Tag: Vikrant Rona

  • ‘ವಿಕ್ರಾಂತ್ ರೋಣ’ ಪಾರ್ಟ್ 2 ಮಾಡುವ ಬಗ್ಗೆ ಸುಳಿವು ಕೊಟ್ಟ ಅನೂಪ್ ಭಂಡಾರಿ

    ‘ವಿಕ್ರಾಂತ್ ರೋಣ’ ಪಾರ್ಟ್ 2 ಮಾಡುವ ಬಗ್ಗೆ ಸುಳಿವು ಕೊಟ್ಟ ಅನೂಪ್ ಭಂಡಾರಿ

    ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಅನೂಪ್ ಭಂಡಾರಿ ಮತ್ತೊಮ್ಮೆ ಸುದೀಪ್ (Sudeep) ಜೊತೆ ಕೈಜೋಡಿಸಿದ್ದಾರೆ. ‘ಬಿಲ್ಲಾ ರಂಗ ಭಾಷಾ’ ಸಿನಿಮಾಗಾಗಿ ಜೊತೆಯಾಗುತ್ತಿದ್ದಾರೆ. ‘ವಿಕ್ರಾಂತ್ ರೋಣ 2’ ಬರುವ ಬಗ್ಗೆ ನಿರ್ದೇಶಕ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಜೊತೆಗೆ ಈ ಹಿಂದೆ ಸುದೀಪ್ ಜೊತೆ ‘ಅಶ್ವತ್ಥಾಮ’ ಚಿತ್ರಕ್ಕೆ ಅನೂಪ್‌ ನಿರ್ದೇಶನ ಮಾಡಬೇಕಿತ್ತು. ಆ ಪ್ರಾಜೆಕ್ಟ್ ಏನಾಯ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:‌’ವೆಟ್ಟೈಯಾನ್’ ಚಿತ್ರದ ಸಾಂಗ್ ರಿಲೀಸ್- ಮಂಜು ವಾರಿಯರ್ ಜೊತೆ ತಲೈವಾ ಸಖತ್ ಸ್ಟೆಪ್ಸ್

    ‘ಅಶ್ವತ್ಥಾಮ’ ಸಿನಿಮಾ ಸುದೀಪ್ ಅವರ ಜೊತೆ ಮಾಡಬೇಕಿತ್ತು. ಅದು ವಿಕ್ರಾಂತ್ ರೋಣ ನಂತರ ಚಿತ್ರ ಮಾಡಲು ಪ್ಲ್ಯಾನ್ ಆಗಿತ್ತು. 2020ರಲ್ಲಿ ‘ವಿಕ್ರಾಂತ್ ರೋಣ’ ನನ್ನ ಹುಟ್ಟುಹಬ್ಬದ ದಿನವೇ ಶೂಟಿಂಗ್ ಶುರುವಾಗಿತ್ತು. ಎರಡೆರಡು ಬಾರಿ ಕೊವೀಡ್‌ನಿಂದ ಲಾಕ್‌ಡೌನ್ ಆಯ್ತು. ಶೂಟಿಂಗ್ ನಿಂತು ನಿಂತು ಒಂದೂವರೆ ವರ್ಷ ಪ್ಲ್ಯಾನ್ ಮಾಡಿದ ಪ್ರಾಜೆಕ್ಟ್ 4 ವರ್ಷ ತೆಗೆದುಕೊಂಡಿತ್ತು. ಚಿತ್ರೀಕರಣ ಬೇಗ ಮುಗಿದಿದ್ರೆ, ವಿಕ್ರಾಂತ್ ರೋಣ ಬಳಿಕ ‘ಅಶ್ವತ್ಥಾಮ’ ಸಿನಿಮಾ ಮಾಡುತ್ತಿದ್ವಿ ಎಂದು ನಿರ್ದೇಶಕ ಅನೂಪ್ ಭಂಡಾರಿ (Anup Bhandari) ಮಾತನಾಡಿದ್ದಾರೆ.

    ಅಷ್ಟರಲ್ಲಿ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಬಂತು ಅದರಲ್ಲಿ ಅಶ್ವತ್ಥಾಮ ಪಾತ್ರ ಹೈಲೆಟ್ ಆಯ್ತು. ಮತ್ತೊಂದು ‘ಅಶ್ವತ್ಥಾಮ’ ಸಿನಿಮಾ ಅನೌನ್ಸ್ ಆಯಿತು. ಅದಕ್ಕೆ ಮುಂದೆ ನೋಡೋಣ ಎಂದು ಹೋಲ್ಡ್ ಮಾಡಿದ್ವಿ. ಈಗ ನಮ್ಮ ಹತ್ತಿರ ‘ಬಿಲ್ಲಾ ರಂಗ ಭಾಷಾ’ (Billa Ranga Basha) ಇದೆ. ‘ವಿಕ್ರಾಂತ್ ರೋಣ 2’ ಮಾಡಬೇಕು ಅಂದ್ರು ಅದಕ್ಕೂ ಅವಕಾಶ ಇದೆ ಎಂದು ಸೀಕ್ವೆಲ್ ಬರುವ ಬಗ್ಗೆ ಸುಳಿವು ನೀಡಿದ್ದಾರೆ ಅನೂಪ್. ಹಾಗಾದ್ರೆ ಈ ಸಿನಿಮಾ ಬಗ್ಗೆಯೂ ಅಧಿಕೃತವಾಗಿ ಅನೌನ್ಸ್ ಆಗುತ್ತಾ? ಕಾದುನೋಡಬೇಕಿದೆ.

  • ಕಿಚ್ಚನ ಜೊತೆ ನಟಿಸಬೇಕಂತೆ ಮಹಾನಟಿ: ಅವಕಾಶ ಕೊಡ್ತಾರಾ ಸುದೀಪ್?

    ಕಿಚ್ಚನ ಜೊತೆ ನಟಿಸಬೇಕಂತೆ ಮಹಾನಟಿ: ಅವಕಾಶ ಕೊಡ್ತಾರಾ ಸುದೀಪ್?

    ಷ್ಟೋ ಅಭಿಮಾನಿಗಳ ಹೃದಯ ಸಿಂಹಾಸನಾಧೀಶ ಕಿಚ್ಚ ಸುದೀಪ (Kiccha Sudeep). ಅಭಿನಯ ಚಕ್ರವರ್ತಿಯ ಗತ್ತು-ಮಾತು ಇಡೀ ದೇಶಕ್ಕೇ ಗೊತ್ತು. ಹೀಗಿರುವಾಗ ಅಪ್ಪಟ ಕನ್ನಡದ ಮಣ್ಣಿನ ಹುಡುಗಿಗೆ ಅವರ ಮೇಲಿನ ಅಭಿಮಾನ ಎಂಥದ್ದಿರಬೇಡ. ನಟಿಯಾಗುವ ಕನಸು ಹೊತ್ತು ಮಹಾನಟಿ ವೇದಿಕೆ ಏರಿರುವ ಆಶಿಕಾ ಶರ್ಮಾಗೆ ಕಿಚ್ಚ ಅಂದ್ರೆ ಬರೀ ಅಭಿಮಾನ ಹುಚ್ಚು ಅಭಿಮಾನ. ಇದೀಗ ಮಹಾನಟಿ ಕಾರ್ಯಕ್ರಮದ ಸ್ಪರ್ಧಿಯಾಗಿರುವ ಡಬ್ಬಿಂಗ್ ಆರ್ಟಿಸ್ಟ್ ಆಶಿಕಾ ಶರ್ಮಾಗೆ (Aashika Sharma) ಕಿಚ್ಚನಿಂದ ಶುಭಾಶಯವೂ ಅದೇ ವೇದಿಕೆಯಲ್ಲಿ  ಸರ್ ಪ್ರೈಸ್ ಆಗಿ ಸಿಕ್ಕಿದೆ.

