Tag: vikki kaushal

  • ಕೊನೆಗೂ ಸಿಹಿ ಸುದ್ದಿ ಕೊಟ್ರು ವಿಕ್ಕಿ ಕೌಶಲ್-‌ ಕತ್ರಿನಾ ಕೈಫ್‌ ದಂಪತಿ

    ಕೊನೆಗೂ ಸಿಹಿ ಸುದ್ದಿ ಕೊಟ್ರು ವಿಕ್ಕಿ ಕೌಶಲ್-‌ ಕತ್ರಿನಾ ಕೈಫ್‌ ದಂಪತಿ

    ಬಾಲಿವುಡ್‌ನ(Bollywood)  ಸ್ಟಾರ್ ಜೋಡಿ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vikki Kaushal) ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷವಾಗಿದೆ. ಈ ಬೆನ್ನಲ್ಲೇ ಕತ್ರಿನಾ ದಂಪತಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ವಿಕ್ಕಿ ಕೌಶಲ್ ಮತ್ತು ಕತ್ರಿನಾ ಪ್ರೀತಿಸಿ, ಕಳೆದ ವರ್ಷ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ (Wedding) ಒಂದು ವರ್ಷದ ಸಂಭ್ರಮದಲ್ಲಿರುವ ಈ ಜೋಡಿಯ ಬಗ್ಗೆ ಈಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ವಿಕ್ಕಿ ಕೌಶಲ್ ತಂದೆಯಾಗುತ್ತಿದ್ದಾರಾ ಎಂಬ ಸುದ್ದಿ ಹರಿದಾಡುತ್ತಿದೆ.

    ಇತ್ತೀಚೆಗೆ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ವಿಕ್ಕಿ ಕೌಶಲ್ ದಂಪತಿ ಭೇಟಿ ಕೊಟ್ಟಿದ್ದರು. ಈ ವೇಳೆ ಕತ್ರಿನಾ ಅವರ ಔಟ್ ಲುಕ್ ನೋಡಿ ನಟಿ ಪ್ರೆಗ್ನೆಂಟ್ (Pregnant) ಆಗಿದ್ದಾರೆ. ಹಾಗಾಗಿ ದೇವಸ್ಥಾನಕ್ಕೆ ಈ ಜೋಡಿ ಆಗಮಸಿದೆ ಎಂದು ಹೇಳಲಾಗುತ್ತಿದೆ. ಫೋಟೋದಲ್ಲಿ ನಟಿಯ ಬೇಬಿ ಬಂಪ್ ಕಾಣಿಸುತ್ತಿದೆ. ಹಾಗಾಗಿ ಅನೇಕರು ಪ್ರೆಗ್ನೆಂಟ್ ಎಂದೇ ಹೇಳುತ್ತಿದ್ದಾರೆ. ಇನ್ನೂ ಕತ್ರಿನಾ ಪ್ರೆಗ್ನೆನ್ಸಿ ವಿಚಾರವನ್ನ ಅಧಿಕೃತವಾಗಿ ಈ ಜೋಡಿ ಹೇಳುವವೆರೆಗೂ ಕಾದುನೋಡಬೇಕಿದೆ. ಇದನ್ನೂ ಓದಿ: ಟಿಡಿಪಿ ಪಕ್ಷದ ರಾಜಕಾರಣಿ ಮೊಮ್ಮಗಳ ಜೊತೆ ಶರ್ವಾನಂದ ಎಂಗೇಜ್‌ಮೆಂಟ್

    ಸಿದ್ಧಿ ವಿನಾಯಕನ ಸನ್ನಿಧಿಯಲ್ಲಿ ಈ ಜೋಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೊಸ ವರ್ಷ ಆಚರಿಸಲು ರಾಜಸ್ತಾನಕ್ಕೆ ಹಾರಿದ ವಿಕ್ಕಿ- ಕತ್ರಿನಾ ಕೈಫ್

    ಹೊಸ ವರ್ಷ ಆಚರಿಸಲು ರಾಜಸ್ತಾನಕ್ಕೆ ಹಾರಿದ ವಿಕ್ಕಿ- ಕತ್ರಿನಾ ಕೈಫ್

    ಬಾಲಿವುಡ್ (Bollywood) ಸ್ಟಾರ್ ಜೋಡಿ ವಿಕ್ಕಿ ಕೌಶಲ್ (Vikki Kaushal) ಮತ್ತು ಕತ್ರಿನಾ ಕೈಫ್ (Katrina Kaif) ರಾಜಸ್ತಾನ ಪ್ರವಾಸಕ್ಕೆ ಹೋಗಿದ್ದಾರೆ. ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ, ರಾಜಸ್ತಾನಕ್ಕೆ ಹಾರಿದ್ದಾರೆ.

    ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಸಾಕಷ್ಟು ವರ್ಷ ಡೇಟಿಂಗ್‌ನಲ್ಲಿದ್ದರು. ಕಳೆದ ಡಿಸೆಂಬರ್ 9ರಂದು 2021ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಮದುವೆಯಾಗಿ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಹೊಸ ವರ್ಷ ಬರಮಾಡಿಕೊಳ್ಳಲು ರಾಜಸ್ಥಾನದ ಬಾಲಿ ಜಿಲ್ಲೆಯ ಜವಾಯಿಗೆ ತೆರಳಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್‌ನಿಂದ ಹೊರ ಬಂದ್ಮೇಲೆ ಸಾನ್ಯನ ತಬ್ಬಿಕೊಳ್ತೀನಿ: ರೂಪೇಶ್‌ ಶೆಟ್ಟಿ

    View this post on Instagram

     

    A post shared by Katrina Kaif (@katrinakaif)

    ಬಾಲಿಯ ಸುಂದರ ತಾಣದಲ್ಲಿ ವಿಕ್ಕಿ ಮತ್ತು ಕತ್ರಿನಾ ಎಂಜಾಯ್ ಮಾಡ್ತಿದ್ದಾರೆ. ಪ್ರವಾಸದ ಸುಂದರ ಫೋಟೋಗಳನ್ನ ಕತ್ರಿನಾ ಶೇರ್ ಮಾಡಿ, ಸೋ ಮ್ಯಾಜಿಕಲ್ ಎಂದು ಬರೆದುಕೊಂಡಿದ್ದಾರೆ.

    ಇನ್ನೂ ವಿಕ್ಕಿ ಮತ್ತು ಕತ್ರಿನಾ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸಾಕಷ್ಟು ಬಾರಿ ಕತ್ರಿನಾ ಕೈಫ್, ಪ್ರೆಗ್ನೆನ್ಸಿ ವಿಚಾರವಾಗಿ ಸುದ್ದಿಯಾಗುತ್ತಿದ್ದರು. ಸದ್ಯ ಪತಿ ವಿಕ್ಕಿ ಜೊತೆ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ: ಠಾಣೆ ಮೆಟ್ಟಿಲೇರಿದ ಕತ್ರಿನಾ ದಂಪತಿ

    ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ: ಠಾಣೆ ಮೆಟ್ಟಿಲೇರಿದ ಕತ್ರಿನಾ ದಂಪತಿ

    ಬಾಲಿವುಡ್‌ನ ಮುದ್ದಾದ ಜೋಡಿಗಳಲ್ಲಿ ಒಂದಾಗಿರುವ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್‌ಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಬಂದ ಬೆನ್ನಲ್ಲೇ ಕತ್ರಿನಾ ದಂಪತಿ ಮುಂಬೈನ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಪರಿಚಿತನ ವಿರುದ್ಧ ದೂರು ದಾಖಲಿಸಿದ್ದಾರೆ.

    ಕತ್ರಿನಾ ಕೈಫ್ ಹುಟ್ಟುಹಬ್ಬವನ್ನು ವಿದೇಶದಲ್ಲಿ ಗ್ರ್ಯಾಂಡ್‌ ಆಗಿ ಆಚರಿಸಿಕೊಂಡಿದ್ದರು. ವಿಕ್ಕಿ ಕೌಶಲ್ ಮತ್ತು ತನ್ನ ಕುಟುಂಬದ ಜತೆ ಬರ್ತಡೇ ಖುಷಿಯಿಂದ ಸೆಲೆಬ್ರೇಟ್ ಮಾಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಬೆನ್ನಲ್ಲೇ ಕತ್ರಿನಾ ದಂಪತಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆಯ ಮೆಸೇಜ್ ಮತ್ತು ಕರೆ ಬಂದಿದ್ದು, ಈ ಕುರಿತು ಕತ್ರಿನಾ ಮತ್ತು ವಿಕ್ಕಿ ಕೌಶಲ್ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ:ವಿನೋದ್ ಪ್ರಭಾಕರ್ ನಟನೆಯ ‘ಲಂಕಾಸುರ’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್

    ಇತ್ತೀಚೆಗಷ್ಟೇ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಕರೆ ಬಂದಿತ್ತು. ಅವರಿಗೆ ಈಗ ಹೆಚ್ಚುವರಿ ಭದ್ರತೆ ನೀಡಲಾಗುತ್ತಿದ್ದು, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಈ ಬೆನ್ನಲ್ಲೇ ಈಗ ಕತ್ರಿನಾ ದಂಪತಿಗೆ ಬೆದರಿಕೆಯ ಕರೆ ಬರುತ್ತಿದೆ. ಈ ಕುರಿತು ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕತ್ರಿನಾ ಹುಟ್ಟುಹಬ್ಬಕ್ಕೆ ಬಿಗ್ ಅನೌನ್ಸ್‌ಮೆಂಟ್: ಕತ್ರಿನಾ ಕೈಫ್ ಪ್ರೆಗ್ನೆಂಟ್?

