Tag: Vikranth Rona

  • ವಿಕ್ರಾಂತ್ ರೋಣಾದಲ್ಲಿ ಜಾಕ್ವೆಲಿನ್ ಫಸ್ಟ್ ಲುಕ್ ರಿಲೀಸ್‍ಗೆ ದಿನಾಂಕ ನಿಗದಿ

    ವಿಕ್ರಾಂತ್ ರೋಣಾದಲ್ಲಿ ಜಾಕ್ವೆಲಿನ್ ಫಸ್ಟ್ ಲುಕ್ ರಿಲೀಸ್‍ಗೆ ದಿನಾಂಕ ನಿಗದಿ

    ಬೆಂಗಳೂರು: ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ವಿಕ್ರಾಂತ್ ರೋಣಾ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ತಿಳಿದಿರುವ ವಿಚಾರ. ಸಿನಿಮಾದಲ್ಲಿ ಅವರ ಪಾತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ದಿನಾಂಕ ನಿಗದಿಪಡಿಸಿದೆ.

    ವಿಕ್ರಾಂತ್ ರೋಣಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಪಾತ್ರದ ಕುರಿತು ತಿಳಿಸಲಿದ್ದೇವೆ. ಈಗ ಅದಕ್ಕೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಜಾಕ್ವೆಲಿನ್ ಪಾತ್ರದ ಫಸ್ಟ್ ಲುಕ್‍ನ್ನು ಜುಲೈ 31ರಿಂದ ಜಿಆರ್ ಅನ್ನೋ ಹೆಸರು ಚಾಲ್ತಿಗೆ ಬರಲಿದೆ ಎಂದು ನಿರ್ದೇಶಕ ಅನೂಪ್ ಭಂಡಾರಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

     ಜಾಕ್ವೆಲಿನ್ ಫರ್ನಾಂಡಿಸ್ ಅವರು ಮುಖ್ಯ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ ಎಂದು ಈ ಹಿಂದೆ ತಿಳಿಸಲಾಗಿತ್ತು. ಅದನ್ನು ಘೋಷಿಸುವುದಕ್ಕೆ ಈಗ ದಿನಾಂಕ ನಿಗದಿಯಾಗಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ನಟ ಕಿಚ್ಚ ಸುದೀಪ್, ನಿರ್ದೇಶಕ ಅನೂಪ್ ಭಂಡಾರಿ ಅವರು ಜಾಕ್ವೆಲಿನ್ ಜೊತೆಗಿನ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ: ನೀವು ಕೆಟ್ಟವರಲ್ಲ, ಸಮಾಜ ಕೆಟ್ಟದ್ದು : ಜಾಕ್ವೆಲಿನ್ ಫರ್ನಾಂಡಿಸ್

    ಕನ್ನಡದ ಬಹುನಿರೀಕ್ಷೆಯ ವಿಕ್ರಾಂತ್ ರೋಣಾ ಚಿತ್ರದ ಚಿತ್ರೀಕರಣದ ಮುಕ್ತಾಯದ ಬೆನ್ನಲ್ಲೇ ಚಿತ್ರತಂಡ ಮುಂದಿನ ಕೆಲಸಗಳಲ್ಲಿ ತೊಡಗಿಕೊಂಡಿದೆ. ಇತ್ತೀಚೆಗಷ್ಟೇ ಬಾಲಿವುಡ್ ತಾರೆ ಜಾಕ್ವೆಲಿನ್ ಫರ್ನಾಂಡಿಸ್ ವಿಕ್ರಾಂತ್ ರೋಣಾ ತಂಡವನ್ನು ಸೇರಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಒಂದು ಹಾಡು ಮತ್ತು ಕೆಲವು ದೃಶ್ಯಗಳಲ್ಲಿ ಜಾಕ್ವೆಲಿನ್ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರತಂಡ ಹೇಳಿತ್ತು. ಜಾಕ್ವೆಲಿನ್ ಕಾಣಿಸಿಕೊಳ್ಳುತ್ತಿರುವ ಹಾಡಿಗೆ ಕೆಜಿಎಫ್ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್ ಅದ್ಭುತವಾದ ಸೆಟ್ ಹಾಕಿದ್ದರು. 250 ಮಂದಿ ನೃತ್ಯ ಕಲಾವಿದರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಖ್ಯಾತ ಕೊರಿಯಾಗ್ರಾಫರ್ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ.

     

    View this post on Instagram

     

    A post shared by Anup Bhandari (@anupsbhandari)

    ವಿಕ್ರಾಂತ್ ರೋಣಾ 3ಡಿಯಲ್ಲಿ ಸಿದ್ಧವಾಗುತ್ತಿರುವ ಕನ್ನಡ ಸಿನಿಮಾವಾಗಿದ್ದು, 14 ಭಾಷೆಗಳಲ್ಲಿ 55 ದೇಶಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಈ ಸಿನಿಮಾಗೆ ವಿಲಿಯಂ ಡೇವಿಡ್ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಸೇರಿದಂತೆ ಬಹು ತಾರಾಬಳಗ ಸಿನಿಮಾದಲ್ಲಿದೆ. ಈ ಸಿನಿಮಾದ ಶೇ. 90ರಷ್ಟು ಭಾಗ ಚಿತ್ರೀಕರಣ ಸೆಟ್‍ನಲ್ಲಿ ಆಗಿದೆ. ಜಾಕ್ವೆಲಿನ್ ನಟಿಸಿರುವ ದೃಶ್ಯ, ಹಾಡಿನ ಚಿತ್ರೀಕರಣಕ್ಕೆ ಮತ್ತು ಸಂಭಾವನೆ ಸೇರಿ 5 ಕೋಟಿ ರೂಪಾಯಿ ಖರ್ಚು ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ಜಾಕ್ವೆಲಿನ್ ಜೊತೆ ಫೇವರೆಟ್ ಫೋಟೋ ಶೇರ್ ಮಾಡಿದ ಸುದೀಪ್

    ಜಾಕ್ವೆಲಿನ್ ಜೊತೆ ಫೇವರೆಟ್ ಫೋಟೋ ಶೇರ್ ಮಾಡಿದ ಸುದೀಪ್

    ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆಗಿರುವ ತಮ್ಮ ನೆಚ್ಚಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್‍ನಲ್ಲಿ ಮೂಡಿ ಬರುತ್ತಿರುವ ಬುಹು ನೀರಿಕ್ಷಿತ ಸಿನಿಮಾ ವಿಕ್ರಾಂತ್ ರೋಣ. ಈ ಚಿತ್ರದ ಸ್ಪೆಷಲ್ ಹಾಡೊಂದಕ್ಕೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸುದೀಪ್ ಜೊತೆ ಹೆಜ್ಜೆ ಹಾಕಿದ್ದು, ಈ ಹಾಡು ಕಿಚ್ಚನ ಅಭಿಮಾನಿಗಳಲ್ಲಿ ಬಹಳಷ್ಟು ಕುತೂಹಲ ಹೆಚ್ಚಿಸಿದೆ.

    ಸದ್ಯ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಜಾಕ್ವೆಲಿನ್ ಜೊತೆ ಕಿಚ್ಚ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದು, ಅದರಲ್ಲಿ ತಮ್ಮ ನೆಚ್ಚಿನ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಜಾಕ್ವೆಲಿನ್ ಜೊತೆಗೆ ನನ್ನ ಎರಡು ಫೇವರೆಂಟ್ ಫೋಟೋಗಳು. ಮಾಸ್ಟರ್ ನೀವು ಅದ್ಭುತ, ಹುಕ್ ಸ್ಟೆಪ್ಸ್ ಸೂಪರ್ ಆಗಿ ಕಾಣಿಸುತ್ತದೆ. ಶಿವು ಅವರು ಹಾಕಿದ್ದ ಸೆಟ್ ಬಹಳ ದೊಡ್ಡದಾಗಿತ್ತು, ಜಾಕ್ ಮಂಜುಗೆ ವಿಶೇಷ ಧನ್ಯವಾದ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ವಿಕ್ರಾಂತ್ ರೋಣಾಗಾಗಿ ಬಾಲಿವುಡ್ ನಟಿ ಜಾಕ್ವೆಲಿನ್ ಫನಾರ್ಂಡಿಸ್ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದಾರೆ. ಚಿತ್ರದಲ್ಲಿ ಜಾಕ್ವೆಲಿನ್ ಒಂದು ಹಾಡಿಗೆ ನೃತ್ಯವನ್ನು ಮಾತ್ರ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಇವರು ಕೆಲವು ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರಂತೆ. ಅದಕ್ಕಾಗಿ ಅವರು ಕನ್ನಡವನ್ನು ಕಲಿತು ನಟಿಸಿದ್ದಾರೆ ಎಂಬ ಮಾಹಿತಿ ವಿಕ್ರಾಂತ್ ರೋಣ ಸೆಟ್‍ನಿಂದ ಸಿಕ್ಕಿದೆ. ಇದನ್ನೂ ಓದಿ: ವಿಕ್ರಾಂತ್ ರೋಣಗಾಗಿ ಕನ್ನಡ ಕಲಿತ ಜಾಕ್ವೆಲಿನ್

     

  • ವಿಕ್ರಾಂತ್ ರೋಣಗಾಗಿ ಕನ್ನಡ ಕಲಿತ ಜಾಕ್ವೆಲಿನ್

    ವಿಕ್ರಾಂತ್ ರೋಣಗಾಗಿ ಕನ್ನಡ ಕಲಿತ ಜಾಕ್ವೆಲಿನ್

    ಬೆಂಗಳೂರು: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ಸ್ಯಾಂಡಲ್‍ವುಡ್ ನಟ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಗೊತ್ತಿರುವ ವಿಷಯವಾಗಿದೆ. ಆದರೆ ಈ ನಟಿ ಸಿನಿಮಾಕ್ಕಾಗಿ ಕನ್ನಡವನ್ನು ಕಲಿತು ಸುದ್ದಿಯಾಗಿದ್ದಾರೆ.

    ಕಿಚ್ಚ ಸುದೀಪ್ ನಟನೆಯ ಬಹುನೀರಿಕ್ಷಿತ ಸಿನಿಮಾ ವಿಕ್ರಾಂತ್ ರೋಣಾಗಾಗಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದಾರೆ. ಚಿತ್ರದಲ್ಲಿ ಜಾಕ್ವೆಲಿನ್ ಒಂದು ಹಾಡಿಗೆ ನೃತ್ಯವನ್ನು ಮಾತ್ರ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಇವರು ಕೆಲವು ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರಂತೆ. ಅದಕ್ಕಾಗಿ ಅವರು ಕನ್ನಡವನ್ನು ಕಲಿತು ನಟಿಸಿದ್ದಾರೆ ಎಂಬ ಮಾಹಿತಿ ವಿಕ್ರಾಂತ್ ರೋಣ ಸೆಟ್‍ನಿಂದ ಸಿಕ್ಕಿದೆ.

    ವಿಕ್ರಾಂತ್ ರೋಣ ಭಾರತೀಯ ಕಥೆಯನ್ನು ವಿಶ್ವಮಟ್ಟದಲ್ಲಿ ಹೇಳುವಂತಹ ಪ್ರಯತ್ನವಾಗಿದೆ. ನಾನು ಈ ಸಿನಿಮಾ ಭಾಗವಾಗಿದ್ದು ಖುಷಿಯ ವಿಚಾರವಾಗಿದೆ. ಸಿನಿಮಾದಲ್ಲಿ ನಾನು ಇರುವ ದೃಶ್ಯಗಳು ಮತ್ತು ಹಾಡು ಅದ್ಭುತವಾಗಿ ಮೂಡಿಬಂದಿದೆ ಎಂದು ಜಾಕ್ವೆಲಿನ್ ಫರ್ನಾಂಡಿಸ್ ಹೇಳಿದ್ದಾರೆ.

    ಜಾಕ್ವೆಲಿನ್ ಫರ್ನಾಂಡಿಸ್ ನಮ್ಮ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಬಹಳ ವಿಶೇಷ ಎಂದು ನಮಗೆ ಅನಿಸುತ್ತದೆ. ಈ ಹಾಡು ಮತ್ತು ಅವರು ಕಾಣಿಸಿಕೊಂಡಿರುವ ಅಷ್ಟೂ ದೃಶ್ಯಗಳು ನೋಡುಗರಿಗೆ ವಿಶೇಷ ಅನುಭವವನ್ನು ನೀಡುತ್ತದೆ. ಇದಕ್ಕಾಗಿ ಬೆಂಗಳೂರಿನ ಕಂಠೀರವ ಸೆಟ್‍ನಲ್ಲಿ ಆರು ದಿನಗಳ ಕಾಲ ವಿಭಿನ್ನವಾದ ಸೆಟ್ ಹಾಕಿ ಚಿತ್ರೀಕರಿಸಿದ್ದೇವೆ ಎಂದು ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದಾರೆ.

    ಜಾಕ್ವೆಲಿನ್ ಫರ್ನಾಂಡಿಸ್ ಆರು ದಿನಗಳ ಕಾಲ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡ ಡೈಲಾಗ್‍ಗಳನ್ನು ಪ್ರಾಕ್ಟೀಸ್ ಮಾಡಿಕೊಂಡು ಬಂದು ಹೇಳಿದ್ದಾರೆ. ಅವರು ಇರುವ ದೃಶ್ಯಗಳಿಗೆ ಅವರಿಂದಲೇ ಡಬ್ಬಿಂಗ್ ಮಾಡಿಸಬೇಕು ಎನ್ನುವ ಪ್ಲ್ಯಾನ್ ಇದೆ ಎಂದು ಅನೂಪ್ ಭಂಡಾರಿ ಹೇಳಿದ್ದಾರೆ.

    ಸಿನಿಮಾದಲ್ಲಿ ನನ್ನೊಂದಿಗೆ ಹೆಜ್ಜೆ ಹಾಕಿ ಹಾಡಿಗೆ ಇನ್ನಷ್ಟು ಎನರ್ಜಿಯನ್ನು ತಂದುಕೊಟ್ಟಿರುವುದಕ್ಕೆ ಧನ್ಯವಾದಗಳು. ನೀವು ಡಾನ್ಸ್ ಮಾಡುವುದನ್ನು ನೋಡಿ ನನಗೂ ಡಾನ್ಸ್ ಮಾಡಲು ಪ್ರೇರಣೆ ಸಿಕ್ಕಿದೆ. ನಮ್ಮ ಚಿತ್ರದಲ್ಲಿ ನೀವು ಭಾಗಿಯಾಗಿರುವುದಕ್ಕೆ ಧನ್ಯವಾದಗಳು ಜಾಕ್ವೆಲಿನ್ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

    ವಿಕ್ರಾಂತ್ ರೋಣ ಈ ಹಾಡಿಗೆ ಕೆಜಿಎಫ್ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್ ಅದ್ಭುತವಾದ ಸೆಟ್ ಹಾಕಿದ್ದರು. 250 ಮಂದಿ ನೃತ್ಯ ಕಲಾವಿದರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಖ್ಯಾತ ಕೊರಿಯಾಗ್ರಾಫರ್ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಜಾಕ್ವೆಲಿನ್ ಹಾಡಿನ ಜತಗೆ ಒಂದಷ್ಟು ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿರುವುದು ವಿಶೇಷವಾಗಿದೆ ಎಂದು ಜಾಕ್ ಮಂಜು ಹೇಳಿದ್ದಾರೆ.

