Tag: vikki varun

  • ಡಾ.ರಾಜ್ ಮೊಮ್ಮಗಳ `ಕಾಲಾಪತ್ಥರ್’ ಚಿತ್ರದ ಫಸ್ಟ್ ಲುಕ್ ರಿವೀಲ್: ಗಂಗಾ ಪಾತ್ರದಲ್ಲಿ ಧನ್ಯ ಮಿಂಚಿಂಗ್

    ಡಾ.ರಾಜ್ ಮೊಮ್ಮಗಳ `ಕಾಲಾಪತ್ಥರ್’ ಚಿತ್ರದ ಫಸ್ಟ್ ಲುಕ್ ರಿವೀಲ್: ಗಂಗಾ ಪಾತ್ರದಲ್ಲಿ ಧನ್ಯ ಮಿಂಚಿಂಗ್

    `ನಿನ್ನ ಸನಿಹಕೆ’ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟ ನಟಿ ಧನ್ಯ ರಾಮ್‌ಕುಮಾರ್. ಮೊದಲ ಚಿತ್ರದಲ್ಲೇ ಭರವಸೆಯ ನಟಿಯಾಗಿ ತಾನೆಂತಹ ಕಲಾವಿದೆ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಬಳಿಕ ಧನ್ಯ ರಾಮ್‌ಕುಮಾರ್ ಮುಂದೆ ಅದ್ಯಾವ ಚಿತ್ರದಲ್ಲಿ ಅಭಿನಯಿಸುತ್ತಾರೆ ಎಂಬ ಪ್ರಶ್ನೆಗೆ ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ವಿಕ್ಕಿ ವರುಣ್ ನಿರ್ದೇಶಿಸಿ, ನಟಿಸುತ್ತಿರುವ `ಕಾಲಾಪತ್ಥರ್’ ಚಿತ್ರದಲ್ಲಿ ಧನ್ಯ ರಾಮ್‌ಕುಮಾರ್ ನಾಯಕಿಯಾಗಿ ನಟಿಸಿದ್ದಾರೆ. ವರನಟ ಡಾ.ರಾಜ್‌ಕುಮಾರ್ ಅವರ ಹುಟ್ಟು ಹಬ್ಬದ ಶುಭಸಂದರ್ಭದಲ್ಲಿ ನಟಿ ಧನ್ಯ ಅವರ ಎರಡನೇ ಚಿತ್ರ `ಕಾಲಾಪತ್ಥರ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.

    ಶ್ರೀಮತಿ ಗೀತಾ ಶಿವರಾಜ್‌ಕುಮಾರ್ ಅರ್ಪಣೆಯಲ್ಲಿ, ಭುವನ್ ಮೂವೀಸ್ ಪರ್ಪಲ್ ಫೆದರ್ಸ್ ನಿರ್ಮಾಣದಲ್ಲಿ `ಕಾಲಾಪತ್ಥರ್’ ಸಿನಿಮಾ ಮೂಡಿ ಬಂದಿದ್ದು, ಡಾ.ರಾಜ್‌ಕುಮಾರ್ ಹುಟ್ಟುಹಬ್ಬದಂದು ನಾಯಕಿ ಧನ್ಯ ಅವರ ಗಂಗಾ ಪಾತ್ರದ ಲುಕ್ ರಿವೀಲ್ ಮಾಡಿದೆ ಚಿತ್ರತಂಡ. ಹಳ್ಳಿ ಹುಡುಗಿಯ ಗಂಗಾ ಪಾತ್ರದಲ್ಲಿ ಧನ್ಯ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

    ಇದೊಂದು ಪಕ್ಕಾ ಕರ್ಮಷಿಯಲ್ ಆಕ್ಷನ್ ಕಂಟೆಂಟ್ ಜತೆ ಮುದ್ದಾದ ಲವ್ ಸ್ಟೋರಿಯಿರೋ `ಕಾಲಾಪತ್ಥರ್’ ಚಿತ್ರದಲ್ಲಿ ಧನ್ಯ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕನ ಬದುಕಿನಲ್ಲಿ ಗಂಗಾ ಪಾತ್ರ ಎನೆಲ್ಲಾ ತಿರುವು ತಂದು ಕೊಡುತ್ತೆ ಜತೆಗೆ ಮಧ್ಯಮ ವರ್ಗದ ಗಟ್ಟಿ ಹೆಣ್ಣು ಮಗಳಾಗಿ ಧನ್ಯ ರಾಮ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಯಾಕಣ್ಣ ನನ್ನೊಬ್ಬಳನ್ನೇ ಬಿಟ್ಟು ಹೋದೆ: ರಾಜ್‌ ನೆನೆದು ತಂಗಿ ಕಣ್ಣೀರು

    `ಕಾಲಾಪತ್ಥರ್’ ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಇದೇ ಜೂನ್‌ಗೆ ತೆರೆಗೆ ಅಬ್ಬರಿಸಲಿದೆ. ಸತ್ಯಪ್ರಕಾಶ್ ಬರೆದಿರುವ ಗಟ್ಟಿ ಕಥೆಯ ಮೂಲಕ ಕಮಾಲ್ ಮಾಡಲು ವಿಕ್ಕಿ ವರುಣ್ ಮತ್ತು ಸ್ಯಾಂಡಲ್‌ವುಡ್ ಬ್ಯೂಟಿ ಧನ್ಯ ರಾಮ್‌ಕುಮಾರ್ ಬರುತ್ತಿದ್ದಾರೆ. ಈ ಹೊಸ ಜೋಡಿಯ ಕಥೆ ನೋಡಲು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  • ಡಾ.ರಾಜ್ ಮೊಮ್ಮಗಳಿಗೆ `ಕೆಂಡಸಂಪಿಗೆ’ ಹೀರೋ ಆ್ಯಕ್ಷನ್ ಕಟ್

