Tag: Vijaypura

  • ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್ – ಪ್ರಕರಣದ ತನಿಖೆಯನ್ನು ರಾಜಕೀಕರಣಗೊಳಿಸಬೇಡಿ: ಸತೀಶ್ ಜಾರಕಿಹೊಳಿ

    ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್ – ಪ್ರಕರಣದ ತನಿಖೆಯನ್ನು ರಾಜಕೀಕರಣಗೊಳಿಸಬೇಡಿ: ಸತೀಶ್ ಜಾರಕಿಹೊಳಿ

    ವಿಜಯಪುರ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ರಾಜಕೀಕರಣಗೊಳಿಸಬೇಡಿ ಎಂದು ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದರು.

    ವಿಜಯಪುರದಲ್ಲಿ (Vijayapura) ಮಾತನಾಡಿದ ಅವರು, ಎಸ್‌ಐಟಿ (SIT) ರಚನೆಯಾಗಿದೆ, ಪೊಲೀಸರು ಕೆಲಸ ಮಾಡ್ತಿದ್ದಾರೆ, ಮಾಡಲು ಬಿಡಿ. ಪ್ರಕರಣದ ತನಿಖೆಯನ್ನ ರಾಜಕೀಕರಣಗೊಳಿಸಬೇಡಿ. ಅಡ್ವಾನ್ಸ್ ಜಡ್ಜ್ಮೆಂಟ್ ಬರೆಯುವ ಅವಶ್ಯಕತೆ ಇಲ್ಲ. ತನಿಖೆ ಮಾಡಲಿ, ಏನು ಸತ್ಯಾಂಶವಿದೆ, ಅದು ಹೊರಗೆ ಬರುತ್ತದೆ ಎಂದರು. ಇನ್ನೂ ಈ ಕುರಿತು ಬಿಜೆಪಿಯವರು ಏನಾದರೂ ಹಬ್ಬಿಸೋದು ಕಾಮನ್. ಚುನಾವಣೆ ಸಮಯದಲ್ಲಿಯೂ 6 ತಿಂಗಳು ಇರುವಾಗ ಶುರು ಮಾಡುತ್ತಾರೆ. ಆದರೆ ಈಗ ಮೂರು ವರ್ಷ ಮುಂಚೆಯೇ ಶುರು ಮಾಡಿದ್ದಾರೆ. ಇದೇನು ಹೊಸದಲ್ಲ, ಹಿಂದೆ ಕರಾವಳಿಯಲ್ಲಿ ಹಿಂದೂಗಳ ಹತ್ಯೆ ಎಂದಿದ್ದರು. ಸಿಬಿಐ, ಎಸ್‌ಐಟಿ ರಚನೆ ಮಾಡಿದ್ದರು. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದರು.ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಆಗಸ್ಟ್‌ನಲ್ಲಿ ಯೆಲ್ಲೋ ಲೈನ್ ಉದ್ಘಾಟನೆ ಸಾಧ್ಯತೆ

    ಇದೇ ವೇಳೆ ಬಿಜೆಪಿ ಶಾಸಕರಿಗೆ ಕಡಿಮೆ ಅನುದಾನ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಕೊಟ್ಟಿದ್ದಾರೆ. ಬಿಜೆಪಿ, ಜೆಡಿಎಸ್ ಶಾಸಕರಿಗೆ 25 ಕೋಟಿ ರೂ. ಕೊಟ್ಟಿದ್ದೇವೆ. ಬಿಜೆಪಿಯವರು ನಮಗೆ ಕೇವಲ 5 ಕೋಟಿ ರೂ. ಕೊಟ್ಟಿದ್ದರು. ನಾವು ಅವರಿಗಿಂತ ಹೆಚ್ಚಿಗೆ ಕೊಟ್ಟಿದ್ದೇವೆ ಎಂದು ಟಾಂಗ್ ಕೊಟ್ಟರು.

    ಕೆಪಿಸಿಸಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿ, ಅದು ನಮ್ಮ ಹಂತದಲ್ಲಿ ಇಲ್ಲ. ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸಮಯ ಬಂದಾಗ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುತ್ತಾರೆ. ಸೂಕ್ತ ಸಮಯದಲ್ಲಿ ವರಿಷ್ಠರು ನಿರ್ಧಾರ ಮಾಡುತ್ತಾರೆ. ಇದನ್ನು ನಾವು ಹೇಳೋಕೆ ಆಗಲ್ಲ. ಕಾದು ನೋಡೋಣ ಎಂದರು.

    ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಬಿರುಗಾಳಿ ವಿಚಾರವಾಗಿ ಮಾತನಾಡಿ, ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ಮಾಡಬೇಕು. ಸಿಎಂ ಈಗಾಗಲೇ ನಾನೇ 5 ವರ್ಷ ಇರ್ತಿನಿ ಎಂದಿದ್ದಾರೆ. ಜಾಗ ಖಾಲಿ ಇಲ್ಲ ಎಂದು ಸ್ವತಃ ಡಿಸಿಎಂ ಹೇಳಿದ್ದಾರೆ. ಅವರೇ ಹೊಂದಾಣಿಕೆ ಆಗಿದ್ದಾರೆ, ನಾವೇನು ಹೇಳಬೇಕು ಎಂದು ತಿಳಿಸಿದರು.ಇದನ್ನೂ ಓದಿ: ದೆಹಲಿಯಲ್ಲಿ ಲ್ಯಾಂಡಿಂಗ್‌ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ – ಪ್ರಯಾಣಿಕರು ಸೇಫ್

  • ಭೀಮಾತೀರದ ನಕಲಿ ಎನ್‌ಕೌಂಟರ್ ಕೇಸ್ – ಜು.1ಕ್ಕೆ ವಿಚಾರಣೆ ಮುಂದೂಡಿಕೆ

    ಭೀಮಾತೀರದ ನಕಲಿ ಎನ್‌ಕೌಂಟರ್ ಕೇಸ್ – ಜು.1ಕ್ಕೆ ವಿಚಾರಣೆ ಮುಂದೂಡಿಕೆ

    ವಿಜಯಪುರ: ಭೀಮಾತೀರದ ನಟೋರಿಯಸ್ ಹಂತಕರಾದ ಧರ್ಮರಾಜ್ ಚಡಚಣ ಹಾಗೂ ಆತನ ಸಹೋದರ ಗಂಗಾಧರನ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆಯನ್ನು ವಿಜಯಪುರ (Vijayapura) ಜಿಲ್ಲಾ ನ್ಯಾಯಾಲಯ ಜು.1ಕ್ಕೆ ಮುಂದೂಡಿದೆ.

    ಸೋಮವಾರ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ ಆರೋಪಿಗಳಾದ ಮಹಾದೇವ ಭೈರಗೊಂಡ ಹಾಗೂ ಇತರೆ 16 ಜನರು ಹಾಜರಿದ್ದರು.ಇದನ್ನೂ ಓದಿ: 2028ಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ: ಲಕ್ಷ್ಮಣ್ ಸವದಿ

    ಹಂತಕ ಧರ್ಮರಾಜ್ ನಕಲಿ ಎನ್‌ಕೌಂಟರ್ ನಡೆಸಿದ್ದು, ಆಗಿನ ಚಡಚಣ ಪಿಎಸ್‌ಐ ಆಗಿ ಇದೇ ಗೋಪಾಲ್ ಹಳ್ಳೂರ್ ಕಾರ್ಯನಿರ್ವಹಿಸುತ್ತಿದ್ದರು. ಈ ಇಬ್ಬರು ಭೀಮಾತೀರದ ಚಡಚಣ ಸಹೋದರರ ಹತ್ಯೆ ಪ್ರಕರಣದ ಮುಖ್ಯ ಆರೋಪಿಗಳಾಗಿದ್ದಾರೆ. ಈ ಇಬ್ಬರು ಸಹ ನ್ಯಾಯಾಲಯಕ್ಕೆ ಹಾಜರಾಗಿದ್ದರು.

    ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು ವಿಚಾರಣೆಯನ್ನು ಜು.1ಕ್ಕೆ ಮುಂದೂಡಿದರು. ಭೀಮಾತೀರದ ನಟೋರಿಯಸ್‌ಗಳ ವಿಚಾರಣೆ ಹಿನ್ನೆಲೆ ನ್ಯಾಯಾಲಯದ ಆವರಣದಲ್ಲಿ ಪೊಲೀಸ್ ಬಿಗಿಭದ್ರತೆ ನಿಯೋಜನೆ ಮಾಡಲಾಗಿತ್ತು.ಇದನ್ನೂ ಓದಿ: ಅಲ್ಲು ಹೊಸ ಸಿನಿಮಾ ಡ್ಯೂನ್‌ ಕಾಪಿ? – ಕಿಡಿ ಕಿಡಿ ಕ್ಲಾರಿಟಿ ಕೊಟ್ಟ ಅಟ್ಲೀ

  • ಮನೆಯಲ್ಲಿ ನಾನು ಹೇಳದೇ ನನ್ನ ಹೆಂಡತಿ ತೀರ್ಮಾನ ಮಾಡ್ತಾಳಾ? ಇದೆಲ್ಲ ನಾಟಕ – ರಮೇಶ ಜಿಗಜಿಣಗಿ

    ಮನೆಯಲ್ಲಿ ನಾನು ಹೇಳದೇ ನನ್ನ ಹೆಂಡತಿ ತೀರ್ಮಾನ ಮಾಡ್ತಾಳಾ? ಇದೆಲ್ಲ ನಾಟಕ – ರಮೇಶ ಜಿಗಜಿಣಗಿ

    – ಸಿಎಂ ಸಲಹೆಯಿಂದಲೇ ಅವರ ಪತ್ನಿ ಸೈಟ್ ವಾಪಸ್ ನೀಡಿದ್ದಾರೆ

    ವಿಜಯಪುರ: ನಮ್ಮ ಮನೆಯಲ್ಲಿ ನಾನು ಹೇಳದೇ ನನ್ನ ಹೆಂಡತಿ ತೀರ್ಮಾನ ಮಾಡ್ತಾಳಾ? ಇದೆಲ್ಲ ನಾಟಕ ಎಂದು ಹೇಳುವ ಮೂಲಕ ಸಿಎಂ ಪತ್ನಿ ಮುಡಾ ಸೈಟ್ (MUDA Site) ವಾಪಸ್ ನೀಡಿರುವ ವಿಚಾರವಾಗಿ ಸಂಸದ ರಮೇಶ ಜಿಗಜಿಣಗಿ (Ramesh Jigajinagi) ವಾಗ್ದಾಳಿ ನಡೆಸಿದ್ದಾರೆ.

    ಜಿಲ್ಲೆಯಲ್ಲಿ ಮಾತನಾಡಿದ ಅವರು, ಸಿಎಂ ಯಾಕೆ ಸೈಟ್ ತಗೋಬೇಕಿತ್ತು? ಸೈಟ್ ತಗೊಂಡ ಮೇಲೆ ವಾಪಸ್ ಯಾಕೆ ಕೊಡಬೇಕು? ತಪ್ಪು ಮಾಡಿದ್ದಾರೆ ಅದಕ್ಕೆ ವಾಪಸ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ (CM Siddaramaiah) ಸಲಹೆಯಿಂದಲೇ ಅವರ ಪತ್ನಿ ಸೈಟ್ ವಾಪಸ್ ನೀಡಿದ್ದಾರೆ. ನಮ್ಮ ಮನೆಯಲ್ಲಿ ನಾನು ಹೇಳದೇ ನನ್ನ ಹೆಂಡತಿ ತೀರ್ಮಾನ ಮಾಡ್ತಾಳಾ? ಇದೆಲ್ಲವೂ ನಾಟಕ? ಸೈಟ್ ವಾಪಸ್ ನೀಡಿದ್ದು ನಾಟಕ? ಎಂದರು.ಇದನ್ನೂ ಓದಿ: ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ಕಿತ್ತೂರು ರಾಣಿ ಚನ್ನಮ್ಮ – ಸಿಎಂ