    ವಿಕ್ರಾಂತ್ ರೋಣ 3ಡಿಯಲ್ಲಿ ಸಿದ್ಧವಾಗುತ್ತಿರುವ ಕನ್ನಡ ಸಿನಿಮಾವಾಗಿದ್ದು, 14 ಭಾಷೆಗಳಲ್ಲಿ 55 ದೇಶಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಈ ಸಿನಿಮಾಗೆ ವಿಲಿಯಂ ಡೇವಿಡ್ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಸೇರಿದಂತೆ ಬಹು ತಾರಾಬಳಗ ಸಿನಿಮಾದಲ್ಲಿದೆ. ಈ ಸಿನಿಮಾದ ಶೇ. 90ರಷ್ಟು ಭಾಗ ಚಿತ್ರೀಕರಣ ಸೆಟ್‍ನಲ್ಲಿ ಆಗಿದೆ. ಜಾಕ್ವೇಲಿನ್ ನಟಿಸಿರುವ ದೃಶ್ಯ, ಹಾಡಿನ ಚಿತ್ರೀಕರಣಕ್ಕೆ ಮತ್ತು ಸಂಭಾವನೆ ಸೇರಿ 5 ಕೋಟಿ ರೂಪಾಯಿ ಖರ್ಚು ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ವಿಕ್ರಾಂತ್ ರೋಣ ಡಬ್ಬಿಂಗ್ ಶುರು ಮಾಡಿದ ನಟ ಕಿಚ್ಚ

    ವಿಕ್ರಾಂತ್ ರೋಣ ಡಬ್ಬಿಂಗ್ ಶುರು ಮಾಡಿದ ನಟ ಕಿಚ್ಚ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಬಹುನೀರಿಕ್ಷೆಯನ್ನು ಹುಟ್ಟಿಸಿರುವ ಸಿನಿಮಾ ವಿಕ್ರಾಂತ್ ರೋಣ. ಕಿಚ್ಚ ಸುದೀಪ್ ತಮ್ಮ ಸಿನಿಮಾದ ಹೊಸ ಅಪ್ಡೇಟ್ಸ್ ಅನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಅಡುಗೆ ಮಾಡುವ ವರ ಬೇಕಾಗಿದ್ದಾನೆ- ಜಾಹೀರಾತು ವೈರಲ್

    ಕಿಚ್ಚ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣದ ಡಬ್ಬಿಂಗ್‍ ಕಾರ್ಯ ಶುರುವಾಗಿದೆ. ಬಹುದಿನಗಳ ನಂತರ ಸಿನಿಮಾ ಡಬ್ಬಿಂಗ್‍ಗಾಗಿ ಮೈಕ್ ಮುಂದೆ ನಿಂತಿರೋದಾಗಿ ಕಿಚ್ಚ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by KicchaSudeepa (@kichchasudeepa)

    ಅನುಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಸಿನಿಮಾ ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗೆ ಸುದೀಪ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಲಿದ್ಧಾರೆ. ತ್ರಿಡಿ ಟೆಕ್ನಾಲಜಿಯಲ್ಲಿ ಜಾಕ್ ಮಂಜು ನಿರ್ಮಾಣದಲ್ಲಿ ಈ ಬಿಗ್‍ ಬಜೆಟ್ ಸಿನಿಮಾ ಮೂಡಿಬರುತ್ತಿದೆ.

    ಸುದೀಪ್ ನಟನೆಯ ಮತ್ತೋಂದು ಸಿನಿಮಾ ಕೋಟಿಗೊಬ್ಬ3 ಅಗಸ್ಟ್ ತಿಂಗಳು ತೆರೆಕಾಣುವ ಸಾಧ್ಯತೆ ಇದೆ. ಕಿಚ್ಚನ ಅಭಿನಯವನ್ನು ತೆರೆ ಮೇಲೆ ಕಾಣಲು ಅಭಿಮಾನಿಗಳು ಕಾತುರರಾಗಿದ್ದಾರೆ.

  • ಬುರ್ಜ್‌ ಖಲೀಫಾದಲ್ಲಿ ರಾರಾಜಿಸಿದ ವಿಕ್ರಾಂತ್‌ ರೋಣ

    ಬುರ್ಜ್‌ ಖಲೀಫಾದಲ್ಲಿ ರಾರಾಜಿಸಿದ ವಿಕ್ರಾಂತ್‌ ರೋಣ

    ದುಬೈ: ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ `ವಿಕ್ರಾಂತ್ ರೋಣ’ದ ಟೈಟಲ್ ಲೋಗೋ ಲಾಂಚ್ ಆಗಿದೆ.

     

    ದುಬೈನ ಬುರ್ಜ್ ಖಲೀಫಾದ 148ನೇ ಮಹಡಿಯಲ್ಲಿ ಟೈಟಲ್ ಲೋಗೋ ರಿವೀಲ್ ಆಗಿದೆ. ಇದರ ಜೊತೆಗೆ 2 ಸಾವಿರ ಅಡಿ ಎತ್ತರದ ವರ್ಚೂವಲ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಇದೇ ವೇಳೆ ಕಿಚ್ಚನ 25 ವರ್ಷಗಳ ಸಿನಿ ಪಯಣ ಕುರಿತ 3 ನಿಮಿಷದ ವೀಡಿಯೋ ಪ್ರಸಾರವಾಗಿದೆ.

     

    ಬುರ್ಜ್‌ ಖಲೀಫಾ ಕಟ್ಟಡದಲ್ಲಿ 3 ನಿಮಿಷಗಳ ಕಾಲ ಇದ್ದ ಕಟೌಟ್‌ ನೋಡಿ ಸುದೀಪ್‌ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ಈ ಸುಂದರ ಸಂಭ್ರಮವನ್ನು 6 ಕ್ಯಾಮೆರಾದಲ್ಲಿ ಕಿಚ್ಚನ ತಂಡ ಸೆರೆ ಹಿಡಿದಿದೆ.


    ಚಿತ್ರರಂಗದಲ್ಲಿ 25 ವರ್ಷಗಳು ಪೂರೈಸಿರುವ ಕಿಚ್ಚ ಸುದೀಪ್‍ಗೆ ಸಿನಿರಂಗದ ಹಲವು ಗಣ್ಯರು ಶುಭಹಾರೈಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ಮೋಹನ್‍ಲಾಲ್, ರಮ್ಯಕೃಷ್ಣ, ಪ್ರಿಯಾಮಣಿ ಸೇರಿದಂತೆ ಹಲವು ಕಲಾವಿದರು ಅಭಿನಂದನೆ ಸಲ್ಲಿಸಿದ್ದಾರೆ.

  • ಹೋಟೆಲಲ್ಲಿ ‘ಕಿಂಗ್ ಕಿಚ್ಚ’ ಅಂತ ದೊಡ್ಡ ನಾನ್ ಕೊಟ್ಟು ಸರ್ಪ್ರೈಸ್ ನೀಡಿದ್ರು: ಕಿಚ್ಚ

    ಹೋಟೆಲಲ್ಲಿ ‘ಕಿಂಗ್ ಕಿಚ್ಚ’ ಅಂತ ದೊಡ್ಡ ನಾನ್ ಕೊಟ್ಟು ಸರ್ಪ್ರೈಸ್ ನೀಡಿದ್ರು: ಕಿಚ್ಚ

    – ಜೀವನದ ಬ್ಯೂಟಿಯನ್ನು ವರ್ಣಿಸಿದ ಸುದೀಪ್
    – ದುಬೈನಿಂದ ಪಬ್ಲಿಕ್ ಟಿವಿ ಪ್ರಶ್ನೆಗಳಿಗೆ ವಿಕ್ರಾಂತ್ ರೋಣ ಉತ್ತರ

    ಬೆಂಗಳೂರು/ ಸೌದಿ ಅರೇಬಿಯಾ: ಇವತ್ತಿನ ಯುವಜನತೆ ನಮಗೆ ಪ್ರೇರಣೆ. ಎಂಜಿನಿಯರಿಂಗ್ ಮಾಡಿ ದುಡ್ಡು ಕೊಟ್ಟು ಕಲಿತ ವಿದ್ಯೆ, ನಾಲೆಡ್ಜ್ ತಲೇಲಿ ಕೂರಲಿಲ್ಲ. ಆವಾಗ ಏನಾದ್ರೂ ಮಾಡಲೇಬೇಕು ಅಂದ್ಕೊಂಡೆ. ಆಗ ಪ್ರಿಯಾನ ಇನ್ನೂ ಮದುವೆಯಾಗಿರಲಿಲ್ಲ. ಆಗ ಅವಳು ಗರ್ಲ್ ಫ್ರೆಂಡ್. ಬಾ ನನ್ನ ಪಿಕ್ಚರ್ ನೋಡೋಣ ಅಂತ ಕರ್ಕೊಂಡು ಹೋದೆ. ಥಿಯೇಟರಲ್ಲಿ ಐದೇ ಜನ ಇದ್ದರು. ಆಗ ಒಂದು ಹೌಸ್ ಫುಲ್ ಬೇಕಾಗಿತ್ತು. ಅದಾದ ಮೇಲೆ ಒಳ್ಳೊಳ್ಳೆಯ ಸಿನೆಮಾ ಬಂತು. ಒಳ್ಳೆಯ ನಿರ್ದೇಶಕರು ಸಿಕ್ಕಿದ್ರು. ಫ್ಲೋ ಜೊತೆ ನಾನು ಹೋದೆ ಎಂದು ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ 25 ವರ್ಷದ ಸಿನಿ ಜರ್ನಿಯ ಬಗ್ಗೆ ಮೆಲುಕು ಹಾಕಿಕೊಂಡರು.

