Tag: Vikrant Rona

  • ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್

    ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಕುರಿತು ಭಾರತೀಯ ಸಿನಿಮಾ ರಂಗದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸಿನಿ ಪ್ರಿಯರ ನಿರೀಕ್ಷೆ ಹೆಚ್ಚು ಮಾಡಿದೆ. ಈ ಸಿನಿಮಾ ಹೇಗಿರಬಹುದು? ಸುದೀಪ್ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿರಬಹುದು? ಇದು ಯಾವ ರೀತಿಯ ಸಿನಿಮಾ? ಹೀಗೆ ಅಭಿಮಾನಿಗಳಲ್ಲಿ ನೂರಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಅದಕ್ಕೆ ಕೆಲವು ಉತ್ತರಗಳನ್ನು ನೀಡಿದ್ದಾರೆ ನಟ ರಮೇಶ್ ಅರವಿಂದ್.

    ವಾರದ ಹಿಂದೆಯಷ್ಟೇ ವಿಕ್ರಾಂತ್ ರೋಣ ಸಿನಿಮಾವನ್ನು ವೀಕ್ಷಿಸಿರುವ ರಮೇಶ್ ಅರವಿಂದ್, ಆ ಸಿನಿಮಾದ ಬಗೆಗಿನ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾವನ್ನು ನೋಡಿದ ಮೊದಲ ಕನ್ನಡದ ಸೆಲಿಬ್ರಿಟಿ ಕೂಡ ಇವರಾಗಿದ್ದಾರೆ. ಹಾಗಾಗಿ ಸೆಲಿಬ್ರಿಟಿಯೊಬ್ಬರು ಮೊದಲ ಬಾರಿಗೆ ನೀಡಿದ ವಿಮರ್ಶೆ ಕೂಡ ಇದಾಗಿದೆ. ಇದನ್ನೂ ಓದಿ: ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

    ನಿನ್ನ ಬೆಂಗಳೂರಿನ ವೀರಲೋಕ ಬುಕ್ಸ್ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಿಚ್ಚ ಸುದೀಪ್ ಮತ್ತು ರಮೇಶ್ ಅರವಿಂದ್ ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಅರವಿಂದ್, ‘ನಟನೊಬ್ಬ ಸಿನಿಮಾ ರಿಲೀಸ್‌ಗೂ ಮುನ್ನ ತಮ್ಮ ಸಿನಿಮಾ ತೋರಿಸುವುದಕ್ಕೆ ಧೈರ್ಯಬೇಕು. ಅಂತಹ ಧೈರ್ಯವಂತ ಸುದೀಪ್, ತಮ್ಮ ಮನೆಗೆ ಕರೆಯಿಸಿಕೊಂಡು ವಿಕ್ರಾಂತ್ ರೋಣ ಸಿನಿಮಾ ತೋರಿಸಿದರು. ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಫ್ಯಾಂಟಸಿ ಜಗತ್ತನ್ನೇ ಅವರು ಕ್ರಿಯೇಟ್ ಮಾಡಿದ್ದಾರೆ. ಅಲ್ಲದೇ, ಇದೊಂದು ಕುತೂಹಲ ಮೂಡಿಸುವಂತಹ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾ ಎಂದು ಹಾಡಿಹೊಗಳಿದರು.

    ಭಾರತೀಯ ಸಿನಿಮಾ ರಂಗದಲ್ಲಿ ವಿಕ್ರಾಂತ್ ರೋಣ ಸಿನಿಮಾ ಮತ್ತೊಂದು ದಾಖಲೆ ಮಾಡುವಂತಹ ಚಿತ್ರವಾಗಲಿದೆ. ಒಂದೊಳ್ಳೆ ಸಿನಿಮಾವನ್ನು ನೋಡಿದ ಖುಷಿ ನನ್ನಲ್ಲಿ ಉಳಿಸಿದೆ. ಅಂತಹ ಅದ್ಧೂರಿ ಚಿತ್ರ ಮಾಡಿದ್ದಾರೆ ಸುದೀಪ್ ಅಂದರು. ಅಂದಹಾಗೆ ಈ ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ಅವರು ನಿರ್ಮಾಪಕರು.

  • ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಾಳೆ ‘ರಾ.. ರಾ.. ರಕ್ಕಮ್ಮ’ ಹಾಡಿಗೆ ನೂರಾರು ಕಲಾವಿದರ ನೃತ್ಯ

    ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಾಳೆ ‘ರಾ.. ರಾ.. ರಕ್ಕಮ್ಮ’ ಹಾಡಿಗೆ ನೂರಾರು ಕಲಾವಿದರ ನೃತ್ಯ

    ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ‘ರಾ.. ರಾ.. ರಕ್ಕಮ್ಮ’ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಅದರಲ್ಲೂ ಸುದೀಪ್ ಅವರು ರೀಲ್ ಮಾಡಿದ ನಂತರ, ಸಿಲೆಬ್ರಿಟಿಗಳು ಸೇರಿದಂತೆ ಸಾಕಷ್ಟು ಅಭಿಮಾನಿಗಳು ಈ ನೃತ್ಯಕ್ಕೆ ಡಾನ್ಸ್ ಮಾಡಿ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು. ಈ ಹಾಡು ಟ್ರೆಂಡ್ ಕೂಡ ಕ್ರಿಯೇಟ್ ಮಾಡಿತು. ಇದನ್ನೂ ಓದಿ : ಹಾಸ್ಯನಟ ನರಸಿಂಹರಾಜು ಹಿರಿಯ ಪುತ್ರಿ, ನಿರ್ದೇಶಕ ಅರವಿಂದ್ ತಾಯಿ ಧರ್ಮವತಿ ನಿಧನ

    ಇದೀಗ ಅದೇ ಹಾಡಿಗೆ 250ಕ್ಕೂ ಹೆಚ್ಚು ನುರಿತ ನೃತ್ಯ ಕಲಾವಿದರು ನಾಳೆ ಬೆಳಗ್ಗೆ 7 ಗಂಟೆಗೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಹೆಜ್ಜೆ ಹಾಕಲಿದ್ದಾರೆ. ಈ ಮೂಲಕ ದಾಖಲೆ ಮಾಡಲು ಮುಂದಾಗಿದ್ದಾರೆ. ನಾಳೆ ಬೆಳ್ಳಂಬೆಳಗ್ಗೆ ನೃತ್ಯ ಕಲಾವಿದರು ಹೆಜ್ಜೆ ಹಾಕಲಿದ್ದು, ಅಭಿಮಾನಿಗಳು ಕೂಡ ಇದರಲ್ಲಿ ಭಾಗಿ ಆಗಲಿದ್ದಾರಂತೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

    ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ರಾ ರಾ ರಕ್ಕಮ್ಮ ಹಾಡಿನಲ್ಲಿ ಸುದೀಪ್ ಮತ್ತು ಜಾಕ್ವೆಲಿನ್ ಡಾನ್ಸ್ ಮಾಡಿದ್ದಾರೆ. ಅದರಲ್ಲೂ ನೃತ್ಯ ಸಂಯೋಜನೆ ಮತ್ತು ಸಿಗ್ನೆಚರ್ ಸ್ಟಪ್ ಎಲ್ಲರನ್ನೂ ಆಕರ್ಷಿಸಿದೆ. ಕೇವಲ ಸಿನಿಮಾ ಮಂದಿ ಮಾತ್ರವಲ್ಲ, ಮಹಿಳಾ ಕ್ರಿಕೆಟ್ ಆಟಗಾರರು ಕೂಡ ಈ ಹಾಡಿಗೆ ನೃತ್ಯ ಮಾಡಿದ್ದಾರೆ. ಆ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  • ಕನ್ನಡದಲ್ಲೇ ಖುಷಿ ಹಂಚಿಕೊಂಡ ರಾ.. ರಾ.. ರಕ್ಕಮ್ಮ ಬೆಡಗಿ ಜಾಕ್ವಲಿನ್

