Tag: Villa

  • ದುಬೈನಲ್ಲಿ ಮತ್ತೊಂದು ದುಬಾರಿ ವಿಲ್ಲಾ ಖರೀದಿಸಿದ ಅಂಬಾನಿ

    ದುಬೈನಲ್ಲಿ ಮತ್ತೊಂದು ದುಬಾರಿ ವಿಲ್ಲಾ ಖರೀದಿಸಿದ ಅಂಬಾನಿ

    ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ (Mukesh Ambani) ಅವರು ದುಬೈನಲ್ಲಿ (Dubai) ಆಸ್ತಿಗಳನ್ನು ಖರೀದಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಈ ಹಿಂದೆ ತಮ್ಮ ಪುತ್ರನಿಗಾಗಿ ದುಬೈನಲ್ಲಿ ದುಬಾರಿ ವಿಲ್ಲಾ (Villa) ಒಂದನ್ನು ಖರೀದಿ ಮಾಡಿರುವುದಾಗಿ ಸುದ್ದಿಯಾಗಿದ್ದರು. ಇದೀಗ ಮತ್ತೊಂದು ಭಾರೀ ಬೆಲೆಯ ವಿಲ್ಲಾ ಖರೀದಿ ಮಾಡಿರುವುದಾಗಿ ವರದಿಯಾಗಿದೆ.

    ಅಂಬಾನಿ ಅವರು ಕಳೆದ ವಾರ ಕುವೈತ್‌ನ ಉದ್ಯಮಿ ಮೊಹಮ್ಮದ್ ಅಲ್ಶಯಾ ಅವರ ಕುಟುಂಬದಿಂದ ವಿಲ್ಲಾವನ್ನು ಖರೀದಿ ಮಾಡಿದ್ದಾರೆ. ಸಮುದ್ರ ತೀರದಲ್ಲಿರುವ ದುಬಾರಿ ವಿಲ್ಲಾ ಸುಮಾರು 163 ಮಿಲಿಯನ್ ಡಾಲರ್‌ಗೆ (ಸುಮಾರು 1,439 ಕೋಟಿ ರೂ.) ಮಾರಾಟವಾಗಿದೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಕಾರಿನಿಂದ ಇಳಿದು ಟ್ರಾಫಿಕ್ ಕ್ಲಿಯರ್ ಮಾಡಿದ ಸುಪ್ರಿಯಾ ಸುಲೆ

     

    ಇದೇ ವರ್ಷ ಅಂಬಾನಿ ಅವರು ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿಗಾಗಿ 80 ಮಿಲಿಯನ್ ಡಾಲರ್ (ಸುಮಾರು 661 ಕೋಟಿ ರೂ.) ಮೌಲ್ಯದ ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದರು. ಆ ಬಂಗಲೆ ಇದೀಗ ಅಂಬಾನಿ ಖರೀದಿಸಿರುವ ವಿಲ್ಲಾದ ಸಮೀಪವೇ ಇದೆ ಎನ್ನಲಾಗಿದೆ. ಇದನ್ನೂ ಓದಿ: ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆ – ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ನಾಲ್ಕೂವರೆ ಪಟ್ಟು ಅಧಿಕ ನೀರು ಬಿಡುಗಡೆ

    ಕಳೆದ ವರ್ಷ ರಿಲಯನ್ಸ್ ಸಂಸ್ಥೆ ದುಬೈನಲ್ಲಿ ಸ್ಟೋಕ್ ಪಾರ್ಕ್ ಎಂಬ ಕಂಟ್ರಿ ಕ್ಲಬ್ ಅನ್ನು 79 ಮಿಲಿಯನ್ ಡಾಲರ್‌ಗೆ (656 ಕೋಟಿ ರೂ.) ಖರೀದಿ ಮಾಡಿದ್ದರು. ಈ ಮೂಲಕ ಅಂಬಾನಿ ಅವರು ಇತ್ತೀಚೆಗೆ ದುಬೈನಲ್ಲಿ ಆಸ್ತಿ ಖರೀದಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • 13 ವಿಲ್ಲಾಗಳಿಗೆ ಕಂದಾಯ ಇಲಾಖೆ ನೋಟಿಸ್- ಕುಬೇರರ ಬಂಗಲೆಗಳಿಗೆ ನುಗ್ಗುತ್ತಾ ಬುಲ್ಡೋಜರ್?

    13 ವಿಲ್ಲಾಗಳಿಗೆ ಕಂದಾಯ ಇಲಾಖೆ ನೋಟಿಸ್- ಕುಬೇರರ ಬಂಗಲೆಗಳಿಗೆ ನುಗ್ಗುತ್ತಾ ಬುಲ್ಡೋಜರ್?

