Tag: villagers

  • ಆಕಾಶದಿಂದ ಧರೆಗುರುಳಿತಾ ಕಲ್ಲು – ಕೊರೊನಾ ಭೀತಿ ನಡುವೆ ವಿಚಿತ್ರ ಕಲ್ಲಿನ ಆತಂಕ

    ಆಕಾಶದಿಂದ ಧರೆಗುರುಳಿತಾ ಕಲ್ಲು – ಕೊರೊನಾ ಭೀತಿ ನಡುವೆ ವಿಚಿತ್ರ ಕಲ್ಲಿನ ಆತಂಕ

    ಚಿಕ್ಕಬಳ್ಳಾಪುರ: ಕೊರೊನಾ ಭೀತಿ ನಡುವೆ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀರಾಮಪುರ ಗ್ರಾಮದಲ್ಲಿ ಆಕಾಶದಿಂದ ಧರೆಗುರುಳಿದ ವಿಚಿತ್ರ ಕಲ್ಲೊಂದು ಆತಂಕ ಉಂಟುಮಾಡಿದೆ.

    ಶ್ರೀರಾಮಪುರ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ರಾತ್ರಿ 8 ಗಂಟೆ ಸುಮಾರಿಗೆ ಆಕಾಶದಿಂದ ಇದ್ದಕ್ಕಿದಂತೆ ಬೆಂಕಿಯ ಚೆಂಡಿನಂತೆ ಕಲ್ಲೊಂದು ಧರೆಗುರುಳಿದಿದ್ದು, ಗ್ರಾಮಸ್ಥರಲ್ಲಿ ಭಯ ಸೃಷ್ಟಿಸಿದೆ. ಗ್ರಾಮದ ಹೊರವಲಯದ ಶ್ರೀನಿವಾಸ್ ಎಂಬವರ ತೋಟದಲ್ಲಿ ಈ ವಿಚಿತ್ರ ಕಲ್ಲು ಕಂಡುಬಂದಿದ್ದು, ತೋಟದ ಬಳಿ ಬಂದಿದ್ದ ಶ್ರೀನಿವಾಸ್ ಕಲ್ಲು ಧರೆಗುರುಳಿದನ್ನ ಕಣ್ಣಾರೆ ಕಂಡು ಅಚ್ಚರಿಗೊಳಗಾಗಿದ್ದಾರೆ.

    ಈ ಕಲ್ಲು ಸರಿ ಸುಮಾರು 1 ರಿಂದ 2 ಕೆಜಿ ತೂಕವಿದ್ದು, ಇದು ಆಕಾಶಕಾಯ ಉಲ್ಕೆ ಇರಬಹದು ಅಂತ ಅನುಮಾನ ವ್ಯಕ್ತವಾಗಿದೆ. ಸದ್ಯ ಸಿಕ್ಕಿರುವ ಕಲ್ಲನ್ನ ಗಣಿ ಹಾಗೂ ಭೂ ವಿಜ್ಞಾನ ಇಲಾಖಾಧಿಕಾರಿಗಳಿಗೆ ನೀಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

  • ಸ್ಪೀಕರ್ ಕಾಗೇರಿ ಕ್ಷೇತ್ರದಲ್ಲಿ ಹೆಚ್ಚಾಯ್ತು ಮಂಗನ ಕಾಯಿಲೆ

    ಸ್ಪೀಕರ್ ಕಾಗೇರಿ ಕ್ಷೇತ್ರದಲ್ಲಿ ಹೆಚ್ಚಾಯ್ತು ಮಂಗನ ಕಾಯಿಲೆ

    – ಊರು ಬಿಟ್ಟು ಹೋದ ಮಂಗನ ಕಾಯಿಲೆ ಸೋಂಕಿತರು

    ಕಾರವಾರ: ಕೊರೊನಾ ವೈರಸ್‍ಗೆ ರಾಜ್ಯದ ಜನ ಭಯಗೊಂಡಿದ್ದರೆ ಇತ್ತ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಕ್ಷೇತ್ರ ಸಿದ್ದಾಪುರ ತಾಲೂಕಿನಲ್ಲಿ ಹೆಚ್ಚುತ್ತಿರುವ ಮಂಗನಕಾಯಿಲೆ (ಕೆ.ಎಫ್.ಡಿ)ಯಿಂದ ಜನರು ಭಯಪಟ್ಟು ಊರು ಬಿಡುತ್ತಿದ್ದಾರೆ.

    ಹೌದು. ಉತ್ತರ ಕನ್ನಡ ಜಿಲ್ಲೆಯ ಜನರೀಗ ಕೆ.ಎಫ್.ಡಿ ವೈರಸ್‍ಗೆ ಭಯಪಟ್ಟು ಊರು ತೊರೆಯುತಿದ್ದಾರೆ. ವಿಧಾನಸಭಾ ಸ್ಪೀಕರ್ ಕಾಗೇರಿಯವರ ಸ್ವಕ್ಷೇತ್ರ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಾಳಗೋಡು, ಮಳಗುಳಿ, ಹನುಮನಜಡ್ಡಿ, ಹೊನ್ನೆಗಟಗಿ, ತ್ಯಾಗಲಿಗಳಲ್ಲಿ 200ಕ್ಕೂ ಹೆಚ್ಚು ಮಂಗಗಳು ಈ ವರ್ಷ ಸಾವನ್ನಪ್ಪಿದ್ದು ಇವುಗಳಲ್ಲಿ ಹಲವು ಮಂಗಗಳಲ್ಲಿ ಕೆ.ಎಫ್.ಡಿ ವೈರಸ್ ಪತ್ತೆಯಾಗಿದೆ.

