Tag: Vikrant Rona

  • ಬಾಲಿವುಡ್ ನೆಲದಲ್ಲೂ ಕನ್ನಡ ಬಿಟ್ಟು ಕೊಡದ ಕಿಚ್ಚ ಸುದೀಪ್

    ಬಾಲಿವುಡ್ ನೆಲದಲ್ಲೂ ಕನ್ನಡ ಬಿಟ್ಟು ಕೊಡದ ಕಿಚ್ಚ ಸುದೀಪ್

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ಭಾರತಾದ್ಯಂತ ನಡೆಯುತ್ತಿದೆ. ಮುಂಬೈ, ಕೊಚ್ಚಿ, ಹೈದರಾಬಾದ್, ಚೆನ್ನೈ ಹೀಗೆ ಹಲವು ಕಡೆ ಸುದೀಪ್ ಅಂಡ್ ಟೀಮ್ ಪತ್ರಿಕಾಗೋಷ್ಠಿ ನಡೆಸುತ್ತಿದೆ. ಈ ಸಂದರ್ಭದಲ್ಲಿ ಸುದೀಪ್ ಅವರಿಗೆ ನಾನಾ ರೀತಿಯ ಪ್ರಶ್ನೆಗಳು ಎದುರಾಗುತ್ತಿವೆ. ಅದರಲ್ಲೂ ಬಾಲಿವುಡ್ ನಲ್ಲಿ ಸುದೀಪ್ ವಿಚಿತ್ರ ಪ್ರಶ್ನೆಯೊಂದನ್ನು ಎದುರಿಸಬೇಕಾಯಿತು. ಅದಕ್ಕೆ ಸಮರ್ಥವಾಗಿ, ತಣ್ಣಗೆ ಉತ್ತರ ಕೊಟ್ಟು ಭೇಷ್ ಅನಿಸಿಕೊಂಡರು ಕಿಚ್ಚ.

    ಹಿಂದಿ ವಿಚಾರದಲ್ಲಿ ಈಗಾಗಲೇ ಸುದೀಪ್ ಒಂದು ರೀತಿಯಲ್ಲಿ ಬಿಸಿ ಮುಟ್ಟಿಸಿದ್ದಾಗಿದೆ. ಕನ್ನಡದ ಮೇಲೆ ಹಿಂದಿ ಹೇರಿಕೆ ವಿಚಾರ, ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ಸಿನಿಮಾಗಳನ್ನು ಎಳೆತಂದ ದೊಡ್ಡದೊಂದು ಚರ್ಚೆಗೆ ಕಾರಣವಾಗಿತ್ತು. ಆಗಲೂ ಸುದೀಪ್, ತಾಯ್ನುಡಿಯನ್ನು ಬಿಟ್ಟು ಕೊಡಲಿಲ್ಲ. ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲೂ ಸುದೀಪ್ ಅದನ್ನು ಮುಂದುವರಿಸಿದರು. ನಮ್ಮ ನೆಲದ ಕಥೆಯನ್ನು ನಾವು ಹೇಳುತ್ತಿದ್ದೇವೆ. ಬೇರೆಯವರು ತಮ್ಮ ನೆಲದ ಕಥೆಯನ್ನು ಹೇಳುತ್ತಾರೆ. ಕನ್ನಡದಲ್ಲಿ ಯಾವ ರೀತಿಯ ಸಿನಿಮಾಗಳು ಬರುತ್ತಿವೆ ಎನ್ನುವುದನ್ನು ನೋಡುವುದಕ್ಕಾಗಿ ನಿಮಗೆ ಸ್ವಾಗತ ಎಂದು ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಸುದೀಪ್ ಆಹ್ವಾನಿಸಿದರು.

    ತೆಲುಗಿನಲ್ಲಿ ಒಳ್ಳೊಳ್ಳೆ ಕಮರ್ಷಿಯಲ್ ಸಿನಿಮಾಗಳು ಬರುತ್ತಿವೆ. ಅವು ಪ್ಯಾನ್ ಇಂಡಿಯಾ ಸಿನಿಮಾಗಳು ಆಗಿವೆ. ತಮಿಳಿನಲ್ಲೂ ಅಂಥದ್ದೇ ಪ್ರಯೋಗವಿದೆ. ಕನ್ನಡದಲ್ಲಿ ಯಾಕಿಲ್ಲ ಎನ್ನುವ ಪ್ರಶ್ನೆಯೊಂದನ್ನು ಪತ್ರಕರ್ತ ಕೇಳಿದಾಗ, ಬಹುಶಃ ನಿಮಗೆ ಕನ್ನಡದ ಬಗ್ಗೆ ತಿಳುವಳಿಕೆ ಕಡಿಮೆಯಿದೆ ಅನಿಸುತ್ತದೆ. ನಮ್ಮಲ್ಲೂ ಅದ್ಭುತ ಸಿನಿಮಾಗಳು ಬಂದಿವೆ. ಯಾವ ರೀತಿಯ ಚಿತ್ರಗಳು ಬಂದಿವೆ ಎಂದು ತಿಳಿದುಕೊಳ್ಳಲು ನಾನು ನಿಮಗೆ ಸ್ವಾಗತ ಮಾಡುತ್ತೇನೆ ಎಂದು ಹೇಳುವ ಮೂಲಕ ಬಿಟೌನ್ ನಲ್ಲೂ ಕನ್ನಡದ ಪ್ರೇಮ ಮೆರೆದಿದ್ದಾರೆ ಸುದೀಪ್. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ

    ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್ ನ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ದಾಖಲೆ ಮಟ್ಟದಲ್ಲಿ ಅದು ಜನರನ್ನು ತಲುಪಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲೂ ಟ್ರೈಲರ್ ರಿಲೀಸ್ ಆಗಿದೆ. ಎಲ್ಲ ಭಾಷೆಯಲ್ಲೂ ಟ್ರೈಲರ್ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಕೊಂಡಾಡಿದ್ದಾರೆ.

    Live Tv

  • ಮುಂಬೈನಲ್ಲಿ ಜಾಕ್ವಲಿನ್ ಜೊತೆ ಕುಣಿದ ಸುದೀಪ್ : ಕಿಚ್ಚನ ಆರ್ಭಟಕ್ಕೆ ಬಿಟೌನ್ ಫಿದಾ

    ಮುಂಬೈನಲ್ಲಿ ಜಾಕ್ವಲಿನ್ ಜೊತೆ ಕುಣಿದ ಸುದೀಪ್ : ಕಿಚ್ಚನ ಆರ್ಭಟಕ್ಕೆ ಬಿಟೌನ್ ಫಿದಾ

    ವಿಕ್ರಾಂತ್ ರೋಣ ಸಿನಿಮಾದ ಪ್ರಚಾರಕ್ಕಾಗಿ ಕಿಚ್ಚ ಸುದೀಪ್ ಮತ್ತು ಜಾಕ್ವಲಿನ್ ಫರ್ನಾಂಡಿಸ್ ಮುಂಬೈಗೆ ತೆರೆಳಿದ್ದಾರೆ. ಮುಂಬೈನಲ್ಲಿ ವಿಶೇಷ ರೀತಿಯಲ್ಲಿ ಪ್ರಚಾರಕ್ಕೆ ಚಾಲನೆ ನೀಡಲಾಗಿದ್ದು, ರಾ ರಾ ರಕ್ಕಮ್ಮ ಹಾಡಿಗೆ ಸಹ ನೃತ್ಯ ಕಲಾವಿದರ ಜೊತೆ ಸುದೀಪ್ ಮತ್ತು ಜಾಕ್ವಲಿನ್ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಈ ಜೋಡಿ ವಿಶೇಷ ಕಾಸ್ಟ್ಯೂಮ್ ನಲ್ಲೂ ಮಿರ ಮಿರ ಮಿಂಚುತ್ತಿದ್ದರು. ಬಾಲಿವುಡ್ ನ ತಾರೆಯರು ಕೂಡ ಈ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು ಕಿಚ್ಚನಿಗೆ ಸಾಥ್ ನೀಡಿದರು.

    ಸಿನಿಮಾ ರಿಲೀಸ್ ಗೂ ಮುನ್ನ ವಿಕ್ರಾಂತ್ ರೋಣ ಸಿನಿಮಾದ 3 ಡಿ ಟ್ರೈಲರ್ ನಿನ್ನೆಯಷ್ಟೇ ರಿಲೀಸ್ ಆಗಿದೆ. ಕೇವಲ ಮಾಧ್ಯಮದವರಿಗೆ ಮತ್ತು ಸಿಲಿಬ್ರಿಟಿಗಳಿಗೆ ಮಾತ್ರ ಟ್ರೈಲರ್ ತೋರಿಸಲಾಗಿದೆ. ಪ್ರತಿಯೊಬ್ಬರು ಟ್ರೈಲರ್ ಬಗ್ಗೆ ಹಾಡಿಹೊಗಳುತ್ತಿರುವ ಕಾರಣದಿಂದಾಗಿ ಅಭಿಮಾನಿಗಳಿಗೆ ಆ ಟ್ರೈಲರ್ ನೋಡುವ ಕಾತರ ಹೆಚ್ಚಾಗಿದೆ. ಅಲ್ಲದೇ, ಇಂದು ವಿಶೇಷವಾಗಿ ನಾಲ್ಕು ಸ್ಟಾರ್ ನಟರು ಆ ಟ್ರೈಲರ್ ಬಿಡುಗಡೆ ಮಾಡುತ್ತಿರುವುದರಿಂದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

    ಇಂದು ಸಂಜೆ 5.02 ನಿಮಿಷಕ್ಕೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಟ್ರೈಲರ್ ರಿಲೀಸ್ ಆಗುತ್ತಿದ್ದು, ಹಿಂದಿಯಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ಧನುಷ್, ತೆಲುಗಿನಲ್ಲಿ ರಾಮ್ ಚರಣ್ ತೇಜ್, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಬಿಡುಗಡೆ ಮಾಡುತ್ತಿದ್ದಾರೆ. ನಿನ್ನೆ ಕನ್ನಡದಲ್ಲಿ ರವಿಚಂದ್ರನ್, ಶಿವರಾಜ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಟ್ರೈಲರ್ ಬಿಡುಗಡೆ ಮಾಡಿದ್ದರಿಂದ, ಬಹುಶಃ ಅದನ್ನು ಅಷ್ಟಕ್ಕೆ ಸೀಮಿತಗೊಳಿಸುತ್ತಾರಾ? ಅಥವಾ ಸಂಜೆಯೊಳಗೆ ಸ್ಟಾರ್ ನಟರೊಬ್ಬರ ಹೆಸರನ್ನು ಘೋಷಿಸುತ್ತಾರೆ ಎನ್ನುವುದು ಸಸ್ಪನ್ಸ್.

    ಅಭಿಮಾನಿಗಳ ಉಡಿಗೆ ಟ್ರೈಲರ್ ಹಾಕಿ ಇತ್ತ ಸಿನಿಮಾದ ಪ್ರಚಾರಕ್ಕಾಗಿ ದೇಶಾದ್ಯಂತ ಪ್ರವಾಸಕ್ಕೆ ಹೊರಟಿದ್ದಾರೆ ಸುದೀಪ್ ಮತ್ತು ಟೀಮ್. ಕನ್ನಡದಲ್ಲಿ ಈಗಾಗಲೇ ಪ್ರಚಾರ ಶುರು ಮಾಡಿದ್ದರಿಂದ, ಬೇರೆ ನಾಲ್ಕು ಭಾಷೆಯ ಸಿನಿಮಾಗಾಗಿ ಅವರು ಕೊಚ್ಚಿ, ಹೈದರಾಬಾದ್, ಮುಂಬೈ, ಚೆನ್ನೈ ಸುತ್ತಲಿದ್ದಾರೆ. ಇಂದು ಮುಂಬೈನಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿದ್ದು, ಜೂ.24 ರಂದು ಚೆನ್ನೈ ಮತ್ತು ಕೊಚ್ಚಿಯಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿದೆ. ಜೂ.25 ರಂದು ಹೈದಾರಾಬಾದ್ ನಲ್ಲಿ ಇರಲಿದೆ ಕಿಚ್ಚ ಅಂಡ್ ಟೀಮ್.

    Live Tv

  • ಐದು ಭಾಷೆ, ಐದು ಸ್ಟಾರ್ ನಟರಿಂದ ಕಿಚ್ಚನ ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್

    ಐದು ಭಾಷೆ, ಐದು ಸ್ಟಾರ್ ನಟರಿಂದ ಕಿಚ್ಚನ ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ 3 ಡಿ ಟ್ರೈಲರ್ ನಿನ್ನೆಯಷ್ಟೇ ರಿಲೀಸ್ ಆಗಿದೆ. ಕೇವಲ ಮಾಧ್ಯಮದವರಿಗೆ ಮತ್ತು ಸಿಲಿಬ್ರಿಟಿಗಳಿಗೆ ಮಾತ್ರ ಟ್ರೈಲರ್ ತೋರಿಸಲಾಗಿದೆ. ಪ್ರತಿಯೊಬ್ಬರು ಟ್ರೈಲರ್ ಬಗ್ಗೆ ಹಾಡಿಹೊಗಳುತ್ತಿರುವ ಕಾರಣದಿಂದಾಗಿ ಅಭಿಮಾನಿಗಳಿಗೆ ಆ ಟ್ರೈಲರ್ ನೋಡುವ ಕಾತರ ಹೆಚ್ಚಾಗಿದೆ. ಅಲ್ಲದೇ, ಇಂದು ವಿಶೇಷವಾಗಿ ನಾಲ್ಕು ಸ್ಟಾರ್ ನಟರು ಆ ಟ್ರೈಲರ್ ಬಿಡುಗಡೆ ಮಾಡುತ್ತಿರುವುದರಿಂದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

    ಇಂದು ಸಂಜೆ 5.02 ನಿಮಿಷಕ್ಕೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಟ್ರೈಲರ್ ರಿಲೀಸ್ ಆಗುತ್ತಿದ್ದು, ಹಿಂದಿಯಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ಧನುಷ್, ತೆಲುಗಿನಲ್ಲಿ ರಾಮ್ ಚರಣ್ ತೇಜ್, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಬಿಡುಗಡೆ ಮಾಡುತ್ತಿದ್ದಾರೆ. ನಿನ್ನೆ ಕನ್ನಡದಲ್ಲಿ ರವಿಚಂದ್ರನ್, ಶಿವರಾಜ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಟ್ರೈಲರ್ ಬಿಡುಗಡೆ ಮಾಡಿದ್ದರಿಂದ, ಬಹುಶಃ ಅದನ್ನು ಅಷ್ಟಕ್ಕೆ ಸೀಮಿತಗೊಳಿಸುತ್ತಾರಾ? ಅಥವಾ ಸಂಜೆಯೊಳಗೆ ಸ್ಟಾರ್ ನಟರೊಬ್ಬರ ಹೆಸರನ್ನು ಘೋಷಿಸುತ್ತಾರೆ ಎನ್ನುವುದು ಸಸ್ಪನ್ಸ್. ಇದನ್ನೂ ಓದಿ:ಪತಿ ದಿಗಂತ್ ನೆನೆದು ಭಾವುಕರಾದ ನಟಿ ಐಂದ್ರಿತಾ ರೇ : ಈಗ ಹೇಗಿದ್ದಾರೆ ನಟ ದಿಗಂತ್?

    ಅಭಿಮಾನಿಗಳ ಉಡಿಗೆ ಟ್ರೈಲರ್ ಹಾಕಿ ಇತ್ತ ಸಿನಿಮಾದ ಪ್ರಚಾರಕ್ಕಾಗಿ ದೇಶಾದ್ಯಂತ ಪ್ರವಾಸಕ್ಕೆ ಹೊರಟಿದ್ದಾರೆ ಸುದೀಪ್ ಮತ್ತು ಟೀಮ್. ಕನ್ನಡದಲ್ಲಿ ಈಗಾಗಲೇ ಪ್ರಚಾರ ಶುರು ಮಾಡಿದ್ದರಿಂದ, ಬೇರೆ ನಾಲ್ಕು ಭಾಷೆಯ ಸಿನಿಮಾಗಾಗಿ ಅವರು ಕೊಚ್ಚಿ, ಹೈದರಾಬಾದ್, ಮುಂಬೈ, ಚೆನ್ನೈ ಸುತ್ತಲಿದ್ದಾರೆ. ಇಂದು ಮುಂಬೈನಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿದ್ದು, ಜೂ.24 ರಂದು ಚೆನ್ನೈ ಮತ್ತು ಕೊಚ್ಚಿಯಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿದೆ. ಜೂ.25 ರಂದು ಹೈದಾರಾಬಾದ್ ನಲ್ಲಿ ಇರಲಿದೆ ಕಿಚ್ಚ ಅಂಡ್ ಟೀಮ್.

    Live Tv

  • ‘ವಿಕ್ರಾಂತ್ ರೋಣ’ 3 ಡಿ ಟ್ರೈಲರ್ ಲಾಂಚ್ ಮಾಡಿ, ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ ಶಿವರಾಜ್ ಕುಮಾರ್

    ‘ವಿಕ್ರಾಂತ್ ರೋಣ’ 3 ಡಿ ಟ್ರೈಲರ್ ಲಾಂಚ್ ಮಾಡಿ, ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ ಶಿವರಾಜ್ ಕುಮಾರ್

    ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಟ್ರೈಲರ್ ಲಾಂಚ್ ನಾಳೆ ಸಂಜೆ 5 ಗಂಟೆಗೆ ನಡೆಯಲಿದೆ. ಅದಕ್ಕೂ ಮುನ್ನ ಇಂದು 3 ಡಿ ಟ್ರೈಲರ್ ಅನ್ನು ಶಿವರಾಜ್ ಕುಮಾರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸುದೀಪ್ ನನ್ನ ಬ್ರದರ್ ಇದ್ದಹಾಗೆ. ನನ್ನ ಕುಟುಂಬಕ್ಕೂ ಕೂಡ ತೀರಾ ಹತ್ತಿರದವರು. ಅವರ ಶಾಂತಿ ನಿವಾಸ ಸಿನಿಮಾಗೆ ನಾನು ಸಣ್ಣದಾಗಿ ಧ್ವನಿ ನೀಡಿದ್ದೆ. ಅಲ್ಲದೇ, ನಿರ್ದೇಶಕ ಅನೂಪ್ ಭಂಡಾರಿ ಅವರ ರಂಗಿತರಂಗ ಸಿನಿಮಾವನ್ನು ನಾನು ಥಿಯೇಟರ್ ನಲ್ಲಿ ನೋಡಿದ್ದೆ’ ಎಂದು ನೆನಪುಗಳನ್ನು ಹಂಚಿಕೊಂಡರು.

    ಕೊರೊನಾ ವೇಳೆಯಲ್ಲಿ ಸುದೀಪ್ ಅವರು ಧೈರ್ಯ ಮಾಡಿಕೊಂಡು ವಿಕ್ರಾಂತ್ ರೋಣ ಸಿನಿಮಾ ಶೂಟಿಂಗ್ ಮಾಡಿದ್ದನ್ನು ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ನೆನಪಿಸಿಕೊಂಡರು. ಕೊನೆಯಲ್ಲಿ ವಿಕ್ರಾಂತ್ ರೋಣ ಸಿನಿಮಾದ ಹುಕ್ ಸ್ಟೆಪ್ ಮಾಡಿದ ಶಿವಣ್ಣ, ವೇದಿಕೆಯ ಮೇಲೆಯೇ ರಾ ರಾ ರಕ್ಕಮ್ಮ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದರು. ಇದನ್ನೂ ಓದಿ:ಇನ್ನೆರಡು ತಿಂಗಳಲ್ಲಿ ಶಿವರಾಜ್ ಕುಮಾರ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ಸಿನಿಮಾ: ರಮೇಶ್ ರೆಡ್ಡಿ

    ಕಾರ್ಯಕ್ರಮದಲ್ಲಿ ರವಿಚಂದ್ರನ್, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ಡಾಲಿ ಧನಂಜಯ್, ಸೃಜನ್ ಲೋಕೇಶ್, ರಾಜೀವ್ ನಿರ್ದೇಶಕ ನಂದಕಿಶೋರ್, ರಿಷಭ್ ಶೆಟ್ಟಿ, ರಾಜ್ ಬಿ ಶೆಟ್ಟಿ, ನಿರ್ಮಾಪಕ ಕೆ.ಪಿ ಶ್ರೀಕಾಂತ್ ಮತ್ತು ಎನ್. ಕುಮಾರ್ ಹಾಗೂ  ಸುದೀಪ್ ಪತ್ನಿ ಪ್ರಿಯಾ, ಮಗಳು ಸಾನ್ವಿ, ಸಹೋದರಿ ಸುಜಾತ ಸೇರಿದಂತೆ ಹಲವರು ಭಾಗಿಯಾಗಿದ್ದರು.

    Live Tv

  • ಪೌರ ಕಾರ್ಮಿಕರನ್ನು ಮನೆಗೆ ಕರೆಯಿಸಿಕೊಂಡ ಕಿಚ್ಚ ಸುದೀಪ್, ಇದು ರಕ್ಕಮ್ಮ ಹಾಡು ಎಫೆಕ್ಟ್

    ಪೌರ ಕಾರ್ಮಿಕರನ್ನು ಮನೆಗೆ ಕರೆಯಿಸಿಕೊಂಡ ಕಿಚ್ಚ ಸುದೀಪ್, ಇದು ರಕ್ಕಮ್ಮ ಹಾಡು ಎಫೆಕ್ಟ್

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ರಕ್ಕಮ್ಮ ಹಾಡು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಭಾರತೀಯ ಸಿನಿಮಾ ರಂಗದ ಅನೇಕ ಕಲಾವಿದರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರೀಲ್ಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡಿನ ತುಣುಕಿಗೆ ಹೆಜ್ಜೆ ಹಾಕಿದವರ ವಿಡಿಯೋ ವೈರಲ್ ಆಗುತ್ತಿವೆ. ಅದರಲ್ಲಿ ಪೌರ ಕಾರ್ಮಿಕರ ವಿಡಿಯೋ ಕೂಡ ಒಂದು. ಧಾರವಾಡದ ಕೆಲ ಪೌರ ಕಾರ್ಮಿಕರು ‘ರಾ ರಾ ರಕ್ಕಮ್ಮ’ ಎಂದು ಕುಣಿದಿದ್ದೇ ತಡ, ಆ ಹಾಡು ಅಸಂಖ್ಯಾತ ನೋಡುಗರ ಮೆಚ್ಚುಗೆಗೆ ಕಾರಣವಾಗಿತ್ತು.

    ಧಾರವಾಡದ ಕೆಲ ಪೌರ ಕಾರ್ಮಿಕರು ಈ ಹಾಡಿಗೆ ಹೆಜ್ಜೆ ಹಾಕಲು ಬರೋಬ್ಬರಿ ಮೂವತ್ತು ಸಾವಿರ ಖರ್ಚು ಮಾಡಿದ್ದರಂತೆ. ಆ ವಿಡಿಯೋವನ್ನು ನೋಡಿದ ಕಿಚ್ಚ ಸುದೀಪ್, ಅಷ್ಟೂ ಪೌರ ಕಾರ್ಮಿಕರನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಉಪಚರಿಸಿದ್ದಾರೆ. ಅಲ್ಲದೇ, ಅವರೊಂದಿಗೆ ಕೆಲ ಹೊತ್ತು ಕಳೆದು, ಫೋಟೋ ತಗೆಸಿಕೊಂಡು ಸಂಭ್ರಮಿಸಿದ್ದಾರೆ. ಕಿಚ್ಚನ ಮನೆಗೆ ಬಂದ ಕಾರ್ಮಿಕರು ಕೂಡ ನೆಚ್ಚಿನ ನಟನನ್ನು ಕಂಡು ಖುಷಿ ಪಟ್ಟಿದ್ದಾರೆ. ಇದನ್ನೂ ಓದಿ:ದಿಗಂತ್ ಬಾಳಲ್ಲಿ ನಡೀತು ಮತ್ತೊಂದು ದುರಂತ

    ಈ ಕುರಿತು ಮಾತನಾಡಿರುವ ಪೌರ ಕಾರ್ಮಿಕರು, ತಾವು ಸುದೀಪ್ ಅವರ ಅಭಿಮಾನಿಗಳು. ವಿಕ್ರಾಂತ್ ರೋಣ ಸಿನಿಮಾ ಯಶಸ್ವಿ ಆಗಲೆಂದು ಮೂವತ್ತು ಸಾವಿರ ರೂಪಾಯಿ ಖರ್ಚು ಮಾಡಿ, ಸೆಟ್ ಹಾಕಿ ಹಾಡನ್ನು ಶೂಟ್ ಮಾಡಿದ್ದೆವು. ಅದನ್ನು ಸುದೀಪ್ ಅವರು ನೋಡಿ, ನಮ್ಮನ್ನು ಮನೆಗೆ ಕರೆಯಿಸಿಕೊಂಡು ಗೌರವಿಸಿದ್ದಾರೆ. ಇದೊಂದು ಮರೆಯಲಾರದ ಕ್ಷಣ ಎಂದು ಹೇಳಿದ್ದಾರೆ. ಸ್ವತಃ ದೇವರನ್ನು ಭೇಟಿ ಮಾಡಿದಷ್ಟು ನಮಗೆಲ್ಲ ಖುಷಿ ಆಗಿದೆ ಎಂದೂ ಅವರು ತಿಳಿಸಿದ್ದಾರೆ.

    Live Tv

  • ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್, ಯಾವ ಭಾಷೆಯಲ್ಲಿ ಯಾರು ರಿಲೀಸ್?

    ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್, ಯಾವ ಭಾಷೆಯಲ್ಲಿ ಯಾರು ರಿಲೀಸ್?

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಜೂನ್ 23 ರಂದು ದೇಶಾದ್ಯಂತ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಅಭಿಮಾನಿಗಳು ಟ್ರೈಲರ್ ರಿಲೀಸ್ ಗಾಗಿ ಕಾಯುತ್ತಿದ್ದು, ಒಂದೊಂದು ಭಾಷೆಯಲ್ಲಿ ಒಬ್ಬೊಬ್ಬ ಕಲಾವಿದರು ಈ ಟ್ರೈಲರ್ ಅನ್ನು ರಿಲೀಸ್ ಮಾಡಲಿದ್ದಾರೆ. ಹಿಂದಿ, ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳಿನಲ್ಲಿ ಈ ಟ್ರೈಲರ್ ಬಿಡುಗಡೆ ಆಗಲಿದೆ.

    ಈಗಾಗಲೇ ತಮಿಳು ಭಾಷೆಯ ಟ್ರೈಲರ್ ಅನ್ನು ತಮಿಳಿನ ಖ್ಯಾತ ನಟ ಧನುಷ್ಯ ಬಿಡುಗಡೆ ಮಾಡಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಆದರೆ, ಇತರ ಭಾಷೆಯಲ್ಲಿ ಮೂಡಿ ಬಂದಿರುವ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಯಾರಿಂದ ರಿಲೀಸ್ ಆಗಲಿದೆ ಎನ್ನುವ ಕುತೂಹಲ ಮೂಡಲಿದೆ. ಹಿಂದಿಯಲ್ಲಿ ಈ ಸಿನಿಮಾಗೆ ಸಲ್ಮಾನ್ ಖಾನ್ ಸಾಥ್ ನೀಡಿರುವುದರಿಂದ ಮತ್ತೊಬ್ಬ ಬಿಗ್ ಸ್ಟಾರ್ ಈ ಟ್ರೈಲರ್ ರಿಲೀಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಚಾರ್ಲಿ 777 ತೆರಿಗೆ ವಿನಾಯತಿ: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಸಮಾಧಾನ ಏಕೆ?

    ಕಿಚ್ಚ ಸುದೀಪ್ ನಟನೆಯ ಬಹುಕೋಟಿ ಬಜೆಟ್ ಸಿನಿಮಾ ಇದಾಗಿದ್ದು, 2 ಡಿ ಮತ್ತು 3 ಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಭಾರತೀಯ ಭಾಷೆಗಳಿಗೆ ಮಾತ್ರವಲ್ಲ, ಇಂಗ್ಲಿಷ್ ಗೂ ಈ ಸಿನಿಮಾ ಡಬ್ ಆಗಿ ಹಾಲಿವುಡ್ ನಲ್ಲೂ ರಿಲೀಸ್ ಆಗುತ್ತಿದೆ. ಹೀಗಾಗಿ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಹೊಂದಲಾಗಿದೆ. ಈಗಾಗಲೇ ರಿಲೀಸ್ ಆಗಿರುವ ‘ರಾ ರಾ ರಕ್ಕಮ್ಮ’ ಹಾಡು ದಾಖಲೆ ರೀತಿಯಲ್ಲಿ ಜನರಿಗೆ ತಲುಪಿದ್ದು, ಟ್ರೈಲರ್ ಅನ್ನು ಅದೇ ಮಟ್ಟಕ್ಕೆ ರೀಚ್ ಮಾಡಿಸುವ ಪ್ಲ್ಯಾನ್ ಅಭಿಮಾನಿಗಳು ಮಾಡಿದ್ದಾರಂತೆ. ಇಂದು ಅಥವಾ ನಾಳೆ ಬೇರೆ ಭಾಷೆಯ ಟ್ರೈಲರ್ ಅನ್ನು ಯಾರು ಬಿಡಗಡೆ ಮಾಡಲಿದ್ದಾರೆ ಎನ್ನುವುದು ಗೊತ್ತಾಗಲಿದೆ.

    Live Tv

  • ನಾವು ಸಿನಿಮಾ ಮಾಡೋದು ಬೇರೆಯವ್ರ ರೆಕಾರ್ಡ್‌ ಬ್ರೇಕ್ ಮಾಡೋದಕ್ಕೆ ಅಲ್ಲ: ಹಿಂಗ್ಯಾಕಂದ್ರು ಸುದೀಪ್‌?

    ನಾವು ಸಿನಿಮಾ ಮಾಡೋದು ಬೇರೆಯವ್ರ ರೆಕಾರ್ಡ್‌ ಬ್ರೇಕ್ ಮಾಡೋದಕ್ಕೆ ಅಲ್ಲ: ಹಿಂಗ್ಯಾಕಂದ್ರು ಸುದೀಪ್‌?

    ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ `ವಿಕ್ರಾಂತ್ ರೋಣ’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ರಿಲೀಸ್ ಕಡೆ ಹೆಚ್ಚಿನ ಗಮನ ಕೊಡ್ತಿದ್ದಾರೆ. ಇದೀಗ ಸಿನಿಮಾ ಕೆಲಸದ ಮಧ್ಯೆ ಬ್ಯಾಟ್ ಹಿಡಿದು ಗ್ರೌಂಡ್‌ನಲ್ಲಿ ಮಿಂಚ್ತಿದ್ದಾರೆ. ಈ ವೇಳೆ ರಿಲೀಸ್‌ಗೆ ರೆಡಿಯಿರೋ ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

    ಕಿಚ್ಚ ಸುದೀಪ್ ಅವರಿಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ಕ್ರಿಕೆಟ್ ಕಡೆ ಎಲ್ಲಿಲ್ಲದ ಆಸಕ್ತಿ. ಸಿನಿಮಾ ಕೆಲಸದ ಬಿಡುವಿನಲ್ಲಿ ಆಗಾಗ ಬ್ಯಾಟ್ ಹಿಡಿದು ಫೀಲ್ಡ್‌ಗೆ ಇಳಿಯುತ್ತಾರೆ. ಹಾಗೆಯೇ ಇಂದು ಮುಂಜಾನೆ ಸುದೀಪ್ ಕ್ರಿಕೆಟ್ ಆಡಲು ಮೈದಾನದಲ್ಲಿ ಹಾಜರಾಗಿದ್ದಾರೆ. ಪೊಲೀಸ್ ತಂಡದ ಜೊತೆ ಸ್ನೇಹಪೂರ್ವಕ ಪಂದ್ಯ ಆಡಿದ್ದಾರೆ. ಈ ವೇಳೆ ಜುಲೈ 28ಕ್ಕೆ ತೆರೆಗೆ ಅಬ್ಬರಿಸುತ್ತಿರುವ `ವಿಕ್ರಾಂತ್ ರೋಣ’ ಚಿತ್ರದ ಬಗ್ಗೆ ಮಾಧ್ಯಮದ ಜೊತೆ ಸುದೀಪ್ ಮಾತನಾಡಿದ್ದಾರೆ. ಇದನ್ನೂ ಓದಿ:ಪ್ರಾಣಿ, ಪಕ್ಷಿಗಳ ಜೊತೆ ರಾಕಿಭಾಯ್ ಕುಟುಂಬ: ವಿಡಿಯೋ ಹಂಚಿಕೊಂಡ ಯಶ್

    `ವಿಕ್ರಾಂತ್ ರೋಣ’ ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಸಿನಿಮಾವಾಗಿದೆ. ನನ್ನ ಫ್ಯಾನ್ಸ್ ಮಾಡ್ತಿರುವ `ರಾ ರಾ ರಕ್ಕಮ್ಮ’ ರೀಲ್ಸ್ ಬಹಳ ರೀಚ್ ಆಗ್ತಿದೆ. ನಾವು ಸಿನಿಮಾ ಮಾಡೋದು ಬೇರೆ ರೆಕಾರ್ಡ್ ಬ್ರೇಕ್ ಮಾಡೊವುದಕ್ಕೆ ಅಲ್ಲ. ಪ್ರೇಕ್ಷಕರ ಮನರಂಜನೆಗಾಗಿ, ʻಆರ್ ಆರ್ ಆರ್ʼ ಅವರ ಕಷ್ಟಕ್ಕೆ ಪ್ರತಿಫಲ ಸಿಕ್ಕಿದೆ. `ಕೆಜಿಎಫ್’ ಸಿನಿಮಾದ ಶ್ರಮಕ್ಕೆ ಸಿಗಬೇಕಾದ ಪ್ರತಿಫಲ ಸಿಕ್ಕಿದೆ. ಇದನ್ನೂ ಓದಿ:ಹೊಸ ಮನೆಯ ಹೊಸ್ತಿಲಲ್ಲಿ ಬಿಗ್‌ ಬಾಸ್‌ ಖ್ಯಾತಿಯ ಕವಿತಾ ಗೌಡ- ಚಂದನ್

    ನಾವು ಒಳ್ಳೆಯ ಸಿನಿಮಾ ಮಾಡಲು ಪ್ರಯತ್ನ ಮಾಡ್ತೀವಿ, ಸಕ್ಸಸ್ ಎಷ್ಟು ಸಿಗ್ಬೇಕೊ ಅದು ಸಿಗುತ್ತೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ `ವಿಕ್ರಾಂತ್ ರೋಣ’ ರೆಡಿಯಾಗಿದ್ದು, ತೆರೆಗೆ ಬರಲಿದೆ. ಹಿಂದಿ, ಇಂಗ್ಲಿಷ್‌ನಲ್ಲಿ `ವಿಕ್ರಾಂತ್ ರೋಣ’ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗ್ತಿದೆ. ಸಲ್ಮಾನ್ ಖಾನ್ ಹಿಂದಿಯಲ್ಲಿ `ವಿಕ್ರಾಂತ್ ರೋಣ’ ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತಿದ್ದಾರೆ ಎಂದು ಸುದೀಪ್ ಮಾತನಾಡಿದ್ದಾರೆ.

    Live Tv

  • ಜೂ.23ಕ್ಕೆ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಟ್ರೈಲರ್: ಕಾದಿದ್ದ ಅಭಿಮಾನಿಗಳಿಗೆ ಕಿಚ್ಚೋತ್ಸವ

    ಜೂ.23ಕ್ಕೆ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಟ್ರೈಲರ್: ಕಾದಿದ್ದ ಅಭಿಮಾನಿಗಳಿಗೆ ಕಿಚ್ಚೋತ್ಸವ

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಮುಂದಿನ ಅಪ್ ಡೇಟ್ ಗಾಗಿ ಕಿಚ್ಚನ ಅಭಿಮಾನಿಗಳು ಕಾಯುತ್ತಿದ್ದರು. ಅದರಲ್ಲೂ ಟ್ರೈಲರ್ ಯಾವಾಗ ಬರಲಿದೆ ಎನ್ನುವ ಪ್ರಶ್ನೆಗಳನ್ನು ಸಾಕಷ್ಟು ಬಾರಿ ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಕೇಳಿದ್ದರು. ಇದೀಗ ಅಭಿಮಾನಿಗಳ ಕಾಯುವಿಕೆಗೆ ಉತ್ತರ ಸಿಕ್ಕಿದೆ. ಜೂ.23 ರಂದು ನಿರೀಕ್ಷಿತ ಟ್ರೈಲರ್ ರಿಲೀಸ್ ಮಾಡುವುದಾಗಿ ಕಿಚ್ಚ ಸುದೀಪ್ ಟ್ವಿಟ್ ಮಾಡಿದ್ದಾರೆ.

    ನಿನ್ನೆ ಸಂಜೆ ಸೋಷಿಯಲ್ ಮೀಡಿಯಾ ಮೂಲಕ ‘ನಾಳೆ ಬಿಗ್ ಅನೌನ್ಸ್ ಮೆಂಟ್’ ಎಂದು ಬರೆದು, ಸಖತ್ ಕ್ಯೂರಿಯಾಸಿಟಿ ಮೂಡಿಸಿತ್ತು ಸಿನಿಮಾ ಟೀಮ್. ಆ ಅನೌನ್ಸ್ ಮೆಂಟ್ ಏನಿರಬಹುದು ಎಂಬ ಪ್ರಶ್ನೆ ಮೂಡಿತ್ತು. ಬಹುಶಃ ಮತ್ತೊಂದು ಹಾಡು ರಿಲೀಸ್ ಮಾಡಬಹುದಾ? ಅಥವಾ ಪ್ರಿ ರಿಲೀಸ್ ಇವೆಂಟ್ ಬಗ್ಗೆ ಏನಾದರೂ ಹೇಳಬಹುದು ಎಂದು ಅಂದಾಜಿಸಲಾಗಿತ್ತು. ಇದಕ್ಕೂ ದೊಡ್ಡ ಸರ್ ಪ್ರೈಸ್ ಮೂಲಕ ಅಭಿಮಾನಿಗಳಿಗೆ ಸಂಭ್ರಮ ತಂದಿದ್ದಾರೆ ನಿರ್ದೇಶಕರು. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್

    ಈಗಾಗಲೇ ಸಿನಿಮಾ ‘ರಾ ರಾ ರಕಮ್ಮ’ ಹಾಡು ವೈರಲ್ ಆಗಿದೆ. ಕೇವಲ ಸಾಮಾನ್ಯ ಸಿನಿ ಪ್ರೇಕ್ಷಕರು ಮಾತ್ರವಲ್ಲ, ವಿವಿಧ ಕ್ಷೇತ್ರಗಳ ಗಣ್ಯರು ಕೂಡ ಈ ಹಾಡಿಗೆ ಹೆಜ್ಜೆ ಹಾಕಿ, ಆ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ದೇಶ ವಿದೇಶಗಳಲ್ಲೂ ಈ ಹಾಡು ಕ್ರೇಜ್ ಕ್ರಿಯೇಟ್ ಮಾಡಿದೆ. ಟ್ರೈಲರ್ ನಲ್ಲಿ ಮತ್ತೇನು ಹೊಸದು ಕಾದಿದೆ ಎನ್ನುವ ನಿರೀಕ್ಷೆಯಂತೂ ಮೂಡಿದೆ.

    Live Tv

  • ನಿರ್ಮಾಪಕ ಜಾಕ್ ಮಂಜುಗೆ ಏನಾಗಿದೆ?: ಅಪ್ ಡೇಟ್ ಕೊಟ್ಟ ಕಿಚ್ಚ ಸುದೀಪ್

    ನಿರ್ಮಾಪಕ ಜಾಕ್ ಮಂಜುಗೆ ಏನಾಗಿದೆ?: ಅಪ್ ಡೇಟ್ ಕೊಟ್ಟ ಕಿಚ್ಚ ಸುದೀಪ್

    ವಿಕ್ರಾಂತ್ ರೋಣ ಸಿನಿಮಾದ ನಿರ್ಮಾಪಕ, ಕಿಚ್ಚ ಸುದೀಪ್ ಅವರ ಆತ್ಮೀಯ ಸ್ನೇಹಿತ ಜಾಕ್ ಮಂಜು ಅವರು ಆಸ್ಪತ್ರೆಗೆ ದಾಖಲಾಗಿದ್ದ ಫೋಟೋಗಳು ಬೆಳಗ್ಗೆಯಿಂದ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದವು. ಹೃದಯ ಸಂಬಂಧಿ ಖಾಯಿಲೆ ಕಾರಣಕ್ಕಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸುದ್ದಿ ಆಯಿತು. ಆನಂತರ ಕಾಲಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು, ಇದೀಗ ಮನೆಯಲ್ಲಿದ್ದಾರೆ ಎಂದು ಹೇಳಲಾಯಿತು. ಆದರೆ, ಕಿಚ್ಚ ಸುದೀಪ್ ಹೇಳುವುದೇ ಬೇರೆ.