    ಬೆಂಗಳೂರು: ಕೋಟಿ ಕುಬೇರರ ಬಂಗಲೆಗಳಿಗೆ ಬುಲ್ಡೋಜರ್ (Bulldozer) ನುಗ್ಗುತ್ತಾ ಎಂಬ ಪ್ರಶ್ನೆಯೊಂದು ಇದೀಗ ಎದ್ದಿದೆ. ರಾಜಕಾಲುವೆ (Rajakaluve) ಒತ್ತುವರಿ ಮಾಡಿದ್ದ 13 ವಿಲ್ಲಾಗಳಿಗೆ ಕಂದಾಯ ಇಲಾಖೆ ನೋಟಿಸ್ ನೀಡಿದ್ದು, ಒತ್ತುವರಿದಾರರಿಗೆ ಟೆನ್ಶನ್ ಶುರುವಾಗಿದೆ.

    ಬೆಂಗಳೂರು ಮಳೆಯಿಂದಾಗಿ ರೈನ್ ಬೋ ಡ್ರೈವ್ (Rainbow Drive)ಬಡಾವಣೆಯಲ್ಲಿ ನೀರು ತುಂಬಿ ಅವಾಂತರ ಸೃಷ್ಟಿಯಾದ ಬೆನ್ನಲ್ಲೇ ಜಲಾವೃತವಾಗಲು ಕಾರಣವಾಗಿದ್ದ ಮೂಲವನ್ನು ಕಂದಾಯ ಇಲಾಖೆ (Department of Revenue) ಇದೀಗ ಕಂಡುಹಿಡಿದಿದೆ. ಇದನ್ನೂ ಓದಿ: 10 ಕೋಟಿಗೆ ಒಂದು ವಿಲ್ಲಾ – ಮಳೆಗೆ ನಿವಾಸಿಗಳು ವಿಲವಿಲ

    ರೈನ್ ಬೋ ಬಡಾವಣೆ ಜುನ್ನಸಂದ್ರ ಹಾಗೂ ಹಾಲನಾಯಕನಹಳ್ಳಿ ಸರ್ವೆ ನಂಬರ್ ನಲ್ಲಿ ವಿಲ್ಲಾಗಳನ್ನು ನಿರ್ಮಾಣ ಮಾಡಲಾಗಿದೆ. ಈ ಹಿನ್ನೆಲೆ 13 ವಿಲ್ಲಾ (Villa) ಗಳಿಗೆ ನೋಟೀಸ್ ನೀಡಲಾಗಿದೆ. ಈ ಹಿಂದೆಯೇ ವಿಲ್ಲಾ ತೆರವು ಮಾಡಲು ಹೊರಟಾಗ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು. ಈಗ ಮತ್ತೊಮ್ಮೆ ತೆರವಿಗೆ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಅಜೀತ್ ರೈ ನೋಟಿಸ್ (Notice) ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಎಕೋಸ್ಪೇಸ್‍ನಲ್ಲಿ ಮುಳುಗಿದ 40 ಐಷಾರಾಮಿ ಕಾರುಗಳು!

    ಒಂದೆಡೆ ಮಳೆ ಹಾಗೂ ಮತ್ತೊಂದೆಡೆ ತೆರವಿನ ಆತಂಕ ಎದುರಾಗಿದೆ. ಜುನ್ನಸಂದ್ರದಿಂದ ಸರ್ಜಾಪುರ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಒತ್ತುವರಿ ಹಿನ್ನೆಲೆ ಕಂದಾಯ ಇಲಾಖೆ ತೆರವು ಕಾರ್ಯಕ್ಕೆ ಮುಂದಾಗಿದೆ. ಮಹದೇವಪುರ ಕ್ಷೇತ್ರದ ಜುನ್ನಸುಂದ್ರ, ಹಾಲನಾಯಕನಹಳ್ಳಿಯಲ್ಲಿ ಸರ್ಕಾರಿ ಜಾಗಕ್ಕೆ ಕೋಟಿ ಕುಬೇರರು ಕನ್ನ ಹಾಕಿದ್ದಾರೆ. ಜುನ್ನಾಸಂದ್ರ, ಹಾಲನಾಯಕನಹಳ್ಳಿಯಲ್ಲಿ 50 ಕ್ಕೂ ಹೆಚ್ಚು ಕಡೆ ನಾಲಾ ಮಾದರಿಯ ಕಾಲುವೆಯನ್ನ ವಿಲ್ಲಾ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಪೈಕಿ 13 ಜನರಿಗೆ ನೋಟಿಸ್ ನೀಡಲಾಗಿದೆ.

