Tag: Vikram Ravichandran

  • ಹುಟ್ಟು ಹಬ್ಬಕ್ಕೆ ಮುಧೋಳ್ ಚಿತ್ರದ ಅಪ್ಡೇಟ್‌ ಕೊಟ್ಟ ವಿಕ್ರಂ ರವಿಚಂದ್ರನ್

    ಹುಟ್ಟು ಹಬ್ಬಕ್ಕೆ ಮುಧೋಳ್ ಚಿತ್ರದ ಅಪ್ಡೇಟ್‌ ಕೊಟ್ಟ ವಿಕ್ರಂ ರವಿಚಂದ್ರನ್

    ಸ್ಯಾಂಡಲ್ ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಸುಪುತ್ರ ವಿಕ್ರಂ ರವಿಚಂದ್ರನ್ (Vikram Ravichandran) ತಮ್ಮ ಹುಟ್ಟು ಹಬ್ಬದಂದು ವಿಶೇಷವಾದ ಮಾಹಿತಿಯನ್ನ ನೀಡಲು ಮುಂದಾಗಿದ್ರು, ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರೋದ್ಯಮದಲ್ಲಿ ದೊಡ್ಡ ಮಟ್ಟದ ಸಂಚಲನ ಮಾಡಲು ಚಿತ್ರ ನಿರ್ಮಾಣದ ಜೊತೆಗೆ ಚಿತ್ರ ನಿರ್ಮಾಪಕರಿಗೆ ಬೆನ್ನೆಲುಬಾಗಿ ನಿಲ್ಲುವ ಸಲುವಾಗಿ ಬಂದಿರುವಂತಹ ಖ್ಯಾತ ಉದ್ಯಮಿ ವಿಜಯ್ ಟಾಟಾ ತಮ್ಮ ಅಮೃತ ಸಿನಿ ಕ್ರಾಫ್ಟ್ ಮೂಲಕ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ.

    ಚಿತ್ರ ನಿರ್ಮಿಸುವುದರ ಜೊತೆಗೆ ವಿತರಣೆ, ಮಾರ್ಕೆಟಿಂಗ್, ಸೇರಿದಂತೆ ಬೇರೆ ಚಿತ್ರಗಳ ಜೊತೆ ಕೊಲಾಬ್ರೇಷನ್‌ಗೂ ಮುಂದಾಗಿರುವುದು ಮತ್ತೊಂದು ಸಂತೋಷದ ಸಂಗತಿ. ಇನ್ನು ವಿಶೇಷವಾಗಿ ಕರೆದಿರುವ ಪತ್ರಿಕಾಗೋಷ್ಠಿಯಲ್ಲಿ ಯುವ ನಟ ವಿಕ್ರಂ ರವಿಚಂದ್ರನ್, ಮುಧೋಳ್ ಚಿತ್ರದ (Mudhol Movie) ನಿರ್ಮಾಪಕಿ ರಕ್ಷಾ ಹಾಗೂ ಖ್ಯಾತ ಉದ್ಯಮಿ ನಿರ್ಮಾಪಕ ವಿಜಯ್ ಟಾಟಾ ಹಾಜರಿದ್ದರು. ಇದನ್ನೂ ಓದಿ: ಒಳ ಉಡುಪು ಕಾಣುವ ಫೋಟೋ ಹಾಕಿ ಹಲ್‌ಚಲ್ ಎಬ್ಬಿಸಿದ ಖುಷಿ – ಇದೇನು ಸಂಡೇ ಸ್ಪೆಷಲ್ಲಾ ಅಂದ್ರು ಫ್ಯಾನ್ಸ್‌

    ಇನ್ನು ಪ್ರಮುಖವಾಗಿ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಟ ವಿಕ್ರಂ ರವಿಚಂದ್ರನ್ ಮಾತನಾಡುತ್ತಾ, ಮೊದಲಿಗೆ ನೀವೆಲ್ಲರೂ ಇಲ್ಲಿವರೆಗೂ ಬಂದಿರುವುದಕ್ಕೆ ಧನ್ಯವಾದಗಳು, ಮೊದಲಿಗೆ ವಿಶೇಷವಾಗಿ ವಿಜಯ ಸರ್ ಗೆ ಥ್ಯಾಂಕ್ಸ್ ತಿಳಿಸುತ್ತೇನೆ. ಯಾಕೆಂದರೆ ಸಾಮಾನ್ಯವಾಗಿ ನನ್ನ ಹುಟ್ಟು ಹಬ್ಬವನ್ನು ನಾನು ಆಚರಿಸಿಕೊಳ್ಳುವುದಿಲ್ಲ. ಬೇರೆ ಬೇರೆ ಕೆಲಸದಲ್ಲಿ ತೊಡಗಿಕೊಂಡಿರುತ್ತೇನೆ. ಇವತ್ತು ನನ್ನ ಬರ್ತ್‌ಡೇ ದಿನವೇ ಒಂದೆರಡು ದೊಡ್ಡ ಅನೌನ್ಸ್ಮೆಂಟ್ ಮಾಡಬೇಕು ಎಂದು ನಮ್ಮ ವಿಜಯ್ ಸರ್ ಹೇಳಿದ್ರಿಂದ ನಿಮ್ಮ ಮುಂದೆ ಹೇಳಬೇಕೆಂದು ನಿರ್ಧರಿಸಿದ್ದೇವೆ. ನಾನು ಏನೇ ಹೇಳಿದರೂ ರವಿಚಂದ್ರನ್ ಸರ್ ಮಗ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ನಾನು ಎರಡನೇ ಸಿನಿಮಾ ಮಾಡ್ದಾಗ, ನಮ್ಮ ಅಣ್ಣ ಅಭಿನಯದ ಮುಗಿಲು ಪೇಟೆ ನಿರ್ಮಾಣಕ್ಕೆ ಸಾಥ್ ಕೊಟ್ಟಂತ ನಿರ್ಮಾಪಕಿ ರಕ್ಷಾ ಮೇಡಮ್ಮ ನನಗೂ ಬೆಂಬಲವಾಗಿ ನಿಂತರು ಎಂದರು ವಿಕ್ರಮ್. ಇದನ್ನೂ ಓದಿ: `ಸಿಂಹಪ್ರಿಯ’ ಜೋಡಿಯ ಪುತ್ರನ ಹೆಸರು ವಿಪ್ರಾ – ಅರ್ಥವೇನು ಗೊತ್ತಾ?

    ಮುಂದುವರೆದು ಮಾತನಾಡಿ, ನನ್ನ ಡ್ರೀಮ್ ಪ್ರಾಜೆಕ್ಟ್ ಗೆ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ನನ್ನ ಹೊಸ ಪ್ರಾಜೆಕ್ಟ್‌ಗೆ ಟೀಮ್ ಹುಡುಕುತ್ತಿದ್ದಾಗ ಒಬ್ಬ ಟ್ಯಾಲೆಂಟೆಡ್ ವ್ಯಕ್ತಿ ಸಿಕ್ಕಿದ್ರು ಅವರೇ ನಿರ್ದೇಶಕ ಕಾರ್ತಿಕ್ ರಾಜು, ನಂತರ ನಾನು, ಡೈರೆಕ್ಟರ್, ಪ್ರೊಡ್ಯೂಸರ್ ಕೂತು ಡಿಸ್ಕಶನ್ ಮಾಡಿದಾಗ ಹುಟ್ಟಿಕೊಂಡಂತ ಚಿತ್ರವೇ ʻಮುಧೋಳʼ. ಎಲ್ಲಾ ಅಂದುಕೊಂಡಂತೆ ಚೆನ್ನಾಗಿ ನಡೆದಿತ್ತು, ನಮ್ಮ ಅನಲೈಸ್ ಪ್ರಕಾರ ನಮ್ಮ ನಿರ್ಮಾಪಕಿ ಮೇಡಂ ಅಂದ್ರೆ ನನ್ನ ಸಿಸ್ಟರ್ ನೀವು ಮಾಡಿ ನಾನು ಬ್ಯಾಕಪ್ ಇರ್ತೀನಿ ಅಂದರು. ಇದನ್ನೂ ಓದಿ: ದರ್ಶನ್‌ ಶಿಫ್ಟ್‌ಗೆ ಹೆಚ್ಚಿದ ಒತ್ತಡ – ಪರಪ್ಪನ ಅಗ್ರಹಾರದಲ್ಲೇ ಉಳಿಸಿಕೊಳ್ಳಲು ವಕೀಲರ ಹರಸಾಹಸ