    ಹೀರೋಯಿನ್ ಇಂಟ್ರುಡಕ್ಷನ್ ರೌಂಡ್‌ನಲ್ಲಿ ಆಶಿಕಾ ಶರ್ಮಾ ಉತ್ತಮವಾಗಿ ನಟಿಸಿದ್ರು. ಬಳಿಕ ವೇದಿಕೆಯಲ್ಲೇ ಕಿಚ್ಚ ಆಶಿಕಾಗೆ ಆಡಿಯೋ ಮೂಲಕ ಶುಭಾಶಯ ತಿಳಿಸಿದ್ರು. ಅನಿರೀಕ್ಷಿತವಾಗಿ ಕಿಚ್ಚ ಧ್ವನಿ ಆಲಿಸಿದ ಆಶಿಕಾ ಖುಷಿಗೆ ಪಾರವೇ ಇರಲಿಲ್ಲ. ಬಳಿಕ ಕಿಚ್ಚನನ್ನ ಆಶಿಕಾ ಈ ಹಿಂದೆ ಭೇಟಿ ಮಾಡಿದ್ದ ಸಂಗತಿ ಹಾಗೂ ಎಷ್ಟು ದೊಡ್ಡ ಅಭಿಮಾನಿ ಅನ್ನೋದನ್ನ ಹೇಳಿಕೊಂಡಿದ್ದಾರೆ. ಆಶಿಕಾ ಶರ್ಮಾ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದು ವಿಕ್ರಾಂತ ರೋಣ (Vikrant Rona) ಚಿತ್ರದ ರಕ್ಕಮ್ಮ ಪಾತ್ರಕ್ಕೆ ಅಂದ್ರೆ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಧ್ವನಿ ಕೊಟ್ಟಿದ್ರು.

    `ಊರಲ್ಲಿ ಇವತ್ತು ಇವರೊಬ್ಬರದ್ದೇ ಹೆಸರು ಚಾಲ್ತಿಯಲ್ಲಿರೋದು’ ವಿಕ್ರಾಂತ ರೋಣ’ ಟ್ರೈಲರ್ ನಲ್ಲಿ ಇಣುಕಿದ್ದ ಈ ಡೈಲಾಗ್ ಚಿತ್ರ ರಿಲೀಸ್‌ಗೂ ಮುನ್ನವೇ ಭಾರೀ ವೈರಲ್ ಆಗಿತ್ತು. ಈ ಮ್ಯಾಜಿಕಲ್ ಧ್ವನಿಯ ಹಿಂದಿನ ಶಕ್ತಿಯೇ ಆಶಿಕಾ ಶರ್ಮಾ, ಬಳಿಕ ಸುದೀಪ್‌ರನ್ನ ಹಿಂದೊಮ್ಮೆ ಆಶಿಕಾ ಭೇಟಿಯಾಗಿದ್ದರಂತೆ. ಅದಾಗಿ ಎಷ್ಟೋ ವರ್ಷಗಳಾದ್ಮೇಲೆ ಆಶಿಕಾಗೆ ಇದೀಗ ಕಿಚ್ಚ ಸುದೀಪ್ ಶುಭಾಶಯ ತಿಳಿಸಿದ್ದಾರೆ. ಸುದೀಪ್ ಆಕಸ್ಮಿಕ ಸಂದೇಶಕ್ಕೆ ಥ್ರಿಲ್ ಆದ ಆಶಿಕಾ ವೇದಿಕೆಯಲ್ಲೇ ಅವರ ಜೊತೆ ನಟಿಸುವ ಅವಕಾಶವನ್ನ ಕೇಳಿದ್ದಾರೆ. ಆಶಿಕಾ ಮನವಿಗೆ ಕಿಚ್ಚ ಸುದೀಪ್ ಸ್ಪಂಧಿಸುತ್ತಾರಾ..? ತಮ್ಮ ಚಿತ್ರದಲ್ಲಿ ನಟಿಸೋಕೆ ಅವಕಾಶ ಕೊಡ್ತಾರಾ ? ಸಮಯ ಬಂದಾಗ ಗೊತ್ತಾಗುತ್ತೆ.

  • SIIMA 2023: ರಾರಾ ರಕ್ಕಮ್ಮ ಸೇರಿ ವಿಕ್ರಾಂತ್ ರೋಣಕ್ಕೆ ಎರಡು ಪ್ರಶಸ್ತಿ

    SIIMA 2023: ರಾರಾ ರಕ್ಕಮ್ಮ ಸೇರಿ ವಿಕ್ರಾಂತ್ ರೋಣಕ್ಕೆ ಎರಡು ಪ್ರಶಸ್ತಿ

    ಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾಗೆ 2 ವಿಭಾಗದಲ್ಲಿ ಪ್ರತಿಷ್ಠಿತ ಸೈಮಾ (SIIMA 2023) ಪ್ರಶಸ್ತಿ ಒಲಿದು ಬಂದಿದೆ. ಅತ್ಯುತ್ತಮ ಉದಯೋನ್ಮುಖ ನಟಿ ಹಾಗೂ ಅತ್ಯುತ್ತಮ ಗಾಯಕಿ ಪ್ರಶಸ್ತಿ ವಿಕ್ರಾಂತ್ ರೋಣ ಸಿನಿಮಾಗೆ ನೀಡಲಾಗಿದೆ. ದುಬೈನಲ್ಲಿ ನಡೆದ ಸೈಮಾ ಅಂಗಳದಲ್ಲಿ ಗೋಲ್ಡನ್ ಬ್ಯೂಟಿಗೆ ನಾಯಕಿ ನೀತಾ ಅಶೋಕ್, ಗಾಯಕಿ ಸುನಿಧಿ ಚೌಹಾಣ್ (Sunidhi Chauhan) ಮುತ್ತಿಟ್ಟಿದ್ದಾರೆ.

    ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದ ಅನೂಪ್ ಭಂಡಾರಿ ಪದ ಪೋಣಿಸಿದ್ದ ರಾರಾ ರಕ್ಕಮ್ಮ ಹಾಡು ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಜಬರ್ದಸ್ತ್ ಹಾಡಿನಲ್ಲಿ ಸುದೀಪ್ ಜೊತೆ ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಹೆಜ್ಜೆ ಹಾಕಿದ್ದರು. ಇದೇ ರಕ್ಮಮ್ಮನಿಗೆ ಸುನಿಧಿ ಚೌಹಾಣ್ ಕಂಠ ನೀಡಿದ್ದರು.