    ಕತ್ರಿನಾ ಹುಟ್ಟುಹಬ್ಬಕ್ಕೆ ಬಿಗ್ ಅನೌನ್ಸ್‌ಮೆಂಟ್: ಕತ್ರಿನಾ ಕೈಫ್ ಪ್ರೆಗ್ನೆಂಟ್?

    ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಈಗ ಖಾಸಗಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಯಾವುದೇ ಈವೆಂಟ್‌ನಲ್ಲಿ ಕಾಣಿಸಿಕೊಳ್ಳದ ಕತ್ರಿನಾ ಬಗ್ಗೆ ಹೊಸ ವಿಚಾರವೊಂದು ಬಿಟೌನ್ ಗಲ್ಲಿನಲ್ಲಿ ಸದ್ದು ಮಾಡುತ್ತಿದೆ. ಕತ್ರಿನಾ ಕೈಫ್ ತಾಯಿಯಾಗಿದ್ದಾರೆ ಎಂಬ ಸುದ್ದಿ ಬಿಟೌನ್‌ನ ಗಲ್ಲಿ ಗಲ್ಲಿಯಲ್ಲಿ ಸೌಂಡ್ ಮಾಡುತ್ತಿದೆ.

    ಬಾಲಿವುಡ್‌ನ ಅಡ್ಡಾದಲ್ಲಿ ಕತ್ರಿನಾ ತಾಯಿಯಾಗಿದ್ದಾರಂತೆ. ಜುಲೈ 16ಕ್ಕೆ ಕತ್ರಿನಾ ಕೈಫ್ ಹುಟ್ಟುಹಬ್ಬದಂದು ತಾವು ಅಮ್ಮನಾಗಿರುವ ವಿಚಾರ ತಿಳಿಸಲಿದ್ದಾರೆ ಎಂಬ ಸುದ್ದಿ ಕತ್ರಿನಾ ಮಾಹಿತಿ ಆಪ್ತ ಮೂಲಗಳಿಂದ ಕೇಳಿ ಬಂದಿದೆ. ಕಳೆದ ಡಿಸೆಂಬರ್ 9, 2021ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಹಸೆಮಣೆ ಏರಿದ್ದರು. ಈಗ ಕತ್ರಿನಾ ಗುಡ್ ನ್ಯೂಸ್ ಏಲ್ಲೆಡೆ ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಸೋನಮ್ ಕಪೂರ್ ಗ್ರ್ಯಾಂಡ್ ಬೇಬಿ ಶವರ್‌ಗೆ ದಿನಗಣನೆ: ಗೆಸ್ಟ್ ಲಿಸ್ಟ್ ಔಟ್

    ಕತ್ರಿನಾ ಪ್ರೆಗ್ನೆಂಟ್ ಸುದ್ದಿಗೆ ಪೂರಕವೆಂಬಂತೆ, ಇತ್ತೀಚೆಗೆ ನಡೆದ ಯಾವೊಂದು ಸಿನಿಮಾ ಈವೆಂಟ್‌ನಲ್ಲಿ ಕತ್ರಿನಾ ಭಾಗಿಯಾಗಿಲ್ಲ. ಕ್ಯಾಮೆರಾ ಕಣ್ಣಿನಿಂದ ದೂರವಿರುವ ಕತ್ರಿನಾ ಕುರಿತು ಪ್ರೆಗ್ನೆಂಟ್ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕತ್ರಿನಾ ತಾಯಿಯಾಗುತ್ತಿರುವ ಸುದ್ದಿ ಅಷ್ಟಕ್ಕೂ ನಿಜಾನಾ ಎಂಬುದನ್ನ ನಟಿಯ ಹುಟ್ಟುಹಬ್ಬದವೆರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಶಾರೂಖ್ ಖಾನ್- ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನ ಚಿತ್ರದ ಶೂಟಿಂಗ್ ಸ್ಟಾರ್ಟ್!