    ಈ ಚಿತ್ರ ತುಂಬಾ ಜನರಿಗೆ ಲೈಫ್ ಆಗಬೇಕು, ನನ್ನು ಸೇರಿದಂತೆ ಚಿತ್ರದ ಡೈರೆಕ್ಟರ್, ಮ್ಯೂಸಿಕ್, ಎಡಿಟರ್, ಬಹಳಷ್ಟು ಜನ ಹೊಸಬರು ಇದ್ದೇವೆ. ಈ ಚಿತ್ರ ರೈಟ್ ಟೈಮ್, ಪ್ಲೇಸ್ ನಲ್ಲಿ ದೊಡ್ಡ ಕೊಲಾಬ್ರೇಶನ್ ಮೂಲಕ ಪ್ರೇಕ್ಷಕರ ಮುಂದೆ ಬರಬೇಕು ಅನ್ನೋ ಹುಡುಕಾಟದಲ್ಲಿದ್ದಾಗ, ನನ್ನ ಬೆಸ್ಟ್ ಫ್ರೆಂಡ್ ದಿಲ್‌ ಸೆ ದಿಲೀಪ್ ಬಂದು ಒಂದು ಕಥೆ ಇದೆ ಕೇಳಿ ಡೈರೆಕ್ಟರ್ ಋಷಿ ಎನ್ನುವವರು ಮಾಡಿದ್ದಾರೆ, ನಿರ್ಮಾಪಕರು ಸ್ಟ್ರಾಂಗ್ ಇದ್ದಾರೆ ಎಂದರು. ಕಥೆ ಕೇಳಿದೆ ಇಷ್ಟ ಆಯಿತು, ಹಾಗೆ ನಿರ್ಮಾಪಕರು ಯಾರು ಅಂದಾಗ ಗೊತ್ತಾಗಿದೆ ವಿಜಯ್ ಟಾಟಾ ಸರ್. ಓಕೆ ಸಿನಿಮಾ ಮಾಡೋಣ ಎಂದು ನಿರ್ಧಾರ ಮಾಡಿ, ಅದೇ ರೀತಿ ಅಮೃತ ಸಿನಿ ಕ್ರಾಫ್ಟ್ ಮೂಲಕ ಸಿನಿಮಾ ಕೂಡ ಅನೌನ್ಸ್ ಆಯಿತು. ಆಮೇಲೆ ಒಮ್ಮೆ ಭೇಟಿ ಮಾಡಿದೆ. ನಂತರ ಮುಧೋಳ್ ಬಗ್ಗೆ ಕೂಡ ವಿಜಯ ಸರ್ ಕೇಳಿದರು. ಅಲ್ಲಿವರೆಗೂ ಮುಧೋಳ್ ಬಗೆ ಯಾವುದೇ ಮಾತುಕತೆ ಆಗಿರಲಿಲ್ಲ, ಆ ಚಿತ್ರದ ಕಂಟೆಂಟ್ ಕೂಡ ತೋರಿಸಿದೆ ಅವರಿಗೆ ಬಹಳ ಇಷ್ಟವಾಯಿತು, ಅಲ್ಲಿಂದ ಸ್ವಲ್ಪ ಚೇಂಜ್ ಆಯ್ತು , ನಮ್ಮ ನಿರ್ಮಾಪಕಿ ರಕ್ಷಾ ಹಾಗೂ ವಿಜಯ್ ಸರ್ ಇಬ್ಬರು ಡಿಸ್ಕಶನ್ ಮಾಡಿದ ನಂತರ ಇಲ್ಲಿಂದ ನನ್ನ ಹಾಗೂ ನಮ್ಮ ತಂಡದ ಜೊತೆ ಅಮೃತ ಸಿನಿ ಕ್ರಾಫ್ಟ್ ವಿಜಯ್ ಸರ್ ಸಾಥ್ ನೀಡಿದ್ದು, ನಮ್ಮ ಮುಧೋಳ್ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಹೊರ ತರಲು ಕೊಲಾಬ್ರೇಶನ್ ಮಾಡಿಕೊಂಡಿದ್ದೇವೆ. ಈಗೊಂದು ಸ್ಟ್ರಾಂಗ್ ಟೀಮ್ ಸೇರಿಕೊಂಡು ಮುಂದೆ ಬರುತ್ತಿದ್ದೇವೆ ಎಂದಿದ್ದಾರೆ.

  • ಕ್ರೇಜಿಸ್ಟಾರ್ ಪುತ್ರನ ಚಿತ್ರಕ್ಕೆ ಸಂಜನಾ ಆನಂದ್ ನಾಯಕಿ

    ಕ್ರೇಜಿಸ್ಟಾರ್ ಪುತ್ರನ ಚಿತ್ರಕ್ಕೆ ಸಂಜನಾ ಆನಂದ್ ನಾಯಕಿ

    ಹಜ ಅಭಿನಯ, ಸರಳ‌ ಸೌಂದರ್ಯದಿಂದಲೇ ಸ್ಯಾಂಡಲ್ ವುಡ್ ನ್ಯೂ ಕ್ರಶ್ ಎನಿಸಿಕೊಂಡಿರುವ ಸಂಜನಾ ಆನಂದ್ (Sanjana Anand) ಈಗ ಮುಧೋಳ್ (Mudhol) ಬಳಗ ಸೇರಿಕೊಂಡಿದ್ದಾರೆ.  ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಸಂಜನಾ ಕಡಿಮೆ‌ ಅವಧಿಯಲ್ಲಿ ಸ್ಟಾರ್ ಹೀರೋ ಜೊತೆ ತೆರೆಹಂಚಿಕೊಳ್ಳುವ ಅವಕಾಶಗಿಟ್ಟಿಸಿಕೊಂಡರು. ದುನಿಯಾ ವಿಜಯ್ ಸಾರಥ್ಯದ‌ ಸಲಗ‌ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ಈ ಬ್ಯೂಟಿ ಟಾಲಿವುಡ್ ಕೂಡ ಪ್ರವೇಶಿಸಿದ್ದಾರೆ. ಕನ್ನಡದ ಜೊತೆಗೆ ತೆಲುಗು ಅಂಗಳದಲ್ಲಿಯೂ ಬ್ಯುಸಿಯಾಗಿರುವ ಸಂಜನಾ ಆನಂದ್ ಈಗ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಜೊತೆ ರೋಮ್ಯಾನ್ಸ್ ಮಾಡಲು ಒಕೆ ಎಂದಿದ್ದಾರೆ.

    ‘ತ್ರಿವಿಕ್ರಮ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ವಿಕ್ರಮ್‌ (Vikram Ravichandran) ಈಗ ಎರಡನೇ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಮುಧೋಳ್ ಮೂಲಕ ಸಖತ್‌ ಮಾಸ್ ಅವತಾರ ತಾಳಿರುವ ವಿಕ್ಕಿಗೆ ನಾಯಕಿಯಾಗಿ ರಾಯಲ್ ಹುಡುಗಿ ನಟಿಸುತ್ತಿದ್ದಾರೆ.‌ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಸಂಜನಾ ನಾಯಕಿ ಎಂಬ ವಿಷ್ಯ ಹರಿದಾಡಿತ್ತು. ಆದ್ರೆ ಚಿತ್ರತಂಡ ಮಾತ್ರ ಗುಟ್ಟುಬಿಟ್ಟುಕೊಟ್ಟಿರಲಿಲ್ಲ.  ಸಲಗ ಸುಂದರಿ ಹುಟ್ಟುಹಬ್ಬದ ವಿಶೇಷವಾಗಿ‌‌ ಇಂದು ಚಿತ್ರತಂಡ ಸಮಾಚಾರವನ್ನು ಅಧಿಕೃತಗೊಳಿಸಿದೆ.