    ಕನ್ನಡದಲ್ಲೇ ಖುಷಿ ಹಂಚಿಕೊಂಡ ರಾ.. ರಾ.. ರಕ್ಕಮ್ಮ ಬೆಡಗಿ ಜಾಕ್ವಲಿನ್

    ಬಾಲಿವುಡ್ ಖ್ಯಾತ ನಟಿ ಜಾಕ್ವಲಿನ್ ಫರ್ನಾಂಡಿಸ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ಲಿರಿಕಲ್ ವಿಡಿಯೋ ರಿಲೀಸ್ ಆಗಿ ಭಾರೀ ಮಟ್ಟದಲ್ಲಿ ವೈರಲ್ ಆಗಿದೆ. ಅದರಲ್ಲೂ ಈ ಹಾಡಿಗೆ ಸೆಲೆಬ್ರಿಟಿಗಳು ಕೂಡ ಹೆಜ್ಜೆ ಹಾಕುತ್ತಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲೂ ಈ ಹಾಡಿ ಬಿಡುಗಡೆ ಆಗಿ, ಅಲ್ಲಿಯೂ ಟ್ರೆಂಡ್ ‍ಕ್ರಿಯೇಟ್ ಮಾಡಿದೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ಈ ಹಾಡಿನಲ್ಲಿ ಸುದೀಪ್ ಜೊತೆ ಜಾಕ್ವಲಿನ್ ಫರ್ನಾಂಡಿಸ್ ಕೂಡ ಹೆಜ್ಜೆ ಹಾಕಿದ್ದಾರೆ. ಹಾಗಾಗಿ ಈ ಖುಷಿಯನ್ನು ಅವರು ಕನ್ನಡದಲ್ಲೇ ಹಂಚಿಕೊಂಡಿದ್ದಾರೆ. ಹಾಡನ್ನು ಹಿಟ್ ಮಾಡಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಿದ್ದಾಳೆ. ಎಲ್ಲಲ್ಲೂ ರಕ್ಕಮ್ಮನದ್ದೇ ಹವಾ ಎನ್ನುವ ಹೆಮ್ಮೆಯನ್ನೂ ಕೂಡ ಅವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್

    ಮೊನ್ನೆಯಷ್ಟೇ ಸುದೀಪ್ ಅವರು ಜಾಕ್ವಲಿನ್ ಅವರಿಗೆ ಕನ್ನಡ ಕಲಿಸಿದ್ದರು. ಅಷ್ಟೇ ಸೊಗಸಾಗಿ ಜಾಕ್ವಲಿನ್ ಕನ್ನಡ ಮಾತನಾಡಿದ್ದರು. ಈ ಬಾರಿ ಅವರೇ ಕನ್ನಡ ಕಲಿತುಕೊಂಡು ಕೆಲ ಮಾತುಗಳನ್ನು ಆಡಿದ್ದಾರೆ. ಅಷ್ಟರ ಮಟ್ಟಿಗೆ ಕನ್ನಡದ ಮೇಲಿನ ಪ್ರೀತಿಯನ್ನು ಅವರು ತೋರಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಬಹುಭಾಷೆಯಲ್ಲಿ ರಿಲೀಸ್ ಆಗಲಿದ್ದು, ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

  • ಶೂಟಿಂಗ್‍ಗೂ 9 ತಿಂಗಳ ಹಿಂದೆಯೇ ಪ್ರಿಪರೇಶನ್ ಮಾಡ್ಕೊಂಡೆ: ಸುದೀಪ್

    ಶೂಟಿಂಗ್‍ಗೂ 9 ತಿಂಗಳ ಹಿಂದೆಯೇ ಪ್ರಿಪರೇಶನ್ ಮಾಡ್ಕೊಂಡೆ: ಸುದೀಪ್

    ಕಿಚ್ಚ ಸುದೀಪ್ ‘ವಿಕ್ರಾಂತ್ ರೋಣ’ ಸಿನಿಮಾ ವಿಶೇಷತೆಯನ್ನು ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಜೊತೆ ಹಂಚಿಕೊಂಡಿದ್ದಾರೆ. ಈ ವೇಳೆ ಅವರು ‘ವಿಕ್ರಾಂತ್ ರೋಣ’ ಹೇಗೆ ಕಥೆಯಲ್ಲಿ ಭಿನ್ನತೆಯನ್ನು ಪಡೆದಿದೆ ಎಂಬುದರ ಪೂರ್ಣ ವಿವರವನ್ನು ಸೂಕ್ಷ್ಮವಾಗಿ ತಿಳಿಸಿದರು.

    ವಿಕ್ರಾಂತ್ ರೋಣ ಚಿತ್ರದ ರಿಲೀಸ್ ತಯಾರಿ ಇನ್ನೂ ನಡೀತಾ ಇದೆ. ಸಂಪೂರ್ಣವಾಗಿ ಮುಗಿದಿದೆ ಅಂದ್ರೆ ತಪ್ಪಾಗುತ್ತೆ. ಸಿನಿಮಾ ಈಗಾಗಲೇ ರೆಡಿ ಆಗಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಸ್ವಲ್ಪ ಬಾಕಿ ಇದೆ. ಪ್ರಮೋಷನ್ ಕ್ಯಾಂಪೇನಿಂಗ್ ಪ್ರಾರಂಭ ಆಗಿದೆ. ನಮ್ಮೆಲ್ಲರ ಗಮನ ಅದರತ್ತ ಹೋಗಿದೆ. ಸಿನಿಮಾ ಮಾಡೋದು ಒಂದು ಚಾಲೆಂಜ್ ಆದ್ರೆ ಇವಾಗ ಇಡೀ ಭಾರತ, ಹೊರರಾಜ್ಯ ಹೊರದೇಶ ನೋಡಬೇಕು ಎಂದು ಬಂದಾಗ ಚಾಲೆಂಜಸ್ ಬೇರೆ ಇರ್ತವೆ. ಕ್ಯಾಪೇನಿಂಗ್ ರೂಟ್ಸ್ ಬೇರೆ ಇರ್ತವೆ. ತುಂಬಾ ಜನರ ಸಹಾಯ ಬೇಕಾಗುತ್ತೆ. ಈಗ ನಾವು ಅದೇ ದಾರಿಯಲ್ಲಿ ಇದ್ದೇವೆ. ಇದನ್ನೂ ಓದಿ: ನಾವು ಬೇರೆ ಭಾಷೆಯನ್ನು ಇಂಪ್ರೆಸ್ ಮಾಡೋದು ಬೇಕಿಲ್ಲ: ಸುದೀಪ್

    ಈ ಪ್ರಾಜೆಕ್ಟ್‌ನಲ್ಲಿ ನಾನು ಇಂಪ್ರುವೈಸ್ಡ್ ಆಗೋದು ಅಂತ ಬರೋದಿಲ್ಲ. ಅದೆಲ್ಲಾ ಟೀಮ್ ಹಾಗೂ ಕ್ಯಾರೆಕ್ಟರ್ ಹೇಗಿದೆ ಅನ್ನೋದ್ರ ಮೇಲೆ ಬರುತ್ತೆ. ಈ ಚಿತ್ರದಲ್ಲಿ ಕಥೆ ಕೇಳ್ದಾಗ ಅದನ್ನ ಜನಗಳಿಗೆ ನಾವು ಯಾವ ರೀತಿ ತಿಳಿಸಬಹುದು? ಯಾವ ರೀತಿ ಸರ್ವ್ ಮಾಡಬಹುದು ಎಂದು ಯೋಚಿಸಿದ್ದೇವೆ. ಹೊಸ ಪ್ರಪಂಚ ಕ್ರಿಯೇಟ್ ಮಾಡಿ ಹೊಸ ಲ್ಯಾಂಡ್‍ನಲ್ಲಿ ಕಥೆ ಹೇಳಿದ್ರೆ ಹೇಗಿರುತ್ತೆ ಅನ್ನೋದ್ರ ಒಳಗೆ ನಾನು ಹೊರಟುಹೋಗಿದ್ದೆ. ನನ್ನ ನಾನು ಕೆದಕೋಕೆ ಹೋಗ್ಲಿಲ್ಲ. ಒಂದ್ಸರ್ತಿ ಆ ಪ್ರಪಂಚದಲ್ಲಿ ಹೋದ ಕೂಡಲೇ ಎಲ್ಲವೂ ಒಟ್ಟೊಟ್ಟಿಗೇ ಬಂದುಬಿಡುತ್ತೆ. ಇದರಲ್ಲಿ ಪಾತ್ರಕ್ಕೆ ತಯಾರಿಗಿಂತ ಸಿನಿಮಾ ತಯಾರಿ ಜಾಸ್ತಿ ಇತ್ತು. ಒಳಗಡೆ ಹೋಗ್ತಿದ್ದಂತೆ ಎಲ್ಲರೂ ಅವವರವ ಪಾತ್ರದೊಳಗೆ ಹೋಗಿಬಿಟ್ವಿ.

