Tag: village

  • ಗ್ರಾಮಗಳ ಹೆಸರು ಬದಲಾವಣೆ ಮಾಡುವ ಯೋಚನೆ ಕೇರಳ ಸರ್ಕಾರದ ಮುಂದಿಲ್ಲ – ಎಕೆಎಂ ಅಶ್ರಫ್

    ಗ್ರಾಮಗಳ ಹೆಸರು ಬದಲಾವಣೆ ಮಾಡುವ ಯೋಚನೆ ಕೇರಳ ಸರ್ಕಾರದ ಮುಂದಿಲ್ಲ – ಎಕೆಎಂ ಅಶ್ರಫ್

    – ಕೇರಳ ಸರ್ಕಾರ ಯಾವುದೇ ಸುತ್ತೋಲೆ ಹೊರಡಿಸಿಲ್ಲ
    – ತಾಂತ್ರಿಕ ದೋಷದಿಂದ ಉಂಟಾದ ಲೋಪ
    – ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ

    ಕಾಸರಗೋಡು: ಮಂಜೇಶ್ವರ ತಾಲ್ಲೂಕುಗಳಲ್ಲಿ ಕೆಲ ಗ್ರಾಮಗಳ ಸ್ಥಳನಾಮ ಬದಲಾವಣೆ ಮಾಡುವ ಯಾವುದೇ ಯೋಚನೆ ಕೇರಳ ಸರ್ಕಾರದ ಮುಂದಿಲ್ಲ ಎಂದು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಹೇಳಿದ್ದಾರೆ.

    ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅವರು ಕೇರಳ ಸರ್ಕಾರ ಸ್ಥಳ ಬದಲಾವಣೆ ಸಂಬಂಧ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕನ್ನಡ ಹೆಸರಿನ ಗ್ರಾಮಗಳಿಗೆ ಮರುನಾಮಕರಣ ಮಾಡ್ಬೇಡಿ- ಕೇರಳ ಸಿಎಂಗೆ ಹೆಚ್‍ಡಿಕೆ ಪತ್ರ

    ಮಾಧ್ಯಮ ಹೇಳಿಕೆಯಲ್ಲಿ ಏನಿದೆ?
    ಕೇರಳ ವಿಧಾನ ಸಭೆಯಲ್ಲಿ ಮಂಜೇಶ್ವರದ ಶಾಸಕನೆಂಬ ನೆಲೆಯಲ್ಲಿ ಕೆಲವು ವಿಚಾರಗಳನ್ನು ನಿಮ್ಮ ಮುಂದಿಡುತ್ತೇನೆ. ಕಳೆದ ಕೆಲವು ದಿನಗಳಿಂದ ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶಗಳ ಹೆಸರುಗಳನ್ನು ಬದಲಾಯಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರುಗಳು ಈ ವಿಚಾರದಲ್ಲಿ ಟ್ಟೀಟ್ ಮಾಡುವ ಮೂಲಕ ಚರ್ಚೆ ಮಹತ್ವ ಪಡೆದುಕೊಂಡಿದೆ. ಕರ್ನಾಟಕದ ಗಡಿ ಅಭಿವೃದ್ಧಿ ಪ್ರಾಧಿಕಾರವು ಈ ವಿಚಾರದಲ್ಲಿ ಮನವಿಯನ್ನು ನೀಡಿರುವುದು ಈ ಎಲ್ಲಾ ಚರ್ಚೆಗೆ ಕಾರಣವಾಯಿತು.

     

    ಈ ಬಗ್ಗೆ ಕೇರಳ ಮುಖ್ಯ ಮಂತ್ರಿ ಅವರ ಕಛೇರಿಯನ್ನು ಮತ್ತು ಅವರ ಪಿಎ ಅವರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಲಾಯಿತು. ಕಾಸರಗೋಡು ಜಿಲ್ಲಾಧಿಕಾರಿ ಅವರಲ್ಲಿ ಫೋನ್  ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಈ ಎಲ್ಲಾ ಮಾಹಿತಿ ಪ್ರಕಾರ ಸ್ಥಳ ನಾಮ ಬದಲಾವಣೆ ಬಗ್ಗೆ ಹೊರ ಬರುವ ವಿಚಾರಗಳು ವಾಸ್ತವ ವಿರುದ್ಧವಾಗಿದೆ. ಇಂತಹ ಯಾವುದೇ ಸುತ್ತೋಲೆ ಕೇರಳ ಸರಕಾರ ಹೊರಡಿಸಲಿಲ್ಲ. ಅಂತಹ ಯಾವುದೇ ಯೋಚನೆಯು ಸರಕಾರದ ಮುಂದಿಲ್ಲ. ರೇಶನ್ ಕಾರ್ಡ್ ನಲ್ಲಿ ಸಾಫ್ಟ್ ವೇರ್ ಕಾರಣದಿಂದ ಕೆಲವು ಹೆಸರುಗಳಲ್ಲಿ ಬದಲಾವಣೆ ಆಗಿರುವುದು ಸತ್ಯ. ಆದರೆ ಇದು ತಾಂತ್ರಿಕ ಕಾರಣದಿಂದ ಉಂಟಾದ ಲೋಪ. ಇದನ್ನು ಸರಿಪಡಿಸಲು ತುರ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅಧಿಕೃತವಾಗಿ ಯಾವುದೇ ಸುತ್ತೋಲೆ ಇಲ್ಲದೆ ಕೇವಲ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಿದೆ.

    ಜಾಲತಾಣಗಳಲ್ಲಿ ಬರುವ ಸುದ್ದಿಗಳ ಆಧಾರದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಟ್ವೀಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನೀಡಿದ ಹೇಳಿಕೆ ಜನರಲ್ಲಿ ಗೊಂದಲ ಉಂಟುಮಾಡಿದೆ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ನೀಡಿದ ಅನಗತ್ಯ ಹೇಳಿಕೆಯು ವಿಷಾದನೀಯ.

