Tag: vijendra prasad

  • ಕಬ್ಜಗಿಂತಲೂ ‘ಕಿಚ್ಚ’ನ ಸಿನಿಮಾ ದೊಡ್ಡಮಟ್ಟದಲ್ಲಿ ಇರುತ್ತದೆ : ನಿರ್ದೇಶಕ ಆರ್.ಚಂದ್ರು

    ಕಬ್ಜಗಿಂತಲೂ ‘ಕಿಚ್ಚ’ನ ಸಿನಿಮಾ ದೊಡ್ಡಮಟ್ಟದಲ್ಲಿ ಇರುತ್ತದೆ : ನಿರ್ದೇಶಕ ಆರ್.ಚಂದ್ರು

    ಕಿಚ್ಚ ಸುದೀಪ್ (Sudeep) ಹುಟ್ಟು ಹಬ್ಬದ ದಿನದಂದು ಅಚ್ಚರಿಯ ಸುದ್ದಿ ಕೊಟ್ಟು ಕಿಚ್ಚನ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾಗಿದ್ದಾರೆ ಖ್ಯಾತ ನಿರ್ದೇಶಕ ಆರ್.ಚಂದ್ರು (R. Chandru). ‘ಕಬ್ಜ 2’ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದ ಚಂದ್ರು, ಏಕಾಏಕಿ ಕಿಚ್ಚನ ಚಿತ್ರಕ್ಕೆ ಕೈ ಹಾಕಿದ್ದಾರೆ. ಜೊತೆಗೆ ಹೆಸರಾಂತ ಕಥೆಗಾರ, ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ (Vijendra Prasad) ಅವರನ್ನು ತಮ್ಮ ತಂಡದೊಂದಿಗೆ ಸೇರಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ಬಗ್ಗೆ ಈಗಿನಿಂದಲೇ ನಿರೀಕ್ಷೆ ಹೆಚ್ಚಾಗಿದೆ.

    ಚಂದ್ರು ಅವರಿಗೆ ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಿಮ್ಯಾಂಡ್ ಇದೆ. ‘ಕಬ್ಜ’ ಸಿನಿಮಾದ ನಂತರ ಬೇಡಿಕೆಯ ನಿರ್ದೇಶಕರಾಗಿದ್ದಾರೆ. ಇದನ್ನೂ ದಾಟಿಕೊಳ್ಳುವ ಮತ್ತೊಂದು ಪ್ರಾಜೆಕ್ಟ್ ಇದಾಗಿದೆ. ಹಾಗಾಗಿಯೇ ಕಿಚ್ಚ ಮತ್ತು ಚಂದ್ರು ಕಾಂಬಿನೇಷನ್ ಸಿನಿಮಾ ಗ್ಲೋಬಲ್ ಮಟ್ಟದಲ್ಲಿ ಸದ್ದು ಮಾಡಲಿದೆಯಂತೆ. ಕನ್ನಡ ಸಿನಿಮಾವೊಂದನ್ನು ಜಾಗತಿಕ ಮಟ್ಟದಲ್ಲಿ ತೆಗೆದುಕೊಂಡು ಹೋಗುವ ಪ್ಲ್ಯಾನ್ ನಿರ್ದೇಶಕರದ್ದು.

    ತನ್ನ ಜೊತೆಗಿರುವವರನ್ನು ಸದಾ ಬೆಳೆಸುತ್ತಾ ಬಂದಿದ್ದಾರೆ ಚಂದ್ರು, ಹೊಸ ಹೊಸ ನಿರ್ದೇಶಕರಿಗೆ ಅವಕಾಶವನ್ನೂ ನೀಡಿದ್ದಾರೆ. ಈಗ ತಮ್ಮ ಕನಸನ್ನು ಮತ್ತಷ್ಟು ವಿಸ್ತಾರ ಮಾಡಿಕೊಂಡಿದ್ದು, ವರ್ಷಕ್ಕೆ ಮೂರ್ನಾಲ್ಕು ಚಿತ್ರ ಮಾಡುವುದಕ್ಕಾಗಿಯೇ ‘ಆರ್.ಸಿ ಸ್ಟುಡಿಯೋಸ್’  (R.C. Studios)ಬ್ಯಾನರ್ ಅನ್ನು ಶುರು ಮಾಡಿದ್ದಾರೆ. ಈ ಸ್ಟುಡಿಯೋದ ಮೊದಲ ಚಿತ್ರವಾಗಿ ಕಿಚ್ಚನ ಸಿನಿಮಾ ಘೋಷಣೆಯಾಗಿದೆ. ಇದೇ ತಿಂಗಳಲ್ಲೇ ಮತ್ತೆ ಎರಡು ಚಿತ್ರಗಳನ್ನು ಘೋಷಿಸುವುದಾಗಿ ಅವರು ಹೇಳಿದ್ದಾರೆ.

    ಹಾಗಂತ ಕಬ್ಜ 2 ಕೆಲಸವನ್ನು ಅವರು ನಿಲ್ಲಿಸಿಲ್ಲವಂತೆ. ತನ್ನ ಪಾಡಿಗೆ ತಾನು ಸ್ಕ್ರಿಪ್ಟ್ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ಮೂವರು ಹೆಸರಾಂತ ಸ್ಟಾರ್ ನಟರು ನಟಿಸಬೇಕಿರುವುದರಿಂದ ಮೂವರ ಡೇಟ್ ಒಟ್ಟಿಗೆ ಸಿಕ್ಕ ನಂತರ ಆ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರಂತೆ. ಹಾಗಾಗಿ ಕಬ್ಜ 2 ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಭರವಸೆ ನೀಡುತ್ತಾರೆ ಚಂದ್ರು.

    ಕಬ್ಜ ಸಿನಿಮಾದಲ್ಲಿ ಸುದೀಪ್ ಮಹತ್ವದ ಪಾತ್ರವೊಂದನ್ನು ಮಾಡಿದ್ದರು. ಚಂದ್ರು ಮತ್ತು ಸುದೀಪ್ ಕಾಂಬಿನೇಷನ್ ಸಖತ್ ವರ್ಕ್ ಆಗಿತ್ತು. ಚಂದ್ರು ಕೆಲಸದ ಬಗ್ಗೆ ಆವತ್ತೆ ಸುದೀಪ್ ಮನಸಾರೆ ಹೊಗಳಿದ್ದರು. ಇದೀಗ ಚಂದ್ರು ಮತ್ತು ಸುದೀಪ್ ಅವರು ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನಿರೀಕ್ಷೆ ಇಮ್ಮಡಿಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಆರ್‌ಆರ್‌ಆರ್’ ಪಾರ್ಟ್ 2 ಬರುತ್ತಾ? ಸೀಕ್ರೆಟ್ ಬಿಚ್ಚಿಟ್ಟ ರಾಜಮೌಳಿ ತಂದೆ

    ‘ಆರ್‌ಆರ್‌ಆರ್’ ಪಾರ್ಟ್ 2 ಬರುತ್ತಾ? ಸೀಕ್ರೆಟ್ ಬಿಚ್ಚಿಟ್ಟ ರಾಜಮೌಳಿ ತಂದೆ

    ಕ್ಷಿಣ ಭಾರತದ ಸ್ಟಾರ್ ನಿರ್ದೇಶಕ ರಾಜಮೌಳಿ ಡೈರೆಕ್ಷನ್‌ನಲ್ಲಿ ‘ಆರ್‌ಆರ್‌ಆರ್’ (RRR) ಸಿನಿಮಾ ಗೆದ್ದು ಬೀಗಿರೋದು ಗೊತ್ತೆ ಇದೆ. ಚಿತ್ರದ ನಾಟು ನಾಟು (Naatu Naatu) ಹಾಡಿಗೆ ಆಸ್ಕರ್ ಗೌರವ ಕೂಡ ದಕ್ಕಿದೆ. ಇಷ್ಟೆಲ್ಲಾ ಸಾಧನೆ ಮಾಡಿರೋ ಟೀಮ್ ಕಡೆಯಿಂದ ಆರ್‌ಆರ್‌ಆರ್ ಪಾರ್ಟ್ 2 (Part 2) ಬಗ್ಗೆ ಫ್ಯಾನ್ಸ್ ನಿರೀಕ್ಷೆ ಮಾಡ್ತಿದ್ದಾರೆ. ಅಷ್ಟಕ್ಕೂ ‘ಆರ್‌ಆರ್‌ಆರ್’ ಸೀಕ್ವೆಲ್ ಬರುತ್ತಾ ಎಂಬುದನ್ನ ರಾಜಮೌಳಿ (Rajamouli) ತಂದೆ ಮಾಹಿತಿ ಬಿಚ್ಚಿಟ್ಟಿದ್ದಾರೆ.

    rrr rajamouli

    ರಾಮ್ ಚರಣ್- ಜ್ಯೂ.ಎನ್‌ಟಿಆರ್ (Jr.Ntr) ಜೋಡಿ ಸಿನಿಮಾದಲ್ಲಿ ಕಮಾಲ್ ಮಾಡಿದ್ರು. ಆಲಿಯಾ ಭಟ್ (Alia Bhatt) ಕೂಡ ಸಾಥ್ ನೀಡಿದ್ದರು. ರಾಜಮೌಳಿ ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಈ ಟ್ರಯೋ ಜೋಡಿಯನ್ನ ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ. ಈ ಬಗ್ಗೆ ವಿಜಯೇಂದ್ರ ಪ್ರಸಾದ್ ಮೌನ ಮುರಿದಿದ್ದಾರೆ. ಇದನ್ನೂ ಓದಿ:ಜಿಮ್‌ ವರ್ಕೌಟ್‌ನೇ ಪಾರ್ಟಿ ಎಂದ ನಟಿ- ಸಮಂತಾ ಬಾಲಿ ಡೈರೀಸ್

    ‘ಆರ್‌ಆರ್‌ಆರ್’ ಸೀಕ್ವೆಲ್‌ನ ರಾಜಮೌಳಿ (Rajamouli) ನಿರ್ದೇಶನ ಮಾಡುತ್ತಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಈ ಪ್ರಶ್ನೆಗೆ ಹೌದು, ಇಲ್ಲ ಎಂಬ ಎರಡೂ ಉತ್ತರ ನೀಡಬಹುದು. ಈ ಚಿತ್ರದ ಸೀಕ್ವೆಲ್ ಬಗ್ಗೆ ಅವರ ಬಳಿ ಮಾತನಾಡಿದ್ದೇನೆ. ಸಿನಿಮಾದ ಕಥೆ ಆಫ್ರಿಕಾದಲ್ಲಿ ಸಾಗುತ್ತದೆ ಎಂದು ವಿಜಯೇಂದ್ರ ಪ್ರಸಾದ್(Vijendra Prasad) ತಿಳಿಸಿದ್ದಾರೆ.

    ಸದ್ಯ ಮಹೇಶ್ ಬಾಬು (Mahesh Babu) ಅವರು ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾ ಮುಗಿದ ಮೇಲೆ ಅವರ ಜೊತೆ ರಾಜಮೌಳಿ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾ ಮುಗಿಯುವವರೆಗೂ ಅವರು ಸೀಕ್ವೆಲ್ ಬಗ್ಗೆ ಆಲೋಚಿಸುವುದಿಲ್ಲ. ಒಂದೊಮ್ಮೆ ಅವರಿಗೆ ಕಥೆ ಇಷ್ಟವಾದರೆ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ (Ramcharan) ಕಾಲ್‌ಶೀಟ್ ಸಿಗಬೇಕು ಎಂದು ಅವರು ಹೇಳಿದ್ದಾರೆ. ಒಟ್ನಲ್ಲಿ ಆರ್‌ಆರ್‌ಆರ್ ಪಾರ್ಟ್ ಮಾಡಿದ್ದರು ಮಾಡಬಹುದು ಸದ್ಯಕ್ಕೆ ಈ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ರಾಜಮೌಳಿ ತಂದೆ ತಿಳಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜಮೌಳಿ ‘ಮಹಾಭಾರತ’ ಮಾಡ್ತಾರೆ- ವಿಜಯೇಂದ್ರ ಪ್ರಸಾದ್ ಗುಡ್ ನ್ಯೂಸ್

    ರಾಜಮೌಳಿ ‘ಮಹಾಭಾರತ’ ಮಾಡ್ತಾರೆ- ವಿಜಯೇಂದ್ರ ಪ್ರಸಾದ್ ಗುಡ್ ನ್ಯೂಸ್

    ಪ್ರಭಾಸ್, ಕೃತಿ ಸನೋನ್ ನಟನೆಯ ‘ಆದಿಪುರುಷ್’ (Adipurush) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಚಿತ್ರದ ಬಗ್ಗೆ ಅಭಿಮಾನಿಗಳಿಂದ ಆಕ್ರೋಶ್ ವ್ಯಕ್ತವಾಗಿದೆ. ಆದಿಪುರುಷ್ ಬ್ಯಾನ್ ಮಾಡಿ ಅಂತಾ ಆಗ್ರಹ ಕೂಡ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಬಾಹುಬಲಿ, ಆರ್‌ಆರ್‌ಆರ್ ಖ್ಯಾತಿಯ ರಾಜಮೌಳಿ ಮಹಾಭಾರತವನ್ನ ಸಿನಿಮಾ ಮಾಡುವುದಾಗಿ ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ತಮಿಳಿನ ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ಮುಗಿಸಿದ ಶಿವಣ್ಣ

    ಬಾಹುಬಲಿಯಿಂದಾನೇ (Bahubali) ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಾಗೇ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳಿಗೂ ಪ್ಯಾನ್ ಇಂಡಿಯಾ ಇಮೇಜ್ ಸಿಕ್ಕಿದೆ. ಸಿನಿಮಾದಿಂದ ಸಿನಿಮಾಗೆ ರಾಜಮೌಳಿ (Rajamouli) ರೇಂಜ್ ಬದಲಾಗುತ್ತಲೇ ಇದೆ. ಈ ಮಧ್ಯೆ ರಾಜಮೌಳಿ ಮಹಾಭಾರತ ಸಿನಿಮಾ ಮಾಡುವ ಬಗ್ಗೆನೂ ಚರ್ಚೆ ಆರಂಭ ಆಗಿದೆ. ಇತ್ತೀಚೆಗಷ್ಟೇ ತೆರೆಕಂಡಿರೋ ಪೌರಾಣಿಕ ಸಿನಿಮಾ ಆದಿಪುರುಷ್ ಫ್ಲಾಪ್ ಆಗಿದೆ. ಇದೇ ಬೆನ್ನಲ್ಲೇ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮಹಾಭಾರತದ ಬಗ್ಗೆ ಕೆಲವು ಆಸಕ್ತಿಕರ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ವಿಜಯೇಂದ್ರ ಪ್ರಸಾದ್ (Vijendra Prasad) ‘ಮಹಾಭಾರತ’ದ ಬಗ್ಗೆ ಹೇಳಿದ್ದೇನು?

    ರಾಜಮೌಳಿಗೆ ಸಿನಿಮಾಗಳಲ್ಲಿ ಸಾಹಸ ದೃಶ್ಯಗಳನ್ನು ಹೆಚ್ಚು ಇಷ್ಟ. ಹಾಗಾಗಿ ಕಥೆಯಲ್ಲಿ ಹೆಚ್ಚೆಚ್ಚು ಸಾಹಸ ದೃಶ್ಯಗಳನ್ನೇ ಸೃಷ್ಟಿ ಮಾಡುತ್ತೇನೆಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ಹಾಗೇ ರಾಜಮೌಳಿ ಬಯಸಿದಂತೆ ಮಹಾಭಾರತ (Mahabharatha) ಸ್ಕ್ರಿಪ್ಟ್ ರೆಡಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಬಾಹುಬಲಿ ಸ್ಕ್ರಿಪ್ಟ್ ಮಾಡುವಾಗ ರಾಜಮೌಳಿ ತಂದೆ ಬಳಿ ಹೇಳಿಕೊಂಡ ಮಾತನ್ನು ನೆನಪಿಸಿಕೊಂಡಿದ್ದಾರೆ. ಬಾಹುಬಲಿ ಸ್ಕ್ರಿಪ್ಟ್ ಬರೆಯುತ್ತಿದ್ದಾಗ, ಒಂದು ರಾಜಮೌಳಿ ಬಂದು ನನ್ನ ಬಳಿ ಕೇಳಿದ್ದರು. ಅಪ್ಪ ನಾವ್ಯಾಕೆ ಈ ಸಿನಿಮಾ ಮಾಡುತ್ತಿದ್ದೇವೆ ಅಂತ ಗೊತ್ತಾ? ಅಂತ ಕೇಳಿದ್ದರು. ಆಗ ನಾನು ಯಾಕೆ ಎಂದು ಕೇಳಿದೆ. ಈ ಸಿನಿಮಾದಲ್ಲಿ ರಾಜರು, ಅರಮನೆಗಳು, ರಾಣಿಯರು, ಎದುರಾಳಿಗಳು ಹಾಗೆಯೇ ಅದ್ದೂರಿತನ ಎಲ್ಲವೂ ಇದೆ. ಈ ಸಿನಿಮಾ ಮೂಲಕ ಮುಂದಿನ ದಿನಗಳಲ್ಲಿ ನಾನು ಮಹಾಭಾರತವನ್ನು ಮಾಡಲು ಎಷ್ಟು ರೆಡಿಯಿದ್ದೇನೆ ಎಂದು ಪರೀಕ್ಷೆ ಮಾಡಿಕೊಳ್ಳಲು ಮಾಡುತ್ತಿದ್ದೇನೆ ಎಂದು ರಾಜಮೌಳಿ ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ.

    ‘ಬಾಹುಬಲಿ’ ಸಿನಿಮಾ ಮಾಡುವಾಗ ಈ ಸಿನಿಮಾ ಗೆದ್ದರೆ, ಮಹಾಭಾರತ ಸಿನಿಮಾ ಮಾಡುತ್ತೇನೆ ರಾಜಮೌಳಿ ಎಂದಿದ್ದರು ಎಂದು ವಿಜಯೇಂದ್ರ ಪ್ರಸಾದ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ದೇವರ ದಯೆಯಿಂದ ಆ ಸಿನಿಮಾ ಸಿನಿಮಾ ಆಗುತ್ತೆ. ರಾಜಮೌಳಿ ಸಿನಿಮಾ ಮಾಡುತ್ತಾರೆ ಎಂದು ರಾಜಮೌಳಿ ತಂದೆ ಅಪ್‌ಡೇಟ್ ನೀಡಿದ್ದಾರೆ.

    ಬಾಹುಬಲಿ, ಬಾಹುಬಲಿ 2, ಆರ್‌ಆರ್‌ಆರ್ ಸಿನಿಮಾಗಳನ್ನ ಕೊಟ್ಟಿರೋ ರಾಜಮೌಳಿ ಅವರ ಮಹಾಭಾರತ ಮಾಡುವ ಬಗ್ಗೆ ಸಿಹಿಸುದ್ದಿ ನೀಡಿರೋದು ಫ್ಯಾನ್ಸ್ಗೆ ಖುಷಿ ಕೊಟ್ಟಿದೆ. ಒಂದು ಸಿನಿಮಾಗೆ 3-4 ವರ್ಷ ಸಮಯ ಮೀಸಲಿಡುವ ರಾಜಮೌಳಿ ಅವರ ಸಿನಿಮಾ ಮೇಲಿನ ಪ್ರೀತಿ ಅಭಿಮಾನಿಗಳಿಗೆ ತಿಳಿದಿದೆ ಹಾಗಾಗಿ ‘ಮಹಾಭಾರತ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ.

  • ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್: ಸ್ಕ್ರಿಪ್ಟ್ ಬರೆಯಲಿದ್ದಾರೆ ಜಕ್ಕಣ್ಣನ ತಂದೆ ವಿಜಯೇಂದ್ರ ಪ್ರಸಾದ್

    ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್: ಸ್ಕ್ರಿಪ್ಟ್ ಬರೆಯಲಿದ್ದಾರೆ ಜಕ್ಕಣ್ಣನ ತಂದೆ ವಿಜಯೇಂದ್ರ ಪ್ರಸಾದ್

    ಭಾರತೀಯ ಸಿನಿಮಾರಂಗದಲ್ಲಿ ಬಯೋಪಿಕ್‌ಗಳ ಕುರಿತಾದ ಚಿತ್ರಗಳು ಸಾಕಷ್ಟು ಯಶಸ್ಸು ಕಾಣುತ್ತಿದೆ. ಅಭಿಮಾನಿಗಳ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡಲು ನಿರ್ಮಾಪಕರು ಉತ್ಸಾಹ ತೋರಿಸುತ್ತಿದ್ದಾರೆ. ಈಗ ನಿಜ ಜೀವನದಲ್ಲಿ ಸಾಧನೆ ಮಾಡಿರುವ ಸಾಧಕನ ಕಥೆಯನ್ನು ಹೇಳಲು `ಆರ್‌ಆರ್‌ಆರ್’ ಚಿತ್ರದ ಕಥೆಗಾರ ವಿಜಯೇಂದ್ರ ಪ್ರಸಾದ್ ಹೊರಟಿದ್ದಾರೆ.‌

    `ಮಗಧೀರ’, `ಭಜರಂಗಿ ಭಾಯಿಜಾನ್’, `ಬಾಹುಬಲಿ’, ಮುಂತಾದ ಸೂಪರ್ ಹಿಟ್ ಸಿನಿಮಾಗಳ ಕಥೆಗಾರ ವಿಜಯೇಂದ್ರ ಪ್ರಸಾದ ಈಗ ಅವರು ಖ್ಯಾತ ಸಾಹಿತಿ ಬಂಕಿಮ್ ಚಂದ್ರ ಚಟರ್ಜಿ ಬರೋಪಿಕ್ ಸ್ಕ್ರಿಪ್ಟ್ ಬರೆಯಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಬಂಕಿಮ್ ಚಂದ್ರ ಚಟರ್ಜಿ ಅವರ ಕೊಡುಗೆ ಅಪಾರ. ಕವಿಯಾಗಿ, ಕಾದಂಬರಿಕಾರರಾಗಿ, ಪತ್ರಕರ್ತರಾಗಿ ಬಂಕಿಮ್ ಚಂದ್ರ ಚಟರ್ಜಿ ಸಾಧನೆ ಮಾಡಿದ್ದಾರೆ.‌

    ನಿಜ ಜೀವನದಲ್ಲಿ ಸ್ಪೂರ್ತಿಯ ಚಿಲುವೆಯಾಗಿರುವ ಬಂಕಿಮ್ ಚಂದ್ರ ಚಟರ್ಜಿ ಅವರ ಜೀವನಗಾಥೆಯನ್ನು ತೆರೆಯ ಮೇಲೆ ತೋರಿಸಲು ರಾಮ್ ಕಮಲ್ ಸಜ್ಜಾಗಿದ್ದಾರೆ. ಖ್ಯಾತ ಸಾಹಿತಿಕಾರನ ಇಂಚಿಂಚೂ ಸಾಧನೆಯನ್ನ ಸ್ಟಾರ್ ಡೈರೆಕ್ಟರ್ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರು ಬರೆಯಲಿದ್ದಾರೆ. ಇದನ್ನು ಓದಿ:ಚೀನಾಗೆ ಸೆಡ್ಡು ಹೊಡೆದ ಯಶ್ ಫ್ಯಾನ್ಸ್- ಮಾಲೂರಿನಲ್ಲಿ ಮೊಸಾಯಿಕ್ ಆರ್ಟ್ ದಾಖಲೆ

    ರಾಜಮೌಳಿ ಅವರ ಯಶಸ್ಸಿಗೆ ತಂದೆ ವಿಜಯೇಂದ್ರ ಪ್ರಸಾದ್ ಅವರ ಕೊಡುಗೆ ದೊಡ್ಡದಿದೆ. `ಆರ್‌ಆರ್‌ಆರ್’ ಯಶಸ್ಸಿನ ನಂತರ ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್‌ಗೆ ಸ್ಕ್ರಿಪ್ಟ್ ಕೆಲಸಗಳು ಚಾಲ್ತಿಯಲ್ಲಿದೆ. ಖ್ಯಾತ ಸಾಹಿತಿಕಾರನ ಜೀವನ ಸಾಧನೆಯನ್ನ ತೆರೆಯ ತೋರಿಸಲು ಸಕಲ ಸಿದ್ಧತೆ ನಡೆಯುತ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರೀಲ್ ಆಗಿದ್ದಾರೆ.