    ಬೇರೆ ಲಾಂಗ್ಲೇಜ್‍ಲ್ಲಿ ರಿಲೀಸ್ ಮಾಡೋ ಉದ್ದೇಶದಿಂದ ಅಪ್‍ಲಿಫ್ಟ್ ಮಾಡೋಕೆ ಹೋಗ್ಲಿಲ್ಲ. ಈ ಫಿಲ್ಮ್ ಕೆಲವು ಸ್ಟಾಂಡರ್ಡ್ ಡಿಮ್ಯಾಂಡ್ ಮಾಡಿತ್ತು. ಅದನ್ನ ನಾವು ಕೊಟ್ಟಿದ್ದೇವೆ. ಅಂಥಹ ಕಂಟೆಂಟ್ ನಮಗೆ ಸಿಕ್ಕಿರೋದ್ರಿಂದ ಅದನ್ನ ನಾವು ಡೆಕೋರೇಟ್ ಮಾಡಿದ್ದೀವಿ. ಸಿನಿಮಾ ಸ್ಕೇಲ್ ಬಗ್ಗೆ ಅನುಮಾನವಿಲ್ಲ. ಅದನ್ನ ನೀವು ಟೀಸರ್‍ನಲ್ಲೇ ನೋಡಬಹುದು.

    ಹಾಗಂತ ದೊಡ್ಡ ಸ್ಕೇಲ್‍ನಲ್ಲಿ ಸಿನಿಮಾ ಮಾಡಿದ್ದೀವಿ ಅಂದ ಮಾತ್ರಕ್ಕೆ ಎಲ್ಲಾ ರಾಜ್ಯದವರು ಹೊರಗಿನವ್ರು ಸಿನಿಮಾ ನೋಡ್ತಾರೆ ಅನ್ನೋದು ಡೌಟು. ಸ್ಕೇಲ್ ಹೊರತಾಗಿ ನಾವು ಕಂಟೆಂಟ್‍ನ್ನ ಚೆನ್ನಾಗೇ ಕೆತ್ತಿದ್ದೀವಿ. ತ್ರಿಡಿ ಅಂತ ಹೋಗ್ತಿದ್ದ ಹಾಗೆ ನಿರೀಕ್ಷೆ ಜಾಸ್ತಿ ಆಗುತ್ತೆ. ಪ್ರೊಡಕ್ಷನ್ ವ್ಯಾಲ್ಯೂ ಬೇಕಾಗುತ್ತೆ. ರಿಲೀಸ್ ಡೇಟ್ ಟೀಸರ್‍ನಲ್ಲೇ ನಿಮಗದು ಕಾಣುತ್ತೆ.

    ನಾನು ಅನುಪ್ ಕಥೆಯನ್ನು ಕೇಳಿದ ನಂತರ ಶೂಟಿಂಗ್ ಮೊದಲು 9 ತಿಂಗಳ ಕೆಲಸ ಮಾಡಿದ್ದೇವೆ. ಈ ಕಥೆಯ ಪ್ರತಿಯೊಂದು ಅಂಶವನ್ನು ನಾವು ಕೆತ್ತಿದ್ದೇವೆ. ಅವತ್ತೆ ನಾವು ಈ ಸಿನಿಮಾವನ್ನು ಜಾಗತಿಕ ಸಿನಿಮಾ ಎಂದು ನಿರ್ಧರ ಮಾಡಿದ್ದೆವು. ಇದೇ ನಮ್ಮ ಗುರಿಯಾಗಿತ್ತು. ಆದರೆ ನಮ್ಮ ಮೊದಲ ಅದ್ಯತೆ ಇದ್ದಿದ್ದು, ಕರ್ನಾಟಕ. ಏಕೆಂದರೆ ನಾವು ಬೇರೆಕಡೆ ಗಮನ ಕೊಟ್ಟು ನಮ್ಮ ಕೊರ್ ಬಿಸ್ನೆಸ್ ಮರೆತರೆ ಕಷ್ಟ. ಅದಕ್ಕೆ ನಾವು ಕಥೆ ಬಿಟ್ಟು ಬೇರೆಕಡೆ ಹೆಚ್ಚು ಗಮನಕೊಟ್ಟಿಲ್ಲ. ಇದನ್ನೂ ಓದಿ: ಕೆಜಿಎಫ್ ಸಿನಿಮಾ ಬಗ್ಗೆ ಸುದೀಪ್ ಮಾತು 

    ಇದರ ಕಂಟೆಂಟ್ ಯೂನಿವರ್ಸಲ್ ಆಗಿದೆ. ಅಪರೂಪಕ್ಕೆ ನಾವು ಎಲ್ಲ ಸಲ ಸಿನಿಮಾ ಮಾಡಬೇಕಾದ್ರೆ ಎಲ್ಲ ಕಥೆಯನ್ನು ಎಲ್ರೂ ನೋಡ್ತಾರೆ ಅಂತ ನಾವ್ ನಿರ್ಣಯಕ್ಕೆ ಬರೋಲ್ಲ. ಕೆಲವು ಕಥೆ ಮಾತ್ರ ಎಲ್ಲ ಜನರನ್ನ ರೀಚ್ ಆಗುತ್ತೆ. ಅಂಥದ್ರಲ್ಲಿ ಒಂದು ಕಥೆ ಇದು. ನಮ್ಮ ಗಮನ ಅದರ ಕಡೆ ಇತ್ತು. ಈ ಕಥೆ ಓಕೆ ಆದ್ಮೇಲೆ ಶೂಟ್ ಫ್ಲೋರ್ ಹೋಗೋಕೆ ಮುನ್ನ 9 ತಿಂಗಳ ಹಿಂದೆ ಪ್ರಿಪರೇಶನ್ ಮಾಡ್ಕೊಂಡೆ. ಇದನ್ನ ನಾನು ‘ಗ್ಲೋಬಲ್ ಸಿನಿಮಾ ಅಂತೀನಿ’ ಯಾವುದನ್ನೋ ಕಾನ್‍ಸ್ಟ್ರೇಟ್ ಮಾಡೋಕೆ ಹೋಗಿ ನಾವು ನಮ್ಮ ನೆಲದ ಬಿಸಿನೆಸ್ ಕಳೆದುಕೊಳ್ಳೋಕೆ ಇಷ್ಟ ಪಡೋಲ್ಲ. ನಾವು ಸ್ಕ್ರಿಪ್ಟ್ ಬಗ್ಗೆ ನ್ಯಾಯವಾಗಿದ್ದೇವೆ ಎಂದು ತಿಳಿಸಿದರು.