     

    ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಪರವಾಗಿ ಕೆಲವು ಪೂರಕ ಕ್ರಮಗಳನ್ನು ಕೇರಳದಲ್ಲಿ ಎಲ್ಲಾ ಸರಕಾರಗಳು ಕೈಗೊಂಡಿದೆ. ಭಾಷಾ ಅಲ್ಪಸಂಖ್ಯಾತರಿಗೆ ಸಮಸ್ಯೆ ಆಗುವ ವಿಚಾರಗಳನ್ನು ಸರಕಾರದ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಸರ್ಕಾರ ಧನಾತ್ಮಕವಾಗಿ ಸ್ಪಂದಿಸುವ ವಾತಾವರಣ ಕೇರಳದಲ್ಲಿದೆ.

    ಪರಿಹಾರವಾಗಬೇಕಾದ ಸಮಸ್ಯೆಗಳು ಇನ್ನೂ ಇರುವುದು ವಾಸ್ತವ. ಇದನ್ನು ಸಂಘಟಿತ ಪ್ರಯತ್ನದಿಂದ ಪರಿಹರಿಸಲು ಸಾಧ್ಯವಾಗುವ ವಾತಾವರಣ ನಿರ್ಮಾಣವಾಗಬೇಕು. ನಾಡಿನ ಭಾಷಾ ಸಾಮರಸ್ಯವನ್ನು, ಸಾಂಸ್ಕೃತಿಕ  ವೈವಿಧ್ಯತೆಯನ್ನು ಉಳಿಸಿ ಬೆಳೆಸುವಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗಬಾರದು.

    ಮಂಜೇಶ್ವರದ ಶಾಸಕ ಹಾಗೂ ಒಬ್ಬ ಅಪ್ಪಟ ಕನ್ನಡಿಗನೆಂಬ ನೆಲೆಯಲ್ಲಿ ಕಾಸರಗೋಡಿನ ಯಾವುದೇ ಪ್ರದೇಶದ ಸ್ಥಳನಾಮವನ್ನು ಬದಲಾಯಿಸುವ ಷಡ್ಯಂತ್ರವೋ, ಸರಕಾರದ ಅದೇಶವೆನಾದರೂ ಬಂದರೆ ಆದರ ವಿರುದ್ದದ ಹೋರಾಟಕ್ಕೆ ನೇತೃತ್ವ ನೀಡಲು ನಾನು ಸಿದ್ಧ. ಕನ್ನಡ ಅಲ್ಪಸಂಖ್ಯಾತರ ಸಂವಿಧಾನ ಬದ್ಧ ಹಕ್ಕುಗಳ ಸಂರಕ್ಷಣೆಯಲ್ಲಿ ಸದಾ ಜಾಗೃತನಾಗಿರುತ್ತೇನೆ.

  • ಕನ್ನಡ ಹೆಸರಿನ ಗ್ರಾಮಗಳಿಗೆ ಮರುನಾಮಕರಣ ಮಾಡ್ಬೇಡಿ- ಕೇರಳ ಸಿಎಂಗೆ ಹೆಚ್‍ಡಿಕೆ ಪತ್ರ

    ಕನ್ನಡ ಹೆಸರಿನ ಗ್ರಾಮಗಳಿಗೆ ಮರುನಾಮಕರಣ ಮಾಡ್ಬೇಡಿ- ಕೇರಳ ಸಿಎಂಗೆ ಹೆಚ್‍ಡಿಕೆ ಪತ್ರ

    ಬೆಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯ ಗ್ರಾಮಗಳಿಗೆ ಕನ್ನಡ ಹೆಸರು ತೆಗೆದು ಮಲೆಯಾಳಂ ಹೆಸರು ಮರು ನಾಮಕರಣ ಮಾಡಿರುವ ಕೇರಳ ಸರ್ಕಾರದ ನಿರ್ಧಾರವನ್ನ ಹಿಂಪಡೆಯುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಕಾಸರಗೋಡಿನ ಗ್ರಾಮಗಳ ಕನ್ನಡ ಹೆಸರನ್ನ ಬದಲಿಸದಂತೆ ಮನವಿ ಮಾಡಿದ್ದಾರೆ.

    ಕನ್ನಡ ಪರಿಮಳವನ್ನು ಹೊಂದಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಕೆಲವು ಗ್ರಾಮಗಳನ್ನು ಮಲಯಾಳಂ ಹೆಸರು ಮರುನಾಮಕರಣ ಮಾಡಲು ಕೇರಳ ಸರ್ಕಾರದ ನಿರ್ಧರಿಸಿರುವ ಬಗ್ಗೆ ಮಾಧ್ಯಮಗಳಿಂದ ತಿಳಿಯಿತು. ಇದು ಸರಿಯಿದ್ದರೂ, ಭಾಷಾ ಸಾಮರಸ್ಯದ ಹೆಸರಿನಲ್ಲಿ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ನಾನು ವಿನಂತಿಸುತ್ತೇನೆ. ಕರ್ನಾಟಕದೊಂದಿಗೆ ಈ ಭಾಗದ ಜನರಿಗೆ ದಶಕಗಳಿಂದ ಉತ್ತಮ ಭಾಂದವ್ಯವಿದೆ. ಮತ್ತು ಈ ಪ್ರದೇಶದ ಜನರು ಯಾವಾಗಲೂ ಪರಸ್ಪರರ ಭಾಷಾ ಪರಂಪರೆಗೆ ಅನುಗುಣವಾಗಿರುತ್ತಾರೆ. ಅದು ಸಾಂಸ್ಕೃತಿಕ ಸಹಬಾಳ್ವೆಯಾಗಿದೆ.

    ಈ ಸಂಪ್ರದಾಯವನ್ನು ಮುಂದುವರಿಸ ಬೇಕಾಗಿದೆ. ಹೆಸರು ಬದಲಾವಣೆಯು ಅರ್ಥದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಹಳ್ಳಿಯ ಹೆಸರುಗಳು ಮೂಲ ಕನ್ನಡ ಪರಿಮಳವನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುವುದು ಮೆಚ್ಚುಗೆಗೆ ಪಾತ್ರವಾಗಲಿದೆ ಎಂದು ಪತ್ರದ ಮೂಲಕ ಹೆಸರು ಮರುನಾಮಕರಣ ಮಾಡದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಡುಗೆ ಮಾಡುವ ವರ ಬೇಕಾಗಿದ್ದಾನೆ- ಜಾಹೀರಾತು ವೈರಲ್

  • ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲು ಅಡ್ಡಿ – ಗ್ರಾಮ ಪಂಚಾಯತ್ ಮುಂದೆಯೇ ಅಂತ್ಯಕ್ರಿಯೆ

    ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲು ಅಡ್ಡಿ – ಗ್ರಾಮ ಪಂಚಾಯತ್ ಮುಂದೆಯೇ ಅಂತ್ಯಕ್ರಿಯೆ

    ಹಾವೇರಿ: ಜಿಲ್ಲೆಯ ಗ್ರಾಮದಲ್ಲಿ ಯಾರೇ ನಿಧನ ಹೊಂದಿದರೂ ಅವರನ್ನು ಗ್ರಾಮದ ಬಳಿ ಎರಡು ಎಕರೆ ಜಮೀನಿನಲ್ಲಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ ಇಂದು ಮೃತ ಮಹಿಳೆಯೊಬ್ಬರನ್ನು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲು ಗ್ರಾಮದ ವ್ಯಕ್ತಿಯೋರ್ವ ಅಡ್ಡಿಪಡಿಸಿದ ಕಾರಣಕ್ಕೆ ಪಂಚಾಯತ್ ಮುಂದೆ ಶವ ಸುಡಲು ಮೃತಳ ಕುಂಟುಂಬದವರು ಮುಂದಾಗಿರುವ ಘಟನೆ ರಾಣೆಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಹನುಮವ್ವ ಅಣ್ಣಿಗೇರಿ(45) ಎಂಬವರು ಇಂದು ಮೃತಪಟ್ಟಿದ್ದರು. ಬಳಿಕ ಅಂತ್ಯಸಂಸ್ಕಾರಕ್ಕೆ ಮೃತಳ ಸಂಬಂಧಿಕರು ಸಿದ್ಧತೆ ಮಾಡಲು ಸ್ಮಶಾನಕ್ಕೆ ಕಟ್ಟಿಗೆ ತಗೆದುಕೊಂಡು ಹೋಗುತ್ತಿದ್ದರು. ಆಗ ವ್ಯಕ್ತಿಯೋರ್ವ ಮೃತಳ ಕುಟುಂಬದವರಿಗೆ ಅಡ್ಡಿಪಡಿಸಿದ್ದಾರೆ. ಅಲ್ಲದೆ ಸ್ಮಶಾನ ನಮ್ಮ ಹೆಸರಿನಲ್ಲಿದೆ, ನೀವು ಇಲ್ಲಿ ಅಂತ್ಯಸಂಸ್ಕಾರ ಮಾಡಬಾರದು ಎಂದು ತಡೆಯೊಡ್ಡಿದ್ದಾರೆ. ಇದರಿಂದ ಕಂಗಾಲಾದ ಮೃತಳ ಕುಟುಂಬಸ್ಥರು ಗ್ರಾಮ ಪಂಚಾಯತ್ ಮುಂದೆ ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ – ಬಯಲಾಯ್ತು ಮರ್ಡರ್ ರಹಸ್ಯ

    ಹನುಮವ್ವ ಅಣ್ಣಿಗೇರಿಯ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ಸಿದ್ಧತೆ ಮಾಡುತ್ತಿರುವ ವಿಷಯ ತಿಳಿದ ಗ್ರಾಮದ ವ್ಯಕ್ತಿಯೊಬ್ಬ ದಾರಿಗೆ ದೊಡ್ಡದಾದ ಗುಂಡಿ ತೋಡಿ, ಗುಂಡಿಗೆ ನೀರು ತುಂಬಿಸಿ ಅಡ್ಡಿ ಮಾಡಿದ್ದಾನೆ. ಹೀಗಾಗಿ ಮೃತಳ ಕುಟುಂಬದವರು ಗ್ರಾಮ ಪಂಚಾಯತ್ ಕಚೇರಿ ಮುಂದೆ ಕಟ್ಟಿಗೆ ಇಟ್ಟು ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಹಾಗೂ ಪೋಲಿಸರು ಮೃತಳ ಕುಟುಂಬಸ್ಥರು ಹಾಗೂ ಅಡ್ಡಿಪಡಿಸಿದ ವ್ಯಕ್ತಿಗೆ ಪಂಚಾಯತ್ ಮುಂದೆ ಅಂತ್ಯಸಂಸ್ಕಾರ ಮಾಡದಂತೆ ಮತ್ತು ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುವಂತೆ ಮನವೊಲಿಸಿದ್ದಾರೆ.

  • ಅನಧಿಕೃತ ಕಲ್ಲುಕ್ವಾರಿಯಲ್ಲಿ ಸ್ಫೋಟ – 50ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು

    ಅನಧಿಕೃತ ಕಲ್ಲುಕ್ವಾರಿಯಲ್ಲಿ ಸ್ಫೋಟ – 50ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು

    ಕಾರವಾರ: ಜೋಯಿಡಾ ತಾಲೂಕಿನ ರಾಮನಗರದಲ್ಲಿರುವ ಕಲ್ಲುಕ್ವಾರಿಯಲ್ಲಿ ಈ ಹಿಂದೆ ಕಲ್ಲು ಗಣಿಗಾರಿಕೆಗೆ ಅನುಮತಿ ಪಡೆದಿದ್ದ ಡಿ.ಬಿ.ಎಲ್ ಕಂಪನಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಕಲ್ಲು ಗಣಿಯಲ್ಲಿ ಸ್ಫೋಟ ನಡೆಸಲು ನಿಷೇಧವಿದ್ದರೂ ಕಲ್ಲು ಗಣಿಗಾರಿಕೆ ಮಾಡುತ್ತಿದೆ. ಇದರಿಂದ 50ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟಿದೆ.

