Tag: Vikram Cinema

  • ವಿಕ್ರಮ್ ಸಿನಿಮಾದಿಂದ ಕಮಲ್ ಹಾಸನ್ ಗಳಿಸಿದ್ದು 300 ಕೋಟಿ – ಬಂದ ಹಣದಿಂದ ಸಾಲ ತೀರಿಸ್ತೀನಿ ಅಂದ ನಟ

    ವಿಕ್ರಮ್ ಸಿನಿಮಾದಿಂದ ಕಮಲ್ ಹಾಸನ್ ಗಳಿಸಿದ್ದು 300 ಕೋಟಿ – ಬಂದ ಹಣದಿಂದ ಸಾಲ ತೀರಿಸ್ತೀನಿ ಅಂದ ನಟ

    ತ್ತು ದಿನಗಳ ಹಿಂದೆಯಷ್ಟೇ ವಿಶ್ವದಾದ್ಯಂತ ರಿಲೀಸ್ ಆಗಿರುವ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಧೂಳ್ ಎಬ್ಬಿಸುತ್ತಿದೆ. ನಿರೀಕ್ಷೆ ಮಾಡದೇ ಇರುವಷ್ಟು ಅದು ಹಣ ತಂದುಕೊಡುತ್ತಿದೆ. ಎರಡನೇ ವಾರಕ್ಕೂ ಶರವೇಗದಲ್ಲಿ ಮುನ್ನುಗ್ಗುತ್ತಿರುವ ಚಿತ್ರವು ಹತ್ತು ದಿನಕ್ಕೆ ಬರೋಬ್ಬರಿ 300 ಕೋಟಿ ಗಳಿಸಿದೆ ಎಂದು ಅಂದಾಜು ಮಾಡಲಾಗಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ತಂಡ ಖುಷಿ ಆಗಿದೆ.

    ವಿಕ್ರಮ್ ಸಿನಿಮಾ ನೂರು ಕೋಟಿ ಕ್ಲಬ್ ಸೇರುತ್ತಿದ್ದಂತೆಯೇ ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು ಕಮಲ್. ಅಲ್ಲದೇ, ಈ ಚಿತ್ರಕ್ಕಾಗಿ ಕೆಲಸ ಮಾಡಿದ ಸಹ ನಿರ್ದೇಶಕರು ಬೈಕ್ ನೀಡಿದ್ದರು. ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ನಟಿಸಿದ್ದ ನಟ ಸೂರ್ಯ ಅವರಿಗೆ ದುಬಾರಿ ವಾಚ್ ನೀಡಿದ್ದರು. ಇದೀಗ ವಿಕ್ರಮ್ ಸಿನಿಮಾದಿಂದ ಬಂದಿರುವ ಹಣವನ್ನು ಸಾಲದ ಮರುಪಾವತಿಗೆ ಬಳಸಿಕೊಳ್ಳುತ್ತಾರಂತೆ. ಇದನ್ನೂ ಓದಿ: ನಾನು ‘ಸಂಚಾರಿ ವಿಜಯ್’ ಹಾಗೂ ರಾಷ್ಟ್ರೀಯ ಹೆದ್ದಾರಿ 4 : ನಿರ್ದೇಶಕ ಮಂಸೋರೆ ಮನದಾಳ

    ಮಾಧ್ಯಮಗಳ ಜೊತೆ ಮಾತನಾಡಿದ ಕಮಲ್ ಹಾಸನ್, “ನಾನು ಈ ಸಿನಿಮಾ ಚೆನ್ನಾಗಿಯೇ ದುಡ್ಡು ಮಾಡುತ್ತದೆ ಎಂದು ಹೇಳಿದೆ. ಸುಮ್ನೆ ಹೇಳುತ್ತಾನೆ ಅಂದುಕೊಂಡರು. ಇದೀಗ ಹಣ ಹರಿದು ಬರುತ್ತಿದೆ. ಮೊದಲು ನನ್ನ ಸಾಲಗಳನ್ನು ಮರುಪಾವತಿ ಮಾಡುತ್ತೇನೆ. ಕುಟುಂಬ ಮತ್ತು ಸ್ನೇಹಿತರಿಗೆ ಸಹಾಯ ಮಾಡುವೆ. ನೆಮ್ಮದಿಯಾಗಿ ಊಟ ಮಾಡುವೆ. ಸಾಲ ತೀರಿದ ನಂತರ ಒಳ್ಳೆಯ ಮನುಷ್ಯನಾಗಿ ಬದುಕುವೆ ಎಂದು ಹೇಳಿದ್ದಾರೆ ಕಮಲ್.