    ರಾಮಕೃಷ್ಣ ಹೆಗಡೆಯವರಂತೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ. ನಾನು ಹಿಂದೆನೇ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಯೋಗ್ಯ ಎಂದು ಹೇಳಿದ್ದೆ. ಈಗ ಸಿಎಂ ಕೆಸರಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ. ಕೆಸರಲ್ಲಿ ಸಿಕ್ಕು ಒದ್ದಾಡುವಾಗ ಯಾರು ಬದುಕಿಸುತ್ತಾರೆ? ರಾಜಕಾರಣ ಗಬ್ಬೆದ್ದು ನಾರುತ್ತಿದೆ. ಎಲ್ಲ ಪಕ್ಷಗಳಲ್ಲೂ ಇದೆ ಸ್ಥಿತಿಯಿದೆ. ಎಲ್ಲರೂ ಸೇರಿಕೊಂಡೆ ರಾಜಕಾರಣವನ್ನ ಗಬ್ಬು ಹಿಡಿಸಿದ್ದೇವೆ. ಎಲ್ಲ ಪಕ್ಷಗಳು ನಿಷ್ಠೆಯಿಂದ ಕೆಲಸ ಮಾಡುತ್ತಿವೆ. ನಾವು ರಾಜಕಾರಣಿಗಳು ಗಬ್ಬು ಹಿಡಿಸಿದ್ದೇವೆ ಎಂದು ಸದ್ಯದ ರಾಜಕೀಯದ ಬಗ್ಗೆ ಅಸಮಧಾನ ಹೊರಹಾಕಿದರು.

    ಇದೇ ವೇಳೆ ದಲಿತರ ಗೌಪ್ಯ ಮೀಟಿಂಗ್ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್‌ನಲ್ಲಿ (Congress) ದಲಿತರ ಗೌಪ್ಯ ಮೀಟಿಂಗ್ ನಾಟುವುದಿಲ್ಲ. ದೆಹಲಿಯಿಂದ ಏನು ಬರುತ್ತದೆ ಅದು ಮಾತ್ರ ನಾಟುತ್ತದೆ. ಜನುಮದಲ್ಲಿ ಕಾಂಗ್ರೆಸ್‌ನವರು ದಲಿತರನ್ನು ಸಿಎಂ ಮಾಡಲ್ಲ. ಇದು ಸತ್ಯ. ಕಾಂಗ್ರೆಸ್‌ನ ದಲಿತರು ಕನಸು ಕಾಣುತ್ತಿದ್ದಾರೆ ಅಷ್ಟೇ. ಮಹದೇವಪ್ಪ ಹುಚ್ಚನಿದ್ದಾನೆ. ಪೈಪೋಟಿ ನಡೆಯುತ್ತದೆ ಅದರಿಂದ ಏನು ನಡೆಯಲ್ಲ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: HMT ಕ್ಯಾಂಪಸ್‌ನಲ್ಲಿ ಪೌರ ಕಾರ್ಮಿಕರೊಂದಿಗೆ ಕಸ ಗುಡಿಸಿದ ಹೆಚ್‌ಡಿಕೆ

  • ನಡು ರಸ್ತೆಯಲ್ಲೇ ಹೊತ್ತಿ ಉರಿದ ಸ್ಪಿರಿಟ್ ಟ್ಯಾಂಕರ್ – ತಪ್ಪಿದ ಭಾರೀ ದುರಂತ

    ನಡು ರಸ್ತೆಯಲ್ಲೇ ಹೊತ್ತಿ ಉರಿದ ಸ್ಪಿರಿಟ್ ಟ್ಯಾಂಕರ್ – ತಪ್ಪಿದ ಭಾರೀ ದುರಂತ

    ವಿಜಯಪುರ: ನಡು ರಸ್ತೆಯಲ್ಲೇ ಉರುಳಿ ಬಿದ್ದ ಸ್ಪಿರಿಟ್ ತುಂಬಿದ ಟ್ಯಾಂಕರ್ ಧಗ ಧಗನೆ ಹೊತ್ತಿ ಉರಿದಿರುವ (Spirit Tanker Fire) ಘಟನೆ ವಿಜಯಪುರದಲ್ಲಿ ನಡೆದಿದ್ದು, ಭಾರೀ ಅನಾಹುತ ತಪ್ಪಿದೆ.