    ವಿಕ್ರಮ್ ಮುಧೋಳ್ ಸಿನಿಮಾದ ನಾಯಕಿಯಾಗಿರುವ ಸಂಜನಾ ಸ್ಪೆಷಲ್ ರೋಲ್ ಪ್ಲೇ ಮಾಡಿದ್ದಾರೆ.‌ ಇಲ್ಲಿವರೆಗೂ ಅವರು ನಟಿಸಿದ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೇ ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

    ಸಂಜನಾ ಆನಂದ್ ಮುಧೋಳ್ ಸಿನಿಮಾ ಜೊತೆಗೆ ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಹಾಗೂ ತೆಲುಗಿನ ಫುಲ್ ಬಾಟೆಲ್ ಎಂಬ ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಧನ್ವೀರ್ ಗೌಡ ನಟಿಸುತ್ತಿರುವ ಹಯಗ್ರೀವ್ ಗೂ ನಾಯಕಿಯಾಗಿರುವ ರಾಯಲ್ ಕ್ವೀನ್ ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

  • ಹೊಸ ಭರವಸೆ ಮೂಡಿಸುವ ಲವ್ ಯೂ ಅಭಿ

    ಹೊಸ ಭರವಸೆ ಮೂಡಿಸುವ ಲವ್ ಯೂ ಅಭಿ

    ನ್ನಡದಲ್ಲಿ ವೆಬ್ ಸಿರೀಸ್ (Web Series) ತೀರಾ ಕಡಿಮೆ. ಅದರಲ್ಲೂ ಗುಣಮಟ್ಟದಲ್ಲಿ ತಯಾರಾದ ಕಥೆಗಳು ಇನ್ನೂ ಕಡಿಮೆ. ಈ ಎಲ್ಲ ಕೊರತೆಯನ್ನು ನೀಗಿಸುತ್ತದೆ ವಿಕ್ರಮ್ ರವಿಚಂದ್ರನ್ (Vikram Ravichandran) ಹಾಗೂ ಅದಿತಿ ಪ್ರಭುದೇವ (Aditi Prabhudev) ಕಾಂಬಿನೇಷನ್ ನ ‘ಲವ್ ಯೂ ಅಭಿ’ (Love U AbhiAbhi)ವೆಬ್ ಸಿರೀಸ್. ಗುಣಮಟ್ಟದಲ್ಲಿ ಉತ್ಕೃಷ್ಟತೆ ಮತ್ತು ತಾಂತ್ರಿಕತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಅದ್ಭುತವಾಗಿ ಏಳು ಕಂತುಗಳನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಾಳಿ.

    ಈಗಾಗಲೇ ಮದುವೆಯಾಗಿ ಒಂದು ಮಗುವನ್ನೂ ಹೆತ್ತಿರುವ ಅಭಿ, ತನ್ನದೇ ಆದ ಕನಸುಗಳನ್ನು ಕಟ್ಟಿಕೊಂಡಿರುವ ಶಿವ, ಈ ಜೋಡಿಯ ಜೀವನದಲ್ಲಿ ನಡೆಯುವ ಘಟನೆಗಳೇ ಲವ್ ಯೂ ಅಭಿ ಕಥೆಯ ಜೀವಾಳ. ಶಿವ ಮತ್ತು ಅಭಿ ಪಾತ್ರವನ್ನು ಇಬ್ಬರೂ ನಟರು ಸಮರ್ಥವಾಗಿ ನಿಭಾಯಿಸಿದ್ದಾರೆ.  ಏಳು ಕಂತುಗಳು ಕುತೂಹಲವನ್ನು ಉಳಿಸಿಕೊಂಡು ಕಂತಿನಿಂದ ಕಂತಿಗೆ ಕೊಂಡಿಯಾಗಿ ನೋಡುಗನನ್ನು ಹಿಡಿದಿಡುತ್ತವೆ.

    ಮನರಂಜನಾ ಲೋಕದಲ್ಲೀಗ ಹೊಸ ಆವೇಗ ಸೃಷ್ಟಿಸಿರುವ ಜಿಯೋ ಸಿನಿಮಾ ಕನ್ನಡದಲ್ಲಿ ವೆಬ್ ಸಿರೀಸ್ ಆರಂಭಿಸಿದೆ. ಅದರ ಮೊದಲ ಭಾಗವಾಗಿ ಲವ್ ಯೂ ಅಭಿ ಎಂಬ ಸಿರೀಸ್ ಶುರು ಮಾಡಿದೆ.  ಅಚ್ಚರಿಯ ಸಂಗತಿ ಅಂದರೆ, ಇಲ್ಲಿರುವ ಏಳು ಎಪಿಸೋಡ್ ಗಳನ್ನು ಅದು ಉಚಿತವಾಗಿ ನೋಡುಗನಿಗೆ ನೀಡಿದೆ. ಈ ಮೂಲಕ ಹೊಸ ಕ್ರಾಂತಿಯನ್ನೇ ಶುರು ಮಾಡಿದೆ. ಇದನ್ನೂ ಓದಿ:ಕಾಲೆಳೆದ ನಟಿಗೆ ಸ್ನೇಹದ ಹಸ್ತಚಾಚಿದ ರಶ್ಮಿಕಾ ಮಂದಣ್ಣ

    ಕನ್ನಡ ದೃಶ್ಯಮಾಧ್ಯಮ ಲೋಕಕ್ಕೆ ಹೊಸ ಫ್ಲೇವರ್ ಪರಿಚಯಿಸಲಿರುವ ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಹೊಸ ಉತ್ಸಾಹದ ನಟರ ಜೊತೆಗೆ ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮಿ, ಅಶೋಕ್ ಶರ್ಮ, ಶ್ರೀನಾಥ್, ಅಂಬಿಕಾ, ಶ್ರೀನಿವಾಸ ಮೂರ್ತಿ, ಸುಂದರ್ರಾಗಜ್‌ ಹೀಗೆ ಅನುಭವಿ ಕಲಾವಿದರ ದಂಡೂ ಇದೆ. ‘ಲವ್‌ ಯು ಅಭಿ’ಗೆ ಅರುಣ್ ಬ್ರಹ್ಮ  ಕ್ಯಾಮೆರಾ ಚಳಕವಿದ್ದು, ಪ್ರದಿಪ್‌ ರಾಘವ್ ಸಂಕಲನ ಮಾಡಿದ್ದಾರೆ. ನಿಜಿಲ್‌ ದಿನಕರ್‍ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವನ್ನು ನಿರ್ವಹಿಸಿದ್ದಾರೆ. ಅಭಿಲಾಷ್‌ ಗೌಡ ಮತ್ತು ಜಿ.ವಿ. ಸತೀಶ್‌ ಕುಮಾರ್ ಜಂಟಿಯಾಗಿ ಮಾತು ಪೋಣಿಸಿದ್ದಾರೆ.

    ಪಾತ್ರಗಳ ಆಯ್ಕೆ, ಕಥೆಯನ್ನು ತಗೆದುಕೊಂಡು ಹೋಗಿರುವ ರೀತಿ. ಪ್ರತಿ ಪಾತ್ರಗಳ ಜೀವಂತಿಕೆ. ತಾಂತ್ರಿಕ ಶ್ರೀಮಂತಿಕೆ ಮತ್ತು ಪ್ರತಿ ದೃಶ್ಯವನ್ನು ಕಟ್ಟಿಕೊಟ್ಟ ರೀತಿಯ ಕಾರಣದಿಂದಾಗಿ ಲವ್ ಯೂ ಅಭಿ ಗಮನ ಸೆಳೆಯುತ್ತದೆ. ಮತ್ತಷ್ಟು ಗುಣಮಟ್ಟದ ವೆಬ್ ಸಿರೀಸ್ ಗೆ ಈ ಕಂತುಗಳು ಮುನ್ನುಡಿ ಬರೆಯುತ್ತವೆ.

  • ಕ್ರೇಜಿಸ್ಟಾರ್ ಪುತ್ರನ ಜೊತೆ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಂಡ ಅದಿತಿ ಪ್ರಭುದೇವ್

    ಕ್ರೇಜಿಸ್ಟಾರ್ ಪುತ್ರನ ಜೊತೆ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಂಡ ಅದಿತಿ ಪ್ರಭುದೇವ್

    ನರಂಜನೆಯ ಹೊಸ ಪರ್ವ ಆರಂಭಿಸಲು ‘JioCinema’ ಓಟಿಟಿ ವೇದಿಕೆ ಸಿದ್ಧವಾಗಿದೆ. ತನ್ನ ವೀಕ್ಷಕರಿಗೆ ವೈವಿಧ್ಯಮಯ ರಂಜನೆಯ ರಸದೂಟ ಉಣಬಡಿಸುವ ಉದ್ದೇಶದ ಭಾಗವಾಗಿ ‘ಲವ್‌ ಯು ಅಭಿ’ (Love You Abhi) ಎಂಬ ಕನ್ನಡ ವೆಬ್‌ ಸಿರೀಸ್‌ (Web Series) ಮೇ 19ರಂದು ‘JioCinema’ದಲ್ಲಿ ನೇರವಾಗಿ ಬಿಡುಗಡೆಗೊಳ್ಳುತ್ತಿದೆ. ಇದನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಕಾಳಿ ವೇಲಾಯುಧಂ ನಿರ್ಮಾಣ ಮಾಡಿ ನಿರ್ದೇಶಿಸಿರುವ ‘JioCinema’ ಒರಿಜಿನಲ್‌ ವೆಬ್‌ ಸಿರೀಸ್‌ನಲ್ಲಿ ಅದಿತಿ ಪ್ರಭುದೇವ (Aditi Prabhudev), ವಿಕ್ರಮ್‌ ರವಿಚಂದ್ರನ್‌ ಮತ್ತು ರವಿಶಂಕರ್‍ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

    ಎಲ್ಲರೊಳಗೊಬ್ಬ ಶಿವ

    ಹಿರಿಯ ನಟ ರವಿಚಂದ್ರನ್‌ ಅವರ ಪುತ್ರ ವಿಕ್ರಮ್‌ ರವಿಚಂದ್ರನ್ (Vikram Ravichandran) ಅವರಿಗೂ ಇದು ಮೊದಲ ವೆಬ್‌ ಸಿರೀಸ್‌. ತಮ್ಮ ಪಾತ್ರದ ಕುರಿತು ತುಂಬ ಉತ್ಸಾಹದಿಂದ ವಿವರಿಸುತ್ತಾರೆ ವಿಕ್ರಮ್. ‘ಶಿವ ನಿಮ್ಮನ್ನು ಕಾಡುತ್ತಾನೆ, ನಿಮ್ಮ ಮನಸ್ಸನ್ನು ಚುಚ್ಚುತ್ತಾನೆ. ಯಾಕೆಂದರೆ ಈ ಶಿವ ಎಲ್ಲರೊಳಗೂ ಇದ್ದಾನೆ. ಹಲವು ನಿಗೂಢಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಅದನ್ನು ಯಾರೊಂದಿಗೂ ಹಂಚಿಕೊಳ್ಳದ ವ್ಯಕ್ತಿ ಆತ. ಒಂದೊಮ್ಮೆ ಅವನು ಹಂಚಿಕೊಳ್ಳಲು ಯತ್ನಿಸಿದರೂ ಪರಿಸ್ಥಿತಿ ಅದಕ್ಕೆ ವಿರುದ್ಧವಾದ ಸನ್ನಿವೇಶವನ್ನು ಸೃಷ್ಟಿಸಿಬಿಡುತ್ತದೆ. ‘ಪ್ರೇಮ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯೋಚಿತವೇ’ ಎಂಬ ಮಾತಿದೆ. ಆದರೆ ಶಿವ ಮತ್ತು ಅವನ ಬದುಕಿನ ವಿಷಯಕ್ಕೆ ಬಂದಾಗ, ಅವನ ಪ್ರೇಮದಲ್ಲಿಯೂ, ಬದುಕಿನಲ್ಲಿ ಹೋರಾಟದಲ್ಲಿಯೂ ನ್ಯಾಯೋಚಿತವಾಗಿದ್ದು ನಡೆಯುವುದೇ ಇಲ್ಲ’. ಎಂದು ತಮ್ಮ ಪಾತ್ರದ ಕುರಿತು ವಿವರಿಸುತ್ತಾರೆ ಶಿವನ ಪಾತ್ರಕ್ಕೆ ಜೀವ ತುಂಬಿದ ವಿಕ್ರಮ್ ರವಿಚಂದ್ರನ್.

    ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಅದಿತಿ ಪ್ರಭುದೇವ ‘ಲವ್‌ ಯು ಅಭಿ’ಯ ಮೂಲಕ ವೆಬ್‌ ಸಿರೀಸ್‌ ಜಗತ್ತಿಗೂ ಜಿಗಿದಿದ್ದಾರೆ. ಇವರಿಬ್ಬರ ಕ್ಯೂಟ್‌ ಕಾಂಬಿನೇಷನ್‌ ಜೊತೆ ಖ್ಯಾತ ನಟ ರವಿಶಂಕರ್‍ ಅವರ ಅಬ್ಬರದ ಭರ್ಜರಿ ಮಸಾಲೆಯೂ ಇದೆ. ಪೊಲೀಸ್‌ ಅಧಿಕಾರಿಯಾಗಿ ರವಿಶಂಕರ್‍ ಅವರ ಆರ್ಭಟವನ್ನು ನೋಡಿಯೇ ಸವಿಯಬೇಕು. ಇದನ್ನೂ ಓದಿ:’ಟೈಗರ್ ನಾಗೇಶ್ವರ್ ರಾವ್’ ಸಿನಿಮಾದ ಕನ್ನಡ ಫಸ್ಟ್ ಲುಕ್ ಗೆ ಶಿವಣ್ಣ ವಾಯ್ಸ್

    ‘ಎಲ್ಲ ಕಲಾವಿದರೂ ತಮ್ಮದೇ ಆದ ರಿದಮ್ ನಲ್ಲಿ, ಮನೋಭಾವದಲ್ಲಿ ನಟಿಸುತ್ತ ಹೋಗುತ್ತಿರುತ್ತೇವೆ. ಕಲಾವಿದರ ಜರ್ನಿ ಹಾಗೆಯೇ ಇರುತ್ತದೆ. ಒಂದೊಂದ್ಸಲ ಅದು ಬ್ರೇಕ್ ಆಗಬೇಕಾಗುತ್ತದೆ. ಅಭಿ ನನ್ನ ನಟನಾಪಯಣವನ್ನು ಹಾಗೆ ಬ್ರೇಕ್ ಮಾಡಿದಂಥ ಪಾತ್ರ. ನನ್ನ ಇಡೀ ವ್ಯಕ್ತಿತ್ವಕ್ಕೇ ಚಾಲೆಂಜ್ ಮಾಡಿದಂಥ ಪಾತ್ರ. ಆ ಪಾತ್ರದಲ್ಲಿ ನಟಿಸುತ್ತ ನನ್ನ ವ್ಯಕ್ತಿತ್ವದಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೀನಿ. ಐ ಲವ್ ಅಭಿ. ಬಹುಶಃ ತುಂಬ ಜನರಿಗೆ ಅಭಿ ಇಷ್ಟ ಆಗ್ತಾಳೆ’ ಎಂದು ತುಂಬ ವಿಶ್ವಾಸದಿಂದ ಹೇಳುತ್ತಾರೆ ಅದಿತಿ ಪ್ರಭುದೇವ.