    ನಾಳೆ ಬಿಬಿಎಂಪಿ (BBMP) ಅಧಿಕಾರಿಗಳ ಜೊತೆ ಕಂದಾಯ ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಒತ್ತುವರಿ ಮಾಡಿಕೊಂಡಿರುವ ವಿಲ್ಲಾ ಮಾಲೀಕರಿಗೆ ಒತ್ತುವರಿ ಜಾಗ ಬಿಡಲು ಸಮಯ ನೀಡಬೇಕಾ..? ಅಥವಾ ನೆಲಸಮ ಮಾಡಬೇಕಾ ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ. ಅಲ್ಲದೆ ನೋಟಿಸ್ ನೀಡಿ ಸಮಯವಕಾಶ ನೀಡಿದ್ರೆ, ವಿಲ್ಲಾ ಮಾಲೀಕರು ಕೋರ್ಟ್ ಗೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಮುನ್ಸೂಚನೆ ಹಾಗೂ ನೋಟಿಸ್ ನೀಡದೇ ಕಾರ್ಯಾಚರಣೆ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತದೆ. ಇದನ್ನೂ ಓದಿ: ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಪಬ್ಲಿಕ್ ಟಿವಿ ಗಣೇಶ- ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ

    Live Tv
    [brid partner=56869869 player=32851 video=960834 autoplay=true]

  • 10 ಕೋಟಿಗೆ ಒಂದು ವಿಲ್ಲಾ – ಮಳೆಗೆ ನಿವಾಸಿಗಳು ವಿಲವಿಲ

    10 ಕೋಟಿಗೆ ಒಂದು ವಿಲ್ಲಾ – ಮಳೆಗೆ ನಿವಾಸಿಗಳು ವಿಲವಿಲ

    ಬೆಂಗಳೂರು: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ನಿವಾಸಿಗಳು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಯಮಲೂರು ಬಳಿ ಕೋಟಿಗಟ್ಟಲೆ ಬೆಲೆಯ ವಿಲ್ಲಾಗಳಿಗೂ ಮಳೆಯ ನೀರು ನುಗ್ಗಿದ್ದು, ಅವಾಂತರ ಸೃಷ್ಟಿಯಾಗಿದೆ.

    ಹೌದು ಕೋಟಿಗಟ್ಟಲೇ ಹಣ ಕೊಟ್ಟು ಖರೀದಿಸಿದ ಅತ್ಯಂತ ಪ್ರತಿಷ್ಟಿತ ವಿಲ್ಲಾಗಳಿಗೂ ಮಳೆಯ ನೀರು ನುಗ್ಗಿದ್ದು, ಮನೆಯಿಂದ ಹೊರಬರಲಾಗದೇ ಜನರು ಪರದಾಡುತ್ತಿದ್ದಾರೆ. ಲಕ್ಷಗಟ್ಟಲೇ ಬೆಲೆಯ ಐಷಾರಾಮಿ ಕಾರುಗಳು ನೀರಿಗೆ ಮುಳುಗಡೆಯಾಗಿದೆ. ವಿಲ್ಲಾದ ಜನ ಈಗ ಟ್ರ್ಯಾಕ್ಟರ್ ಮೂಲಕ ಸಂಚಾರ ಮಾಡುತ್ತಿದ್ದಾರೆ. ಐಟಿ ಬಿಟಿ ಕಂಪನಿ ಉದ್ಯೋಗಿಗಳಿಗೆ ಟ್ರಾಕ್ಟರ್‌ಗಳೇ ಆಸರೆಯಾಗಿದೆ. ಎಸಿ ಕಾರು, ಎಸಿ ಬಸ್‍ಗಳಲ್ಲಿ ಓಡಾಡುತ್ತಿದ್ದವರು ಇದೀಗ ಟ್ರಾಕ್ಟರ್‌ನಲ್ಲಿ ಪ್ರಯಾಣಿಸುವ ಸ್ಥಿತಿ ಎದುರಾಗಿದೆ.

    ಹೆಚ್‍ಎಎಲ್‍ಟು ಬೆಳ್ಳಂದೂರು ಸಂಪರ್ಕಿಸುವ ರಸ್ತೆಗಳಲ್ಲಿ ನಾಲ್ಕು ಆಡಿ ನೀರು ತುಂಬಿದ್ದು, ಐದು ನಿಮಿಷಕ್ಕೊಂದಂತೆ ಎರಡು ಕಡೆಗಳಲ್ಲಿ ಹತ್ತಕ್ಕೂ ಹೆಚ್ಚು ಟ್ರಾಕ್ಟರ್‌ಗಳು ಪ್ರಯಾಣಕ್ಕೆ ಸಿದ್ದವಾಗಿವೆ. ಇನ್ನೂ ಬೆಳ್ಳಂದೂರು, ಯಮಲೂರು, ಚಲ್ಲಘಟ್ಟ ಕಡೆಗಳಿಗೆ ಹೋಗುವವರ ಸ್ಥಿತಿ ಕೇಳುವವರೆ ಇಲ್ಲದಂತಾಗಿದೆ. ಇದನ್ನೂ ಓದಿ: ನಿಮ್ಮ ಸರ್ಕಾರದಲ್ಲಿ ದಿಂಬು, ಚೆಂಬು ಖರೀದಿಯಲ್ಲೂ ನಡೆದ ಭ್ರಷ್ಟಾಚಾರ ನೆನಪಿಸಿಕೊಳ್ಳಿ- ಸಿದ್ದುಗೆ ಸುನಿಲ್ ತಿರುಗೇಟು

