Tag: village

  • ಮುಸ್ಲಿಂ ಪ್ರಾಬಲ್ಯವಿರೋ ಈ ಗ್ರಾಮದಲ್ಲಿ ಗೋಹತ್ಯೆ ಮಾಡಿದ್ರೆ 2.5 ಲಕ್ಷ ರೂ. ದಂಡ

    ಮುಸ್ಲಿಂ ಪ್ರಾಬಲ್ಯವಿರೋ ಈ ಗ್ರಾಮದಲ್ಲಿ ಗೋಹತ್ಯೆ ಮಾಡಿದ್ರೆ 2.5 ಲಕ್ಷ ರೂ. ದಂಡ

    ಲಕ್ನೋ: ಉತ್ತರಪ್ರದೇಶದ ಮಥುರಾ ಜಿಲ್ಲೆಯಲ್ಲಿ ಮುಸ್ಲಿಂ ಪ್ರಾಬಲ್ಯವಿರೋ ಗ್ರಾಮವೊಂದರಲ್ಲಿ ಗೋಹತ್ಯೆ ಮಾಡಿದವರಿಗೆ 2.5 ಲಕ್ಷ ರೂ. ದಂಡ ವಿಧಿಸಲು ಇಲ್ಲಿನ ಗ್ರಮ ಪಂಚಾಯ್ತಿ ನಿರ್ಧರಿಸಿದೆ.

    ಇದೇ ವಾರದ ಆರಂಭದಲ್ಲಿ ಮಾದೋರಾ ಗ್ರಾಮ ಪಂಚಾಯ್ತಿ ಸಭೆ ಸೇರಿ ಈ ತೀರ್ಮಾನ ತೆಗೆದುಕೊಂಡಿದೆ. ಸುಮಾರು 3 ಸಾವಿರ ಜನಸಂಖ್ಯೆ ಇರೋ ಈ ಗ್ರಾಮದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

    ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಗೋಹತ್ಯೆ ವಿರದ್ಧದ ಅಭಿಯಾನವನ್ನು ಬೆಂಬಲಿಸಲು ಗ್ರಾಮದ ಮುಖ್ಯಸ್ಥರು ಸಭೆ ವೇಳೆ ಚರ್ಚಿಸಿದ್ರು. ಒಟ್ಟು 2.51 ಲಕ್ಷ ರೂ. ದಂಡದ ಹಣದಲ್ಲಿ 51 ಸಾವಿರ ರೂ. ಹಣವನ್ನು ಗೋಹತ್ಯೆ ಬಗ್ಗೆ ಮಾಹಿತಿ ನೀಡಿದವರಿಗೆ ಕೊಡಲಾಗುತ್ತದೆ ಎಂದು ಗ್ರಾಮದ ಮಾಜಿ ಅಧ್ಯಕ್ಷ ಮೊಹಮ್ಮದ್ ಗಫರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಹುಡುಗಿಯರು ಫೋನ್‍ನಲ್ಲಿ ಮಾತನಾಡಿದ್ರೂ ದಂಡ: ಗ್ರಾಮದ ಹೆಣ್ಣುಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಮೊಬೈಲ್ ಫೋನ್‍ನಲ್ಲಿ ಮಾತನಾಡಿದ್ರೆ 21 ಸಾವಿರ ರೂ. ದಂಡ ವಿಧಿಸಲು ಪಾಂಚಾಯ್ತಿ ಸದಸ್ಯರು ನಿರ್ಧರಿಸಿದ್ದಾರೆ. ಅಪರಾಧಗಳ ಸಂಖ್ಯೆ ಕಡಿಮೆ ಮಾಡುವುದು ಮತ್ತು ಹೆಣ್ಣುಮಕ್ಕಳು ಪ್ರೀತಿಸಿ ಓಡಿಹೋಗುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ದಂಡವನ್ನು ಹೊರತುಪಡಿಸಿ ಶಿಕ್ಷೆಯ ಪ್ರಮಾಣವನ್ನು ಪಂಚಾಯ್ತಿಯೇ ನಿರ್ಧರಿಸಲಿದೆ.

    ಇದನ್ನೂ ಓದಿ:ಗುಜರಾತ್‍ನಲ್ಲಿ ಇನ್ಮುಂದೆ ಗೋಹತ್ಯೆಗೆ ಜೀವಾವಧಿ ಶಿಕ್ಷೆ

  • ನಾದಿನಿ ಮೇಲಿನ ಆಸೆಗಾಗಿ ಪತ್ನಿಯನ್ನು ಕೊಂದು ಹಾವು ಕಚ್ಚಿ ಮೃತಪಟ್ಟಿದ್ದಾಳೆ ಎಂದು ನಾಟಕವಾಡಿದ!