    ಪ್ರೇಮ, ವಿರಹ, ಕೊಲೆ, ತನಿಖೆ ಹೀಗೆ ನೋಡುಗರನ್ನು ಕುರ್ಚಿಯ ತುದಿಯಲ್ಲಿ ಕೂಡುವಂತೆ ಮಾಡಬಲ್ಲ ಎಲ್ಲ ಅಂಶಗಳೂ ಇದರಲ್ಲಿದೆ. ಒಂದು ಸಾವಿನ ಸುತ್ತ ಬೆಳೆಯುತ್ತ ಹೋಗುವ ಈ ಕಥನದಲ್ಲಿ ಮನಸ್ಸನ್ನು ಭಾವುಕಗೊಳಿಸುವ ಸನ್ನಿವೇಶಗಳಿವೆ, ದಾಂಪತ್ಯದ ಮಧುರ ಕ್ಷಣಗಳನ್ನು ಉಣಬಡಿಸುವ ದೃಶ್ಯಗಳಿವೆ, ಪ್ರೇಮದ ವ್ಯಾಮೋಹ ಮತ್ತು ಸತ್ಯದ ಹಂಬಲದ ನಡುವಿನ ಘರ್ಷಣೆಯೂ ಇದೆ. ಅನುಮಾನ, ವಂಚನೆ, ಮುಗ್ಧ ಪ್ರೇಮ, ಒಳ್ಳೆಯತನ, ಸ್ವಾರ್ಥ, ಪ್ರಾಮಾಣಿಕತೆ ಎಲ್ಲ ಗುಣಗಳೂ ಸೇರಿ ರೂಪುಗೊಂಡ ಅಪರೂಪದ ರಸಪಾಕ ‘ಲವ್‌ ಯು ಅಭಿ’. ಮೂವತ್ತು ನಿಮಿಷಗಳ ಏಳು ಎಪಿಸೋಡ್‌ಗಳಲ್ಲಿ ಅಭಿಯ ಬದುಕಿನ ಕಥೆಯನ್ನು ಹೇಳಲಾಗಿದೆ.

    ಕನ್ನಡ ದೃಶ್ಯಮಾಧ್ಯಮ ಲೋಕಕ್ಕೆ ಹೊಸ ಫ್ಲೇವರ್ ಪರಿಚಯಿಸಲಿರುವ ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಹೊಸ ಉತ್ಸಾಹದ ನಟರ ಜೊತೆಗೆ ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮಿ, ಅಶೋಕ್ ಶರ್ಮ, ಶ್ರೀನಾಥ್, ಅಂಬಿಕಾ, ಶ್ರೀನಿವಾಸ ಮೂರ್ತಿ, ಸುಂದರ್‍ರಾಜ್‌ ಹೀಗೆ ಅನುಭವಿ ಕಲಾವಿದರ ದಂಡೂ ಇದೆ.

    ‘ಲವ್‌ ಯು ಅಭಿ’ಗೆ ಅರುಣ್ ಬ್ರಹ್ಮ ಅವರ ಕ್ಯಾಮೆರಾ ಚಳಕವಿದ್ದು, ಪ್ರದಿಪ್‌ ರಾಘವ್ ಸಂಕಲನ ಮಾಡಿದ್ದಾರೆ. ನಿಜಿಲ್‌ ದಿನಕರ್‍ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವನ್ನು ನಿರ್ವಹಿಸಿದ್ದಾರೆ. ಅಭಿಲಾಷ್‌ ಗೌಡ ಮತ್ತು ಜಿ.ವಿ. ಸತೀಶ್‌ ಕುಮಾರ್ ಜಂಟಿಯಾಗಿ ಮಾತುಗಳನ್ನು ಪೋಣಿಸಿದ್ದಾರೆ.

  • ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನ ಸಿನಿಮಾಗೆ ಸಂಜನಾ ಆನಂದ್ ನಾಯಕಿ?

    ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನ ಸಿನಿಮಾಗೆ ಸಂಜನಾ ಆನಂದ್ ನಾಯಕಿ?

    ಮೊನ್ನೆಯಷ್ಟೇ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ‘ಮುಧೋಳ್’ (Mudhol) ಸಿನಿಮಾಗೆ ಮುಹೂರ್ತ ನಡೆದಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ಕೂಡ ಶುರುವಾಗಿದೆ. ರವಿಚಂದ್ರನ್ ಪುತ್ರ ವಿಕ್ರಮ್ (Vikram Ravichandran) ಗೆ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿತ್ತು. ಬಲ್ಲ ಮೂಲಗಳ ಪ್ರಕಾರ ಸಂಜನಾ ಆನಂದ್ (Sanjana Anand) ಈ ಸಿನಿಮಾಗೆ ನಾಯಕಿ ಎಂದು ಹೇಳಲಾಗುತ್ತಿದೆ. ಅಧಿಕೃತವಾಗಿ ಚಿತ್ರತಂಡ ಮಾಹಿತಿ ನೀಡದೇ ಇದ್ದರೂ, ಸಂಜನಾ ಅಂತಿಮ ಎನ್ನುವ ಮಾತು ಕೇಳಿ ಬರುತ್ತಿದೆ.

    ದುನಿಯಾ ವಿಜಯ್ ನಟನೆಯ ಸಲಗ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಸಂಜನಾ ಆನಂದ್, ಕೆಮಿಸ್ಟ್ರಿ ಅಫ್ ಕರಿಯಪ್ಪ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದವರು. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತೆಲುಗು ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಇದೀಗ ಮುಧೋಳ್ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ ಎನ್ನುವ ಮಾಹಿತಿ ಇದೆ. ಸದ್ಯದಲ್ಲೇ ಈ ಕುರಿತು ಮಾಹಿತಿ ಹೊರಬೀಳಬಹುದು.

    ಶೂಟಿಂಗ್ ವೇಳೆ ಅವಘಡ

    ಕನ್ನಡದ ಹೆಸರಾಂತ ಸಾಹಸ ನಿರ್ದೇಶಕ ರವಿವರ್ಮ ಪೆಟ್ಟು ಮಾಡಿಕೊಂಡಿದ್ದಾರೆ. ವಿಕ್ರಮ್ ರವಿಚಂದ್ರನ್ ನಟನೆಯ ಮುಧೋಳ್ ಸಿನಿಮಾದ ಶೂಟಿಂಗ್ ವೇಳೆ ಈ ಘಟನೆ ನಡೆದಿದ್ದು, ಸಾಹಸ ದೃಶ್ಯಕ್ಕಾಗಿ ಕಟ್ಟಿದ ರೋಪ್ ಹರಿದು ಪೆಟ್ಟು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ:ಮಗಳ ಭವಿಷ್ಯಕ್ಕಾಗಿ ದೇಶ ಬಿಡಲು ಸಿದ್ಧ ಎಂದ ಪ್ರಿಯಾಂಕಾ ಚೋಪ್ರಾ

    ವಿಕ್ರಮ್ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಸಾಕಷ್ಟು ಸಾಹಸ ಸನ್ನಿವೇಶಗಳನ್ನು ಚಿತ್ರಕ್ಕಾಗಿ ಕಂಪೋಸ್ ಮಾಡಲಾಗಿದೆಯಂತೆ. ಸಾಮಾನ್ಯವಾಗಿ ಕಷ್ಟದ ಸ್ಟಂಟ್ ಗಳನ್ನೇ ಕಂಪೋಸ್ ಮಾಡುವ ರವಿವರ್ಮ, ಈ ಸಿನಿಮಾದಲ್ಲೂ ಅಂಥದ್ದೊಂದು ದೃಶ್ಯವನ್ನು ಕಂಪೋಸ್ ಮಾಡಿದ್ದರಂತೆ. ಈ ದೃಶ್ಯವನ್ನು ಚಿತ್ರೀಕರಿಸುವಾಗ ಅವರಿಗೆ ಗಾಯವಾಗಿದೆ.

    ಆತಂಕ ಪಡುವಂತಹ ಘಟನೆ ಅದಲ್ಲವಾದರೂ, ರವಿವರ್ಮ ಪದೇ ಪದೇ ಇಂತಹ ಘಟನೆಗಳಿಗೆ ಸಾಕ್ಷಿ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಾಸ್ತಿಗುಡಿ ಸಿನಿಮಾದಲ್ಲೂ ದುರ್ಘಟನೆ ನಡೆದಿತ್ತು. ಮೊನ್ನೆಯಷ್ಟೇ ಜೋಗಿ ಪ್ರೇಮ್ ನಿರ್ದೇಶನ ಕೇಡಿ ಸಿನಿಮಾದಲ್ಲೂ ನಟರೊಬ್ಬರು ಗಾಯ ಮಾಡಿಕೊಂಡಿದ್ದರು. ಈ ಎರಡು ಚಿತ್ರಗಳಿಗೂ ಇವರೇ ಸಾಹಸ ನಿರ್ದೇಶಕರು.

