Tag: Vikrant Rona

  • ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ರಿಪೋರ್ಟ್ : ಪಕ್ಕಾ ಲೆಕ್ಕಾಚಾರ

    ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ರಿಪೋರ್ಟ್ : ಪಕ್ಕಾ ಲೆಕ್ಕಾಚಾರ

    ನಿನ್ನೆಯಷ್ಟೇ ವಿಶ್ವದಾದ್ಯಂತ ಬಿಡುಗಡೆ ಆಗಿರುವ ಸುದೀಪ್ ನಟನೆಯ ‘ವಿಕ್ರಾಂತ್ ರೋಣ ‘ ಸಿನಿಮಾದ ಬಾಕ್ಸ್ ಆಫೀಸ್ ರಿಪೋರ್ಟ್ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ದೇಶಾದ್ಯಂತ ಒಳ್ಳೆಯ ಓಪನಿಂಗ್ ಪಡೆದಿರುವ ಸಿನಿಮಾವನ್ನು ತಮ್ಮದೇ ಆದ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ಅದರಲ್ಲೂ ಹಣ ಗಳಿಕೆಯ ಲೆಕ್ಕಾಚಾರಗಳು ರಾತ್ರಿಯಿಂದಲೇ ಶುರುವಾಗಿದ್ದು, ಬಾಕ್ಸ್ ಆಫೀಸಿನಲ್ಲಿ ಗೆಲುವಿನ ದಾಖಲೆಯನ್ನು ಚಿತ್ರ ಬರೆದಿದೆ.

    ಕರ್ನಾಟಕವೊಂದರಲ್ಲೇ 2500ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ಪ್ರದರ್ಶನ ಕಂಡಿದೆ. ಬೆಳಗ್ಗೆ 5 ಗಂಟೆಯಿಂದಲೇ ಕೆಲವು ಕಡೆ ಶೋಗಳು ಆರಂಭವಾಗಿವೆ. ಹಾಗಾಗಿ ಕರ್ನಾಟಕವೊಂದರಲ್ಲೇ ಅಂದಾಜು 20 ಕೋಟಿ ರೂಪಾಯಿ ಹರಿದು ಬಂದಿದೆ ಎನ್ನಲಾಗುತ್ತಿದೆ. ಮೊದಲ ದಿನ ಬಹುತೇಕ ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿವೆ. ಇದನ್ನೂ ಓದಿ:ʻರಶ್ಮಿಕಾ ನನ್ನ ಡಾರ್ಲಿಂಗ್ʼ ಎಂದ ವಿಜಯ್ ದೇವರಕೊಂಡ

    ಬಾಲಿವುಡ್ ನಲ್ಲೂ ಈ ಸಿನಿಮಾ ಹಿಂದೆ ಬಿದ್ದಿಲ್ಲ. ಈಗಾಗಲೇ ರಿಲೀಸ್ ಆಗಿರುವ ಹಿಂದಿ ಸಿನಿಮಾಗಳ ಲೆಕ್ಕಾಚಾರವನ್ನು ಉಲ್ಟಾ ಮಾಡಿ ಚಿತ್ರ ಮುನ್ನುಗ್ಗುತ್ತಿದೆ. ಬಾಲಿವುಡ್ ನಲ್ಲಿ ಸಾವಿರಾರು ಸ್ಕ್ರೀನ್ ಗಳಲ್ಲಿ ಈ ಚಿತ್ರ ರಿಲೀಸ್ ಆಗಿದೆ. ಹಾಗಾಗಿ ಅಂದಾಜು 10 ಕೋಟಿ ಹಣ ಹರಿದು ಬಂದಿದೆ ಎನ್ನುವುದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ. ಸದ್ಯ ಬಿಡುಗಡೆಯಾಗಿರುವ ಬೇರೆ ಸಿನಿಮಾಗಳಿಗೆ ಹೋಲಿಸಿದರೆ, ವಿಕ್ರಾಂತ್ ರೋಣ ಹೆಚ್ಚು ದುಡ್ಡು ಮಾಡಿದೆ.

    ಆಂಧ್ರ ಮತ್ತು ತೆಲಂಗಾಣದಲ್ಲಿ ಹೆಚ್ಚಿನ ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ರಿಲೀಸ ಆಗಿತ್ತು. ಅಲ್ಲಿಯೂ ಕೂಡ ಅಂದಾಜು 8 ಕೋಟಿಗೂ ಅಧಿಕ ಹಣ ಬಂದಿದೆಯಂತೆ. ಈ ಸಿನಿಮಾ ರಂಗದಲ್ಲಿ ಟಿಕೆಟ್ ದರ ಕಡಿಮೆ ಇರುವುದರಿಂದ, ಹಣದ ಗಳಿಕೆ ಕಡಿಮೆಯಾಗಿ ಕಾಣುತ್ತಿದೆ. ಆದರೆ, ಒಂದೊಳ್ಳೆ ಕಲೆಕ್ಷನ್ ಎಂದು ಹೇಳಲಾಗುತ್ತಿದೆ. ತಮಿಳು ಸಿನಿಮಾ ರಂಗದಿಂದಲೂ ಅಂದಾಜು 2 ಕೋಟಿ ಹಣ ಬಂದಿದೆ ಎನ್ನುವ ಲೆಕ್ಕಾಚಾರ ಸಿಗುತ್ತಿದೆ. 27 ದೇಶಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಅಷ್ಟೂ ದೇಶಗಳಿಂದ ಮೊದಲ ದಿನದ ಗಳಿಕೆ 2 ಕೋಟಿ ಎಂದು ಹೇಳಲಾಗುತ್ತಿದೆ. ವೀಕೆಂಡ್ ನಲ್ಲಿ ಹೆಚ್ಚಿನ ಪ್ರಮಾಣದ ಹಣವನ್ನು ನಿರೀಕ್ಷೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಲ್ಮಾನ್ ಖಾನ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಕಿಚ್ಚ ಸುದೀಪ್

    ಸಲ್ಮಾನ್ ಖಾನ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಕಿಚ್ಚ ಸುದೀಪ್

    ಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ `ವಿಕ್ರಾಂತ್ ರೋಣ’ ಸಕ್ಸಸ್ ಖುಷಿಯಲ್ಲಿದ್ದಾರೆ. ಇನ್ನು ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ನಿರ್ದೇಶನದ ಬಗ್ಗೆ ಬ್ರೇಕಿಂಗ್ ಅಪ್‌ಡೇಟ್‌ವೊಂದನ್ನ ನೀಡಿದ್ದಾರೆ.