     

     

    Live Tv

  • ನಿರ್ದೇಶಕನಿಗೆ ಐಷಾರಾಮಿ ಕಾರು, ಸಹ ನಿರ್ದೇಶಕರಿಗೆ ದುಬಾರಿ ಬೈಕ್ ಗಿಫ್ಟ್ ಮಾಡಿದ ಕಮಲ್ ಹಾಸನ್

    ನಿರ್ದೇಶಕನಿಗೆ ಐಷಾರಾಮಿ ಕಾರು, ಸಹ ನಿರ್ದೇಶಕರಿಗೆ ದುಬಾರಿ ಬೈಕ್ ಗಿಫ್ಟ್ ಮಾಡಿದ ಕಮಲ್ ಹಾಸನ್

    ಚಾರ್ಯ ಸಿನಿಮಾ ಸೋತಿದ್ದಕ್ಕೆ ತೆಲುಗು ನಟ ಚಿರಂಜೀವಿ ತಮ್ಮ ಸಿನಿಮಾ ನಿರ್ದೇಶಕನಿಂದ ಮೂವತ್ತು ಕೋಟಿ ರೂಪಾಯಿಯನ್ನು ವಿತರಕರಿಗೆ ಮರುಪಾವತಿಸುವಂತೆ ಹೇಳಿದರೆ, ಇತ್ತ ತಮಿಳು ಚಿತ್ರದ ಖ್ಯಾತ ನಟ ಕಮಲ್ ಹಾಸನ್ ತಮ್ಮ ವಿಕ್ರಮ್ ಸಿನಿಮಾ ಗೆದ್ದಿರುವುದಕ್ಕೆ ನಿರ್ದೇಶಕರ ತಂಡಕ್ಕೆ ಭಾರೀ ಉಡುಗೊರೆ ನೀಡಿದ್ದಾರೆ. ಕಮಲ್ ಹಾಸನ್ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ : ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ಸೋಲು : ಹೊಣೆಹೊತ್ತು ಹಣ ಮರಳಿಸಿದ್ರಾ ನಿರ್ದೇಶಕ ಶಿವ

    ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ನಾಲ್ಕೇ ದಿನಕ್ಕೆ 175 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ವಾರದಲ್ಲಿ ಸಿನಿಮಾ ಇನ್ನೂರು ಕೋಟಿ ಕ್ಲಬ್ ಗೆ ಸೇರಲಿದೆ ಎಂದು ಅಂದಾಜಿಸಲಾಗಿದೆ. ಈ ಖುಷಿಗಾಗಿ ಕಮಲ್ ಹಾಸನ್, ತಮ್ಮ ಸಿನಿಮಾದ ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದದ್ದಾರೆ. ಈ ಕಾರಿಗೆ ಅಂದಾಜು 70 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ವಿಷಯವನ್ನು ನಿರ್ದೇಶಕರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ನಿಖಿಲ್ ಕುಮಾರ್ ಸ್ವಾಮಿ ಪುತ್ರನಿಗೆ ಇಟ್ಟ ಹೆಸರೇನು? ಆ ಹೆಸರಿನ ಅರ್ಥ ಏನು?

    ಕೇವಲ ನಿರ್ದೇಶಕರಿಗೆ ಮಾತ್ರವಲ್ಲ, ಸಹ ನಿರ್ದೇಶನದ ತಂಡಕ್ಕೂ ಕೂಡ ದುಬಾರಿ ಬೈಕ್ ಕೊಡಿಸಿದ್ದಾರೆ ಎನ್ನಲಾಗುತ್ತಿದೆ. ಒಟ್ಟು 18 ಜನರಿಗೆ ಈ ಬೈಕ್ ದೊರೆತಿದೆ. ವಿಕ್ರಮ್ ಸಿನಿಮಾ ಗೆಲುವಿಗೆ ಚಿತ್ರತಂಡವೇ ಕಾರಣ ಎನ್ನುವ ಕಾರಣಕ್ಕಾಗಿ ಇಂಥದ್ದೊಂದು ಉಡುಗೊರೆಯನ್ನು ಕಮಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶ್ವದಾದ್ಯಂತ ಚಿತ್ರಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ಅಲ್ಲದೇ, ಕರ್ನಾಟಕದಲ್ಲೂ ಈ ಸಿನಿಮಾ ಚೆನ್ನಾಗಿಯೇ ದುಡ್ಡು ಮಾಡಿದೆ.

  • ಕಮಲ್ ಹಾಸನ್ ಸಿನಿಮಾ ಮುಂದೆ ಅಕ್ಷಯ್ ಕುಮಾರ್ ಸಾಮ್ರಾಟ್ ಪೃಥ್ವಿರಾಜ್ ಡಲ್ಲೋ ಡಲ್ಲು

    ಕಮಲ್ ಹಾಸನ್ ಸಿನಿಮಾ ಮುಂದೆ ಅಕ್ಷಯ್ ಕುಮಾರ್ ಸಾಮ್ರಾಟ್ ಪೃಥ್ವಿರಾಜ್ ಡಲ್ಲೋ ಡಲ್ಲು

    ಬಾಲಿವುಡ್ ಸಿನಿಮಾಗಳಿಗೆ ಮತ್ತೆ ಸೆಡ್ಡು ಹೊಡೆದು ನಿಂತಿದೆ ದಕ್ಷಿಣದ ಸಿನಿಮಾ. ಬಾಹುಬಲಿ, ಕೆಜಿಎಫ್ 2 ನಂತರ ದಕ್ಷಿಣದ ‘ವಿಕ್ರಮ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿಸಿದೆ. ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ಗಳಿಕೆಯಲ್ಲಿ ವಿಕ್ರಮ್ ಗಿಂತ ಹಿಂದಿದೆ. ಹಾಗಾಗಿ, ಬಿಟೌನ್ ಮತ್ತೊಮ್ಮೆ ಆತಂಕ ಎದುರಿಸಬೇಕಾಗಿದೆ.

    ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಮತ್ತು ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ನಿನ್ನೆ ಒಟ್ಟಿಗೆ ರಿಲೀಸ್ ಆಗಿವೆ. ಎರಡೂ ಸಿನಿಮಾಗಳು ಕೂಡ ಅಷ್ಟೇ ನಿರೀಕ್ಷೆ ಮೂಡಿಸಿದ್ದವು. ಅಕ್ಷಯ್ ಕುಮಾರ್ ಸಿನಿಮಾ ನೋಡಿದ ಅಮಿತ್ ಶಾ, ಯೋಗಿ ಆದಿತ್ಯ ನಾಥ್ ಸೇರಿದಂತೆ ಅನೇಕ ಗಣ್ಯರು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಬಾಕ್ಸ್ ಆಫೀಸಿನಲ್ಲಿ ಈ ಸಿನಿಮಾ ನಿರೀಕ್ಷಿತ ಹಣ ತಂದುಕೊಟ್ಟಿಲ್ಲ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

    ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ರಿಲೀಸ್ ದಿನ ಬಾಕ್ಸ್ ಆಫೀಸು ತುಂಬಿಸಿದೆ. ಕಮಲ್ ಜೊತೆ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ನಂತಹ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿದ್ದರು. ಈ ಮೂವರು ಅಭಿಮಾನಿಗಳು ಸೇರಿ, ವಿಕ್ರಮ್ ಸಿನಿಮಾವನ್ನು ಕೊಂಡಾಡುತ್ತಿದ್ದಾರೆ. ಹಾಗಾಗಿ ಮೊದಲ ದಿನವೇ ಈ ಸಿನಿಮಾ 34 ಕೋಟಿ ಸಂಪಾದಿಸಿದೆ ಎಂದು ಸಿನಿ ಪಂಡಿತರ ಲೆಕ್ಕಾಚಾರ. ಸದ್ಯದಲ್ಲೇ 100 ಕೋಟಿ ಕ್ಲಬ್ ಸೇರಲಿದೆ ಎಂದು ಭವಿಷ್ಯ ಕೂಡ ನುಡಿದಿದ್ದಾರೆ.

    ಅಕ್ಷಯ್ ಕುಮಾರ್ ನಟನೆಯ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದ ಮೊದಲ ದಿನದ ಗಳಿಕೆ ಕೇವಲ 11 ಕೋಟಿ ಎನ್ನಲಾಗುತ್ತಿದೆ. ಶನಿವಾರ ಮತ್ತು ಭಾನುವಾರ ಗಳಿಕೆಯಲ್ಲಿ ಚೇತರಿಕೆ ಕಾಣಿಸಬಹುದಾ ಎಂದು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರಂತೆ ನಿರ್ಮಾಪಕರು.

  • ಕಮಲ್ ಹಾಸನ್ ಸಿನಿಮಾ ‘ವಿಕ್ರಮ್’ ರಿಲೀಸ್ : ಕರ್ನಾಟಕದಲ್ಲಿ ಬೈಕಾಟ್ ಎಂದ ಡಬ್ಬಿಂಗ್ ಪರ ಹೋರಾಟಗಾರರು

    ಕಮಲ್ ಹಾಸನ್ ಸಿನಿಮಾ ‘ವಿಕ್ರಮ್’ ರಿಲೀಸ್ : ಕರ್ನಾಟಕದಲ್ಲಿ ಬೈಕಾಟ್ ಎಂದ ಡಬ್ಬಿಂಗ್ ಪರ ಹೋರಾಟಗಾರರು

    ನಿನ್ನೆಯಷ್ಟೇ ಬೆಂಗಳೂರಿಗೆ ಕಮಲ್ ಹಾಸನ್ ಆಗಮಿಸಿ, ತಮ್ಮ ‘ವಿಕ್ರಮ್’ ಸಿನಿಮಾದ ಭರ್ಜರಿ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ಅವರು ಕನ್ನಡ ಮತ್ತು ಕರ್ನಾಟಕದ ಜೊತೆಗಿನ ಸಂಬಂಧವನ್ನು ಹಂಚಿಕೊಂಡರು. ಡಾ.ರಾಜ್ ಕುಮಾರ್ ತಮಗೆಷ್ಟು ಸ್ಫೂರ್ತಿ ಎಂದೆಲ್ಲ ಮಾತನಾಡಿದರು. ಅಲ್ಲದೇ, ಅವರು ರಾಮಾ ಭಾಮಾ ಶಾಮಾ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಕುರಿತು ಮಾತನಾಡಿದರು. ಇದನ್ನೂ ಓದಿ : ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು

    ಇಂದು ಕಮಲ್ ಹಾಸನ್ ನಟಿಸಿ, ನಿರ್ಮಾಣ ಮಾಡಿರುವ ‘ವಿಕ್ರಮ್ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ನೂರಾರು ಸ್ಕ್ರೀನ್ ಗಳಲ್ಲಿ ತೆರೆಕಂಡಿದೆ. ಆದರೆ, ಈ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿ ರಿಲೀಸ್ ಮಾಡಿಲ್ಲ ಎನ್ನುವ ಕಾರಣಕ್ಕಾಗಿ ಡಬ್ಬಿಂಗ್ ಪರ ಹೋರಾಟಗಾರರು ‘ಬೈಕಾಟ್ ವಿಕ್ರಮ್’ ಅಭಿಯಾನವನ್ನು ಶುರು ಮಾಡಿದ್ದಾರೆ. ಇದನ್ನೂ ಓದಿ : ಉಪೇಂದ್ರ ನಿರ್ದೇಶಿಸಿ, ನಟಿಸಲಿರುವ ಸಿನಿಮಾಗೆ ಮುಹೂರ್ತ : ಹಣೆ ಮೇಲೆ ಟೈಟಲ್ ಹಾಕಿಕೊಂಡು ಬಂದ ಚಿತ್ರತಂಡ

    ನಿನ್ನೆಯಿಂದಲೇ ಕೆಲವು ಡಬ್ಬಿಂಗ್ ಪರ ಹೋರಾಟಗಾರರು ವಿಕ್ರಮ್ ಸಿನಿಮಾದ ಪೋಸ್ಟರ್ ಮೇಲೆ ಬೈಕಾಟ್ ವಿಕ್ರಮ್ ಎಂದು ಬರೆಯಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚುತ್ತಿದ್ದಾರೆ. ನೀವು ಕನ್ನಡದಲ್ಲಿ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡದೇ ಇದ್ದರೆ, ನಾವು ಈ ಚಿತ್ರವನ್ನೇ ನೋಡುವುದಿಲ್ಲ ಎಂದು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಇದನ್ನೂ ಓದಿ : ಕನ್ನಡದ ಬಹುತೇಕ ದಿಗ್ಗಜರ ಜೊತೆ ನಟಿಸಿರುವ ನಟ ಉದಯ್ ಹುತ್ತಿನಗದ್ದೆ ನಿಧನ

    ಈ ಕುರಿತು ವಿತರಕರಾಗಲಿ ಅಥವಾ ಕಮಲ್ ಹಾಸನ್ ಆಗಲಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ, ವಿಕ್ರಮ್ ಸಿನಿಮಾ ಕರ್ನಾಟಕದಲ್ಲಿ ತಮಿಳು ಭಾಷೆಯಲ್ಲೇ ರಿಲೀಸ್ ಆಗಿದ್ದು, ಒಂದೊಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಕಮಲ್ ಅಭಿಮಾನಿಗಳು ಥಿಯೇಟರ್ ಮುಂದೆ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.

  • ಬಾಲಿವುಡ್ ನಿದ್ದೆ ಕೆಡಿಸಿದ ಮತ್ತೊಂದು ದಕ್ಷಿಣದ ಸಿನಿಮಾ : ರಿಲೀಸ್ ಗೂ ಮುನ್ನ ಕೋಟಿ ಕೋಟಿ ಬಾಚಿಕೊಂಡ ಕಮಲ್ ಹಾಸನ್

    ಬಾಲಿವುಡ್ ನಿದ್ದೆ ಕೆಡಿಸಿದ ಮತ್ತೊಂದು ದಕ್ಷಿಣದ ಸಿನಿಮಾ : ರಿಲೀಸ್ ಗೂ ಮುನ್ನ ಕೋಟಿ ಕೋಟಿ ಬಾಚಿಕೊಂಡ ಕಮಲ್ ಹಾಸನ್

    ದೇ ಶುಕ್ರವಾರ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ರಿಲೀಸ್ ಆಗುತ್ತಿದೆ. ಬಿಡುಗಡೆಗೂ ಮುನ್ನ ಈ ಸಿನಿಮಾ ಕೋಟಿ ಕೋಟಿ ಬಾಚಿಕೊಂಡಿದೆ ಎಂದು ಬಾಕ್ಸ್ ಆಫೀಸ್ ರಿಪೋರ್ಟ್ ಹೇಳುತ್ತಿದೆ. ಹೀಗಾಗಿ ದಕ್ಷಿಣದ ಸಿನಿಮಾವೊಂದು ಮತ್ತೆ ಬಾಲಿವುಡ್ ಮಂದಿಯನ್ನು ನಿದ್ದೆಗೆಡಿಸಿದೆ. ಆರ್.ಆರ್.ಆರ್ ಮತ್ತು ಕೆಜಿಎಫ್ 2 ನಂತರ ವಿಕ್ರಮ್ ಕೂಡ ಬಾಕ್ಸ್ ಆಫೀಸಿನಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಅವಮಾನ

    ಕಮಲ್ ಹಾಸನ್, ವಿಜಯ್ ಸೇತು ಪತಿ ಮತ್ತು ಫಾಸಿಲ್ ಕಾಂಬಿನೇಷನ್ ನ ಸಿನಿಮಾ ಇದಾಗಿದ್ದರಿಂದ ಸಿನಿಮಾ ರಿಲೀಸ್ ಗೂ ಮುನ್ನ 250 ಕೋಟಿ ರೂಪಾಯಿ ಬಾಚಿದೆಯಂತೆ. ಸಿನಿಮಾ ಬಿಡುಗಡೆಗೆ ಇನ್ನೂ ಎರಡು ದಿನ ಇರುವಾಗಲೇ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಬೋರ್ಡ್ ಕೂಡ ಬಿದ್ದಿದೆಯಂತೆ. ತಮಿಳು ನಾಡಿನಲ್ಲಿ ಮೊದಲೆರಡು ದಿನಗಳ ಟಿಕೆಟ್ ಗಳು ಖಾಲಿ ಖಾಲಿ. ಹಿಂದಿಯಲ್ಲೂ ಸಿನಿಮಾ ಕೂಡ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ.  ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ಈಗಾಗಲೇ ಈ ಚಿತ್ರದ ಬಗ್ಗೆ ತಮಿಳಿನಲ್ಲಿ ವಿರೋಧವೂ ಕೇಳಿ ಬಂದಿದೆ. ಅಲ್ಲದೇ, ಸೆನ್ಸಾರ್ ಮಂಡಳಿಯು ಸಿನಿಮಾದಲ್ಲಿ ಹಿಂಸೆ ಇದ್ದ ಕಾರಣದಿಂದಾಗಿ 13 ಕಡೆ ಕತ್ತರಿ ಪ್ರಯೋಗ ಮಾಡಿದೆ. ಈ ಎಲ್ಲದರ ಮಧ್ಯಯೂ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆಯಂತೆ. ಹಾಗಾಗಿ ನಾಲ್ಕು ಸಾವಿರ ಚಿತ್ರಮಂದಿರಗಳಲ್ಲಿ ವಿಕ್ರಮ್ ಸಿನಿಮಾ ತೆರೆ ಕಾಣುತ್ತಿದೆ.

  • ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ವಾರ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಜೂ.3 ರಂದು ತೆರೆ ಕಾಣುತ್ತಿರುವ ಈ ಸಿನಿಮಾವನ್ನು ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ ನಿನ್ನೆಯಷ್ಟೇ ಚಿತ್ರಕ್ಕೆ ಸೆನ್ಸಾರ್ ಆಗಿದೆ. ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಈ ಸರ್ಟಿಫಿಕೇಟ್ ಸಿಗಲು ಕಮಲ್ ಹಾಸನ್ ಅಂಡ್ ಟೀಮ್ ಮಾಡಿದ ಸಾಹಸ ಅಷ್ಟಿಷ್ಟಲ್ಲ. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ

    ವಿಕ್ರಮ್ ಸಿನಿಮಾದಲ್ಲಿ ಹಿಂಸೆಯಲ್ಲಿ ವೈಭವೀಕರಿಸಲಾಗಿದೆ ಎನ್ನುವ ಮಾಹಿತಿ ಇದೆ. ಹಲವು ದೃಶ್ಯಗಳಲ್ಲಿ ತುಂಬಾ ಹಿಂಸೆಯನ್ನು ತೋರಿಸಿದ್ದಾರಂತೆ. ಹಾಗಾಗಿ 13 ಕಡೆ ಸಿನಿಮಾಗೆ ಕತ್ತರಿ ಹಾಕಲು ಸೆನ್ಸಾರ್ ಮಂಡಳಿ ಸೂಚಿಸಿತ್ತು ಎನ್ನಲಾಗುತ್ತಿದೆ. ಸೆನ್ಸಾರ್ ಮಂಡಳಿಯು ಸೂಚಿಸಿದ ಎಲ್ಲ ಸಲಹೆಗಳನ್ನು ಚಿತ್ರತಂಡ ಸ್ವೀಕರಿಸಿದ ನಂತರವೇ ಯು/ಎ ಪ್ರಮಾಣ ಪತ್ರವನ್ನು ನೀಡಲಾಗಿದೆ. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ

    ಈಗಾಗಲೇ ವಿಕ್ರಮ್ ಸಿನಿಮಾದ ಬಗ್ಗೆ ಕಮಲ್ ಹಾಸನ್ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ವಿಜಯ್ ಸೇತುಪತಿ ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಸಿನಿಮಾದಲ್ಲಿದೆ. ಅಲ್ಲದೇ, ರಜನಿಕಾಂತ್ ಸೇರಿದಂತೆ ಹಲವು ಕಲಾವಿದರನ್ನು ಸಿನಿಮಾ ವೀಕ್ಷಣೆಗೆ ಕಮಲ್ ಆಹ್ವಾನಿಸಿದ್ದಾರೆ. ಹಾಗಾಗಿ ಸಹಜವಾಗಿಯೇ ಚಿತ್ರದ ಬಗ್ಗೆ ಕುತೂಹಲ ಮೂಡಿದೆ.  ಇದನ್ನೂ ಓದಿ : ‘ಮಾ ಇಷ್ಟಂ’ ಸಿನಿಮಾಗೆ ತಡೆಯಾಜ್ಞೆ ತಂದವರ ವಿರುದ್ಧವೇ ನಕಲಿ ಸಹಿ ದೂರು ನೀಡಿದ ವರ್ಮಾ

    ಫಹಾದ್ ಫಾಸಿಲ್, ಕಮಲ್ ಹಾಸನ್ ಮತ್ತು ವಿಜಯ್ ಸೇತುಪತಿ ಮೂವರು ಕಾಂಬಿನೇಷನ್ ನ ಮೊದಲ ಚಿತ್ರ ಇದಾಗಿದ್ದು, ಮೂವರು ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಸ್ವತಃ ಕಮಲ್ ಹಾಸನ್ ಅವರೇ ಈ ಚಿತ್ರದ ನಿರ್ಮಾಪಕರು ಕೂಡ ಆಗಿದ್ದಾರೆ.

