Tag: Vikram Hospital

  • ಅಪ್ಪುಗೆ ಇಸಿಜಿ ಟೆಸ್ಟ್‌ನಲ್ಲಿ ಹಾರ್ಟ್ ಅಟ್ಯಾಕ್ ಸುಳಿವು: ಡಾ. ರಮಣ ರಾವ್

    ಅಪ್ಪುಗೆ ಇಸಿಜಿ ಟೆಸ್ಟ್‌ನಲ್ಲಿ ಹಾರ್ಟ್ ಅಟ್ಯಾಕ್ ಸುಳಿವು: ಡಾ. ರಮಣ ರಾವ್

    ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅವರಿಗೆ ಇಸಿಜಿಗೆ ಟೆಸ್ಟ್ ನಡೆಸಿದಾಗ ಅವರಿಗೆ ಹಾರ್ಟ್ ಅಟ್ಯಾಕ್ ಆಗಿರುವ ಬಗ್ಗೆ ಸುಳಿವು ಸಿಕ್ಕಿರುವುದಾಗಿ  ಡಾ. ರಮಣ ರಾವ್ ಹೇಳಿದ್ದಾರೆ.

    ಈ ಕುರಿತಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಅಪ್ಪು ಅವರು ಇಲ್ಲಿ ಕುಸಿದು ಬೀಳಲಿಲ್ಲ. ನಮಗೆ ಇಸಿಜಿ ಪರೀಕ್ಷೆಯಲ್ಲಿ ಹಾರ್ಟ್ ಪ್ಲಾಬ್ಲಂ ಆಗುತ್ತಿರುವ ನಗ್ಗೆ ಸುಳಿವು ಸಿಕ್ಕಿದ ನಂತರ ಆಸ್ಪತ್ರೆಗೆ ಹೋಗೋಣ ಎಂದು ನಿರ್ಧರಿಸಿದೆವು. ಆಗ ಅಪ್ಪು ನಿಲ್ಲಲು ಪ್ರಯತ್ನಿಸಿದರು. ನನಗೆ ಸ್ವಲ್ಪ ನೋವಾಗುತ್ತಿದೆ ಎಂದರು. ಈ ವೇಳೆ ಅವರನ್ನು ನಿಲ್ಲಿಸಲು ಕಷ್ಟ ಎಂದು ಅವರನ್ನು ಎತ್ತುಕೊಂಡು ಕಾರಿನಲ್ಲಿ ಮಲಗಿಸಿದೆವು. ಈ ವೇಳೆ ಅಪ್ಪುಗೆ ಪ್ರಜ್ಞೆ ಇತ್ತು. ನಾವು ಹೇಳುತ್ತಿದ್ದನ್ನೆಲ್ಲಾ ಸರಿಯಾಗಿ ಪಾಲಿಸುತ್ತಿದ್ದರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದೆ ಎಂದರು.

    ಐಸಿಯು, ಕಾರ್ಡಿಯಾಕೇರ್ ಎಲ್ಲಿ ಅಗತ್ಯವಾಗಿ ದೊರೆಯುತ್ತದೆಯೋ ಅಲ್ಲಿಗೆ ಕಳುಹಿಸುವುದು ನಮ್ಮ ಕೆಲಸವಾಗಿತ್ತು. ಹೀಗಾಗಿ ಅವರಿಗೆ ಹಾರ್ಟ್ ಪ್ರಾಬ್ಲಂ ಆಗುತ್ತಿದೆ ಎಂದಾಗಲೇ ತಕ್ಷಣ ನಾವು ಪ್ರಾಥಮಿಕ ಚಿಕಿತ್ಸೆ ನೀಡಿದ್ದೇವೆ. ನಂತರ ಅಪ್ಪುವನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದೇವೆ. ಆ ವೇಳೆ ಅಪ್ಪು ಉಸಿರಾಡುತ್ತಿದ್ದರು. ಅಪ್ಪು ನಾಡಿ ಬಡಿತ, ಹೃದಯ ಬಡಿತ ಎಲ್ಲವನ್ನು ನಾರ್ಮಲ್ ಆಗಿತ್ತು. ಇದನ್ನೂ ಓದಿ: ನಟ ದಿ. ಪುನೀತ್ ಮನೆಗೆ ಭೇಟಿ ನೀಡಿ ಸಿಎಂ ಸಾಂತ್ವನ