    ಕಿಚ್ಚ ಸುದೀಪ್ ಚಿತ್ರರಂಗ ಕಂಡಿರುವ ಬಹುಮುಖ ಪ್ರತಿಭೆ, ನಟ, ಗಾಯಕ, ನಿರ್ದೇಶಕನಾಗಿ ಸಿನಿಮಾರಂಗದಲ್ಲಿ ತಮ್ಮನ್ನ ತಾವು ಗುರುತಿಸಿಕೊಂಡಿದ್ದಾರೆ.. ಇದೀಗ ಇತ್ತೀಚೆಗಷ್ಟೇ ನೀಡಿದ ಸಂದರ್ಶನದಲ್ಲಿ ಬ್ಯಾಡ್ ಬ್ಯಾಯ್ ಸಲ್ಮಾನ್ ಖಾನ್‌ಗೆ ನಿರ್ದೇಶನ ಮಾಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ:ತಮಿಳಿನ ನಟ ಜಿ.ಎಂ ಕುಮಾರ್ ಆಸ್ಪತ್ರೆಗೆ ದಾಖಲು

    ಸಲ್ಲುಗಾಗಿಯೇ ಕಿಚ್ಚ ಭಿನ್ನ ಕಥೆ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಸಲ್ಮಾನ್ ಖಾನ್‌ಗೆ ಕಥೆ ಹೇಳಿ, ಸಿನಿಮಾ ಮಾಡುವುದಾಗಿ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ. ಈ ಮೂಲಕ ತಾವು ಮತ್ತೆ ನಿರ್ದೇಶನದ ಕ್ಯಾಪ್ ಧರಿಸುವ ಸೂಚನೆ ನೀಡಿದ್ದಾರೆ. ಇನ್ನು ವಿಕ್ರಾಂತ್ ರೋಣ ಚಿತ್ರದ ಹಿಂದಿ ವರ್ಷನ್ ಅನ್ನು ಸಲ್ಮಾನ್ ಖಾನ್ ಫಿಲ್ಮ್ಂ ಪ್ರೇಸೆಂಟ್ ಮಾಡಿದೆ. ಈ ಮೂಲಕ ಸುದೀಪ್ ಸಲ್ಮಾನ್ ಸಾಥ್ ನೀಡಿದ್ದಾರೆ.

    ಸಲ್ಮಾನ್ ಖಾನ್ ಮತ್ತು ಸುದೀಪ್ ಈಗಾಗಲೇ ಒಟ್ಟಿಗೆ ನಟಿಸಿದ್ದಾರೆ. ತೆರೆಮರೆಯಲ್ಲಿ ಕೂಡ ಒಳ್ಳೆಯ ಬಾಂದವ್ಯವಿದೆ. ಈ ಸ್ನೇಹಕ್ಕೆ ಸಾಕ್ಷಿಯಾಗಿ ಕಿಚ್ಚನ ಸಿನಿಮಾಗೆ ಸಲ್ಲು ಸಾಥ್ ನೀಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ನೋಡುವುದು ಪಕ್ಕಾ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ವಿಕ್ರಾಂತ್ ರೋಣ ಪ್ರದರ್ಶನದ ವೇಳೆ ಲಾಂಗ್ ಹಿಡಿದು ಯುವಕರ ಮಾರಾಮಾರಿ

    ವಿಕ್ರಾಂತ್ ರೋಣ ಪ್ರದರ್ಶನದ ವೇಳೆ ಲಾಂಗ್ ಹಿಡಿದು ಯುವಕರ ಮಾರಾಮಾರಿ

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಥಿಯೇಟರ್ ನಲ್ಲಿ ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದರೆ, ಇತ್ತ ಚಿಕ್ಕ ಮಗಳೂರಿನಲ್ಲಿ ಅಹಿತಕರ ಘಟನೆ ನಡೆದಿದೆ. ವಿಕ್ರಾಂತ್ ರೋಣ ಸಿನಿಮಾ ಪ್ರದರ್ಶನದ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

    ಚಿಕ್ಕಮಗಳೂರಿನ ಮಿಲನ ಥಿಯೇಟರ್ ನಲ್ಲಿ ವಿಕ್ರಾಂತ್ ರೋಣ ಸಿನಿಮಾ ಪ್ರದರ್ಶನವಾಗುತ್ತಿತ್ತು. ಈ ಸಮಯದಲ್ಲಿ ಹುಡುಗರ ಗುಂಪೊಂದು ಚಿತ್ರಮಂದಿರದ ಹೊರಗೆ ಲಾಂಗ್ ನೊಂದಿಗೆ ಕಾಣಿಸಿಕೊಂಡಿದೆ. ಸಿನಿಮಾ ನೋಡುವುದಕ್ಕಾಗಿ ಬಂದಿದ್ದ ಭರತ್ ಎನ್ನುವವನ ಮೇಲೆ ಲಾಂಗ್ ನಿಂದ ಹಲ್ಲೆ ಮಾಡಲಾಗಿದೆ. ಥಿಯೇಟರ್ ಹೊರಾಂಗಣದಲ್ಲಿ ಈ ಮಾರಾಮಾರಿ ನಡೆದಿದ್ದು ಹಲ್ಲೆಗೊಳಗಾದ ಭರತ್ ನೆಲಕ್ಕೆ ಬಿದ್ದರೂ, ಬಿಡದ ಗುಂಪು ಮಾರಣಾಂತಿಕ ಹಲ್ಲೆ ಮಾಡಿದೆ. ಇದನ್ನೂ ಓದಿ:ನಿರ್ದೇಶಕ ಹೇಳಿದ ಮಾತು ಕೇಳದೇ ಆಸ್ಪತ್ರೆ ಸೇರಿದ ಕಿರಿಕ್ ನಟಿ ಸಂಯುಕ್ತ ಹೆಗ್ಡೆ