    ಶಾರೂಖ್ ಖಾನ್- ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನ ಚಿತ್ರದ ಶೂಟಿಂಗ್ ಸ್ಟಾರ್ಟ್!

    ಬಾಲಿವುಡ್‌ನ ಬಾದಷಾ ಶಾರೂಖ್ ಖಾನ್ ನಟನೆಯ 2018ರ `ಜೀರೋ’ ಚಿತ್ರದ ಸೋಲಿನ ನಂತರ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ನಾಲ್ಕು ವರ್ಷದ ನಂತರ ಸಾಲು ಸಾಲು ಸಿನಿಮಾಗಳಿಗೆ ಶಾರೂಖ್ ಖಾನ್ ಸಹಿ ಹಾಕ್ತಿದ್ದಾರೆ. ಇದೀಗ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಮುಂದಿನ ವಾರದಿಂದ ಶೂಟಿಂಗ್ ಶುರುವಾಗಲಿದೆ.

    `ಮುನ್ನಭಾಯಿ ಎಂಬಿಬಿಎಸ್’, `ಸಂಜು’, `ಪಿಕೆ’ ಚಿತ್ರಗಳಂತಹ ಭಿನ್ನ ಕಥೆಯನ್ನ ತೆರೆಯ ಮೇಲೆ ಅಚ್ಚುಕಟ್ಟಾಗಿ ತೋರಿಸೋದ್ರಲ್ಲಿ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಸೈ ಎನಿಸಿಕೊಂಡಿದ್ರು. ಇದೀಗ ಅಂತಹದ್ದೇ ಭಿನ್ನ ಕಂಟೆಂಟ್ ಜೊತೆಗೆ ರಾಜ್‌ಕುಮಾರ್ ಹಿರಾನಿ ಮತ್ತು ಶಾರೂಖ್ ಖಾನ್ ಬರುತ್ತಿದ್ದಾರೆ.

    ಶಾರೂಖ್ ಖಾನ್ ನಟನೆಯ ಹೊಸ ಚಿತ್ರವು ಪಕ್ಕಾ ಲವ್ ಕಮ್ ಆಕ್ಷನ್ ಓರಿಯೆಂಟೆಡ್ ಸಿನಿಮಾವಾಗಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟಿ ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಲ್ ಕೂಡ ನಟಿಸಲಿದ್ದಾರೆ. ಈ ಇಬ್ಬರು ಸ್ಟಾರ್‌ಗಳು ವಿಭಿನ್ನ ಪಾತ್ರದ ಮೂಲಕ ಮೋಡಿ ಮಾಡಲು ಸಜ್ಜಾಗಿದ್ದಾರೆ. ಇನ್ನು ಶಾರೂಖ್ ಮತ್ತು ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನ ಚಿತ್ರ ಮುಂಬೈನ ಫಿಲ್ಮಂ ಸಿಟಿನಲ್ಲಿ ಏಪ್ರಿಲ್ 15ರಿಂದ ಶೂಟಿಂಗ್ ಪ್ರಾರಂಭವಾಗಲಿದೆ. ಇದನ್ನೂ ಓದಿ: ಶಾರೂಖ್ ಜೊತೆಗಿನ ಸಿನಿಮಾಗೆ ನಯನ ಶೆಡ್ಯೂಲ್ ಮುಗಿಸೋದು ಯಾವಾಗ? – ಇಲ್ಲಿದೆ ಅಪ್ಡೇಟ್

    ಸದ್ಯ ಡೈರೆಕ್ಟರ್ ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಶಾರೂಖ್ ಖಾನ್ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಟ್ಲಿ ನಿರ್ದೇಶನದ ಚಿತ್ರ ಕಂಪ್ಲೀಟ್ ಆದ ಕೂಡಲೇ ಏಪ್ರಿಲ್ 15ರಿಂದ ರಾಜ್‌ಕುಮಾರ್ ಹಿರಾನಿ ಚಿತ್ರತಂಡಕ್ಕೆ ಸೇರಿಕೊಳ್ಳಲಿದ್ದಾರೆ. ನಾಲ್ಕು ವರ್ಷದ ನಂತರ ಬರುತ್ತಿರೋ ಶಾರೂಖ್ ಖಾನ್ ಸಿನಿಮಾಗಾಗಿ ಕಾಯ್ತಿರೋ ಫ್ಯಾನ್ಸ್‌ ಈ ಸುದ್ದಿ ಕೇಳಿ ಥ್ರಿಲ್ ಆಗಿದ್ದಾರೆ.