     

    ದುಬಾರಿ ಬಜೆಟ್ ನಲ್ಲಿ ತಯಾರಾಗಿದ್ದ ವಿಕ್ರಾಂತ್ ರೋಣ ಸಿನಿಮಾಗೆ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿದ್ದರು. ನೀತಾ ಆಶೋಕ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಚೊಚ್ಚಲ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ನೀತಾ (Neeta Ashok) ಸೈಮಾ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 50ನೇ ಸಿನಿಮಾವರೆಗೂ ಕಿಚ್ಚನ ಕಾಲ್‌ಶೀಟ್‌ ಸೋಲ್ಡ್‌ ಔಟ್

    50ನೇ ಸಿನಿಮಾವರೆಗೂ ಕಿಚ್ಚನ ಕಾಲ್‌ಶೀಟ್‌ ಸೋಲ್ಡ್‌ ಔಟ್

     

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತಿ ಜೊತೆಗಿನ ರೊಮ್ಯಾಂಟಿಕ್‌ ಫೋಟೋ ಹಂಚಿಕೊಂಡ ‘ವಿಕ್ರಾಂತ್‌ ರೋಣ’ ನಟಿ

    ಪತಿ ಜೊತೆಗಿನ ರೊಮ್ಯಾಂಟಿಕ್‌ ಫೋಟೋ ಹಂಚಿಕೊಂಡ ‘ವಿಕ್ರಾಂತ್‌ ರೋಣ’ ನಟಿ

    ಸ್ಯಾಂಡಲ್‌ವುಡ್ ‘ವಿಕ್ರಾಂತ್ ರೋಣ’ (Vikrant Rona) ಬ್ಯೂಟಿ ನೀತಾ ಅಶೋಕ್ (Neetha Ashok) ಅವರು ಜುಲೈ 10ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸೋಷಿಯಲ್ ಮೀಡಿಯಾದಲ್ಲಿ ನೀತಾ ಮದುವೆ (Wedding) ಫೋಟೋಗಳು ಕೆಲವು ವೈರಲ್ ಆಗಿತ್ತು. ಆದರೆ ತಮ್ಮ ಮದುವೆಯ ಫೋಟೋಗಳನ್ನ ನಟಿ ಎಲ್ಲೂ ಹಂಚಿಕೊಂಡಿರಲಿಲ್ಲ. ಇದೀಗ ಪತಿ ಸತೀಶ್ ಜೊತೆಗಿನ ಮುದ್ದಾದ ಫೋಟೋವನ್ನ ನೀತಾ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ನಮ್ಮ ಪ್ರೀತಿ ಈಗಷ್ಟೇ ಮತ್ತೊಂದು ಲೆವಲ್ ಪಡೆದುಕೊಂಡಿದೆ ಎಂದು ಅಡಿಬರಹ ನೀಡಿ, ನೀತಾಗೆ ಪತಿ ಸತೀಶ್ ಮುತ್ತಿಡುವ ಫೋಟೋವನ್ನ ಹಂಚಿಕೊಂಡಿದ್ದರು. ನೀತಾ ಮದುವೆ ಫೋಟೋ ಪೋಸ್ಟ್ ಮಾಡ್ತಿದ್ದಂತೆ ನಟಿಯರಾದ ದಿವ್ಯಾ ಉರುಡುಗ, ಅದ್ವಿತಿ ಶೆಟ್ಟಿ, ಕೃಷಿ ತಾಪಂಡ, ಸೋನಾಲ್ ಮತ್ತು ಅಭಿಮಾನಿಗಳು ಶುಭಕೋರಿದ್ದಾರೆ. ಇದನ್ನೂ ಓದಿ:ದುಲ್ಕರ್ ಸಲ್ಮಾನ್ ಚಿತ್ರಕ್ಕೆ ‘ಲಕ್ಕಿ ಬಾಸ್ಕರ್’ ಟೈಟಲ್ ಫಿಕ್ಸ್

    ‘ಯಶೋದ’ (Yashoda) ಸೀರಿಯಲ್ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ನೀತಾ ಅಶೋಕ್ ಅವರು ನಾ ನಿನ್ನ ಬಿಡಲಾರೆ, ಸೇರಿದಂತೆ ಹಿಂದಿ ಸೀರಿಯಲ್‌ನಲ್ಲೂ ನಟಿಸಿದ್ದರು. ಬಳಿಕ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ನಿರೂಪ್ ಭಂಡಾರಿ ಜೋಡಿಯಾಗಿ ನೀತಾ ಮೋಡಿ ಮಾಡಿದ್ದರು. ನಟಿಯ ಮುದ್ದು ಮುಖ, ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.

    ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಏಕಾಏಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನೀತಾ ಅಶೋಕ್ ಅವರು ಆಮೇಲೆ ಬಹುಕಾಲದ ಪ್ರೀತಿ ಬಗ್ಗೆ ಹೇಳಿಕೊಂಡಿದ್ದರು. ಕಾಲೇಜಿನಿಂದಲೇ ಇವರಿಬ್ಬರು ಸ್ನೇಹಿತರಾಗಿದ್ದು, ಆಮೇಲೆ ಪ್ರೀತಿ ಹುಟ್ಟಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಅಂದಹಾಗೆ ಸತೀಶ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ನೀತಾ ಅವರು ಮೂಲತಃ ಉಡುಪಿಯವರು.

    ನೀತಾ ಅಶೋಕ್ ಹಾಗೂ ಸತೀಶ್ ಮೆಸ್ತಾ ಅವರು ಕುಟುಂಬದ ಸಾಕ್ಷಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜುಲೈ 10ರಂದು ಮದುವೆ ಉಡುಪಿಯಲ್ಲಿ ನಡೆದಿದೆ. ನೀತಾ- ಸತೀಶ್ ಅವರು ಸರಳವಾಗಿ ಕುಟುಂಬಸ್ಥರು, ಆತ್ಮೀಯರ ಸಾಕ್ಷಿಯಾಗಿ 12.25ಕ್ಕೆ ಅಭಿಜಿತ್ ಲಗ್ನ ಮುಹೂರ್ತದಲ್ಲಿ ಮದುವೆ ಆಗಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Breaking- ಕಿಚ್ಚನ ‘ವಿಕ್ರಾಂತ್ ರೋಣ’ ನಿರ್ಮಾಪಕರಿಗೆ ನಷ್ಟ ಮಾಡಿತಾ? : ಜಾಕ್ ಮಂಜು ಖಡಕ್ ಉತ್ತರ

    Breaking- ಕಿಚ್ಚನ ‘ವಿಕ್ರಾಂತ್ ರೋಣ’ ನಿರ್ಮಾಪಕರಿಗೆ ನಷ್ಟ ಮಾಡಿತಾ? : ಜಾಕ್ ಮಂಜು ಖಡಕ್ ಉತ್ತರ