    ನೋಡು ನೋಡುತ್ತಿದ್ದಂತೆಯೇ ಥಿಯೇಟರ್ ಹೊರಾಂಗಣ ರಣರಂಗವಾಗಿ ಮಾರ್ಪಟ್ಟಿದ್ದು, ಥಿಯೇಟರ್ ನಲ್ಲಿ ನೆರದಿದ್ದವರು ಅವರನ್ನು ಬಿಡಿಸುವಂತಹ ಪ್ರಯತ್ನ ಕೂಡ ಮಾಡಿದ್ದಾರೆ. ಹಲ್ಲೆಯ ನಂತರ ತೀವ್ರ ಗಾಯಗೊಂಡಿದ್ದ ಭರತ್ ನನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ್ ಗೆ ರವಾನೆ ಮಾಡಲಾಗಿದೆ. ಹಾಸನದ ಆಸ್ಪತ್ರೆಯಲ್ಲಿ ಭರತ್ ಗೆ ಚಿಕಿತ್ಸೆ ನೀಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕ್?

    ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕ್?

    ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಕೆಲವು ಡಿಜಿಟಲ್ ವೇದಿಕೆಗಳಲ್ಲಿ ಸಿನಿಮಾದ ಲಿಂಕ್ ಲಭ್ಯವಾಗಿದ್ದು, ಅವುಗಳನ್ನು ಡಿಲಿಟ್ ಮಾಡಿಸುವ ಪ್ರಯತ್ನಕ್ಕೆ ಚಿತ್ರತಂಡ ಮುಂದಾಗಿದೆ. ಬಹುಕೋಟಿ ಬಜೆಟ್ ಸಿನಿಮಾಗಳು ರಿಲೀಸ್ ಆದಾಗ ಪೈರಸಿ ಆಗುವುದು ಸಾಮಾನ್ಯ. ಆದರೆ, ಅದು ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಖುಷಿ ಕೊಡುತ್ತದೆ ಎನ್ನುವುದೇ ಇಲ್ಲಿ ಮುಖ್ಯ.

    ವಿಕ್ರಾಂತ್ ರೋಣ ಸಿನಿಮಾ ಆನ್‌ಲೈನ್‌ನಲ್ಲಿ ರಿಲೀಸ್ ಆಗಿದೆ ನಿಜ. ಇದು ಸಿನಿಮಾ ತಂಡಕ್ಕೂ ಅರಿವಿತ್ತು. ಹಾಗಾಗಿಯೇ ಸುದೀಪ್ ಅವರು ಪೈರಸಿ ಕುರಿತು ಮಾತನಾಡುತ್ತಾ, ಇದು ಮೊಬೈಲ್‌ನಲ್ಲಿ ನೋಡುವಂತಹ ಸಿನಿಮಾವಲ್ಲ. ಸಿಕ್ಕರೆ ಖಂಡಿತಾ ನೀವು ನೋಡಿ. ಆದರೆ, ಈ ಸಿನಿಮಾವನ್ನು ಮೊಬೈಲ್‌ನಲ್ಲಿ ನೋಡಿದ ನಂತರವೂ ನೀವು ಥಿಯೇಟರ್‌ಗೆ ಬಂದು ಮತ್ತೆ ಸಿನಿಮಾ ನೋಡುತ್ತೀರಿ. ಆ ರೀತಿಯಲ್ಲಿದೆ ಎಂದಿದ್ದರು. ಇದನ್ನೂ ಓದಿ:ನಿರ್ದೇಶಕ ಹೇಳಿದ ಮಾತು ಕೇಳದೇ ಆಸ್ಪತ್ರೆ ಸೇರಿದ ಕಿರಿಕ್ ನಟಿ ಸಂಯುಕ್ತ ಹೆಗ್ಡೆ

    ನಿರ್ದೇಶಕ ಅನೂಪ್ ಭಂಡಾರಿಯವರು ಒಂದು ಪೋಸ್ಟರ್ ರಿಲೀಸ್ ಮಾಡಿ, ವಿಕ್ರಾಂತ್ ರೋಣ ಪೈರಸಿ ಆಗಿದ್ದು ಕಂಡು ಬಂದರೆ ಕೂಡಲೇ ಸೈಬರ್ ಠಾಣೆ ಅಥವಾ ಅವರೇ ಒಂದು ನಂಬರ್ ಕೊಟ್ಟಿದ್ದರು. ಆ ನಂಬರ್ ಗೆ ಮಾಹಿತಿ ಕೊಡಿ ಎಂದು ಕೇಳಿಕೊಂಡಿದ್ದರು. ಆ ಪೋಸ್ಟರ್ ಕೂಡ ಭಾರೀ ವೈರಲ್ ಆಗಿತ್ತು. ಯಾರು, ಎಷ್ಟೇ ತಡೆದರೂ ಈ ಪೈರಸಿ ಮಾತ್ರ ಇನ್ನೂ ನಿಂತಿಲ್ಲ. ಈ ಹಿಂದೆ ಸುದೀಪ್ ನಟನೆಯ ಪೈಲ್ವಾನ್ ಸಿನಿಮಾಗೂ ಪೈರಸಿಗೆ ತುತ್ತಾಗಿತ್ತು.

    ವಿಕ್ರಾಂತ್ ರೋಣ ಸಿನಿಮಾವನ್ನು ಪೈರಸಿಯಲ್ಲಿ ನೋಡಿದರೆ ಅದನ್ನು ಆಸ್ವಾದಿಸುವುದು ಕಷ್ಟ. ಯಾಕೆಂದರೆ, ಬಹುತೇಕ ಸಿನಿಮಾ ಕತ್ತಲಿನಲ್ಲೇ ನಡೆಯುತ್ತದೆ. ಹಾಗೂ 3 ಡಿಯಲ್ಲಿ ರಿಲೀಸ್ ಆಗಿದೆ. ಆ ಖುಷಿಯೇ ಬೇರೆ ಮತ್ತು ದೃಶ್ಯ ವೈಭವವನ್ನು ಥಿಯೇಟರ್ ನಲ್ಲಿಯೇ ನೋಡಿ ಅನುಭವಿಸಬೇಕು. ಹಾಗಾಗಿ ಪೈರಸಿಯಾದರೂ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರೆ ಎನ್ನುವ ನಂಬಿಕೆ ಚಿತ್ರತಂಡದ್ದು.

