Tag: VijaySuriya

  • 70 ಕೋಟಿ ಮೊತ್ತದ ದುಬಾರಿ ಫ್ಲಾಟ್‌ ಖರೀದಿಸಿದ ಸೂರ್ಯ- ಜ್ಯೋತಿಕಾ ದಂಪತಿ

    70 ಕೋಟಿ ಮೊತ್ತದ ದುಬಾರಿ ಫ್ಲಾಟ್‌ ಖರೀದಿಸಿದ ಸೂರ್ಯ- ಜ್ಯೋತಿಕಾ ದಂಪತಿ

    ಕಾಲಿವುಡ್‌ನ (Kollywood) ಸ್ಟಾರ್ ಕಪಲ್ ಸೂರ್ಯ – ಜ್ಯೋತಿಕಾ (Jyothika) ತಮ್ಮ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದಾರೆ. ತೆರೆಯ ಮೇಲೆ ಕಮಾಲ್ ಮಾಡಿರುವ ಈ ಜೋಡಿ, ತೆರೆ ಹಿಂದೆ ಕೂಡ ಅದೆಷ್ಟೋ ಅಭಿಮಾನಿಗಳಿಗೆ ರೋಲ್ ಮಾಡೆಲ್ ಆಗಿದ್ದಾರೆ. ಸೂರ್ಯ (Suriya) ದಂಪತಿ ಇದೀಗ ಹೊಸ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಮುಂಬೈ ಐಷಾರಾಮಿ ಫ್ಲಾಟ್ ಖರೀದಿಸಿದ್ದಾರೆ. ಈ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

    ಸೂರರೈ ಪೊಟ್ರು, ಜೈ ಭೀಮ್ (Jai Bheem) ಚಿತ್ರಗಳ ಮೂಲಕ ಸೂರ್ಯ ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟಿದ್ದರೆ, ಜ್ಯೋತಿಕಾ ಅವರು ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಸೈ ಎನಿಸಿಕೊಂಡಿದ್ದಾರೆ.ಇದನ್ನೂ ಓದಿ: ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ : ನಟನ ನಿವಾಸಕ್ಕೆ ಫುಲ್ ಸೆಕ್ಯೂರಿಟಿ

    ಇದೀಗ ಮುಂಬೈನಲ್ಲಿ ಬರೋಬ್ಬರಿ 70 ಕೋಟಿ ರೂ. ಮೊತ್ತದ ಅಪಾರ್ಟ್ಮೆಂಟ್ ಫ್ಲಾಟ್ ಅನ್ನು ನಟ ಸೂರ್ಯ ಖರೀದಿಸಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಗಾರ್ಡನ್ ಏರಿಯಾ, ಪಾರ್ಕಿಂಗ್, ಸ್ವಿಮ್ಮಿಂಗ್ ಫೂಲ್, ಜಿಮ್, ಥಿಯೇಟರ್ ಸೇರಿದಂತೆ ಎಲ್ಲಾ ಸೌಕರ್ಯ ಇರುವ ದುಬಾರಿ ಫ್ಲಾಟ್ ಇದಾಗಿದ್ದು, ಅಂದಾಜು 9 ಸಾವಿರ ಚದರ ಅಡಿ ವಿಸ್ತೀರ್ಣ ಇದೆಯಂತೆ. ಇನ್ನೂ 2016ರಲ್ಲಿ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ದಿಯಾ, ದೇವ್ ಎನ್ನುವ ಇಬ್ಬರು ಮಕ್ಕಳು ಇದ್ದಾರೆ.

    ಶೀಘ್ರದಲ್ಲೇ ಸೂರ್ಯ ದಂಪತಿ ಮುಂಬೈಗೆ ಶಿಫ್ಟ್ ಆಗುತ್ತಾರೆ ಎನ್ನಲಾಗ್ತಿದೆ. ಇನ್ನು ಪೋಷಕರ ಜೊತೆಗಿನ ಮನಸ್ತಾಪದಿಂದ ಸೂರ್ಯ- ಜ್ಯೋತಿಕಾ ಬೇರೆ ಕಡೆ ವಾಸಿಸುತ್ತಿದ್ದಾರೆ ಎನ್ನುವ ಗುಸುಗುಸು ಕೂಡ ಇತ್ತೀಚೆಗೆ ಕೇಳಿಬಂದಿತ್ತು. ಇದೀಗ ಇಬ್ಬರು ಮುಂಬೈಗೆ ಶಿಫ್ಟ್ ಆಗ್ತಾರಾ? ಎನ್ನುವ ಚರ್ಚೆ ಶುರುವಾಗಿದೆ. ಸದ್ಯ ಸೂರ್ಯ ಇನ್ನು ಹೆಸರಿಡದ ಐತಿಹಾಸಿಕ ಕಥಾಹಂದರ ಚಿತ್ರವೊಂದರಲ್ಲಿ ನಟಿಸ್ತಿದ್ದಾರೆ. ಇದರಲ್ಲಿ ವಿಭಿನ್ನ ಗೆಟಪ್‌ಗಳಲ್ಲಿ ದರ್ಶನ ಕೊಡಲಿದ್ದಾರೆ. ನಿರ್ದೇಶಕ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

  • ಕದ್ದುಮುಚ್ಚಿ: ಬಚ್ಚಿಟ್ಟ ಭಾವಗಳ ಬೆರಗಾಗಿಸೋ ಕಥೆ!

    ಕದ್ದುಮುಚ್ಚಿ: ಬಚ್ಚಿಟ್ಟ ಭಾವಗಳ ಬೆರಗಾಗಿಸೋ ಕಥೆ!

    ಬೆಂಗಳೂರು: ದುಡ್ಡೊಂದಿದ್ದರೆ ಸಕಲ ಸುಖಗಳೂ ಕಾಲ ಬುಡದಲ್ಲಿ ಮುದುರಿ ಮಲಗುತ್ತವೆ ಅನ್ನೋ ಮನಸ್ಥಿತಿ ಅನೇಕರಿಗಿದೆ. ಆದರೆ ದುಡ್ಡು ಕಾಸಿನಾಚೆಗೆ ಸಿಗೋ ಪ್ರೀತಿ, ನೆಮ್ಮದಿಯೇ ಬದುಕೆಂಬ ಸತ್ಯ ಅನೇಕರ ಅರಿವಿಗೆ ಬಂದಿರೋದಿಲ್ಲ. ಇಂಥಾದ್ದೊಂದು ಸೂಕ್ಷ್ಮ ಎಳೆಯಲ್ಲಿಟ್ಟುಕೊಂಡು ರೂಪುಗೊಂಡಿರುವ ಮಧುರವಾದ ಕಥೆಯನ್ನು ಕದ್ದುಮುಚ್ಚಿ ಚಿತ್ರ ಒಳಗೊಂಡಿದೆ.

    ಈಗಿನ ಕಾಲಮಾನದ ಕೆಲ ಪೋಷಕರಲ್ಲಿಯೂ ದುಡ್ಡೇ ದೊಡ್ಡದು ಎಂಬಂಥಾ ಭ್ರಮ ಇದೆ. ಇದೇ ಮನಸ್ಥಿತಿಯಲ್ಲಿಯೇ ತಮ್ಮ ಮಕ್ಕಳ ಎಳೇ ಮನಸುಗಳನ್ನವರು ಪದೇ ಪದೆ ಘಾಸಿಗೊಳಿಸುತ್ತಿರುತ್ತಾರೆ. ಹಾಗೆಯೇ ನೋವುಣ್ಣುತ್ತಾ ಬೆಳೆದ ಹುಡುಗನೊಬ್ಬ ಎಲ್ಲ ಸಂಪತ್ತನ್ನೂ ಕಡೆಗಣಿಸಿ ಪ್ರೀತಿಯನ್ನಷ್ಟೇ ಅರಸಿ ಹೊರಡೋ ಯುವಕನೊಬ್ಬನ ಸುತ್ತಲಿನ ಕಥೆ ‘ಕದ್ದುಮುಚ್ಚಿ’ ಚಿತ್ರದ್ದು.

    ಹಾಗೆ ಪ್ರೀತಿಯನ್ನರಸಿ ಹೊರಡೋ ಹುಡುಗನ ಮುಂದೆ ಮಲೆನಾಡ ದೇವತೆಯಂಥಾ ಹುಡುಗಿಯೊಬ್ಬಳು ಎದುರಾಗುತ್ತಾಳೆ. ಆ ನಂತರ ಹುಡುಗನ ಬದುಕು ಹೇಗೆ ಬದಲಾಗುತ್ತೆ, ಆತ ಅರಸಿ ಹೊರಟ ಪ್ರೀತಿ ಸಿಗುತ್ತದಾ ಎಂಬುದು ಕಥೆಯ ಜೀವಾಳ. ಆದರೆ ಒಟ್ಟಾರೆ ಸಿನಿಮಾದಲ್ಲಿ ಊಹಿಸಲಾರದ ತಿರುವುಗಳಿವೆ. ಮನಸಾರೆ ನಗುವಂಥಾ ಕಾಮಿಡಿ, ಮೈನವಿರೇಳಿಸೋ ಸಾಹಸ ಮತ್ತು ನೇರವಾಗಿ ಎದೆಗೇ ನಾಟಿಕೊಳ್ಳುವಂಥಾ ಭಾವನಾತ್ಮಕ ವಿಚಾರಗಳೂ ಇವೆಯಂತೆ. ಇಂಥಾ ಹತ್ತಾರು ವೈಶಿಷ್ಟ್ಯಗಳನ್ನ ಹೊಂದಿರೋ ಈ ಚಿತ್ರ ಬಿಡುಗಡೆಯ ಹಾದಿಯಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv