Tag: Vikrant Massey

  • ಸಂಸತ್ ಲೈಬ್ರರಿಯಲ್ಲಿ `ಸಾಬರಮತಿ ರಿಪೋರ್ಟ್‌’ ಸಿನಿಮಾ ವೀಕ್ಷಿಸಿದ ಮೋದಿ

    ಸಂಸತ್ ಲೈಬ್ರರಿಯಲ್ಲಿ `ಸಾಬರಮತಿ ರಿಪೋರ್ಟ್‌’ ಸಿನಿಮಾ ವೀಕ್ಷಿಸಿದ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಗುಜರಾತ್‌ನಲ್ಲಿ ನಡೆದಿದ್ದ ಗೋಧ್ರಾ ರೈಲು ದುಂರಂತ ಹಿಂದಿನ ಕತೆ ಆಧಾರಿತ `ಸಾಬರಮತಿ ರಿಪೋರ್ಟ್‌’ (Sabarmati Report) ಸಿನಿಮಾವನ್ನು ಸಂಸತ್‌ನ ಲೈಬ್ರರಿಯ ಬಾಲಯೋಗಿ ಸಭಾಂಗಣದಲ್ಲಿ ವೀಕ್ಷಿಸಿದ್ದಾರೆ.

    ಸಿನಿಮಾ ವೀಕ್ಷಿಸುತ್ತಿರುವ ಫೋಟೋಗಳನ್ನು ಪ್ರಧಾನಿ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಚಿತ್ರದ ನಿರ್ಮಾಣಕ್ಕಾಗಿ ಉತ್ತಮ ಪ್ರಯತ್ನ ಮಾಡಿದ ನಿರ್ಮಾಪಕರನ್ನು ಹಾಗೂ ಚಿತ್ರ ತಂಡವನ್ನು ಶ್ಲಾಘಿಸಿದ್ದಾರೆ.

    ಮೋದಿಯವರ ಜೊತೆ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಕಿರಣ್ ರಿಜಿಜು, ಜಿತನ್ ರಾಮ್ ಮಾಂಝಿ, ಅಶ್ವಿನಿ ವೈಷ್ಣವ್ ಸೇರಿದಂತೆ ಎನ್‌ಡಿಎ ಸಂಸದರು ಸಹ ಸಿನಿಮಾ ವೀಕ್ಷಿಸಿದ್ದಾರೆ. ಅಲ್ಲದೇ ನಟ ವಿಕ್ರಾಂತ್ ಮಾಸ್ಸೆ (Vikrant Massey) ಮತ್ತು ಜಿತೇಂದ್ರ ಕೂಡ ಈ ವೇಳೆ ಉಪಸ್ಥಿತರಿದ್ದರು.

    ವಿಕ್ರಾಂತ್ ಮಾಸ್ಸೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಲನಚಿತ್ರವು 2002 ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಗೋಧ್ರಾ ರೈಲು ದುರಂತದ ಕಥೆಯನ್ನು ಒಳಗೊಂಡಿದೆ. ಈ ಸಿನಿಮಾವನ್ನು ಶೋಭಾ ಕಪೂರ್, ಏಕ್ತಾ ಆರ್ ಕಪೂರ್, ಅಮುಲ್ ವಿ ಮೋಹನ್ ಮತ್ತು ಅನ್ಶುಲ್ ಮೋಹನ್ ನಿರ್ಮಿಸಿದ್ದು, ಧೀರಜ್ ಸರ್ನಾ ನಿರ್ದೇಶಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ರಾಶಿ ಖನ್ನಾ ಮತ್ತು ರಿಧಿ ಡೋಗ್ರಾ ಕೂಡ ಕಾಣಿಸಿಕೊಂಡಿದ್ದಾರೆ.

    ಈ ಹಿಂದೆ ಸಿನಿಮಾ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದ ಮೋದಿ, ಈ ಘಟನೆಯ ಸತ್ಯ ಹೊರಬರುತ್ತಿರುವುದು ಒಳ್ಳೆಯದು. ಸಾಮಾನ್ಯ ಜನರು ಇದನ್ನು ಸಿನಿಮಾ ಮೂಲಕ ನೋಡಬಹುದು. ಈ ಚಲನಚಿತ್ರವನ್ನು ಜನರು ನೋಡಲೇಬೇಕು. ದುರಂತದ ಹಿಂದಿನ ಸತ್ಯವನ್ನು ಬಹಿರಂಗಪಡಿಸುವಲ್ಲಿ ಚಿತ್ರತಂಡ ಶ್ರಮಿಸಿದೆ ಎಂದು ಕೊಂಡಾಡಿದ್ದರು.