    ಡಾ.ರಾಜ್ ಮೊಮ್ಮಗಳಿಗೆ `ಕೆಂಡಸಂಪಿಗೆ’ ಹೀರೋ ಆ್ಯಕ್ಷನ್ ಕಟ್

    `ಕೆಂಡಸಂಪಿಗೆ’ ಮತ್ತು `ಕಾಲೇಜ್ ಕುಮಾರ’ ಚಿತ್ರದ ಯಶಸ್ಸಿನ ನಂತರ ನಟ ವಿಕ್ಕಿ ವರುಣ್ `ಕಾಲಾಪತ್ಥರ್’ ಔಟ್ ಆಂಡ್ ಔಟ್ ಕರ್ಮಷಿಯಲ್ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದ ಮೂಲಕ ವಿಕ್ಕಿ ವರುಣ್ ನಿರ್ದೇಶಕನಾಗಿ ಭಡ್ತಿ ಪಡೆದಿದ್ದಾರೆ. ಇದೀಗ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.

    ಇವರೆಗೂ ನಾಯಕನಾಗಿ ಗುರುತಿಸಿಕೊಂಡಿದ್ದ ವಿಕ್ಕಿ ವರುಣ್ ನಿರ್ದೇಶಕನಾಗಿ `ಕಾಲಾಪತ್ಥರ್’ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದೀಗ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಿದೆ. ಡಿಫರೆಂಟ್ ಗೆಟಪ್‌ನಲ್ಲಿ ವಿಕ್ಕಿ ವರುಣ್ ಕಾಣಿಸಿಕೊಂಡಿದ್ದಾರೆ. ವಿಕ್ಕಿ ವರುಣ್ ಸಖತ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೈಟಲ್ ಮತ್ತು ವಿಕ್ಕಿ ಲುಕ್ ನೋಡಿದ್ರೆ ಮತ್ತಷ್ಟು ಕುತೂಹಲ ಹೆಚ್ಚಿಸುತ್ತಿದೆ.

    ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಅರ್ಪಣೆಯಲ್ಲಿ, ಭುವನ್ ಮೂವೀಸ್ ಪರ್ಪಲ್ ಫೆದರ್ಸ್ ನಿರ್ಮಾಣದಲ್ಲಿ `ಕಾಲಾಪತ್ಥರ್’ ಚಿತ್ರ ಮೂಡಿ ಬರುತ್ತಿದ್ದು, ಇದೊಂದು ಪಕ್ಕಾ ಕರ್ಮಷಿಯಲ್ ಆಕ್ಷನ್ ಕಂಟೆAಟ್ ಜತೆ ಮುದ್ದಾದ ಲವ್ ಸ್ಟೋರಿಯನ್ನ ನೋಡಬಹುದಾಗಿದೆ. ಮಧ್ಯಮ ವರ್ಗದ ಹುಡುಗನೊಬ್ಬ ಸಡನ್ ಆಗಿ ಸ್ಟಾರ್ ಆಗಿ ಮಿಂಚಿದ್ರೆ, ಆ ಸ್ಟಾರ್ ಗಿರಿ ಹೇಗೆ ನಿರ್ವಹಿಸುತ್ತಾನೆ ಏನೆಲ್ಲಾ ಕಷ್ಟಗಳನ್ನ ಎದುರಿಸುತ್ತಾನೆ ಎಂಬುದೇ ಕಥೆಯಾಗಿದ್ದು, ವಿಕ್ಕಿ ವರುಣ್ ನಾಯಕಿಯಾಗಿ ಧನ್ಯ ರಾಮ್‌ಕುಮಾರ್ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ವರನಟ ಡಾ. ರಾಜ್‌ಕುಮಾರ್ ಅವರ ಹುಟ್ಟು ಹಬ್ಬದಂದು ನಾಯಕಿ ಧನ್ಯ ಪಾತ್ರದ ಲುಕ್ ಕೂಡ ರಿವೀಲ್ ಆಗಲಿದೆ. ಇದನ್ನೂ ಓದಿ: ಶೂಟಿಂಗ್ ವೇಳೆ ಅವಘಡ, ನಟ ಧನ್ವೀರ್ ಗೌಡ ಕೈಗೆ ಪೆಟ್ಟು

    `ಕಾಲಾಪತ್ಥರ್’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೇ ಜೂನ್‌ಗೆ ತೆರೆಗೆ ಅಬ್ಬರಿಸಲಿದೆ. ಸತ್ಯಪ್ರಕಾಶ್ ಬರೆದಿರುವ ಗಟ್ಟಿ ಕಥೆಯ ಮೂಲಕ ಕಮಾಲ್ ಮಾಡಲು ವಿಕ್ಕಿ ವರುಣ್ ಮತ್ತು ಸ್ಯಾಂಡಲ್‌ವುಡ್ ಬ್ಯೂಟಿ ಧನ್ಯ ರಾಮ್‌ಕುಮಾರ್ ಬರುತ್ತಿದ್ದಾರೆ. ಈ ಹೊಸ ಜೋಡಿಯ ಕಥೆ ನೋಡಲು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.