    ಬೆಳಗ್ಗೆ 11.20ರಷ್ಟೊತ್ತಿಗೆ ಅಪ್ಪು ಕ್ಲಿನಿಕ್‍ಗೆ ಬಂದಿದ್ದರು. ಚಿಕಿತ್ಸೆ ವೇಳೆ ಅಪ್ಪು ಬೆವರುತ್ತಿದ್ದರು. ಸಾಮಾನ್ಯವಾಗಿ ಪ್ರತಿ ಭಾರೀ ವ್ಯಾಯಾಮ ಮಾಡಿದ ನಂತರ ಬೆವರು ನನಗೆ ಬರುತ್ತದೆ ಎಂದು ಹೇಳಿದ್ದರು. ಕ್ಲಿನಿಕ್‍ಗೆ ಬಂದ 1 ನಿಮಿಷದಲ್ಲೇ ಇಸಿಜಿ ಮಾಡಿದ್ವಿ. ಆದರೆ ಅಪ್ಪು ಬೆವರುತ್ತಿರುವುದನ್ನು ಕಂಡು ಆತಂಕ ಹಾಗೂ ಅನುಮಾನದಿಂದ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದೆ. ಇನ್ನೂ ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋದರೆ ತಡವಾಗುತ್ತದೆ ಎಂದು ಅವರ ಕಾರಿನಲ್ಲಿಯೇ ಕೇವಲ 7 ನಿಮಿಷದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ ಎಂದರು. ಇದನ್ನೂ ಓದಿ: ವಾರ ಕಳೆದ್ರೂ ಅಪ್ಪು ಸ್ಮಾರಕಕ್ಕೆ ಜನಸಾಗರ- ಮಳೆ ಲೆಕ್ಕಿಸದೇ ದರ್ಶನ ಪಡೆದ ಅಭಿಮಾನಿಗಳು

    ಅಪ್ಪು ಸ್ಟಾರ್ ನಟ, ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ನನಗೆ ನನ್ನ ಮಗನನ್ನು ಕಳೆದುಕೊಂಡಷ್ಟೇ ದುಃಖವಾಗುತ್ತಿದೆ. ನಾವು ಅಪ್ಪುಗೆ ಎಲ್ಲ ರೀತಿಯ ಕಾಳಜಿ ವಹಿಸಿದ್ದೇನೆ. ನನ್ನ ಮನಸ್ಸಿಗೆ ನಾನು ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಿದ್ದೇವೆ ಎಂಬ ಅಭಿಪ್ರಾಯವಿದೆ ಎಂದು ಹೇಳಿದ್ದಾರೆ.

  • ಅಪರೂಪದ ಕಾಯಿಲೆಗೆ ಬೆಂಗ್ಳೂರಿನಲ್ಲಿ ಚಿಕಿತ್ಸೆ- ಓಮನ್ ದೇಶದ ಪುಟಾಣಿಗೆ 7 ಗಂಟೆ ಶಸ್ತ್ರಚಿಕಿತ್ಸೆ

    ಅಪರೂಪದ ಕಾಯಿಲೆಗೆ ಬೆಂಗ್ಳೂರಿನಲ್ಲಿ ಚಿಕಿತ್ಸೆ- ಓಮನ್ ದೇಶದ ಪುಟಾಣಿಗೆ 7 ಗಂಟೆ ಶಸ್ತ್ರಚಿಕಿತ್ಸೆ

    ಬೆಂಗಳೂರು: ಓಮನ್ ದೇಶದ 5 ವರ್ಷದ ಬಾಲಕಿಗೆ ಡಿ.ವೈ.ಟಿ-16 (ಡಿಸ್ಟೋನಿಯಾ) ಎಂಬ ಅಪರೂಪದ ಕಾಯಿಲೆ ಇತ್ತು. ಈ ಬಾಲಕಿಗೆ 7 ಗಂಟೆಯ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಬೆಂಗಳೂರಿನ ವಿಕ್ರಂ ಆಸ್ಪತ್ರೆ ವೈದ್ಯರು ಪುನರ್ ಜನ್ಮ ನೀಡಿದ್ದಾರೆ.