    ಮುಧೋಳ್ ಸಿನಿಮಾ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿದ್ದು, ಪ್ರಧಾನ ಸಾಹಸಮಯ ಸನ್ನಿವೇಶಗಳನ್ನು ನಿರ್ದೇಶಕರು ಸೆರೆ ಹಿಡಿಯುತ್ತಿದ್ದಾರೆ. ಇದೊಂದು ಆಕ್ಷನ್ ಸಿನಿಮಾವಾಗಿದ್ದು, ಕಳೆದ ಒಂದು ವಾರದಿಂದ ಚಿತ್ರೀಕರಣ ನಡೆಯುತ್ತಿದೆ.

  • ಶೂಟಿಂಗ್ ವೇಳೆ ಸಾಹಸ ನಿರ್ದೇಶಕ ರವಿವರ್ಮಗೆ ಗಾಯ

    ಶೂಟಿಂಗ್ ವೇಳೆ ಸಾಹಸ ನಿರ್ದೇಶಕ ರವಿವರ್ಮಗೆ ಗಾಯ

    ನ್ನಡದ ಹೆಸರಾಂತ ಸಾಹಸ ನಿರ್ದೇಶಕ ರವಿವರ್ಮ (Ravi Varma) ಪೆಟ್ಟು ಮಾಡಿಕೊಂಡಿದ್ದಾರೆ. ವಿಕ್ರಮ್ ರವಿಚಂದ್ರನ್ ನಟನೆಯ ಮುಧೋಳ್ (Mudhol) ಸಿನಿಮಾದ ಶೂಟಿಂಗ್ ವೇಳೆ ಈ ಘಟನೆ ನಡೆದಿದ್ದು, ಸಾಹಸ ದೃಶ್ಯಕ್ಕಾಗಿ ಕಟ್ಟಿದ ರೋಪ್ ಹರಿದು ಪೆಟ್ಟು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ವಿಕ್ರಮ್ ರವಿಚಂದ್ರನ್ (Vikram Ravichandran) ಮುಖ್ಯಭೂಮಿಕೆಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಸಾಕಷ್ಟು ಸಾಹಸ ಸನ್ನಿವೇಶಗಳನ್ನು ಚಿತ್ರಕ್ಕಾಗಿ ಕಂಪೋಸ್ ಮಾಡಲಾಗಿದೆಯಂತೆ. ಸಾಮಾನ್ಯವಾಗಿ ಕಷ್ಟದ ಸ್ಟಂಟ್ ಗಳನ್ನೇ ಕಂಪೋಸ್ ಮಾಡುವ ರವಿವರ್ಮ, ಈ ಸಿನಿಮಾದಲ್ಲೂ ಅಂಥದ್ದೊಂದು ದೃಶ್ಯವನ್ನು ಕಂಪೋಸ್ ಮಾಡಿದ್ದರಂತೆ. ಈ ದೃಶ್ಯವನ್ನು ಚಿತ್ರೀಕರಿಸುವಾಗ ಅವರಿಗೆ ಗಾಯವಾಗಿದೆ.

    ಆತಂಕ ಪಡುವಂತಹ ಘಟನೆ ಅದಲ್ಲವಾದರೂ, ರವಿವರ್ಮ ಪದೇ ಪದೇ ಇಂತಹ ಘಟನೆಗಳಿಗೆ ಸಾಕ್ಷಿ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಾಸ್ತಿಗುಡಿ ಸಿನಿಮಾದಲ್ಲೂ ದುರ್ಘಟನೆ ನಡೆದಿತ್ತು. ಮೊನ್ನೆಯಷ್ಟೇ ಜೋಗಿ ಪ್ರೇಮ್ ನಿರ್ದೇಶನ ಕೇಡಿ ಸಿನಿಮಾದಲ್ಲೂ ನಟರೊಬ್ಬರು ಗಾಯ (Injury) ಮಾಡಿಕೊಂಡಿದ್ದರು. ಈ ಎರಡು ಚಿತ್ರಗಳಿಗೂ ಇವರೇ ಸಾಹಸ ನಿರ್ದೇಶಕರು. ಇದನ್ನೂ ಓದಿ:ಕಸ್ಟಡಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆದ ನಾಗ ಚೈತನ್ಯ

    ಮುಧೋಳ್ ಸಿನಿಮಾ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿದ್ದು, ಪ್ರಧಾನ ಸಾಹಸಮಯ ಸನ್ನಿವೇಶಗಳನ್ನು ನಿರ್ದೇಶಕರು ಸೆರೆ ಹಿಡಿಯುತ್ತಿದ್ದಾರೆ. ಇದೊಂದು ಆಕ್ಷನ್ ಸಿನಿಮಾವಾಗಿದ್ದು, ಕಳೆದ ಒಂದು ವಾರದಿಂದ ಚಿತ್ರೀಕರಣ ನಡೆಯುತ್ತಿದೆ.

  • ಗ್ಯಾಂಗ್ ಸ್ಟರ್ ಅವತಾರದಲ್ಲಿ ಕ್ರೇಜಿಸ್ಟಾರ್ ಪುತ್ರ ವಿಕ್ರಮ್

    ಗ್ಯಾಂಗ್ ಸ್ಟರ್ ಅವತಾರದಲ್ಲಿ ಕ್ರೇಜಿಸ್ಟಾರ್ ಪುತ್ರ ವಿಕ್ರಮ್

    ಸ್ಯಾಂಡಲ್ ವುಡ್ ಕನಸುಗಾರ ಡಾ.ವಿ ರವಿಚಂದ್ರನ್ ದ್ವಿತೀಯ ಪುತ್ರ ಮರಿ ರಣಧೀರ ವಿಕ್ರಮ್ ರವಿಚಂದ್ರನ್ (Vikram Ravichandran) ಎರಡನೇ ಕನಸಿಗೆ ಮಧೋಳ್ (Mudhola) ಎಂಬ ಕ್ಯಾಚಿ ಟೈಟಲ್ (Title) ಇಡಲಾಗಿದೆ. ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ನಡುವೆ ವಿಕ್ಕಿ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಯಿತು. ಟೈಟಲ್ ಟೀಸರ್ ಮೂಲಕ ಎಂಟ್ರಿ ಕೊಟ್ಟ ವಿಕ್ರಮ್ ರವಿಚಂದ್ರನ್ ಕಂಪ್ಲೀಟ್ ಗ್ಯಾಂಗ್ ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಕ್ರೇಜಿಸ್ಟಾರ್ ಪುತ್ರನ ಚಿತ್ರಕ್ಕೆ ಮುಧೋಳ್ ಎಂಬ ಟೈಟಲ್ ಕೊಟ್ಟಿದ್ದೇ ವಿ. ರವಿಚಂದ್ರನ್..ತ್ರಿವಿಕ್ರಮ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಅಡಿ ಇಟ್ಟಿದ ವಿಕ್ಕಿ ಈ ಬಾರಿ ರಾ ಹಾಗೂ ಗ್ಯಾಂಗ್ ಸ್ಟಾರ್ ಸಬ್ಜೆಕ್ಟ್ ಮೂಲಕ ಸಿನಿರಸಿಕರನ್ನು ರಂಜಿಸಲು ಬರ್ತಿದ್ದಾರೆ.