    ಯಮಲೂರು, ಕೆರೆ ನೀರು, ರಾಜಕಾಲುವೆ ನೀರು ಐಟಿ, ಬಿಟಿ ಕಂಪನಿಗಳಿಗೂ ನುಗ್ಗಿದ್ದು ಅವಾಂತರ ಸೃಷ್ಟಿಯಾಗಿದೆ. ಇದೀಗ ಮಳೆ ನೀರನ್ನು ಹೊರ ತೆಗೆಯಲು ಕ್ರೈನ್‍ಗಳು, ಜೆಸಿಬಿಗಳು, ಅಗ್ನಿಶಾಮಕ ಸಿಬ್ಬಂದಿ, ಎನ್‍ಡಿಆರ್‌ಎಫ್ ತಂಡಗಳು ಕಾರ್ಯಾಚರಣೆ ನಡೆಸುತ್ತಿದೆ. ಇದನ್ನೂ ಓದಿ: ಕಾಕ್‍ಪಿಟ್‍ನಲ್ಲಿ ಕೇಳಿಸಿತು ಶಿಳ್ಳೆ – ಮಧ್ಯದಲ್ಲಿಯೇ ಹಿಂದಿರುಗಿದ ವಿಸ್ತಾರ ವಿಮಾನ

    Live Tv
    [brid partner=56869869 player=32851 video=960834 autoplay=true]

  • ಕಿರಿಯ ಪುತ್ರನಿಗಾಗಿ ದುಬೈನಲ್ಲಿ ಅತ್ಯಂತ ದುಬಾರಿ ಮನೆ ಖರೀದಿಸಿದ ಮುಖೇಶ್ ಅಂಬಾನಿ

    ಕಿರಿಯ ಪುತ್ರನಿಗಾಗಿ ದುಬೈನಲ್ಲಿ ಅತ್ಯಂತ ದುಬಾರಿ ಮನೆ ಖರೀದಿಸಿದ ಮುಖೇಶ್ ಅಂಬಾನಿ

    ಅಬುಧಾಬಿ: ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ತಮ್ಮ ಕಿರಿಯ ಪುತ್ರನಿಗಾಗಿ ದುಬೈನಲ್ಲಿರುವ ಅತ್ಯಂತ ದುಬಾರಿ ಮನೆಯನ್ನು ಖರೀದಿ ಮಾಡಿರುವುದಾಗಿ ವರದಿಯಾಗಿದೆ.

    ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ದುಬೈನಲ್ಲಿ 80 ಮಿಲಿಯನ್ ಡಾಲರ್‌ನ(ಸುಮಾರು 640 ಕೋಟಿ ರೂ.) ಸಮುದ್ರ ಬದಿಯ ವಿಲ್ಲಾವನ್ನು ಗುಪ್ತವಾದಿ ಖರೀದಿಸಿದೆ ಎನ್ನಲಾಗಿದೆ. ಇದು ನಗರದಲ್ಲೇ ಅತಿ ದೊಡ್ಡ ಆಸ್ತಿ ವ್ಯವಹಾರವಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಮನಗರದಲ್ಲಿ ಕಂಡು ಕೇಳರಿಯದ ಮಳೆ – ಶಾಲಾ, ಕಾಲೇಜುಗಳಿಗೆ ರಜೆ

    ಪಾಮ್ ಜುಮೆರಾದಲ್ಲಿರುವ ಮನೆಯನ್ನು ಈ ವರ್ಷದ ಆರಂಭದಲ್ಲಿಯೇ ಮುಖೇಶ್ ಅವರು ತಮ್ಮ ಕಿರಿಯ ಪುತ್ರ ಅನಂತ್‌ಗಾಗಿ ಖಾಸಗಿಯಾಗಿ ಖರೀದಿ ಮಾಡಿದ್ದಾರೆ. ವಿಲ್ಲಾ ಸಮುದ್ರ ತೀರದಲ್ಲಿದ್ದು, ಅದರಲ್ಲಿ 10 ಮಲಗುವ ಕೋಣೆಗಳು, ಖಾಸಗಿ ಸ್ಪಾ, ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸ್ವಿಮ್ಮಿಂಗ್ ಪೂಲ್‌ಗಳಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಅಪ್ಪು ಅಗಲಿ ಹತ್ತು ತಿಂಗಳು: ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬ

    ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಮೂವರು ಮಕ್ಕಳಿರುವ ಅಂಬಾನಿ 93.3 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯರಾಗಿದ್ದಾರೆ. 65 ವರ್ಷದ ಅಂಬಾನಿ ವಿಶ್ವದ 11 ನೇ ಶ್ರೀಮಂತ ವ್ಯಕ್ತಿ. ಹಸಿರು ಶಕ್ತಿ, ತಂತ್ರಜ್ಞಾನ ಮತ್ತು ಇ-ಕಾಮರ್ಸ್‌ಗಳಲ್ಲಿ ಕಾರ್ಯ ನಿರ್ವಹಿಸಿ, ಸಂಪತ್ತು ವೃದ್ಧಿಸಿರುವ ಇವರು ಇದೀಗ ನಿಧಾನವಾಗಿ ತಮ್ಮ ಮಕ್ಕಳಿಗೆ ಅಧಿಕಾರವನ್ನು ಹಸ್ತಾಂತರಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಗಳ ಹುಟ್ಟುಹಬ್ಬವನ್ನು ವಿಲ್ಲಾದಲ್ಲಿ ಆಚರಿಸುತ್ತಿರೋ ಅಭಿ, ಐಶ್ – ದಿನಕ್ಕೆ ಇದರ ಬೆಲೆ ಎಷ್ಟು ಗೊತ್ತಾ?