    ವಿಜಯಪುರ (Vijaypura) ಜಿಲ್ಲೆಯ ಸಿಂದಗಿ ಪಟ್ಟಣದ ಹೊರಭಾಗದ ಕಲಬುರಗಿ ಬೈ ಪಾಸ್‌ ಬಳಿ ಚಾಲಕನ ನಿಯಂತ್ರಣ ತಪ್ಪಿದ್ದರಿಂದಾಗಿ ಟ್ಯಾಂಕರ್‌ ಉರುಳಿಬಿದ್ದಿದೆ. ರಸ್ತೆ ಪಕ್ಕದಲ್ಲಿ ಉರುಳಿ ಬೀಳುತ್ತಲೇ ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದನ್ನೂ ಓದಿ: ವಾಣಿಜ್ಯೋದ್ಯಮಿ ಪಲ್ಲವಿ ಡೆಂಪೊಗೆ ಟಿಕೆಟ್‌ – ಗೋವಾ ಇತಿಹಾಸದಲ್ಲೇ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಮೊದಲ ಮಹಿಳೆ

    ಟ್ಯಾಂಕರ್ ಉರುಳಿ ಬೀಳುತ್ತಲೇ ಚಾಲಕ ಕ್ಲೀನರ್ ಎಸ್ಕೇಪ್ ಆಗಿದ್ದಾರೆ. ಬೆಂಕಿಯ ಕೆನ್ನಾಲಿಗೆ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿಯ ಹರಸಾಹಸ ಪಟ್ಟಿದ್ದಾರೆ. ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆ ಬಳಿಕ ರಸ್ತೆಯಲ್ಲೇ ನಿಂತಿದ್ದ ಸ್ಥಳೀಯರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದಾರೆ.

    ಸಿಂದಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ‘ಕರ್ನಾಟಕ Love’s ಕೇರಳ’ ವೆಬ್ ಸಿರೀಸ್: ಬಸ್ ಮೆಕಾನಿಕಲ್ ಹೀರೋ

  • ಜೈಲಿನಲ್ಲಿ ಶ್ರೀರಾಮೋತ್ಸವ ಆಚರಿಸಿದ್ದಕ್ಕೆ ಹಿಂದೂ ಕೈದಿಗಳ ಮೇಲೆ ಹಲ್ಲೆ ಆರೋಪ!

    ಜೈಲಿನಲ್ಲಿ ಶ್ರೀರಾಮೋತ್ಸವ ಆಚರಿಸಿದ್ದಕ್ಕೆ ಹಿಂದೂ ಕೈದಿಗಳ ಮೇಲೆ ಹಲ್ಲೆ ಆರೋಪ!

    – ಖುದ್ದು ಜೈಲರ್ ಸಮ್ಮುಖದಲ್ಲೇ ಮುಸ್ಲಿಂ ಕೈದಿಗಳಿಂದ ಹಲ್ಲೆ ನಡೆಸಿರುವ ಆರೋಪ
    – ಹಿಂದೂ ಸಂಘಟನೆಗಳಿಂದ ಕ್ರಮಕ್ಕೆ ಒತ್ತಾಯ

    ವಿಜಯಪುರ: ಇದೇ ಜನವರಿ 22ರಂದು ಅಯೋಧ್ಯೆ ಶ್ರೀರಾಮಮಂದಿರದಲ್ಲಿ (Ram Mandir) ಬಾಲಕ ರಾಮನ ಪ್ರಾಣಪ್ರತಿಷ್ಠೆ ನೆರವೇರಿತು. ಇದೇ ಸಮಯಕ್ಕೆ ಶ್ರೀರಾಮನ ಭಕ್ತರು ದೇಶಾದ್ಯಂತ ವಿಶೇಷ ಪೂಜೆ-ಪುನಸ್ಕಾರಗಳನ್ನ ನೆರವೇರಿಸಿದ್ದರು.

    ಅದರಂತೆ ವಿಜಯಪುರದ ಜೈಲಿನಲ್ಲಿಯೂ (Vijaypura Jail) ಕೆಲ ಕೈದಿಗಳು ಜೈಲಿನಲ್ಲಿ ರಾಮೋತ್ಸವ ಆಚರಣೆ ಮಾಡಿದ್ದರು. ಇದನ್ನು ಸಹಿಸದ ಕೆಲವು ಅಧಿಕಾರಿಗಳು ಮುಸ್ಲಿಂ ಖೈದಿಗಳಿಂದ ಹಿಂದೂ ಕೈದಿಗಳ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ವಿಜಯಪುರದ ಕೇಂದ್ರ ಕಾರಾಗೃಹದ ದರ್ಗಾ ಜೈಲ್‌ನಲ್ಲಿ ಘಟನೆ ನಡೆದಿದ್ದು, ಜೈಲಿನಲ್ಲಿ ರಾಮೋತ್ಸವ ಆಚರಿಸಿದ್ದಕ್ಕಾಗಿ ಹಿಂದೂ ಕೈದಿಗಳ (Prisoners) ಮೇಲೆ ಹಲ್ಲೆ ಮಾಡಿಸಿದ್ದಾರೆ ಎನ್ನಲಾಗಿದೆ.