    ಈ ದುರಂತದ ಘಟನೆಯನ್ನು ಪಟ್ಟಭದ್ರ ಹಿತಾಸಕ್ತಿಯ ಗುಂಪುಗಳು ರಾಜಕೀಯಗೊಳಿಸಿವೆ. ಇದನ್ನು ಒಬ್ಬ ನಾಯಕನ ಪ್ರತಿಷ್ಠೆಗೆ ಕಳಂಕ ತರುವ ಅವಕಾಶವಾಗಿ ಬಳಸಿಕೊಂಡಿವೆ ಎಂದು ಬರೆದುಕೊಂಡಿದ್ದರು.

    ಒಡಿಶಾ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಗುಜರಾತ್ ಸೇರಿದಂತೆ ಬಿಜೆಪಿ ಆಡಳಿತವಿರುವ ಏಳು ರಾಜ್ಯಗಳು ‘ದಿ ಸಬರಮತಿ ರಿಪೋರ್ಟ್‌’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿವೆ.

    ಏನಿದು ಗೋಧ್ರಾ ರೈಲು ದುರಂತ?
    ಬಿಹಾರದ ಮುಜಾಫರ್‌ಪುರದಿಂದ ಗುಜರಾತ್‌ನ ಅಹಮದಾಬಾದ್‌ಗೆ ಹೊರಟಿದ್ದ ಸಾಬರಮತಿ ಎಕ್ಸ್‌ಪ್ರೆಸ್ ರೈಲು 2002ರ ಫೆ.27.ರ ಬೆಳಗ್ಗೆ ತನ್ನ ನಿಗದಿತ ಸಮಯಕ್ಕೆ ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣಕ್ಕೆ ತೆರಳಿತ್ತು. ಇದರಲ್ಲಿ ಕರಸೇವಕರು, ಹಿಂದೂ ಸ್ವಯಂಸೇವಕರು ಅಯೋಧ್ಯೆಯಲ್ಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದರು. ರೈಲಿಗೆ ಸುಮಾರು 2,000 ಜನರಿದ್ದ ಗುಂಪು ಕಲ್ಲು ತೂರಿ ನಾಲ್ಕು ಕೋಚ್‌ಗಳಿಗೆ ಬೆಂಕಿ ಹಚ್ಚಿತ್ತು.

    ಈ ದುರಂತದಲ್ಲಿ 27 ಮಹಿಳೆಯರು ಮತ್ತು 10 ಮಕ್ಕಳು ಸೇರಿದಂತೆ 59 ಜನರು ಸಾವನ್ನಪ್ಪಿದ್ದರು. ದಾಳಿಯಲ್ಲಿ 48 ಪ್ರಯಾಣಿಕರು ಗಾಯಗೊಂಡಿದ್ದರು. ಇದರಿಂದ ಆದ ಗಲಭೆ ಮೂರು ತಿಂಗಳವರೆಗೆ ಮುಂದುವರೆದಿತ್ತು. ಈ ಗಲಭೆಗೆ ಆಗಿನ ಸಿಎಂ ಆಗಿದ್ದ ಮೋದಿ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಈ ದುರಂತದ ತನಿಖೆ ನಡೆಸಿದ್ದ ಸುಪ್ರೀಂ ಕೋರ್ಟ್ ನೇಮಿಸಿದ್ದ ತನಿಖಾ ತಂಡ ವರದಿಯಲ್ಲಿ ಈ ಗಲಭೆಗೆ ಮೋದಿ ಕಾರಣ ಎಂಬುಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ಉಲ್ಲೇಖಿಸಿತ್ತು.

  • ನಟನೆಗೆ ನಿವೃತ್ತಿ ಘೋಷಿಸಿ ಫ್ಯಾನ್ಸ್‌ಗೆ ಶಾಕಿಂಗ್‌ ನ್ಯೂಸ್‌ ಕೊಟ್ಟ ವಿಕ್ರಾಂತ್‌ ಮಾಸ್ಸಿ

    ನಟನೆಗೆ ನಿವೃತ್ತಿ ಘೋಷಿಸಿ ಫ್ಯಾನ್ಸ್‌ಗೆ ಶಾಕಿಂಗ್‌ ನ್ಯೂಸ್‌ ಕೊಟ್ಟ ವಿಕ್ರಾಂತ್‌ ಮಾಸ್ಸಿ

    ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ (Vikrant Massey) ಅವರು ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್‌ವೊಂದನ್ನು ಕೊಟ್ಟಿದ್ದಾರೆ. ದೊಡ್ಡ ಯಶಸ್ಸಿನ ಬೆನ್ನಲ್ಲೇ ನಟನೆಗೆ ವಿಕ್ರಾಂತ್ ನಿವೃತ್ತಿ ಘೋಷಿಸಿದ್ದಾರೆ. ಇನ್ಮುಂದೆ ತಾವು ಸಿನಿಮಾದಲ್ಲಿ ನಟಿಸಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಆರೋಪಿ ದರ್ಶನ್‌ಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ – ಫೋಟೋ ವೈರಲ್‌