    ಈ ವೈರಸ್ ಜನರಿಗೂ ಹಬ್ಬುತ್ತಿದ್ದು ಈ ಗ್ರಾಮದಲ್ಲಿ ಈಗಾಗಲೇ 11 ಜನರಿಗೆ ಮಂಗನಕಾಯಿಲೆ ಇರುವುದು ದೃಢಪಟ್ಟಿದೆ. ಇದೇ ತಿಂಗಳಲ್ಲಿ ಮಳಗುಳಿ ಗ್ರಾಮದ ಭಾಸ್ಕರ್ ಗಣಪತಿ ಹೆಗಡೆ ಎಂಬುವವರು ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಕಳೆದ ವರ್ಷ ಜಿಲ್ಲೆಯಲ್ಲಿ 87 ಪ್ರಕರಣಗಳು ವರದಿಯಾಗಿದ್ದು, ಸಿದ್ದಾಪುರ ತಾಲೂಕಿನಲ್ಲಿಯೇ 15 ಜನರಿಗೆ ಮಂಗನಕಾಯಿಲೆ ಬಂದಿದ್ದು, ಇದರಲ್ಲಿ ಆರು ಜನರು ಸಾವನ್ನಪ್ಪಿದ್ದರು. ಹೀಗಾಗಿ ಸಿದ್ದಾಪುರ ತಾಲೂಕಿನ ಮಂಗನಕಾಯಿಲೆ ಪೀಡಿತ ಪ್ರದೇಶವಾದ ಬಾಳಗೋಡು ಸೇರಿದಂತೆ ಹಲವು ಗ್ರಾಮದಲ್ಲಿ ಜನರು ಮನೆ ಬಿಡುತಿದ್ದು ಊರಿನಲ್ಲಿ ಬಿಕೋ ಎನ್ನುತ್ತಿದೆ.

    ಸಿದ್ದಾಪುರ ಭಾಗದಲ್ಲಿ ಚಿಕಿತ್ಸೆ ನೀಡಲು ವೈದ್ಯರ, ಸಿಬ್ಬಂದಿ ಕೊರತೆ ಎದುರಾಗಿದೆ. ಜೊತೆಗೆ ಇಲ್ಲಿ ಕೆಲಸ ಮಾಡಲು ಸಿಬ್ಬಂದಿ ಕೂಡ ಮುಂದೆ ಬರುತ್ತಿಲ್ಲ ಹೀಗಾಗಿ ಆರೋಗ್ಯ ಇಲಾಖೆ ಸಹ ತೊಂದರೆ ಅನುಭವಿಸುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಲು ತೊಡಕಾಗಿದೆ ಎಂಬುದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಕಾಗೇರಿಯವರೇ ನಮ್ಮ ನೋವು ಕೇಳಿ
    ವಿಧಾನಸಭಾ ಸ್ಪೀಕರ್ ಸ್ವಕ್ಷೇತ್ರದಲ್ಲಿಯೇ ಅತೀ ಹೆಚ್ಚು ಮಂಗನಕಾಯಿಲೆ ಪ್ರಕರಣ ಪತ್ತೆಯಾಗುತ್ತಿದ್ದು ಜನರು ಊರು ಬಿಡುತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಸಹ ಈ ಪ್ರದೇಶದಲ್ಲಿ ಕೆಲಸ ಮಾಡಲು ಹೆದರುತ್ತಿದ್ದಾರೆ. ಆದರೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಹಾಗೂ ಕಳೆದ ವರ್ಷ ಮರಣ ಹೊಂದಿದ ಜನರಿಗೆ ಪರಿಹಾರ ಕೊಡಿಸಲು ಸ್ಪೀಕರ್ ಕಾಗೇರಿ ಎಡವಿದ್ದಾರೆ. ಈವರೆಗೂ ಕ್ಷೇತ್ರಕ್ಕೆ ಬರುವುದಿರಲಿ ಇದರ ಬಗ್ಗೆ ಗಮನ ಹರಿಸುವ ಗೋಜಿಗೆ ಹೋಗದೇ ತಮ್ಮ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿದ್ದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ ವರ್ಷ ಸಾವನ್ನಪ್ಪಿದ ಯಾವೊಬ್ಬರಿಗೂ ಈವರೆಗೂ ಪರಿಹಾರ ಬಂದಿಲ್ಲ. ಇನ್ನು ಆರೋಗ್ಯ ಇಲಾಖೆ ಹಲವು ಕಾರಣಗಳಿಗೆ ಆರು ಜನರನ್ನು ಮಾತ್ರ ದಾಖಲೆಯಲ್ಲಿ ತೋರಿಸಿದ್ದು ಉಳಿದವರನ್ನು ಮಾತ್ರ ದಾಖಲೆಗಳಲ್ಲಿ ತೋರಿಸಿಲ್ಲ. ಇದಲ್ಲದೇ ಪಕ್ಕದ ಜಿಲ್ಲೆ ಶಿವಮೊಗ್ಗದಲ್ಲಿ ಮಂಗನ ಕಾಯಿಲೆಯಿಂದ ಸತ್ತವರಿಗೆ ಪರಿಹಾರ ಬಂದಿದೆ. ಆದರೆ ವಿಧಾನಸಭಾ ಸ್ಪೀಕರ್ ಸ್ವಕ್ಷೇತ್ರಕ್ಕೆ ಈ ಭಾಗ್ಯ ಇಲ್ಲ. ಕೊನೆ ಪಕ್ಷ ಸ್ಪೀಕರ್ ರವರು ತಮ್ಮ ಕ್ಷೇತ್ರಕ್ಕೆ ಬಂದು ಇರುವ ಸಮಸ್ಯೆ ಆಲಿಸಿ ಕ್ರಮ ಕೈಗೊಳ್ಳಲಿ ಎಂಬುದು ಮಂಗನಕಾಯಿಲೆಯಿಂದ ಬಳಲುತ್ತಿರುವ ಗ್ರಾಮಸ್ಥರು ಅಗ್ರಹಿಸಿದ್ದಾರೆ.