    ಜ.22ರಂದು ಪ್ರಾಣಪ್ರತಿಷ್ಠೆ ಸಮಯಕ್ಕೆ ಜೈಲಿನಲ್ಲಿದ್ದ ಮಹಾರಾಷ್ಟ್ರ ಮೂಲದ ಪರಮೇಶ್ವರ ಜಾಧವ (ದೇವಾ), ರಮೇಶ ದಳವಿ, ಪ್ರದೀಪ ಮಾನೆ ಎಂಬ ಹಿಂದೂ ಕೈದಿಗಳು ಸೆಲ್‌ನಲ್ಲೇ ಶ್ರೀರಾಮೋತ್ಸವ ಆಚರಣೆ ಮಾಡಿದ್ದರು. ಇದರಿಂದ ಕೋಪಗೊಂಡ ಜೈಲರ್ ತನ್ನ ಕಚೇರಿಗೆ ಕರೆಸಿ ಮುಸ್ಲಿಂ ಕೈದಿಗಳಿಂದ ಹಲ್ಲೆ ಮಾಡಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಜೈಲ್‌ನಲ್ಲಿರುವ ಶೇಖ್ ಅಹ್ಮದ್ ಹಾಗೂ ಸಹಚರರಿಂದ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಈ ಹಲ್ಲೆಗೆ ಜೈಲಿನಲ್ಲಿರುವ ಇತರ ಮುಸ್ಲಿಂ ಅಧಿಕಾರಿಗಳೂ ಸಾಥ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಆರೋಪ ಮಾಡಿರುವ ವೀಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಜೈಲರ್ ನಡೆಯನ್ನು ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಸಂಬಂಧ ಪಟ್ಟ ಅಧಿಕಾರಿ ಹಾಗೂ ಹಲ್ಲೆ ನಡೆಸಿದ ಇತರ ಕೈದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ.

  • ವಿಜಯಪುರ ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ಬಸ್ ಕೆಳಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ

    ವಿಜಯಪುರ ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ಬಸ್ ಕೆಳಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ

    – ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ವಿಜಯಪುರ: ಸರ್ಕಾರಿ ಬಸ್ (Government Bus) ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ (Vijayapura)ನಗರದ ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ನಡೆದಿದೆ.

    ವಿಶ್ವನಾಥ ಶಂಕರಯ್ಯ (38) ಚಲಿಸುತ್ತಿದ್ದ ಬಸ್ ಕೆಳಗೆ ಆತ್ಮಹತ್ಯೆ ಮಾಡಿಕೊಂಡ‌ ವ್ಯಕ್ತಿ. ಬಸ್‌ ಬರುತ್ತಿದ್ದಂತೆ ಕೈಯಲ್ಲಿದ್ದ ಮೊಬೈಲ್‌ (Mobile) ಎಸೆದು ಏಕಾಏಕಿ ಬಸ್‌ ಚಕ್ರದ ಕೆಳಗೆ ಬಿದಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ಇದನ್ನೂ ಓದಿ: ಪತ್ನಿಯ ಕತ್ತು ಕೊಯ್ದು ಮಾರಣಾಂತಿಕ ಹಲ್ಲೆ – ಕೊಂದೇಬಿಟ್ಟೆನೆಂದು ಪತಿ ಆತ್ಮಹತ್ಯೆ

    ವಿಶ್ವನಾಥ ಮೂಲತಃ ಹಾಸನ‌ (Hassan) ಜಿಲ್ಲೆಯ ಅರಸೀಕೆರೆ ತಾಲೂಕಿನ ಮೂಲದವರು. ಆದ್ರೆ ಬಸ್‌ ಚಕ್ರಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ 2.50 ಲಕ್ಷ ರೂ. ಕಳ್ಳತನ!