    ಮುಧೋಳ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ವಿಕ್ರಮ್ ರವಿಚಂದ್ರನ್, ತ್ರಿವಿಕ್ರಮ ರಿಲೀಸ್ ಆಗಿದ್ದು ಜೂನ್ 24, ಅದು ಆದ್ಮೇಲೆ ಏಪ್ರಿಲ್ 26 ಅಂದ್ರೆ ಇವತ್ತು ನನ್ನ ಎರಡನೇ ಸಿನಿಮಾದ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ತುಂಬಾ ಜನ ವಿಕೆಆರ್ ಅಂದ್ರೇನು ಅಂತಾ ಕೇಳುತ್ತಿದ್ರು. ವಿಕೆಆರ್ ವಿಕ್ರಮ್ ರವಿಚಂದ್ರನ್ ಅನ್ನೋದು ತುಂಬಾ ಜನಕ್ಕೆ ಗೊತ್ತಿದೆ. ವಿಕೆಆರ್ ಕೆ ಬ್ರ್ಯಾಂಡ್ ಶುರು ಮಾಡೋಣಾ ಅಂತಾ. ವಿಕೆಆರ್ ವಿಕ್ರಮ್ ರವಿಚಂದ್ರನ್ ಬರುತ್ತದೆ. ವೀರಸ್ವಾಮಿ ರವಿಚಂದ್ರನ್ ಬರುತ್ತೇ. ನೆಕ್ಸ್ಟ್ ನಿಮ್ಮ ಫೇವರೇಟ್ ಡಾ. ವಿ ರವಿಚಂದ್ರನ್ ಹೆಸರು ಬರುತ್ತದೆ. ಇದರ ಮಧ್ಯೆ ಕನ್ನಡ ಬರುತ್ತದೆ. ಪ್ರಯತ್ನ ಅನ್ನೋದು ನಿರಂತರ. ಪ್ರಯತ್ನ ಮಾಡಿ ಜೀವನದಲ್ಲಿ ಗೆಲುವುದು ಮುಖ್ಯವಲ್ಲ. ಜೀವನವನ್ನೇ ಗೆಲ್ಲಬಹುದು. ಆ ರೀತಿ ಒಂದು ತಂಡ ನಿಮ್ಮ ಮುಂದೆ. ನನ್ನ ಎರಡನೇ ಹೆಜ್ಜೆ..ನಿಮ್ಮ ಪ್ರೀತಿ ಹಾರೈಕೆ ಹೀಗೆ ಇರಲಿ ಎಂದರು.

    ನಿರ್ದೇಶಕ ಕಾರ್ತಿಕ್ ರಾಜನ್ (Karthik Rajan) ಮಾತನಾಡಿ, ಮುಧೋಳ್ ಗಾಗಿ ತುಂಬಾ ಕಡೆ ಹುಡುಗಾಡಿದೆವು. ನಮ್ಮ ಮ್ಯಾನೇಜರ್ ಹತ್ತಿರಹೇಳಿದೆ. ತ್ಯಾಗರಾಜ್ ಎಂಬುವವರು ಆ ಶ್ವಾನ ಟ್ರೈನ್ ಮಾಡಿದ್ದಾರೆ. ಟೈಟಲ್ ಟೀಸರ್ ನಲ್ಲಿ ಶ್ವಾನ ಚಾಕು ಕಚ್ಚಿಕೊಂಡು ಬರುವ ದೃಶ್ಯಕ್ಕಾಗಿ 23 ಟೇಕ್ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ:ಮತ್ತೆ ಕಿರುತೆರೆಯತ್ತ ದೀಪಿಕಾ ದಾಸ್

    ಸಂಭಾಷಣೆಗಾರ ಮಾಸ್ತಿ ಮಾತನಾಡಿ, ಈಶ್ವರಿ ಕಂಬೈನ್ಸ್ ಅನ್ನೋದು ಲೆಗೆಸಿ. ಹೀರೋಯಿನ್ಸ್ ಗಳು ರವಿಚಂದ್ರನ್ ಸರ್ ಜೊತೆ ಕೆಲಸ ಮಾಡ್ಬೇಕು ಎಂದುಕೊಳ್ತಿದ್ರು. ಅದೇ ರೀತಿ ರೈಟರ್ಸ್ ಆ ಸಂಸ್ಥೆ ಜೊತೆ ಕೆಲಸ ಮಾಡಬೇಕು ಎಂದುಕೊಳ್ತಿದ್ರು. ಈಶ್ವರಿ ಕಂಬೈನ್ಸ್ ಅನ್ನೋದು ಪರಂಪರೆ. ಆ ಸಂಸ್ಥೆಯ ಜೊತೆ ವಿಕ್ರಮ್ ಸರ್ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಎಂದರು.

    ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ಮುಧೋಳ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಹೆಜ್ಜೆ. ಎಸ್.ತಮನ್ ಜೊತೆ ಕೆಲಸ ಮಾಡಿ ಅನುಭವ ಇರುವ ಯುವರಾಜ್ ಚಂದ್ರನ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡುತ್ತಿದ್ದು, ಟಗರು, ಸಲಗ ಸಿನಿಮಾ ಖ್ಯಾತಿ ಮಾಸ್ತಿ ಸಂಭಾಷಣೆ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಡಾ.ಕೆ.ರವಿವರ್ಮಾ ಆಕ್ಷನ್ ಚಿತ್ರಕ್ಕಿದೆ. ತಂಡವ್ ಸ್ಟುಡಿಯೋಸ್ ಬ್ಯಾನರ್ ನಡಿ ರಕ್ಷಾ ವಿಜಯಕುಮಾರ್ ಹಾಗೂ ಸಿಲ್ಜು ಕಣ್ಣನ್ ನಿರ್ಮಾಣ ಮಾಡ್ತಿರುವ ಮಧೋಳ್ ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿ ಅಭಿಲಾಶ್, ರಘು ಮ್ಯೂಟಂಟ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಈಗಾಗ್ಲೇ 30 ದಿನ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಮತ್ತಷ್ಟು ಕಲಾವಿದರ ಬಗ್ಗೆ ಶೀರ್ಘದಲ್ಲಿಯೇ ಮಾಹಿತಿ ನೀಡಲಿದೆ.

  • ರವಿಚಂದ್ರನ್ ಪುತ್ರ ವಿಕ್ರಮ್ ನಟನೆಯ ಎರಡನೇ ಸಿನಿಮಾಗೆ ಮುಹೂರ್ತ

    ರವಿಚಂದ್ರನ್ ಪುತ್ರ ವಿಕ್ರಮ್ ನಟನೆಯ ಎರಡನೇ ಸಿನಿಮಾಗೆ ಮುಹೂರ್ತ

    ‘ತ್ರಿವಿಕ್ರಮ’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟ ಕ್ರೇಜಿ ಸ್ಟಾರ್ ಪುತ್ರ ವಿಕ್ರಮ್ ರವಿಚಂದ್ರನ್ ಮತ್ತೊಂದು ಸಿನಿಮಾಗೆ ಸಜ್ಜಾಗಿದ್ದಾರೆ. ಈ ಬಾರಿ ರಾ ಹಾಗೂ ಗ್ಯಾಂಗ್ ಸ್ಟಾರ್ ಸಬ್ಜೆಕ್ಟ್ ಸಿನಿಮಾ ಆಯ್ಕೆ ಮಾಡಿಕೊಂಡಿದ್ದು ಚಿತ್ರದ ಮುಹೂರ್ತ ನೆರವೇರಿದೆ.

    ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ರಾ ಹಾಗೂ ಗ್ಯಾಂಗ್ ಸ್ಟಾರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ಕಥೆ ಕೇಳಿ ವಿಕ್ರಮ್ ರವಿಚಂದ್ರನ್ ಗ್ರೀನ್ ಸಿಗ್ನಲ್ ನೀಡಿದ್ದು, ಎರಡನೇ ಸಿನಿಮಾದಲ್ಲಿ ಮಾಸ್ ಹೀರೋ ಆಗಿ ವಿಕ್ರಮ್ ತೆರೆ ಮೇಲೆ ಮಿಂಚಲು ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದಾರೆ. ಕನ್ನಡದಲ್ಲಿ ‘ಹೆಡ್ ಬುಷ್’ ಸಿನಿಮಾದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಕಾರ್ತಿಕ್ ರಾಜನ್ ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್

    ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಸದ್ಯದಲ್ಲೇ ಟೈಟಲ್, ತಾರಾಬಳಗ, ತಂತ್ರಜ್ಞರು ಹಾಗೂ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳೋದಾಗಿ ನಿರ್ದೇಶಕ ಕಾರ್ತಿಕ್ ರಾಜನ್ ತಿಳಿಸಿದ್ದಾರೆ. ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಎಸ್.ತಮನ್ ಜೊತೆ ಕೆಲಸ ಮಾಡಿ ಅನುಭವ ಇರುವ ಯುವರಾಜ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿನಿಮಾ ನೋಡಲು 5 ಹೆಚ್ಚುವರಿ ಅಂಕ ಮತ್ತು 1 ದಿನ ರಜೆ ಘೋಷಿಸಿದ ಪ್ರಿನ್ಸಿಪಾಲ್: ಪಾಲಕರು ಏನ್ ಹೇಳ್ತಾರೆ?