    ಒಂದೆಡೆ ಸಿಬ್ಬಂದಿಗಳ ಕೊರತೆ ಮತ್ತೊಂದೆಡೆ ಈ ಹಳ್ಳಿಗಳಲ್ಲಿ ಕೆಲಸ ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿ ಮನಸ್ಸು ಮಾಡದಿರುವುದು. ಜೊತೆಯಲ್ಲಿ ಜನರಲ್ಲಿ ಮಂಗನಕಾಯಿಲೆ ಕುರಿತು ಜಾಗೃತಿ ಮೂಡಿಸಲು ವಿಫಲವಾಗಿರುವುದರಿಂದ ಕಾಯಿಲೆ ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಸಿದ್ದಾಪುರ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕಾಯಿಲೆ ಉಲ್ಭಣವಾಗುತ್ತಿದೆ. ತಕ್ಷಣ ಈ ಬಗ್ಗೆ ಸರ್ಕಾರ ಗಮನಹರಿಸಿ ಕ್ರಮ ಕೈಗೊಳ್ಳದಿದ್ದರೆ ಮತ್ತಷ್ಟು ಜನರ ಬಲಿಯಾಗಲಿದ್ದು ತಕ್ಷಣ ಹೆಚ್ಚಿನ ಕ್ರಮ ಕೈಗೊಳ್ಳಬೇಕಿದೆ.

  • ನಾಲ್ವರನ್ನು ಬಲಿ ಪಡೆದಿದ್ದ ನರಭಕ್ಷಕ ಚಿರತೆಗಾಗಿ ಕೂಂಬಿಂಗ್ – ಕಾರ್ಯಾಚರಣೆ ವೇಳೆ ಮತ್ತೊಂದು ಚಿರತೆ ಸೆರೆ

    ನಾಲ್ವರನ್ನು ಬಲಿ ಪಡೆದಿದ್ದ ನರಭಕ್ಷಕ ಚಿರತೆಗಾಗಿ ಕೂಂಬಿಂಗ್ – ಕಾರ್ಯಾಚರಣೆ ವೇಳೆ ಮತ್ತೊಂದು ಚಿರತೆ ಸೆರೆ

    ತುಮಕೂರು: ನಾಲ್ವರನ್ನ ಬಲಿ ತೆಗೆದುಕೊಂಡಿದ್ದ ನರಭಕ್ಷಕ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಸಾಕಷ್ಟು ಕೂಂಬಿಂಗ್ ನಡೆಸ್ತಾನೆ ಇದೆ. ಆದರೆ ಆ ನರಭಕ್ಷಕ ಚಿರತೆ ಮಾತ್ರ ಸೆರೆ ಸಿಕ್ಕಿಲ್ಲ. ಈ ನಡುವೆ ತಾಲೂಕಿನ ಹಾಲನೂರು ಗ್ರಾಮದ ಸೇತುವೆ ಬಳಿ ಕಾಣಿಸಿಕೊಂಡ ಚಿರತೆಯನ್ನ ಅರಣ್ಯ ಇಲಾಖೆ ಯಶಸ್ವಿಗಾಗಿ ಸೆರೆ ಹಿಡಿದಿದೆ.

    ನರಭಕ್ಷರ ಚಿರತೆ ಸೆರೆಗಾಗಿ ನಾಲ್ಕು ಆನೆ, ನೂರಾರು ಅರಣ್ಯ ಸಿಬ್ಬಂದಿ, ಗ್ರಾಮಸ್ಥರು ಹಗಲು ರಾತ್ರಿ ನಿಂತರವಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಆದರೂ ಚಾಲಾಕಿ ನರಭಕ್ಷಕ ಚಿರತೆ ಮಾತ್ರ ಯಾರ ಕಣ್ಣಿಗೂ ಬೀಳುತ್ತಲೇ ಇಲ್ಲ. ಈ ನಡುವೆ ತುಮಕೂರು ತಾಲೂಕಿನ ಹಾಲನೂರಿನಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ಗ್ರಾಮದ ಬಳಿ ಕಾಣಿಸಿಕೊಂಡ ಚಿರತೆ ಕಂಡು ಜನರು ಕೂಗಾಡಿದ್ದರು. ಇದರಿಂದ ಗಾಬರಿಗೊಂಡ ಚಿರತೆ ರಸ್ತೆ ಪಕ್ಕದಲ್ಲಿದ್ದ ಸೇತುವೆ ಕೆಳಗೆ ಅವಿತು ಕುಳಿತುಕೊಂಡಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಗ್ರಾಮಸ್ಥರು ಸಿಬ್ಬಂದಿ ಬರುವವರೆಗೂ ಚಿರತೆ ಹೊರಗೆ ಬರದಂತೆ ಕಾದು ಕೂತು, ಅದನ್ನ ಸುರಕ್ಷಿತವಾಗಿ ಸೆರೆ ಹಿಡಿಯಲು ಸಹಕರಿಸಿದ್ದಾರೆ.

    ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರನ್ನ ಸ್ಥಳದಿಂದ ದೂರಕ್ಕೆ ಕಳಿಸೋದೇ ದೊಡ್ಡ ಸವಾಲಾಗಿತ್ತು. ಸೇತುವೆಯ ಎರಡೂ ಕಡೆಗಳಲ್ಲೂ ಚಿರತೆ ತಪ್ಪಿಸಿಕೊಳ್ಳದಂತೆ ಅಗತ್ಯ ಕ್ರಮಗಳನ್ನ ಕೈಗೊಂಡು, ಒಂದು ಕಡೆಯಿಂದ ಬಲೆ ಇಟ್ಟು, ಮತ್ತೊಂದು ಕಡೆಯಿಂದ ಅರವಳಿಕೆ ಚುಚ್ಚು ಮದ್ದು ನೀಡಿ ಚಿರತೆ ಸೆರೆಗೆ ಸನ್ನದ್ದರಾಗಿದ್ದರು.

    ಹಾಲನೂರಿನಲ್ಲಿ ಸೆರೆ ಸಿಕ್ಕ ಚಿರತೆ ಸುಮಾರು 7 ವರ್ಷ ಪ್ರಾಯದ್ದಾಗಿದ್ದು, ಸುಮಾರು 2 ಗಂಟೆಗಳ ಕಾಲ ನಡೆದ ಕಾರ್ಯಚರಣೆ ಬಳಿಕ ಚಿರತೆಯನ್ನ ಹಿಡಿಯುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇಲ್ಲಿಯವರೆಗೂ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದ ಹಾಗೂ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ 3 ಚಿರತೆಗಳು ಸೇರಿ ಒಟ್ಟು ನಾಲ್ಕು ಚಿರತೆಗಳನ್ನ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಆದರೆ ಗ್ರಾಮಸ್ಥರು ಈ ಭಾಗದಲ್ಲಿ ಇನ್ನೂ ಆರೇಳು ಚಿರತೆಗಳು ಓಡಾಡುತ್ತಿವೆ ಎಂದು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.

  • ಜಗತ್ತಿನಾದ್ಯಂತ ಕೊರೊನಾ ಭೀತಿ – ಹಾಸನದ ಗ್ರಾಮವೊಂದರಲ್ಲಿ ಅಶುದ್ಧ ಕುಡಿಯುವ ನೀರಿನಿಂದ ಆತಂಕ

    ಜಗತ್ತಿನಾದ್ಯಂತ ಕೊರೊನಾ ಭೀತಿ – ಹಾಸನದ ಗ್ರಾಮವೊಂದರಲ್ಲಿ ಅಶುದ್ಧ ಕುಡಿಯುವ ನೀರಿನಿಂದ ಆತಂಕ

    ಹಾಸನ: ಇಡೀ ದೇಶದಲ್ಲಿ ಕೊರೊನ ಭೀತಿ ಶುರುವಾಗಿದರೆ, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೆಲವಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಸತ್ತ ಇಲಿ, ಕೀಟಗಳು ಬರುತ್ತಿದ್ದು, ಸಾಂಕ್ರಾಮಿಕ ರೋಗದ ಆತಂಕ ಎದುರಾಗಿದೆ.

    ಕೆಲವಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವ ಓವರ್ ಟ್ಯಾಂಕ್‍ನಲ್ಲಿ ಗಲೀಜು ತುಂಬಿಕೊಂಡಿದೆ. ಜೊತೆಗೆ ಇಲಿ, ಕೀಟಗಳು ಸತ್ತು ಗಬ್ಬು ನಾರುತ್ತಿದೆ. ಕಳೆದೊಂದು ವಾರದಿಂದ ಇದೇ ನೀರು ಕುಡಿದು ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದು ಗ್ರಾಮಸ್ಥರು ಆತಂಕ ಹೊರಹಾಕುತ್ತಿದ್ದಾರೆ.

    ಈ ಬಗ್ಗೆ ಗಮನ ಹರಿಸಬೇಕಾದ ಗ್ರಾಮ ಪಂಚಾಯ್ತಿ ಅಧಿಕಾರಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಅಸಹಾಯಕತೆ ಹೊರ ಹಾಕುತ್ತಿದ್ದಾರೆ. ಜಗತ್ತಿನಾದ್ಯಂತ ಜನ ಕೊರೊನಾ ಸೋಂಕಿನಿಂದ ಸಾಯುತ್ತಿದ್ದರೆ, ನಾವು ಶುದ್ಧವಾದ ಕುಡಿಯುವ ನೀರಿಲ್ಲದೆ ಸಾಯುವ ಪರಿಸ್ಥಿತಿ ಬಂದಿದೆ ಎಂದು ಗ್ರಾಮಸ್ಥರು ನೋವು ಹೊರಹಾಕುತ್ತಿದ್ದಾರೆ.

  • ಪೊಲೀಸರ ಸೋಗಿನಲ್ಲಿ ಡಕಾಯಿತಿಗೆ ಯತ್ನಿಸಿದ 10 ಮಂದಿ ಖದೀಮರು ಅಂದರ್

    ಪೊಲೀಸರ ಸೋಗಿನಲ್ಲಿ ಡಕಾಯಿತಿಗೆ ಯತ್ನಿಸಿದ 10 ಮಂದಿ ಖದೀಮರು ಅಂದರ್

    ಚಿಕ್ಕಬಳ್ಳಾಪುರ: ಪೊಲೀಸರು ಹಾಗೂ ಪತ್ರಕರ್ತರ ಸೋಗಿನಲ್ಲಿ ಡಕಾಯಿತಿಗೆ ಯತ್ನಿಸಿದ 10 ಮಂದಿ ಕಳ್ಳ ಖದೀಮರು ಜೈಲು ಸೇರಿದ್ದಾರೆ.