    Live Tv
    [brid partner=56869869 player=32851 video=960834 autoplay=true]

  • ಕಿಚ್ಚ ಸುದೀಪ್ ಗೆ ಅಪ್ಪು ಫ್ಯಾನ್ಸ್ ಧನ್ಯವಾದ ಹೇಳಿದ್ದು ಯಾಕೆ?

    ಕಿಚ್ಚ ಸುದೀಪ್ ಗೆ ಅಪ್ಪು ಫ್ಯಾನ್ಸ್ ಧನ್ಯವಾದ ಹೇಳಿದ್ದು ಯಾಕೆ?

    ನ್ನಡದಲ್ಲಿ ಇಬ್ಬರು ಸೂಪರ್ ಸ್ಟಾರ್ ಗಳು ಬಾಲ್ಯದಿಂದಲೇ ಪರಿಚಯ ಅಂತಿದ್ದರೆ ಅದು ಪುನೀತ್ ರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅವರಿಗೆ ಕ್ರೆಡಿಟ್ ಸೇರಬೇಕು. ಇಬ್ಬರೂ ಬಾಲ್ಯದಿಂದಲೇ ಸ್ನೇಹಿತರು. ಅಪ್ಪು ಬಾಲ್ಯದಲ್ಲಿ ಇರುವಾಗ ಅದೆಷ್ಟೋ ಬಾರಿ ಸುದೀಪ್ ಅವರನ್ನು ಭೇಟಿ ಮಾಡಿದ್ದು ಇದೆ. ಒಟ್ಟಿಗೆ ಆಡಿದ್ದೂ ಇದೆ. ಅದರಲ್ಲೂ ಸುದೀಪ್ ಅವರು ತಂದೆ ನಡೆಸಿಕೊಡುತ್ತಿದ್ದ ಸರೋವರ ಹೋಟೆಲ್ ಗೆ ಡಾ.ರಾಜ್ ಕುಮಾರ್ ಅವರು ಖಾಯಂ ಗೆಸ್ಟ್. ಹಾಗಾಗಿ ಅಪ್ಪನ ಜೊತೆಯೂ ಅಪ್ಪು ಅಲ್ಲಿಗೆ ಬರುತ್ತಿದ್ದರು.

    ಅಪ್ಪು ಅವರನ್ನು ಸುದೀಪ್ ಅವರು ಎಷ್ಟು ಗೌರವಿಸುತ್ತಿದ್ದರೋ, ಅಷ್ಟೇ ಗೌರವವನ್ನು ಸುದೀಪ್ ಅವರಿಗೆ ಅಪ್ಪು ನೀಡುತ್ತಿದ್ದರು. ಹೀಗಾಗಿಯೇ ಅಪ್ಪುವನ್ನು ಗೌರವಿಸುವುದಕ್ಕಾಗಿ ಅನೇಕ ಚಿತ್ರಮಂದಿರಗಳಲ್ಲಿ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಕಟೌಟ್ ಗಳನ್ನು ಚಿತ್ರತಂಡ ಹಾಕಿದೆ. ಫ್ಯಾನ್ಸ್ ಕೂಡ ಇಬ್ಬರ ಕಟೌಟ್ ಗೂ  ಹಾಲಿನ ಅಭಿಷೇಕ ಮಾಡುತ್ತಿದ್ದಾರೆ. ಐವತ್ತಕ್ಕೂ ಹೆಚ್ಚು ಕಟೌಟ್ ಗಳು ಈ ಜೋಡಿಯದ್ದೇ ಚಿತ್ರಮಂದಿರದ ಮುಂದೆ ಎದ್ದು ನಿಂತಿವೆ. ಹಾಗಾಗಿ ಅಪ್ಪು ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಓಟಿಟಿನಲ್ಲಿ ಬರುತ್ತಿದ್ದಾಳೆ ರಕ್ಷಿತ್ ಶೆಟ್ಟಿ ನಟನೆಯ ಕನ್ನಡದ ‘ಚಾರ್ಲಿ

    ಸಾಮಾನ್ಯವಾಗಿ ಸಿನಿಮಾದಲ್ಲಿ ನಟರು ಇದ್ದರೆ ಅವರ ಕಟೌಟ್ ಹಾಕುವುದು ವಾಡಿಕೆ. ಪುನೀತ್ ರಾಜ್ ಕುಮಾರ್ ಅವರಿಗೂ ವಿಕ್ರಾಂತ್ ರೋಣ ಸಿನಿಮಾಗೂ ಸಂಬಂಧವೇ ಇಲ್ಲದಿದ್ದರೂ, ನಟನ ಗೌರವಾರ್ಥ ಸಾಕಷ್ಟು ಕಟೌಟ್ ಗಳನ್ನು ವಿಕ್ರಾಂತ್ ರೋಣ ತಂಡ ಹಾಕುವ ಮೂಲಕ ನಮನ ಸಲ್ಲಿಸಿದೆ. ಈ ನಡೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸಂತಸ ತಂದಿದೆ. ಹೀಗಾಗಿ ವಿಕ್ರಾಂತ್ ರೋಣ ತಂಡಕ್ಕೆ ಮತ್ತು ಸುದೀಪ್ ಅವರಿಗೆ ಅಭಿಮಾನಿಗಳು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಶ್ವದಾದ್ಯಂತ ಕಿಚ್ಚನ ವಿಕ್ರಾಂತ್ ರೋಣ ರಿಲೀಸ್ – ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ

    ವಿಶ್ವದಾದ್ಯಂತ ಕಿಚ್ಚನ ವಿಕ್ರಾಂತ್ ರೋಣ ರಿಲೀಸ್ – ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.

