Tag: Vikas

  • ಹೀರೋ ಆದ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ : ಮುಹೂರ್ತದಲ್ಲಿ ಸಲ್ಮಾನ್ ಖಾನ್ ಬಾಮೈದ ಆಯುಷ್ ಶರ್ಮಾ ಭಾಗಿ

    ಹೀರೋ ಆದ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ : ಮುಹೂರ್ತದಲ್ಲಿ ಸಲ್ಮಾನ್ ಖಾನ್ ಬಾಮೈದ ಆಯುಷ್ ಶರ್ಮಾ ಭಾಗಿ

    ಸೌತ್‌ನ ಸ್ಟಾರ್‌ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ ಹೀರೋಗಳಿಗೆ ಬಗೆಬಗೆ ಸ್ಟೆಪ್ಸ್‌ ಹಾಕಿಸಿ ಖ್ಯಾತಿ ಗಿಟ್ಟಿಸಿಕೊಂಡವರು. ಇದೀಗ ಇದೇ ಕೋರಿಯೋಗ್ರಾಫರ್‌ ತೆರೆಮೇಲೆ ಮಿಂಚಲು ಸಿದ್ಧರಾಗಿದ್ದಾರೆ. ಅಂದರೆ, “ಯಥಾ ರಾಜ ತಥಾ ಪ್ರಜಾ” ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಹೀರೋ ಆಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ನೆರವೇರಿದ್ದು, ತೆಲುಗು ನಟ ಶರ್ವಾನಂದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರೆ, ಸಲ್ಮಾನ್‌ ಖಾನ್‌ ಬಾಮೈದ ಆಯುಷ್‌ ಶರ್ಮಾ ಕ್ಯಾಮರಾಕ್ಕೆ ಚಾಲನೆ ನೀಡಿದ್ದಾರೆ. ನಿರ್ದೇಶಕ ಕರುಣಾ ಕುಮಾರ್‌ ಮೊದಲ ದೃಶ್ಯವನ್ನು ನಿರ್ದೇಶಿಸಿದ್ದಾರೆ.