    ಬಂಧಿತರನ್ನು ಬೆಂಗಳೂರು ಮೂಲದ ಉಸ್ಮಾನ್ ಘನಿ, ತಮಿಳುನಾಡು ಮೂಲದ ಕಾರ್ತಿಕೇಯನ್, ಬೆಂಗಳೂರು ಮೂಲದ ಕಾರುಚಾಲಕ ಕಿರುಬಾಕರನ್, ರಘುನಂದನ್, ಚಿಂತಾಮಣಿ ಮೂಲದ ಸೈಯದ್ ಅಹಮದ್, ಕೋಲಾರದ ಸುನಿಲ್, ಬೆಂಗಳೂರಿನ ಸಲೀಂ, ನದೀಮ್ ಬಾಷಾ, ಕೋಲಾರದ ಕೆ ಸಿ ಕೃಷ್ಣ, ಹಾಗೂ ರಾಜೇಶ್ ಎಂದು ಗುರುತಿಸಲಾಗಿದೆ.

    ಮಾರ್ಚ್ 13ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮಂಡಿಕಲ್ ಗ್ರಾಮ ಹೊರವಲಯದ ನಾಗರತ್ನಮ್ಮ-ಜಯರಾಮ್ ದಂಪತಿಯ ಮನೆಗೆ ನುಗ್ಗಿದ್ದರು. ಒಟ್ಟು 10 ಮಂದಿಯಲ್ಲಿ ಓರ್ವ ಪೊಲೀಸ್ ಸಮವಸ್ತ್ರಧಾರಿಯಾಗಿದ್ದು, ಏನಮ್ಮ ನಿಮ್ಮ ಮನೆಯಲ್ಲಿ ದುಡ್ಡು ಇದೆ ಮನೆ ಜಪ್ತಿ ಮಾಡೋಕೆ ಬಂದಿದ್ದೀವಿ ಅಂತ ಹೇಳಿ, ಮನೆಯಲ್ಲಿದ್ದ ಬೀರುಗಳನ್ನು ಕಬ್ಬಿಣದ ರಾಡ್ ಗಳಿಂದ ಒಡೆದು ಹಾಕಿದ್ದರು. ಹಣ ಸಿಗದೇ ಇದ್ದಾಗ ಅವರ ಬಳಿ ಇದ್ದ ಎರಡು ಮೊಬೈಲ್ ಗಳನ್ನು ಕಸಿದುಕೊಂಡು ಮೂರು ಕಾರುಗಳಲ್ಲಿ ಪರಾರಿಯಾಗಿದ್ದರು.

    ಪರಾರಿಯಾಗುವ ಸಂದರ್ಭದಲ್ಲಿ ಮಂಡಿಕಲ್ ನಂತರ ಶೆಟ್ಟಿಗೆರೆ ಗ್ರಾಮದಲ್ಲಿ ಅನುಮಾನಗೊಂಡ ಗ್ರಾಮಸ್ಥರು ಕಾರುಗಳನ್ನು ಅಡ್ಡಗಟ್ಟಿದ್ದರು. ಈ ವೇಳೆ ಒಂದು ಕಾರಿನಲ್ಲಿದ್ದವರು ಪರಾರಿಯಾಗಿದ್ದು ಎರಡು ಕಾರುಗಳ ಸಮೇತ ಅದರಲ್ಲಿದ್ದವರಿಗೆ ಗ್ರಾಮಸ್ಥರು ದಿಗ್ಬಂಧನ ವಿಧಿಸಿದ್ದರು. ನಂತರ ಅವರನ್ನು ವಶಕ್ಕೆ ಪಡೆದ ಗುಡಿಬಂಡೆ ಸಿಪಿಐ ಸುನಿಲ್ ವಿಚಾರಣೆ ನಡೆಸಿದಾಗ ಆಸಲಿಯತ್ತು ಬೆಳಕಿಗೆ ಬಂದಿದೆ.

    ಅಂದಹಾಗೆ ಆಸಲಿಗೆ ಬಂಧಿತರು ಡಕಾಯಿತಿ ಮಾಡುವ ಉದ್ದೇಶದಿಂದಲೇ ಪ್ಲಾನ್ ಮಾಡಿ ಮೂರು ಕಾರುಗಳ ಮುಖಾಂತರ ಬಂದಿದ್ದು, ಯಾರೋ ಜಯರಾಮ್ ಮನೆಯಲ್ಲಿ ಬಹಳ ಹಣ ಇರುತ್ತೆ ಎಂದು ಮಾಹಿತಿ ನೀಡಿದ್ದರಂತೆ. ಹೀಗಾಗಿ ಪ್ಲಾನ್ ಮಾಡಿ ಈ ಕೃತ್ಯ ಎಸಗಿದ್ದಾರೆ. ಸದ್ಯ ಕೃತ್ಯಕ್ಕೆ ಬಳಸಿದ ಮೂರು ಕಾರು ಹಾಗೂ ಕಬ್ಬಿಣದ ರಾಡ್‍ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು 10 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಉರುಸ್‍ನಲ್ಲಿ ಸಾಮೂಹಿಕ ಭೋಜನ – 450ಕ್ಕೂ ಹೆಚ್ಚು ಜನ ಅಸ್ವಸ್ಥ

    ಉರುಸ್‍ನಲ್ಲಿ ಸಾಮೂಹಿಕ ಭೋಜನ – 450ಕ್ಕೂ ಹೆಚ್ಚು ಜನ ಅಸ್ವಸ್ಥ

    ಬಳ್ಳಾರಿ: ವಿಷ ಆಹಾರ ಸೇವಿಸಿ ಸುಮಾರು 450ಕ್ಕೂ ಹೆಚ್ಚು ಜನರ ಅಸ್ವಸ್ಥರಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲೂಕಿನ ಮಾಲ್ವಿಯಲ್ಲಿ ನಡೆದಿದೆ.