  • ರಾ..ರಾ.. ರಕ್ಕಮ್ಮಅಂತ ಬಂದ್ಬಿಟ್ಳು ಕಿಚ್ಚನ ಗಡಂಗ್ ಬೆಡಗಿ : ಅಚ್ಚರಿ ಎನ್ನುವಂತೆ ಕುಣಿದ ಸುದೀಪ್

    ರಾ..ರಾ.. ರಕ್ಕಮ್ಮಅಂತ ಬಂದ್ಬಿಟ್ಳು ಕಿಚ್ಚನ ಗಡಂಗ್ ಬೆಡಗಿ : ಅಚ್ಚರಿ ಎನ್ನುವಂತೆ ಕುಣಿದ ಸುದೀಪ್

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಸಿಂಗಲ್ ಲಿರಿಕಲ್ ವಿಡಿಯೋ ಸಾಂಗ್ ಇಂದು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಇಂದು ರಿಲೀಸ್ ಆಗಿದೆ. ಹಾಡು ರಿಲೀಸ್ ಆಗುತ್ತಿದ್ದಂತೆಯೇ ಸಾಂಗ್ ವೈರಲ್ ಕೂಡ ಆಗುತ್ತಿದೆ. ಗಡಂಗ್ ರಕ್ಕಮ್ಮ ನೋಡುವುದಕ್ಕೂ ಮಾದಕವಾಗಿದ್ದು, ಮಾದಕವಸ್ತುವನ್ನೇ ತನ್ನೊಂದಿಗೆ ತಂದಿರುವುದು ಪಡ್ಡೆಗಳ ಮೈ ಬಿಸಿ ಮಾಡಿದೆ. ಇದನ್ನೂ ಓದಿ : ‘ಧಾಕಡ್’ ಸೋಲಿಗೆ ಕಂಗೆಟ್ಟ ಕಂಗನಾ ರಣಾವತ್ : ವೀಕೆಂಡ್ ನಲ್ಲೂ ವೀಕ್ ಕಲೆಕ್ಷನ್

    ಕನ್ನಡ ಹಾಡಿನಲ್ಲಿ ಕೆಲ ತುಳು ಪದಗಳನ್ನು ಬಳಸಿಕೊಂಡು ಈ ಹಾಡು ರೆಡಿಯಾಗಿದ್ದು, ಅಚ್ಚರಿಯ ಎನ್ನುವಂತೆ ಕಿಚ್ಚ ಸುದೀಪ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜಾಕ್ವಲೀನ್ ಫರ್ನಾಂಡಿಸ್ ಜತೆ ಮೈ ಚಳಿ ಬಿಟ್ಟು ಕಿಚ್ಚ ಕುಣಿದಿರುವುದು ಮತ್ತು ಸಿಗ್ನೆಚರ್ ಸ್ಟೆಪ್ ನಲ್ಲಿ ಸಖತ್ತಾಗಿ  ಕಾಣುತ್ತಾರೆ. ಸುನಿಧಿ ಚೌವ್ಹಾನ್ ಮತ್ತು ನಕಾಶ್ ಈ ಹಾಡಿಗೆ ದನಿಯಾಗಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಈ ಹಾಡಿಗಿದೆ. ಅನೂಪ್ ಭಂಡಾರಿ ಅವರೇ ಸಾಹಿತ್ಯ ಬರೆದಿದ್ದಾರೆ. ಇದನ್ನೂ ಓದಿ : ಶೀಘ್ರದಲ್ಲೇ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಸಿನಿಮಾ ಶುರು : ಯೋಗರಾಜ್ ಭಟ್ ನಿರ್ದೇಶಕ

    ಸಾಮಾನ್ಯವಾಗಿ ಸಿನಿಮಾದ ಟ್ರೇಲರ್, ಟೀಸರ್, ಹಾಡು ಹೀಗೆ ರಿಲೀಸ್ ಮಾಡಿ ಒಂದೊಂದೇ ಹಂತದಲ್ಲಿ ಪ್ರಚಾರ ಮಾಡುತ್ತಾ, ಆನಂತರ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡುವುದನ್ನು ನೋಡಿದ್ದೇವೆ. ಆದರೆ, ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಬಿಡುಗಡೆ ದಿನಾಂಕ ಈಗಾಗಲೇ ಘೋಷಣೆ ಮಾಡಲಾಗಿದ್ದು, ಇದೀಗ ಹಾಡುಗಳನ್ನು ರಿಲೀಸ್ ಮಾಡುವ ಮೂಲಕ ಇಂದಿನಿಂದ ಪ್ರಚಾರ ಕಾರ್ಯ ಶುರು ಮಾಡಿದೆ. ಇದನ್ನೂ ಓದಿ: ವೀಲ್‍ಚೇರ್ ರೋಮಿಯೋಗೆ ಮಯೂರಿ ಜೂಲಿಯಟ್ – ‘ಆ’ ಸವಾಲಿನ ಪಾತ್ರ ಒಪ್ಪಿಕೊಂಡಿದ್ದರ ಹಿಂದಿದೆ ಒಂದು ಕಥಾನಕ!

    ಇದೇ ಮೊದಲ ಬಾರಿಗೆ ಹಾಡೊಂದು ಬಿಡುಗಡೆ ಆಗುತ್ತಿದ್ದು, ಒಂದೊಂದು ಭಾಷೆಯಲ್ಲೂ ಒಂದೊಂದು ದಿನಾಂಕದಂದು ರಿಲೀಸ್ ಆಗುತ್ತಿರುವುದು ವಿಶೇಷ. ಗಡಂಗ್ ರಕ್ಕಮ್ಮ  ಹೆಸರಿನ ಈ ಲಿರಿಕಲ್ ಹಾಡು ಕನ್ನಡದಲ್ಲಿ ಮೇ 23 ರಂದು ಮಧ್ಯಾಹ್ನ 3.5ಕ್ಕೆ ರಿಲೀಸ್ ಆಗಿದ್ದು,  ಹಿಂದಿಯಲ್ಲಿ ಮೇ 24ಕ್ಕೆ ಮಧ್ಯಾಹ್ನ 01.05 ಕ್ಕೆ ಬಿಡುಗಡೆಯಾದರೆ, ತೆಲುಗಿನಲ್ಲಿ ಮೇ 24 ರಂದು ಮಧ್ಯಾಹ್ನ 01.05ಕ್ಕೆ ಬಿಡುಗಡೆ ಆಗಲಿದೆ, ತಮಿಳಿನಲ್ಲಿ ಮೇ 26ರಂದು ಮಧ್ಯಾಹ್ನ 01.05ಕ್ಕೆ ಹಾಗೂ ಮೇ 27 ರಂದು ಮಲಯಾಳಂನಲ್ಲಿ 01.05ಕ್ಕೆ ಈ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ ಎಂದು ಸುದೀಪ್ ಟ್ವಟರ್ ಮೂಲಕ ಮಾಹಿತಿ ಕೊಟ್ಟಿದ್ದಾರೆ. ಈ ಎಲ್ಲ ಭಾಷೆಯ ಹಾಡುಗಳನ್ನು ಲಹರಿ ಯೂಟ್ಯೂಬ್ ಚಾನೆಲ್ ನಲ್ಲಿ ನೋಡಬಹುದಾಗಿದೆ.

  • ಈ ವಾರ 11 ಚಿತ್ರಗಳು ರಿಲೀಸ್, ನಿಲ್ಲದ ಮಳೆ : ಪ್ರೇಕ್ಷಕರ ಕೊರತೆ ಎದುರಿಸುತ್ತಿರುವ ಥಿಯೇಟರ್

    ಈ ವಾರ 11 ಚಿತ್ರಗಳು ರಿಲೀಸ್, ನಿಲ್ಲದ ಮಳೆ : ಪ್ರೇಕ್ಷಕರ ಕೊರತೆ ಎದುರಿಸುತ್ತಿರುವ ಥಿಯೇಟರ್

    ಕೆಜಿಎಫ್ 2 ರಿಲೀಸ್ ನಂತರ ಥಿಯೇಟರ್‌ಗೆ ರಾಶಿ ರಾಶಿ ಚಿತ್ರಗಳು ಬರುತ್ತಿವೆ. ಪ್ರತಿ ವಾರ ಮೂರ್ನಾಲ್ಕು ಚಿತ್ರಗಳು ಬಿಡುಗಡೆ ಆಗುತ್ತಿದ್ದು, ಅದನ್ನು ಹೇಗೋ ನಿಭಾಯಿಸಿಕೊಂಡು ಹೋಗುತ್ತಿದ್ದರು ವಿತರಕರು. ಈ ವಾರ ಬರೋಬ್ಬರಿ 11 ಚಿತ್ರಗಳು ರಿಲೀಸ್ ಆಗಿವೆ. ಹನ್ನೊಂದು ಚಿತ್ರಗಳು ಕನ್ನಡದ್ದೇ ಆಗಿರುವುದು ಮತ್ತೊಂದು ಅಚ್ಚರಿಯ ವಿಷಯ. ಇದನ್ನೂ ಓದಿ : ಓಟಿಟಿಯಲ್ಲೂ ದಾಖಲೆ ಬರೆದ ‘ದಿ ಕಾಶ್ಮೀರ್ ಫೈಲ್ಸ್’