    ಸುದೀಪ್ (Sudeep) ಅವರ ಮೇಲಿನ ಆರೋಪ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಎನ್. ಕುಮಾರ್ ನಂತರ ನಿರ್ಮಾಪಕರ ಸಂಘದಲ್ಲಿ ‘ಹುಚ್ಚ’ ಸಿನಿಮಾ ಖ್ಯಾತಿಯ ರೆಹಮಾನ್ (Rahman) ಕೂಡ ಹಲವು ಆರೋಪಗಳನ್ನು ಕಿಚ್ಚನ ಮೇಲೆ ಮಾಡಿದ್ದರು. ಜೊತೆಗೆ ವಿಕ್ರಾಂತ್ ರೋಣ (Vikrant Rona) ನಷ್ಟ ಮಾಡಿತು ಎಂದು ಜಾಕ್ ಮಂಜು (Jack Manju) ತಮಗೆ ಹೇಳಿದ್ದರು ಎಂದು ರೆಹಮಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಈ ಎಲ್ಲದಕ್ಕೂ ಉತ್ತರ ಎನ್ನುವಂತೆ ಜಾಕ್ ಮಂಜು ನಿರ್ಮಾಪಕರ ಸಂಘಕ್ಕೆ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಏನಿದೆ?

    ಎಲ್ಲರಿಗೂ ನಮಸ್ಕಾರ, ಕಳೆದ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಾನೂ ಓರ್ವ ನಿರ್ಮಾಪಕ-ವಿತರಕನಾಗಿದ್ದೇನೆ. ಅದೃಷ್ಟವಶಾತ್ ನಾನೂ ನಿರ್ಮಾಪಕರ ಸಂಘದ ಸದಸ್ಯನಾಗಿದ್ದೇನೆ. ಮೊನ್ನೆ ನನಗೂ ನಿರ್ಮಾಪಕರ ಸಂಘದ ಕಚೇರಿಗೆ ದಿಢೀರನೆ ಬಂದು ಪತ್ರಕರ್ತರನ್ನೆಲ್ಲಾ ಗುಡ್ಡೆ ಹಾಕಿಕೊಂಡು ಯಾವುದೇ ಮುನ್ಸೂಚನೆ ಇಲ್ಲದೇ ಗೋಷ್ಠಿ ನಡೆಸಿ ಸತ್ಯವನ್ನು ಬಟಾಬಯಲು ಮಾಡಬೇಕೆಂದನಿಸಿತು.

    ಆದರೆ, ನನಗೆ ಆ ಸ್ಥಳದ ಬಗ್ಗೆ ಗೌರವವಿದೆ. ನಿರ್ಮಾಪಕರ ಸಂಘ ಈ ಹಿಂದಿನಿಂದಲೂ ಸಮಸ್ತ ನಿರ್ಮಾಪಕರುಗಳನ್ನು ಕಾಪಾಡಿಕೊಂಡು ಬರಲು ಹಾಕಿಕೊಂಡಿರುವ ಸ್ವಯಂ ಕಟ್ಟುಪಾಡುಗಳ ಅರಿವಿದೆ. ತಪ್ಪು-ಸರಿಗಳ ನ್ಯಾಯ ತೂಗುವ ನಿರ್ಮಾಪಕರ ಸಂಘದ ಘನತೆಯ ಬಗ್ಗೆ ಅರಿವಿದೆ.  ಹಾಗಾಗಿ ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬಯಸದೇ ನನ್ನ ಉತ್ತರ ಅಭಿಪ್ರಾಯಗಳನ್ನು ನಿಮಗೇ ಬರೆಯುತ್ತಿದ್ದೇನೆ. ಪತ್ರಿಕಾಗೋಷ್ಟಿ ಕರೆದು ಸಕುಚಮರ್ಧನ ಮಾಡಿಕೊಳ್ಳುವ ಸುಳ್ಳುಗಳ ರಾಶಿ ತಂದೊಡ್ಡಿ ನಿರ್ಮಾಪಕರದಷ್ಟೇ ಅಲ್ಲ ಸಂಘದ ಮರೆಯಾದೆಯನ್ನೂ ತೆಗೆಯುವ ಇರಾದೆ ನನಗಿಲ್ಲ. ನಾನು ಹೇಳುವುದರಲ್ಲಿ ಸುಳ್ಳಿದ್ದರೆ ಕುರಾನಿನ ಅಲ್ಲಾ,  ಭಗವದ್ಗೀತೆಯ ಶ್ರೀಕೃಷ್ಣನೇ ನೋಡಿಕೊಳ್ಳುತ್ತಾನೆ. ಇದನ್ನೂ ಓದಿ:ನಯನತಾರಾ ಪತಿಗೆ ‘ಹುಷಾರ್’ ಎಂದ ಶಾರುಖ್ ಖಾನ್

    ನನಗಂತೂ ನಿರ್ಮಾಪಕರ ಸಂಘವು “ನಿರ್ಮಾಪಕರ ಹಿತ ಕಾಯುವಲ್ಲಿ ಬಳಸುತ್ತಿರುವ ತಾರತಮ್ಯ ಮಲತಾಯಿ ಧೋರಣೆಗಳ ಬಗ್ಗೆ ಅತೀವವಾದ ಸಂಕಟವಿದೆ. ಆದರೂ ತಮ್ಮ ಘನ ಸಮಕ್ಷಮಕ್ಕೆ ಉತ್ತರಿಸುತ್ತೇನೆ. ಸಂಘ ನಾಲ್ಕಾರು ಜನರ ಹಿತಕಾಯುವ ಮಾಫಿಯಾ ಮಾತ್ರ ಆಗದಿರಲಿ, ಸ್ವಯಂ ಕಟ್ಟುಪಾಡು- ಎಲ್ಲರ ಹಿತಾಸಕ್ತಿಗೆ ಒಗಲಿ ಎಂಬುದು ನನ್ನ ಮನವಿ ನನಗೆ ಸುದೀಪ್ ನಾಯಕತ್ವದ ಪ್ಯಾನ್  ಇಂಡಿಯಾ ಸಿನಿಮಾ ‘ವಿಕಾಂತ್ ರೋಣ’ ದಿಂದ ಯಾವುದೇ ನಷ್ಟವಾಗಿಲ್ಲ. ತನ್ನ ಕೋಟಿಗಟ್ಟಲೇ ಸಂಭಾವನೆ ಪಡೆಯದೇ ಸುದೀಪ್ ಎಂದಿನಂತೆ ನನ್ನ ಕೈ ಹಿಡಿದಿದ್ದಾರೆ. ಅದಿರಲಿ ಅದು ನಮ್ಮ ಮನೆಯ ಸಹೋದರರ ವಿಷಯ.

    ಖಾವಂದರೆ ರಹಮಾನ್ ಅವರ ಹೇಳಿಕೆಯಲ್ಲಿನ ದ್ವಂದ ಕಾಡುತ್ತಿದೆ. ಸಾವಿರಾರು ಸಲ ಫೋನ್ ಮಾಡಿದರೂ ಅವರ ಕರೆ ಸ್ವೀಕರಿಸದ ನಾನು, ನನಗೆ ವಿಕ್ರಾಂತ್ ರೋಣ ಸಿನಿಮಾದಿಂದ ನಷ್ಟವೇ ಆಗಿದ್ದರೆ – ಇದೇ ವ್ಯಕ್ತಿ ಅಂದರೆ ಸಾವಿರಾರು ಕರೆಗಳನ್ನು ಸ್ವೀಕರಿಸದ ರೆಹಮಾನ್ ಅವರನ್ನೇ ಹುಡುಕಿ ನನಗೆ ನಷ್ಟವಾಯಿತು ಎಂದು ಹೇಳಿಕೊಂಡೆನೇ? ಎಷ್ಟು ಹಾಸ್ಯಾಸ್ಪದ ಹೇಳಿಕೆಯಲ್ಲವೇ? ಅವರಿಗೆ ಕರೆ ಮಾಡಿ ಕಷ್ಟ ಹೇಳಿಕೊಳ್ಳಲು ನನ್ನ – ರೆಹಮಾನ್ ಸಂಬಂಧವೇನು? ರಹಮಾನ್ ಅವರ ಸತ್ಯಾಸತ್ಯತೆ ನಿಮಗೆ ತಿಳಿಯಲಿಲ್ಲವೇ?

    ಇದು ನನ್ನ ಸಹೋದರರಾದ ಸುದೀಪ್ ಮತ್ತು ನನ್ನ ನಡುವೆ ತಂದಿಟ್ಟು ಅಣ್ಣ-ತಮ್ಮಂದಿರನ್ನು ಮತ್ತು ಅವರ ಅಭಿಮಾನಿಗಳನ್ನು ನನ್ನಿಂದ ದೂರ ಮಾಡುವ ಕುತಂತ್ರ ಅಲ್ಲವೇ? ಇದಕ್ಕೆ ಹೇಳಿದ್ದು ಶ್ರೀಯುತರಾದ ಸುದೀಪ್ ಅವರು ಪ್ರತಿಕ್ರಿಯಿಸಲು ಯೋಗ್ಯವಾದರೆ ಮಾತ್ರ ಉತ್ತರಿಸುತ್ತಾರೆಂದು. ನನ್ನ ಎಲ್ಲ ಕಷ್ಟ ನಷ್ಟ ಹೇಳಿಕೊಳ್ಳಲು ಹಿತೈಷಿಗಳಿದ್ದಾರೆ ನಿರ್ಮಾಪಕರ ಸಂಘದ ಖಾವಂದರುಗಳಾದ ತಾವಿದ್ದೀರಿ, ಎಲ್ಲ ಬಿಟ್ಟು ರಹಮಾನ್ ಅವರಿಗೆ ಕರೆ ಮಾಡಿದನೆ?

    ನಾನೇ ನನ್ನ ಕೈಯಾರೆ, ಆಸ್ಪತ್ರೆ ಮನೆ ಮುಂತಾದ ತುರ್ತು ಪರಿಸ್ಥಿತಿಗಳಲ್ಲಿ ಸುದೀಪ್ ಅವರು ನೀಡಿದ ಸಹಾಯವನ್ನು ರೆಹಮಾನ್ ಅವರಿಗೆ ತಲುಪಿಸಿ ಜೀವಂತ ಸಾಕ್ಷಿಯಾಗಿದ್ದೇನೆ. ಎರಡು ಗಂಟೆಗಳ ಕಾಲ ಸುಳ್ಳಿನ ‘ಪ್ರವಾಹ ಗೋಷ್ಠಿ’ಗೆ ಅವಕಾಶ ಮಾಡಿಕೊಟ್ಟಿರಿ. ನನ್ನ ಹೆಸರೂ ಅದರಲ್ಲಿ ಸಾಕ್ಷಿಯಾಗಿ ಬಂತು. ಆ ಎರಡು ಗಂಟೆಗಳ ದಿಢೀರ್ ಗೋಷ್ಠಿಯ ಸುಳ್ಳುಗಳಿಗೆ ಶ್ರೀಯುತರಾದ ಸುದೀಪ್ ಅವರು ಓರ್ವ ನಿರ್ಮಾಪಕರಾಗಿ ಉತ್ತರ ಕೊಡದೇ ನಿರ್ಲಕ್ಷ್ಯ ಮಾಡಬಹುದು. ಅದು ಉತ್ತರ ಕೊಡಲು ಯೋಗ್ಯವಾದ ಸಂಗತಿಯಾದರೆ ಪ್ರತಿಕ್ರಿಯಿಸಬಹುದು.

     

    ಎಲ್ಲದಕ್ಕೂ ಒಂದು ಪರಿವೀಕ್ಷಣೆ, ಆಪ್ತ ಸಮಾಲೋಚನೆ ಮಾಡಬೇಕು. ನಂತರ ನನ್ನಂತಹ ಓರ್ವ ನಿರ್ಮಾಪಕ – ವಿತರಕನ ಮೇಲೆ ಇಲ್ಲ ಸಲ್ಲದ ಸುಳ್ಳು ಹೇಳಲು ಸಂಘದ ಕಚೇರಿಯನ್ನೇ ಪತ್ರಿಕಾ ಗೋಷ್ಟಿಗೆ ಈಡುಮಾಡುವಾಗ ನನ್ನ ದೂರವಾಣಿಗಾದರೂ ಒಂದು ಸಂದೇಶ ಕೊಡಬಹುದಿತ್ತಲ್ಲವೇ? ನಿರ್ಮಾಪಕರ ಹಿತಕಾಯುವಲ್ಲಿ ತಾವು ಹಿಡಿಯುತ್ತಿರುವ ಮಾರ್ಗ ಸಂಘದ ಘನತೆಯನ್ನೂ ಕುಗ್ಗಿಸುತ್ತಿದೆ. ಇನ್ನು ಮುಂದಾದರೂ ಇದಾಗದಿರಲಿ ಎಂದು ನನಗೆ ನಾನೇ ಸಮಾಧಾನ ಹೇಳಿಕೊಳ್ಳುತ್ತಾ… ಹೀಗೆ ಸುದೀರ್ಘ ಪತ್ರ ಬರೆದಿದ್ದಾರೆ ಜಾಕ್ ಮಂಜು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‌’ವಿಕ್ರಾಂತ್‌ ರೋಣ’ ಖ್ಯಾತಿಯ ನೀತಾ ಅಶೋಕ್ ಮದುವೆ ಫೋಟೋಸ್‌

