Tag: vijyapura

  • ಸಿದ್ಧೇಶ್ವರ ಶ್ರೀ ಲಿಂಗೈಕ್ಯ – ಕನ್ನಡದಲ್ಲೇ ಟ್ವೀಟ್‌ ಮಾಡಿ ಪ್ರಧಾನಿ ಮೋದಿ ಸಂತಾಪ

    ಸಿದ್ಧೇಶ್ವರ ಶ್ರೀ ಲಿಂಗೈಕ್ಯ – ಕನ್ನಡದಲ್ಲೇ ಟ್ವೀಟ್‌ ಮಾಡಿ ಪ್ರಧಾನಿ ಮೋದಿ ಸಂತಾಪ

    ನವದೆಹಲಿ: ವಿಜಯಪುರದ (Vijayapura) ಜ್ಞಾನಯೋಗಾಶ್ರಮದಲ್ಲಿ ಸೋಮವಾರ ಸಿದ್ಧೇಶ್ವರ ಶ್ರೀಗಳು (Siddheshwara Swamiji) ಲಿಂಗೈಕ್ಯರಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲೇ ಟ್ವೀಟ್‌ ಮಾಡಿ ಶ್ರೀಗಳಿಗೆ ಗೌರವ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ವಿಜಯಪುರ: ಸಿದ್ಧೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಸೈನಿಕ ಶಾಲೆಯತ್ತ ಭಕ್ತಸಾಗರ

    “ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಸಮಾಜಕ್ಕೆ ನೀಡಿರುವ ಗಣನೀಯ ಸೇವೆಗಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರು ಇತರರ ಒಳಿತಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ್ದರು ಮತ್ತು ಅವರ ಜ್ಞಾನೋತ್ಸಾಹಕ್ಕಾಗಿ ಅವರು ಗೌರವಗಳಿಸಿದ್ದರು. ಈ ದುಃಖದ ಸಮಯದಲ್ಲಿ ಅವರ ಅಸಂಖ್ಯಾತ ಭಕ್ತರೊಂದಿಗೆ ನನ್ನ ಸಂವೇದನೆ ಇದೆ. ಓಂ. ಶಾಂತಿ” ಎಂದು ಟ್ವೀಟ್‌ ಮಾಡಿದ್ದಾರೆ.

    ಶ್ರೀಗಳು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಗ ಮೋದಿ ಅವರು ಫೋನ್‌ ಕರೆ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದರು. ಶೀಘ್ರವೇ ಗುಣಮುಖರಾಗುವಂತೆ ಪ್ರಾರ್ಥಿಸಿದ್ದರು. ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ಗಣ್ಯರಿಂದ ಕಣ್ಣೀರ ವಿದಾಯ

    ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಸೈನಿಕ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿಡಿ ಪ್ರಕರಣದ ಸಂತ್ರಸ್ತೆಯ ಕುಟುಂಬ ವಿಜಯಪುರಕ್ಕೆ ಶಿಫ್ಟ್

    ಸಿಡಿ ಪ್ರಕರಣದ ಸಂತ್ರಸ್ತೆಯ ಕುಟುಂಬ ವಿಜಯಪುರಕ್ಕೆ ಶಿಫ್ಟ್

    – ಡಿಕೆಶಿ ವಿರುದ್ಧ ಯುವತಿ ಸಹೋದರ ಆರೋಪ
    – ಮನೆಗೆ ಬರುವಂತೆ ಕಣ್ಣೀರಿಟ್ಟ ತಂದೆ

    ವಿಜಯಪುರ: ಸಿಡಿ ಪ್ರಕರಣದ ಸಂತ್ರಸ್ತೆಯ ಕುಟುಂಬ ಇಂದು ಬೆಳಗಾವಿಯಿಂದ ವಿಜಯಪುರದ ನಿಡಗುಂದಿಯ ಅಜ್ಜಿ ಮನೆಗೆ ಶಿಫ್ಟ್ ಆಗಿದೆ. ಅಜ್ಜಿಗೆ ಹುಷಾರಿಲ್ಲದ ಕಾರಣ ಇಲ್ಲಿಗೆ ಬಂದಿದ್ದೇವೆ. ಅಜ್ಜಿ ಹುಷಾರ್ ಆದ ನಂತರ ಮರಳಿ ಬೆಳಗಾವಿಗೆ ತೆರಳುತ್ತೆವೆ ಎಂದು ಸಂತ್ರಸ್ತೆಯ ಸಹೋದರ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದರು.

    ನಾವು ಸುಭದ್ರವಾಗಿದ್ದೇವೆ. ನಮಗೆ ಪೊಲೀಸ್ ಭದ್ರತೆ ನೀಡಿದ್ದಾರೆ. ಡಿಕೆಶಿ ನಮ್ಮ ಸಹೋದರಿಯನ್ನ ಹಿಡಿದಿಟ್ಟು ಕೊಂಡಿದ್ದಾರೆ. ಕುಟುಂಬಕ್ಕು ಭೇಟಿ ಆಗಲು ನೀಡುತ್ತಿಲ್ಲ. ಅವಳು ತುಂಬಾ ಭಯದಲ್ಲಿದ್ದಾಳೆ ಎಂದು ಆತಂಕ ವ್ಯಕ್ತಪಡಿಸಿದರು.

    ಇದಕ್ಕೆಲ್ಲ ಡಿಕೆಶಿನೇ ಕಾರಣ ಅಂತಾ ಮತ್ತೆ ದೂರಿದರು. ಅಲ್ಲದೆ ಉಳಿದ ಆಡಿಯೋ ದಾಖಲಾತಿಗಳನ್ನ ಸಂದರ್ಭ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದರು.

    ಇದೇ ವೇಳೆ ಸಂತ್ರಸ್ತೆ ತಂದೆ ಮಾತನಾಡಿ, ತಪ್ಪೋ-ಒಪ್ಪೋ ಆಗ್ಹೋಗಿದೆ. ನಾನು ತಂದೆ ಆಗಿ ವಿನಂತಿಸುತ್ತೇನೆ. ಬಾ ಅಮ್ಮ ಬೇಗ ಬಾ ಮನೆಗೆ ಎಂದು ಕಣ್ಣಿರಿಟ್ಟು ಪಬ್ಲಿಕ್ ಟಿವಿ ಮುಖಾಂತರ ಸಂತ್ರಸ್ತೆಗೆ ಮನೆಗೆ ಕರೆದರು. ಅಲ್ಲದೆ ನನ್ನ ಮಗಳ ರಕ್ಷಣೆ ಮಾಡೋದೋ ನ್ಯಾಯಕೊಡಿಸೋ ತಾಕತ್ತು ನನಗಿದೆ. ಮಗಳೆ ನೀನು ಮನೆಗೆ ಬಾ ಎಂದರು.

    ನಮ್ಮ ಅತ್ತೆಗೆ ಹುಷಾರಿಲ್ಲದ ಕಾರಣ ಬೆಳಗಾವಿಯಿಂದ ನಿಡಗುಂದಿಗೆ ಬಂದಿದ್ದೇವೆ. ಸದ್ಯಕ್ಕೆ ಬೆಂಗಳೂರಿಗೆ ಹೋಗುತ್ತಿಲ್ಲ. ಎಸ್ ಐಟಿ ಅಧಿಕಾರಿಗಳು ಕರೆದರೆ ಬೆಂಗಳೂರಿಗೆ ಹೋಗುತ್ತೇವೆ ಎಂದರು.