    ಮಾಲ್ವಿ ಗ್ರಾಮದಲ್ಲಿ ನಡೆದ ಪೀರ್ ಸಾಬ್ ಉರುಸ್‍ನಲ್ಲಿ ಅವಘಡ ನಡೆದಿದ್ದು, ಪೀರ್ ಸಾಬ್ ಉರುಸ್‍ನಲ್ಲಿ ಗ್ರಾಮಸ್ಥರು ಸಾಮೂಹಿಕ ಭೋಜನ ಮಾಡಿದ್ದಾರೆ. ಬಳಿಕ ಕೆಲವರಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಸಂಜೆ ಆಗುತ್ತಿದ್ದಂತೆ ಜನರಲ್ಲಿ ವಾಂತಿ ಬೇದಿ ಹೆಚ್ಚಾಗಿದೆ. ಹೀಗಾಗಿ ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಗರಿ ಬೊಮ್ಮನಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    450ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಕಾರಣ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ನೆಲದಲ್ಲಿ ರೋಗಿಗಳನ್ನು ಹಾಕಿ ಚಿಕಿತ್ಸೆ ನೀಡಲಾಗಿದೆ. ಇಬ್ಬರಿಗೆ ಸ್ಥಿತಿ ಗಂಭೀರವಾಗಿರುವ ಕಾರಣ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಷಯ ತಿಳಿದ ಹಗರಿ ಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಬೀಮಾ ನಾಯಕ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜನರು ಭಯ ಪಡುವ ಅವಶ್ಯಕತೆ ಇಲ್ಲ ಎಂದು ಧೈರ್ಯ ತುಂಬಿದ್ದಾರೆ.

  • ಇಬ್ಬರು ಉಗ್ರರ ಹತ್ಯೆ, 17 ವರ್ಷ ಸೇನೆಯಲ್ಲಿ ಸೇವೆ – ಊರಿಗೆ ಬಂದ ಯೋಧನಿಗೆ ಅದ್ಧೂರಿ ಸ್ವಾಗತ

    ಇಬ್ಬರು ಉಗ್ರರ ಹತ್ಯೆ, 17 ವರ್ಷ ಸೇನೆಯಲ್ಲಿ ಸೇವೆ – ಊರಿಗೆ ಬಂದ ಯೋಧನಿಗೆ ಅದ್ಧೂರಿ ಸ್ವಾಗತ

    ಧಾರವಾಡ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿದ ಯೋಧನಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ.

    ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಇಂದು ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಗ್ರಾಮದಲ್ಲಿನ ಈರವ್ವ ಹಾಗೂ ನಾರಾಯಣ ಗಡಾದ ದಂಪತಿಯ ಪುತ್ರ ಬಸವರಾಜ ಗಡಾದ ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ವಾಪಸ್ಸಾಗಿದ್ದಕ್ಕೆ ಗ್ರಾಮಸ್ಥರು ಅವರನ್ನು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿದರು.

    ಮದ್ರಾಸ್ ರಿಜೆಮೆಂಟ್ ನಲ್ಲಿ ಹವಾಲ್ದಾರ್ ಆಗಿದ್ದ ಯೋಧ ಬಸವರಾಜ, ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಪಂಚಗಾಂವ್ ನಲ್ಲಿ ಉಗ್ರರ ಜೊತೆ ಸೆಣಸಾಡಿ, ಇಬ್ಬರು ಉಗ್ರರನ್ನ ಹೊಡೆದಿದ್ದಾರೆ. ಅಲ್ಲದೆ ನೌಶೇರಾ ಜಿಲ್ಲೆಯಲ್ಲಿ ಕೂಡ ಉಗ್ರರ ಮೇಲೆ ದಾಳಿ ಮಾಡಿದ ಕಿರ್ತಿ ಇವರದ್ದು. ಜಮ್ಮು ಕಾಶ್ಮೀರ, ಸಿಯಾಚಿನ್, ಲೇಹ್, ಲಡಾಖ್ ಸೇರಿದಂತೆ ಇತರೆ ಪ್ರದೇಶಗಳಲ್ಲಿ 17 ವರ್ಷ ಸೇವೆ ಸಲ್ಲಿಸಿದ ಬಳಿಕ ಇದೀಗ ತವರಿಗೆ ವಾಪಾಸ್ಸಾಗಿದ್ದಾರೆ.