    ‌’ವಿಕ್ರಾಂತ್‌ ರೋಣ’ ಖ್ಯಾತಿಯ ನೀತಾ ಅಶೋಕ್ ಮದುವೆ ಫೋಟೋಸ್‌

    ಚಂದನವನದ ಚೆಂದದ ನಟಿ ನೀತಾ ಅಶೋಕ್  (Neetha Ashok) ಅವರು ಜುಲೈ 10ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೀತಿಸಿದ ಹುಡುಗನ ಜೊತೆ ವೈವಾಹಿಕ ಬದುಕಿಗೆ ಕಾಲಿಡುವ ಮೂಲಕ ನಟಿ ಗುಡ್ ನ್ಯೂಸ್ ನೀಡಿದ್ದಾರೆ. ‘ವಿಕ್ರಾಂತ್ ರೋಣ’ ನಟಿಯ ಮದುವೆಯ (Wedding) ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಪಡ್ಡೆಹುಡುಗರ ನಿದ್ದೆಗೆಡಿಸಿದ ‘ನಾಗಿಣಿ 2’ ಖ್ಯಾತಿಯ ನಮ್ರತಾ

    ‘ಯಶೋದ’ (Yashoda) ಸೀರಿಯಲ್ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ನೀತಾ ಅಶೋಕ್ ಅವರು ನಾ ನಿನ್ನ ಬಿಡಲಾರೆ, ಸೇರಿದಂತೆ ಹಿಂದಿ ಸೀರಿಯಲ್‌ನಲ್ಲೂ ನಟಿಸಿದ್ದರು. ಬಳಿಕ ಕಿಚ್ಚ ಸುದೀಪ್ (Kiccha Sudeep) ನಟನೆಯ ‘ವಿಕ್ರಾಂತ್ ರೋಣ’ (Vikrant Rona)  ಸಿನಿಮಾದಲ್ಲಿ ನಿರೂಪ್ ಭಂಡಾರಿ ಜೋಡಿಯಾಗಿ ನೀತಾ ಮೋಡಿ ಮಾಡಿದ್ದರು. ನಟಿಯ ಮುದ್ದು ಮುಖ, ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.

    ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಏಕಾಏಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನೀತಾ ಅಶೋಕ್ ಅವರು ಆಮೇಲೆ ಬಹುಕಾಲದ ಪ್ರೀತಿ ಬಗ್ಗೆ ಹೇಳಿಕೊಂಡಿದ್ದರು. ಕಾಲೇಜಿನಿಂದಲೇ ಇವರಿಬ್ಬರು ಸ್ನೇಹಿತರಾಗಿದ್ದು, ಆಮೇಲೆ ಪ್ರೀತಿ ಹುಟ್ಟಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಅಂದಹಾಗೆ ಸತೀಶ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ನೀತಾ ಅವರು ಮೂಲತಃ ಉಡುಪಿಯವರು.

    ಉಡುಪಿಯಲ್ಲಿ ನೀತಾ ಅಶೋಕ್ ಹಾಗೂ ಸತೀಶ್ ಮೆಸ್ತಾ ಅವರು ಕುಟುಂಬದ ಸಾಕ್ಷಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಮದುವೆ ಕೂಡ ಉಡುಪಿಯಲ್ಲಿ (Udupi) ನಡೆದಿದೆ. ನೀತಾ- ಸತೀಶ್ ಅವರು ಸರಳವಾಗಿ ಕುಟುಂಬಸ್ಥರು, ಆತ್ಮೀಯರ ಸಾಕ್ಷಿಯಾಗಿ 12.25ಕ್ಕೆ ಅಭಿಜಿತ್ ಲಗ್ನ ಮುಹೂರ್ತದಲ್ಲಿ ಮದುವೆ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆ ಬಗ್ಗೆ ಅಷ್ಟಾಗಿ ಮಾಹಿತಿ ಹಂಚಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ನೀತಾ ಅವರು ಮದುವೆಯ ಫೋಟೋಗಳನ್ನು ಹಂಚಿಕೊಳ್ಳಬಹುದು. ಅಂದಹಾಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ನೀತಾ ಅಶೋಕ್ ಅವರ ಮದುವೆ ಆಹ್ವಾನ ಪತ್ರಿಕೆ ಸದ್ದು ಮಾಡುತ್ತಿದೆ.

    ಮದುವೆಯ ಬಳಿಕ ಮತ್ತೆ ನಟಿ ನೀತಾ ಅಶೋಕ್ ಬಣ್ಣ ಹಚ್ಚುತ್ತಾರಾ.? ಅಥವಾ ವೈವಾಹಿಕ ಜೀವನದ ಕಡೆ ಗಮನ ಕೊಡುತ್ತಾರಾ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೀತಿಸಿದ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ʼವಿಕ್ರಾಂತ್ ರೋಣ’ ನಟಿ

    ಪ್ರೀತಿಸಿದ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ʼವಿಕ್ರಾಂತ್ ರೋಣ’ ನಟಿ

    ಸ್ಯಾಂಡಲ್‌ವುಡ್ ನಟಿ ನೀತಾ ಅಶೋಕ್ (Neetha Ashok) ಅವರು ಜುಲೈ 10ರಂದು(ಇಂದು) ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದಾರೆ. ಪ್ರೀತಿಸಿದ ಹುಡುಗನ ಜೊತೆ ವೈವಾಹಿಕ ಬದುಕಿಗೆ ಕಾಲಿಡುವ ಮೂಲಕ ನಟಿ ಗುಡ್ ನ್ಯೂಸ್ ನೀಡಿದ್ದಾರೆ. ‘ವಿಕ್ರಾಂತ್ ರೋಣ’ (Vikrant Rona) ನಟಿಯ ಮದುವೆಯ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ‘ಯಶೋದ’ ಸೀರಿಯಲ್ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ನೀತಾ ಅಶೋಕ್ ಅವರು ನಾ ನಿನ್ನ ಬಿಡಲಾರೆ, ಸೇರಿದಂತೆ ಹಿಂದಿ ಸೀರಿಯಲ್‌ನಲ್ಲೂ ನಟಿಸಿದ್ದರು. ಬಳಿಕ ಕಿಚ್ಚ ಸುದೀಪ್ (Kiccha Sudeep) ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ನಿರೂಪ್ ಭಂಡಾರಿ ಜೋಡಿಯಾಗಿ ನೀತಾ ಮೋಡಿ ಮಾಡಿದ್ದರು. ನಟಿಯ ಮುದ್ದು ಮುಖ, ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಇದನ್ನೂ ಓದಿ:ಪವನ್ ಒಡೆಯರ್ ನಿರ್ದೇಶನದ ಬಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್

    ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಏಕಾಏಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನೀತಾ ಅಶೋಕ್ ಅವರು ಆಮೇಲೆ ಬಹುಕಾಲದ ಪ್ರೀತಿ ಬಗ್ಗೆ ಹೇಳಿಕೊಂಡಿದ್ದರು. ಕಾಲೇಜಿನಿಂದಲೇ ಇವರಿಬ್ಬರು ಸ್ನೇಹಿತರಾಗಿದ್ದು, ಆಮೇಲೆ ಪ್ರೀತಿ ಹುಟ್ಟಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಅಂದಹಾಗೆ ಸತೀಶ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ನೀತಾ ಅವರು ಮೂಲತಃ ಉಡುಪಿಯವರು.