    ಸಿನಿಮಾ ಸಂಬಂಧ ಈಗಾಗಲೇ ದುಬೈ ತಲುಪಿರುವ ಕಿಚ್ಚ ಇಂದು ಅಲ್ಲಿಂದಲೇ ಕರ್ನಾಟಕದ ಪತ್ರಕರ್ತರ ಜೊತೆ ಸಂಭಾಷಣೆ ನಡೆಸಿದ್ದಾರೆ. ಬೆಂಗಳೂರಿನ ಶಾರದಾ ಚಿತ್ರಮಂದಿರದಲ್ಲಿ ಕಿಚ್ಚ ನೇರಪ್ರಸಾರದಲ್ಲಿ ಮಾತನಾಡಿದ್ದು, ಈ ವೇಳೆ ಪಬ್ಲಿಕ್ ಟಿವಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನಾನು ಯಾವುದೇ ಅಜೆಂಡಾ ಹಾಕಿ ಕೂರಲಿಲ್ಲ. ಅದರಿಂದ ನನಗೆ ತೃಪ್ತಿ ಸಿಕ್ಕಿತು. 25 ವರ್ಷ ಆದ ಮೇಲೆಯೂ ಜನ ಬರ್ತಾರಂದ್ರೆ ಸಿನೆಮಾ ನಮ್ಮ ಕೈಹಿಡಿದಿರುತ್ತೆ. ಅದೇ ನಮಗೆ ಮುಖ್ಯ, ಅದೇ ನಮಗೆ ಗೌರವ. ಎಷ್ಟೋ ಹೀರೋಗಳಿದ್ದಾರೆ. ಅವರ ನಡುವೆಯೂ ಜನ ಬರ್ತಿರೋದು ನೋಡಿ ನನಗೆ ಖುಷಿಯಿದೆ ಎಂದು ಸಂತಸ ಹಂಚಿಕೊಂಡರು.

     2012ರಲ್ಲಿ ದುಬೈಗೆ ಬಂದಿದ್ದೆ. ಆಗ ನಾನೇ ಕ್ಯಾಬ್ ಬುಕ್ ಮಾಡಿದ್ದೆ. ಹೋಟೆಲಿಂದ ಬಂದು ಪಿಕ್ ಅಪ್ ಮಾಡಿದ್ರು. ಆಗ ಮಗಳು ಇನ್ನೂ ಚಿಕ್ಕವಳಿದ್ಳು. ಮೊನ್ನೆ ಬಂದಾಗ ನಿರ್ಮಾಪಕರು ಕಾರು ಮಾಡಿರ್ತಾರೆ ಅಂದ್ಕೊಂಡಿದ್ದೆ. ಲೆಗ್ ಸ್ಪೇಸ್ ಜಾಸ್ತಿ ಇರೋ ಕಾರು ಬೇಕು ಅಂತ ಕೇಳಿದ್ದೆ. ಚಿಕ್ಕ ಕಾರು ಹಾಕ್ಬಿಟ್ಟೀಯಾ ಅಂತ ಹೇಳಿದ್ದೆ. ಇಲ್ಲಿ ಬಂದಾಗ ಸಿಕ್ಕಿದ ಸ್ವಾಗತ ನೋಡಿ ಆಶ್ಚರ್ಯ ಆಯ್ತು ಎಂದರು.

    ನಿನ್ನೆ ತುಂಬಾ ಹೊಟ್ಟೆ ಹಸೀತಾ ಇತ್ತು. ಫ್ಯಾಮಿಲಿ ಜೊತೆ ಹೋಟೆಲ್ ಗೆ ಹೋಗಿದ್ವಿ. ಸಿಝಾನ್ ಬುರಾಕ್ ಹೋಟೆಲ್ ಗೆ ಹೋಗಿದ್ವಿ. ಅಲ್ಲಿ ಹೋದಾಗ ದೊಡ್ಡ ನಾನ್ ಮಾಡ್ಕೊಂಡು ಬಂದ್ರು. ಅದ್ರಲ್ಲಿ ಕಿಂಗ್ ಕಿಚ್ಚ ಅಂತ ಬರೆದಿದ್ರು. ಇದೆಲ್ಲವೂ ನನಗೆ ಹೊಸದು, ನಾನು ಕೇಳಿರಲಿಲ್ಲ. ನನಗೆ ಸ್ಪೆಷಲ್ ಫೀಲ್ ಮಾಡಿದ್ರು. ನನ್ನ ಪರಿಚಯ ಇವರಿಗೆ ಯಾವಾಗ ಆಯ್ತು ಅಂದ್ಕೊಂಡೆ. ಇವರು ಯಾವಾಗ ನನ್ನ ನೋಡಿದ್ರು. ಇದೆಲ್ಲವೂ ನನಗೆ ಸರ್ ಪ್ರೈಸ್. ಪಾಕಿಸ್ತಾನಿಗಳು ಬಂದು ಫೋಟೋ ತೆಗೆಸಿಕೊಂಡ್ರು. ಅದೇ ಜೀವನದ ಬ್ಯೂಟಿ ಎಂದು ಕಿಚ್ಚ ಬಣ್ಣಿಸಿದರು.

