Tag: Villager

  • ನನಗೆ ವೋಟು ಹಾಕಬೇಡಿ – ರಸ್ತೆ ದುರಸ್ತಿ ಬಗ್ಗೆ ಮಾತನಾಡಲು ಹೋದ ಗ್ರಾಮಸ್ಥರಿಗೆ ಅಪ್ಪಚ್ಚು ರಂಜನ್ ತಿರುಗೇಟು

    ನನಗೆ ವೋಟು ಹಾಕಬೇಡಿ – ರಸ್ತೆ ದುರಸ್ತಿ ಬಗ್ಗೆ ಮಾತನಾಡಲು ಹೋದ ಗ್ರಾಮಸ್ಥರಿಗೆ ಅಪ್ಪಚ್ಚು ರಂಜನ್ ತಿರುಗೇಟು

    ಮಡಿಕೇರಿ: ರಸ್ತೆ ದುರಸ್ತಿ ಬಗ್ಗೆ ಮಾತನಾಡಲು ಹೋದ ಗ್ರಾಮಸ್ಥರಿಗೆ ನನಗೆ ವೋಟು ಹಾಕಬೇಡಿ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ (Appachchu Ranjan) ಕಿಡಿಕಾರಿದ್ದಾರೆ.

    ಹೌದು, ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ (SomavaraPete) ಮತ್ತು ಕುಶಾಲನಗರ (Kushalnagara) ತಾಲೂಕು ನೇರುಗಳಲೆ ಗ್ರಾಮ ಪಂಚಾಯಿತಿ ಮತ್ತು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಲೋಕೋಪಯೋಗಿ ಇಲಾಖೆಯ ಮಸಗೂಡು ಕಣಿವೆಯ ರಸ್ತೆಯು ಸುಮಾರು 18 ಕಿ.ಲೋವರೆಗೂ ಕಳೆದ 10 ವರ್ಷಗಳಿಂದ ಇದೇ ಸ್ಥಿತಿಯಲ್ಲಿದೆ. ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಈ ಹಿಂದೆ ಈ ಗ್ರಾಮಕ್ಕೆ 5 ಖಾಸಗಿ ಬಸ್ಸುಗಳು ಸಂಚರಿಸುತ್ತಿತ್ತು. ಆದರೆ ರಸ್ತೆ ಹಾಳಾಗಿರುವುದರಿಂದ ಬಸ್ಸುಗಳ ವ್ಯವಸ್ಥೆ ನಿಲ್ಲಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಸೋಮವಾರಪೇಟೆ ಕೂಡಿಗೆಗೆ ನಡೆದು ಹೋಗುವ ದುಸ್ಥಿತಿಯಾಗಿದೆ.

    ಈ ಗ್ರಾಮಕ್ಕೆ ಈ ಹಿಂದೆ ಆಟೋ ಬಾಡಿಗೆ 50-60 ತೆಗೆದುಕೊಳ್ಳುತ್ತಿದ್ದರು. ಆದರೆ ಈಗ 200 ರಿಂದ 300 ರೂ. ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಗ್ರಾಮದಲ್ಲಿ ಕೂಲಿ ಕಾರ್ಮಿಕರು ಸೇರಿದಂತೆ ಸುಮಾರು 5,000 ಜನ ಇದ್ದಾರೆ. ಇದು ಸುಮಾರು 10 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಜನರಿಗೆ ವಯಸ್ಕರಿಗೆ, ಮಕ್ಕಳಿಗೆ ಓಡಾಡಲು ತುಂಬಾ ಕಷ್ಟಕರವಾಗಿದೆ. ಈ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ಮಾಡುವುದರಿಂದ ಹೆಚ್ಚು ಲಾರಿಗಳ ಓಡಾಟ ಇರುವುದರಿಂದ ರಸ್ತೆ ಹಾಗೂ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯು ಅಪಾಯದಲ್ಲಿದೆ. ಹೀಗಾಗಿ ಇಲ್ಲಿನ ಗ್ರಾಮಸ್ಥರು ಅನೇಕ ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಹ ‘ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ನನಗೆ ನೀವು ಕೊಟ್ಟಿರುವ ಪೊಷಿಷನ್‌ ಸಾಕು, ಇನ್ಯಾವುದೂ ಬೇಡ – ಡಿಕೆಶಿ ರಾಜಕೀಯ ನಿವೃತ್ತಿ ಸುಳಿವು!