    ಉಡುಪಿಯಲ್ಲಿ ನೀತಾ ಅಶೋಕ್ ಹಾಗೂ ಸತೀಶ್ ಮೆಸ್ತಾ (Satish Mesta) ಅವರು ಕುಟುಂಬದ ಸಾಕ್ಷಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಮದುವೆ ಕೂಡ ಉಡುಪಿಯಲ್ಲಿ ನಡೆದಿದೆ. ನೀತಾ ಅವರು ಸರಳವಾಗಿ ಕುಟುಂಬಸ್ಥರು, ಆತ್ಮೀಯರ ಸಾಕ್ಷಿಯಾಗಿ ಮದುವೆ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆ ಬಗ್ಗೆ ಅಷ್ಟಾಗಿ ಮಾಹಿತಿ ಹಂಚಿಕೊಡಿಲ್ಲ. ಮುಂದಿನ ದಿನಗಳಲ್ಲಿ ನೀತಾ ಅವರು ಮದುವೆಯ ಫೋಟೋಗಳನ್ನು ಹಂಚಿಕೊಳ್ಳಬಹುದು. ಅಂದಹಾಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ನೀತಾ ಅಶೋಕ್ ಅವರ ಮದುವೆ ಆಹ್ವಾನ ಪತ್ರಿಕೆ ಸದ್ದು ಮಾಡುತ್ತಿದೆ.

    ಮದುವೆಯ ಬಳಿಕ ಮತ್ತೆ ನಟಿ ನೀತಾ ಅಶೋಕ್ ಬಣ್ಣ ಹಚ್ಚುತ್ತಾರಾ.? ಅಥವಾ ವೈವಾಹಿಕ ಜೀವನದ ಕಡೆ ಗಮನ ಕೊಡುತ್ತಾರಾ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ ರಾ ರಾ ರಕ್ಕಮ್ಮ

    ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ ರಾ ರಾ ರಕ್ಕಮ್ಮ

    ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ (Jacqueline Fernandez) ಅವರು ಇತ್ತೀಚಿಗೆ ಸಿನಿಮಾಗಿಂತ ಸುಕೇಶ್ ಚಂದ್ರಶೇಖರ್ (Sukesh Chandrashekar) ಅವರ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿತ್ತು. ಇದೀಗ ರಾ ರಾ ರಕ್ಕಮ್ಮ ವಿವಾದಗಳನೆಲ್ಲ ಮರೆತು ಮುಂಬೈ ಬಾಂದ್ರಾ ದುಬಾರಿ ಮನೆಯನ್ನ ಖರೀದಿ ಮಾಡಿದ್ದಾರೆ. ವಿಷ್ಯ ತಿಳಿಯುತ್ತಿದ್ದಂತೆ ನಟಿಗೆ ಅಭಿಮಾನಿಗಳ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

    ಎಂತಹ ಸ್ಟಾರ್ ನಟ-ನಟಿಯರಾದರು ಮುಂಬೈ ಬಾಂದ್ರಾದಲ್ಲಿ ಮನೆಯ ತೆಗೆದುಕೊಳ್ಳಬೇಕು ಎಂಬುದು ಪ್ರತಿ ಕಲಾವಿದರ ಕನಸು. ಅದರಂತೆ ಫೇಮಸ್ ಏರಿಯಾ ಬಾಂದ್ರಾದಲ್ಲಿ ಸೈಫ್, ಕರೀನಾ ಕಪೂರ್, ಆಲಿಯಾ ಭಟ್, ಕತ್ರಿನಾ ಕೈಫ್ ಮನೆಯೂ ಇದೆ. ಇದೀಗ ಈ ಸ್ಟಾರ್ ನಟಿಯರ ಮನೆಯ ಸಮೀಪವೇ ರಕ್ಕಮ್ಮ ದುಬಾರಿ ಖರೀದಿ ಮಾಡಿದ್ದಾರೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನಿಗೆ ‘ಮುಡಿ’ ಕೊಟ್ಟ ಖ್ಯಾತ ನಟ ಧನುಷ್

    ಬಾಂದ್ರಾದ ಒಂದು ಮನೆ 1119 sq ನಿಂದ ತೊಡಗಿ 2557 sq ತನಕ ಹೋಗುತ್ತದೆ. ಇದು ಮುಂಬೈನ ಸೆಲೆಬ್ರಿಟಿ ಲೊಕೇಷನ್‌ಗಳಲ್ಲಿ ಒಂದಾಗಿದ್ದು ಸ್ಟಾರ್ ನಟ, ನಟಿಯರು ಇಲ್ಲಿ ಮನೆ ಖರೀಸಿದಲು ಬಯಸುತ್ತಾರೆ.ಈ ಕಾಂಪ್ಲೆಕ್ಸ್‌ನಲ್ಲಿ ಅತ್ಯಂತ ಕಡಿಮೆ ಬೆಲೆಯ ಮನೆಯೂ 12 ಕೋಟಿಯಿಂದ ಶುರುವಾಗುತ್ತದೆ. ಜಾಕ್ವೆಲಿನ್ ಖರೀದಿಸಿದ ಮನೆಯ ಬೆಲೆ ಎಷ್ಟು ಎನ್ನುವುದು ಇನ್ನೂ ಕೂಡಾ ರಿವೀಲ್ ಆಗಿಲ್ಲ. ಅವರ ಮನೆಯು ಚೆಂದದ ವರ್ಕಿಂಗ್ ಏರಿಯಾ, ಜಿಮ್, ಪೂಲ್‌ಗಳನ್ನು ಒಳಗೊಂಡಿದೆ. ಒಟ್ನಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಮಿಂಚಿದ ರಕ್ಕಮ್ಮ ಹೊಸ ಮನೆಗೆ ಕಾಲಿಟ್ಟಿರುವ ಖುಷಿಯಲ್ಲಿದ್ದಾರೆ.

    ಸದ್ಯ ರಕ್ಕಮ್ಮ, ಸೋನು ಸೂದ್ ಜೊತೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮತ್ತೆ ಕನ್ನಡಕ್ಕೆ ಹೊಸ ಸಿನಿಮಾದ ಮೂಲಕ ಹಾವಳಿ ಶುರು ಮಾಡುತ್ತಾರಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬರೋಬ್ಬರಿ 3 ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟ ಕಿಚ್ಚ ಸುದೀಪ್

    ಬರೋಬ್ಬರಿ 3 ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟ ಕಿಚ್ಚ ಸುದೀಪ್

    ಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) , VikrantRona ಸಿನಿಮಾ ನಂತರ ಬ್ರೇಕ್ ತೆಗೆದುಕೊಂಡಿದ್ದರು. ಕಿಚ್ಚನ 46ನೇ ಸಿನಿಮಾ ಯಾವುದು? ಸಿನಿಮಾ ಬಗ್ಗೆ ಅಪ್‌ಡೇಟ್ ಬೇಕು ಎಂದು ಕಾದು ಕುಳಿತಿದ್ದ ಫ್ಯಾನ್ಸ್‌ಗೆ ಸುದೀಪ್ ಇದೀಗ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಒಟ್ಟೊಟ್ಟಿಗೆ 3 ಸಿನಿಮಾ ಒಪ್ಪಿಕೊಳ್ಳುವ ಮೂಲಕ ಸುದೀಪ್ ಸಿಹಿಸುದ್ದಿ ನೀಡಿದ್ದಾರೆ.

