Tag: village panchayat

  • ಭ್ರಷ್ಟಾಚಾರಕ್ಕೆ ಬೇಸತ್ತು ಪಂಚಾಯತ್‌ ಕಚೇರಿಗೆ ಬೀಗ ಹಾಕಿ ಸದಸ್ಯರಿಂದ ಪ್ರತಿಭಟನೆ!

    ಭ್ರಷ್ಟಾಚಾರಕ್ಕೆ ಬೇಸತ್ತು ಪಂಚಾಯತ್‌ ಕಚೇರಿಗೆ ಬೀಗ ಹಾಕಿ ಸದಸ್ಯರಿಂದ ಪ್ರತಿಭಟನೆ!

    ಬೆಳಗಾವಿ: ಗ್ರಾಮ ಪಂಚಾಯತ್‌ನಲ್ಲಿ ಭ್ರಷ್ಟಾಚಾರ (Corruption) ಆರೋಪ ಹಿನ್ನೆಲೆಯಲ್ಲಿ ಸದಸ್ಯರು ಪಂಚಾಯತ್‌ (Village Panchayat) ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮ ಪಂ. ಪಿಡಿಓ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ದ 19 ಸದಸ್ಯರು ಪಂಚಾಯತ್‌ ಸದಸ್ಯರು ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿ ಮಾಡದೇ ಬಿಲ್ ತೆಗೆದು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಚಾಕೊಲೇಟ್ ಆಸೆ ತೋರಿಸಿ 11ರ ಬಾಲಕಿ ಮೇಲೆ ಅತ್ಯಾಚಾರ

     

    ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಮುಂದಾದರು. ಒಟ್ಟು 30 ಸದಸ್ಯ ಬಲ ಹೊಂದಿರುವ ಪಂಚಾಯತಿಗೆ ಕೆಲ ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಮುಂದಾದ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಆದರೆ ಗ್ರಾಮದ 19 ಸದಸ್ಯರು ಮಾತ್ರ ಸಭೆಗೆ ಆಗಮಿಸಿದ್ದರು. ಅವಿಶ್ವಾಸಕ್ಕೆ ಕನಿಷ್ಠ 20 ಸದಸ್ಯರು ಬೇಕಾದ ಹಿನ್ನಲೆ ಓರ್ವ ಸದಸ್ಯ ಸಂಖ್ಯೆ ಕಡಿಮೆಯಾಗಿ ಅವಿಶ್ವಾಸ ನಿರ್ಣಯ ವಿಫಲವಾಯಿತು.

  • ಮೊಬೈಲ್‍ನಲ್ಲಿ ಮಾತಾಡ್ತಿದ್ದಾಗ ದಾಳಿ- ಗ್ರಾಮ ಪಂಚಾಯತಿ ಸದಸ್ಯನ ಬರ್ಬರ ಹತ್ಯೆ

    ಮೊಬೈಲ್‍ನಲ್ಲಿ ಮಾತಾಡ್ತಿದ್ದಾಗ ದಾಳಿ- ಗ್ರಾಮ ಪಂಚಾಯತಿ ಸದಸ್ಯನ ಬರ್ಬರ ಹತ್ಯೆ

    ಬೆಂಗಳೂರು: ಹಳೆಯ ದ್ವೇಷದಿಂದ ಗ್ರಾಮ ಪಂಚಾಯತಿ ಸದಸ್ಯನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹೊಸಕೋಟೆಯಲ್ಲಿ (Hosakote) ನಡೆದಿದೆ.

    ಮೃತನನ್ನು ಅಮೀರ್ ಖಾನ್ (45) ಎಂದು ಗುರುತಿಸಲಾಗಿದೆ. ಇವರು ಕಾಂಗ್ರೆಸ್ ಪಕ್ಷದ ಗ್ರಾಮ ಪಂಚಾಯ್ತಿ ಸದಸ್ಯ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿ ಪೊಲಿಸ್ ಠಾಣಾ ವ್ಯಾಪ್ತಿಯ ಬೈಲ್ ನರಸಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಗ್ರಾಮ ಪಂಚಾಯತಿ ಕಛೇರಿಯ ಬಳಿ ಮೊಬೈಲ್ ಫೋನ್‍ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಗ್ರಾಮದ ಮೆಹಬೂಬ್ ಇತರೊಂದಿಗೆ ಬಂದು ಲಾಂಗ್ ನಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇತ್ತ ಘಟನೆಯಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಮೀರ್ ಖಾನ್ ಅವರನ್ನು ಕೂಡಲೇ ಎಂ ವಿಜಿ ಆಸ್ಪತ್ರೆಗೆ ಸೇರಿಸಲು ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯದಲ್ಲಿ ಅಮೀರ್ ಖಾನ್ ಮೃತಪಟ್ಟರು.