    ಆತ್ಮಹತ್ಯೆ ಮಾಡಿಕೊಂಡ ಯುವಕನ ಕುಟುಂಬಸ್ಥರ ಮೊಬೈಲ್ ಸಂಖ್ಯೆ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಂಕ್‌ಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಪಟ್ಟಿ ಕನ್ನಡದಲ್ಲೂ ಇರುತ್ತೆ: ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ

  • ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಯುವಕ ಅರೆಬೆತ್ತಲೆ ಪ್ರತಿಭಟನೆ- ಕಪಾಳಮೋಕ್ಷ ಮಾಡಿದ ಪಿಡಿಒ

    ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಯುವಕ ಅರೆಬೆತ್ತಲೆ ಪ್ರತಿಭಟನೆ- ಕಪಾಳಮೋಕ್ಷ ಮಾಡಿದ ಪಿಡಿಒ

    ವಿಜಯಪುರ: ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಯುವಕನೊಬ್ಬ ಅರೆಬೆತ್ತಲಾಗಿ ಪ್ರತಿಭಟನೆ (Half Naked Protest) ಮಾಡಿದ್ದಾನೆ. ಆದರೆ ಕುಡಿಯುವ ನೀರು ಕೇಳಿದ್ದಕ್ಕೆ ಗ್ರಾಮ ಪಂಚಾಯತ್ ಪಿಡಿಒ (PDO) ಯುವಕನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ವಿಜಯಪುರ (Vijaypura) ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ನಡೆದಿದೆ.

    ಅರೆಬೆತ್ತಲೆಯಾಗಿ ಗ್ರಾಮ ಪಂಚಾಯಿತಿಗೆ ಆಗಮಿಸಿದ ಯುವಕ ಸಂತೋಷ್ ಮಳೆಯಾಗಿಲ್ಲ, ಕುಡಿಯಲು ನೀರು ಬಿಡುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾನೆ. ಪಿಡಿಒ ಶೋಭಾ ಹೊರಪೇಟ ಅವರನ್ನು ತಮ್ಮ ಕಚೇರಿಯೊಳಗೆ ಹೋಗಲು ಬಿಡದೇ ತಡೆದು ಪ್ರತಿಭಟಿಸಿದ್ದಕ್ಕೆ ಪಿಡಿಒ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದನ್ನೂ ಓದಿ: ಸಿಪಿ ಯೋಗೇಶ್ವರ್ ಬಾವ ಮಹದೇವಯ್ಯ ಪತ್ತೆಗೆ ನಾಲ್ಕು ತಂಡ ರಚನೆ: ಎಸ್ಪಿ

    ನೀರು ಕೊಡದೇ ಹೋಗಿದ್ದಕ್ಕೆ ಪ್ರತಿಭಟಿಸಿ, ನೀರು ಬಿಡುವಂತೆ ಆಗ್ರಹಿಸಿದ್ದಕ್ಕೆ ಯುವಕನಿಗೆ ಕಪಾಳಮೋಕ್ಷ ಮಾಡಿದ ಪಿಡಿಒ ಶೋಭಾ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕರ್ತವ್ಯನಿರತ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಹೃದಯಾಘಾತದಿಂದ ಸಾವು

  • ಮದ್ಯ ಸೇವಿಸಿ ಅಡ್ಡಾದಿಡ್ಡಿ ಕಾರ್ ಚಲಾಯಿಸಿದವನಿಗೆ ಮಹಿಳೆಯಿಂದ ಚಪ್ಪಲಿ ಸೇವೆ

    ಮದ್ಯ ಸೇವಿಸಿ ಅಡ್ಡಾದಿಡ್ಡಿ ಕಾರ್ ಚಲಾಯಿಸಿದವನಿಗೆ ಮಹಿಳೆಯಿಂದ ಚಪ್ಪಲಿ ಸೇವೆ

    ವಿಜಯಪುರ: ಮದ್ಯಪಾನ ಮಾಡಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರ್ (Car) ಚಲಾಯಿಸಿ ಅಪಘಾತ ಮಾಡಿದ ವ್ಯಕ್ತಿಗೆ ಮಹಿಳೆಯೊಬ್ಬಳು (Woman) ಚಪ್ಪಲಿ ಸೇವೆ ಮಾಡಿರುವ ಘಟನೆ ವಿಜಯಪುರದಲ್ಲಿ (Vijaypura) ನಡೆದಿದೆ.