    ಇತ್ತೀಚೆಗಷ್ಟೇ ಕಿಚ್ಚ ಸುದೀಪ್‌ ನಟನೆಯ “ವಿಕ್ರಾಂತ್‌ ರೋಣ” ಚಿತ್ರದ ಯಕ್ಕಾ ಸಕ್ಕಾ ಹಾಡಿನ ಹುಕ್‌ ಸ್ಟೆಪ್‌ ಮೂಲಕವೇ ಎಲ್ಲರನ್ನು ಕುಣಿಸಿದ್ದ ಜಾನಿ ಮಾಸ್ಟರ್‌ ಇದೀಗ ನಾಯಕನಾಗಿ ಅದೃಷ್ಟ ಪರೀಕ್ಷೆಗಳಿದಿದ್ದಾರೆ. “ಯಥಾ ರಾಜ ತಥಾ ಪ್ರಜಾ” ಸಿನಿಮಾದಲ್ಲಿ ಜಾನಿ ಮಾಸ್ಟರ್‌ ಜತೆಗೆ “ಸಿನಿಮಾ ಬಂಡಿ” ಮೂಲಕ ಗುರುತಿಸಿಕೊಂಡ ವಿಕಾಸ್‌ ಸಹ ಮುಖ್ಯಭೂಮಿಕೆಯಲ್ಲಿರಲಿದ್ದಾರೆ. ಶ್ರಷ್ಟಿ ವರ್ಮಾ ನಾಯಕಿಯಾಗಿದ್ದಾರೆ. ಶ್ರೀನಿವಾಸ ವಿಟ್ಟಲ ಈ ನಿರ್ದೇಶಿಸಲಿರುವ ಈ ಚಿತ್ರವನ್ನು ಹರೇಶ್‌ ಪಟೇಲ್‌ ಜತೆ ಸೇರಿ ನಿರ್ದೇಶಕರೂ ಬಂಡವಾಳ ಹೂಡುತ್ತಿದ್ದಾರೆ. ಓಂ ಮೂವಿ ಕ್ರಿಯೇಶನ್ಸ್‌ ಮತ್ತು ಶ್ರೀ ಕೃಷ್ಣ ಮೂವಿ ಕ್ರಿಯೇಶನ್ಸ್‌ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ/ ನಿರ್ಮಾಪಕ ಶ್ರೀನಿವಾಸ್‌ ವಿಟ್ಟಲ, “ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಹರೇಶ್‌ ಪಟೇಲ್‌ ಅವರೊಟ್ಟಿಗೆ ಸೇರಿ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಈ ಕಥೆಗೆ ಜಾನಿ ಮಾಸ್ಟರ್‌ ಸೂಟ್‌ ಆಗ್ತಾರೆ. ಆ ಕಾರಣಕ್ಕೆ ಅವರಿಗೂ ೨೦ ನಿಮಿಷದಲ್ಲಿ ಸಿನಿಮಾದ ಕಥೆ ಹೇಳಿದೆ. ಕಥೆ ಕೇಳಿ ಅವರಿಂದಲೂ ಓಕೆ ಎಂಬ ಉತ್ತರ ಸಿಕ್ಕಿತು. ಈ ಹಿಂದೆ ಟಿವಿಯಲ್ಲಿ ಕೇವಲ ೧೦ ನಿಮಿಷ ಮಾತ್ರ ರಾಜಕೀಯ ಸುದ್ದಿಗಳು ಪ್ರಸಾರವಾಗುತ್ತಿದ್ದವು. ಇದೀಗ ಅದು ೨೪/೭ ಆಗಿದೆ. ಹಾಗಾಗಿ ನಮ್ಮ ಈ ಸಿನಿಮಾ ಸಹ ರಾಜಕೀಯ ಹಿನ್ನೆಲೆಯಲ್ಲಿ ಮೂಡಿಬರಲಿರುವ ಕಮರ್ಷಿಯಲ್‌ ಸಿನಿಮಾ. ಸಮಾಜಕ್ಕೆ ಮಹತ್ವದ ಸಂದೇಶವೂ ಇದರಲ್ಲಿದೆ” ಎಂದರು. ತೆಲುಗು,ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಮೂಡಿಬರಲಿರುವ “ಯಥಾ ರಾಜ ತಥಾ ಪ್ರಜಾ” ಸಿನಿಮಾ ಸೆಪ್ಟೆಂಬರ್‌ ೧೫ರಿಂದ ಚಿತ್ರದ ಶೂಟಿಂಗ್‌ ಶುರುವಾಗಲಿದ್ದು, ಮೂರು ಶೇಡ್ಯೂಲ್‌ನಲ್ಲಿ ಸಿನಿಮಾ ಮುಗಿಸುವ ಯೋಜನೆ ನಿರ್ದೇಶಕರದ್ದು. ಚಿತ್ರದಲ್ಲಿ ನಾಲ್ಕು ಹಾಡುಗಳಿರಲಿದ್ದು, ರಾಧನ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

    ಈ ಚಿತ್ರದ ಮೂಲಕ ನಾಯಕರಾಗಿ ಎಂಟ್ರಿಕೊಡುತ್ತಿರುವ ಜಾನಿ ಮಾಸ್ಟರ್‌ ಸಹ ಚಿತ್ರದ ಬಗ್ಗೆ ಮಾತನಾಡಿದ್ದಾರೆ. “ಮೆಗಾಸ್ಟಾರ್‌ ಚಿರಂಜೀವಿ ಅವರ ಬರ್ತ್‌ಡೇ ದಿನದಂದೇ ನಮ್ಮ ಸಿನಿಮಾ ಮುಹೂರ್ತ ಕಂಡಿರುವುದು ಖುಷಿ ವಿಚಾರ. ಶ್ರೀನಿವಾಸ್‌ ಅವರು ಕಥೆ ಹೇಳಿದ ರೀತಿಯೇ ಚೆನ್ನಾಗಿತ್ತು. ಅದೇ ರೀತಿ ವಿಕಾಸ್‌ ನಟಿಸಿರುವ “ಸಿನಿಮಾ ಬಂಡಿ” ಸಿನಿಮಾ ನೋಡಿದ್ದೇನೆ. ಇದೀಗ ಅವರೊಂದಿಗೆ ನಟಿಸುತ್ತಿದ್ದೇನೆ. ನಾಗೇಶ್‌ ಅವರೇ ಈ ಚಿತ್ರಕ್ಕೆ “ಯಥಾ ರಾಜ ತಥಾ ಪ್ರಜಾ” ಎಂಬ ಶೀರ್ಷಿಕೆ ನೀಡಿದ್ದಾರೆ. ಒಟ್ಟು ಮೂರು ಭಾಷೆಗಳಲ್ಲಿ ಈ ಸಿನಿಮಾ ಸಿದ್ಧವಾಗಲಿದೆ” ಎಂದಿದ್ದಾರೆ.