    ಕಳೆದ ವರ್ಷ ಜುಲೈನಲ್ಲಿ ತೆರೆ ಅಪ್ಪಳಿಸಿದ `ವಿಕ್ರಾಂತ್ ರೋಣ’ ಚಿತ್ರದಲ್ಲಿ ಸುದೀಪ್ ಅಬ್ಬರಿಸಿದ್ದರು. ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಚಿತ್ರದ ರಿಲೀಸ್ ನಂತರ ಬಿಗ್ ಬಾಸ್ ಶೋ, ಸ್ಪೋಟ್ಸ್ ಅಂತಾ ಕಿಚ್ಚ ಬ್ಯುಸಿಯಾಗಿದ್ದರು. ಕಿಚ್ಚನ ಮುಂದಿನ ಚಿತ್ರದ ಬಗ್ಗೆ ಅಪ್‌ಡೇಟ್ ಸಿಗದೇ ನಿರಾಸೆಯಲ್ಲಿದ್ದ ಅಭಿಮಾನಿಗಳಿಗೆ ಸುದೀಪ್ ಟ್ವೀಟ್ ಮಾಡುವ ಮೂಲಕ ಅಪ್‌ಡೇಟ್ ನೀಡಿದ್ದಾರೆ.

    ಎಲ್ಲರಿಗೂ ನಮಸ್ಕಾರಗಳು.. `ಕಿಚ್ಚ 46′ ಕುರಿತಾಗಿ ನಿಮ್ಮ ಟ್ವೀಟ್‌ಗಳು ಮತ್ತು ಮೀಮ್‌ಗಳು ನನಗೆ ಅರ್ಥವಾಗಿದೆ. ಧನ್ಯವಾದಗಳು. ಈಗ ಇದೇ ವಿಚಾರದ ಕುರಿತಾಗಿ ಈ ಸಣ್ಣ ಸ್ಪಷ್ಟೀಕರಣವನ್ನು ನೀಡಲು ನಿರ್ಧರಿಸಿದ್ದೇನೆ. ನಾನು ವಿರಾಮ ತೆಗೆದುಕೊಂಡಿದ್ದೆ. ಇದು ನನ್ನ ವೃತ್ತಿಜೀವನದ ಮೊಟ್ಟಮೊದಲ ವಿರಾಮ. ವಿಕ್ರಾಂತ್ ರೋಣ ಚಿತ್ರದ ನಂತರ ನನಗೆ ಬ್ರೇಕ್ ಬೇಕಾಗಿತ್ತು. ಸುದೀರ್ಘವಾದ ವೇಳಾಪಟ್ಟಿ ಹೊಂದಿದ್ದ ಬಿಗ್ ಬಾಸ್ (ಒಟಿಟಿ- ಟಿವಿ) `ವಿಕ್ರಾಂತ್ ರೋಣ’ ಚಿತ್ರದಲ್ಲಿ ಭಾಗಿಯಾಗುವುದು ಶ್ರಮದಾಯಕವಾಗಿತ್ತು. ಆದ್ದರಿಂದ ಈ ವಿರಾಮ ನನಗೆ ಅಗತ್ಯವಿತ್ತು. ನನ್ನ ವಿರಾಮವನ್ನು ಆನಂದಿಸಲು ಉತ್ತಮ ಮಾರ್ಗವೆಂದರೆ ನನಗೆ ಸಂತೋಷ ನೀಡುವ ಕೆಲಸವನ್ನು ಮಾಡುವುದು.

    ಕ್ರಿಕೆಟ್ ಖಂಡಿತವಾಗಿಯೂ ನನಗೆ ವಿಶ್ರಾಂತಿ ನೀಡುವ ಕ್ರೀಡೆ. ಆ ವಲಯದಲ್ಲಿ ನಾನು ಸಂತೋಷವಾಗಿರುತ್ತೇನೆ. ಕೆಸಿಸಿಯಲ್ಲಿ ಸಮಯ ಕಳೆದಿದ್ದು ನನಗೆ ಖುಷಿ ನೀಡಿದೆ. ಇದರಿಂದ ನನಗೆ ಖಂಡಿತವಾಗಿಯೂ ಉತ್ತಮ ವಿರಾಮ ಸಿಕ್ತು ಎಂದು ನಾನು ಹೇಳಬಲ್ಲೆ. ಆದರೂ, ನನ್ನ ಸ್ಕ್ರಿಪ್ಟ್ ಚರ್ಚೆಗಳು ನನ್ನ ದೈನಂದಿನ ಜೀವನದ ಒಂದು ಭಾಗವಾಗಿತ್ತು. ಮೂರು ಸ್ಕ್ರಿಪ್ಟ್‌ ಅಂತಿಮಗೊಳಿಸಿದ್ದೇನೆ. ಅಂದರೆ ಮೂರು ಚಿತ್ರಗಳನ್ನು ಅಂತಿಮಗೊಳಿಸಲಾಗಿದೆ. ಎಲ್ಲಾ ಮೂರು ಸ್ಕ್ರಿಪ್ಟ್‌ಗಳಿಗೆ ಭಾರೀ ಪ್ರಮಾಣದ ಹೋಮ್ ವರ್ಕ್ನ ಬೇಡಿಕೆಯಿರುವುದರಿಂದ ಸಿದ್ಧತೆಗಳು ನಡೆಯುತ್ತಿವೆ. ಆಯಾ ತಂಡಗಳು ಹಗಲಿರುಳು ಶ್ರಮಿಸುತ್ತಿವೆ ಮತ್ತು ಶೀಘ್ರದಲ್ಲೇ ಅಧಿಕೃತವಾಗಿ ಅನೌನ್ಸ್ ಮಾಡ್ತಾರೆ. ಪ್ರೀತಿ ಹಾಗು ಅಪ್ಪುಗೆಗಳೊಂದಿಗೆ ನಿಮ್ಮ ಕಿಚ್ಚ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

    ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಸುದೀಪ್ ಉತ್ತರಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ 3 ಚಿತ್ರಗಳನ್ನ ಒಪ್ಪಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸಮಾಚಾರವನ್ನೇ ಸುದೀಪ್ ಕೊಟ್ಟಿದ್ದಾರೆ. ಸದ್ಯದಲ್ಲೇ ತಮ್ಮ ಮುಂಬರುವ ಚಿತ್ರದ ಬಗ್ಗೆ ಅಧಿಕೃತ ಅಪ್‌ಡೇಟ್ ನೀಡಲಿದ್ದಾರೆ.