  • ರಜನಿಕಾಂತ್ ಮನೆಯಲ್ಲಿ ಕಾಣಿಸಿಕೊಂಡ ಕಮಲ್ ಹಾಸನ್: ಕುತೂಹಲ ಮೂಡಿಸಿದ ಭೇಟಿ

    ರಜನಿಕಾಂತ್ ಮನೆಯಲ್ಲಿ ಕಾಣಿಸಿಕೊಂಡ ಕಮಲ್ ಹಾಸನ್: ಕುತೂಹಲ ಮೂಡಿಸಿದ ಭೇಟಿ

    ರಡು ದಿನಗಳ ಹಿಂದೆಯಷ್ಟೇ ‘ನಾನು ಎಂದಿಗೂ ರಜನಿಕಾಂತ್ ಅವರನ್ನು ದ್ವೇಷಿಸಿಲ್ಲ. ಅವರು ನನ್ನ ವೈರಿಯಲ್ಲ’ ಎಂದು ಕಮಲ್ ಹಾಸನ್ ಹೇಳಿದ ಬೆನ್ನೆಲ್ಲೇ, ರಜನಿ ಮನೆಗೆ ಕಮಲ್ ಹೋಗಿದ್ದಾರೆ. ಮನೆಗೆ ಬಂದ ಅತಿಥಿಯನ್ನು ಆತ್ಮೀಯವಾಗಿಯೇ ಬರಮಾಡಿಕೊಂಡಿದ್ದಾರೆ ರಜನಿ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ : ಸದ್ದಿಲ್ಲದೇ ಶೂಟಿಂಗ್ ಮುಗಿಸಿದ ಮಂಸೋರೆ ನಿರ್ದೇಶನದ ‘19.20.21’ ಸಿನಿಮಾ

    ರಜನಿಕಾಂತ್ ಮತ್ತು ಕಮಲ್ ಹಾಸನ್ ಒಟ್ಟೊಟ್ಟಿಗೆ ಸಿನಿಮಾ ರಂಗದಲ್ಲಿ ಬದುಕು ಕಟ್ಟಿಕೊಂಡವರು. ಒಟ್ಟೊಟ್ಟಿಗೆ ಸಿನಿಮಾ ಮಾಡಿದವರು. ಒಂದೇ ದಿನಕ್ಕೆ ಇಬ್ಬರೂ ಸಿನಿಮಾಗಳನ್ನು ರಿಲೀಸ್ ಮಾಡಿ ತೊಡೆತಟ್ಟಿದವರು. ಹೀಗಾಗಿ ಇಬ್ಬರ ಫ್ಯಾನ್ಸ್ ಕೂಡ ಆಗಾಗ್ಗೆ ಫ್ಯಾನ್ಸ್ ವಾರ್ ಮಾಡಿದ್ದಿದೆ. ನಮ್ಮಿಬ್ಬರ ಮಧ್ಯೆ ವೈರತ್ವ ಇಲ್ಲವೆಂದು ಇಬ್ಬರೂ ಹೇಳಿಕೊಂಡರೂ, ಅಭಿಮಾನಿಗಳು ಮಾತ್ರ ಅದನ್ನು ನಂಬಲು ತಯಾರಿಲ್ಲ. ಇದನ್ನೂ ಓದಿ : ಒಟಿಟಿಯಲ್ಲೂ ರಾಜಮೌಳಿ ‘RRR’ ದಾಖಲೆ

    ಸದ್ಯ ಕಮಲ್ ಹಾಸನ್ ನಟನೆಯ ‘ವಿಕ್ರಮ್ ‘ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ವಾರವೇ ವಿಶ್ವದಾದ್ಯಂತ ಸಿನಿಮಾ ತೆರೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ರಜನಿಕಾಂತ್ ಮನೆಗೆ ಕಮಲ್ ಹಾಸನ್ ಭೇಟಿ ನೀಡಿದ್ದಾರೆ. ವಿಕ್ರಮ್ ಸಿನಿಮಾ ನೋಡುವಂತೆ ಆಹ್ವಾನ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ರಜನಿ ಅಭಿಮಾನಿಗಳು ಕೂಡ ವಿಕ್ರಮ್ ಸಿನಿಮಾವನ್ನು ನೋಡಬಹುದು ಎನ್ನುವ ಅಂದಾಜಿದೆ. ಇದನ್ನೂ ಓದಿ : ಅಭಿಷೇಕ್ ಅಂಬರೀಶ್ ನಟನೆಯ ಕಾಳಿ ಸಿನಿಮಾ ಫಸ್ಟ್ ಲುಕ್ ರಿಲೀಸ್