    ಈಗಾಗಲೇ ಟ್ರೈಲರ್, ಸಾಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ ವಿಕ್ರಾಂತ್ ರೋಣ ಸಿನಿಮಾ ನೋಡಲು ಇಂದು ಪ್ರೇಕ್ಷರು ಮುಂಜಾನೆಯಿಂದಲೇ ಚಿತ್ರಮಂದಿರಗಳಲ್ಲಿ ಜಮಾಯಿಸಿದ್ದರು. ಸಿನಿಮಾದಲ್ಲಿ ಕಿಚ್ಚನ ಸ್ಟೈಲಿಶ್ ಲುಕ್‌ ನೋಡಿ ಫಿದಾ ಆಗಿರುವ ಅಭಿಮಾನಿಗಳು ಸದ್ಯ ಸಿನಿಮಾ ನೋಡುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ: ವಿಕ್ರಾಂತ್ ರೋಣ ಶೋ ಸಂಖ್ಯೆ ಹೆಚ್ಚಳ: ವಿಶ್ವದಾದ್ಯಂತ 9500 ಶೋ, 2500 ಸ್ಕ್ರೀನ್ ಗಳಲ್ಲಿ ಪ್ರದರ್ಶನ

    325 ಸಿಂಗಲ್ ಸ್ಕ್ರೀನ್‍ಗಳಲ್ಲಿ ವಿಕ್ರಾಂತ್ ರೋಣ ಸಿನಿಮಾ ತೆರೆಕಂಡಿದ್ದು, ಮೊದಲ ದಿನ ರಾಜ್ಯದಲ್ಲಿ ಬರೋಬ್ಬರಿ 2,500 ಶೋಗಳು ನಡೆಯಲಿದೆ. ಸುಮಾರು 900 ಸ್ಕ್ರೀನ್‍ಗಳಲ್ಲಿ 3ಡಿ ಹಾಗೂ 1,600 ಸ್ಕ್ರೀನ್‍ನಲ್ಲಿ 2ಡಿ ವರ್ಷನ್ ಬಿಡುಗಡೆಯಾಗಿದೆ. ಬೆಂಗಳೂರಿನ 40 ಮಲ್ಟಿಪ್ಲೆಕ್ಸ್‌ನಲ್ಲಿ 800 ಶೋ ಒಟ್ಟು 70 ಸಿಂಗಲ್ ಸ್ಕ್ರೀನ್‍ನಲ್ಲಿ 400 ಶೋ ಇದೆ. ಬೆಳಗ್ಗೆ 5.30ಕ್ಕೆ ಶಂಕರ್ ನಾಗ್ ಚಿತ್ರಮಂದಿರದಲ್ಲಿ ಮೊದಲ ಶೋ ಪ್ರಾರಂಭವಾಗಿದೆ.

    ಪ್ರಿಯಾ ಸುದೀಪ್ ಅವರು ಮುಂಜಾನೆಯೇ ಬೆಂಗಳೂರಿನ ಊರ್ವಶಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದು, ಅವರ ಜೊತೆ ಊರ್ವಶಿ ಥಿಯೇಟರ್‌ನಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಚಿತ್ರತಂಡ ಸಿನಿಮಾ ವೀಕ್ಷಿಸಿದ್ದಾರೆ. ಇದನ್ನೂ ಓದಿ: ಸಂಸದರಿಗೆ, ಸರಕಾರಿ ಅಧಿಕಾರಿಗಳಿಗಾಗಿ ‘ವಿಕ್ರಾಂತ್ ರೋಣ’ ಸ್ಪೆಷಲ್ ಶೋ

    ವೀರೇಶ್ ಥಿಯೇಟರ್‌ನಲ್ಲಿ ಕಿಚ್ಚನ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಕನ್ನಡ, ಇಂಗ್ಲೀಷ್ ಸೇರಿದಂತೆ 6 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಆಂಧ್ರ-ತೆಲಂಗಾಣ, ತಮಿಳುನಾಡು, ಕೇರಳ, ಉತ್ತರ ಭಾರತ ಸೇರಿದಂತೆ 50ಕ್ಕೂ ಹೆಚ್ಚು ದೇಶಗಳಲ್ಲಿ ವಿಕ್ರಾಂತ್ ರೋಣ ಅಬ್ಬರಿಸುತ್ತಿದ್ದಾನೆ.

    ನಿರ್ದೇಶಕ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳಿರುವ ವಿಕ್ರಾಂತ್ ರೋಣ ಚಿತ್ರದಲ್ಲಿ ನಾಯಕ ನಟರಾಗಿ ಕಿಚ್ಚ ಸುದೀಪ್ ಅಭಿನಯಿಸಿದರೆ, ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕೆಲ್ವಿನ್ ಫರ್ನಾಂಡಿಸ್, ರವಿಶಂಕರ್ ಗೌಡ ಸೇರೆದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ವಿಕ್ರಾಂತ್ ರೋಣ ಶೋ ಸಂಖ್ಯೆ ಹೆಚ್ಚಳ: ವಿಶ್ವದಾದ್ಯಂತ 9500 ಶೋ, 2500 ಸ್ಕ್ರೀನ್ ಗಳಲ್ಲಿ ಪ್ರದರ್ಶನ

    ವಿಕ್ರಾಂತ್ ರೋಣ ಶೋ ಸಂಖ್ಯೆ ಹೆಚ್ಚಳ: ವಿಶ್ವದಾದ್ಯಂತ 9500 ಶೋ, 2500 ಸ್ಕ್ರೀನ್ ಗಳಲ್ಲಿ ಪ್ರದರ್ಶನ

    ಕಿಚ್ಚ ಸುದೀಪ್  ನಟನೆಯ ವಿಕ್ರಾಂತ್ ರೋಣ ಸಿನಿಮಾ ನಾಳೆ ವಿಶ್ವದಾದ್ಯಂತ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ದಾಖಲೆಯ ರೀತಿಯಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಮೊದಲ ದಿನ ವಿಶ್ವದಾದ್ಯಂತ ಅಂದಾಜು 9500 ಶೋಗಳು ಮತ್ತು 2500 ಸ್ಕ್ರೀನ್ ಗಳಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ. ಒಟ್ಟು 50 ದೇಶಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಬೆಂಗಳೂರಿನಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ಪ್ರದರ್ಶನ ಪ್ರಾರಂಭವಾಗುತ್ತಿದೆ.

