ಸ್ಯಾಂಡಲ್‌ವುಡ್‌ನಲ್ಲಿ ಮಾತ್ರ ಅಲ್ಲ ದೇಶದ ಮೂಲೆ ಮೂಲೆಯಲ್ಲೂ ಕಿಚ್ಚ ಸುದೀಪ್ ಅವರದ್ದೇ ಹವಾ. ಸದ್ಯ `ವಿಕ್ರಾಂತ್ ರೋಣ’ ಚಿತ್ರ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಪ್ರಚಾರದ ನಡುವೆಯೂ ಸಂಕಷ್ಟದಲ್ಲಿರುವ ಓರ್ವ ಮಹಿಳೆಗೆ ಸುದೀಪ್ ಸಹಾಯ ಮಾಡಿದ್ದಾರೆ.

ಸದ್ಯ ರಿಲೀಸ್‌ಗೆ ರೆಡಿಯಿರುವ `ವಿಕ್ರಾಂತ್ ರೋಣ’ ಸಿನಿಮಾ ಪ್ರಚಾರದಲ್ಲಿ ಸುದೀಪ್ ಬ್ಯುಸಿಯಾಗಿದ್ದರೂ ಅವರ ಸಮಾಜ ಸೇವೆ ಕೆಲಸಗಳು ಮಾತ್ರ ನಿರಂತರವಾಗಿ ನಡೆಯುತ್ತಿವೆ. ತೆರೆಯ ಮರೆಯಲ್ಲಿ ಕಿಚ್ಚ ಸುದೀಪ್ ಬಡವರಿಗೆ, ಶ್ರಮಿಕರಿಗೆ ಸಹಾಯ ಮಾಡುವುದನ್ನು ಮರೆಯುವುದಿಲ್ಲ. ಈಗ ತಮ್ಮದೇ ಟ್ರಸ್ಟ್ ಮೂಲಕ ಸಮಾಜಮುಖಿ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಈಗ ಅನಾಥ ಮಹಿಳೆಯ ಸಂಕಷ್ಟಕ್ಕೆ ಸುದೀಪ್ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ನಟ ನರೇಶ್ ಆತ್ಮೀಯರಾಗಿದ್ದು ದುಡ್ಡಿನ ಕಾರಣಕ್ಕೆ ಅಲ್ಲ, ನಾನು ದುಡ್ಡಿನ ಹಿಂದೆ ಹೋಗಿಲ್ಲ : ನಟಿ ಪವಿತ್ರಾ ಲೋಕೇಶ್

ಚಿತ್ರದುರ್ಗದ ಚಳ್ಳಕೆರೆಯ ಪುಟ್ಟ ಗ್ರಾಮದ ಅನಾಥೆ ಮಹಿಳೆ ಹೊನ್ನೂರಮ್ಮ ಒಂದು ಹಳೆಯ ಮನೆಯಿತ್ತು ಬೀಳುವ ಸ್ಥಿತಿಯಲ್ಲಿತ್ತು. ಈ ವಿಚಾರ ಸುದೀಪ್‌ಗೆ ತಿಳಿದ ಬೆನ್ನಲ್ಲೇ, ಹಳೆ ಮನೆ ದುರಸ್ಥಿ ಮಾಡಿಸಿ, ಖಾಲಿಯಿದ್ದ ಜಾಗದಲ್ಲಿ ಪುಟ್ಟದೊಂದು ಶೀಟ್ ಮನೆ ಕಟ್ಟಿಸಿ ಕೊಟ್ಟಿದ್ದಾರೆ.ಸುಮಾರು 2 ಲಕ್ಷ ರೂ ವೆಚ್ಚದಲ್ಲಿ ಒಂದು ಕೋಣೆ, ಬಚ್ಚಲುಮನೆ ಇರೋ ಪುಟ್ಟ ಶೀಟ್ ಮನೆ ಕಟ್ಟಿಸಿದ್ದಾರೆ. ಅಗತ್ಯದ ವೇಳೆಯಲ್ಲಿ ಸುದೀಪ್ ಸಹಾಯ ಮಾಡಿರುವುದಕ್ಕೆ ಹೊನ್ನೂರಮ್ಮ ಧನ್ಯವಾದ ತಿಳಿಸಿದ್ದಾರೆ. ಕಿಚ್ಚನ ನಡೆಯಿಂದ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.













ಇದೀಗ ಹೊರ ರಾಜ್ಯ, ಹೊರ ದೇಶ ಎಲ್ಲಾ ಕಡೆ ಕನ್ನಡ ಸಿನಿಮಾಗಳು ಸದ್ದು ಮಾಡುತ್ತಿದೆ. `ಕೆಜಿಎಫ್ 2′ ಭರ್ಜರಿ ಸಕ್ಸಸ್ ನಂತರ ಕನ್ನಡದ `ವಿಕ್ರಾಂತ್ ರೋಣ’ ಸಿನಿಮಾಗೆ ವಿದೇಶದ ವಿತರಕರು ಮಣೆ ಹಾಕಿದ್ದಾರೆ. ಇನ್ನು ರಿಲೀಸ್‌ಗೂ ಮುನ್ನವೇ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದ ಹಕ್ಕನ್ನು ಭಾರೀ ಮೊತ್ತಕ್ಕೆ ಖರೀದಿಸಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ.