    ನಾದಿನಿ ಮೇಲಿನ ಆಸೆಗಾಗಿ ಪತ್ನಿಯನ್ನು ಕೊಂದು ಹಾವು ಕಚ್ಚಿ ಮೃತಪಟ್ಟಿದ್ದಾಳೆ ಎಂದು ನಾಟಕವಾಡಿದ!

    ಬಾಗಲಕೋಟೆ: ಪತ್ನಿಯ ತಂಗಿಯ ಮೇಲಿನ ಆಸೆಯಿಂದ ಪತ್ನಿಯನ್ನು ಕೊಂದು ಬಳಿಕ ಹಾವು ಕಚ್ಚಿ ಮೃತಪಟ್ಟಿದ್ದಾಳೆ ಎಂದು ನಾಟಕವಾಡಿದ್ದ ಪತಿಯನ್ನು ಬಾಗಲಕೋಟೆಯ ಲೋಕಪುರ ಪೊಲೀಸರು ಬಂಧಿಸಿದ್ದಾರೆ.

    ಮುಧೋಳ ತಾಲೂಕಿನ ಚಿಚಖಂಡಿ ಗ್ರಾಮದ ಚಂದ್ರ ಕಿಲಬನೂರು(30) ಎಂಬಾತ ಪತ್ನಿ ರತ್ನವ್ವ(25)ಳನ್ನು ಫೆ. 14ರಂದು ಹತ್ಯೆ ಮಾಡಿದ್ದ. ಹತ್ಯೆ ಮಾಡಿದ ಬಳಿಕ ಹಾವು ಕಚ್ಚಿ ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರಲ್ಲಿ ಹೇಳಿದ್ದ. ಆದರೆ ವೈದ್ಯರ ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆ ಹಿಡಿದು ರತ್ನವ್ವ ಕೊಲೆಯಾಗಿರುವ ಫಲಿತಾಂಶ ಪ್ರಕಟಗೊಂಡಿತ್ತು.

    ಪೊಲೀಸರು ಈ ವರದಿ ಆಧಾರದಲ್ಲಿ ಪತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಚಂದ್ರ ನಾನೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಹಾವು ಖರೀದಿಸಿದ್ದ: ಪತ್ನಿಯ ಕೊಲೆಗೆ ಮೊದಲೇ ಸ್ಕೆಚ್ ಹಾಕಿದ್ದ ಚಂದ್ರ ಹತ್ಯೆ ಮಾಡಿದರೂ ತಾನೂ ಸಿಕ್ಕಿಬೀಳಬಾರದು ಎನ್ನುವ ಕಾರಣಕ್ಕೆ ಮೂರು ತಿಂಗಳ ಹಿಂದೆ 5 ಸಾವಿರ ರೂ. ಹಣವನ್ನು ನೀಡಿ ಹಾವನ್ನು ಖರೀದಿಸಿದ್ದ. ಫೆ.14ರಂದು ಪತ್ನಿಯನ್ನು ತೋಟದಲ್ಲಿ  ಚಂದ್ರ ಹತ್ಯೆ ಮಾಡಿದ್ದಾನೆ. ಮನೆಗೆ ಸಂಬಂಧಿಕರು ಬಂದಾಗ ಹಾವು ಕಚ್ಚಿ ಪತ್ನಿ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾನೆ.

    ಹಲವು ವರ್ಷಗಳಿಂದ ಗ್ರಾಮದಲ್ಲಿ ಯಾವುದೇ ಕೊಲೆಗಳು ನಡೆಯದ ಕಾರಣ ಗ್ರಾಮಸ್ಥರು ಹಾವು ಕಚ್ಚಿ ರತ್ನವ್ವ ಸಾವನ್ನಪ್ಪಿದ್ದಾಳೆ ಎಂದೇ ನಂಬಿದ್ದರು. ಆದರೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಇದು ಹತ್ಯೆಯಾಗಿರುವ ಶಂಕೆಯಿದೆ ಎಂದು ಹೇಳಿ ಗ್ರಾಮಸ್ಥರಲ್ಲಿ ಶವ ಪರೀಕ್ಷೆ ನಡೆಸುವಂತೆ ಹೇಳಿದ್ದಾರೆ. ಹೀಗಾಗಿ ಶವ ಪರೀಕ್ಷೆ ನಡೆಸಿದಾಗ ಸತ್ಯ ಹೊರ ಬಂದಿದೆ.

    8 ವರ್ಷಗಳ ಹಿಂದೆ ರತ್ನವ್ವಳನ್ನು ಚಂದ್ರ ಮದುವೆಯಾಗಿ ಮಾವನ ಮನೆಯಲ್ಲೇ ನೆಲೆಸಿದ್ದ. ಈ ದಂಪತಿಗೆ ಮೂವರು ಮಕ್ಕಳು ಇದ್ದು, ಪೊಲೀಸ್ ವಿಚಾರಣೆ ವೇಳೆ ಆಸ್ತಿ ಆಸೆಗಾಗಿ ಪತ್ನಿಯನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾನೆ.