Tag: Vikrant Rona

  • ಜಗತ್ತಿನಲ್ಲಿ ಮೊದಲ ಬಾರಿಗೆ ವಿದೇಶದಲ್ಲಿ ಎನ್.ಎಫ್.ಟಿ ಯಿಂದ ವಿಕ್ರಾಂತ್ ರೋಣ ಪ್ರಿಮಿಯರ್ ಶೋ

    ಜಗತ್ತಿನಲ್ಲಿ ಮೊದಲ ಬಾರಿಗೆ ವಿದೇಶದಲ್ಲಿ ಎನ್.ಎಫ್.ಟಿ ಯಿಂದ ವಿಕ್ರಾಂತ್ ರೋಣ ಪ್ರಿಮಿಯರ್ ಶೋ

    ಕಿಚ್ಚ ಸುದೀಪ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆಗೆ ಇನ್ನೇನು ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ರಾ ರಾ ರಕ್ಕಮ್ಮ, ಟ್ರೇಲರ್ ವಿಕ್ರಾಂತ್ ರೋಣ ಪ್ರಪಂಚದ ಅಧ್ಬುತ ಲೋಕವನ್ನು ಸಿನಿಪ್ರಿಯರಿಗೆ ಪರಿಚಯಿಸಿದೆ. ಜುಲೈ 28ಕ್ಕೆ ಸಿನಿಮಾ ನೋಡಿ ಕಣ್ತುಂಬಿಕೊಳ್ಳೊದೊಂದು ಬಾಕಿ ಎನ್ನುತ್ತಿದ್ದ ಅಭಿಮಾನಿ ಬಳಗಕ್ಕೆ ಕಿಚ್ಚನ ಅಂಗಳದಿಂದ ಮತ್ತೊಂದು ಸೂಪರ್ ಡೂಪರ್ ಸರ್ಪ್ರೈಸ್ ಸಿಕ್ಕಿದೆ. ವಿಕ್ರಾಂತ್ ರೋಣ ಸಿನಿಮಾ ಕೂಡ ಮೆಟಾ ವರ್ಸ್ ಲೋಕಕ್ಕೆ ಕಾಲಿಟ್ಟಿದ್ದು. ಎನ್ ಎಫ್ ಟಿ ಸಂಸ್ಥೆ ‘ಕಿಚ್ಚ ವರ್ಸ್’ ಮೂಲಕ ವಿಕ್ರಾಂತ್ ರೋಣವನ್ನು ಪ್ರಸ್ತುತ ಪಡಿಸಲಿದೆ.

     ಈ ಕುರಿತು ಎನ್ ಎಫ್ ಟಿ ಸಂಸ್ಥೆ ಕಿಚ್ಚ ಸುದೀಪ ಒಳಗೊಂಡಂತೆ ವಿಕ್ರಾಂತ್ ರೋಣ ತಂಡದೊಂದಿಗೆ ಬಂದು ‘ಕಿಚ್ಚ ವರ್ಸ್’ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ನಿನ್ನೆ ‘ಕಿಚ್ಚ ವರ್ಸ್’ ಅನ್ನು ಎನ್ ಎಫ್ ಟಿ ಸಂಸ್ಥೆ ವಿಕ್ರಾಂತ್ ರೋಣ ಚಿತ್ರತಂಡದೊಂದಿಗೆ ಲಾಂಚ್ ಮಾಡಿದೆ.  ಎನ್ ಎಫ್ ಟಿ ಸಂಸ್ಥೆ ಸೃಷ್ಟಿಸಿರುವ ಕಿಚ್ಚ ವರ್ಸ್ ಜಗತ್ತು ಕಿಚ್ಚನಿಗೂ ಸಖತ್ ಸರ್ಪ್ರೈಸ್ ಆಗಿದ್ದು ಮೊದಲ ಬಾರಿ ಇದರ ಬಗ್ಗೆ ಕೇಳಿದಾಗ ಹೇಗಿರುತ್ತೋ ಎಂಬ ಕಾಲ್ಪನಿಕ ಲೋಕದಲ್ಲಿದ್ದೆ. ನನಗೂ ಇದು ಅರ್ಥವಾಗಿರಲಿಲ್ಲ. ಆದ್ರೆ ಅದನ್ನು ಸ್ವತಃ ನಾನೇ ನೋಡಿದಾಗ. ಅನುಭವಿಸಿದಾಗ ತುಂಬಾನೇ ಖುಷಿ ಪಟ್ಟೆ. ತುಂಬಾನೇ ಅಧ್ಬುತ ಕೆಲಸವನ್ನು  ಈ ತಂಡ ಮಾಡಿದೆ ಖಂಡಿತ ಎಲ್ಲರಿಗೂ ಇಂತಹದ್ದೇ ಒಂದು ಒಳ್ಳೆಯ ಅನುಭವವನ್ನು ಇದು ನೀಡಲಿದೆ  ಎಂಬ ಭರವಸೆ ಇದೆ ಎಂದು ನಟ ಕಿಚ್ಚ ಸುದೀಪ ಕಿಚ್ಚ ವರ್ಸ್ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

    ಕಿಚ್ಚ ವರ್ಸ್ ಕಿಚ್ಚನ ಜಗತ್ತಾಗಿದ್ದು ಈ ಲೋಕದಲ್ಲಿ ನೀವು ಕಿಚ್ಚನ ಜೊತೆ ಮಾತನಾಡಬಹುದು, ಅವರ ಜೊತೆ ಸಮಯ ಕಳೆಯಬಹುದು ಹೀಗೆ ನಿಮ್ಮ ನೆಚ್ಚಿನ ನಟನೊಂದಿಗೆ ಕಾಲ ಕಳೆಯಲು ಕಿಚ್ಚ ವರ್ಸ್ ಅವಕಾಶ ಮಾಡಲಿದ್ದು, ಕಿಚ್ಚನ ಅಭಿಮಾನಿಗಳಿಗೆ ಇದು ತುಂಬಾನೇ ಖುಷಿ ಕೊಡಲಿದೆ. ಕಿಚ್ಚ ವರ್ಸ್ ಲೋಕವನ್ನು ಪ್ರವೇಶಿಸಲು ಎನ್ ಎಫ್ ಟಿ ಮೆಂಬರ್ ಶಿಪ್ ಕಾರ್ಡ್ ಪ್ರತಿಯೊಬ್ಬರು ಹೊಂದಿರಬೇಕು ಎಂದು ಕಾಫಿ ಅಂಡ್ ಬನ್ ಇನೋವೇಷನ್ಸ್ ಸಂಸ್ಥೆ ಸ್ಥಾಪಕಿ ಪ್ರಿಯಾ ಸುದೀಪ್ ಕಿಚ್ಚ ವರ್ಸ್ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ:ಪತ್ನಿ ಪ್ರಿಯಾಗೆ ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ಯಾಕೆ?

    ಜುಲೈ 17 ಅಂದ್ರೆ ನಿನ್ನೆಯಿಂದ ಎನ್ ಎಫ್ ಟಿ ಸ್ಕೆಚ್ ಕಾಂಪಿಟೇಶನ್ ಆರಂಭವಾಗಿದ್ದು ವಿಕ್ರಾಂತ್ ರೋಣ ಚಿತ್ರದ ಅಧ್ಬುತ ಸ್ಕೆಚ್ ಮಾಡಿದವರಿಗೆ ಎನ್ ಎಫ್ ಟಿ ಮೆಂಬರ್ ಶಿಪ್ ನೀಡಲಾಗುವುದು. ಇದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ ವಿಕ್ರಾಂತ್ ರೋಣ ಚಿತ್ರದ ಸ್ಕೆಚ್ ಬಿಡಿಸಿ kichchaverse.ioನಲ್ಲಿ ಅಪ್ ಲೋಡ್ ಮಾಡಬೇಕು. ಎನ್ ಎಫ್ ಟಿ ಡ್ರಾಪ್ ಕೂಡ ಜುಲೈ 24ರಿಂದ ನಡೆಯಲಿದೆ.  ಹೀಗೆ ಎನ್ ಎಫ್ ಟಿ ಯ ಕಿಚ್ಚ ವರ್ಸ್ ಹಲವಾರು ಇವೆಂಟ್ ಗಳನ್ನು ಹೊಂದಿದ್ದು ಈ ಮೂಲಕ ತಮ್ಮ ನೆಚ್ಚಿನ ನಟನೊಂದಿಗೆ ಆತ್ಮೀಯವಾಗಿ ಕಾಲ ಕಳೆಯಲು ಅವಕಾಶ ಮಾಡಿಕೊಡಲಿದೆ.

    ಮತ್ತೊಂದು ಹೆಮ್ಮೆಯ ಸಂಗತಿಯಂದ್ರೆ ಜಗತ್ತಿನಲ್ಲೇ ಮೊದಲ ಬಾರಿ ವಿಕ್ರಾಂತ್ ರೋಣ ಸಿನಿಮಾವನ್ನು ಎನ್ ಎಫ್ ಟಿ ಪ್ರೀಮಿಯರ್ ಶೋ ನಡೆಸುತ್ತಿದೆ. ಹೊರದೇಶಗಳಲ್ಲಿ ಕನ್ನಡ ಸಿನಿಮಾವನ್ನು ಪ್ರೀಮಿಯರ್ ಶೋ ನಡೆಸುತ್ತಿರೋದು ಇದೇ ಮೊದಲು. ಇದು ವಿಕ್ರಾಂತ್ ರೋಣ ಸಿನಿಮಾದ ಹೆಗ್ಗಳಿಕೆ. ಜುಲೈ 27ಕ್ಕೆ  ದುಬೈನಲ್ಲಿ ಈ ಪ್ರೀಮಿಯರ್ ಶೋ ನಡೆಯಲಿದೆ. ಇದೆಲ್ಲದಕ್ಕೂ ಎನ್ ಎಫ್ ಟಿ ಮೆಂಬರ್ ಶಿಪ್ ಅಗತ್ಯವಿದೆ ಎಂದು ಕಾಫಿ ಅಂಡ್ ಬನ್ ಇನೋವೇಷನ್ಸ್ ಸಂಸ್ಥೆ ಸಿಇಓ ಜಾಕೀರ್ ಹುಸೇನ್ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು, ಸುದೀಪ್ ಪತ್ನಿ ಪ್ರಿಯಾ ಸುದೀಪ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪತ್ನಿ ಪ್ರಿಯಾಗೆ ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ಯಾಕೆ?

    ಪತ್ನಿ ಪ್ರಿಯಾಗೆ ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ಯಾಕೆ?

    ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರತಂಡದಿಂದ `ಕಿಚ್ಚ ವರ್ಸ್’ ಲಾಂಚ್ ಮಾಡಲಾಯಿತು. ಎನ್‌ಎಫ್‌ಟಿ ಕುರಿತ ಈ ಸುದ್ದಿಗೋಷ್ಠಿಯಲ್ಲಿ ಸುದೀಪ್ ದಂಪತಿ ಭಾಗಿಯಾಗಿದ್ದರು. ಈ ವೇಳೆ ಪತ್ನಿ ಪ್ರಿಯಾ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಕಿಚ್ಚನ ಮಾತಿಗೆ ಪ್ರಿಯಾ ನಾಚಿ ನೀರಾಗಿದ್ದಾರೆ.

    ಜುಲೈ 28ಕ್ಕೆ ತೆರೆಗೆ ಅಬ್ಬರಿಸುತ್ತಿರುವ `ವಿಕ್ರಾಂತ್ ರೋಣ’ ಚಿತ್ರದ ಪ್ರಚಾರ ಭರದಿಂದ ಸಾಗುತ್ತಿದೆ. ʻಕಿಚ್ಚ ವರ್ಸ್ʼ ಲಾಂಚ್ ಕಾರ್ಯಕ್ರಮದಲ್ಲಿ  ಭಾಗಿಯಾಗಿದ್ದ ವೇಳೆ ಸುದೀಪ್, ಪತ್ನಿಯ ಕಾರ್ಯ ಬಗ್ಗೆ ಕಿಚ್ಚನ ಪ್ರತಿಯೊಂದು ಕೆಲಸಕ್ಕೂ ಸಾಥ್ ನೀಡಿರುವ ಬಗ್ಗೆ ಮಾತನಾಡಿದ್ದಾರೆ. `ಕಿಚ್ಚ ವರ್ಸ್’ ಕಾರ್ಯರೂಪಕ್ಕೆ ಬರೋದಕ್ಕೆ ಮತ್ತು ಕಿಚ್ಚನ ಗೆಲುವಿನ ಹಾದಿಗೆ ಸಾಥ್ ನೀಡಿರುವ ಪತ್ನಿ ಪ್ರಿಯಾಗೆ ಥ್ಯಾಂಕ್ಸ್ ತಿಳಿಸಿದ್ದಾರೆ. ಈ ವೇಳೆ ಪತಿಯ ಮಾತಿಗೆ ಪ್ರಿಯಾ ನಾಚಿ ನೀರಾಗಿದ್ದಾರೆ.ಇದನ್ನೂ ಓದಿ:`ವಿಕ್ರಮ್’ ಚಿತ್ರದ ಸಕ್ಸಸ್ ಬಳಿಕ ಕಮಲ್ ಹಾಸನ್ ಮುಂದಿನ ಚಿತ್ರ ಯಾವುದು?

    ವಿಕ್ರಾಂತ್ ರೋಣ ತೆರೆಗೆ ಬರೋದಕ್ಕೆ ದಿನಗಣನೆ ಶುರುವಾಗಿದೆ. ಒಂದಲ್ಲಾ ಒಂದು ವಿಚಾರವಾಗಿ ಸೌಂಡ್ ಮಾಡುತ್ತಿರುವ ʻವಿಕ್ರಾಂತ್ ರೋಣʼನ ದರುಶನಕ್ಕಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 13 ವರ್ಷಗಳ ನಂತರ ದೆಹಲಿಯಲ್ಲಿ ಸುದೀಪ್ : ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭೇಟಿ ಮಾಡಿದ ಕಿಚ್ಚ

    13 ವರ್ಷಗಳ ನಂತರ ದೆಹಲಿಯಲ್ಲಿ ಸುದೀಪ್ : ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭೇಟಿ ಮಾಡಿದ ಕಿಚ್ಚ

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಇದೇ ತಿಂಗಳು 28ರಂದು ವಿಶ್ವದಾದ್ಯಂತ ಸಾವಿರಾರು ಥಿಯೇಟರ್ ನಲ್ಲಿ ಬಿಡುಗಡೆ ಆಗಲಿದೆ. ಹಾಗಾಗಿ ದೇಶದ ನಾನಾ ಕಡೆ ಸುದೀಪ್ ಪ್ರಚಾರ ನಡೆಸಿದ್ದಾರೆ. ಮೊದಲ ಕಂತಿನಲ್ಲಿ ಮುಂಬೈ, ಚೆನ್ನೈ, ಹೈದರಾಬಾದ್, ಕೊಚ್ಚಿ ಸೇರಿದಂತೆ ಹಲವು ಕಡೆ ಪ್ರಚಾರದಲ್ಲಿ ತೊಡಗಿದ್ದ ಸುದೀಪ್, ನಿನ್ನೆಯಿಂದ ದೆಹಲಿಯಲ್ಲಿ ಪ್ರಚಾರ ಶುರು ಮಾಡಿದ್ದಾರೆ. 13 ವರ್ಷಗಳ ನಂತರ ಕಿಚ್ಚ ದೆಹಲಿಗೆ ಕಾಲಿಟ್ಟಿದ್ದಾರೆ.

    ಹದಿಮೂರು ವರ್ಷಗಳ ಹಿಂದೆ ತೆರೆಕಂಡ ತೆಲುಗಿನ ‘ಈಗ’ ಸಿನಿಮಾದ ಪ್ರಚಾರಕ್ಕಾಗಿ ದೆಹಲಿಗೆ ಭೇಟಿ ಕೊಟ್ಟಿದ್ದ ಸುದೀಪ್, ಇದೀಗ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರಕ್ಕಾಗಿ ತೆರೆಳಿದ್ದಾರೆ. ಅಲ್ಲಿನ ಮಾಧ್ಯಮಗಳ ಜೊತೆ ವಿಕ್ರಾಂತ್ ರೋಣ ವಿಶೇಷತೆ ಕುರಿತು ಮಾತನಾಡಿದ್ದಾರೆ. ಈ ಮಧ್ಯೆ ಬಿಡುವು ಮಾಡಿಕೊಂಡು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿದ್ದಾರೆ. ಸಿನಿಮಾ ವೀಕ್ಷಿಸುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

    ವಿಕ್ರಾಂತ್ ರೋಣ ಸಿನಿಮಾ 2 ಡಿ ಮತ್ತು 3ಡಿ ಯಲ್ಲಿ ಬಿಡುಗಡೆ ಆಗುತ್ತಿದ್ದು, ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ನಲ್ಲೂ ಈ ಸಿನಿಮಾ ರಿಲೀಸ್ ಆಗುತ್ತಿದೆ. ಈಗಾಗಲೇ ರಿಲೀಸ್ ಆದ ಚಿತ್ರದ ಟೀಸರ್ ಮತ್ತು ಹಾಡುಗಳು ಹಿಟ್ ಆಗಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಸುದೀಪ್‌ ನಟನೆಯ `ವಿಕ್ರಾಂತ್‌ರೋಣ’ ಚಿತ್ರದ ಮತ್ತೊಂದು ಸಾಂಗ್ ಔಟ್

    ಸುದೀಪ್‌ ನಟನೆಯ `ವಿಕ್ರಾಂತ್‌ರೋಣ’ ಚಿತ್ರದ ಮತ್ತೊಂದು ಸಾಂಗ್ ಔಟ್

    ನ್ನಡ ಚಿತ್ರರಂಗದಲ್ಲಿ ರಿಲೀಸ್‌ಗೂ ಮುನ್ನವೇ ಹೊಸ ಅಲೆ ಎಬ್ಬಿಸಿರುವ ಚಿತ್ರ ಸುದೀಪ್ ನಟನೆಯ `ವಿಕ್ರಾಂತ್‌ರೋಣ’. ತಂದೆ ಮತ್ತು ಮಗಳ ಸೆಂಟಿಮೆಂಟ್ ಸಾಂಗ್ ನಂತರ ಈಗ ಮತ್ತೊಂದು ಎಮೋಷನಲ್ ಸಾಂಗ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ನಿರೂಪ್ ಭಂಡಾರಿ ನಟಿಸಿರುವ ಈ ಸಾಂಗ್ ಸಖತ್ ವೈರಲ್ ಆಗುತ್ತಿದೆ.

    ಅನೂಪ್ ಭಂಡಾರಿ ನಿರ್ದೇಶನದ `ವಿಕ್ರಾಂತ್ ರೋಣ’ ಚಿತ್ರದಲ್ಲಿ ಕಿಚ್ಚ ಸುದೀಪ್ ಜತೆ ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿರೂಪ್ ಪಾತ್ರಕ್ಕೂ ಚಿತ್ರದಲ್ಲಿ ಸಿಕ್ಕಾಪಟ್ಟೆ ಪ್ರಾಮುಖ್ಯತೆಯಿದೆ. ಈಗ ನಿರೂಪ್ ನಟಿಸಿರುವ ನ್ಯೂ ಸಾಂಗ್ ರಿವೀಲ್ ಆಗಿದೆ. ಈಗಾಗಲೇ ಚಿತ್ರದ ಎರಡು ಸಾಂಗ್ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದು, ಹೇ ಫಕಿರಾ ಅಭಿಮಾನಿಗಳ ಗಮನ ಸೆಳಡಯುತ್ತಿದೆ. ಇದನ್ನೂ ಓದಿ:`ಹೈಡ್ ಆ್ಯಂಡ್ ಸೀಕ್’ ಆಡಲು ರೆಡಿಯಾದ ಧನ್ಯಾ ರಾಮ್‌ಕುಮಾರ್‌

    ಕಳೆದ ಬಾರಿ ತಂದೆ ಮತ್ತು ಮಗಳ ಬಾಂಧವ್ಯ ಸಾರುವ ಸಾಂಗ್‌ನ್ನ ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಬೆನ್ನಲ್ಲೇ `ಹೇ ಫಕಿರಾ’ ಸಾಂಗ್‌ನಲ್ಲಿ ಮಗನಿಗಾಗಿ ಕಾಯುವ ತಾಯಿಯ ಎಮೋಷನಲ್‌ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದೆ. ಮನಮುಟ್ಟವ ಲಿರಿಕ್ಸ್‌ಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರೂಪ್ ಎಂಟ್ರಿ ಮತ್ತು ಹಾಡು ಎರಡನ್ನು ಫ್ಯಾನ್ಸ್ ನೋಡಿ ಮೆಚ್ಚಿಕೊಂಡಿದ್ದಾರತೆ. ಜುಲೈ 28ಕ್ಕೆ ತೆರೆಗೆ ಬರುತ್ತಿರುವ ವಿಕ್ರಾಂತ್‌ ರೋಣನನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್‌ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಕ್ರಾಂತ್ ರೋಣ ನನ್ನ 20 ವರ್ಷದ ಕನಸು : ನಿರ್ದೇಶಕ ಅನೂಪ್ ಭಂಡಾರಿ

    ವಿಕ್ರಾಂತ್ ರೋಣ ನನ್ನ 20 ವರ್ಷದ ಕನಸು : ನಿರ್ದೇಶಕ ಅನೂಪ್ ಭಂಡಾರಿ

    ಕಿಚ್ಚ ಸುದೀಪ್ ಅವರ ಜೊತೆ ಕೆಲಸ ಮಾಡಬೇಕು ಎನ್ನುವುದು ಹಲವು ನಿರ್ದೇಶಕರ ಕನಸಾಗಿರುತ್ತದೆ. ಅಂತಹ ಕನಸನ್ನು ನಿರ್ದೇಶಕ ಅನೂಪ್ ಭಂಡಾರಿಗೆ 20 ವರ್ಷಗಳ ಹಿಂದಿಯೇ ಕಂಡಿದ್ದರಂತೆ. 20 ವರ್ಷಗಳ ನಂತರ ಅದೀಗ ಈಡೇರಿದೆ. ‘ವಿಕ್ರಾಂತ್ ರೋಣ’ ಸಿನಿಮಾದ ಮೂಲಕ ಆ ಕನಸು ಈಡೇರಿದೆ ಎಂದಿದ್ದಾರೆ ಅನೂಪ್. ಈ ಕುರಿತು ಅವರು ಮಾತನಾಡಿದ್ದಾರೆ.

    “ವಿಕ್ರಾಂತ್ ರೋಣ ನನ್ನ ೨೦ ವರ್ಷದ ಕನಸು, ಸುದೀಪ್ ಸರ್ ಜೊತೆ ಕೆಲಸ ಮಾಡಲು. ೨೬ ವರ್ಷದ ಹಿಂದೆ ನಾನು ಸುದೀಪ್ ಸರ್‌ನ ಒಂದು ಫೋಟೋದಲ್ಲಿ ನೋಡಿದ್ದೆ. ನನ್ನ ತಂದೆ ಡ್ರಾಯರ್‌ನಲ್ಲಿ ಒಂದು ಫೋಟೋ ಇತ್ತು. ಅದರಲ್ಲಿದ್ದ ಯುವಕನಿಗೆ ಮೀಸೆ, ಗಡ್ಡ ಏನೂ ಇರಲಿಲ್ಲ, ನಾನು ಯಾರುದು ಎಂದು ನನ್ನ ತಂದೆಯನ್ನು ಕೇಳಿದಾಗ ಅವರು ಸುದೀಪ್ ನಮ್ಮದೊಂದು ಸೀರಿಯಲ್ ಮಾಡ್ತಾ ಇದ್ದಾರೆ ಅಂತ ಹೇಳಿದ್ರು. ಇವರನ್ನು ಹಾಕೊಂಡು ಸಿನಿಮಾನೇ ಮಾಡಬಹುದಲ್ಲ ಇಷ್ಟು ಸ್ಮಾರ್ಟಾಗಿ ಇದ್ದಾರೆ ಅಂತ ಹೇಳಿದ್ದೆ ಅವತ್ತು. ನಮ್ಮ ತಂದೆಗೆ ಸಿನಿಮಾ ಮಾಡುವಂತಹ ಅವಕಾಶ ಬಂದಿಲ್ಲ, ಇವತ್ತು ನನಗೆ ಬಂದಿದೆ’ ಎಂದಿದ್ದಾರೆ ಅನೂಪ್. ಇದನ್ನೂ ಓದಿ:ಥೇಟ್ ನಯನತಾರಾ ರೀತಿಯೇ ಕಂಗೊಳಿಸಿದ ‘ಸತ್ಯ’ ಧಾರಾವಾಹಿಯ ಗೌತಮಿ

    ಇದೀಗ ಕಿಚ್ಚ ಮತ್ತು ಅನೂಪ್ ಕಾಂಬಿನೇಷನ್ ನ ವಿಕ್ರಾಂತ್ ರೋಣ ಸಿನಿಮಾ ಟ್ರೈಲರ್ ಬಗ್ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೂಪ್ ಕೆಲಸದ ಬಗ್ಗೆಯೇ ಅನೇಕರು ಮಾತನಾಡಿದ್ದಾರೆ. ಈ ತಿಂಗಳು ಕೊನೆಯಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಸುದೀಪ್, “ಕನ್ನಡ ಚಿತ್ರರಂಗದ ಒಂದು ಭಾಗ ಆಗೋಕೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಮೇಕಪ್ ಹಾಕಿದಾಗ ಒಂದೇ ಆಸೆ ಇದ್ದಿದ್ದು, ಹೀರೋ ಆಗ್ಬೇಕು ಅಂತ. ಹೀರೋ ಆದ್ಮೇಲೆ ಆಸೆ ಇದ್ದಿದ್ದು ಒಂದು ಹೌಸ್‌ಫುಲ್ ಆಗ್ಬೇಕು ಅಂತ. ಇವತ್ತಿಗೂ ಅದಕ್ಕಿಂದ ಮೇಲೆ ನಾನು ಹೋಗೇ ಇಲ್ಲ. ನಾನು ಸಿನಿಮಾನ ಪ್ರೀತಿಸಿದ್ದೇನೆ, ಅದನ್ನು ಬಿಟ್ಟು ಬೇರೆ ಏನನ್ನೂ ಮಾಡಿಲ್ಲ. ಸಿನಿಮಾ ಇವತ್ತಿಗೂ ಕೈ ಹಿಡಿದಿದೆ. ಚಿತ್ರರಂಗದ ಹಿರಿಯರು, ಸ್ನೇಹಿತರು ಇರಲಿಲ್ಲ ಎಂದರೆ ನಾನು ಕಲಾವಿದನಾಗಿ ಬೆಳೆಯುತ್ತಿರಲಿಲ್ಲ, ಸ್ನೇಹಿತನಾಗಿ ಬೆಳೆಯುತ್ತಿರಲಿಲ್ಲ. ಮನುಷ್ಯನಾಗಿ ಮುಂದೆ ಹೋಗುತ್ತಾ ಇರಲಿಲ್ಲ. ನಾವೇನಾದ್ರೂ ಮನೆಗೆ ವಾಪಸ್ ತೆಗೆದುಕೊಂಡು ಹೋಗೋದೆಂದ್ರೆ ಸ್ಟಾರ್ಡಮ್ ಅಲ್ಲ, ಕೇವಲ ಜನರ, ಅಭಿಮಾನಿಗಳ ಪ್ರೀತಿಯಷ್ಟೇ. ಅದಕ್ಕಿಂತ ಸುಂದರವಾದದ್ದು ಏನೂ ಇಲ್ಲ’ ಅನ್ನುತ್ತಾರೆ ಸುದೀಪ್.

    Live Tv
    [brid partner=56869869 player=32851 video=960834 autoplay=true]

  • ವಿಕ್ರಾಂತ್ ರೋಣ ಸಿನಿಮಾದ ಮತ್ತೊಂದು ಹಾಡು ರಿಲೀಸ್ : ಸೊಗಸಾದ ಲಾಲಿ ಹಾಡು

    ವಿಕ್ರಾಂತ್ ರೋಣ ಸಿನಿಮಾದ ಮತ್ತೊಂದು ಹಾಡು ರಿಲೀಸ್ : ಸೊಗಸಾದ ಲಾಲಿ ಹಾಡು

    ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ‘ರಾ ರಾ ರಕ್ಕಮ್ಮ’ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ಲಕ್ಷಾಂತರ ಕೇಳುಗರು ಮೆಚ್ಚಿಕೊಂಡಿದ್ದಾರೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲ, ಸಿಲಿಬ್ರಿಟಿಗಳು ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರೀಲ್ಸ್ ನಲ್ಲೂ ರಾ ರಾ ರಕ್ಕಮ್ಮ ಧೂಳ್ ಎಬ್ಬಿಸಿದೆ. ಇನ್ನೂ ಈ ಹಾಡು ಕಿವಿಯಲ್ಲಿ ಗುನುಗುತ್ತಿರುವಾಗಲೇ ಮತ್ತೊಂದು ಸಾಂಗ್ ರಿಲೀಸ್ ಮಾಡಿದೆ ಚಿತ್ರತಂಡ.

    ಇಂದು ಸಂಜೆ 5. 02ಕ್ಕೆ ರಿಲೀಸ್ ಆಗಿರುವ ‘ತಣ್ಣನೆ ಬೀಸೋ ಗಾಳಿ’ ಗೀತೆಯು ಲಾಲಿ ಹಾಡಾಗಿದ್ದು, ವಿಜಯ್ ಪ್ರಕಾಶ್ ಸೊಗಸಾಗಿ ಹಾಡಿದ್ದಾರೆ. ಹಾಡು ಕೇಳುತ್ತಾ ರಾಜಕುಮಾರಿ ಎಷ್ಟೊಂದು ಗಾಢನಿದ್ರೆಗೆ ಜಾರಿರಬಹುದು ಎನ್ನುವಷ್ಟರ ಮಟ್ಟಿಗೆ ಗೀತೆ ಇಂಪಾಗಿದೆ. ಸ್ವತಃ ಅನೂಪ್ ಭಂಡಾರಿಯವರೇ ಈ ಗೀತೆಯನ್ನು ಬರೆದಿದ್ದು ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿ ಬಂದಿದೆ. ಸಂಗೀತ ಮತ್ತು ಸಾಹಿತ್ಯಕ್ಕೆ ವಿಜಯ್ ಪ್ರಕಾಶ್ ಕಂಠ ಮತ್ತಷ್ಟು ಜೀವ ತುಂಬಿದೆ. ಇದನ್ನೂ ಓದಿ : ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಿಗೆ ಲೆಕ್ಕ ಕೇಳಿದೆ ಆಡಳಿತಾಧಿಕಾರಿ

    ‘ತಣ್ಣನೆ ಬೀಸೋ ಗಾಳಿ, ಹಾಡಿದೆ ಜೋಜೋ ಲಾಲಿ. ಈ ನನ್ನ ಮಡಿಲೆ ನಿನ್ನಾ ತೂಗೋ ಉಯ್ಯಾಲೆ, ತೂಗೋ ಉಯ್ಯಾಲೆ’ ಎಂದು ಶುರುವಾಗುವ ಗೀತೆಯು, ‘ಕಣ್ಣಿನ ರೆಪ್ಪೆ ಮುಚ್ಚಿ, ನಿದ್ದೆಗೆ ಬೇಗ ಜಾರಿ, ಮಲಗೆ ಮಲಗೆ ನನ್ನ ಮುದ್ದು ಬಂಗಾರಿ, ಮುದ್ದು ಬಂಗಾರಿ’ ಎನ್ನುವಲ್ಲಿಗೆ ಕೊನೆಗೊಳ್ಳುತ್ತದೆ.

    Live Tv

  • `ರಾ ರಾ ರಕ್ಕಮ್ಮ’ ನಂತರ ನಾಳೆ ಮತ್ತೊಂದು ಸಾಂಗ್ ರಿಲೀಸ್: ವಿಕ್ರಾಂತ್ ರೋಣ

    `ರಾ ರಾ ರಕ್ಕಮ್ಮ’ ನಂತರ ನಾಳೆ ಮತ್ತೊಂದು ಸಾಂಗ್ ರಿಲೀಸ್: ವಿಕ್ರಾಂತ್ ರೋಣ

    ಭಿನಯ ಚಕ್ರವರ್ತಿ ಸುದೀಪ್ `ವಿಕ್ರಾಂತ್ ರೋಣ’ ಚಿತ್ರತಂಡದಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸುದೀಪ್ ನಟನೆಯ ಪ್ಯಾನ್ ಇಂಡಿಯಾ `ವಿಕ್ರಾಂತ್ ರೋಣ’ ಚಿತ್ರದ ಮತ್ತೊಂದು ಸಾಂಗ್ ರಿಲೀಸ್‌ಗೆ ಸಜ್ಜಾಗಿದೆ. ರಾ ರಾ ರಕ್ಕಮ್ಮ ಸಾಂಗ್ ನಂತರ ಮತ್ತೊಂದು ಸಾಂಗ್‌ ನಾಳೆ ತೆರೆ ಕಾಣುತ್ತಿದೆ.

    `ವಿಕ್ರಾಂತ್‌ರೋಣ’ ಸಿನಿಮಾದ ಸುದೀಪ್ ಮತ್ತು ಜಾಕ್ವೇಲಿನ್ ಕಾಂಬಿನೇಷನ್ `ರಾ ರಾ ರಕ್ಕಮ್ಮ’ ಯೂತ್ಸ್ಗೆ ಅಡಿಕ್ಟ್ ಆಗಿರುವ ಬೆನ್ನಲ್ಲೇ ಮತ್ತೊಂದು ಕಲರ್‌ಫುಲ್ ಸಾಂಗ್ ತೆರೆ ಕಾಣಲು ರೆಡಿಯಾಗಿದೆ. ತಂದೆ ಮತ್ತು ಮಗಳ ಬಾಂಧವ್ಯ ಸಾರುವ ಮತ್ತೊಂದು ಚೆಂದದ ಲಿರಿಕಲ್ ಸಾಂಗ್ ಲಹರಿ ಮ್ಯೂಸಿಕ್ ಆಡಿಯೋದಲ್ಲಿ ರಿಲೀಸ್ ಆಗುತ್ತಿದೆ.

    ಕನ್ನಡದಲ್ಲಿ ಜುಲೈ 2ಕ್ಕೆ 5.02ಕ್ಕೆ ತೆರೆ ಕಾಣಲಿದೆ. ಹೀಗೆ ಒಂದು ದಿನದ ಅಂತರದಲ್ಲಿ ಬೇರೇ ಭಾಷೆಗಳಲ್ಲಿ ಜುಲೈ 6ರವರೆಗೂ ರಿಲೀಸ್ ಆಗಲಿದೆ. ಅನೂಪ್ ಭಂಡಾರಿ ನಿರ್ದೇಶನದ ಜತೆ `ರಾಜಕುಮಾರಿ’ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಸುದೀಪ್ ತಂದೆಯ ಪಾತ್ರಕ್ಕೆ ಜೀವತುಂಬಿದ್ದು, ಈ ಚಿತ್ರದ ಏಮೋಷನಲ್ ಸಾಂಗ್ ನೋಡಲು ಕಾಯ್ತಿದ್ದಾರೆ. ಇದನ್ನೂ ಓದಿ:ಸ್ವಿಮ್ ಸೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ `ರಾ’ಗಿಣಿ

    ಇನ್ನು ಈಗಾಗಲೇ ಟ್ರೈಲರ್ ಮೂಲಕ ಹೈಪ್ ಕ್ರಿಯೇಟ್ ಮಾಡಿರುವ  ವಿಕ್ರಾಂತ್ ರೋಣ ಇದೇ ಜುಲೈ 28ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಸುದೀಪ್ ಜತೆ ನಿರೂಪ್ ಭಂಡಾರಿ, ನೀತಾ ಅಶೋಕ್, ಹೀಗೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ ಸಾಥ್ ನೀಡಿದ್ದಾರೆ.

    Live Tv

  • ಇಡಿ ವಿಚಾರಣೆಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್: ‘ವಿಕ್ರಾಂತ್ ರೋಣ’ ಪ್ರಚಾರಕ್ಕೆ ಗೈರಾದ ನಟಿ

    ಇಡಿ ವಿಚಾರಣೆಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್: ‘ವಿಕ್ರಾಂತ್ ರೋಣ’ ಪ್ರಚಾರಕ್ಕೆ ಗೈರಾದ ನಟಿ

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಮತ್ತೆ ಇಡಿ ವಿಚಾರಣೆಗೆ ಕರೆದಿದೆಯಂತೆ. ಹಾಗಾಗಿ ಇತ್ತೀಚೆಗೆ ಅವರು ಸಿನಿಮಾ ಪ್ರಚಾರದಲ್ಲಿ ತೊಡಗಿಕೊಂಡಿಲ್ಲ ಎನ್ನುವ ಸುದ್ದಿ ಹರಡಿದೆ. ಬೆಂಗಳೂರು ಮತ್ತು ಮುಂಬೈನಲ್ಲಿ ನಡೆದ ಸಿನಿಮಾದ ಪ್ರಚಾರದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಜಾಕ್ವೆಲಿನ್, ನಂತರ ಇಡಿ ವಿಚಾರಣೆಗೆ ಅವರು ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.

    200 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಆಪ್ತರಾಗಿದ್ದರು ಅನ್ನುವ ಕಾರಣಕ್ಕಾಗಿ ಅವರಿಗೂ ನೋಟಿಸ್ ನೀಡಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಜಾಕ್ವೆಲಿನ್ ಗೆ ಸಾಕಷ್ಟು ಗಿಫ್ಟ್ ಗಳನ್ನು ಸುಕೇಶ್ ನೀಡಿದ್ದನ್ನು ಒಪ್ಪಿಕೊಂಡಿದ್ದರು. ಅಲ್ಲದೇ, ಆ ಎಲ್ಲ ಉಡುಗೊರೆಯನ್ನೂ ವಶಕ ಪಡೆಯಲಾಗಿದೆ. ಈಗಾಗಲೇ ಅನೇಕ ಬಾರಿ ಇಡಿ ವಿಚಾರಣೆ ಎದುರಿಸಿರುವ ಜಾಕ್ವೆಲಿನ್, ಎಲ್ಲವನ್ನೂ ಮರೆತು ವಿಕ್ರಾಂತ್ ರೋಣ ಪ್ರಚಾರದಲ್ಲಿ ತೊಡಗಿದ್ದರು. ಈ ಮಧ್ಯೆ ಮೊನ್ನೆಯೂ ಅವರು ವಿಚಾರಣೆಗೆ ಹೋಗಿ ಬಂದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಅಸ್ಸಾಂ ಪ್ರವಾಹ ಪೀಡಿತರ ಸಂಕಷ್ಟಕ್ಕೆ ಮಿಡಿದ ಆಮೀರ್ ಖಾನ್

    ಇಡಿ ವಿಚಾರಣೆಗಾಗಿಯೇ ಅವರು ಪ್ರಚಾರದಿಂದ ದೂರ ಉಳಿದಿದ್ದಾರೆ ಎನ್ನುವ ಸುದ್ದಿ ಒಂದು ಕಡೆ ಕೇಳಿ ಬರುತ್ತಿದ್ದರೆ, ಮತ್ತೊಂದು ಕಡೆ ಅವರು ಬೇರೆ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರಿಂದ ಚೆನ್ನೈ, ಹೈದರಾಬಾದ್ ಪತ್ರಿಕಾಗೋಷ್ಠಿಗಳಲ್ಲಿ ಭಾಗಿ ಆಗಲು ಆಗಿಲ್ಲ ಎಂದು ವಿಕ್ರಾಂತ್ ರೋಣ ಚಿತ್ರತಂಡ ಹೇಳಿಕೊಂಡಿದೆ. ಇಡಿ ಕಾರಣದಿಂದಾಗಿ ಅವರು ಪ್ರಚಾರದಿಂದ ದೂರ ಉಳಿಯುತ್ತಿಲ್ಲ ಎಂದು ಸ್ಪಷ್ಟನೆ ಕೂಡ ಕೊಟ್ಟಿದೆ.

    Live Tv

  • `ವಿಕ್ರಾಂತ್ ರೋಣ’ ಕನ್ನಡ ಟ್ರೈಲರ್ ಶೇರ್ ಮಾಡಿ, ಚಿತ್ರ ನೋಡಿ ಎಂದ ಬಿಗ್‌ಬಿ

    `ವಿಕ್ರಾಂತ್ ರೋಣ’ ಕನ್ನಡ ಟ್ರೈಲರ್ ಶೇರ್ ಮಾಡಿ, ಚಿತ್ರ ನೋಡಿ ಎಂದ ಬಿಗ್‌ಬಿ

    ಸಿನಿ ದುನಿಯಾದಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ `ವಿಕ್ರಾಂತ್ ರೋಣ’ ದರ್ಶನಕ್ಕೆ ದಿನಗಣನೆ ಶುರುವಾಗಿದೆ. ಕಿಚ್ಚನ ಚಿತ್ರದ ಟ್ರೈಲರ್ ಝಲಕ್ ನೋಡಿ ಬಿಗ್ ಸ್ಟಾರ್ಸ್ ಕೂಡ ಭೇಷ್ ಅಂತಿದ್ದಾರೆ. ಈಗ ಬಿಟೌನ್ ಬಿಗ್ ಸ್ಟಾರ್ ಅಮಿತಾಭ್ ಬಚ್ಚನ್ ವಿಕ್ರಾಂತ್ ರೋಣ ಚಿತ್ರದ ಕನ್ನಡ ಟ್ರೈಲರ್ ಶೇರ್ ಮಾಡಿ ಶುಭ ಹಾರೈಸಿದ್ದಾರೆ.

    ಕಿಚ್ಚ ಸುದೀಪ್ ನಟನೆಯ ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಚಿತ್ರ ಫೀವರ್ ಜೋರಾಗಿದೆ. ಬಹುಭಾಷೆಗಳಲ್ಲಿ ಸಿನಿಮಾ 3ಡಿ ರೂಪದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಸುದೀಪ್‌ನ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಈಗಾಗಲೇ ರಾ ರಾ ರಕ್ಕಮ್ಮ, ಚಿತ್ರದ ಟ್ರೈಲರ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿ, ದಾಖಲೆ ಬರೆದಿದೆ. ಹೀಗಿರುವಾಗ ಈ ಚಿತ್ರಕ್ಕೆ ಬಿಗ್‌ಬಿ ಕೂಡ ಟ್ರೈಲರ್ ಶೇರ್ ಮಾಡಿ, ಸಿನಿಮಾ ನೋಡಿ ಅಂತಾ ಟ್ವೀಟ್ ಮೂಲಕ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ. ಇದನ್ನೂ ಓದಿ:ಆಲಿಯಾ ಭಟ್ ಪ್ರೆಗ್ನೆಂಟ್: ಇಷ್ಟು ಬೇಗ ಮಗುನಾ ಅಂದ ಅಭಿಮಾನಿಗಳು

    ಕನ್ನಡ ಸ್ಟಾರ್ ಸುದೀಪ್,ಪ್ಯಾನ್ ಇಂಡಿಯಾ ಸಿನಿಮಾ `ವಿಕ್ರಾಂತ್ ರೋಣ’ 3ಡಿ ರೂಪದಲ್ಲಿ ಐದು ಭಾಷೆಗಳಲ್ಲಿ ಜುಲೈ 28ಕ್ಕೆ ತೆರೆಗೆ ಬರಲಿದೆ ಅಂತಾ ಟ್ವೀಟ್ ಮೂಲಕ ಚಿತ್ರತಂಡ ಬೆಂಬಲ ಸೂಚಿಸಿದ್ದಾರೆ. ಇನ್ನು ಪರಭಾಷೆಗಳಲ್ಲೂ ಉತ್ತಮ ಸ್ನೇಹಿತರನ್ನು ಹೊಂದಿರುವ ಸುದೀಪ್ ಸಿನಿಮಾಗಾಗಿ ಇತರ ಚಿತ್ರರಂಗದ ಸ್ನೇಹಿತರು ಕೂಡ ಬೆಂಬಲಿಸಿ, ಶುಭಹಾರೈಸುತ್ತಿದ್ದಾರೆ. ಒಟ್ನಲ್ಲಿ ವಿಕ್ರಾಂತ್ ರೋಣ ಚಿತ್ರವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.