    ಕೆಜಿಎಫ್ 2 ಸಿನಿಮಾದ ನಂತರ ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳು ಬಂದರೂ, ಗಲ್ಲಾ ಪೆಟ್ಟಿಗೆಯಲ್ಲಿ ಅಷ್ಟೇನೂ ಅವುಗಳು ಸದ್ದು ಮಾಡಲಿಲ್ಲ. ಹೀಗಾಗಿಯೇ ಅಜಯ್ ರಾವ್, ಸಾಧು ಕೋಕಿಲಾ ಸೇರಿದಂತೆ ಹಲವು ನಟರು ‘ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಬನ್ನಿ’ ಎಂದು ಕೈ ಮುಗಿದು ಕರೆದರು. ಆದರೂ, ಪ್ರೇಕ್ಷಕರು ಮಾತ್ರ ಕೆಜಿಎಫ್ 2 ಸಿನಿಮಾವನ್ನೇ ತಲೆಯೊಳಗೆ ಹಾಕಿಕೊಂಡು ಕೂತುಬಿಟ್ಟರು. ಇದನ್ನೂ ಓದಿ : ಯಶ್ ಆಸೆ ಈಡೇರಿಸುತ್ತಾರಾ ತಮಿಳಿನ ಖ್ಯಾತ ನಿರ್ದೇಶಕ ಶಂಕರ್

    ಈ ವಾರ ಕಂಡು ಕೇಳರಿಯದಷ್ಟು ಚಿತ್ರಗಳು ರಿಲೀಸ್ ಆಗುತ್ತಿವೆ. ಸಣ್ಣ ಬಜೆಟ್ ಸಿನಿಮಾಗಳಿಂದ ಹಿಡಿದು, ಮಧ್ಯಮ ಬಜೆಟ್ ವರೆಗಿನ ಚಿತ್ರಗಳು ರಿಲೀಸ್ ಆಗಿವೆ. ಹೊಸಬರ ಚಿತ್ರಗಳಿಂದ ಸ್ಟಾರ್ ನಟರ ಚಿತ್ರಗಳು ಈ ವಾರ ತೆರೆ ಕಂಡಿವೆ. ಆದರೂ, ಜನರು ಥಿಯೇಟರ್ ನತ್ತ ಸುಳಿದದ್ದು ಕಡಿಮೆ ಎನ್ನುವ ವರದಿಯಿದೆ. ಈ ನಡುವೆ ಮೂರ್ನಾಲ್ಕು ದಿನಗಳಿಂದ ಮಳೆಯೂ ಆಗುತ್ತಿದೆ. ಹಾಗಾಗಿ ಮಳೆ ಕಾಟವೂ ಜನರು ಬರದೇ ಇರುವುದಕ್ಕೆ ಕಾರಣವೂ ಆಗಿದೆ. ಇದನ್ನೂ ಓದಿ : ಪ್ರಾದೇಶಿಕ ಭಾಷಾ ಮಹತ್ವ ಪ್ರಧಾನಿ ಮೋದಿ ಮಾತಿಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚ ಸುದೀಪ್

    ಕೆಜಿಎಫ್ 2 ಚಿತ್ರಕ್ಕಾಗಿ ಸಣ್ಣ ಬಜೆಟ್ ಸಿನಿಮಾಗಳ ನಿರ್ಮಾಪಕರು ಕಾದರು. ಮುಂದೆ ಚಾರ್ಲಿ, ವಿಕ್ರಾಂತ್ ರೋಣ ರೀತಿಯ ಭಾರೀ ಬಜೆಟ್ ಮತ್ತು ಸ್ಟಾರ್ ಇರುವ ಸಿನಿಮಾಗಳು ತೆರೆ ಕಾಣಲಿವೆ. ಈ ನಡುವೆ ಸಣ್ಣ ಬಜೆಟ್ ಚಿತ್ರಗಳನ್ನು ರಿಲೀಸ್ ಮಾಡಿಕೊಳ್ಳೋಣ ಎಂದು ಹಲವು ನಿರ್ಮಾಪಕರು ಈ ಪ್ರಮಾಣದಲ್ಲಿ ಥಿಯೇಟರ್‌ಗೆ ನುಗ್ಗುತ್ತಿದ್ದಾರೆ. ಹಾಗಾಗಿ ವಾರಕ್ಕೆ ಹತ್ತತ್ತು ಸಿನಿಮಾಗಳನ್ನು ನೋಡುವಂತಹ ಅವಕಾಶ ಪ್ರೇಕ್ಷಕರಿಗೆ ಸಿಕ್ಕಿದೆ. ಆದರೆ, ಪ್ರೇಕ್ಷಕ ಮಾತ್ರ ಚಿತ್ರಮಂದಿರದಿಂದ ವಿಮುಖನಾಗಿದ್ದಾನೆ.

    ಒಳ್ಳೆಯ ಕಂಟೆಂಟ್ ಮತ್ತು ಹೊಸ ಬಗೆಯ ಚಿತ್ರಗಳು ಬಂದರೂ, ವಾರಪೂರ್ತಿ ಮಳೆಯಲ್ಲಿಯೇ ಬೆಂಗಳೂರು ಮುಳುಗಿ ಹೋಗಿದೆ. ರಸ್ತೆಗೆ ಕಾಲಿಡಲು ಜನರು ಭಯ ಪಡುವಂತಾಗಿದೆ. ಹಾಗಾಗಿ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ರಿಲೀಸ್ ಆದ ಚಿತ್ರಗಳು ಪ್ರೇಕ್ಷಕರ ಕೊರತೆಯನ್ನು ಎದುರಿಸುತ್ತಿವೆ.

  • ವಿಕ್ರಾಂತ್ ರೋಣ ‘ರಾ ರಾ ರಕ್ಕಮ್ಮ’ ಅಂತ ಕರೆದಿದ್ದು ಯಾರನ್ನು?: ಮೇ 23ಕ್ಕೆ ಲಿರಿಕಲ್ ವಿಡಿಯೋ ರಿಲೀಸ್

    ವಿಕ್ರಾಂತ್ ರೋಣ ‘ರಾ ರಾ ರಕ್ಕಮ್ಮ’ ಅಂತ ಕರೆದಿದ್ದು ಯಾರನ್ನು?: ಮೇ 23ಕ್ಕೆ ಲಿರಿಕಲ್ ವಿಡಿಯೋ ರಿಲೀಸ್

    ಸಾಮಾನ್ಯವಾಗಿ ಸಿನಿಮಾದ ಟ್ರೇಲರ್, ಟೀಸರ್, ಹಾಡು ಹೀಗೆ ರಿಲೀಸ್ ಮಾಡಿ ಒಂದೊಂದೇ ಹಂತದಲ್ಲಿ ಪ್ರಚಾರ ಮಾಡುತ್ತಾ, ಆನಂತರ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡುವುದನ್ನು ನೋಡಿದ್ದೇವೆ. ಆದರೆ, ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಬಿಡುಗಡೆ ದಿನಾಂಕ ಈಗಾಗಲೇ ಘೋಷಣೆ ಮಾಡಲಾಗಿದ್ದು, ಇದೀಗ ಹಾಡುಗಳನ್ನು ರಿಲೀಸ್ ಮಾಡಲು ಹೊರಟಿದೆ ಚಿತ್ರತಂಡ. ಇದನ್ನೂ ಓದಿ : ಓಟಿಟಿಯಲ್ಲೂ ದಾಖಲೆ ಬರೆದ ‘ದಿ ಕಾಶ್ಮೀರ್ ಫೈಲ್ಸ್’