    ಜಾಕ್ ಮಂಜು ಅವರ ಆರೋಗ್ಯದ ಕುರಿತಂತೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, “ನನ್ನ ಸಹೋದರ ಮತ್ತು ಗೆಳೆಯ ಜಾಕ್ ಮಂಜು ಆರೋಗ್ಯವಾಗಿದ್ದಾರೆ. ಇಂದು ಆಸ್ಪತ್ರೆಯಿಂದ ಅವರು ಡಿಸ್ ಚಾರ್ಜ್ ಆಗುತ್ತಿದ್ದಾರೆ. ಮುನ್ನೆಚ್ಚರಿಕೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಏನೂ ಇಲ್ಲ. ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಫೋಟೋಗಳು ಎಲ್ಲರನ್ನೂ ಆತಂಕ್ಕೀಡು ಮಾಡಿದ್ದವು. ಅವರು ಆರೋಗ್ಯವಾಗಿದ್ದಾರೆ. ನಿಮ್ಮೆಲ್ಲರ ಹಾರೈಕೆಗಳಿಗೆ ಧನ್ಯವಾದಗಳು’ ಎಂದು ಬರೆದಿದ್ದಾರೆ ಸುದೀಪ್.

    ಹದಿನೈದು ದಿನಗಳ ಹಿಂದೆ ಮೆಟ್ಟಿಲು ಹತ್ತುವಾಗ, ಜಾರಿ ಬಿದ್ದಿದ್ದಾರೆ. ಹಾಗಾಗಿ ಕಾಲಿಗೆ ಪೆಟ್ಟಾಗಿತ್ತು. ನೋವು ಕಡಿಮೆ ಆಗದೇ ಇರುವ ಕಾರಣಕ್ಕಾಗಿ ಆಸ್ಪತ್ರೆಗೆ ತೆರಳಿ ಅದಕ್ಕೆ ಬೇಕಾದ ಚಿಕಿತ್ಸೆ ಪಡೆದಿದ್ದಾರೆ. ಅದರ ಹೊರತಾಗಿ ಅವರಿಗೆ ಏನೂ ಆಗಿಲ್ಲ.

    ಜಾಕ್ ಮಂಜು ಅವರು ಆಸ್ಪತ್ರೆ ಸೇರಿರುವ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಸೂಕ್ತ ಮಾಹಿತಿ ಕೂಡ ದೊರೆಕಿರಲಿಲ್ಲ. ಅಲ್ಲದೇ, ಅರೆಬರೆಯ ಮಾಹಿತಿಗಳು ಹರಿದಾಡಿದ್ದರಿಂದ ಹೃದಯ ಸಂಬಂಧಿ ಸಮಸ್ಯೆಗೆ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಆಗಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.

  • ನಿರ್ಮಾಪಕ ಜಾಕ್ ಮಂಜು ಅವರಿಗೆ ಹೃದಯ ಸಮಸ್ಯೆಯಲ್ಲ, ಕಾಲಿಗೆ ಪೆಟ್ಟಾಗಿದ್ದಕ್ಕೆ ಚಿಕಿತ್ಸೆ

    ನಿರ್ಮಾಪಕ ಜಾಕ್ ಮಂಜು ಅವರಿಗೆ ಹೃದಯ ಸಮಸ್ಯೆಯಲ್ಲ, ಕಾಲಿಗೆ ಪೆಟ್ಟಾಗಿದ್ದಕ್ಕೆ ಚಿಕಿತ್ಸೆ

    ಕಿಚ್ಚ ಸುದೀಪ್ ಅವರ ಅತ್ಯಾಪ್ತ, ವಿಕ್ರಾಂತ್ ರೋಣ ಚಿತ್ರದ ನಿರ್ಮಾಪಕ ಜಾಕ್ ಮಂಜು ಅವರಿಗೆ ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದದ್ದು ನಿಜವಾದರೂ, ಅವರಿಗೆ ಯಾವುದೇ ಹೃದಯ ಸಂಬಂಧ ಸಮಸ್ಯೆ ಆಗಿಲ್ಲ ಎನ್ನುತ್ತಾರೆ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ನವೀನ್ ಗೌಡ. ಸದ್ಯ ಜಾಕ್ ಮಂಜು ಅವರು ಮನೆಯಲ್ಲೇ ಇರುವುದಾಗಿಯೂ ಅವರು ತಿಳಿಸಿದರು.

    ಹದಿನೈದು ದಿನಗಳ ಹಿಂದೆ ಮೆಟ್ಟಿಲು ಹತ್ತುವಾಗ, ಜಾರಿ ಬಿದ್ದಿದ್ದಾರೆ. ಹಾಗಾಗಿ ಕಾಲಿಗೆ ಪೆಟ್ಟಾಗಿತ್ತು. ನೋವು ಕಡಿಮೆ ಆಗದೇ ಇರುವ ಕಾರಣಕ್ಕಾಗಿ ಆಸ್ಪತ್ರೆಗೆ ತೆರಳಿ ಅದಕ್ಕೆ ಬೇಕಾದ ಚಿಕಿತ್ಸೆ ಪಡೆದಿದ್ದಾರೆ. ಅದರ ಹೊರತಾಗಿ ಅವರಿಗೆ ಏನೂ ಆಗಿಲ್ಲ. ಸದ್ಯ ಮನೆಯಲ್ಲಿಯೇ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಆತಂಕ ಪಡುವಂಥದ್ದು ಏನೂ ಆಗಿಲ್ಲ ಎನ್ನುವುದು ನವೀನ್ ಗೌಡ ಅವರ ಮಾತು. ಇದನ್ನೂ ಓದಿ: ಥೈಲ್ಯಾಂಡ್ ಟ್ರಿಪ್‌ನಲ್ಲಿ ಪಟಾಕಿ ಪೋರಿ ಆಶಿಕಾ ರಂಗನಾಥ್

    ಜಾಕ್ ಮಂಜು ಅವರು ಆಸ್ಪತ್ರೆ ಸೇರಿರುವ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಸೂಕ್ತ ಮಾಹಿತಿ ಕೂಡ ದೊರೆಕಿರಲಿಲ್ಲ. ಅಲ್ಲದೇ, ಅರೆಬರೆಯ ಮಾಹಿತಿಗಳು ಹರಿದಾಡಿದ್ದರಿಂದ ಹೃದಯ ಸಂಬಂಧಿ ಸಮಸ್ಯೆಗೆ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಆಗಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.