    ನಾಳೆಯಿಂದ ಪ್ರದರ್ಶನಗೊಳ್ಳುತ್ತಿರುವ ವಿಕ್ರಾಂತ್ ರೋಣ ಸಿನಿಮಾ, ಮೊದಲ ದಿನ ಯಾವೆಲ್ಲ ರಾಜ್ಯದಲ್ಲಿ ಎಷ್ಟು ಸ್ಕ್ರೀನ್ ಮತ್ತು ಶೋಗಳು ನಡೆಯಲಿವೆ ಎನ್ನುವ ಅಂದಾಜು ಇಲ್ಲಿದೆ. ಕರ್ನಾಟಕದಲ್ಲಿ ಒಟ್ಟು 390 ಸ್ಕ್ರೀನ್ ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, 2500 ಶೋಗಳನ್ನು ಆಯೋಜನೆ ಮಾಡಲಾಗಿದೆ. ಬೆಂಗಳೂರು ಒಂದರಲ್ಲೇ 110 ಸ್ಕ್ರೀನ್ ಮತ್ತು 1200 ಶೋಗಳು ನಡೆಯಲಿವೆ. ಇದನ್ನೂ ಓದಿ:ಕಿಚ್ಚ ಸುದೀಪ್ ಅವರನ್ನು ವಿಶ್ವದ ಬಾಕ್ಸ್ ಆಫೀಸಿಗೆ ಹೋಲಿಸಿದ ಉಪೇಂದ್ರ

    ಆಂಧ್ರ ಮತ್ತು ತೆಲಂಗಾಣದಲ್ಲೂ ವಿಕ್ರಾಂತ್ ರೋಣ ಹಿಂದೆ ಬಿದ್ದಿಲ್ಲ. ಅಂದಾಜು 350ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ 1400 ಶೋಗಳು ನಡೆಯಲಿವೆ. ತಮಿಳುನಾಡಿನಲ್ಲಿ 250 ಸ್ಕ್ರೀನ್ ಗಳಲ್ಲಿ 1000 ಶೋಗಳು ಅರೇಂಜ್ ಆಗಿವೆ ಎನ್ನುವ ಅಂದಾಜಿದೆ. ಕೇರಳದಲ್ಲಿ 110 ಸ್ಕ್ರೀನ್ ಗಳಲ್ಲಿ 600 ಶೋಗಳು ನಡೆಯುತ್ತಿವೆ. ಉತ್ತರ ಭಾರತದಲ್ಲಿ ಒಟ್ಟು ಸ್ಕ್ರೀನ್ ಗಳ ಸಂಖ್ಯೆ 690 ಎಂದು ಅಂದಾಜಿಸಲಾಗಿದ್ದು, 2800 ಶೋಗಳು ಅಲ್ಲಿ ನಡೆಯಲಿವೆ.

    ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ವಿಕ್ರಾಂತ್ ರೋಣ ಛಾಪು ಮೂಡಿಸಲು ಸಜ್ಜಾಗಿದೆ. ಅಂದಾಜು 50ಕ್ಕೂ ಹೆಚ್ಚು ದೇಶಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, 600 ಸ್ಕ್ರೀನ್ ಗಳಲ್ಲಿ 1500 ಶೋಗಳನ್ನು ಆಯೋಜನೆ ಮಾಡಿದ್ದಾರೆ ನಿರ್ಮಾಪಕರು. ಇದು ಮೊದಲ ದಿನದ ಅಂದಾಜು ಸ್ಕ್ರೀನ್ಸ್ ಮತ್ತು ಶೋಗಳು ಆಗಿದ್ದು, ನಾಳೆ ಇದರ ಚಿತ್ರಣ ಮತ್ತಷ್ಟು ಬದಲಾಗಬಹುದು. ಇನ್ನಷ್ಟು ಚಿತ್ರಮಂದಿರಗಳಲ್ಲೂ ಸಿನಿಮಾ ರಿಲೀಸ್ ಆಗಬಹುದು.

    Live Tv
    [brid partner=56869869 player=32851 video=960834 autoplay=true]

  • ಸಂಸದರಿಗೆ, ಸರಕಾರಿ ಅಧಿಕಾರಿಗಳಿಗಾಗಿ ‘ವಿಕ್ರಾಂತ್ ರೋಣ’ ಸ್ಪೆಷಲ್ ಶೋ

    ಸಂಸದರಿಗೆ, ಸರಕಾರಿ ಅಧಿಕಾರಿಗಳಿಗಾಗಿ ‘ವಿಕ್ರಾಂತ್ ರೋಣ’ ಸ್ಪೆಷಲ್ ಶೋ

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಇದೇ ಶುಕ್ರವಾರ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ ಕೆಲವು ಕಡೆ ಸ್ಪೆಷಲ್ ಶೋ ಅನ್ನು ಆಯೋಜನೆ ಮಾಡಿದೆ ಚಿತ್ರತಂಡ. ನವ ದೆಹಲಿಯಲ್ಲಿ ಸಂಸದರಿಗೆ ಮತ್ತು ಸರಕಾರಿ ಅಧಿಕಾರಿಗಳಿಗೆ ಸ್ಪೆಷಲ್ ಶೋ ಆಯೋಜನೆ ಮಾಡಿದ್ದು, ಈ ಕುರಿತು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟ್ವಿಟ್ ಮಾಡಿದ್ದಾರೆ. ಸಿನಿಮಾ ನೋಡುವುದಕ್ಕಾಗಿ ಕುತೂಹಲದಿಂದ ಕಾಯುತ್ತಿರುವುದಾಗಿ ಬರೆದುಕೊಂಡಿದ್ದಾರೆ.