    ಸ್ಫೋಟದಿಂದಾಗಿ ರಾಮನಗರದ 50ಕ್ಕೂ ಹೆಚ್ಚು ಮನೆಗಳಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. ಈ ಕುರಿತು ರಾಮನಗದ ನಿವಾಸಿಗಳು ರಾಮನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅನಧಿಕೃತವಾಗಿ ಬ್ಲಾಸ್ಟಿಂಗ್ ನಡೆಸುತ್ತಿರುವ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ರಾಮನಗರದ ಹಲವು ಗಣಿ ಭೂಮಿಯಲ್ಲಿ ಬ್ಲಾಸ್ಟಿಂಗ್ ನಡೆಸುತ್ತಿದೆ ಎಂಬ ಆರೋಪವಿದೆ. ಇದನ್ನೂ ಓದಿ: ಗಾಳಿಪಟದ ದಾರದಿಂದ ವ್ಯಕ್ತಿಗೆ ಗಾಯ, ನೆಲಕ್ಕೆ ಚಿಮ್ಮಿದ ನೆತ್ತರು

    ಕಳೆದ ಮೂರು ವರ್ಷದ ಹಿಂದ ರಾಮನಗರದಲ್ಲಿ ನಿಗದಿ ಪಡಿಸಿದ ಜಾಗದ ಜೊತೆ ಸರ್ಕಾರಿ ಭೂಮಿಯಲ್ಲೂ ಸಹ ಕಲ್ಲು ಗಣಿಗಾರಿಕೆ ಯನ್ನು ಅಕ್ರಮವಾಗಿ ನಡೆಸಲಾಗುತಿತ್ತು. ಇದರಿಂದಾಗಿ ರಾಮನಗರದ ಸುತ್ತಮುತ್ತಲ ಕೃಷಿ ಭೂಮಿ ಧೂಳಿನಿಂದ ತುಂಬಿ ಕೃಷಿ ಚಟುವಟಿಕೆಗೆ ತೊಂದರೆಯಾಗಿತ್ತು. ಈ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಸುದ್ದಿ ಪ್ರಸಾರವಾಗುತಿದ್ದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪರಿಸರ ಇಲಾಖೆ ಗಣಿ ಮಾಲೀಕರಿಗೆ ನೋಟಿಸ್ ನೀಡುವ ಜೊತೆ ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಂಡಿತ್ತು.

    ಈಗ ರಾಮನಗರದಲ್ಲಿ ಗಣಿಗಾರಿಕೆ ಪುನಃ ಪ್ರಾರಂಭವಾಗಿದ್ದು, ಸರ್ಕಾರದ ನಿಯಮದ ಪ್ರಕಾರ ಗಣಿಗಾರಿಕೆ ನಡೆಸಬೇಕಿದ್ದ ಗುತ್ತಿಗೆ ಪಡೆದ ಕಂಪನಿಗಳು ಹೆಚ್ಚು ಲಾಭಕ್ಕಾಗಿ ಇದೀಗ ಮಳೆಗಾಲದಲ್ಲೂ ಹೆಚ್ಚಿನ ಮಟ್ಟದ ಬ್ಲಾಸ್ಟಿಂಗ್ ನಡೆಸುತ್ತಿದೆ. ಇದರಿಂದ ಸುತ್ತಮುತ್ತಲ ಪ್ರದೇಶದಲ್ಲಿರುವ ಮನೆಗಳು ಬಿರುಕು ಬಿಟ್ಟಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಭಯದಲ್ಲೇ ದಿನ ದೂಡುವಂತೆ ಮಾಡಿದೆ.

    ಇನ್ನು ಅಕ್ರಮ ಬ್ಲಾಸ್ಟಿಂಗ್ ಮಾಡುತ್ತಿರುವ ಕುರಿತು ದೂರು ದಾಖಲಾದ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಕಂದಾಯ ಇಲಾಖೆಯಾಗಲಿ, ಪರಿಸರ ಇಲಾಖೆಯಾಗಲಿ ದೂರು ನೀಡಿದರೂ ಇತ್ತ ಬಾರದೇ ಜಾಣ ಮೌನ ವಹಿಸಿದೆ. ಈ ಭಾಗದಲ್ಲಿ ಬ್ಲಾಸ್ಟಿಂಗ್ ಹೆಚ್ಚಾದಲ್ಲಿ ಸ್ಥಳೀಯ ಗ್ರಾಮದ ಹಲವು ಮನೆಗಳು ಬೀಳುವ ಆತಂಕ ಸಹ ಇದೆ.

  • ನೊಣಗಳ ಹಾವಳಿಗೆ ಜನ ಸುಸ್ತೋ ಸುಸ್ತು – ನೊಣಕ್ಕಂಜಿ ಊರು ತೊರೆಯಲಾರಂಭಿಸಿದ ಸಾರ್ವಜನಿಕರು

    ನೊಣಗಳ ಹಾವಳಿಗೆ ಜನ ಸುಸ್ತೋ ಸುಸ್ತು – ನೊಣಕ್ಕಂಜಿ ಊರು ತೊರೆಯಲಾರಂಭಿಸಿದ ಸಾರ್ವಜನಿಕರು

    ಗದಗ: ತಾಲೂಕಿನ ಹರ್ತಿ ಗ್ರಾಮದ ಜನರ ಜೀವನ ದುಸ್ತರವಾಗಿದೆ. ಗ್ರಾಮೀಣ ಭಾಷೆಐಲ್ಲಿ ಹೇಳುವುದಾದರೆ, ದಂಡಿನ ಗುಂಡಿಗೆ ಹೆದರಲಿಲ್ಲಾ, ದಾಳಿಗೆ ಹೆದರಲಿಲ್ಲಾ, ಆದರೆ ನೊಣಗಳ ಹಿಂಡಿಗೆ ಹೆದರುವಂತಾಗಿದೆ.

    ಈ ಗ್ರಾಮದ ಜನ ಏನು ತಪ್ಪು ಮಾಡಿರುವರೋ ಗೊತ್ತಿಲ್ಲ. ಈ ಹಳ್ಳಿಗೆ ವೈರಿಗಳ ದಂಡೊಂದು ಲಗ್ಗೆ ಇಟ್ಟು ನಿತ್ಯ ಕಾಟ ಕೊಡುತ್ತಿವೆ. ಆ ವೈರಿಗಳ ಕಾಟಕ್ಕೆ ಇಲ್ಲಿನ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಮನೆ ಒಳಗೆ, ಹೊರಗೆ ಎಲ್ಲಿ ಕೂತರು ಸಮಾಧಾನವೇ ಇಲ್ಲದಂತಾಗಿದೆ. ಊಟ, ನಿದ್ರೆ, ವಿಶ್ರಾಂತಿಗೂ ಬಿಡಲ್ಲಾ. ವೈರಿಗಳ ಆಟೋಟಪಕ್ಕೆ ಊರಿನ ಜನ ಬೇಸತ್ತು ಹೋಗಿದ್ದಾರೆ.