    ಜುಲೈ 28ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದ್ದು, ಮೊನ್ನೆಯಷ್ಟೇ ಕೆಲವು ಅಪ್ಡೇಟ್‍ ಗಳನ್ನು ಚಿತ್ರತಂಡವು ನೀಡಿತ್ತು. ವಿದೇಶಗಳಲ್ಲಿ ಸಿನಿಮಾ ವಿತರಣೆ ಹಾಗೂ 3 ಡಿ ಸಿನಿಮಾವನ್ನು ಯಾರು ರಿಲೀಸ್ ಮಾಡುತ್ತಾರೆ ಎನ್ನುವ ದೊಡ್ಡ ಸುದ್ದಿಯನ್ನೇ ನಿರ್ಮಾಪಕರು ನೀಡಿದ್ದರು. ಇದೀಗ ಮೊದಲ ಹಾಡು ಯಾವಾಗ ಬಿಡುಗಡೆ ಆಗಲಿದೆ ಎನ್ನುವುದನ್ನು ಸ್ವತಃ ಸುದೀಪ್ ಅವರೇ ಟ್ವಿಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ : ಯಶ್ ಆಸೆ ಈಡೇರಿಸುತ್ತಾರಾ ತಮಿಳಿನ ಖ್ಯಾತ ನಿರ್ದೇಶಕ ಶಂಕರ್

    ಈವರೆಗೂ ವಿಕ್ರಾಂತ್ ರೋಣ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇದೇ ಮೊದಲ ಬಾರಿಗೆ ಹಾಡೊಂದು ಬಿಡುಗಡೆ ಆಗುತ್ತಿದ್ದು, ಒಂದೊಂದು ಭಾಷೆಯಲ್ಲೂ ಒಂದೊಂದು ದಿನಾಂಕದಂದು ರಿಲೀಸ್ ಆಗುತ್ತಿರುವುದು ವಿಶೇಷ. ಗಡಂಗ್ ರಕ್ಕಮ್ಮ  ಹೆಸರಿನ ಈ ಲಿರಿಕಲ್ ಹಾಡು ರಾ ರಾ ರಕ್ಕಮ್ಮ ಎಂಬ ಸಾಹಿತ್ಯದಿಂದ ಶುರುವಾಗಲಿದ್ದು, ಕನ್ನಡದಲ್ಲಿ ಮೇ 23 ರಂದು ಮಧ್ಯಾಹ್ನ 3.5ಕ್ಕೆ ರಿಲೀಸ್ ಆಗಲಿದೆ. ಇದನ್ನೂ ಓದಿ : ಪ್ರಾದೇಶಿಕ ಭಾಷಾ ಮಹತ್ವ ಪ್ರಧಾನಿ ಮೋದಿ ಮಾತಿಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚ ಸುದೀಪ್

    ಹಿಂದಿಯಲ್ಲಿ ಮೇ 24ಕ್ಕೆ ಮಧ್ಯಾಹ್ನ 01.05 ಕ್ಕೆ ಬಿಡುಗಡೆಯಾದರೆ, ತೆಲುಗಿನಲ್ಲಿ ಮೇ 24 ರಂದು ಮಧ್ಯಾಹ್ನ 01.05ಕ್ಕೆ ಬಿಡುಗಡೆ ಆಗಲಿದೆ, ತಮಿಳಿನಲ್ಲಿ ಮೇ 26ರಂದು ಮಧ್ಯಾಹ್ನ 01.05ಕ್ಕೆ ಹಾಗೂ ಮೇ 27 ರಂದು ಮಲಯಾಳಂನಲ್ಲಿ 01.05ಕ್ಕೆ ಈ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ ಎಂದು ಸುದೀಪ್ ಟ್ವಟರ್ ಮೂಲಕ ಮಾಹಿತಿ ಕೊಟ್ಟಿದ್ದಾರೆ. ಈ ಎಲ್ಲ ಭಾಷೆಯ ಹಾಡುಗಳನ್ನು ಲಹರಿ ಯೂಟ್ಯೂಬ್ ಚಾನೆಲ್ ನಲ್ಲಿ ನೋಡಬಹುದಾಗಿದೆ.

  • ಕಿಚ್ಚ ಸುದೀಪ್ ವಿರುದ್ಧ ಮತ್ತೆ ತೊಡೆತಟ್ಟಿದ ಅಜಯ್ ದೇವಗನ್

    ಕಿಚ್ಚ ಸುದೀಪ್ ವಿರುದ್ಧ ಮತ್ತೆ ತೊಡೆತಟ್ಟಿದ ಅಜಯ್ ದೇವಗನ್

    ಹಿಂದಿ ರಾಷ್ಟ್ರೀಯ ಭಾಷೆ ವಿಚಾರವಾಗಿ ಈಗಾಗಲೇ ಒಂದು ಸುತ್ತ ಟ್ವಿಟ್ ವಾರ್ ಮಾಡಿದ್ದ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ಈ ವಿವಾದ ತಣ್ಣಗಾಗುತ್ತಿದ್ದಂತೆಯೇ ಮತ್ತೊಮ್ಮೆ ಒಬ್ಬರಿಗೊಬ್ಬರು ತೊಡೆತಟ್ಟಿಕೊಂಡಿದ್ದಾರೆ. ಈ ಬಾರಿ ಅವರು ತಮ್ಮ ಚಿತ್ರಗಳ ಮೂಲಕ ಅಖಾಡಕ್ಕೆ ಇಳಿದಿದ್ದಾರೆ. ಇದನ್ನೂ ಓದಿ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

    ಹಲವು ತಿಂಗಳ ಹಿಂದಿಯೇ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ರಿಲೀಸ್ ಡೇಟ್ ಬಹಿರಂಗವಾಗಿತ್ತು. ಜುಲೈ 28 ರಂದು ಈ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದರು. ಈಗ ಅದೇ ತಿಂಗಳು, ಅದೇ ವಾರದಲ್ಲೇ ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಚಿತ್ರವೂ ಕೂಡ ರಿಲೀಸ್ ಆಗುತ್ತಿದೆ. ಜುಲೈ 29 ರಂದು ಥ್ಯಾಂಕ್ ಗಾಡ್ ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ. ಇದನ್ನೂ ಓದಿ : ಹಿರಿಯ ರಂಗಕರ್ಮಿ, ಏಣಗಿ ಬಾಳಪ್ಪನವರ ಪತ್ನಿ ಲಕ್ಷ್ಮೀಬಾಯಿ ನಿಧನ

    ವಿಕ್ರಾಂತ್ ರೋಣ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ. 2 ಡಿ ಮತ್ತು 3 ಡಿಯಲ್ಲಿಯೂ ಸಿನಿಮಾ ಮೂಡಿ ಬಂದಿದೆ. ಎಂಟಕ್ಕೂ ಹೆಚ್ಚು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಸಾವಿರಾರು ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕಾಗಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಈ ಹೊತ್ತಿನಲ್ಲಿ ಅಜಯ್ ದೇವಗನ್ ಅವರ ಸಿನಿಮಾ ಕೂಡ ಬಿಡುಗಡೆ ಆಗುತ್ತಿರುವುದು ಸಖತ್ ಕುತೂಹಲವಂತೂ ಮೂಡಿಸಿದೆ. ಇದನ್ನೂ ಓದಿ : ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ

    ಸುದೀಪ್ ಅವರ ವಿಕ್ರಾಂತ್ ರೋಣ ಮತ್ತು ಅಜಯ್ ದೇವಗನ್ ಅವರ ಥ್ಯಾಂಕ್ ಗಾಡ್ ಒಂದು ದಿನದ ಅಂತರದಲ್ಲಿ ಬಿಡುಗಡೆ ಆಗುತ್ತಿರುವುದು ಕಾಕತಾಳೀಯವಾದರೂ, ಅಭಿಮಾನಿಗಳು ಮಾತ್ರ ಅದನ್ನು ಬೇರೆ ರೀತಿಯಲ್ಲೇ ಅರ್ಥೈಸಿಕೊಂಡಿದ್ದಾರೆ. ಬಾಲಿವುಡ್ ಸಿನಿಮಾ ರಂಗದವರ ಪಿತೂರಿ ಎನ್ನುವ ಮಾತೂ ಕೇಳಿ ಬರುತ್ತಿವೆ. ಏನೇ ಅಗಲಿ, ಒಳ್ಳೆಯ ಪೈಪೋಟಿ ನಡೆದರೆ ಸಾಕು ಎನ್ನುತ್ತಾರೆ ಚಿತ್ರೋದ್ಯಮಿಗಳು.