    ಮಗಳ ಹುಟ್ಟುಹಬ್ಬವನ್ನು ವಿಲ್ಲಾದಲ್ಲಿ ಆಚರಿಸುತ್ತಿರೋ ಅಭಿ, ಐಶ್ – ದಿನಕ್ಕೆ ಇದರ ಬೆಲೆ ಎಷ್ಟು ಗೊತ್ತಾ?

    ಮುಂಬೈ: ಸ್ಟಾರ್ ಕಪಲ್ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳು ಆರಾಧ್ಯ ಬಚ್ಚನ್ ಹುಟ್ಟುಹಬ್ಬವನ್ನು ವಿಲ್ಲಾದಲ್ಲಿ ಅದ್ಧೂರಿಯಾಗಿ ಆಚರಿಸುತ್ತಿದ್ದು, ಒಂದು ದಿನಕ್ಕೆ ಈ ವಿಲ್ಲಾದ ಬೆಲೆ 10 ಲಕ್ಷ ರೂ. ಆಗಿದೆ.

     

    View this post on Instagram

     

    A post shared by Amilla Maldives (@amillafushi)

    ಅಭಿ ಮತ್ತು ಐಶು ಆರಾಧ್ಯ 10ನೇ ವರ್ಷದ ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸಲು ಮಾಲ್ಡೀವ್ಸ್ ಗೆ ತೆರಳಿದ್ದು, ಈ ದಂಪತಿ ಐಷಾರಾಮಿ ರೆಸಾರ್ಟ್‍ನ ಅದ್ಧೂರಿ ವಿಲ್ಲಾದಲ್ಲಿ ತಂಗಿದ್ದಾರೆ. ಈ ವಿಲ್ಲಾದಲ್ಲಿ ಒಂದು ದಿನ ವಾಸವಿರಬೇಕು ಎಂದರೆ 76,000 ರೂ. ಕಟ್ಟಬೇಕು. ಅದರಲ್ಲಿಯೂ ಈ ಜೋಡಿ ವಾಸಿಸುತ್ತಿರುವ ಅದ್ಧೂರಿ ರೂಂಗೆ ದಿನಕ್ಕೆ 10 ಲಕ್ಷ ರೂ. ಆಗುತ್ತೆ. ಇದನ್ನೂ ಓದಿ: ಇಡಿ, ಸಿಬಿಐ ನಿರ್ದೇಶಕರ ಅಧಿಕಾರಾವಧಿಯನ್ನು 5 ವರ್ಷ ವಿಸ್ತರಿಸಿದ ಕೇಂದ್ರ

    ಅಭಿ ಮತ್ತು ಐಶು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬೆರಗುಗೊಳಿಸುವ ವಿಲ್ಲಾದ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಫುಲ್ ಎಕ್ಸೈಟಿಂಗ್ ಆಗಿದ್ದಾರೆ. ಅಮಿತಾಭ್ ಬಚ್ಚನ್ ‘ಏ ಗೇಮ್ ಶೋ ಕೌನ್ ಬನೇಗಾ ಕರೋಡ್ ಪತಿ-13’ರ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವುದರಿಂದ, ತಮ್ಮ ಅಜ್ಜನನ್ನು ಬಿಟ್ಟು ಈ ಬಾರಿ ಆರಾಧ್ಯ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ.

    ಈ ವಿಶೇಷ ರೆಸಾರ್ಟ್‍ನಲ್ಲಿ ವಿಲ್ಲಾಗಳನ್ನು ರೀಫ್ ವಾಟರ್ ಪೂಲ್ ವಿಲ್ಲಾ, ಸನ್‍ಸೆಟ್ ವಾಟರ್ ಪೂಲ್ ವಿಲ್ಲಾ, ಲಗೂನ್ ವಾಟರ್ ಪೂಲ್ ವಿಲ್ಲಾ ಮತ್ತು ಮಲ್ಟಿ-ಬೆಡ್‍ರೂಂ ರೆಸಿಡೆನ್ಸಸ್ ಎಂದು ವರ್ಗೀಕರಿಸಲಾಗಿದೆ. ಈ ವಿಲ್ಲಾಗಳಲ್ಲಿ ಪ್ರತಿಯೊಬ್ಬರಿಗೂ ಖಾಸಗಿ ಪೂಲ್‍ಗಳಿವೆ. ಇದನ್ನೂ ಓದಿ: ಬೃಂದಾವನದಲ್ಲಿ ಅನುಮತಿ ಇಲ್ಲದೇ ರಾತ್ರಿ ಶೂಟಿಂಗ್ – ಯುಟ್ಯೂಬ್ ಅಡ್ಮಿನ್ ಅರೆಸ್ಟ್