    ವಿಕ್ರಾಂತ್ ರೋಣ ಸಿನಿಮಾ ಪ್ರಪಂಚದ 27ದೇಶಗಳಲ್ಲಿ ಪ್ರಿವ್ಯೂ ಆಗುತ್ತಿದೆ. ಜೊತೆಗೆ ದುಬೈನಲ್ಲಿ 5 ಭಾಷೆಯಲ್ಲೂ ಪ್ರದರ್ಶನವಾಗಲಿದೆ. ನೇಪಾಳ, ಪಾಕಿಸ್ತಾನದಲ್ಲೂ ವಿಕ್ರಾಂತ್‌ ರೋಣ ರಿಲೀಸಾಗುವ ಸಾಧ್ಯತೆಯಿದೆ. ಪ್ರಪಂಚದಾದ್ಯಂತ 3200ರಿಂದ 3500 ಚಿತ್ರಮಂದಿಗಳಲ್ಲಿ ವಿಕ್ರಾಂತ್ ರೋಣ ರಿಲೀಸಾಗುತ್ತಿದ್ದು, ಕರ್ನಾಟಕದಲ್ಲೇ 400ರಿಂದ 420 ಥೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಇದನ್ನೂ ಓದಿ:`ವಿಕ್ರಾಂತ್ ರೋಣ’ ಚಿತ್ರದ ನಂತರ ಹೊಸ ಸಿನಿಮಾಗೆ ಕಿಚ್ಚ ಸುದೀಪ್ ಗ್ರೀನ್ ಸಿಗ್ನಲ್

    ಕರ್ನಾಟಕಕ್ಕಿಂತ ತೆಲುಗು ರಾಜ್ಯಗಳಲ್ಲಿ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ನಿರ್ಮಾಪಕ ಜಾಕ್ ಮಂಜು ಹೇಳಿದ್ದು, ಈಗಾಗಲೇ ಬಹುತೇಕ ಕಡೆಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬಾಲಿವುಡ್‌ನಲ್ಲಿ 900 ಚಿತ್ರಮಂದಿರ, ಟಾಲಿವುಡ್‌ನಲ್ಲಿ 350ಕ್ಕೂ ಹೆಚ್ಚು ಥಿಯೇಟರ್ ಅಲ್ಲದೆ ವಿದೇಶಗಳಲ್ಲಿ 800ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ವಿಕ್ರಾಂತ್‌ರೋಣ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • `ವಿಕ್ರಾಂತ್ ರೋಣ’ ಚಿತ್ರದ ನಂತರ ಹೊಸ ಸಿನಿಮಾಗೆ ಕಿಚ್ಚ ಸುದೀಪ್ ಗ್ರೀನ್ ಸಿಗ್ನಲ್

    `ವಿಕ್ರಾಂತ್ ರೋಣ’ ಚಿತ್ರದ ನಂತರ ಹೊಸ ಸಿನಿಮಾಗೆ ಕಿಚ್ಚ ಸುದೀಪ್ ಗ್ರೀನ್ ಸಿಗ್ನಲ್

    ಚಿತ್ರರಂಗದಲ್ಲಿ ಸದ್ಯ ಸಿಕ್ಕಾಪಟ್ಟೆ ಹೈಫ್ ಕ್ರಿಯೇಟ್ ಮಾಡಿರುವ ಚಿತ್ರ `ವಿಕ್ರಾಂತ್ ರೋಣ’. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಿರುವ ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ, ಈ ವೇಳೆ ತಮ್ಮ ಮುಂದಿನ ಚಿತ್ರದ ಬಗ್ಗೆ ರಿವೀಲ್ ಮಾಡಿದ್ದಾರೆ. ಇಂಡಿಯನ್ ಫಿಲ್ಮ್ಂ ಮೇಕರ್ ವೆಂಕಟ್ ಪ್ರಭು ಜತೆ ಸುದೀಪ್ ಸಾಥ್ ನೀಡಲಿದ್ದಾರೆ.

    ಸಿನಿಮಾರಂಗದಲ್ಲಿ ಅಭಿನಯ ಚಕ್ರವರ್ತಿ ಆಗಿ ರಾರಾಜಿಸುತ್ತಿರುವ ಕಿಚ್ಚ ಸುದೀಪ್ ಗಾಂಧಿನಗರದಲ್ಲಿ ಮಾತ್ರವಲ್ಲ ಪರಭಾಷೆ, ಹೊರದೇಶದಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಗಡಿ ದಾಟಿ ಬೆಳೆದಿರುವ ಬಹುಮುಖ ಪ್ರತಿಭೆ ಕಿಚ್ಚ ಸುದೀಪ್ ಸದ್ಯ ʻವಿಕ್ರಾಂತ್ ರೋಣʼ ಗ್ರ್ಯಾಂಡ್‌  ಆಗಿ ರಿಲೀಸ್ ಆಗುವುದಕ್ಕೆ ದಿನಗಣನೆ ಶುರುವಾಗಿದೆ. ೩ಡಿ ರೂಪದಲ್ಲಿ ಬಹುಭಾಷೆಗಳಲ್ಲಿ ಇದೇ ಜುಲೈ 28ಕ್ಕೆ ತೆರೆಗೆ ಬರಲಿದೆ. `ವಿಕ್ರಾಂತ್ ರೋಣ’ ಚಿತ್ರದ ನಂತರ ಕಿಚ್ಚನ ಮುಂದಿನ ಸಿನಿಮಾ ಯಾವುದು ಎಂಬುದಕ್ಕೆ ಸ್ವತಃ ಸುದೀಪ್ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

    ತಮಿಳಿನ ಸಾಕಷ್ಟು ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ವೆಂಕಟ್ ಪ್ರಭು ಈಗ ಕಿಚ್ಚ ಸುದೀಪ್‌ಗೆ ಡೈರೆಕ್ಷನ್ ಮಾಡಲು ರೆಡಿಯಾಗಿದ್ದಾರೆ. ಸೌತ್ ಸಿನಿಮಾರಂಗದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನ ನೀಡಿರುವ ವೆಂಕಟ್ ಪ್ರಭು ಈಗ ಭಿನ್ನ ಕಥೆಯೊಂದನ್ನ ರೆಡಿ ಮಾಡಿ, ಈಗಾಗಲೇ ಕಿಚ್ಚನಿಗೆ ಸ್ಟೋರಿ ಹೇಳಿದ್ದಾರೆ. ಕಥೆ ಕೇಳಿ ಸುದೀಪ್ ಕೂಡ ಓಕೆ ಅಂದಿದ್ದಾರೆ. ಇದನ್ನೂ ಓದಿ:ರಾಕೇಶ್ ಬಾಪಟ್ ಜೊತೆ ಬ್ರೇಕಪ್ ಮಾಡಿಕೊಂಡ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ

    ʻವಿಕ್ರಾಂತ್ ರೋಣʼ ರಿಲೀಸ್‌ಗೆ ರೆಡಿಯಿದೆ ಇದಾದ ಬಳಿಕ ಬಿಗ್ ಬಾಸ್ ಶೋ ಆಗಸ್ಟ್ 6ರಿಂದ ಶುರುವಾಗಲಿದೆ. ಬಳಿಕ ವೆಂಕಟ್ ಪ್ರಭು ನಿರ್ದೇಶನದ ಹೊಸ ಚಿತ್ರಕ್ಕೆ ಸುದೀಪ್ ಸೇರಿಕೊಳ್ಳಲಿದ್ದಾರೆ.ಅಕ್ಟೋಬರ್‌ನಲ್ಲಿ ಶೂಟಿಂಗ್‌ ಶುರುವಾಗಲಿದೆ. ಜತೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಕಿಚ್ಚನ ಕೈಯಲ್ಲಿದೆ.

    Live Tv
    [brid partner=56869869 player=32851 video=960834 autoplay=true]

  • ಕಿಚ್ಚ ಸುದೀಪ್ ಅವರನ್ನು ವಿಶ್ವದ ಬಾಕ್ಸ್ ಆಫೀಸಿಗೆ ಹೋಲಿಸಿದ ಉಪೇಂದ್ರ

    ಕಿಚ್ಚ ಸುದೀಪ್ ಅವರನ್ನು ವಿಶ್ವದ ಬಾಕ್ಸ್ ಆಫೀಸಿಗೆ ಹೋಲಿಸಿದ ಉಪೇಂದ್ರ

    ದಿನದಿಂದ ದಿನಕ್ಕೆ ವಿಕ್ರಾಂತ್ ರೋಣ ಸಿನಿಮಾದ ಅಬ್ಬರ ಹೆಚ್ಚಾಗುತ್ತಿದೆ. ದೇಶಾದ್ಯಂತ ಭರ್ಜರಿ ಪ್ರಚಾರವನ್ನೇ ಚಿತ್ರತಂಡ ಕೈಗೊಂಡಿದೆ. ಅದರಲ್ಲೂ ದೇಶದ ನಾನಾ ಭಾಗಗಳಲ್ಲಿ ಇವೆಂಟ್ ಆಯೋಜನೆ ಮಾಡಲಾಗುತ್ತಿದೆ. ಇದೇ ಶುಕ್ರವಾರ ಸಿನಿಮಾ ಬಿಡುಗಡೆ ಆಗುತ್ತಿದ್ದು, ಅದಕ್ಕೂ ಮುನ್ನ ಬೆಂಗಳೂರಿನಲ್ಲಿ ಇವೆಂಟ್ ಆಯೋಜನೆ ಮಾಡಿದ್ದರು ನಿರ್ಮಾಪಕರು. ಈ ಕಾರ್ಯಕ್ರಮಕ್ಕೆ ಉಪೇಂದ್ರ ಅತಿಥಿಯಾಗಿ ಆಗಮಿಸಿದ್ದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಉಪೇಂದ್ರ, ಇಬ್ಬರು ಸ್ಟಾರ್ ನಟರನ್ನು ತಮ್ಮದೇ ಆದ ರೀತಿಯಲ್ಲಿ ಹೋಲಿಕೆ ಮಾಡಿಕೊಂಡರು. ಕೆಜಿಎಫ್ ಸಿನಿಮಾದ ಮೂಲಕ ಯಶ್ ಇಂಡಿಯಾ ಬಾಕ್ಸ್ ಆಫೀಸ್ ಗೆದ್ದರೆ, ವಿಕ್ರಾಂತ್ ರೋಣ ಚಿತ್ರದ ಮೂಲಕ ಕಿಚ್ಚ ಸುದೀಪ್ ವಿಶ್ವದ ಬಾಕ್ಸ್ ಆಫೀಸ್ ಗೆಲ್ಲಲಿದ್ದಾರೆ ಎಂದರು. ಅಂಥದ್ದೊಂದು ಭರವಸೆ ತಮಗಿದೆ ಎಂದು ಬೆನ್ನು ತಟ್ಟಿದರು. ಇದನ್ನೂ ಓದಿ: ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋಶೂಟ್‌ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ

    ಈಗಾಗಲೇ ಮೂರುವರೆ ಸಾವಿರ ಸ್ಕ್ರೀನ್ ನಲ್ಲಿ ರಿಲೀಸ್ ಆಗಲು ವಿಕ್ರಾಂತ್ ರೋಣ ರೆಡಿಯಾಗಿದೆ. ಕನ್ನಡಕ್ಕಿಂತಲೂ ಇತರ ಭಾಷೆಯಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, 27ಕ್ಕೂ ಹೆಚ್ಚು ಅಧಿಕ ದೇಶಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿರುವುದು ಮತ್ತೊಂದು ವಿಶೇಷ. ಬಾಕ್ಸ್ ಆಫೀಸ್ ವಿಚಾರದಲ್ಲಿ ಈಗಾಗಲೇ ನಿರ್ಮಾಪಕರು ಸೇಫ್ ಆಗಿದ್ದು, ಇನ್ಮುಂದೆ ಬಂದಿದ್ದೆಲ್ಲವೂ ಲಾಭ ಎನ್ನುವ ಮಾತಿದೆ. ಈವರೆಗಿನ ದಾಖಲೆಗಳನ್ನು ಈ ಸಿನಿಮಾ ಬ್ರೇಕ್ ಮಾಡಲಿದೆ ಎನ್ನುತ್ತಿದೆ ಲೆಕ್ಕಾಚಾರ.

    Live Tv
    [brid partner=56869869 player=32851 video=960834 autoplay=true]