    ಹರ್ತಿ ಗ್ರಾಮದ ಜನರ ಪರಸ್ಥಿತಿ ನಾಲ್ಕೈದು ತಿಂಗಳು ಹೇಳ ತೀರದಾಗಿದೆ. ಕಾರಣ ಊರ ಪಕ್ಕದ ಕೋಳಿ ಫಾರ್ಮ್ ನಿಂದ ಲಗ್ಗೆ ಇಟ್ಟ ಈಗಗಳ ದಂಡುಪಾಳ್ಯ, ಈ ಜನರ ನೆಮ್ಮದಿ ಹಾಳು ಮಾಡಿದೆ. ಒಂದಡೆ ಕೊರೊನಾ ಹಾವಳಿ, ಮತ್ತೊಂದಡೆ ನೊಣಗಳ ಹಾವಳಿಯಿಂದ ಅನಾರೋಗ್ಯಕ್ಕೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡಿದ್ದಾರೆ. ಮಾವು, ಬೇವು ಹಣ್ಣಿನ ಸೀಜನ್‍ನಲ್ಲಿ ನೊಣಗಳು ಹೆಚ್ಚು ಇರುತ್ತವೆ. ಆದರೆ ಮಳೆಗಾಲದಲ್ಲೂ ಎಲ್ಲಿ ಕುಂತರೂ ಸಮಾಧಾನ ಆಗುವುದಿಲ್ಲ. ಅಡಿಗೆ ಮಾಡಿ ಊಟ ಮಾಡಲಿಕ್ಕೂ ಆಗುತ್ತಿಲ್ಲಾ, ನೀರು ಕುಡಿಯಲು ಆಗುತ್ತಿಲ್ಲ. ಅಂಗಡಿ, ಹೋಟೆಲ್ ನವರ ಪರಸ್ಥಿತಿ ನೋಣ ಹೊಡೆಯುವುದೇ ಕಾಯಕವಾಗಿದೆ.

    ಮಕ್ಕಳು, ವೃದ್ಧರ ಪರಸ್ಥಿತಿ ಕೇಳತೀರದು. ಜಾನುವಾರುಗಳ ಮೇಲು ಜೇನು ಹುಳುವಿನಂತೆ ಕೂಡಿರುತ್ತವೆ. ಇದರಿಂದ ಗ್ರಾಮದಲ್ಲಿ ಅನೇಕರು ವಾಂತಿ, ಬೇಧಿ, ಜ್ವರ ಹೀಗೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಬೇಸಿಗೆಯಲ್ಲಿ ಗಾಳಿ ಬೀಸಿಕೊಂಡಂತೆ ಮಳೆಗಾಲದಲ್ಲೂ ನೊಣಗಳ ಕಾಟಕ್ಕೆ ಗಾಳಿ ಬೀಸಿಕೊಳ್ಳಬೇಕಾದ ಪರಿಸ್ಥಿತಿ ಇವರದ್ದಾಗಿದೆ. ಕೊರೊನಾ ಸಂದರ್ಭದಲ್ಲಿ ಮಕ್ಕಳನ್ನು ಕಟ್ಟಿಕೊಂಡು ವಾಸಿಸದೇ ಊರು ತೊರೆಯುವ ಸಂದರ್ಭ ಬಂದಿದೆ. ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ, ಕೋಳಿ ಫಾರ್ಮ್‍ಗಳನ್ನು ಬಂದ್ ಮಾಡಿ, ಜನರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಹಾಗೂ ತೊಂದರೆಗಳನ್ನು ತಪ್ಪಿಸಬೇಕು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಈ ಕೋಳಿ ಫಾರ್ಮ್ ಆಗಿ ನಾಲ್ಕೈದು ವರ್ಷಗಳಿಂದ ಆಗಾಗ ಇದೇ ಸಮಸ್ಯೆ ಎದುರಿಸುತ್ತಿದೆ. ಆದರೆ ಇತ್ತೀಚಿಗೆ ನೊಣಗಳ ಹಾವಳಿ ತುಂಬಾನೆ ಆಗಿದ್ದು, ನೊಣಗಳ ಕಾಟಕ್ಕೆ ಜನ ಸುಸ್ತಾಗಿದ್ದಾರೆ. ಊರಾಚೆಯ ಆಂಧ್ರ ಪ್ರದೇಶ ಮೂಲದ ಪ್ರಭಾವಿ ಗುತ್ತಿಗೆದಾರ ಸುಬ್ಬಾರೆಡ್ಡಿ ಸಂಬಂಧಿಗಳ ಈ ಕೋಳಿ ಫಾರ್ಮ್ ನಲ್ಲಿ ಸ್ವಚ್ಛತೆ, ಔಷಧ ಸಿಂಪಡಣೆ, ತ್ಯಾಜ್ಯ ವಿಲೇವಾರಿ ಸರಿಯಾದ ನಿರ್ವಹಣೆ ಇಲ್ಲದ ಕಾರಣ ನೊಣಗಳು ಹೆಚ್ಚಾಗಿ ಹರ್ತಿ ಜನರನ್ನು ಕಾಡತೊಡಗಿವೆ. ಸತ್ತ ಕೋಳಿಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ ಎಂಬ ಆರೋಪಿಸಿದ್ದಾರೆ.