    ಇನ್ನೊಂದು ವಿಷೇಶವೆಂದರೆ ಭಾರತದಲ್ಲಿ ಅತಿ ಚಿಕ್ಕ ವಯಸ್ಸಿನ ರೋಗಿಯೊಬ್ಬರಿಗೆ ಇಂತಹ ಶಸ್ತ್ರಚಿಕಿತ್ಸೆ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ. ಡಿ.ವೈ.ಟಿ-16 ಅನ್ನು ವೈದ್ಯಕೀಯ ಪರಿಭಾಷೆಯಲ್ಲಿ ಡಿಸ್ಟೋನಿಯಾ ಎಂದು ಕರೆಯಲಾಗುತ್ತದೆ. ಇದು ಮೆದುಳು ಸಂಬಂಧಿ ಕಾಯಿಲೆಯಾಗಿದ್ದು, ಓಮನ್ ದೇಶದ ಪುಟಾಣಿ ಮಲಗಿದ್ದಲ್ಲೇ ಮಲಗಿದ್ದಳು. ಯಾವುದೇ ಚಲನೆಯಿಲ್ಲದೇ ಬದುಕುತ್ತಿದ್ದ ಈಕೆಗೆ ಈಗ ಪುನರ್ ಜನ್ಮ ಬಂದಂತಾಗಿದೆ.

    ಈ ಕಾಯಿಲೆ ಪ್ರಪಂಚದಲ್ಲೇ ಕೇವಲ 10 ರಿಂದ 15 ಪ್ರಕರಣಗಳು ಮಾತ್ರ ಕಂಡುಬರುತ್ತವೆ ಎಂದು ವೈದ್ಯರು ಹೇಳಿದ್ದಾರೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿ.ವೈ.ಟಿ-16 ಕಾಯಿಲೆಗೆ ಚಿಕಿತ್ಸೆಯನ್ನು ನೀಡಲಾಗಿದೆ. ಅಲ್ಲದೇ ಅತ್ಯಂತ ಚಿಕ್ಕ ವಯಸ್ಸಿನ ಬಾಲಕಿಗೆ ಈ ಶಸ್ತ್ರಚಿಕಿತ್ಸೆ ಮಾಡುವುದು ಸವಾಲಿನ ಕೆಲಸವಾಗಿದ್ದು, ಯಶಸ್ವಿಯಾಗಿ ಮಾಡಿದ್ದೇವೆ ಎಂದು ವಿಕ್ರಂ ಆಸ್ಪತ್ರೆಯ ವೈದ್ಯರು ಹೆಮ್ಮೆಪಟ್ಟರು.

  • ಅಂಬಿಯ ಕೊನೆ ಕ್ಷಣದ ಬಗ್ಗೆ ವಿಕ್ರಂ ಆಸ್ಪತ್ರೆಯ ವೈದ್ಯ ಹೇಳಿದ್ದೇನು?

    ಅಂಬಿಯ ಕೊನೆ ಕ್ಷಣದ ಬಗ್ಗೆ ವಿಕ್ರಂ ಆಸ್ಪತ್ರೆಯ ವೈದ್ಯ ಹೇಳಿದ್ದೇನು?

    ಬೆಂಗಳೂರು: ರೆಬಲ್ ಸ್ಟಾರ್ ಅಂಬಿ ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ಪ್ರಯಾಣ ಮಾಡಿದ್ದಾರೆ. ಹಾಗಾದ್ರೆ ಅಂಬಿಯವರಿಗೆ ಶನಿವಾರ ಸಂಜೆ ಏನಾಯ್ತು..? ಅಂಬಿಯನ್ನ ಉಳಿಸಲು ಮಾಡಿದ ಪ್ರಯತ್ನ ಹೇಗಿತ್ತು..? ಈ ಬಗ್ಗೆ ಅಂಬಿಗೆ ಚಿಕಿತ್ಸೆ ನೀಡುತ್ತಿದ್ದ ವಿಕ್ರಂ ಆಸ್ಪತ್ರೆಯ ವೈದ್ಯ ಡಾ.ಸತೀಶ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

    ಗುರುವಾರ ಮತ್ತು ಶುಕ್ರವಾರ ಅಂಬರೀಶ್ ಅವರನ್ನು ಪರೀಕ್ಷೆ ಮಾಡಿದ್ದೆ. ವಾತಾವರಣದಿಂದಾಗಿ ಅವರಿಗೆ ಕೆಮ್ಮು, ಕಫ ಸ್ವಲ್ಪ ಜೋರಾಗಿತ್ತು. ಹೀಗಾಗಿ ಅದಕ್ಕೆ ತಕ್ಕಂತೆ ನಾನು ಚಿಕಿತ್ಸೆ ನೀಡಿದ್ದೆ.

    ಶನಿವಾರ ಸಂಜೆ ಮನೆಯಲ್ಲಿ ಅವರ ರೂಮಿಗೆ ಮಲಗಲು ಹೋಗುವ ಸಂದರ್ಭದಲ್ಲಿ ಸಡನ್ ಆಗಿ ಆಕ್ಸಿಜನ್ ಕಡಿಮೆಯಾಗಿ ಹೃದಯಾಘಾತವಾಯಿತು. ಈ ವೇಳೆ ಅವರ ಮನೆಯವರು ನನಗೆ ಕರೆ ಮಾಡಿದ್ರು. ಜೋರಾಗಿ ಅಳೋದು ಕೇಳಿತ್ತು. ಇದರಿಂದ ಗಾಬರಿಗೊಂಡ ನಾನು ಅಲ್ಲೆ ಒಬ್ಬರು ಒಳ್ಳೆಯ ನರ್ಸ್ ಇರುವುದು ನೆನಪಾಯ್ತು. ಅವನಿಗೆ 2 ವರ್ಷದಿಂದ ಅಂಬರೀಶ್ ಆರೋಗ್ಯದ ಬಗ್ಗೆ ತಿಳಿದಿದೆ. ಆದುದರಿಂದ ನಾನು ಕೂಡಲೇ ಅವನಿಗೆ ಫೋನ್ ಕೊಡಿ ಅಂತ ಹೇಳಿದೆ.

    ಅವನ ಜೊತೆ ಮಾತನಾಡಿ ಮನೆಯಲ್ಲಿ 2 ಆಕ್ಸಿಜನ್ ಇದೆ. ಎಲ್ಲಾ ಆಕ್ಸಿಜನ್ ನನ್ನು ಜಾಸ್ತಿ ಮಾಡು. ಹಾಗೆಯೇ ಹೃದಯಘಾತವಾದ ಕೂಡಲೇ ಮಾಡುವ ಮಸಾಜ್ ಮಾಡು. ಆಂಬುಲೆನ್ಸ್ ನಾನು ಕಳುಹಿಸಿಕೊಡುತ್ತೇನೆ. ನೀನೇನು ಯೋಚನೆ ಮಾಡಬೇಡ ಇಷ್ಟು ಮಾಡು. ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ ಅಂತ ಸೂಚಿಸಿದೆ.

    ನಾನು ಬರೋದ್ರೊಳಗೆ ಹೃದಯಾಘಾತವಾಗಿತ್ತು. ಬಂದಾಗ ಹಾರ್ಟ್ ಬೀಟಿಂಗ್, ಬ್ಲಡ್ ಫ್ರೆಶರ್, ಪಲ್ಸ್, ಪ್ರಜ್ಞಾಹೀನರಾಗಿದ್ದರು. ನಮ್ಮ ಆಸ್ಪತ್ರೆಯಿಂದ ಅವರ ಮನೆಗೆ ಹೋಗೋಕೆ 5 ನಿಮಿಷ ಬೇಕು. ಅವರಿಗೆ ಹೃದಯಾಘಾತವಾಗಿ ಸುಮಾರು 10ರಿಂದ 15 ನಿಮಿಷ ಆಗಿರಬಹುದು. ಹೀಗಾದಾಗ ಸರಿ ಮಾಡುವುದು ಕಷ್ಟವಾಗುತ್ತದೆ. ಮನೆಯಲ್ಲಂತೂ ಸಾಧ್ಯವೇ ಇಲ್ಲ. ಆಸ್ಪತ್ರೆಯಲ್ಲೂ ಹೀಗಾದಾಗ ಕೆಲವು ಬಾರಿ ಕಷ್ಟ ಆಗುತ್ತದೆ. ಇದೇ ಅವರಲ್ಲಿ ಕೊನೆಯ ಬಾರಿ ಆದ ಘಟನೆ ಅಂತ ಅವರು ಹೇಳಿದ್ರು.