  • ಈಗಲ್ಟನ್ ವಿಲೇಜ್ ಮೇಲೆ ಸಿಸಿಬಿ ದಾಳಿ- ಇಬ್ಬರು ಇರಾನಿಗಳು ಸೇರಿ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳು ಅರೆಸ್ಟ್

    ಈಗಲ್ಟನ್ ವಿಲೇಜ್ ಮೇಲೆ ಸಿಸಿಬಿ ದಾಳಿ- ಇಬ್ಬರು ಇರಾನಿಗಳು ಸೇರಿ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳು ಅರೆಸ್ಟ್

    – ಒಂದು ಕೋಟಿ ಮೌಲ್ಯದ ವಿವಿಧ ರೀತಿಯ ಡ್ರಗ್ಸ್ ವಶಕ್ಕೆ

    ಬೆಂಗಳೂರು: ಈಗಲ್ಟನ್ ವಿಲೇಜ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಇರಾನಿ ಪ್ರಜೆಗಳು ಸೇರಿ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಸ್ಟುಡೆಂಟ್ ವೀಸಾದಡಿ ಬಂದಿದ್ದ ಇರಾನಿ ಪ್ರಜೆಗಳು, ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದರು. ಅಲ್ಲದೆ ಬಿಡದಿಯ ವಿಲ್ಲಾದಲ್ಲಿ ಹೈಡ್ರೋ ಗಾಂಜಾ ಪ್ಲಾಂಟ್ಸ್ ತಯಾರಿಸುತ್ತಿದ್ದರು.

    ಪ್ರಕರಣ ಸಂಬಂಧ ಇಬ್ಬರು ಇರಾನಿ ಪ್ರಜೆಗಳು ಸೇರಿ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ವೀಸಾ ಅವಧಿ ಮುಗಿದಿದ್ದರೂ ಆರೋಪಿಗಳು ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದರು. ಸ್ಟುಡೆಂಟ್ ವೀಸಾದಡಿ ಭಾರತಕ್ಕೆ ಬಂದಿದ್ದ ಇಬ್ಬರು ಇರಾನ್ ಪ್ರಜೆಗಳು, ಡಾರ್ಕ್ ವೆಬ್ ನಲ್ಲಿ ಹೈಡ್ರೋ ಗಾಂಜಾ ಬೀಜಗಳನ್ನು ತರಿಸಿಕೊಳ್ಳುತ್ತಿದ್ದರು. ಬಂಧಿತರಿಂದ 130 ಹೈಡ್ರೋ ಗಾಂಜಾ ಗಿಡಗಳು, 1 ಕೋಟಿ ರೂ. ಬೆಲೆಯ 12.85 ಕೆ.ಜಿ. ತೂಕದ ಹೈಡ್ರೋ ಗಾಂಜಾ, ಒಂದು ಸ್ಕೋಡಾ ಕಾರು, 4 ಮೊಬೈಲ್, ಯುವಿ ಲೈಟ್ಸ್, ಎಲ್.ಇ.ಡಿ ಲ್ಯಾಂಪ್ಸ್, ಎಲೆಕ್ಟ್ರಿಕಲ್ ವೇಯಿಂಗ್ ಮಷಿನ್ ವಶಕ್ಕೆ ಪಡೆಯಲಾಗಿದೆ. ಈಗಲ್ಟನ್ ವಿಲೇಜ್‍ನಲ್ಲಿ ವಿಲ್ಲಾವನ್ನು ಬಾಡಿಗೆ ಪಡೆದು, ವೈಜ್ಞಾನಿಕವಾಗಿ ಗಾಂಜಾ ಬೆಳೆದು, ಒಣಗಿಸಿ ಮಾರಾಟ ಮಾಡುತ್ತಿದ್ದರು. ಇದನ್ನೂ ಓದಿ: ಬಿಜೆಪಿ ತುಮಕೂರು ಜಿಲ್ಲಾಧ್ಯಕ್ಷ ಸುರೇಶ್ ಗೌಡ ರಾಜೀನಾಮೆ- ಕಾಂಗ್ರೆಸ್ ಸೇರಲು ಪ್ಲ್ಯಾನ್?

    ಈಗಲ್ಟನ್ ವಿಲೇಜ್ ವಿಲ್ಲಾದಲ್ಲಿ ಹೈಡ್ರೋ ಗಾಂಜಾ ಪ್ಲಾಂಟ್ಸ್ ತಯಾರಿಸುತ್ತಿದ್ದರು. ಸೆಪ್ಟೆಂಬರ್ 26ರಂದು ಡಿಜೆ ಹಳ್ಳಿಯ ಕಾವೇರಿನಗರದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಆರೋಪಿಗಳು ಎಲ್.ಎಸ್.ಡಿ, ಹೈಡ್ರೋ ಗಾಂಜಾ ಸಮೇತ ಸಿಸಿಬಿ ಕೈಗೆ ಸಿಕ್ಕಿಬಿದ್ದಿದ್ದರು. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸೋಮವಾರ ಬಿಡದಿಯ ಈಗಲ್ಟನ್ ವಿಲೇಜ್ ವಿಲ್ಲಾ ಮೇಲೆ ಸಿಸಿಬಿ ದಾಳಿ ನಡೆಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು ಹಾಗೂ ಉದ್ಯಮಿಗಳಿಗೆ ಸಿಂಥೆಟಿಕ್ ಡ್ರಗ್ ಹಾಗೂ ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್‍ಗೆ ಏಳು ವಸಂತಗಳ ಸಂಭ್ರಮ

    ಬಂಧಿತರ ಪೈಕಿ ಇರಾನಿ ಮೂಲದ ಜಾವೀದ್ ರುಸ್ತುಂ ವಿರುದ್ಧ ಈ ಹಿಂದೆ ಯಶವಂತಪುರ ಠಾಣೆಯಲ್ಲಿ ಎರಡು ಪ್ರಕರಣಗಳಿವೆ. ಸದ್ಯ ಬಂಧಿತ ನಾಲ್ವರ ವಿರುದ್ಧ ಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಯಾವುದೇ ಸ್ವರ್ಗಕ್ಕಿಂತ ಕಮ್ಮಿಯಿಲ್ವಂತೆ ಜಾನ್ ಅಬ್ರಹಾಂ ಮನೆ: ಫೋಟೋಗಳಲ್ಲಿ ನೋಡಿ

    ಯಾವುದೇ ಸ್ವರ್ಗಕ್ಕಿಂತ ಕಮ್ಮಿಯಿಲ್ವಂತೆ ಜಾನ್ ಅಬ್ರಹಾಂ ಮನೆ: ಫೋಟೋಗಳಲ್ಲಿ ನೋಡಿ

    ಮುಂಬೈ: ಬಾಲಿವುಡ್ ನಟ ಜಾನ್ ಅಬ್ರಹಾಂ ಯಾವುದೇ ಸೂಪರ್ ಸ್ಟಾರ್ ಗೆ ಕಡಿಮೆಯಿಲ್ಲ. ಅವರ ಆಕ್ಟಿಂಗ್ ಹಾಗೂ ಸಿಕ್ಸ್ ಪ್ಯಾಕ್ ಗೆ ಯುವತಿಯರು ಮನಸೋತಿರುವುದು ಹಳೆಯ ಸುದ್ದಿ. ಈಗ ಅವರ ಮನೆಗೆ ಸಂಬಂಧಿಸಿದಂತೆ ಹೊಸ ಸುದ್ದಿ ಬಂದಿದೆ.

    ಜಾನ್ ತಮ್ಮ ಗೆಳತಿ ಪ್ರಿಯಾ ರೂಚಾಲ್ ಜೊತೆ ಸಂತೋಷದಿಂದಿದ್ದು, ಮುಂಬೈನ ಬಾಂದ್ರಾದಲ್ಲಿರುವ ಅವರ ಮನೆಯನ್ನು ನೋಡಿದ್ದರೆ ನೀವು ಆಶ್ಚರ್ಯ ಪಡುತ್ತೀರಿ. ತಮ್ಮ ನಿವಾಸವನ್ನು ಜಾನ್ ತಮ್ಮ ಮನೆಯನ್ನು ತಮ್ಮ ಸಹೋದರ ಎಲಾನ್ ಜೊತೆ ಸೇರಿಕೊಂಡು ಡಿಸೈನ್ ಮಾಡಿದ್ದು, ‘ವಿಲ್ಲಾ ಇನ್ ದಿ ಸ್ಕೈ’ ಎಂದು ಹೆಸರಿಟ್ಟಿದ್ದಾರೆ.

    5000 ಚದರ ಅಡಿ ವಿಸ್ತೀರ್ಣದಲ್ಲಿ ಹೈಕ್ಲಾಸ್ ವಸ್ತುಗಳನ್ನು ಬಳಸಿ 14 ತಿಂಗಳಿನಲ್ಲಿ ವಿಲ್ಲಾ ನಿರ್ಮಾಣಗೊಂಡಿದೆ. ಬೆಡ್ ರೂಮ್‍ನಿಂದ ಪೇಂಟಿಂಗ್ ರೂಮ್‍ ವರೆಗೂ ಎಲ್ಲವೂ ಸುಂದರವಾಗಿ ನಿರ್ಮಾಣವಾಗಿದ್ದು, ಮುಂದುಗಡೆ ಸಮುದ್ರವನ್ನು ನೋಡಬಹುದಾಗಿದೆ.