    ಗ್ರಾಮದ ಅಪ್ನಾದೇಶ ಬಳಗ, ಶಾಲಾ ಮಕ್ಕಳು, ಹೆಬ್ಬಳ್ಳಿ ಗ್ರಾಮದ ಗುರು ಹಿರಿಯರು, ಗಡಾದ ಅವರ ಸ್ನೇಹಿತರ ಬಳಗದಿಂದ ತೆರದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು. 5 ಶಾಲೆಯ ಮಕ್ಕಳು ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ನಂತರ ಗ್ರಾಮ ಪಂಚಾಯತ್ ವತಿಯಿಂದ ಯೋಧನನ್ನು ಸನ್ಮಾನಿಸಿ ಗೌರವಿಸಲಾಯಿತು. ಯೋಧನ ಮೆರವಣಿಯುದ್ದಕ್ಕೂ ಭಾರತ ಮಾತಾಕೀ ಜೈ, ಒಂದೇ ಮಾತರಂ ಎನ್ನುವ ದೇಶಭಕ್ತಿಯ ಜಯ ಘೋಷಗಳು ಕೇಳಿಬಂದವು.

  • ಮರಳಿನ ಲಾರಿ ಡಿಕ್ಕಿ – ಶಾಲಾ ಬಾಲಕಿ ಸ್ಥಳದಲ್ಲಿಯೇ ಸಾವು

    ಮರಳಿನ ಲಾರಿ ಡಿಕ್ಕಿ – ಶಾಲಾ ಬಾಲಕಿ ಸ್ಥಳದಲ್ಲಿಯೇ ಸಾವು

    – ಆಕ್ರೋಶಗೊಂಡ ಜನರಿಂದ ಲಾರಿಗೆ ಬೆಂಕಿ

    ದಾವಣಗೆರೆ: ಸ್ಪೆಷಲ್ ಕ್ಲಾಸಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಮರಳಿನ ಲಾರಿಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮರಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ದಿವ್ಯಾ ಪಾಟೀಲ್(15) ಸಾವನ್ನಪ್ಪಿದ ಬಾಲಕಿ. ಗ್ರಾಮದ ಸಮೀಪವಿರುವ ಶಾಲೆಯಲ್ಲಿ ದಿವ್ಯಾ 10ನೇ ತರಗತಿ ಓದುತ್ತಿದ್ದಳು. ಇಂದು ಬೆಳಗ್ಗೆ ಸ್ಪೆಷಲ್ ಕ್ಲಾಸ್ ಇದ್ದ ಹಿನ್ನೆಲೆಯಲ್ಲಿ ದಿವ್ಯಾ ಶಾಲೆಗೆ ಸೈಕಲಿನಲ್ಲಿ ತೆರಳುತ್ತಿದ್ದಳು. ಈ ವೇಳೆ ತುಂಗಭದ್ರ ನದಿಯಿಂದ ಮರಳು ತುಂಬಿಕೊಂಡು ಹೋಗುತ್ತಿದ್ದ ಲಾರಿ ದಿವ್ಯಾಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದಿವ್ಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಬಾಲಕಿ ಮೃತಪಡುತ್ತಿದ್ದಂತೆ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಆಕ್ರೋಶಗೊಂಡ ಗ್ರಾಮಸ್ಥರು ಲಾರಿಗೆ ಬೆಂಕಿ ಇಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರತಿನಿತ್ಯ ತುಂಗಾಭದ್ರ ನದಿಯಿಂದ ಮರಳು ತುಂಬಿದ ಲಾರಿಗಳ ಸಂಚಾರ ಮಾಡುತ್ತಿವೆ. ಬೈಕ್‍ಗಳಲ್ಲಿ, ಕಾರುಗಳಲ್ಲಿ ಓಡಾಡುವುದು ಕೂಡ ಕಷ್ಟವಾಗಿದೆ. ಅಕ್ರಮವಾಗಿ ಕೆಲವರಿಗೆ ಪರವಾನಿಗೆ ಇಲ್ಲದೆ ಮರಳುಗಾರಿಕೆ ಮಾಡುತ್ತಿದ್ದರು. ಇದರಿಂದ ಗ್ರಾಮಸ್ಥರು ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಮರಳು ಲಾರಿಗಳು ಗ್ರಾಮದಲ್ಲೇ ಹಾದು ಹೋಗುತ್ತಿರುವುದರಿಂದ ಇಲ್ಲಿನ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿತ್ತು.

    ಇದೀಗ ಶಾಲೆಗೆ ಹೋಗಿ ಓದಿ ಉನ್ನತ ಮಟ್ಟಕ್ಕೆ ಹೋಗಬೇಕಿದ್ದ ಬಾಲಕಿ ಈಗ ಶವವಾಗಿ ಮನೆಗೆ ಬಂದಿದ್ದಾಳೆ. ಅಲ್ಲದೆ ಕೂಡಲೇ ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಎಸ್‍ಪಿ ಯವರು ಬರಬೇಕು ಇಲ್ಲವಾದರೆ ಉಗ್ರವಾದ ಹೋರಾಟ ಮಾಡುವುದಾಗಿ ಗ್ರಾಮಸ್ಥರು ತಿಳಿಸಿದರು. ಇನ್ನು ಸ್ಥಳಕ್ಕೆ ನ್ಯಾಮತಿ ಠಾಣೆಯ ಪೊಲೀಸರು ಆಗಮಿಸಿದ್ದು, ಪರಿಸ್ಥಿತಿ ನಿಯಂತ್ರಿಸುವಲ್ಲಿ ಹರಸಾಹಸಪಟ್ಟರು. ಇತ್ತ ಬಾಲಕಿ ಮೃತ ಸ್ಥಳದಲ್ಲಿ ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು.