    ಘಟನಾ ಸ್ಥಳಕ್ಕೆ ನಂದಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಎಂವಿಜೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದವನ ಮೇಲೆ ಕೊಲೆ ಆರೋಪದ ಸಂಚು – ಮಗುವನ್ನು ಬಾವಿಗೆ ಎಸೆದ ಅಪ್ರಾಪ್ತೆ

  • ಕಟ್ಟಡಗಳ ತೆರಿಗೆ ಭಾರೀ ಏರಿಕೆ – ಜಯಪುರದಲ್ಲಿ ವರ್ತಕರಿಂದ ಅಂಗಡಿ ಬಂದ್‌, ಸರ್ಕಾರದ ವಿರುದ್ಧ ಆಕ್ರೋಶ

    ಕಟ್ಟಡಗಳ ತೆರಿಗೆ ಭಾರೀ ಏರಿಕೆ – ಜಯಪುರದಲ್ಲಿ ವರ್ತಕರಿಂದ ಅಂಗಡಿ ಬಂದ್‌, ಸರ್ಕಾರದ ವಿರುದ್ಧ ಆಕ್ರೋಶ

    ಚಿಕ್ಕಮಗಳೂರು: ಭಾರೀ ತೆರಿಗೆ (Tax) ಏರಿಕೆ ಮಾಡಿರುವುದನ್ನು ಖಂಡಿಸಿ ಇಡೀ ಗ್ರಾಮ ಪಂಚಾಯತ್‌ (Village Panchayat) ವ್ಯಾಪ್ತಿಯ ಅಂಗಡಿಗಳನ್ನು ಬಂದ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಗ್ರಾಮದಲ್ಲಿ ನಡೆದಿದೆ.

    ಇಷ್ಟು ವರ್ಷಗಳಿಂದ ಇಲ್ಲದ ತೆರಿಗೆಯನ್ನು ಈಗ ಏಕಾಏಕಿ ತೆರಿಗೆ ಏರಿಕೆ ಮಾಡಿರುವುದನ್ನು ಖಂಡಿಸಿ ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟು ಮುಚ್ಚಿ ವರ್ತಕರು ಜಯಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

    2022ರಲ್ಲಿ ಬಿಜೆಪಿ ಸರ್ಕಾರದ ಅವಧಿಯ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಇದೀಗ ಕಾಂಗ್ರೆಸ್ ಸರ್ಕಾರ ಗ್ರಾಮ ಪಂಚಾಯತ್‌ಗಳಿಗೆ ಆದೇಶ ಹೊರಡಿಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಜಯಪುರ ಗ್ರಾಮ ಪಂಚಾಯತ್‌ ಅಧಿಕಾರಿಗಳು ದಿಢೀರ್‌ ಎಂದು ತೆರಿಗೆ ಏರಿಸಿರುವುದರಿಂದ ಸುತ್ತಮುತ್ತಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸಾರ್ವಜನಿಕರು ಹಾಗೂ ವರ್ತಕರು ಸಿಟ್ಟಿಗೆದ್ದಿದಾರೆ. ಇದನ್ನೂ ಓದಿ: ಮದ್ಯ ಪ್ರಿಯರಿಗೆ ಶಾಕ್ – ರಾಜ್ಯದಲ್ಲಿ ಮತ್ತೆ ಬಿಯರ್ ದರ ಏರಿಕೆ

    ಸರ್ಕಾರದ ಉಚಿತ ಗ್ಯಾರಂಟಿ (Congress Guarantee) ಯೋಜನೆಗ ಹಣ ಸಂಗ್ರಹಿಸಲು ತೆರಿಗೆಯನ್ನು ಹೆಚ್ಚಿಸಿದ್ದಾರೆ. ಈ ಪ್ರಮಾಣದಲ್ಲಿ ಏರಿಕೆ ಮಾಡಿದರೆ ನಾವು ವಸ್ತುಗಳ ದರವನ್ನು ಏರಿಸಬೇಕಾಗುತ್ತದೆ. ಇದರಿಂದ ಜನ ಸಾಮಾನ್ಯರಿಗೆ ಹೊಡೆತ ಬೀಳುತ್ತದೆ ಎಂದು ವರ್ತಕರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂತು ಮಳಲಿ ಮಸೀದಿ – ಆಸ್ತಿ ತನ್ನದೆಂದು ಸಾಬೀತುಪಡಿಸಲು ವಕ್ಫ್‌ ಬೋರ್ಡ್‌ ತಯಾರಿ

    ಎಷ್ಟು ಏರಿಕೆ?
    ಕೃಷಿ ತೆರಿಗೆ ಸೇರಿದಂತೆ ಬಂಡವಾಳ ಆಧಾರಿತ ಕಟ್ಟಡಗಳ ಮೇಲೆ ಅಧಿಕವಾಗಿ ಸುಮಾರು ಏಳು ಪಟ್ಟು ಪ್ರಮಾಣದಲ್ಲಿ ತೆರಿಗೆ ಹೆಚ್ಚಾಗಿದ್ದು 2,500 ರೂ. ತೆರಿಗೆ ಇದ್ದ ವರ್ತಕರ ಕಟ್ಟಡಗಳಿಗೆ 14,000 ರೂ. ಹಾಗೂ 14,000  ರೂ. ಇದ್ದ  ಕಟ್ಟಡಗಳಿಗೆ 40,000 ರೂ. ನಷ್ಟು ದಿಢೀರ್ ತೆರಿಗೆ ಏರಿಸಿರುವುದು ವರ್ತಕರು ಹಾಗೂ ಇನ್ನಿತರ ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

    ಕೂಡಲೇ ಹೊಸ ತೆರಿಗೆ ನೀತಿಯನ್ನು ರದ್ದುಪಡಿಸಬೇಕೆಂದು ಹಳ್ಳಿಗರು ಪಟ್ಟು ಹಿಡಿದಿದ್ದಾರೆ. ಗ್ರಾಮ ಪಂಚಾಯತ್‌ ಕೂಡಲೇ ನೂತನ ತೆರಿಗೆ ನೀತಿಯನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರವಾದ ಹೋರಾಟ  ನಡೆಸುವುದಾಗಿ  ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

  • ಮದುವೆಯಾಗುವಂತೆ ಗ್ರಾಮ ಪಂಚಾಯ್ತಿ ಸದಸ್ಯನ ಕಿರುಕುಳ – ಆತ್ಮಹತ್ಯೆಗೆ ಯತ್ನಿಸಿದ ಯುವತಿ

    ಮದುವೆಯಾಗುವಂತೆ ಗ್ರಾಮ ಪಂಚಾಯ್ತಿ ಸದಸ್ಯನ ಕಿರುಕುಳ – ಆತ್ಮಹತ್ಯೆಗೆ ಯತ್ನಿಸಿದ ಯುವತಿ

    ಧಾರವಾಡ: ಮದುವೆ ನಿಶ್ಚಯವಾಗಿದ್ದ ಯುವತಿಗೆ ಗ್ರಾಮ ಪಂಚಾಯತಿ ಸದಸ್ಯನೋರ್ವ ಕಿರುಕುಳ ನೀಡಿದ್ದನು. ಈ ಹಿನ್ನೆಲೆ ಯುವತಿ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡ ತಾಲೂಕಿನ ಬೊಗೂರ ಗ್ರಾಮದಲ್ಲಿ ನಡೆದಿದೆ.

    ಸರಸ್ವತಿ ಅಜ್ಜನರ(20) ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಮಲ್ಲಪ್ಪ ಮಾಳವಾಡ ಕಿರುಕುಳ ಕೊಟ್ಟ ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದು, ಮುಂದಿನ ಒಂದು ತಿಂಗಳಲ್ಲಿ ಸರಸ್ವತಿ ಮದುವೆ ನಡೆಯಬೇಕಿತ್ತು. ಆದರೆ ತನ್ನನ್ನು ಮದುವೆಯಾಗುವಂತೆ ಗ್ರಾಪಂ ಮಲ್ಲಪ್ಪ, ಸರಸ್ವತಿಗೆ ಕಿರುಕುಳ ನೀಡುತ್ತಿದ್ದ. ಇದನ್ನೂ ಓದಿ: ನರಬಲಿಗಾಗಿ 7 ವರ್ಷದ ಕಂದಮ್ಮ ಅಪಹರಣ – ಇಬ್ಬರು ಅರೆಸ್ಟ್

    ಕಿರುಕುಳದಿಂದ ಬೇಸತ್ತ ಸರಸ್ವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪ್ರಸ್ತುತ ಯುವತಿಯನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಯುವತಿಯ ಸ್ಥಿತಿ ಚಿಂತಾಜನಕವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬದವರು ನಿರ್ಧಾರ ಮಾಡಿದ್ದಾರೆ.

    ಯುವತಿ ಆತ್ಮಹತ್ಯೆಗೆ ಯತ್ನಿಸಿದ ನಂತರ ಪೊಲೀಸರು ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಯುವತಿ ಪೆÇೀಷಕರು ಆರೋಪ ಮಾಡಿದ್ದಾರೆ. ಇದನ್ನೂ ಓದಿ: CFI ಅಧ್ಯಕ್ಷ ಅತಾವುಲ್ಲಾ ಮೇಲೆ ಕೇಸ್ ದಾಖಲಿಸಲು AG ಅನುಮತಿ ಕೇಳಿದ್ದೇನೆ: ಪ್ರಮೋದ್ ಮುತಾಲಿಕ್

  • ರಸ್ತೆಯಲ್ಲಿ ಕಂದಕ ನಿರ್ಮಿಸಿ ಪಂಚಾಯತಿ ಸದಸ್ಯೆ ಪತಿ ದರ್ಬಾರ್

    ರಸ್ತೆಯಲ್ಲಿ ಕಂದಕ ನಿರ್ಮಿಸಿ ಪಂಚಾಯತಿ ಸದಸ್ಯೆ ಪತಿ ದರ್ಬಾರ್

    ನೆಲಮಂಗಲ: ಅನಾದಿ ಕಾಲದಿಂದಲೂ ಓಡಾಡುತ್ತಿದ್ದ ರಸ್ತೆಗೆ ಅಡ್ಡಲಾಗಿ ಗ್ರಾಮ ಪಂಚಾಯತಿ ಸದಸ್ಯೆ ಪತಿ ಜೆಸಿಬಿಯಿಂದ ಕಂದಕ ತೋಡಿ ರಸ್ತೆ ಮುಚ್ಚಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಲಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಕುಲುವನ ಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆಗೆ ಚುನಾವಣೆ ಹಿನ್ನೆಲೆ ಯಾರೊಬ್ಬರು ಮತ ನೀಡಿಲ್ಲ ಎಂಬ ಕಾರಣಕ್ಕೆ ಗ್ರಾಮ ಪಂಚಾಯತಿ ಸದಸ್ಯೆ ಪತಿರಾಯ ಶಿವಕುಮಾರ್ ಗ್ರಾಮದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಶಿವಕುಮಾರ್ ಅವರ ಮೇಲೆ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡದೇ ಅಂಧ ದರ್ಬಾರ್ ನಡೆಸುತ್ತಿರುವ ಆರೋಪ ಕೇಳಿ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ತನ್ನ ಜಮೀನಿನ ಮುಖಾಂತರ ಊರಿನ ಜನಗಳು ಕೆರೆಗೆ ಓಡಾಡುತ್ತಾರೆ ಎನ್ನುವ ಉದ್ದೇಶದಿಂದ ಮೊನ್ನೆಯಷ್ಟೇ ಗ್ರಾಮದ ಕಾಂಕ್ರೀಟ್ ರಸ್ತೆಗೆ ಅಡ್ಡಲಾಗಿ ಮಣ್ಣು ಸುರಿಸಿರುವ ಆರೋಪ ಈಗ ಕೇಳಿ ಬಂದಿದೆ. ಇದನ್ನೂ ಓದಿ: 7 ಕೋಟಿ ಮೊತ್ತದ ಅಡಿಕೆಯ ಜೊತೆ 7 ಲಾರಿ ಜಪ್ತಿ – 7 ಮಂದಿ ಅರೆಸ್ಟ್

    ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಸಿಇಒ ಶಿವಕುಮಾರ್ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಎಂದು ಆದೇಶಿಸಿದ್ದರು. ಈ ಹಿನ್ನೆಲೆ ಕಾಂಕ್ರೀಟ್ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಮಣ್ಣನ್ನು ತೆರವುಗೊಳಿಸಿದ್ದಾರೆ. ಈಗ ಆತನ ಜಮೀನಿನ ದಾರಿಯಲ್ಲಿ ಸಾರ್ವಜನಿಕರು ಕೆರೆಗೆ ಓಡಾಡುತ್ತಾರೆ ಎಂದು ರಸ್ತೆಗೆ ಅಡ್ಡಲಾಗಿ ಕಂದಕ ತೆಗೆದು ಬೇಲಿ ಹಾಕಿದ್ದಾರೆ. ಇದನ್ನೂ ಓದಿ: ಯೋಗ ಇರೋರು ಮಾತ್ರ ಯೋಗ ಮಾಡುತ್ತಾರೆ: ಡಿಸಿ ಆರ್ ಲತಾ

    ಗ್ರಾಮದ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 50ಕ್ಕಿಂತಲೂ ಹೆಚ್ಚು ಕಂದಕ ತೋಡಿದ್ದ ಸ್ಥಳದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ನಮಗೆ ರಸ್ತೆ ಬೇಕು ಇಲ್ಲಿನ ಜನ ರೈತಾಪಿ ವರ್ಗದವಾರಗಿದ್ದು, ನಮಗೆ ಪ್ರತಿಯೊಂದಕ್ಕೂ ಕೆರೆಗೆ ಹೋಗಬೇಕಿದೆ. ಆದ್ದರಿಂದ ಸಂಬಂಧಪಟ್ಟವರು ನಮ್ಮ ಗ್ರಾಮಕ್ಕೆ ಬಂದು ಕೆರೆಗೆ ರಸ್ತೆ ಕಲ್ಪಿಸಿ ಎಂದು ಮನವಿ ಮಾಡಿದ್ದಾರೆ.

  • ಗ್ರಾಮ ಪಂಚಾಯ್ತಿ ಚುನಾವಣಾ ಫಲಿತಾಂಶಕ್ಕೆ ಕೌಂಟ್‍ಡೌನ್

    ಗ್ರಾಮ ಪಂಚಾಯ್ತಿ ಚುನಾವಣಾ ಫಲಿತಾಂಶಕ್ಕೆ ಕೌಂಟ್‍ಡೌನ್

    ಬೆಂಗಳೂರು: ಹಳ್ಳಿ ಫೈಟ್‍ನ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಬೆಳಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಆರಂಭ ಆಗಲಿದ್ದು, ರಾತ್ರಿ ವೇಳೆಗೆ ಸಂಪೂರ್ಣ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.

    ರಾಜ್ಯದ 5,728 ಗ್ರಾಮಪಂಚಾಯ್ತಿಗಳ 82,616 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಶೇ.82ರಷ್ಟು ಮತದಾನವಾಗಿತ್ತು. 2,22,814 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷಿಸಿಕೊಂಡಿದ್ರು. 8,074 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಚಿನ್ಹೆ ಗೊಂದಲದ ಕಾರಣ ಮಂಗಳವಾರ ಬೆಳಗಾವಿಯ ಕದಂಪುರ ಮತ್ತು ಬಾಗಲಕೋಟೆಯ ಕಲಾದಗಿಯಲ್ಲಿ ಮರುಮತದಾನ ನಡೆದಿದೆ.

    ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರು, ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚು ಕಡೆ ಗೆಲುವು ಸಾಧಿಸುತ್ತಾರೆ. ಬಹುತೇಕ ಗ್ರಾಮಪಂಚಾಯ್ತಿಗಳಲ್ಲಿ ಕಮಲ ಅರಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಕೂಡ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದೆ.

  • 2 ಹಂತದಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ – ಯಾವ ದಿನಾಂಕ ಏನು?

    2 ಹಂತದಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ – ಯಾವ ದಿನಾಂಕ ಏನು?

    – ಬೀದರ್‌ ಜಿಲ್ಲೆಯಲ್ಲಿ ಮಾತ್ರ ಇವಿಎಂ
    – ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಚುನಾವಣೆ

    ಬೆಂಗಳೂರು: ಉಪಚುನಾವಣೆ ಮುಗಿದ ಬೆನ್ನಲ್ಲೇ ಲೋಕಲ್‌ ಫೈಟ್‌ಗೆ ದಿನಾಂಕ ನಿಗದಿಯಾಗಿದೆ.  ಡಿಸೆಂಬರ್‌ನಲ್ಲಿ 2 ಹಂತದಲ್ಲಿ ಗ್ರಾಮಪಂಚಾಯತ್‌ ಚುನಾವಣೆ ನಡೆಯಲಿದ್ದು, ಡಿ. 30 ರಂದು ಮತ ಎಣಿಕೆ ನಡೆಯಲಿದೆ.

    ಇಂದು ರಾಜ್ಯ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿ ದಿನಾಂಕ ಪ್ರಕಟಿಸಿತು. ಒಟ್ಟು  5,762 ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಯಲಿದೆ. ಡಿ.22 ರಂದು ಮೊದಲ ಹಂತದ ಚುನಾವಣೆ ನಡೆದರೆ ಡಿ. 27ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.

     

     

    ಮೊದಲ ಹಂತದಲ್ಲಿ 113 ತಾಲ್ಲೂಕುಗಳ 2,930 ಗ್ರಾಮ ಪಂಚಾಯತ್‌ಗಳು ಹಾಗೂ ಎರಡನೇ ಹಂತದಲ್ಲಿ 113 ತಾಲ್ಲೂಕುಗಳ 2,832 ಗ್ರಾಮ ಪಂಚಾಯಿತ್‌ಗಳಿಗೆ ಚುನಾವಣೆ ನಡೆಯಲಿದೆ.

     

    ರಾಜ್ಯದ 6,006 ಗ್ರಾಮ ಪಂಚಾಯತಿಗಳ ಪೈಕಿ ಒಟ್ಟು 5,762 ಗ್ರಾಮ ಪಂಚಾಯತ್‌ಗಳ ಒಟ್ಟು 92,121 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಗ್ರಾ.ಪಂ ಚುನಾವಣೆಗೆ ಒಟ್ಟು 11,949 ಚುನಾವಣಾ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ.

     

     

     

    ಒಟ್ಟು ಮತದಾರರ ಸಂಖ್ಯೆ 2,96,15,048 ಇದ್ದು, ಒಟ್ಟು 45,125 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಮತಗಟ್ಟೆಗೆ ಬರುವ ಮತದಾರರಿಗೆ ಮಾಸ್ಕ್ ಧರಿಸುವುದನ್ನು  ಕಡ್ಡಾಯ ಮಾಡಲಾಗಿದ್ದು ಎಲ್ಲ ಮತಗಟ್ಟೆಗಳಲ್ಲಿ ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯ ಮಾಡಲಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ನೂಕು ನುಗ್ಗಲು ತಪ್ಪಿಸಲು ಒಂದು ಮತಗಟ್ಟೆಯಲ್ಲಿ ಗರಿಷ್ಠ ಒಂದು ಸಾವಿರ ಮಂದಿಗೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗಿದೆ.

     

     

    ಯಾವ ದಿನ ಏನು?
    ಮೊದಲ ಹಂತದ ‌ಮತದಾನ ಡಿ. 22ರಂದು ನಡೆಯಲಿದ್ದು ಅಧಿಸೂಚನೆ  ಡಿ. 7 ರಂದು ಪ್ರಕಟವಾಗಲಿದೆ. ಡಿ.11ರಂದು ನಾಮಪತ್ರ ಸಲ್ಲಿಕೆ ಕಡೇ ದಿನವಾಗಿದ್ದು. ಡಿ.14ರಂದು ನಾಮಪತ್ರ ವಾಪಸ್ ಪಡೆಯಲು ಕಡೇ ದಿನವಾಗಿದೆ.

    ಎರಡನೇ ಹಂತದ ಚುನಾವಣೆ  ಡಿ.27 ರಂದು ನಡೆಯಲಿದ್ದು ಡಿ.11 ರಂದು ಅಧಿಸೂಚನೆ ಪ್ರಕಟವಾಗಲಿದೆ. ಡಿ.16 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು ಡಿ. 19 ರಂದು ನಾಮಪತ್ರ ಪಡೆಯಲು ಕೊನೆ ದಿನಾಂಕವಾಗಿದೆ.

    ಬೀದರ್ ನಲ್ಲಿ ಮಾತ್ರ ಇವಿಎಂ ಮೂಲಕ ಮತದಾನ ನಡೆದರೆ,  ಬೇರೆ ಜಿಲ್ಲೆಗಳಲ್ಲಿ  ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಯಲಿದೆ. ಬೆಳಗ್ಗೆ 7 ರಿಂದ 5 ಗಂಟೆಯವರೆಗೆ ಚುನಾವಣೆ ನಡೆಯಲಿದೆ