    ಹೃದಯಾಘಾತವಾಗಿ ಸುಮಾರು 1 ಗಂಟೆ ಆದ ಬಳಿಕ ಅಂಬರೀಶ್ ನಿಧನರಾಗಿದ್ದಾರೆ ಅಂತ ಘೋಷಣೆ ಮಾಡಿದ್ದೇವೆ ಅಂತ ಅವರು ಅಂಬಿಯ ಕೊನೆಯ ಕ್ಷಣಗಳನ್ನು ಮೆಲುಕು ಹಾಕಿದ್ರು.

    https://www.youtube.com/watch?v=k3Fm7XpZxlE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಜಿ ಸಚಿವ ಅಂಬರೀಷ್ ಆಸ್ಪತ್ರೆಗೆ ದಾಖಲು

    ಮಾಜಿ ಸಚಿವ ಅಂಬರೀಷ್ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಮಾಜಿ ಸಚಿವ ಹಾಗೂ ನಟ ಅಂಬರೀಷ್ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾದ ಅಂಬರೀಷ್ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ನಾಳೆ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ.

    ಈ ಬಗ್ಗೆ ವಿಕ್ರಂ ಆಸ್ಪತ್ರೆ ವೈದ್ಯರಾದ ಡಾ. ಸತೀಶ್ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದು, ಮೂರು ವರ್ಷಗಳಿಂದ ರೊಟೀನ್ ಚೆಕಪ್‍ಗೆ ಅಂಬರೀಷ್ ಬರ್ತಿದ್ದಾರೆ. ಇವತ್ತು ಹೆಲ್ತ್ ಚೆಕಪ್‍ಗೆ ಬಂದಿದ್ರು. ರಕ್ತ ಪರೀಕ್ಷೆ ನಡೆಯುತ್ತಿದೆ. ಭಯಪಡುವಂತಹದ್ದು ಏನು ಇಲ್ಲ ಅಂದ್ರು.

    ಅಂಬರೀಷ್ ಆರೋಗ್ಯವಾಗಿದ್ದಾರೆ. ಇಂದು ಸಂಜೆ ಅಥವಾ ನಾಳೆ ಡಿಸ್ಚಾರ್ಜ್ ಮಾಡುತ್ತೇವೆ. ಅಂಬರೀಷ್ ಖುದ್ದು ಸಂಜೆ ಮನೆಗೆ ಹೋಗ್ತೀನಿ ಅಂದಿದ್ದಾರೆ. ರೊಟೀನ್ ಟೆಸ್ಟ್ ಮುಗಿಸಿಕೊಂಡು ಡಿಸ್ಚಾರ್ಜ್ ಮಾಡಲಿದ್ದೇವೆ ಎಂದು ಡಾ. ಸತೀಶ್ ತಿಳಿಸಿದ್ರು.

  • ಮಾಜಿ ಸಿಎಂ ಎಚ್‍ಡಿಕೆಗೆ ಉಸಿರಾಟ ತೊಂದರೆ – ಮೈಸೂರು ವಿಕ್ರಂನಿಂದ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್

    ಮಾಜಿ ಸಿಎಂ ಎಚ್‍ಡಿಕೆಗೆ ಉಸಿರಾಟ ತೊಂದರೆ – ಮೈಸೂರು ವಿಕ್ರಂನಿಂದ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ನಗರದ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರೋ ಎಚ್‍ಡಿಕೆ ಶುಕ್ರವಾರ ಸಂಜೆಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತಾ ಆಸ್ಪತ್ರೆ ಮೂಲಗಳು ತಿಳಿಸಿವೆ.
    ಎದೆನೋವು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಮೈಸೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ರು. ಆ ಬಳಿಕ ಮೈಸೂರಿನಿಂದ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ಶುಕ್ರವಾರ ಸಂಜೆ ರವಾನಿಸಲಾಗಿದೆ.

    ಸದ್ಯ ಡಾ.ಸತೀಶ್ ಕುಮಾರಸ್ವಾಮಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಹಿಂದೆ ನಟ ಅಂಬರೀಶ್ ಅವರಿಗೂ ಇದೇ ವೈದ್ಯರು ಚಿಕಿತ್ಸೆ ನೀಡಿದ್ದರು.