    ದಕ್ಷಿಣದಲ್ಲಿ ಕಮಲ್ ನಟನೆಯ ವಿಕ್ರಮ್ ಚಿತ್ರ ರಿಲೀಸ್ ಆಗುತ್ತಿದ್ದರೆ, ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ಅವರ ಸಾಮ್ರಾಟ್ ಫೃಥ್ವಿರಾಜ್ ಸಿನಿಮಾ ಕೂಡ ತೆರೆಗೆ ಬರುತ್ತಿದೆ. ಆ ಸಿನಿಮಾ ಕೂಡ ನಿರೀಕ್ಷೆಯನ್ನು ಹೆಚ್ಚಿಸಿದೆ. ಹೀಗಾಗಿ ಸಹಜವಾಗಿಯೇ ಎರಡೂ ಚಿತ್ರಗಳ ಮಧ್ಯೆ ಪೈಪೋಟಿ ನಡೆಯಲಿದೆ. ಎರಡು ಸಿನಿಮಾಗಳಲ್ಲಿ ಪ್ರೇಕ್ಷಕ ಯಾರಿಗೆ ಒಲಿಯುತ್ತಾನೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

  • ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

    ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

    ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಖ್ಯಾತ ನಟ ಕಮಲ್ ಹಾಸನ್ ಒಟ್ಟಿಗೆ ಸಿನಿಮಾ ರಂಗಕ್ಕೆ ಬಂದವರು. ಅದರಲ್ಲೂ ಅನೇಕ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಅದರಲ್ಲೂ ರಜನಿಯ ಮೊದಲ ಸಿನಿಮಾ ಅಪೂರ್ವ ರಾಗಂಗಳ್ ಚಿತ್ರದಲ್ಲಿ ಕಮಲ್ ಹಾಸನ್ ಕೂಡ ಪಾತ್ರ ನಿರ್ವಹಿಸಿದ್ದಾರೆ. ಇಷ್ಟಿದ್ದೂ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಎನ್ನುವ ಸುದ್ದಿ ಹಲವು ವರ್ಷಗಳಿಂದ ಹರಿದಾಡುತ್ತಿದೆ. ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ

    ರಜನಿ ಮತ್ತು ಕಮಲ್ ಹಾಸನ್ ಸಿನಿಮಾಗಳು ಒಟ್ಟಿಗೆ ರಿಲೀಸ್ ಆದಾಗ, ಇಬ್ಬರ ಅಭಿಮಾನಿಗಳು ಹೊಡೆದಾಡಿಕೊಂಡಿದ್ದುಇದೆ. ಫ್ಯಾನ್ಸ್ ವಾರ್ ಗೆ ಹೆಸರಾದ ನಟರು ಇವರು. ಇಂತಿಪ್ಪ ರಜನಿ ಮತ್ತು ಕಮಲ್ ಹಾಸನ್ ಯಾವತ್ತು ವೈರತ್ವ ಸಾಧಿಸಿಲ್ಲ ಎನ್ನುವುದನ್ನು ಕಮಲ್ ಹಾಸನ್ ಹೇಳಿದ್ದಾರೆ. ಅವರ ವಿಕ್ರಮ್ ಸಿನಿಮಾದ ರಿಲೀಸ್ ಇವೆಂಟ್ ನಲ್ಲಿ ಮಾತನಾಡಿದ ಕಮಲ್ ಹಾಸನ್, ‘ನಾನು ಯಾವತ್ತೂ ರಜನಿಯನ್ನು ವೈರಿ ಎಂದು ಪರಿಗಣಿಸಿಲ್ಲ. ವೃತ್ತಿಯಲ್ಲಿ ಸ್ಪರ್ಧೆ ಇರುವುದು ಸಹಜ’ ಎಂದಿದ್ದಾರೆ. ಇದನ್ನೂ ಓದಿ  : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್

    ಇಂಥದ್ದೇ ಮಾತನ್ನು ರಜನಿಕಾಂತ್ ಕೂಡ ಈ ಹಿಂದೆ ಹೇಳಿದ್ದರು. ‘ಕಮಲ್ ಹಾಸನ್ ಬಗ್ಗೆ ನಾನ್ಯಾಕೆ ವೈರತ್ವ ಬೆಳೆಸಿಕೊಳ್ಳಲಿ? ಅವರು ನನ್ನ ಉತ್ತಮ ಸ್ನೇಹಿತ. ನಾವಿಬ್ಬರೂ ಒಳ್ಳೆಯ ಬಾಂಧವ್ಯ ಹೊಂದಿದ್ದೇವೆ. ವೈರಿ ಅಂತ ಹೇಳ್ತಿರೋದು ಯಾರು? ನಾವು ಯಾವತ್ತಿಗೂ ಸ್ನೇಹವನ್ನು ಬಿಟ್ಟ ಕೊಡುವುದಿಲ್ಲ’ ಎಂದು ಹೇಳಿದ್ದರು.

    ರಜನಿಕಾಂತ್ ಮತ್ತು ಕಮಲ್ ಹಾಸನ್ ಏನೇ ಹೇಳಿದರೂ, ಅಭಿಮಾನಿಗಳು ಮಾತ್ರ ತಮ್ಮ ನಟರೇ ಮೇಲು ಎಂದು ಯಾವಾಗಲೂ ಫ್ಯಾನ್ಸ್ ವಾರ್ ನಡೆಸುತ್ತಲೇ ಇರುತ್ತಾರೆ. ಅಲ್ಲದೇ, ರಾಜಕೀಯ ಭಿನ್ನಾಭಿಪ್ರಾಯಗಳು ಇರುವುದರಿಂದ ಸ್ನೇಹಿತರಾಗಲು ಸಾಧ್ಯವೇ ಇಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