    Live Tv

  • ವಿಕ್ರಾಂತ್‌ ರೋಣ ಸಿನಿಮಾ ನನ್ನ ಮಗಳಿದ್ದಂತೆ: ಕಿಚ್ಚ ಸುದೀಪ್‌

    ವಿಕ್ರಾಂತ್‌ ರೋಣ ಸಿನಿಮಾ ನನ್ನ ಮಗಳಿದ್ದಂತೆ: ಕಿಚ್ಚ ಸುದೀಪ್‌

    ಭಿನಯ ಚಕ್ರವರ್ತಿ ಸುದೀಪ್ ನಟನೆಯ ನಿರೀಕ್ಷಿತ ಸಿನಿಮಾ `ವಿಕ್ರಾಂತ್ ರೋಣ’ ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಟ್ರೈಲರ್ ಮತ್ತು ಸಾಂಗ್‌ನಿಂದ ಫ್ಯಾನ್ಸ್ ದಿಲ್ ಕದ್ದಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ನಟ ಸುದೀಪ್ ‌ʻಪಬ್ಲಿಕ್ ಟಿವಿʼ ಸಂದರ್ಶನದಲ್ಲಿ ನನ್ನ ಮಗಳಿಗೂ ಈ ಸಿನಿಮಾಗೂ ಏನು ವ್ಯತ್ಯಾಸವಿಲ್ಲ ಎಂದು ಮಾತನಾಡಿದ್ದಾರೆ.

    3ಡಿ ರೂಪದಲ್ಲಿ ಬಹುಭಾಷೆಗಳಲ್ಲಿ ತೆರೆಗೆ ಅಬ್ಬರಿಸುತ್ತಿರುವ ವಿಕ್ರಾಂತ್ ರೋಣ ಚಿತ್ರಕ್ಕೆ ಭರದಿಂದ ಪ್ರಚಾರ ಕಾರ್ಯ ನಡೆಯುತ್ತಿದೆ. ಬೇರೆ ರಾಜ್ಯಗಳಿಗೆ ಭೇಟಿ ನೀಡಿ ಸಿನಿಮಾ ಕುರಿತು ಭರ್ಜರಿ ಪ್ರಚಾರ ಮಾಡಿ ಅಲ್ಲಿನ ಅಭಿಮಾನಿಗಳ ಜತೆ ಸುದೀಪ್ ಮಾತನಾಡಿ ಬರುತ್ತಿದ್ದಾರೆ. ಈಗ ವಿಕ್ರಾಂತ್ ರೋಣ ಚಿತ್ರವನ್ನು ತಮ್ಮ ಮಗಳಿಗೆ ಹೋಲಿಸಿ ಸಂದರ್ಶನದಲ್ಲಿ ಸುದೀಪ್ ಮಾತನಾಡಿದ್ದಾರೆ. ಇದನ್ನೂ ಓದಿ:ವಿಕ್ರಾಂತ್ ರೋಣ ಸಿನಿಮಾ ಆಗೋಕೆ ಇವರೇ ಸ್ಪೂರ್ತಿ: ಕಿಚ್ಚ ಹೀಗಂದಿದ್ದು ಯಾರ ಬಗ್ಗೆ?

    ನಿಮ್ಮ ಪರಿಚಯ ಬೇರೆ ಭಾಷೆಯವರಿಗೂ ಇದೆ. ಬೇರೇ ರಾಜ್ಯಗಳಿಗೂ ಭೇಟಿ ಪ್ರಚಾರ ಮಾಡಬೇಕು ಅಂತಾ ಒಬ್ಬ ನಟನಾಗಿ ನಿಮಗೆ ಯಾಕೆ ಅನಿಸುತ್ತದೆ ಎಂದು ನಿರೂಪಕಿ ಕೇಳಿದ ಪ್ರಶ್ನೆಗೆ, ನನಗೂ ಒಬ್ಬಳು ಮಗಳಿದ್ದಾಳೆ. ಅವಳನ್ನು ಕಾಲೇಜ್‌ಗೆ ಅಡ್ಮಿಷನ್ ಮಾಡಿಸಲು ಹೋಗಬೇಕಾಗುತ್ತೆ. ಆಗ ನಾನು ಯಾರು ಗೊತ್ತಾ ಅಂತಾ ಹೇಳೋಕೆ ಆಗಲ್ಲ. ಒಬ್ಬ ಪೋಷಕನಾಗಿ ಅದು ನನ್ನ ಜವಾಬ್ದಾರಿ. ನನ್ನ ಮಗಳಿಗೂ ಈ ಸಿನಿಮಾಗೂ ಏನು ವ್ಯತ್ಯಾಸ? ನನ್ನ ಈ ಸಿನಿಮಾ ಹೊಸತು, ವಿಕ್ರಾಂತ್ ರೋಣ ನನ್ನ ಮಗು ಇದ್ದಂತೆ. ಈ ಚಿತ್ರದ ಯೋಗ್ಯತೆ ಹೀಗಿದೆ ನೋಡಿ ಬೆಂಬಲಿಸಿ ಅಂತಾ ಹೇಳೋದು ಕೂಡ ನನ್ನ ಕರ್ತವ್ಯ ಎಂದು ಮಗಳಷ್ಟೇ ಈ ಚಿತ್ರ ಮುಖ್ಯವೆಂದು ಸುದೀಪ್ ʻಪಬ್ಲಿಕ್ʼ ಟಿವಿ ಜೊತೆ ಮಾತನಾಡಿದ್ದಾರೆ.

    Live Tv