  • ಹಾಸನದಲ್ಲಿ ಕೊರೊನಾ ಭೀತಿ- ಸಾಮಾಜಿಕ ಅಂತರ ಮರೆತು ಗ್ರಾಮ ಪಂಚಾಯಿತಿಯಲ್ಲಿ ಗಲಾಟೆ

    ಹಾಸನದಲ್ಲಿ ಕೊರೊನಾ ಭೀತಿ- ಸಾಮಾಜಿಕ ಅಂತರ ಮರೆತು ಗ್ರಾಮ ಪಂಚಾಯಿತಿಯಲ್ಲಿ ಗಲಾಟೆ

    ಹಾಸನ: ಹಾಸನದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಭೀತಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಕಚೇರಿಯೊಳಗೆ ಜನಪ್ರತಿಗಳು, ಅಧಿಕಾರಿಗಳ ಜೊತೆ ಸಾರ್ವಜನಿಕರು ವಾಕ್ಸಮರ ನಡೆಸಿ ಪರಸ್ಪರ ಹಲ್ಲೆ ನಡೆಸಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ, ಕೆಂಬಾಳು ಗ್ರಾಮದಲ್ಲಿ ಘಟನೆ ನಡೆದಿದ್ದು, ಕೆಂಬಾಳು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಅಂಗಡಿಗಳಿಂದ ಶುಲ್ಕ ವಿಧಿಸುವ ಸಲುವಾಗಿ ತೀರ್ಮಾನ ತೆಗೆದುಕೊಳ್ಳಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಇದಕ್ಕೆ ಅಪಸ್ವರ ವ್ಯಕ್ತಪಡಿಸಿದ ಅಂಗಡಿ ಮಾಲೀಕರು, ಸ್ಥಳೀಯರು ಪಂಚಾಯಿತಿಯಲ್ಲಿ ಈಗಾಗಲೇ ಅಭಿವೃದ್ಧಿ ಹೆಸರಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಪ್ರಶ್ನೆ ಮಾಡಲಾರಂಭಿಸಿದ್ದಾರೆ.

    ಈ ವೇಳೆ ಗ್ರಾಮಪಂಚಾಯಿತಿ ಪಿಡಿಒ ಮತ್ತು ಅಧ್ಯಕ್ಷನ ವಿರುದ್ಧ ಸಭೆಯಲ್ಲಿ ಸೇರಿದ್ದವರು ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ತಳ್ಳಾಟ ನೂಕಾಟ ನಡೆದು ಪರಸ್ಪರ ಹಲ್ಲೆ ಕೂಡ ನಡೆಸಿ, ಕಿತ್ತಾಡಿಕೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ನುಗ್ಗೇಹಳ್ಳಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

  • ತಪಾಸಣೆ ಮಾಡದೇ ಕೈಗಾ ಪ್ರವೇಶಕ್ಕೆ ಹೊರರಾಜ್ಯದವರಿಗೆ ಅನುಮತಿ – 26 ಗ್ರಾ.ಪ ಸದಸ್ಯರಿಂದ ರಾಜೀನಾಮೆ

    ತಪಾಸಣೆ ಮಾಡದೇ ಕೈಗಾ ಪ್ರವೇಶಕ್ಕೆ ಹೊರರಾಜ್ಯದವರಿಗೆ ಅನುಮತಿ – 26 ಗ್ರಾ.ಪ ಸದಸ್ಯರಿಂದ ರಾಜೀನಾಮೆ

    ಕಾರವಾರ: ಲಾಕ್‍ಡೌನ್ ನಡುವೆಯೇ ಕೈಗಾ ಅಣು ಸ್ಥಾವರಕ್ಕೆ ಹೊರರಾಜ್ಯದ ಕೆಲಸಗಾರರಿಗೆ ತಪಾಸಣೆ ಮಾಡದೇ ಕೆಲಸ ನಿರ್ವಹಿಸಲು ಪ್ರವೇಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ಖಂಡಿಸಿ ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯ್ತಿಯ 26 ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

    ಅನುಮತಿ ಇಲ್ಲದಿದ್ದರೂ ಕೈಗಾ ಅಣು ವಿದ್ಯುತ್ ಸ್ಥಾವರ ಪ್ರದೇಶಕ್ಕೆ ಉತ್ತರಾಖಂಡ್ ರಾಜ್ಯದ ಕೆಲಸಗಾರರನ್ನು ಎರಡು ವಾಹನಗಳಲ್ಲಿ ಚಾಲಕರ ಸಹಿತ ಎಂಟು ಮಂದಿಯನ್ನು ಕರೆಸಲಾಗಿತ್ತು. ಅಲ್ಲದೇ ಅವರಿಗೆ ಯಾವುದೇ ವೈದ್ಯಕೀಯ ತಪಾಸಣೆ ಮಾಡದೇ ಕೈಗಾ ಅಣು ಸ್ಥಾವರದ ಒಳಗಡೆ ಹೋಗಲು ಅವಕಾಶ ನೀಡಲಾಗಿತ್ತು. ಹೀಗಾಗಿ ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರನ್ನೊಳಗೊಂಡ ಟಾಸ್ಕ್ ಪೋರ್ಸ್ ಸಮಿತಿ ಜಿಲ್ಲಾಡಳಿತಕ್ಕೆ ದೂರು ನೀಡಿ, ಹೊರ ರಾಜ್ಯದಿಂದ ಬಂದ ಕೆಲಸಗಾರರ ವೈದ್ಯಕೀಯ ತಪಾಸಣೆ ಮಾಡುವಂತೆ ಮನವಿ ಮಾಡಿತ್ತು.

