Tag: vikrantrona

  • ʻಗಟ್ಟಿಮೇಳʼ ನಟಿ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಂಡ ಸಿದ್ದು ಮೂಲಿಮನಿ

    ʻಗಟ್ಟಿಮೇಳʼ ನಟಿ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಂಡ ಸಿದ್ದು ಮೂಲಿಮನಿ

    `ಸತ್ಯ’ ಧಾರಾವಾಹಿಯ ನಟ ಸಾಗರ್ ಗೌಡ ಎಂಗೇಜ್ ಆದ ಬೆನ್ನಲ್ಲೇ ಕಿರುತೆರೆಯ ಮತ್ತೊಂದು ಜೋಡಿ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. `ಪಾರು’ (Paaru Serial) ಸೀರಿಯಲ್ ನಟ ಸಿದ್ದು (Siddu Moolimani) ಜೊತೆ ಪ್ರಿಯಾ ಜೆ ಆಚಾರ್ (Priya J Achar) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    `ಪಾರು’ ಸೀರಿಯಲ್ ಮೂಲಕ ಮನೆ ಮಾತಾದ ನಟ ಸಿದ್ದು ಮೂಲಿಮನಿ ನವೆಂಬರ್ 20ರಂದು ಗಟ್ಟಿಮೇಳ ಧಾರಾವಾಹಿ ನಟಿ ಪ್ರಿಯಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಡ್ಯಾನ್ಸ್ ಶೋವೊಂದರಲ್ಲಿ ಪರಿಚಿತರಾದ ಈ ಜೋಡಿ ಆ ನಂತರ `ಧಮಾಕ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ವೇಳೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿದೆ. ಆ ನಂತರದಲ್ಲಿ ಗುರುಹಿರಿಯರ ಒಪ್ಪಿಗೆ ಪಡೆದು, ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ಈ ಜೋಡಿ ಹಸೆಮಣೆ ಏರಲಿದ್ದಾರೆ.

    ಸಿದ್ದು ಮೂಲಿಮನಿ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಧಮಾಕ, ವಿಕ್ರಾಂತ್‌ರೋಣ, ರಂಗಿತರಂಗ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ಪ್ರಿಯಾ `ಗಟ್ಟಿಮೇಳ’ ಸೀರಿಯಲ್ ಜೊತೆ ಪರಭಾಷೆ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:‘ಕಾಮಿಡಿ ಕಿಲಾಡಿ’ ನಯನಾ ವಿರುದ್ಧ ಜೀವ ಬೆದರಿಕೆ ದೂರು ದಾಖಲು

    View this post on Instagram

     

    A post shared by Siddu Moolimani (@sidmoolimani)

    ನಟಿ ಪ್ರಿಯಾ ಹುಟ್ಟುರಾದ ದಾವಣಗೆರೆಯಲ್ಲಿ ಎಂಗೇಜ್‌ಮೆಂಟ್ ನಡೆದಿದೆ. ಈ ಸಂಭ್ರಮಕ್ಕೆ ಪಾರಾ ಮತ್ತು ಗಟ್ಟಿಮೇಳ ಸೀರಿಯಲ್ ತಂಡ ಸಾಕ್ಷಿಯಾಗಿದ್ದಾರೆ. ಹಾಗೇ ಸಾಕಷ್ಟು ನಟ ನಟಿಯರು ಕೂಡ ನವಜೋಡಿಗೆ ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಕಿ ಭಾಯ್‌ನ ಗುಣಗಾನ ಮಾಡಿದ ಸುದೀಪ್: ಯಶ್ ಬಗ್ಗೆ ಕಿಚ್ಚ ಹೇಳಿದ್ದು ಹೀಗೆ

    ರಾಕಿ ಭಾಯ್‌ನ ಗುಣಗಾನ ಮಾಡಿದ ಸುದೀಪ್: ಯಶ್ ಬಗ್ಗೆ ಕಿಚ್ಚ ಹೇಳಿದ್ದು ಹೀಗೆ

    `ಕೆಜಿಎಫ್ 2′ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ಯಶ್ ಬಗ್ಗೆ `ವಿಕ್ರಾಂತ್ ರೋಣ’ ಸ್ಟಾರ್ ಕಿಚ್ಚ ಮಾತನಾಡಿರುವುದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಯಶ್ ಮತ್ತು ಕಿಚ್ಚನ ನಡುವೆ ತಂದಿಟ್ಟು ತಮಾಷೆ ನೋಡುವವರಿಗೆ ಕಿಚ್ಚನ ಈ ಉತ್ತರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

    `ವಿಕ್ರಾಂತ್ ರೋಣ’ ಸಿನಿಮಾದ ಯಶಸ್ಸಿನ ಅಲೆಯಲ್ಲಿರುವ ಸುದೀಪ್ ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಸಂದರ್ಶನವೊಂದರಲ್ಲಿ ಯಶ್ ಕುರಿತು ಮಾತನಾಡಿದ ಕಿಚ್ಚನ ಮಾತು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ನಿರೂಪಕ, ನೀವು ಯಶ್ ಅವರನ್ನ ಯಾವುದೇ ಕಾರ್ಯಕ್ರಮ ಪರಿಚಯಿಸಬೇಕಾದರೆ ಹೇಗೆ ಸ್ವಾಗತ ಮಾಡುತ್ತೀರಿ ಎಂದು ಕೇಳಿದ್ದಾರೆ. ಇದನ್ನೂ ಓದಿ:ಸಿನಿಮಾ ಬಹಿಷ್ಕರಿಸಬೇಡಿ, ನಾನೂ ಭಾರತವನ್ನು ಪ್ರೀತಿಸುವವನು ಎಂದ ಆಮೀರ್ ಖಾನ್

    ಯಶ್ ಬಹಳ ಎನರ್ಜಿಟಿಕ್ ಆಕ್ಟರ್, ಅದ್ಬುತ ಕನಸುಗಾರ, ಸಾಧಕ ಎಂದಿದ್ದಾರೆ. ಈ ಪದಗಳಿಂದಲೇ  ಅವರನ್ನ ಸ್ವಾಗತಿಸುತ್ತೇನೆ ಎಂದು ಸುದೀಪ್ ಮಾತನಾಡಿದ್ದಾರೆ. ಕಿಚ್ಚನ ಈ ಮಾತು ಕೇಳಿ ಯಶ್ ಫ್ಯಾನ್ಸ್ ದಿಲ್‌ಖುಷ್ ಆಗಿದ್ದಾರೆ. ಈ ಮೂಲಕ ಯಶ್ ಸಾಧನೆಯ ಬಗ್ಗೆ ಸುದೀಪ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]