    ಕಳೆದ ಕೆಲ ವರ್ಷಗಳು ಉತ್ತಮವಾಗಿತ್ತು. ನಿಮ್ಮ ನಿರಂತರವಾಗಿ ಬೆಂಬಲ ನೀಡಿದ್ದಕ್ಕೆ ನಾನು ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಆದರೆ ನಾನು ಮುಂದೆ ಬಂದಂತೆಲ್ಲ ಮಗನಾಗಿ, ಗಂಡನಾಗಿ, ತಂದೆಯಾಗಿ ಮನೆಗೆ ವಾಪಸ್ ಆಗಲು ಇದು ಸೂಕ್ತ ಸಮಯ ಎಂದು ನಾನು ಅರಿತುಕೊಂಡೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by Vikrant Massey (@vikrantmassey)

    2025ರಲ್ಲಿ ನಾವು ಕೊನೆಯ ಬಾರಿಗೆ ಪರಸ್ಪರ ಸಿಗೋಣ. ಮುಂದೆ 2 ಸಿನಿಮಾಗಳು ಮಾತ್ರ ಮತ್ತು ಹಲವು ವರ್ಷಗಳ ನೆನಪುಗಳು. ಮತ್ತೊಮ್ಮೆ ಧನ್ಯವಾದಗಳು. ನಾನು ನಿಮಗೆ ಎಂದೆಂದಿಗೂ ಋಣಿ ಎಂದು ನಟ ಬರೆದುಕೊಂಡಿದ್ದಾರೆ. ವಿಕ್ರಾಂತ್ ನಟನೆಗೆ ಗುಡ್ ಬೈ ಹೇಳುತ್ತಿರೋದು ಫ್ಯಾನ್ಸ್ಗೆ ಶಾಕ್ ಆಗಿದೆ. ನಾವು ನಿಮ್ಮ ಅಭಿಮಾನಿ, ಇನ್ಮುಂದೆಯೂ ನಿಮ್ಮ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತೇವೆ ಎಂದು ಪರಿಪರಿಯಾಗಿ ಫ್ಯಾನ್ಸ್ ಕೇಳಿಕೊಂಡಿದ್ದಾರೆ.

    ಅಂದಹಾಗೆ, 2013ರ ರಣ್‌ವೀರ್ ಸಿಂಗ್, ಸೋನಾಕ್ಷಿ ನಟನೆಯ ‘ಲೂಟೆರಾ’ ಸಿನಿಮಾ ಮೂಲಕ ವಿಕ್ರಾಂತ್ ಮಾಸ್ಸಿ ಬಣ್ಣದ ಬದುಕು ಶುರುವಾಯ್ತು. ವಿಕ್ರಾಂತ್‌ ನಟನೆಯ 12th ಫೈಲ್, ದಿ ಸಾಬ್ರಮತಿ ರಿಪೋರ್ಟ್ ಸಿನಿಮಾಗಳು ಸಕ್ಸಸ್‌ ಕಂಡಿದೆ.

  • ದಿ ಸಾಬರಮತಿ ರಿಪೋರ್ಟ್ ಟ್ರೈಲರ್ ರಿಲೀಸ್: ಚರ್ಚೆಗೆ ಕಾರಣವಾಯಿತು ಮತ್ತೊಂದು ಚಿತ್ರ

    ದಿ ಸಾಬರಮತಿ ರಿಪೋರ್ಟ್ ಟ್ರೈಲರ್ ರಿಲೀಸ್: ಚರ್ಚೆಗೆ ಕಾರಣವಾಯಿತು ಮತ್ತೊಂದು ಚಿತ್ರ

    ಳೆದ ವಾರವಷ್ಟೇ ‘ಆರ್ಟಿಕಲ್ 370’ ಸಿನಿಮಾ ರಿಲೀಸ್ ಆಗಿ ವಿವಾದವೊಂದರ ಕಥೆಯನ್ನು ಹೇಳಲಾಗಿತ್ತು. ಇದೀಗ ಮತ್ತೊಂದು ಅಂಥದ್ದೇ ವಿವಾದಿತ ವಿಷಯವೊಂದನ್ನು ಹೊತ್ತ ಸಿನಿಮಾ ರೆಡಿಯಾಗಿದೆ. ಈ  ಚಿತ್ರಕ್ಕೆ ‘ದಿ ಸಾಬರಮತಿ ರಿಪೋರ್ಟ್’ (The Sabarmati Report) ಎಂದು ಹೆಸರಿಡಲಾಗಿದೆ.