  • ಸ್ವಾಮೀಜಿ ಸಾವಿನ ಸುತ್ತ ಅನುಮಾನಗಳ ಹುತ್ತ

    ಸ್ವಾಮೀಜಿ ಸಾವಿನ ಸುತ್ತ ಅನುಮಾನಗಳ ಹುತ್ತ

    – ಹೃದಯಾಘಾತವಾ, ಆತ್ಮಹತ್ಯೆಯಾ?

    ಮೈಸೂರು: ಸ್ವಾಮೀಜಿಯ ಸಾವಿನ ಸುತ್ತ ಅನುಮಾನಗಳ ಹುತ್ತ ಎದ್ದಿದ್ದು, ಮಠದ ಶಿಷ್ಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದ್ದರೆ, ಗ್ರಾಮಸ್ಥರು ಆತ್ಮಹತ್ಯೆ ಎಂದು ಹೇಳುತ್ತಿದ್ದಾರೆ.

    ಮೈಸೂರು ಜಿಲ್ಲೆಯ ಟಿ.ನರಸೀಪುರದ ಬೆನಕಹಳ್ಳಿ ಗ್ರಾಮದ ಪಟ್ಟದ ಮಠದ ಮಹದೇವ ಸ್ವಾಮೀಜಿ(55) ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಬೆಳಗ್ಗೆಯಾದರೂ ಸ್ವಾಮೀಜಿ ಕೊಣೆಯಿಂದ ಹೊರಗೆ ಬಾರದಿದ್ದಾಗ ಬಾಗಿಲು ಮುರಿದು ಒಳಗೆ ಹೋದೆವು. ಆಗ ಸ್ವಾಮೀಜಿ ನಿಧನ ವಿಚಾರ ಬೆಳಕಿಗೆ ಬಂದಿದೆ. ಮಠದಲ್ಲಿ ಮಲಗಿದ್ದ ವೇಳೆಯೇ ಸ್ವಾಮೀಜಿಗೆ ಹೃದಯಾಘಾತವಾಗಿದೆ. ಹೀಗಾಗಿ ಸ್ವಾಮೀಜಿ ಸಾವನ್ನಪ್ಪಿದ್ದಾರೆ ಎಂದು ಮಠದ ಶಿಷ್ಯ ವರ್ಗ ಹೇಳುತ್ತಿದೆ.

    ಆದರೆ ಸ್ವಾಮೀಜಿ ಸಾವಿನ ಬಗ್ಗೆ ಗ್ರಾಮದಲ್ಲಿ ಹಲವು ರೀತಿಯ ವದಂತಿ ಹಬ್ಬಿವೆ. ಇದು ಹೃದಯಾಘಾತವಲ್ಲ, ಆತ್ಮಹತ್ಯೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಗ್ರಾಮಸ್ಥರ ಈ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಮರಣೋತ್ತರ ಪರೀಕ್ಷೆಗೆ ನಿರ್ಧಾರಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಸ್ವಾಮೀಜಿ ಸಾವಿಗೆ ಕಾರಣ ಸ್ಪಷ್ಟವಾಗಲಿದೆ.

  • ಸ್ವಗ್ರಾಮಕ್ಕೆ ಮರಳಿದ ನಿವೃತ್ತ ಯೋಧರು- ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

    ಸ್ವಗ್ರಾಮಕ್ಕೆ ಮರಳಿದ ನಿವೃತ್ತ ಯೋಧರು- ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

    ಹಾವೇರಿ: ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಮರಳಿದ ನಿವೃತ್ತ ಸೈನಿಕರಿಗೆ ಹಾವೇರಿಯಲ್ಲಿ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ.

    ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಜಗದೀಶ್, ಅಗಡಿ ಗ್ರಾಮದ ನಜೀರ್ ಅಹಮ್ಮದ್ ಮತ್ತು ಲಕ್ಷ್ಮಣ ಅವರನ್ನು ಅದ್ಧೂರಿ ಸ್ವಾಗತದ ಮೂಲಕ ಬರಮಾಡಿಕೊಂಡರು. ಜಮ್ಮು ಕಾಶ್ಮೀರ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿದ ನಿವೃತ್ತ ಸೈನಿಕರು ಇಂದು ಊರಿಗೆ ಮರಳಿದ್ದಾರೆ. ಕಾರು ಇಳಿಯುತ್ತಿದ್ದಂತೆ ನಿವೃತ್ತ ಸೈನಿಕರಿಗೆ ಮಕ್ಕಳು ಪುಷ್ಪಗುಚ್ಛ ನೀಡಿದರು. ಇದೇ ವೇಳೆ ಕುಟುಂಬಸ್ಥರು ಸಹ ಸ್ವಾಗತಿಸಿದರು.

    ನಂತರ ನಗರದ ಹೊಸಮನಿ ಸಿದ್ದಪ್ಪ ವೃತ್ತದಿಂದ ತೆರೆದ ವಾಹನದಲ್ಲಿ ದೇಶಭಕ್ತಿ ಗೀತೆಗಳ ಮೂಲಕ ನಿವೃತ್ತ ಸೈನಿಕರ ಮೆರವಣಿಗೆ ಮಾಡಲಾಯ್ತು. ಹಾವೇರಿಯಿಂದ ಸೈನಿಕರ ಸ್ವಗ್ರಾಮ ಅಗಡಿವರೆಗೆ ಮೆರವಣಿಗೆ ಮಾಡಿ ಅದ್ಧೂರಿಯಾಗಿ ಸ್ವಾಗತಿಸಿದರು. ಈ ಮೂಲಕ ದೇಶಾಭಿಮಾನ ಮೆರೆದರು.