    ಈ ರಸ್ತೆ ಸಮಸ್ಯೆ ಕಳೆದ ಹತ್ತು ವರ್ಷಗಳಿಂದ ಇದೆ. ಈ ಗ್ರಾಮದಲ್ಲಿ ಕಲ್ಲಿನ ಕೊರೆಗಳು ಇರುವುದರಿಂದ ಸಾಕಷ್ಟು ಲಾರಿಗಳು ಓಡಾಟ ನಡೆಸುತ್ತಿದ್ದು, ಗ್ರಾಮ ಸಂಪೂರ್ಣ ಧೂಳು ಮಯವಾಗಿದೆ. ಸರಿಯಾದ ರಸ್ತೆ ಮಾಡಿ ಶಾಲಾ ಕಾಲೇಜು ಮಕ್ಕಳ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪ್ರಧಾನಿ ಮೋದಿ (Prime Minister Narendra Modi) ಅವರ ಕಚೇರಿಗೆ ಪತ್ರ ಮೇಲ್ ಮಾಡಲಾಗಿದೆ. ಅಲ್ಲದೇ ಅಪ್ಪಚ್ಚು ರಂಜನ್ ಅವರಿಗೆ ಪತ್ರ ಕೊಡಲು ಹೋದರೆ, ನಿಮ್ಮ ಗ್ರಾಮಸ್ಥರು ವೋಟು ತನಗೆ ಬೇಡ ಇಲ್ಲಿಂದ ಹೋಗಿ ಎಂದು ಕೊಡಗು ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ (B.C.Nagesh) ಅವರ ಮುಂದೆಯೇ ಬೈದು ಕಳಿಸಿದ್ದಾರೆ. ಇದೀಗಾ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಗೆ – ಹಾಲಿ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ಥೀಮ್ ಸಾಂಗ್‍ಗಳಿಗೆ ಡ್ಯಾನ್ಸ್ ಮಾಡ್ತಿದ್ದವರ ಮೇಲೆ ಎಸ್‍ಪಿ ಕಾರ್ಯಕರ್ತರಿಂದ ಹಲ್ಲೆ

    ಬಿಜೆಪಿ ಥೀಮ್ ಸಾಂಗ್‍ಗಳಿಗೆ ಡ್ಯಾನ್ಸ್ ಮಾಡ್ತಿದ್ದವರ ಮೇಲೆ ಎಸ್‍ಪಿ ಕಾರ್ಯಕರ್ತರಿಂದ ಹಲ್ಲೆ

    ಲಕ್ನೋ: ಬಿಜೆಪಿಯ ಚುನಾವಣಾ ಪ್ರಚಾರದ ಹಾಡುಗಳಿಗೆ ನೃತ್ಯ ಮಾಡುತ್ತಿದ್ದ ಗ್ರಾಮಸ್ಥರ ಮೇಲೆ ಜನರ ಗುಂಪೊಂದು ದಾಳಿ ಮಾಡಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

    ಕಾನ್ಪುರ ದೇಹತ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಜಿಲ್ಲೆಯ ರಸೂಲಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಸಂಭ್ರಮಾಚರಣೆಗಾಗಿ ತಮ್ಮ ಮನೆಯಲ್ಲಿ ಡಿಜೆ ಹಾಕಿ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ಥಳೀಯರು ಬಿಜೆಪಿ ಚುನಾವಣಾ ಥೀಮ್ ಸಾಂಗ್‍ಗಳಿಗೆ ಕುಣಿಯುತ್ತಿದ್ದರು. ಸ್ಥಳಕ್ಕೆ ಬಂದ ಸಮಾಜವಾದಿ ಪಕ್ಷದ ಕಾರ್ಯಕರ್ತರು ಬಿಜೆಪಿ ಚುನಾವಣಾ ಥೀಮ್ ಹಾಡುಗಳನ್ನು ಪ್ಲೇ ಮಾಡುವುದನ್ನು ನಿಲ್ಲಿಸುವಂತೆ ಡಿಜೆ ಆಯೋಜಕರನ್ನು ಕೇಳಿದರು. ಡಿಜೆ ಆಯೋಜಕರು ಕೇಳದೆ ಇದ್ದಾಗ ಆತನನ್ನು ನಿಂದಿಸಿ, ಥಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದನ್ನೂ ಓದಿ: ಜಮ್ಮು, ಕಾಶ್ಮೀರ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

    ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ ಸಂಬಂಧಿತ, ಸೆಕ್ಷನ್‍ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ರಸೂಲಾಬಾದ್ ಪೊಲೀಸ್ ಠಾಣೆಯ ಉಸ್ತುವಾರಿ ಪ್ರಮೋದ್ ಕುಮಾರ್ ಶುಕ್ಲಾ ಹೇಳಿದ್ದಾರೆ. ಇದನ್ನೂ ಓದಿ: ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಭಗವಂತ್ ಮಾನ್

    ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಿಹೆರ ಹುಡುಕಾಟ ನಡೆಸಲಾಗುತ್ತಿದೆ. ಶುಕ್ರವಾರ ರಾತ್ರಿ, ಔರಯ್ಯ ಜಿಲ್ಲೆಯಲ್ಲಿ, ಬಿಜೆಪಿಯ ಚುನಾವಣಾ ಹಾಡುಗಳನ್ನು ನುಡಿಸುವಾಗ ಮದುವೆ ಮೆರವಣಿಗೆಯ ಮೇಲೆ ದಾಳಿ ನಡೆಸಿರುವುದು ಕೆಲವು ದಿನಗಳ ಹಿಂದೆ ಸುದ್ದಿಯಾಗಿತ್ತು.

  • ಚಿರತೆ ದಾಳಿಗೆ ಬಾಲಕ ಬಲಿ- ಶವವಿಟ್ಟು ಪ್ರತಿಭಟನೆ

    ಚಿರತೆ ದಾಳಿಗೆ ಬಾಲಕ ಬಲಿ- ಶವವಿಟ್ಟು ಪ್ರತಿಭಟನೆ

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪೂರ ಗಡ್ಡೆ ಪಕ್ಕದಲ್ಲಿ ಚಿರತೆ ದಾಳಿಯಿಂದ ಬಾಲಕ ಮೃತಪಟ್ಟಿದ್ದು, ಸ್ಥಳೀಯರು ಸೇರಿದಂತೆ ಸಣಾಪೂರ, ಜಗ್ಲಿ, ರಾಂಪೂರ ಗ್ರಾಮದ ನೂರಾರು ನಿವಾಸಿಗಳು ಅಂತ್ಯಸಂಸ್ಕಾರ ಮಾಡದೆ ಶವ ಇಟ್ಟು, ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

    ಆನೆಗೊಂದಿ ವ್ಯಾಪ್ತಿಯ ಸಂಗಾಪೂರ, ಆನೆಗೊಂದಿ, ರಾಂಪೂರ, ಜಂಗ್ಲಿ ಸೇರಿದಂತೆ ನಾನಾ ಪ್ರದೇಶಗಳಲ್ಲಿ ನರಭಕ್ಷಕ ಚಿರತೆ ಹಾವಳಿ ಹೆಚ್ಚಳವಾಗಿದೆ. ಮೂರು ತಿಂಗಳಲ್ಲಿ ಇಬ್ಬರು ಯುವಕರನ್ನು ಚಿರತೆ ಬಲಿ ಪಡೆದಿದೆ. ಹಾಗೇ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿರತೆ ದಾಳಿಯ ಕುರಿತು ಅಧಿಕಾರಿಗಳಿಗೆ ಕೇಳಿದರೆ ಅಕಾರಿಗಳು ಕೇವಲ ಹಾರಿಕೆ ಉತ್ತರಗಳನ್ನು ನೀಡಿ ಜಾರಿಕೊಳ್ಳುತ್ತಿದ್ದಾರೆ.