    ಸಿನಿಮಾ ನೋಡಲು 5 ಹೆಚ್ಚುವರಿ ಅಂಕ ಮತ್ತು 1 ದಿನ ರಜೆ ಘೋಷಿಸಿದ ಪ್ರಿನ್ಸಿಪಾಲ್: ಪಾಲಕರು ಏನ್ ಹೇಳ್ತಾರೆ?

    ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ತ್ರಿವಿಕ್ರಮ್ ಹೆಸರಿನಲ್ಲಿ ಮೂಡಿ ಬಂದಿರುವ ಸಿನಿಮಾ ಇನ್ನೇನು ಬಿಡುಗಡೆ ಆಗಲಿದೆ. ಹಾಗಾಗಿ ರಾಜ್ಯಾದ್ಯಂತ ಸಿನಿಮಾ ಟೀಮ್ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಅದರಲ್ಲೂ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ವಿಕ್ರಮ್ ಮತ್ತು ತಂಡ ಸಂವಾದ ನಡೆಸುತ್ತಿದೆ. ಹೀಗೆ ಬೆಳಗಾವಿಯ ಕಾಲೇಜಿಗೆ ಹೋದಾಗ, ಅಲ್ಲಿನ ಪ್ರಾಂಶುಪಾಲರು ಭರ್ಜರಿ ಆಫರ್ ಕೊಟ್ಟಿದ್ದಾರೆ.

    ಬೆಳಗಾವಿಯ ಜೈನ್ ಎಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ ಸಿನಿಮಾ ತಂಡವನ್ನು ಅಲ್ಲಿನ ಸಿಬ್ಬಂದಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ವಿದ್ಯಾರ್ಥಿಗಳ ಜೊತೆ ಸಿನಿಮಾ ತಂಡ ಮಾತಕತೆ ಮಾಡಿದ ನಂತರ, ಸಿನಿಮಾ ಟೀಮ್ ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿರುವ ಪ್ರಾಂಶುಪಾಲರು ಈ ಸಿನಿಮಾವನ್ನು ನೋಡಿ, ಟಿಕೆಟ್ ತಂದು ಕೊಟ್ಟವರಿಗೆ ಐದು ಗ್ರೇಸ್ ಮಾರ್ಕ್ಸ್ ಮತ್ತು ಒಂದು ದಿನ ರಜೆ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಬೈಕಾಟ್ ಸಾಯಿ ಪಲ್ಲವಿ ಫಿಲ್ಮ್ : ಇಂದು ವಿರಾಟ ಪರ್ವಂ ರಿಲೀಸ್

    ಈ ಆಫರ್ ಘೋಷಣೆ ಆಗುತ್ತಿದ್ದಂತೆಯೇ ಕಾಲೇಜಿನ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದ್ದಾರೆ. ಆದರೆ, ಒಂದು ಕಂಡಿಷನ್ ಏನು ಅಂದರೆ, ಸಿನಿಮಾವನ್ನು ಶನಿವಾರ ನೋಡಬೇಕು.  ಮತ್ತು ಟಿಕೆಟ್ ಅನ್ನು ಕಡ್ಡಾಯವಾಗಿ ತಂದು ಕಾಲೇಜಿಗೆ ಒಪ್ಪಿಸಬೇಕು. ಈ ಆಫರ್ ಕೇಳಿದ ಪಾಲಕರು ಬೆಚ್ಚಿಬಿದ್ದಿದ್ದಾರೆ. ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುವುದು ಯಾಕೆ ಎಂಬ ಪ್ರಶ್ನೆಯನ್ನೂ ಮಾಡಿದ್ದಾರಂತೆ. ಆದರೂ, ಈ ಆಫರ್ ಮಾತ್ರ ಕ್ಯಾನ್ಸಲ್ ಆಗಿಲ್ಲ ಎಂದು ಹೇಳಲಾಗುತ್ತಿದೆ.

    Live Tv

  • ಅಭಿಮಾನಿಗಳಿಗೆ ಮರೆಯಲಾಗದ ಉಡುಗೊರೆ ನೀಡಲು ಕ್ರೇಜಿಸ್ಟಾರ್ ರೆಡಿ!

    ಅಭಿಮಾನಿಗಳಿಗೆ ಮರೆಯಲಾಗದ ಉಡುಗೊರೆ ನೀಡಲು ಕ್ರೇಜಿಸ್ಟಾರ್ ರೆಡಿ!

    ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಅಭಿಮಾನಿಗಳಿಗೆ ಮರೆಯಲಾಗದ ಉಡುಗೊರೆ ನೀಡಲು ಸಿದ್ಧತೆ ನಡೆಸಿದ್ದು, ಈ ಕುರಿತ ಮಾಹಿತಿಯನ್ನು ಸ್ವತಃ ಅವರೇ ರಿವೀಲ್ ಮಾಡಿದ್ದಾರೆ.

    ‘ಆ ದೃಶ್ಯಂ’ ಸಿನಿಮಾದ ಸಕ್ಸಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರವಿಚಂದ್ರನ್ ಅವರು, ತಮ್ಮ 35 ವರ್ಷದ ಕನಸನ್ನು ಸಾಕಾರಗೊಳಿಸಲು ಸಜ್ಜಾಗಿದ್ದು, ಪ್ರೇಮಲೋಕ-2 ಚಿತ್ರದಲ್ಲಿ ಮನೋರಂಜನ್ ರವಿಚಂದ್ರನ್ ರಣಧೀರನಾಗಿ ಗ್ರ್ಯಾಂಡ್ ಕೊಡಲಿದ್ದಾರೆ ಎಂದರು.

    ವಿಶೇಷ ಎಂದರೆ ಈ ಸಿನಿಮಾದಲ್ಲಿ ರವಿಚಂದ್ರನ್ ಅವರ 2ನೇ ಪುತ್ರ ವಿಕ್ರಮ್‍ಗೂ ಒಂದು ಚಾನ್ಸ್ ಕೊಡುವ ನಿರ್ಧಾರವನ್ನು ಪ್ರಕಟಿಸಿದ ಅವರು, ಈ ಕುರಿತು ಸಿದ್ಧತೆಗಳು ಫೈನಲ್ ಆಗಬೇಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೂವರು ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಬಹುದು ಎಂದು ರವಿಚಂದ್ರನ್ ಹೇಳಿದರು.

    ‘ಆ ದೃಶ್ಯ’ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ನನ್ನನ್ನು ಪ್ರೇಕ್ಷಕರು ಹೀರೋ ಆಗಿಯೇ ನೋಡಲು ಬಯಸುತ್ತಾರೆ. ಅಂತಹವರಿಗೆ ಈ ಸಿನಿಮಾ ಇಷ್ಟವಾಗಿದ್ದು, ನಾನು ಹೀರೋ ಪಾತ್ರ ಹಾಗೂ ವಿಶೇಷ ಪಾತ್ರ ಎರಡರಲ್ಲೂ ಮಾಡಲು ಸಿದ್ಧನಿದ್ದೇನೆ. ಕಳೆದ ಹಲವು ವರ್ಷಗಳಿಂದ ಪ್ರೇಮಲೋಕ-2 ಸಿನಿಮಾ ಮಾಡುವ ತಯಾರಿ ನಡೆಯುತ್ತಿತ್ತು. ಆದರೆ ಇದುವರೆಗೂ ಆದು ಆಗಿರಲಿಲ್ಲ. ಆದರೆ ಮಗಳ ಹುಟ್ಟುಹಬ್ಬದ ಸಂಭ್ರಮ ವೇಳೆ ಕಥೆಗೆ ಸ್ಪಷ್ಟನೆ ಸಿಕ್ತು. ಶೀಘ್ರವೇ ಈ ಕುರಿತು ಅಧಿಕೃತ ಮಾಹಿತಿಯನ್ನು ನೀಡುತ್ತೇನೆ ಎಂದರು.