    ಇತ್ತೀಚಿಗೆ ಅತೀ ಹೆಚ್ಚು ನೊಣಗಳು ಉದ್ಭವಿಸಿ ಜನರ ನಿದ್ದೆಗೆಡಿಸಿದೆ. ಪಿಡಿಓ, ಅಧ್ಯಕ್ಷರು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಎಲ್ಲರಿಗೂ ಹೇಳಿದರೂ ನೊಣಗಳು ಕಡಿಮೆ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದು ಪ್ರಭಾವಿಯೊಬ್ಬರ ಫಾರ್ಮ್ ಆಗಿದ್ದರಿಂದ ಯಾರು ಇವರ ಗೋಜಿಗೆ ಹೊಗುತ್ತಿಲ್ಲ. ಗ್ರಾಮ ಪಂಚಾಯತ ನಿಂದ ಕೋಳಿ ಫಾರ್ಮ್‍ಗೆ ಕೇವಲ ಸೂಚನೆ ನೀಡ್ತಾರೆ, ಆದ್ರೆ ಯಾವುದೆ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಜನ್ರಿಗೆ ಮಾರಕವಾಗುವ ಈ ಕೋಳಿ ಫಾರ್ಮ್‍ಗಳನ್ನ ಬಂದ್ ಮಾಡಬೇಕು. ಕೊರೊನಾ ಸಂದರ್ಭದಲ್ಲಿ ಜನ-ಜಾನುವಾರಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ ಎಂಬುದು ಎಲ್ಲರ ಬೇಡಿಕೆಯಾಗಿದೆ. ಇದನ್ನೂ ಓದಿ: ಸಿಎಂ ಖುರ್ಚಿಗಾಗಿ ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಈಗಲೇ ಕುಸ್ತಿ ಶುರುವಾಗಿದೆ: ಕಾರಜೋಳ

  • ಅಂಬುಲೆನ್ಸ್ ಚಾಲಕನ ಅಜಾಗರೂಕತೆಗೆ ವ್ಯಕ್ತಿ ಬಲಿ – ಸಂಬಂಧಿಕರಿಂದ ಆರೋಪ

    ಅಂಬುಲೆನ್ಸ್ ಚಾಲಕನ ಅಜಾಗರೂಕತೆಗೆ ವ್ಯಕ್ತಿ ಬಲಿ – ಸಂಬಂಧಿಕರಿಂದ ಆರೋಪ

    ಧಾರವಾಡ: ಅಂಬುಲೆನ್ಸ್ ಚಾಲಕನ ಅಜಾಗರೂಕತೆಯಿಂದ ರೋಗಿಯೊಬ್ಬರು ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ಧಾರವಾಡ ತಾಲೂಕಿನ ಕೋಟೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಖುತಬುದ್ದಿನ್ ನನ್ನೆಸಾಬನವರ (50) ಮೃತಪಟ್ಟ ವ್ಯಕ್ತಿ. ಕಳೆದ ರಾತ್ರಿ ಖುತಬುದ್ದಿನರಿಗೆ ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಕೋಟೂರು ಗ್ರಾಮದಿಂದ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

    ಮೃತ ವ್ಯಕ್ತಿಯ ಕುಟುಂಬದವರು ವೀಡಿಯೋವೊಂದನ್ನು ಮಾಡಿ, ಅಂಬುಲೆನ್ಸ್ ಚಾಲಕ ಆಕ್ಸಿಜನ್ ನೀಡದೇ ಅಜಾಗರೂಕತೆ ತೋರಿಸಿದ್ದಾನೆ. ಅಲ್ಲದೇ ಅಂಬುಲನ್ಸ್‍ನಲ್ಲಿ ಚಾಲಕನೊಬ್ಬನೇ ರೋಗಿಗೆ ಆಕ್ಸಿಜನ್ ಹಾಕಿದ್ದ, ಅಂಬುಲನ್ಸ್‍ನಲ್ಲಿ ನರ್ಸ್ ಕೂಡಾ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ಬರುತಿದ್ದಂತೆಯೇ ಅಂಬುಲನ್ಸ್ ಚಾಲಕ ವಾಹನ ನಿಲ್ಲಿಸಿ ಪರಾರಿಯಾದ್ದಾನೆ ಎಂದು ತಿಳಿಸಿದ್ದಾರೆ.

    ಆಸ್ಪತ್ರೆಗೆ ದಾಖಲಿಸಲು ರೋಗಿಯನ್ನು ಗ್ರಾಮದಿಂದ ಅರ್ಧ ದಾರಿಗೆ ಟಮ್ ಟಮ್ ವಾಹನದಲ್ಲಿ ಮನೆಯವರೇ ಕರೆದೊಯ್ದಿದ್ದರು. ನಂತರ ಅರ್ಧ ದಾರಿಗೆ ಬಂದ ಮೇಲೆ ಅಂಬುಲನ್ಸ್ ಬಂದಿತ್ತು. ಇದನ್ನೂ ಓದಿ: ಡ್ರೋನ್ ಮೂಲಕ ಔಷಧಿಗಳ ರವಾನೆಯ ಪರೀಕ್ಷಾರ್ಥ ಹಾರಾಟ

  • ಬಾಲಕಿಗೆ ವಿಚಿತ್ರ ಪೂಜೆ ಮಾಡಿ ವಾಮಾಚಾರ ಮಾಂತ್ರಿಕ ನಾಪತ್ತೆ – ಬಾಲಕಿಯ ರಕ್ಷಣೆ

    ಬಾಲಕಿಗೆ ವಿಚಿತ್ರ ಪೂಜೆ ಮಾಡಿ ವಾಮಾಚಾರ ಮಾಂತ್ರಿಕ ನಾಪತ್ತೆ – ಬಾಲಕಿಯ ರಕ್ಷಣೆ

    ಬೆಂಗಳೂರು: ದುಷ್ಟ ಶಕ್ತಿಯನ್ನು ಪಡೆಯಲು ಬಾಲಕಿಯನ್ನು ಬಳಸಿಕೊಂಡು ವಾಮಾಚಾರ ಮಾಡಿರುವ ಘಟನೆ, ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಒಂದು ಪುಟ್ಟ ಹಳ್ಳಿಯಲ್ಲಿ ನಡೆದಿದೆ.