    2002ರ ಫೆಬ್ರವರಿ 27 ರಂದು ನಡೆದ ಗೋಧ್ರಾ ರೈಲು ದುರಂತವನ್ನು ಆಧರಿಸಿ ಈ ಸಿನಿಮಾ ಮೂಡಿ ಬಂದಿದ್ದು, ಈ ದುರಂತದಲ್ಲಿ 59 ಜನರ ಸಜೀವ ದಹನವಾಗಿತ್ತು. ಅದರ ಹಿಂದಿನ ಕರಾಳ ಮುಖವನ್ನು ತೋರಿಸುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆಯಂತೆ. ಈಗಾಗಲೇ ಚಿತ್ರದ ಟ್ರೈಲರ್ (Trailer) ರಿಲೀಸ್ ಆಗಿದ್ದು, ಪರ ವಿರೋಧದ ಕಾಮೆಂಟ್ ಗಳು ಕೇಳಿ ಬಂದಿವೆ.

     

    ರಂಜನ್ ಚಂಡೇಲ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ವಿಕ್ರಾಂತ್ ಮಾಸ್ಸಿ (Vikrant Massey) ಚಿತ್ರದ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಇಲ್ಲಿ ಅವರದ್ದು ಪತ್ರಕರ್ತ ಹಾಗೂ ಸುದ್ದಿ ವಾಚನ ಮಾಡುವ ಪಾತ್ರ. ಟ್ರೈಲರ್ ನಲ್ಲೂ ಅದನ್ನು ಸ್ಪಷ್ಟವಾಗಿಯೇ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಸಾಕಷ್ಟು ಸೂಕ್ಷ್ಮ ವಿಚಾರಗಳಿದ್ದು, ಮೇ 3 ರಂದು ಎಲ್ಲದಕ್ಕೂ ಉತ್ತರ ಸಿಗಲಿದೆ.

  • ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನಟ ವಿಕ್ರಾಂತ್ ಮಾಸ್ಸೆ

    ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನಟ ವಿಕ್ರಾಂತ್ ಮಾಸ್ಸೆ

    ಬಾಲಿವುಡ್ ವಿಕ್ರಾಂತ್ ಮಾಸ್ಸೆ-(Vikrant Massey) ಶೀತಲ್ ಠಾಕೂರ್ (Sheetal Thakur) ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾಗಿ ಒಂದು ವರ್ಷ ಪೂರೈಸಿರೋ ಈ ಜೋಡಿ ಈಗ ಹೊಸ ಅತಿಥಿಯನ್ನ ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ. ಈ ಗುಡ್ ನ್ಯೂಸ್ ಬಗ್ಗೆ ನಟ ವಿಕ್ರಾಂತ್ ಮಾಸ್ಸೆ ಖಚಿತಪಡಿಸಿದ್ದಾರೆ.

    2015ರಿಂದ ವಿಕ್ರಾಂತ್ ಮಾಸ್ಸೆ- ಶೀತಲ್ ಠಾಕೂರ್ (Sheetal Thakur) ಡೇಟಿಂಗ್ ಮಾಡುತ್ತಿದ್ದರು. ‘ಬ್ರೋಕನ್ ಭಟ್ ಬ್ಯೂಟಿಫುಲ್’ (Broken But Beautiful) ಎನ್ನುವ ವೆಬ್ ಸಿರೀಸ್‌ನಲ್ಲಿ ನಟಿಸುವಾಗ ನಟಿ ಶೀತಲ್ ಜೊತೆ ಪ್ರೇಮಾಂಕುರವಾಗಿ ಕಳೆದ ವರ್ಷ ಇಬ್ಬರು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. ಈಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರೋ ಜೋಡಿಗೆ ಆಪ್ತರು, ಅಭಿಮಾನಿಗಳು ಶುಭಕೋರಿದ್ದಾರೆ.

    ಗಿನ್ನಿ ಬೆಡ್ಸ್ ಸನ್ನಿ, ಹಸಿನ್ ದಿಲ್‌ರೂಭಾ, ಲವ್ ಹಾಸ್ಟೆಲ್, ಗ್ಯಾಸ್ ಲೈಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆಯ ಸಾಕಷ್ಟು ಸೀರಿಯಲ್, ವೆಬ್ ಸಿರೀಸ್‌ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಶೀತಲ್ ಠಾಕೂರ್ ಕೂಡ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]