    “ಜಾನಿ ಮಾಸ್ಟರ್‌ ಅವರೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಸಂತಸವಿದೆ. ಇದೊಂದು ಪೊಲಿಟಿಕಲ್‌ ಡ್ರಾಮಾ ಆಧರಿತ ಕಥೆ. ಕಮರ್ಷಿಯಲ್‌ ಅಂಶಗಳೂ ಸಿನಿಮಾದಲ್ಲಿರಲಿವೆ” ಎಂದರು ವಿಕಾಸ್.‌ ನಟಿ ಶ್ರಷ್ಟಿ ವರ್ಮಾ ಸಹ ಚಿತ್ರದ ಭಾಗವಾಗುತ್ತಿರುವುದಕ್ಕೆ ಖುಷಿಯಲ್ಲಿದ್ದಾರೆ. ಈ ಚಿತ್ರಕ್ಕೆ ಗಣೇಶ್‌ ಮಾಸ್ಟರ್‌ ನೃತ್ಯ ನಿರ್ದೇಶನ ಮಾಡಲಿದ್ದು, ರಾಧನ ಸಂಗೀತ ಸಂಯೋಜಿಸಲಿದ್ದಾರೆ. ಸುನೋಜ್‌ ವೆಲಯುಧನ್‌ ಈ ಚಿತ್ರದ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಬಾಬಾ ಕಲಾ ನಿರ್ದೇಶನ ಚಿತ್ರಕ್ಕಿರಲಿದೆ.

    Live Tv
    [brid partner=56869869 player=32851 video=960834 autoplay=true]

  • ಸಖತ್ ಸೌಂಡ್ ಮಾಡ್ತಿದೆ ‘ಮಿಂಚಿನ ಬಳ್ಳಿ ಬಣ್ಣವ ಚೆಲ್ಲಿ’ ಹಾಡು!

    ಸಖತ್ ಸೌಂಡ್ ಮಾಡ್ತಿದೆ ‘ಮಿಂಚಿನ ಬಳ್ಳಿ ಬಣ್ಣವ ಚೆಲ್ಲಿ’ ಹಾಡು!

    ವಿಕಾಸ್ ನಟನೆಯ ‘ಕಾಣದಂತೆ ಮಾಯಾವಾದನು’ ಸಿನಿಮಾ ಈಗಾಗಲೇ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆಯೂ ಸಾಂಗ್ ಒಂದು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಯಾರ ಬಾಯಲ್ಲಿ ಕೇಳಿದ್ರು ಅದೇ ಹಾಡು ಗುನುಗುವಂತೆ ಮೋಡಿ ಮಾಡಿದೆ. ಯಾವ ಮೊಬೈಲ್ ರಿಂಗ್ ಟೋನ್ ಕೇಳಿದ್ರು ಅದೇ ಹಾಡು ರಿಂಗಾಯಿಸುತ್ತಿದೆ. ಅಷ್ಟರ ಮಟ್ಟಿಗೆ ‘ಕಾಣದಂತೆ ಮಾಯಾವಾದನು’ ಸಿನಿಮಾದ ಹಾಡುಗಳು ಎಲ್ಲರಿಗೂ ಹುಚ್ಚೆಬ್ಬಿಸಿದೆ.

    ‘ಮಿಂಚಿನ ಬಳ್ಳಿ, ಬಣ್ಣವ ಚೆಲ್ಲಿ’ ಎಂಬ ಹಾಡು ಎಲ್ಲೆಡೆ ವೈರಲ್ ಆಗಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈಗಲೂ ಕೂಡ ಲೀಡಿಂಗ್ ನಲ್ಲಿ ಈ ಹಾಡು ಓಡ್ತಾ ಇದೆ. ಜಯಂತ್ ಕಾಯ್ಕಿಣಿ ಅವರು ಬರೆದಿರುವ ಸಾಹಿತ್ಯಕ್ಕೆ ಗುಮ್ಮಿನೇನಿ ವಿಜಯ್ ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ನಿಶ್ಕಲ್ಮಶ ಪ್ರೀತಿಯೊಂದು ಎಲ್ಲರಿಗೂ ಇಷ್ಟವಾಗಿದೆ. ತುಂಬಾ ಪ್ರೀತಿಸುವ ಹೃದಯ ಸತ್ತರೂ ಜೊತೆಯಲ್ಲಿರುತಚತೆ ಎಂಬ ಭಾವ ಮೂಡಿಸುತ್ತಿದೆ. ಹಾಡಿನಲ್ಲಿ ಪ್ರೀತಿಯ ಆಲಾಪನೆ ಇದ್ದು, ಪ್ರೇಮಿಗಳ ದಿನ ಬೇರೆ ಹತ್ತಿರವಿರುವ ಕಾರಣ, ವ್ಯಾಲೆಂಟೈನ್ಸ್ ಡೇ ಗೆ ಒಂದೊಳ್ಳೆ ಹಾಡು ಕೂಡ ಆಗಿದೆ. ಹಾಡಿನಲ್ಲಿ ನೋವಿದ್ದರು, ಮಧುರವಾದ ಪ್ರೀತಿ ಎಲ್ಲರ ಮನ ತಟ್ಟುತ್ತಿದೆ.