    ಅದೃಷ್ಟವಶಾತ್ ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಾಲಕಿಯ ರಕ್ಷಣೆ ಮಾಡಲಾಗಿದೆ. ಕೊರೊನಾ ಲಾಕ್‍ಡೌನ್ ನಡುವೆ ಮಂತ್ರವಾದಿಗಳ ಕುತಂತ್ರ ಬೆಳಕಿಗೆ ಬಂದಿದೆ. ಕೆಲವು ಸ್ಥಳೀಯರು ಸೇರಿದಂತೆ ಮಾಂತ್ರಿಕನ ನೆರವಿನಿಂದ ದುಷ್ಟ ಶಕ್ತಿಯನ್ನು ಪಡೆಯಲು ಬಾಲಕಿಗೆ ವಿಚಿತ್ರವಾದ ಪೂಜೆ ಮಾಡಿ ವಾಮಾಚಾರ ಮಾಡಿ ನರಬಲಿ ಮಾಡಲು ಸಿದ್ಧತೆ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಸ್ಥಳೀಯರು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಮಂತ್ರವಾದಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಮಗಳು ನೇಣಿಗೆ ಶರಣು – ಹೃದಯಾಘಾತದಿಂದ ತಂದೆ ಸಾವು

    ಸ್ಥಳೀಯ ಕೆಲವು ಕುತಂತ್ರಿಗಳು ಪ್ರಾಯಕ್ಕೆ ಬರುವ ಹೆಣ್ಣು ಮಗುವಿಗೆ ಪೂಜೆ ಮಾಡಿ ನರಬಲಿಗೆ ಸಿದ್ಧತೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಬಾಲಕಿಗೆ ಅರಿಶಿನ, ಕುಂಕುಮ, ನಿಂಬೆಹಣ್ಣು ಇನ್ನಿತರ ವಸ್ತುಗಳನ್ನು ಬಳಸಿ ಪೂಜೆ ಮಾಡುವಂತಹ ಲಕ್ಷಣಗಳು ಜಾಗದಲ್ಲಿ ಕಂಡು ಬಂದಿದ್ದು, ಸ್ಥಳೀಯರು ಜಾಗಕ್ಕೆ ಹೋಗುತ್ತಿದ್ದಂತೆ ವಾಮಾಚಾರ ಮಾಡುವ ಮಂತ್ರವಾದಿ ಸ್ಥಳದಿಂದ ಓಡಿ ಹೋಗಿದ್ದಾನೆ.

    ಬಾಲಕಿಯನ್ನು ರಕ್ಷಣೆ ಮಾಡಿ ಅವರ ಪೋಷಕರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಐವರನ್ನು ಬಂಧಿಸಿರುವ ಪೊಲೀಸರು ನಾಪತ್ತೆಯಾಗಿರುವ ಮಾಂತ್ರಿಕನ ಪತ್ತೆಗೆ ಬಲೆಬೀಸಿದ್ದಾರೆ.

  • ಭಾರೀ ಮಳೆಯಿಂದ ರಸ್ತೆಗೆ ಬಂದ ಮರದ ದಿನ್ನೆಗಳ ರಾಶಿ- ಗ್ರಾಮಸ್ಥರಿಗೆ ತೊಂದರೆ

    ಭಾರೀ ಮಳೆಯಿಂದ ರಸ್ತೆಗೆ ಬಂದ ಮರದ ದಿನ್ನೆಗಳ ರಾಶಿ- ಗ್ರಾಮಸ್ಥರಿಗೆ ತೊಂದರೆ

    ಧಾರವಾಡ: ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಕಂಬಾರಗಣವಿ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆಯ ಮೇಲ್ಭಾಗದಲ್ಲಿ ಮರದ ದಿನ್ನೆಗಳು ಸಾಕಷ್ಟು ಬಂದು ನಿಂತುಕೊಂಡಿದೆ. ಇದರಿಂದ ಗ್ರಾಮಸ್ಥರು ತೊಂದರೆಗೊಳಗಾಗಿದ್ದಾರೆ.

    ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮದ ಈ ರಸ್ತೆ ಅರಣ್ಯದ ಮಧ್ಯದಲ್ಲಿದ್ದು, ಈ ರಸ್ತೆ ಗ್ರಾಮಕ್ಕೆ ಹೋಗಲು ಇರುವಂತಹ ಒಂದೇ ಒಂದು ರಸ್ತೆಯಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಇದೀಗ ರಸ್ತೆ ಮಧ್ಯದ ಹಳ್ಳದ ಸೇತುವೆ ಮುಳುಗಡೆಗೊಂಡಿದೆ. ಇದರಿಂದ ಗ್ರಾಮಸ್ಥರು ಯಾರೂ ಹೊರಗೆ ಬರದಂತಾಗಿದೆ. ಇದನ್ನೂ ಓದಿ: ಧಾರವಾಡ ಜಿಲ್ಲೆಯಲ್ಲಿ ಮಳೆ – ಕೆರೆಯ ಕಟ್ಟೆ ಒಡೆದು ನೂರಾರು ಎಕರೆ ಜಮೀನು ಜಲಾವೃತ!

    ಹಳ್ಳದ ನೀರಿನೊಂದಿಗೆ ದೊಡ್ಡ ದೊಡ್ಡ ಮರದ ದಿನ್ನೆಗಳು ತೇಲಿ ಬಂದಿವೆ. ಹೀಗಾಗಿ ಸೇತುವೆ ಮೇಲೆ ನೀರು ನಿಲ್ಲುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಹಣ ಸಂಗ್ರಹಿಸಿ ದಿನ್ನೆ ತೆರವುಗೊಳಿಸಿದ್ದಾರೆ. ಅಲ್ಲದೆ ಸಾಕಷ್ಟು ಮಣ್ಣ ಕೂಡ ಸೇತುವೆ ಮೇಲೆ ನಿಂತಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅರಣ್ಯದಿಂದ ನೀರು ಇಲ್ಲಿಗೆ ಹರಿದು ಬರುತಿದ್ದು, ಜನರು ಟ್ರ್ಯಾಕ್ಟರ್ ಮೂಲಕ ಸೇತುವೆ ದಾಟುವಂತ ಪರಿಸ್ಥಿತಿ ಬಂದಿದೆ.

  • ಅಧಿಕ ದರದಲ್ಲಿ ಮದ್ಯ ಮಾರಾಟ-ಗ್ರಾಮದಲ್ಲಿ ಡಂಗುರ ಸಾರಿದ  ಮದ್ಯಪ್ರಿಯರು

    ಅಧಿಕ ದರದಲ್ಲಿ ಮದ್ಯ ಮಾರಾಟ-ಗ್ರಾಮದಲ್ಲಿ ಡಂಗುರ ಸಾರಿದ ಮದ್ಯಪ್ರಿಯರು

    ಕೊಪ್ಪಳ: ಮದ್ಯ ಬೆಲೆ ದುಪ್ಪಟ್ಟಾಗಿದೆ ಒಂದು ಕಡೆ ಕುಳಿತು ಚರ್ಚಿಸೋಣ ಬನ್ನಿ ಎಂದು ಮದ್ಯಪ್ರಿಯರು ಊರಿನಲ್ಲಿ ಡಂಗುರ ಸಾರಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸಹಳ್ಳಿಯಲ್ಲಿ ನಡೆದಿದೆ.