    ಯಾವುದರಿಂದ ಬೆಳೆದ್ವಿ, ಯಾರಿಂದ ಬೆಳೆದ್ವಿ ಅನ್ನೋದಕ್ಕಿಂತ ಬೆಳೆದ್ವಿ, ಕೈಹಿಡ್ಕೊಂಡು ಕರ್ಕೊಂಡು ಹೋಯಿತು. ಬುರ್ಜ್ ಖಲೀಫಾ ಮುಂದೆ ನಿಂತ್ಕೊಂಡು ಹೇಗೆ ಬರಬಹುದು, ಹೇಗೆ ಕಾಣಬಹುದು ಟೈಟಲ್ ಅಂತ ಯೋಚನೆ ಮಾಡ್ತೀವಿ. ಈ ಸಿನೆಮಾದಲ್ಲಿರೋರು ಎಲ್ಲರೂ ಹೊಸಬರು. ಅವರೆಲ್ಲ ನನಗಿಂತ ಜಾಸ್ತಿ ಎಕ್ಸೈಟ್ ಆಗಿದ್ದಾರೆ. ನನ್ನ ಪಿಚ್ಚರ್ ರಿಲೀಸ್ ಆದಾಗ ಐದು ಜನ ಇರಲಿಲ್ಲ. ನಿಮಗೆ ಒಂದು, ಎರಡು ಪಿಕ್ಚರ್ ಗೇ ಈ ಪುಣ್ಯ ಸಿಗ್ತಾ ಇದೆ ಅಂತ ಹೇಳ್ತಿರ್ತೀನಿ. ಇವೆಲ್ಲವೂ ನೈಸ್ ಫೀಲಿಂಗ್ ಎಂದು ಹೇಳಿದರು.

  • ಬುರ್ಜ್ ಖಲೀಫ ಮೇಲೆ ವಿಜೃಂಭಿಸಲಿದ್ದಾನೆ ವಿಕ್ರಾಂತ್ ರೋಣ..!

    ಬುರ್ಜ್ ಖಲೀಫ ಮೇಲೆ ವಿಜೃಂಭಿಸಲಿದ್ದಾನೆ ವಿಕ್ರಾಂತ್ ರೋಣ..!

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಫ್ಯಾಂಟಮ್’ ಹೆಸರು ಬದಲಾಗಿದ್ದು, ಇದೀಗ ವಿಕ್ರಾಂತ್ ರೋಣನಾಗಿ ಜನವರಿ 31ರಂದು ಬುರ್ಜ್ ಖಲೀಫ ಮೇಲೆ ಅಬ್ಬರಿಸಲಿದ್ದಾನೆ.

    ಹೌದು. ಈ ಸಂಬಂಧ ನಿರ್ದೇಶಕ ಅನೂಪ್ ಭಂಡಾರಿ ಅವರು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. ಜನವರಿ 31 ರಂದು ಟೈಟಲ್ ಲೋಗೋ ಹಾಗೂ 3 ನಿಮಿಷದ ವೀಡಿಯೋವನ್ನು ಬುರ್ಜ್ ಖಲೀಫ ಮೇಲೆ ರಿವೀಲ್ ಮಾಡೋದಾಗಿ ತಿಳಿಸಿದ್ದಾರೆ.

    ಈ ಹಿಂದೆ ಫ್ಯಾಂಟಮ್ ಲೋಕದ ಸೃಷ್ಟಿಕರ್ತ ಅನೂಪ್ ಭಂಡಾರಿ ಟ್ವೀಟ್ ಮಾಡಿ, ಇದೇ ಜನವರಿ 21ಕ್ಕೆ ಚಿತ್ರತಂಡದಿಂದ ದೊಡ್ಡ ಘೋಷಣೆಯೊಂದು ಹೊರ ಬೀಳಲಿದೆ ಎಂದು ತಿಳಿಸಿದ್ದರು. ಈ ಅನೌನ್ಸ್ ಜೊತೆ ಹೆಗಲ ಮೇಲೆ ಗನ್ ಹಿಡಿದು, ಬೆರಳಲ್ಲಿ ಟಿಗರ್ ಹಿಡಿದು ಮಾಸ್ಕ್ ತೊಟ್ಟ ವಿಕ್ರಾಂತ್ ರೋಣನ ಲುಕ್ ಸಹ ಔಟ್ ಆಗಿತ್ತು. ಇದು ದೊಡ್ಡ ಅನೌನ್ಸ್‍ಮೆಂಟ್ ಮುಂಚೆನೇ ಕಿಚ್ಚನ ಬಳಗಕ್ಕೆ ಊಟಕ್ಕೆ ಮೊದಲೇ ಜಿಲೇಬಿ ಸಿಕ್ಕಂತಾಗಿತ್ತು. ಪಕ್ಕಾ 90ರ ದಶಕದ ಹೀರೋಗಳ ಸ್ಟೈಲಿನಲ್ಲಿ ಕ್ಯಾಪ್, ಜಾಕೆಟ್ ಕಾಣಿಸಿಕೊಂಡಿರುವ ಸುದೀಪ್ ಕಣ್ಣುಗಳು ನೋಡುಗರನ್ನ ಸೆಳೆಯುತ್ತಿವೆ.

    ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್ ಕೂಡ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಜಾಕ್ ಮಂಜು ಮತ್ತು ಅಲಂಕಾರ್ ಪಾಂಡಿಯನ್ ನಿರ್ಮಾಣ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

  • ಗನ್ ಹಿಡಿದು ಕೋಟೆಯ ರಾಜನಾದ ವಿಕ್ರಾಂತ್ ರೋಣ

    ಗನ್ ಹಿಡಿದು ಕೋಟೆಯ ರಾಜನಾದ ವಿಕ್ರಾಂತ್ ರೋಣ

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾದ ಮೊದಲ ಫಸ್ಟ್‌ಲುಕ್ ಪೋಸ್ಟರ್ ರಿಲೀಸ್ ಆಗಿದೆ.

    ಚಿತ್ರತಂಡ ಸಣ್ಣ ಸಣ್ಣ ವಿಡಿಯೋ ರಿಲೀಸ್ ಮಾಡುವ ಮೂಲಕ ಸದ್ದು ಮಾಡುತ್ತಿತ್ತು. ಇದೀಗ ಚಿತ್ರದ ನಾಯಕನ ಫಸ್ಟ್‌ಲುಕ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.

    ನಿರ್ದೇಶಕ ಅನೂಪ್ ಭಂಡಾರಿ ಅವರು ಇಂದು ಸಿನಿಮಾದ ಫಸ್ಟ್‌ಲುಕ್ ರಿಲೀಸ್ ಮಾಡುವ ಬಗ್ಗೆ ಭಾನುವಾರವೇ ಮಾಹಿತಿ ನೀಡಿದ್ದರು. ಅದರಂತೆಯೇ ಇಂದು ಅಭಿಮಾನಿಗಳಿಗೆ ಟ್ವಿಟ್ಟರಿನಲ್ಲಿ ವಿಕ್ರಾಂತ್ ರೋಣನ ದರ್ಶನ ಮಾಡಿಸಿದ್ದಾರೆ. ರಿಲೀಸ್ ಆಗಿರುವ ಪೋಸ್ಟರ್ ಅದ್ಭುತವಾಗಿ ಮೂಡಿ ಬಂದಿದ್ದು, ಸುದೀಪ್ ಖಡಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

    ಫ್ಯಾಂಟಮ್ ಕೋಟೆಯ ಬಾಗಿಲಲ್ಲಿ ಪಿಸ್ತೂಲ್ ಹಿಡಿದು ಸುದೀಪ್ ಕುಳಿತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಮೊತ್ತೊಂದು ಕಡೆ ಚಾಟಿ ಇರುವುದನ್ನು ನೋಡಬಹುದು. ಆ ಕೋಟೆಯ ಮೇಲೆ ದಿ ವರ್ಲ್ಡ್ ಆಫ್ ಫ್ಯಾಂಟಮ್‍ಗೆ ಸ್ವಾಗತ ಎಂದು ಬರೆಯಲಾಗಿದೆ. ಇನ್ನೂ ಕೆಳಗೆ ಬಾದ್‍ಷಾ ವಿಕ್ರಾಂತ್ ರೋಣ ಆಗಿ ಕಿಚ್ಚ ಸುದೀಪ್” ಎಂದು ಬರೆಯಲಾಗಿದೆ.

    “ವಿಕ್ರಾಂತ್ ರೋಣನ ಹೆಸರಲ್ಲಿ ಎಷ್ಟು ಪವರ್ ಇದಿಯೋ ಆ ಪಾತ್ರ ಕೂಡ ಅಷ್ಟೇ ಪವರ್ ಫುಲ್ ಆಗಿದೆ. ವಿಕ್ರಾಂತ್ ರೋಣ ಏನು ಮಾಡುತ್ತಾನೆ, ಹೇಗೆ, ಏಕೆ ಮಾಡುತ್ತಾನೆ ಎಂದು ಯಾರಿಗೂ ಅರ್ಥವಾಗುವುದಿಲ್ಲ. ಆದರೆ ಅವನು ಏನೇ ಮಾಡಿದರೂ ಅದಕ್ಕೆ ಒಂದು ಕಾರಣ ಇರುತ್ತದೆ” ಎಂದು ನಿರ್ದೇಶಕ ಅನುಪ್ ಭಂಡಾರಿ ಹೇಳುವ ಮೂಲಕ ಪೋಸ್ಟರ್ ರಿಲೀಸ್ ಮಾಡಿದ್ದಾರೆ.