಹೊಸಕೆರೆಯಲ್ಲಿ ಮುಳ್ಳಿನೊಂದಿಗೆ ನೀರಿನಲ್ಲಿ ತೇಲುತ್ತ ಜಪಕ್ಕೆ ಮುಂದಾಗಿದ್ದರು.

    ಈ ಬಗ್ಗೆ ಸುದ್ದಿ ತಿಳಿಯುತ್ತಲೇ ಸುತ್ತಮುತ್ತಲಿನ ಗ್ರಾಮಸ್ಥರು ಸಹ ಸ್ವಾಮೀಜಿಯನ್ನ ನೋಡೋಕೆ ಆಗಮಿಸುತ್ತಿದ್ದ ದೃಶ್ಯ ಸರ್ವೆ ಸಾಮಾನ್ಯವಾಗಿತ್ತು. ನಿರಂತರ ನೀರಿನಲ್ಲಿ ಇರುವುದು ಆರೋಗ್ಯಕ್ಕೆ ಸರಿಯಲ್ಲ ಎಂಬ ಉದ್ದೇಶದಿಂದ ಇತ್ತ ತಹಶಿಲ್ದಾರರು ಮತ್ತು ಪೊಲೀಸ್ ಸಿಬ್ಬಂದಿ ಸ್ವಾಮೀಜಿಯನ್ನ ಹೊರಕರೆಯುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.

    ಆದರೆ ಅಂದುಕೊಂಡಂತೆ ಸ್ವಾಮೀಜಿ ಸೋಮವಾರದಂದು ಭಕ್ತರ ಸಮ್ಮುಖದಲ್ಲಿ ಹೊರಬಂದಿದ್ದು, ಭಕ್ತರು ಹರ್ಷಗೊಂಡರು. ಇತ್ತ ಸುರೇಶ ಸ್ವಾಮೀಜಿ ಲೋಕ ಕಲ್ಯಾಣಾರ್ಥ ಕೆರೆಯಲ್ಲಿ ಜಪ ಮಾಡಿದ್ದೇನೆ ಎಂದು ಹೇಳಿದರು.