  • ಕಮಲ್ ಹಾಸನ್ ಸಿನಿಮಾದ ಹಾಡಿನಲ್ಲಿ ಕೇಂದ್ರ ಸರಕಾರ ಅಣಕ : ದೂರು ದಾಖಲು

    ಕಮಲ್ ಹಾಸನ್ ಸಿನಿಮಾದ ಹಾಡಿನಲ್ಲಿ ಕೇಂದ್ರ ಸರಕಾರ ಅಣಕ : ದೂರು ದಾಖಲು

    ಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾದ ಹಾಡು ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಬಿಡುಗಡೆ ಆದ ಕೆಲವೇ ಗಂಟೆಗಳಲ್ಲೇ ಈ ಹಾಡು ಸಾಕಷ್ಟು ಸದ್ದು ಮಾಡಿತ್ತು. ‘ಪಾತಾಳ.. ಪಾತಾಳ’ ಎಂಬ ಸಾಹಿತ್ಯದಿಂದ ಶುರುವಾಗುವ ಈ ಗೀತೆಗೆ ಕಂಟಕ ಎದುರಾಗಿದೆ. ಈ ಹಾಡಿನಲ್ಲಿ ಕೇಂದ್ರ ಸರಕಾರವನ್ನು ಅಣಕ ಮಾಡಲಾಗಿದೆ ಎಂಬ ಕಾರಣಕ್ಕಾಗಿ ದೂರು ದಾಖಲಾಗಿದೆ. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

    ಈ ಹಾಡನ್ನು ಸ್ವತಃ ಕಮಲ್ ಹಾಸನ್ ಅವರೇ ಬರೆದಿರುವುದರಿಂದ ಉರಿವ ಬೆಂಕಿಗೆ ತುಪ್ಪ ಹಾಕಿದಂತಾಗಿದೆ. ಅಷ್ಟಕ್ಕೂ ಈ ಹಾಡಿನಲ್ಲಿ ಏನಿದೆ ಎಂದರೆ, ಕೇಂದ್ರ ಸರಕಾರ ಯೋಜನೆ ಮತ್ತು ಕೋವಿಡ್ ನಿಧಿ ಸಂಗ್ರಹದ ಕುರಿತಾಗಿ ನಕಾರಾತ್ಮಕ ಸಾಲುಗಳನ್ನು ಬರೆಯಲಾಗಿದೆ ಎನ್ನುವುದು ಈ ಹಾಡಿನ ಮೇಲಿರುವ ಆರೋಪ. ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    ಖಜಾನೆ ಖಾಲಿ ಖಾಲಿ, ಖಜಾನೆಯಲ್ಲಿ ಹಣವೇ ಇಲ್ಲ. ರೋಗಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಖಜಾನೆ ಖಾಲಿ ಖಾಲಿ. ಅಲ್ಲದೇ, ಕೀ ಕಳ್ಳನ ಬಳಿ ಇದೆ ಎಂದು ಅರ್ಥ ಬರುವ ಸಾಲುಗಳನ್ನು ಹಾಡಾಗಿಸಿದ್ದಾರೆ ಎಂದು ಚೆನ್ನೈನ ಕೊರುಕ್ಕುಪೆಟ್ಟೈ ನಿವಾಸಿಯಾದ ಸೆಲ್ವಂ ಅನ್ನುವವರು ಕಮಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

    ಮೇ 12 ರಂದು ಚೆನ್ನೈ ಪೊಲೀಸ್ ಕಮಿಷ್ನರ್ ಬಳಿ ದೂರು ದಾಖಲಿಸಿರುವ ಸೆಲ್ವಂ, ಪೊಲೀಸ್ ನವರು ಅಗತ್ಯ ಕ್ರಮ ತಗೆದುಕೊಳ್ಳದೇ ಇದ್ದರೆ, ತಾವು ಮದರಾಸ್ ಹೈಕೋರ್ಟ್ ಮೊರೆ ಹೋಗುವುದಾಗಿಯೂ ತಿಳಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ನೋಡುಗರ ಸಂಖ್ಯೆ ಮತ್ತೆ ಹೆಚ್ಚಿದೆ. ಈಗಾಗಲೇ 15 ಮಿಲಿಯನ್ ಗೂ ಹೆಚ್ಚು ಜನರು ಈ ಹಾಡನ್ನು ವೀಕ್ಷಿಸಿದ್ದಾರೆ. ಇದನ್ನೂ ಓದಿ : ಸೀಮಂತದ ಖುಷಿಯಲ್ಲಿ ಸಂಜನಾ: ತಿಂಗಳಾಂತ್ಯಕ್ಕೆ ಮಡಿಲಿಗೆ ಮಗುವಿನ ಆಗಮನ

    ಜೂನ್ 3 ರಂದು ತೆರೆಗೆ ಬರಲಿರುವ ವಿಕ್ರಮ್ ಸಿನಿಮಾ ಈಗಾಗಲೇ ನಿರೀಕ್ಷೆ ಹೆಚ್ಚಿಸಿದೆ. ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾಗೆ ಅನಿರುದ್ಧ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶ್ವರೂಪಮ್ 2 ಸಿನಿಮಾದ ನಾಲ್ಕು ವರ್ಷದ ನಂತರ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ನಿರೀಕ್ಷೆಯಂತೂ ಹೆಚ್ಚಿದೆ.