    ಈ ಹಿಂದೆ ನಟ ಅಭಿಷೇಕ್ ಬಚ್ಚನ್ ತಮ್ಮ ಸುಂದರ ಪತ್ನಿ ಐಶ್ವರ್ಯ ರೈಗೆ 21 ಕೋಟಿ ರೂ. ಬೆಲೆ ಬಾಳುವ ಹೊಸ ಅಪಾರ್ಟ್ ಮೆಂಟ್ ಗಿಫ್ಟ್ ನೀಡಿದ್ದರು. ಆ ಹೊಸ ಅಪಾರ್ಟ್ ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

    ಅಭಿಷೇಕ್ ಮತ್ತು ಐಶ್ವರ್ಯ ರೈ, ಬಚ್ಚನ್ ಕುಟುಂಬದೊಂದಿಗೆ ಮುಂಬೈನ `ಜಲ್ಸಾ’ ನಿವಾಸದಲ್ಲಿ ವಾಸವಾಗಿದ್ದರು. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಹತ್ತಿರದ `ಹೈ ಎಂಡ್ ರೆಸಿಡೆನ್ಸಿಯಲ್ ಕಾಂಪ್ಲೆಕ್ಸ್, ಸಿಂಗಾನಿಯಾ ಐಸೆಲ್‍ನಲ್ಲಿ ಹೊಸ ಅಪಾರ್ಟ್ ಮೆಂಟ್ ಖರೀದಿಸಿದ್ದರು.

     

  • ಕರ್ನಾಟಕದತ್ತ ಅಮಿತ್ ಶಾ ಚಿತ್ತ- ಬೆಂಗ್ಳೂರಲ್ಲೇ ವಾಸ್ತವ್ಯ ಹೂಡಲಿದ್ದಾರೆ ರಾಷ್ಟ್ರಾಧ್ಯಕ್ಷ

    ಕರ್ನಾಟಕದತ್ತ ಅಮಿತ್ ಶಾ ಚಿತ್ತ- ಬೆಂಗ್ಳೂರಲ್ಲೇ ವಾಸ್ತವ್ಯ ಹೂಡಲಿದ್ದಾರೆ ರಾಷ್ಟ್ರಾಧ್ಯಕ್ಷ

    ಬೆಂಗಳೂರು: ಈಗಾಗಲೇ ಗುಜರಾತ್ ಚುನಾವಣೆ ಮುಗಿದಿದ್ದು, ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕದತ್ತ ಮುಖ ಮಾಡಿದ್ದಾರೆ. ಗುಜರಾತ್ ಫಲಿತಾಂಶದ ಬೆನ್ನಲ್ಲೇ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

    ಸಂಕ್ರಾಂತಿ ವೇಳೆಗೆ ರಾಜ್ಯಕ್ಕೆ ಆಗಮಿಸಲಿರುವ ಅಮಿತ್ ಶಾ, ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಸಾದರಹಳ್ಳಿ ಸಮೀಪ ಏರ್ ಪೋರ್ಟ್ ರಸ್ತೆಯಲ್ಲಿರುವ ಬಹು ದೊಡ್ಡ ವಿಲ್ಲಾವೊಂದನ್ನು ಬಾಡಿಗೆಗೆ ಪಡೆದಿದ್ದಾರೆ.

    ಬಿಜೆಪಿ ಕಚೇರಿ ಹಾಗೂ ವಿಮಾನ ನಿಲ್ದಾಣಕ್ಕೆ ಹತ್ತಿರವಾಗಲೆಂದು ಸಾದರಹಳ್ಳಿಯಲ್ಲಿ ವಿಲ್ಲಾ ಬಾಡಿಗೆಗೆ ಪಡೆದಿದ್ದಾರೆ. ಈ ವಿಲ್ಲಾದಲ್ಲೇ ಎಲೆಕ್ಷನ್ ಕಾರ್ಯತಂತ್ರ ನಡೆಯುತ್ತದೆ. ವಾರ್ ರೂಂ, ಅಮಿತ್ ಶಾ ಅವರ ಸ್ಟ್ರ್ಯಾಟಜಿ ರೂಂ ಕೂಡ ವಿಲ್ಲಾದಲ್ಲೇ ಇದ್ದು, ವಾರ್ ರೂಂನ 10 ತಂಡವೂ ಬೆಂಗಳೂರಿಗೆ ಶಿಫ್ಟ್ ಆಗಲಿದೆ.

    ಅಮಿತ್ ಶಾ ಅವರು ವಾರದಲ್ಲಿ ಎರಡು ಬಾರಿ ಬೆಂಗಳೂರಿಗೆ ಭೇಟಿ ಕೊಡಲಿದ್ದಾರೆ. ಈ ವೇಳೆ ಮಂಗಳೂರು, ಮೈಸೂರು, ಹುಬ್ಬಳಿ, ಬೆಳಗಾವಿಗೂ ಕೂಡ ಅವರು ಹೋಗಲಿದ್ದಾರೆ. ಒಟ್ಟಿನಲ್ಲಿ ಹೊಸ ವರ್ಷದಿಂದ ಕರ್ನಾಟಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಅವರ ಅಸಲಿ ಆಟ ಶುರುವಾಗುತ್ತದೆ.