    ಆದರೇ ಈ ಮನವಿಗೆ ಅಧಿಕಾರಿಗಳು ಸ್ಪಂದಿಸದೇ ಸ್ಥಳೀಯರಿಗೊಂದು ನ್ಯಾಯ ಹೊರ ರಾಜ್ಯದವರಿಗೊಂದು ನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ, ಅಧಿಕಾರಿಗಳ ತಾರತಮ್ಯಕ್ಕೆ ಕಾರವಾರದ ಮಲ್ಲಾಪುರ ಗ್ರಾಮ ಪಂಚಾಯ್ತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ 26 ಜನ ಗ್ರಾಮ ಪಂಚಾಯ್ತಿ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ನಿರ್ಗತಿಕರಿಗೆ ಉಚಿತವಾಗಿ ಅಗತ್ಯ ವಸ್ತುಗಳ ವಿತರಣೆ – ರಾಜ್ಯಕ್ಕೆ ಮಾದರಿಯಾದ ಗ್ರಾಮ ಪಂಚಾಯ್ತಿ

    ನಿರ್ಗತಿಕರಿಗೆ ಉಚಿತವಾಗಿ ಅಗತ್ಯ ವಸ್ತುಗಳ ವಿತರಣೆ – ರಾಜ್ಯಕ್ಕೆ ಮಾದರಿಯಾದ ಗ್ರಾಮ ಪಂಚಾಯ್ತಿ

    ರಾಮನಗರ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ದೇಶವೇ ಲಾಕ್‍ಡೌನ್ ಮಾಡಲಾಗಿದೆ. ಇದರಿಂದ ನಿರ್ಗತಿಕರು, ಬಡವರು ಒಂದೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಇದನ್ನು ಮನಗಂಡ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮ ಪಂಚಾಯ್ತಿ ನಿರ್ಗತಿಕರಿಗೆ ಅಗತ್ಯ ವಸ್ತುಗಳನ್ನು ಉಚಿತವಾಗಿ ವಿತರಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ.

    ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಆಗಿ ಗುರುತಿಸಿಕೊಂಡಿದ್ದ ಪಿಡಿಓ ಯತೀಶ್ ತಮ್ಮ ಪಂಚಾಯ್ತಿಯ ಅಧ್ಯಕ್ಷರು, ಸದಸ್ಯರ ಜೊತೆ ಚರ್ಚೆ ನಡೆಸಿ ಇಂತಹದೊಂದು ಉತ್ತಮ ಕಾರ್ಯಕ್ಕೆ ಮುಂದಾಗಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ.

    ಚಕ್ಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅತೀ ಬಡವರು, ನಿರ್ಗತಿಕರನ್ನು ಗುರುತಿಸಲಾಗಿದ್ದು, ಮೊದಲ ಹಂತವಾಗಿ 146 ಕುಟುಂಬದವರಿಗೆ ಅಗತ್ಯ ವಸ್ತುಗಳಾದ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಗೋಧಿ ಹಿಟ್ಟು, ಈರುಳ್ಳಿ, ಸಾಂಬಾರ್ ಪುಡಿ, ಹುರುಳಿ ಕಾಳು, ರವೆ, ಸಕ್ಕರೆ ಸೇರಿದಂತೆ ಸುಮಾರು 600 ರೂ. ಮೌಲ್ಯದ ವಸ್ತುಗಳನ್ನು ವಿತರಣೆ ಮಾಡಿದ್ದಾರೆ.

    ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇರುವ ಕಡು ಬಡವರು ಹಾಗೂ ಹೊರ ರಾಜ್ಯದಿಂದ ಉದ್ಯೋಗ ಅರಸಿ ಬಂದಿರುವ ಕೂಲಿ ಕಾರ್ಮಿಕ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಸ್ಥಿತಿವಂತರನ್ನು ಬಿಟ್ಟು ಉಳಿದವರಿಗೆಲ್ಲಾ ಅಗತ್ಯ ವಸ್ತುಗಳ ವಿತರಣೆ ಮಾಡುವುದಾಗಿ ಪಂಚಾಯ್ತಿ ಪಿಡಿಓ ಯತೀಶ್ ತಿಳಿಸಿದರು.