    ಚಿರತೆ ದಾಳಿಯಿಂದ ಗ್ರಾಮಸ್ಥರು ಜೀವ ಕೈಯ್ಯಲ್ಲಿ ಹಿಡಿದುಕೊಂಡೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಮೀನುಗಳಿಗೆ ಹೋಗಲು ಭಯದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಸಚಿವ ಆನಂದ್ ಸಿಂಗ್ ಕೂಡಲೇ ಸ್ಥಳಕ್ಕೆ ಆಗಮಿಸಿ, ಸಮಸ್ಯೆಗಳನ್ನು ಬಗೆಹರಿಸಬೇಕು. ಅಲ್ಲಿಯವರೆಗೂ ಮೃತ ಬಾಲಕನ ಶವ ಅಂತ್ಯ ಸಂಸ್ಕಾರ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಆನಂದ್ ಸಿಂಗ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

    ವಾಹನಗಳ ಸಂಚಾರಕ್ಕೆ ಅವಕಾಶ ನೀಡದೆ ಬೆಳಗ್ಗೆಯಿಂದ ಪ್ರತಿಭಟನೆ ನಡೆಸಿದ್ದು, ಸಂಜೆ ಸಚಿವರು ಬರುವವರೆಗೂ ಪಟ್ಟು ಬಿಡದೆ ಪ್ರತಿಭಟಿಸಿದರು. ನಂತರ ಸಚಿವ ಆನಂದ್ ಸಿಂಗ್ ಹಾಗೂ ಶಾಸಕ ಪರಣ್ಣ ಮುನವಳ್ಳಿ ಸ್ಥಳಕ್ಕೆ ಭೇಟಿ ನೀಡಿ, ಮೃತ ಬಾಲಕನ ಕುಟುಂಬದವರಿಗೆ ಸಾಂತ್ವನ ಹೇಳಿ, ನರಭಕ್ಷಕ ಚಿರತೆಯನ್ನು ಆದಷ್ಟು ಬೇಗ ಸೆರೆ ಹಿಡಿಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಸಹ ಸಾರ್ವಜನಿಕರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿ, ಘೋಷಣೆಗಳನ್ನು ಕೂಗಿದರು.

    ಬೆಳಗ್ಗೆಯಿಂದ ನೂರಾರು ಜನ ಸೇರಿ ರಸ್ತೆ ಬಂದ್ ಮಾಡಿ, ಪ್ರತಿಭಟನೆ ನಡೆಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಸ್ಥಳೀಯ ಅಧಿಕಾರಿಗಳು ಜನರ ಮನವೊಲಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಸೀಲ್ದಾರ, ಎಸ್‍ಪಿ, ಡಿವೈಎಸ್‍ಪಿ, ಸಿಪಿಐ, ಪಿಎಸ್‍ಐ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳದಲ್ಲಿಯೇ ಬಿಡು ಬಿಟ್ಟಿದ್ದರು.

  • ಸಚಿವ ಪುಟ್ಟರಾಜು, ಗ್ರಾಮಸ್ಥನ ನಡುವೆ ಮಾತಿನ ಚಕಮಕಿ?- ವಿಡಿಯೋ ವೈರಲ್

    ಸಚಿವ ಪುಟ್ಟರಾಜು, ಗ್ರಾಮಸ್ಥನ ನಡುವೆ ಮಾತಿನ ಚಕಮಕಿ?- ವಿಡಿಯೋ ವೈರಲ್

    ಮಂಡ್ಯ: ಜಿಲ್ಲೆಯ ಸೋಲಿನ ಸಿಟ್ಟು ಜೆಡಿಎಸ್ ನಾಯಕರಲ್ಲಿ ಇನ್ನೂ ಆರಿಲ್ಲ. ಸಚಿವ ಡಿ.ಸಿ ತಮ್ಮಣ್ಣ ಬೆನ್ನಲ್ಲೇ ಸಚಿವ ಪುಟ್ಟರಾಜು ಕೂಡ ಸಮಸ್ಯೆ ಹೇಳಿದ ಗ್ರಾಮಸ್ಥನ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

    ಕೆರೆ ನೀರು ತುಂಬಿಸುವ ವಿಷಯವಾಗಿ ಸಚಿವ ಪುಟ್ಟರಾಜು ಮತ್ತು ಗ್ರಾಮಸ್ಥರೊಬ್ಬರ ನಡುವೆ ನಡೆದಿದೆ ಎನ್ನಲಾದ ಮಾತಿನ ಚಕಮಕಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಸಭೆಯೊಂದರಲ್ಲಿ ಭಾಗವಹಿಸಿದ ಸಚಿವ ಪುಟ್ಟರಾಜು ವಿರುದ್ಧ ಗ್ರಾಮಸ್ಥರೊಬ್ಬರು ಕೆರೆಗೆ ನೀರು ತುಂಬಿಸುವ ವಿಚಾರವಾಗಿ ಆಕ್ರೋಶ ಹೊರಹಾಕಿದ್ದಾರೆ. ಸಮಸ್ಯೆ ಕೇಳುವ ಸಲುವಾಗಿಯೇ ನಿಮ್ಮ ಊರಿಗೆ ಬಂದಿದ್ದೇನೆ ಎಂದು ಸಚಿವರು ಹೇಳಿದರೂ ಗ್ರಾಮಸ್ಥ ಮತ್ತೆ ಗರಂ ಆಗಿದ್ದಾರೆ.

    ಇದರಿಂದ ಕೆರಳಿದ ಸಚಿವ ಪುಟ್ಟರಾಜು, ಸಮಸ್ಯೆ ಕೇಳಲು ಬಂದಿದ್ದೇನೆ ಅಂದರೂ ಕೇಳುತ್ತಿಲ್ಲವಲ್ಲ ಯಾಕೆ. ನನ್ನನ್ನು ನಿಮ್ಮ ಊರಿಗೆ ಕರೆಸಿ ಅವಮಾನ ಮಾಡಲು ಹೀಗೆ ಕೂಗಾಡುತ್ತಿದ್ದೀರಾ ಎಂದು ಕಿಡಿಕಾರಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಗ್ರಾಮಸ್ಥರು ಕೂಡ ತಮ್ಮ ಊರಿನ ವ್ಯಕ್ತಿಯನ್ನು ಊರಿಗೆ ಕರೆಸಿದಾಗ ಸಮಸ್ಯೆ ಹೇಳುವುದು ಬಿಟ್ಟು ಈ ರೀತಿ ಕೂಗಾಡಿ ಅವಮಾನ ಮಾಡಬಾರದು ಎಂದು ತಿಳಿ ಹೇಳಿದ್ದಾರೆ.

    ಇಷ್ಟಾದರೂ ಇಬ್ಬರ ನಡುವಿನ ಮಾತಿನ ಚಕಮಕಿ ತಣ್ಣಗಾಗದಿದ್ದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇವಿಷ್ಟು ಘಟನೆಯ ವಿಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು ಇಂದು ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದ್ದು ಎಂಬುದು ತಿಳಿದು ಬಂದಿಲ್ಲ.

  • ಚುನಾವಣಾ ಖರ್ಚಿಗೆ ನಿಖಿಲ್‍ಗೆ ಹಣ ನೀಡಿದ ಗ್ರಾಮಸ್ಥ

    ಚುನಾವಣಾ ಖರ್ಚಿಗೆ ನಿಖಿಲ್‍ಗೆ ಹಣ ನೀಡಿದ ಗ್ರಾಮಸ್ಥ

    ಮಂಡ್ಯ: ಚುನಾವಣಾ ಖರ್ಚಿಗಾಗಿ ಕೆ.ಆರ್ ಪೇಟೆಯ ದೊಡ್ಡಕೊಪ್ಪಲು ಗ್ರಾಮಸ್ಥ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಹಣ ನೀಡಿದ್ದಾರೆ.

    ಕೆ.ಆರ್ ನಗರ ವಿಧಾನಸಭಾ ಕ್ಷೇತ್ರದ ದೊಡ್ಡ ಕೊಪ್ಪಲು ಗ್ರಾಮದಿಂದ ನಿಖಿಲ್ ಪ್ರಚಾರ ಶುರು ಮಾಡಿದ್ದರು. ಈ ವೇಳೆ ದೊಡ್ಡಕೊಪ್ಪಲು ಗ್ರಾಮಸ್ಥ ಕವರ್‍ನಲ್ಲಿ ಹಣ ಹಾಕಿ ಚುನಾವಣಾ ಖರ್ಚಿಗೆಂದು ನಿಖಿಲ್ ಕೈಗೆ ಹಣ ಕೊಟ್ಟಿದ್ದಾರೆ. ನಿಖಿಲ್ ಗೆಲ್ಲಬೇಕು ಎಂದು ಆಶೀರ್ವಾದಿಸಿ ಆ ಹಣವನ್ನು ನೀಡಿದ್ದಾರೆ.

    ಈ ಹಿಂದೆ ಚುನಾವಣಾ ಸಮಯದಲ್ಲಿ ಆ ಕ್ಷೇತ್ರದ ಅಭ್ಯರ್ಥಿಗೆ ಜನ ಹಣ ನೀಡುತ್ತಿದ್ದರಂತೆ. ಆದರೆ ಈಗ ದೊಡ್ಡಕೊಪ್ಪಲು ಗ್ರಾಮಸ್ಥ ನೇರವಾಗಿ ನಿಖಿಲ್ ಅವರಿಗೆ ಈ ಹಣ ನೀಡಿ ಆಶೀರ್ವಾದ ಮಾಡಿದ್ದಾರೆ. ಗ್ರಾಮಸ್ಥ ಎಷ್ಟು ಹಣ ನೀಡಿದ್ದಾರೆ ಎನ್ನುವುದನ್ನು ನಿಖಿಲ್ ಬಹಿರಂಗ ಮಾಡಿಲ್ಲ. ಅವರು ಎಷ್ಟೇ ಹಣ ನೀಡಲಿ, ಅವರು ಪ್ರೀತಿಯಿಂದ ನೀಡಿದ್ದಾರೆ. ಅವರು ಚುನಾವಣಾ ಖರ್ಚಿಗೆಂದು ಹಣ ನೀಡಿದ್ದಾರೆ. ಅವರ ಅಭಿಮಾನದಿಂದ ಮುಂದೆ ಚುನಾವಣೆ ಗೆಲ್ಲಬಹುದು ಎಂದು ನಿಖಿಲ್ ವಿಶ್ವಾಸ ವ್ಯಕ್ತಪಡಿಸಿದರು.

    ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ನಿಖಿಲ್ ಕುಮಾರಸ್ವಾಮಿ ಟೆಂಪಲ್ ರನ್ ಶುರು ಮಾಡಿಕೊಂಡಿದ್ದಾರೆ. ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮದ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ನಿಖಿಲ್‍ಗೆ ಸ್ಥಳೀಯ ಜೆಡಿಎಸ್ ಮುಖಂಡರು ಸಾಥ್ ನೀಡಿದರು.

    ಕೆಆರ್ ನಗರ ವಿಧಾನಸಭಾ ಕ್ಷೇತ್ರದ ದೊಡ್ಡಕೊಪ್ಪಲು ಗ್ರಾಮದಿಂದ ನಿಖಿಲ್ ಪ್ರಚಾರ ಶುರು ಮಾಡಿದ್ದಾರೆ. ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ನಿಖಿಲ್ ಪ್ರಚಾರ ಆರಂಭಿಸಿದ್ದಾರೆ. ಪ್ರಚಾರಕ್ಕೆ ಎಐಸಿಸಿ ವಕ್ತಾರೆ ಐಶ್ವರ್ಯ ಮಹಾದೇವ್ ಸಾಥ್ ನೀಡಿದ್ದಾರೆ.