  • ಕೆಜಿಎಫ್ 2 ವಿವಾದ:  ನಾಯಿ, ನರಿಗೆಲ್ಲ ಉತ್ತರ ಕೊಡಲ್ಲ ಎಂದ ನಿರ್ಮಾಪಕ ಜಾಕ್ ಮಂಜು

    ಕೆಜಿಎಫ್ 2 ವಿವಾದ: ನಾಯಿ, ನರಿಗೆಲ್ಲ ಉತ್ತರ ಕೊಡಲ್ಲ ಎಂದ ನಿರ್ಮಾಪಕ ಜಾಕ್ ಮಂಜು

    ಕೆಜಿಎಫ್ 2 ಸಿನಿಮಾಗೆ ಕಿಚ್ಚ ಸುದೀಪ್ ವಿಶ್ ಮಾಡಿಲ್ಲ ಎನ್ನುವ ವಿಚಾರ ಮತ್ತು ಕೆಜಿಎಫ್ ಸಿನಿಮಾದ ಪ್ರಶ್ನೆಗೆ ಸುದೀಪ್ ಕೊಟ್ಟಿರುವ ಉತ್ತರದ ವಿಡಿಯೋ ಸ್ಯಾಂಡಲ್ ವುಡ್ ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಯಾರೋ ಕಿಡಿಗೇಡಿಗಳು ಮಾಡಿದ ತಪ್ಪಿನಿಂದಾಗಿ ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಕಿತ್ತಾಡುವಂತಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜತೆ ಮಾತನಾಡಿರುವ ನಿರ್ಮಾಪಕ ಮತ್ತು ಸುದೀಪ್ ಆಪ್ತರಾರ ಜಾಕ್ ಮಂಜು ಗರಂ ಆಗಿಯೇ ಉತ್ತರ ಕೊಟ್ಟಿದ್ದಾರೆ. ‘ಯಾರೋ ನಾಯಿ ನರಿಗೆಲ್ಲ ಉತ್ತರ ಕೊಡಲಿಕ್ಕೆ ಆಗದು’ ಎಂದು ಖಡಕ್ಕಾಗಿಯೇ ಅವರು ಉತ್ತರಿಸಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ

    KGF 2 Yash (4)

    ಯಶ್ ನಟನೆಯ ಕೆಜಿಎಫ್ 2 ಸಿನಿಮಾ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದಕ್ಷಿಣದ ಬಹುತೇಕ ತಾರೆಯರು ಮತ್ತು ಬಾಲಿವುಡ್ ಸಿನಿ ರಂಗ ಕೆಲವು ನಟ ನಟಿಯರು ಸಿನಿಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ಬಗ್ಗೆ ಅಭಿಮಾನದಿಂದ ಬರೆದುಕೊಂಡಿದ್ದಾರೆ. ಆದರೆ, ಕನ್ನಡದ ಕೆಲ  ನಟರು ಕೆಜಿಎಫ್ 2 ಸಿನಿಮಾದ ಬಗ್ಗೆ ಒಂದು ಪೋಸ್ಟ್ ಕೂಡ ಮಾಡಿಲ್ಲ ಎನ್ನುವುದು ಹಲವು ಅಭಿಮಾನಿಗಳ ತಕರಾರು. ಅದಕ್ಕೆ ಗುರಿಯಾಗಿದ್ದು ಕಿಚ್ಚು ಸುದೀಪ್. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

    ನೆನ್ನೆಯಷ್ಟೇ ಸುದೀಪ್ ಅವರು ಎಂದೋ ಆಡಿದ  ಐದತ್ತು ಸೆಕೆಂಡುಗಳು ವಿಡಿಯೋ ಕ್ಲಿಪ್ ಅನ್ನು ಇಟ್ಟುಕೊಂಡು ಕಿಚ್ಚನ ಬಗ್ಗೆ ಸಲ್ಲದ ಕಾಮೆಂಟ್ ಮಾಡಲಾಗುತ್ತಿದೆ. ಅದಕ್ಕೆ ಪ್ರತಿಯಾಗಿ ಸುದೀಪ್ ಅವರ ಅಭಿಮಾನಿಗಳು ಕೂಡ ಕೌಂಟರ್ ಕಾಮೆಂಟ್ ನೀಡುತ್ತಿದ್ದಾರೆ. ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಫ್ಯಾನ್ಸ್ ವಾರ್ ಶುರು ಮಾಡಿದೆ. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್ 

    ಸದ್ಯ ಹರಿದಾಡುತ್ತಿರುವ ವಿಡಿಯೋ ಕ್ಲಿಪ್ ನಲ್ಲಿ ಪತ್ರಕರ್ತರೊಬ್ಬರು ‘ಕೆಜಿಎಫ್’ ಬಗ್ಗೆ ಹೇಳಿ ಎಂದು ಕೇಳುತ್ತಾರೆ. ‘ನಾನು ಆ ಸಿನಿಮಾದಲ್ಲಿ ಇಲ್ಲ’ ಎಂದಷ್ಟೇ ಚುಟುಕಾಗಿ ಸುದೀಪ್ ಉತ್ತರ ಕೊಟ್ಟಿದ್ದಾರೆ. ಅದನ್ನೇ ಹಿಡಿದುಕೊಂಡು ಕೆಲವರು ಕಿಚ್ಚನ ತೇಜೋವಧೆ ಮಾಡುತ್ತಿದ್ದಾರೆ. ಅದಕ್ಕೆ ಉತ್ತರವಾಗಿ ಸುದೀಪ್ ಅಭಿಮಾನಿಗಳು ಕೂಡ ಅಷ್ಟೇ ಖಡಕ್ಕಾಗಿಯೇ ಉತ್ತರ ನೀಡಿದ್ದು, ಈ ಹಿಂದೆ ಸುದೀಪ್ ಅವರು ಕೆಜಿಎಫ್ 1 ಸಿನಿಮಾ ರಿಲೀಸ್ ಆದಾಗ ಟ್ವಿಟ್ ಮಾಡಿರುವ ಸ್ಕ್ರೀನ್ ಶಾಟ್ ಹಾಕಿದ್ದಾರೆ ಅಲ್ಲದೇ ಈ ಹಿಂದೆ ಮತ್ತೊಬ್ಬ ಕನ್ನಡದ ಸ್ಟಾರ್ ನಟನ ಚಿತ್ರಕ್ಕೆ ಸುದೀಪ್ ಶುಭ ಹಾರೈಸಿದಾಗ, ಆ ನಟ ನಡೆದುಕೊಂಡ ರೀತಿಯ ಕುರಿತು ಅಭಿಮಾನಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