    ಲಾಕ್‍ಡೌನ್ ನೆಪವಾಗಿಟ್ಟುಕೊಂಡು ಅಧಿಕ ದರದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಈ ಆರೋಪಕ್ಕೆ ಪುಷ್ಠಿ ಕೊಡುವಂತೆ ಕೊಪ್ಪಳ ಜಿಲ್ಲೆಯ ಹೊಸಹಳ್ಳಿಯಲ್ಲಿ ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬೇಸತ್ತ ಮದ್ಯಪ್ರೀಯರು ಗ್ರಾಮದಲ್ಲಿರುವ ಎಲ್ಲಾ ಕುಡುಕರು ಒಂದು ಕಡೆ ಚರ್ಚಿಸೋಣ ಬನ್ನಿ ಎಂದು ಡಂಗುರ ಸಾರಿದ್ದಾರೆ.

    ನಮ್ಮ ಗ್ರಾಮದಲ್ಲಿ ಹಾಗೂ ಗಂಗಾವತಿಯಲ್ಲಿ ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಲಾಕ್‍ಡೌನ್ ನೆಪ ಹೇಳಿಕೊಂಡು 50 ರೂಪಾಯಿಗೆ ಮಾರಾಟ ಮಾರಾಟವಾಗುವ ಮದ್ಯವನ್ನು 100 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಬೆಲೆ ಹೆಚ್ಚಳವಾಗಿದೆ ಎಂದು ಹೇಳುತ್ತಿದ್ದಾರೆ. ಇದರಿಂದ ದುಪ್ಪಟ್ಟು ದರದಲ್ಲಿ ಮಾರಾಟ ಮಾಡುವ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಬೇಕು, ಅದಕ್ಕಾಗಿ ಗ್ರಾಮದಲ್ಲಿ ಒಂದು ಕಡೆ ಎಲ್ಲರೂ ಸೇರಿ ಚರ್ಚಿಸೋಣ ಬನ್ನಿ ಎಂದು ಡಂಗುರ ಸಾರಿದ್ದಾರೆ. ಇದನ್ನೂ ಓದಿ:  ರಾಜ್ಯ ಸರ್ಕಾರ ವಜಾಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡಬೇಕು – ಸಿದ್ದರಾಮಯ್ಯ

    ಈ ಡಂಗುರದ ಪ್ರಕಾರ ಇಂದೇ ಗ್ರಾಮದಲ್ಲಿ ಸಭೆ ನಡೆಸಬೇಕು, ಆದರೆ ಡಂಗುರ ಬಾರಿಸಿದವರಿಗೆ ಎಷ್ಟು ಜನರು ಬೆಂಬಲ ವ್ಯಕ್ತಪಡಿಸುತ್ತಾರೆ. ಮದ್ಯ ಮಾರಾಟ ಮಾಡುವವರು ಬಲಿಷ್ಠರಾಗಿದ್ದು, ಅವರ ವಿರುದ್ಧ ಎಷ್ಟು ಜನ ಬಂಡಾಯ ಎಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

  • ಕಾಡಾನೆ ಹಿಂಡನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ

    ಕಾಡಾನೆ ಹಿಂಡನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ

    ಮಡಿಕೇರಿ: ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಹಲವರು ಪ್ರಾಣ ಕಳೆದುಕೊಳ್ಳಲು ಕಾರಣವಾಗಿದ್ದ, 20 ಕಾಡಾನೆಗಳ ಹಿಂಡನ್ನು ಮೀಸಲು ಅರಣ್ಯಕ್ಕೆ ಸೇರಿಸುವಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿದೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ತಿತಿಮತಿ ಆರ್.ಆರ್.ಟಿ ತಂಡ ಮತ್ತು ಅನೆಚೌಕೂರು ವನ್ಯಜೀವಿ ವಲಯ ಜಂಟಿ ಕಾರ್ಯಾಚರಣೆ ನಡೆಸಿತು. ಸುಮಾರು 20 ಆನೆಗಳ ಹಿಂಡನ್ನು ನೊಕ್ಯ ಗ್ರಾಮಕ್ಕೆ ಸೇರಿದ ರಾಮನಕಟ್ಟೆಯಲ್ಲಿನ ರೈಲ್ವೆ ಬ್ಯಾರಿಕೇಡ್ ಗೇಟ್ ಮೂಲಕ ನಾಗರಹೊಳೆ ಉದ್ಯಾನವನದ ಅನೆಚೌಕೂರು ವಲಯ ವ್ಯಾಪ್ತಿಯ ಮೂಲಕ ಅರಣ್ಯಕ್ಕೆ ಸೇರಿಸಲಾಯಿತು. ಇದನ್ನೂ ಓದಿ : ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಕಾರು ಡಿಕ್ಕಿ

    ಆನೆಗಳ ಹಿಂಡು ಈ ಹಿಂದೆ ಮಾಯಮುಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬುಕೋಟೆ ಎಂಬಲ್ಲಿ ಸೇರಿಕೊಂಡಿತ್ತು. ಶುಕ್ರವಾರ ಸಂಜೆವರೆಗೂ ನಡೆದ ಕಾರ್ಯಾಚರಣೆಯಲ್ಲಿ ನೊಕ್ಯ ಗ್ರಾಮದ ಚೆಪ್ಪುಡೀರ ಕುಟುಂಬದ ಸ್ಕಾಲರ್‍ಶಿಪ್ ಗದ್ದೆವರೆಗೆ ಅಟ್ಟಲಾಗಿತ್ತು. ಶನಿವಾರ ಮುಂಜಾನೆಯಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಕಾಡು ಸೇರಿಸಲಾಯಿತು. ಇದೀಗ ಆನೆಗಳು ಮೀಸಲು ಅರಣ್ಯ ಪ್ರದೇಶ ಸೇರಿದ್ದು, ಜನರು ನಿಟ್ಟುಸಿರುವ ಬಿಡುವಂತಾಗಿದೆ. ಸುಮಾರು 15 ಅರಣ್ಯ ಇಲಾಖೆ ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.