    ಮೊದಲ ಬಾರಿಗೆ ಬೆಳ್ಳಿ ತೆರೆ ಮೇಲೆ ನಾಯಕನಾಗಿ ಕಾಣಿಸಿಕೊಂಡಿದ್ದ ವಿಕಾಸ್ ‘ಕಾಣದಂತೆ ಮಾಯಾವಾದನು’ ಸಿನಿಮಾದಿಂದ ಗೆಲುವು ಕಂಡಿದ್ದಾರೆ. ಒಬ್ಬ ಒಳ್ಳೆ ನಟನಾಗುವ ಕ್ವಾಲಿಟಿ ಇದೆ ಎಂಬುದನ್ನು ಈ ಸಿನಿಮಾದಿಂದ ಪ್ರೂವ್ ಮಾಡಿದ್ದಾರೆ. ಸಿಂಧೂ ಲೋಕನಾಥ್ ನಾಯಕಿಯಾಗಿ ಅದ್ಭುತ ಅಭಿನಯ ಮಾಡಿದ್ದಾರೆ. ರಿಲೀಸ್ ಆದಾಗಿನಿಂದ ಸಿನಿಮಾ ಉತ್ತಮ ರೆಸ್ಪಾನ್ಸ್ ಪಡೆಯುತ್ತಿದೆ. ರಾಜ್ ಪತ್ತಿಪಾಟಿ ಸಿನಿಮಾ ನಿರ್ದೇಶನ ಮಾಡಿದ್ದು, ಸೋಮ್ ಸಿಂಗ್ ಮತ್ತು ಚಂದ್ರಶೇಖರ್ ನಾಯ್ಡು ಸಿನಿಮಾ ನಿರ್ಮಾಣ ಮಾಡಿದ್ದಾರೆ.

  • ಕಾಣದಂತೆ ಮಾಯವಾದನು: ಟ್ಯಾಗ್ ಲೈನ್ ಕೊಟ್ಟು ಬಂಪರ್ ಬಹುಮಾನ ಗೆಲ್ಲೋ ಅವಕಾಶ!

    ಕಾಣದಂತೆ ಮಾಯವಾದನು: ಟ್ಯಾಗ್ ಲೈನ್ ಕೊಟ್ಟು ಬಂಪರ್ ಬಹುಮಾನ ಗೆಲ್ಲೋ ಅವಕಾಶ!

    ದುನಿಯಾ ವಿಜಯ್ ಅಭಿನಯದ ಜಯಮ್ಮನ ಮಗ ಚಿತ್ರವನ್ನು ನಿರ್ದೇಶನ ಮಾಡಿ ಗೆಲುವು ಕಂಡಿದ್ದವರು ವಿಕಾಸ್. ಈ ಮೂಲಕವೇ ಯಶಸ್ವೀ ನಿರ್ದೇಶಕರಾಗಿಯೂ ಗುರುತಿಸಿಕೊಂಡ ವಿಕಾಸ್ ಆ ನಂತರದಲ್ಲಿ ಒಂದಷ್ಟು ಕಾಲ ಗ್ಯಾಪ್ ತೆಗೆದುಕೊಂಡು ಇದೀಗ ಕಾಣದಂತೆ ಮಾಯವಾದನು ಚಿತ್ರದ ಹೀರೋ ಆಗಿ ಪ್ರತ್ಯಕ್ಷರಾಗಿದ್ದಾರೆ. ಈಗಾಗಲೇ ಟ್ರೈಲರ್ ಮುಖೇನ ಅಲೆಯೆಬ್ಬಿಸಿರೋ ಈ ಸಿನಿಮಾ ತಂಡ ಪ್ರೇಕ್ಷಕರಿಗೊಂದು ಭರ್ಜರಿ ಸ್ಪರ್ಧೆ ಏರ್ಪಡಿಸಿದೆ. ಇದಕ್ಕೆ ಬಂಪರ್ ಬಹುಮಾನವನ್ನೂ ಕೊಡಲು ತಯಾರಾಗಿದೆ.

    ಕಾಣದಂತೆ ಮಾಯವಾದನು ಚಿತ್ರವೀಗ ತೆರೆಗಾಣುವ ಸನ್ನಾಹದಲ್ಲಿದೆ. ಈ ಹೊತ್ತಿನಲ್ಲಿಯೇ ಇದಕ್ಕೊಂದು ಸೂಕ್ತವಾದ ಟ್ಯಾಗ್ ಲೈನ್ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದೆ. ಈಗಾಗಲೇ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆಯಲ್ಲಾ? ಅದನ್ನು ಆನಂದ್ ಆಡಿಯೂ ಯೂಟ್ಯೂಬ್ ಚಾನೆಲ್ ಮೂಲಕ ಒಮ್ಮೆ ವೀಕ್ಷಿಸಿ ಅದಕ್ಕೆ ತಕ್ಕುದಾದ ಟ್ಯಾಗ್ ಲೈನ್ ಅನ್ನು ಕಮೆಂಟ್ ಬಾಕ್ಸ್ ಮೂಲಕ ಸೂಚಿಸಬಹುದು. ಹೀಗೆ ಒಂದು ಸಲ ಕಮೆಂಟ್ ಬಾಕ್ಸ್ ಮೂಲಕ ಒಂದೇ ಟ್ಯಾಗ್ ಲೈನ್ ಅನ್ನು ಸೂಚಿಸಬಹುದು. ಆದರೆ ಒಬ್ಬರು ಎಷ್ಟು ಟ್ಯಾಗ್ ಲೈನುಗಳನ್ನಾದರೂ ಬಿಡಿ ಬಿಡಿಯಾಗಿ ದಾಖಲಿಸಬಹುದು. ಇದರಲ್ಲಿ ಆಯ್ಕೆಯಾದ ಟ್ಯಾಗ್ ಲೈನಿಗೆ ಐವತ್ತು ಸಾವಿರ ರೂಪಾಯಿ ಬಹುಮಾನ ನೀಡಲು ಚಿತ್ರತಂಡ ತೀರ್ಮಾನಿಸಿದೆ. ಇದು ಅಂತಿಮಗೊಳ್ಳುತ್ತಲೇ ಬಿಡುಗಡೆಯ ದಿನಾಂಕ ಘೋಷಣೆ ಮಾಡಲೂ ಚಿತ್ರತಂಡ ಯೋಜನೆ ಹಾಕಿಕೊಂಡಿರುವಂತಿದೆ.

    ಸದರಿ ಟ್ರೈಲರ್ ಮೂಲಕವೇ ಕಾಣದಂತೆ ಮಾಯವಾದನು ಭಿನ್ನ ಜಾಡಿನ ಹಾರರ್ ಕಥಾನಕ ಹೊಂದಿರೋ ಚಿತ್ರವೆಂಬುದು ಸಾಬೀತಾಗಿದೆ. ಆತ್ಮದ ಪ್ರೇಮವೃತ್ತಾಂತ ಹೊಂದಿರೋ ಕಾಣದಂತೆ ಮಾಯವಾದನು ಸಿನಿಮಾ ಪಕ್ಕಾ ಆಕ್ಷನ್ ಮೂವಿಯಾಗಿಯೂ ಎದುರುಗೊಳ್ಳಲು ರೆಡಿಯಾಗಿದೆ. ಇದರೊಂದಿಗೆ ನಿರ್ದೇಶರಾಗಿದ್ದ ವಿಕಾಸ್ ಆಕ್ಷನ್ ಹೀರೋ ಆಗಿ ಅವತರಿಸುವ ಕಾತರದಲ್ಲಿದ್ದಾರೆ. ನಿರ್ದೇಶಕ ರಾಜ್ ಪತ್ತಿಪಾಟಿ ಕನ್ನಡಕ್ಕೆ ಅಪರೂಪವಾದಂಥಾ ಕಥೆಯೊಂದಿಗೆ ಈ ಚಿತ್ರವನ್ನು ರೋಚಕವಾಗಿ ಕಟ್ಟಿ ಕೊಟ್ಟಿದ್ದಾರೆ.

    https://www.youtube.com/watch?v=GNaimyGV1m4

  • ಕಾಣದಂತೆ ಮಾಯವಾದನು: ಎಲ್ಲರನ್ನೂ ಸೆಳೆಯೋ ಮಾಯೆಯಂಥಾ ಟ್ರೈಲರ್!

    ಕಾಣದಂತೆ ಮಾಯವಾದನು: ಎಲ್ಲರನ್ನೂ ಸೆಳೆಯೋ ಮಾಯೆಯಂಥಾ ಟ್ರೈಲರ್!

    ಬೆಂಗಳೂರು: ರಾಜ್ ಪತ್ತಿಪಾಟಿ ನಿರ್ದೇಶನದ ಕಾಣದಂತೆ ಮಾಯವಾದನು ಚಿತ್ರವೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ಒಂದಷ್ಟು ಕಾಲ ಯಾವ ಸುದ್ದಿಯೂ ಇಲ್ಲದಂತಿದ್ದ ಈ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದ್ದ ಕ್ಯಾರೆಕ್ಟರ್ ಪ್ರೋಮೋ ಮೂಲಕ ಮತ್ತೆ ಚರ್ಚೆಗೆ ಕಾರಣವಾಗಿತ್ತು. ಈ ಮೂಲಕವೇ ತನ್ನ ತಾರಾಗಣವನ್ನು ಪರಿಚಯಿಸಿದ್ದ ಚಿತ್ರತಂಡವೀಗ ಟ್ರೈಲರ್ ಮೂಲಕ ಇಡೀ ಸಿನಿಮಾದ ಆಂತರ್ಯವನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದೆ.

    ಕಾಣದಂತೆ ಮಾಯವಾದನು ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ವರ್ಷಾಂತರದಿಂದಲೂ ಸುದ್ದಿಯಾಗುತ್ತಾ ಸಾಗುತ್ತಿದ್ದ ಈ ಚಿತ್ರ ಯಾವ ಜಾನರಿನದ್ದು, ಇದರ ಕಥೆಯೇನು ಅಂತೆಲ್ಲ ಜನರಲ್ಲಿ ನಾನಾ ಪ್ರಶ್ನೆಗಳಿದ್ದವು. ಅದಕ್ಕೆ ಉತ್ತರಿಸುತ್ತಲೇ ಪ್ರೇಕ್ಷಕರ ನಿರೀಕ್ಷೆಯ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ರೀತಿಯಲ್ಲಿ ಈ ಟ್ರೈಲರ್ ಮೂಡಿ ಬಂದಿದೆ.

    ಹಾರರ್ ಕಥೆಗಳೆಂದರೆ ದೆವ್ವ, ಪ್ರೇತಗಳ ಮೂಲಕ ಭೀತಗೊಳಿಸೋದು ಎಂಬಂಥಾ ಕಲ್ಪನೆಯಿದೆ. ಆದರೆ ಅದಕ್ಕೆ ತದ್ವಿರುದ್ಧ ರೀತಿಯಲ್ಲಿ, ಹೊಸತನದೊಂದಿಗೆ ಈ ಸಿನಿಮಾ ಮೂಡಿಬಂದಿದೆ ಅನ್ನೋದಕ್ಕೂ ಟ್ರೈಲರ್ ಸಾಕ್ಷಿಯಂತಿದೆ. ಈ ಹಿಂದೆ ಜಯಮ್ಮನ ಮಗ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿಕಾಸ್ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಅವರಿಲ್ಲಿ ಪಕ್ಕಾ ಆಕ್ಷನ್ ಹೀರೋ ಆಗಿ ವಿಜೃಭಿಸಿರೋ ಸ್ಪಷ್ಟ ಸೂಚನೆಯನ್ನೂ ಈ ಟ್ರೈಲರ್ ನೀಡಿದೆ.

    ಹಾರರ್ ಕಂಟೆಂಟಿದೆಯಾದರೂ ಇದು ಮಾಮೂಲಿ ಶೈಲಿಯ ಚಿತ್ರವಲ್ಲ. ಇಲ್ಲಿರೋ ಆತ್ಮ ಬದುಕಿರೋ ಘಳಿಗೆಯಲ್ಲಿ ಜೀವದಂತಿದ್ದ ಪ್ರೀತಿಯ ಕಾವಲಿಗೆ ನಿಲ್ಲುತ್ತಲೇ ಸೇಡು ತೀರಿಸಿಕೊಳ್ಳೋ ಕಥೆಯ ಹೊಳಹೂ ಕೂಡಾ ಈ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಇದರ ಆಚೀಚೆಗೆ ಥ್ರಿಲ್ಲರ್ ಸ್ಟೋರಿ ಇರುವ ಲಕ್ಷಣಗಳೊಂದಿಗೇ ಮೇಕಿಂಗ್‍ನಲ್ಲಿಯೂ ಈ ಟ್ರೈಲರ್ ಗಮನ ಸೆಳೆಯುವಂತಿದೆ.

    ಆಗಾಗ ಸದ್ದು ಮಾಡುತ್ತಾ ಸೈಲೆಂಟಾಗುತ್ತಿದ್ದ ಈ ಚಿತ್ರ ಕೊಂಚ ತಡವಾಗಿದೆ ಎಂಬ ಕಂಪ್ಲೇಂಟು ಪ್ರೇಕ್ಷಕರಲ್ಲಿತ್ತು. ಆದರೆ ಈಗ ಬಿಡುಗಡೆಯಾಗಿರೋ ಟ್ರೈಲರ್ ಆ ಮುನಿಸನ್ನು ಮರೆಯಾಗಿಸಿ ಚಿತ್ರ ಬಿಡುಗಡೆಯಾಗೋದನ್ನ ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡುವಲ್ಲಿಯೂ ಶಕ್ತವಾಗಿದೆ. ಈ ಮೂಲಕ ನಿರ್ದೇಶಕ ರಾಜ್ ಪತ್ತಿಪಾಟಿ ಭರವಸೆ ಹುಟ್ಟಿಸಿದ್ದಾರೆ. ಬಹುಶಃ ಮಾಸ್ತಿಗುಡಿ ದುರಂತದಲ್ಲಿ ಸಾವಿಗೀಡಾಗಿದ್ದ ಅನಿಲ್ ನಟಿಸಿರೋ ಕಡೆಯ ಚಿತ್ರವಿದು. ಈ ಮೂಲಕ ಉದಯ್ ಅವರನ್ನು ಅಬ್ಬರದ ಪಾತ್ರವೊಂದರ ಮೂಲಕ ಕಣ್ತುಂಬಿಕೊಳ್ಳೋ ಸದಾವಕಾಶವೂ ಪ್ರೇಕ್ಷಕರಿಗೆ ಸಿಕ್ಕಿದೆ.

    ಒಟ್ಟಾರೆಯಾಗಿ ಈ ಟ್ರೈಲರ್ ಮೂಲಕವೇ ಕಾಣದಂತೆ ಮಾಯವಾದನು ಚಿತ್ರ ಮತ್ತೆ ಜನಮಾನಸ ತಲುಪಿಕೊಂಡಿದೆ. ಬಿಡುಗಡೆಯಾದ ಕ್ಷಣದಿಂದಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಾ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತಿದೆ. ಇದನ್ನು ಕಂಡು ಪ್ರೇಕ್ಷಕರು ಅದೆಷ್ಟು ಖುಷಿಗೊಂಡಿದ್ದಾರೆಂಬುದಕ್ಕೆ ಯೂ ಟ್ಯೂಬ್‍ನಲ್ಲಿ ಹರಿದು ಬರುತ್ತಿರೋ ಕಮೆಂಟುಗಳಿಗಿಂತಲೂ ಬೇರೆ ಪುರಾವೆ ಬೇಕಿಲ್ಲ.

    https://youtu.be/GNaimyGV1m4

  • ಕಾಣದಂತೆ ಮಾಯವಾದನು: ಪ್ರೋಮೋ ಮೂಲಕ ವಿಶಿಷ್ಟ ಪಾತ್ರಗಳ ದರ್ಶನ!

    ಕಾಣದಂತೆ ಮಾಯವಾದನು: ಪ್ರೋಮೋ ಮೂಲಕ ವಿಶಿಷ್ಟ ಪಾತ್ರಗಳ ದರ್ಶನ!

    ಬೆಂಗಳೂರು: ರಾಜ್ ಪತ್ತಿಪಾಟಿ ನಿರ್ದೇಶನದ ಕಾಣದಂತೆ ಮಾಯವಾದನು ಎಂಬ ಚಿತ್ರವೀಗ ಮತ್ತೆ ಸುದ್ದಿ ಕೇಂದ್ರದಲ್ಲಿದೆ. ತನ್ನ ವಿಶಿಷ್ಟವಾದ ಟೈಟಲ್ ಮತ್ತು ಕಥೆಯ ಸುಳಿವಿನೊಂದಿಗೇ ಪ್ರೇಕ್ಷಕರ ಆಸಕ್ತಿಯನ್ನು ತನ್ನತ್ತ ಸೆಳೆದುಕೊಂಡಿತ್ತು. ಇದೀಗ ಚಿತ್ರತಂಡ ಒಂದು ಕ್ಯಾರೆಕ್ಟರ್ ಪ್ರೋಮೋವನ್ನು ಬಿಡುಗಡೆಗೊಳಿಸಿದೆ. ಈ ಮೂಲಕ ಕೊಂಚ ತಡವಾದರೂ ಕೂಡಾ ಕಾಣದಂತೆ ಮಾಯವಾದನು ಚಿತ್ರ ಮತ್ತಷ್ಟು ನಿರೀಕ್ಷೆ ಮೂಡಿಸಿಕೊಂಡಿದೆ.

    ಸಿಂಧು ಲೋಕನಾಥ್ ಮತ್ತು ವಿಕಾಸ್ ಮುಖ್ಯಭೂಮಿಕೆಯಲ್ಲಿರೋ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ಸೀತಾ ಕೋಟಿ, ಭಜರಂಗಿ ಲೋಕಿ, ರಾಘವ್ ಉದಯ್, ಗೌತಮ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಎಲ್ಲ ಪಾತ್ರಗಳ ಝಲಕ್ ಪರಿಚಯ ಮಾಡಿಕೊಡುವಂತಿರುವ ಈ ಕ್ಯಾರೆಕ್ಟರ್ ಪ್ರೋಮೋಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿವೆ.

    ರಾಜ್ ಪತ್ತಿಪಾಟಿ ನಿರ್ದೇಶನ ಮಾಡಿರೋ ಈ ಚಿತ್ರವನ್ನು ಸೋಮ್ ಸಿಂಗ್ ನಿರ್ಮಾಣ ಮಾಡಿದ್ದಾರೆ. ಪುಷ್ಪಾ ಸೋಮ್ ಸಿಂಗ್ ಕೂಡಾ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಈ ಚಿತ್ರದಲ್ಲಿ ಪ್ರತಿ ಪಾತ್ರಗಳೂ ಕೂಡಾ ಭಿನ್ನವಾಗಿದೆ ಎಂಬುದನ್ನೂ ಕೂಡಾ ಈ ಕ್ಯಾರೆಕ್ಟರ್ ಪ್ರೋಮೋ ಜಾಹೀರು ಮಾಡಿದೆ. ಜಯಮ್ಮನ ಮಗ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿಕಾಸ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಸಿಂಧೂ ಲೋಕನಾಥ್ ಇಲ್ಲಿ ಎನ್‍ಜಿಓನಲ್ಲಿ ಕೆಲಸ ಮಾಡುವ ಹುಡುಗಿ ವಂದನಾ ಆಗಿ ನಟಿಸಿದ್ದಾರೆ.

    ಈ ಹಿಂದೆ ಮಫ್ತಿ ಚಿತ್ರದ ಪಾತ್ರದ ಮೂಲಕ ನಟರಾಗಿ ಬಹು ಬೇಡಿಕೆ ಪಡೆದುಕೊಂಡಿರೋ ಬಾಬು ಹಿರಣ್ಣಯ್ಯ ಕೂಡಾ ಕಾಣದಂತೆ ಮಾಯವಾದನು ಚಿತ್ರದಲ್ಲಿ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದಾರಂತೆ. ವಿಶೇಷವೆಂದರೆ ಈ ಚಿತ್ರ ಮಫ್ತಿಗಿಂತಲೂ ಮೊದಲೇ ಆರಂಭವಾಗಿತ್ತು. ಒಂದಷ್ಟು ಸುದೀರ್ಘ ಸಮಯ ಹಿಡಿದರೂ ಇದೀಗ ಈ ಚಿತ್ರ ಅಚ್ಚುಕಟ್ಟಾಗಿಯೇ ತಯಾರಾಗಿ ಬಿಡುಗಡೆಗೆ ರೆಡಿಯಾಗಿದೆ.