    ಸುದೀಪ್ ಕೂಡ ಭಾರತೀಯ ಸಿನಿಮಾ ರಂಗದ ನಟ. ಅವರಿಗೂ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಅಲ್ಲದೇ, ಗೌರವ ಇಲ್ಲದೇ ಇರುವ ಕಡೆ ಸುದೀಪ್ ಇರುವುದಿಲ್ಲ. ಅದು ಅವರ ಗುಣ. ಪ್ರೀತಿಯಿಂದಲೇ ಎಲ್ಲರನ್ನೂ ಅವರು ಕಾಣುತ್ತಾರೆ. ಸುಮ್ಮನೆ ಕಲಾವಿದರ ಮಧ್ಯೆ ತಂದಿಡುವ ಕೆಲಸ ನಡೆಯುತ್ತಿದೆ ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ ಡಾ.ವಿಷ್ಣು ಸೇನಾಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್. ಅಲ್ಲದೇ ಅನೇಕರು ಈ ಕುರಿತು ಬೇಸರ ವ್ಯಕ್ತ ಪಡಿಸಿದ್ದಾರೆ. ಫ್ಯಾನ್ಸ್ ನಿಂದಾಗಿ ಕಲಾವಿದರಿಗೆ ಮುಜಗರ ಆಗಬಾರದು ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

  • ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ

    ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ

    ಪುನೀತ್ ರಾಜ್ ಕುಮಾರ್ ನಿಧನದ ನಂತರ ಬಹುತೇಕ ಕಲಾವಿದರ ಅಭಿಮಾನಿಗಳು ಒಂದಾಗಿ ‘ನಾವು ಫ್ಯಾನ್ಸ್ ವಾರ್ ಮಾಡಲ್ಲ’ ಎಂದು ಘೋಷಣೆ ಮಾಡಿದ್ದರು. ಈ ಕುರಿತು ಎಲ್ಲ ಸ್ಟಾರ್ ನಟರ ಫೋಟೋ ಒಳಗೊಂಡ ಪೋಸ್ಟರ್ ಕೂಡ ರಿಲೀಸ್ ಮಾಡಿದ್ದರು. ಈ ಪೋಸ್ಟರ್ ಹಂಚಿಕೊಂಡು ಇನ್ನೂ ಆರು ತಿಂಗಳು ಕಳೆದಿಲ್ಲ ಆಗಲೇ ಮತ್ತೆ ಫ್ಯಾನ್ಸ್ ವಾರ್ ಶುರು ಮಾಡಿಕೊಂಡಿದ್ದಾರೆ. ಕಾರಣ ಸುದೀಪ್ ಅವರು ಕೆಜಿಎಫ್ 2 ಚಿತ್ರಕ್ಕೆ ಶುಭ ಹಾರೈಸಿಲ್ಲ ಎನ್ನುವುದು. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

    ಯಶ್ ನಟನೆಯ ಕೆಜಿಎಫ್ 2 ಸಿನಿಮಾ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದಕ್ಷಿಣದ ಬಹುತೇಕ ತಾರೆಯರು ಮತ್ತು ಬಾಲಿವುಡ್ ಸಿನಿ ರಂಗ ಕೆಲವು ನಟ ನಟಿಯರು ಸಿನಿಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ಬಗ್ಗೆ ಅಭಿಮಾನದಿಂದ ಬರೆದುಕೊಂಡಿದ್ದಾರೆ. ಆದರೆ, ಕನ್ನಡದ ಕೆಲ  ನಟರು ಕೆಜಿಎಫ್ 2 ಸಿನಿಮಾದ ಬಗ್ಗೆ ಒಂದು ಪೋಸ್ಟ್ ಕೂಡ ಮಾಡಿಲ್ಲ ಎನ್ನುವುದು ಹಲವು ಅಭಿಮಾನಿಗಳ ತಕರಾರು. ಅದಕ್ಕೆ ಗುರಿಯಾಗಿದ್ದು ಕಿಚ್ಚು ಸುದೀಪ್. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್ 

    ನೆನ್ನೆಯಷ್ಟೇ ಸುದೀಪ್ ಅವರು ಎಂದೋ ಆಡಿದ  ಐದತ್ತು ಸೆಕೆಂಡುಗಳು ವಿಡಿಯೋ ಕ್ಲಿಪ್ ಅನ್ನು ಇಟ್ಟುಕೊಂಡು ಕಿಚ್ಚನ ಬಗ್ಗೆ ಸಲ್ಲದ ಕಾಮೆಂಟ್ ಮಾಡಲಾಗುತ್ತಿದೆ. ಅದಕ್ಕೆ ಪ್ರತಿಯಾಗಿ ಸುದೀಪ್ ಅವರ ಅಭಿಮಾನಿಗಳು ಕೂಡ ಕೌಂಟರ್ ಕಾಮೆಂಟ್ ನೀಡುತ್ತಿದ್ದಾರೆ. ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಫ್ಯಾನ್ಸ್ ವಾರ್ ಶುರು ಮಾಡಿದೆ. ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿ

    ಸದ್ಯ ಹರಿದಾಡುತ್ತಿರುವ ವಿಡಿಯೋ ಕ್ಲಿಪ್ ನಲ್ಲಿ ಪತ್ರಕರ್ತರೊಬ್ಬರು ‘ಕೆಜಿಎಫ್’ ಬಗ್ಗೆ ಹೇಳಿ ಎಂದು ಕೇಳುತ್ತಾರೆ. ‘ನಾನು ಆ ಸಿನಿಮಾದಲ್ಲಿ ಇಲ್ಲ’ ಎಂದಷ್ಟೇ ಚುಟುಕಾಗಿ ಸುದೀಪ್ ಉತ್ತರ ಕೊಟ್ಟಿದ್ದಾರೆ. ಅದನ್ನೇ ಹಿಡಿದುಕೊಂಡು ಕೆಲವರು ಕಿಚ್ಚನ ತೇಜೋವಧೆ ಮಾಡುತ್ತಿದ್ದಾರೆ. ಅದಕ್ಕೆ ಉತ್ತರವಾಗಿ ಸುದೀಪ್ ಅಭಿಮಾನಿಗಳು ಕೂಡ ಅಷ್ಟೇ ಖಡಕ್ಕಾಗಿಯೇ ಉತ್ತರ ನೀಡಿದ್ದು, ಈ ಹಿಂದೆ ಸುದೀಪ್ ಅವರು ಕೆಜಿಎಫ್ 1 ಸಿನಿಮಾ ರಿಲೀಸ್ ಆದಾಗ ಟ್ವಿಟ್ ಮಾಡಿರುವ ಸ್ಕ್ರೀನ್ ಶಾಟ್ ಹಾಕಿದ್ದಾರೆ ಅಲ್ಲದೇ ಈ ಹಿಂದೆ ಮತ್ತೊಬ್ಬ ಕನ್ನಡದ ಸ್ಟಾರ್ ನಟನ ಚಿತ್ರಕ್ಕೆ ಸುದೀಪ್ ಶುಭ ಹಾರೈಸಿದಾಗ, ಆ ನಟ ನಡೆದುಕೊಂಡ ರೀತಿಯ ಕುರಿತು ಅಭಿಮಾನಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.  ಇದನ್ನೂ ಓದಿ : ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಪುತ್ರನ ಸಾಹಸವಿದು

    ಸುದೀಪ್ ಕೂಡ ಭಾರತೀಯ ಸಿನಿಮಾ ರಂಗದ ನಟ. ಅವರಿಗೂ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಅಲ್ಲದೇ, ಗೌರವ ಇಲ್ಲದೇ ಇರುವ ಕಡೆ ಸುದೀಪ್ ಇರುವುದಿಲ್ಲ. ಅದು ಅವರ ಗುಣ. ಪ್ರೀತಿಯಿಂದಲೇ ಎಲ್ಲರನ್ನೂ ಅವರು ಕಾಣುತ್ತಾರೆ. ಸುಮ್ಮನೆ ಕಲಾವಿದರ ಮಧ್ಯೆ ತಂದಿಡುವ ಕೆಲಸ ನಡೆಯುತ್ತಿದೆ ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ ಡಾ.ವಿಷ್ಣು ಸೇನಾಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್. ಅಲ್ಲದೇ ಅನೇಕರು ಈ ಕುರಿತು ಬೇಸರ ವ್ಯಕ್ತ ಪಡಿಸಿದ್ದಾರೆ. ಫ್ಯಾನ್ಸ್ ನಿಂದಾಗಿ ಕಲಾವಿದರಿಗೆ ಮುಜಗರ ಆಗಬಾರದು ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.