    ನಗರದ ಸ್ಟೇಷನ್ ರಸ್ತೆಯಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ. ಮದ್ಯ ಸೇವಿಸಿ ಅಡ್ಡಾದಿಡ್ಡಿ ಕಾರ್ ಚಾಲನೆ ಮಾಡಿ 2 ಆಟೋ ಹಾಗೂ 1 ಬೈಕ್‌ಗೆ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಇದರಿಂದ 1 ಆಟೋ ಪಲ್ಟಿಯಾಗಿದೆ. ಪಲ್ಟಿಯಾದ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಕಾರ್ ಚಾಲಕನಿಗೆ (Driver) ಚಪ್ಪಲಿಯಿಂದ (Slipper) ಥಳಿಸಿದ್ದಾಳೆ.

    ಬೇಜವಾಬ್ದಾರಿಯಾಗಿ ಹಾಗೂ ಮದ್ಯ ಸೇವಿಸಿ ಕಾರ್ ಚಾಲನೆ ಮಾಡಿ ಅಪಘಾತ ಮಾಡಿರುವುದಕ್ಕೆ ಆಕ್ರೋಶಗೊಂಡ ಮಹಿಳೆ ಚಪ್ಪಲಿ ಏಟು ನೀಡಿದ್ದಾಳೆ. ಆಟೋಗಳಲ್ಲಿ ಹಾಗೂ ಬೈಕ್‌ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಹಿಳೆ ಕಾರ್ ಚಾಲಕನಿಗೆ ಚಪ್ಪಲಿ ಏಟು ನೀಡುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಮಸ್ಕತ್‌ನಿಂದ ಭಾರತಕ್ಕೆ ಅಕ್ರಮ ಚಿನ್ನ ಸಾಗಾಟ – 2.28 ಕೋಟಿ ರೂ. ಮೌಲ್ಯದ ಚಿನ್ನದ ಧೂಳು ವಶ

    ಘಟನೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕಾರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಗ್ಯಾಸ್ ಏಜೆನ್ಸಿ ಸಮೀಪದ ಸ್ಕ್ರಾಪ್ ಗೋಡೌನಲ್ಲಿ ಅಗ್ನಿ ಅವಘಡ

  • ಸಿಎಂ ಸ್ಥಾನದಿಂದ ಇಳಿಸಿದ ಮೇಲೆ ಬಿಎಸ್‌ವೈ ಸ್ವಲ್ಪ ಡಿಸ್ಟರ್ಬ್ ಆಗಿದ್ದಾರೆ: ಸಿದ್ದರಾಮಯ್ಯ

    ಸಿಎಂ ಸ್ಥಾನದಿಂದ ಇಳಿಸಿದ ಮೇಲೆ ಬಿಎಸ್‌ವೈ ಸ್ವಲ್ಪ ಡಿಸ್ಟರ್ಬ್ ಆಗಿದ್ದಾರೆ: ಸಿದ್ದರಾಮಯ್ಯ

    ವಿಜಯಪುರ: ಯಡಿಯೂರಪ್ಪಗೆ (BS Yediyurappa) ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ಮೇಲೆ ಸ್ವಲ್ಪ ಡಿಸ್ಟರ್ಬ್ ಆಗಿದ್ದಾರೆ. ದೇವರು ಅವರಿಗೆ ಆಯುಷ್ಯ, ಆರೋಗ್ಯ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು.

    ವಿಜಯಪುರದಲ್ಲಿ ಮಾತನಾಡಿದ ಅವರು, ಅಸೆಂಬ್ಲಿಯಲ್ಲಿ ಬಿ.ಎಸ್ ಯಡಿಯೂರಪ್ಪ ಮಾತನಾಡಿದ್ದಾರೆ. ಪಾಪ ನನ್ನ ಮೇಲೆ ಬಹಳ ಪ್ರೀತಿಯಿಂದ ಬಾದಾಮಿಯಲ್ಲಿ ಸ್ಪರ್ಧೆ ಮಾಡು ಅಂತ ಹೇಳಿದ್ದಾರೆ, ಅವರಿಗೆ ಧನ್ಯವಾದ. ನಾನು ಬಾದಾಮಿಯಲ್ಲಿ ಗೆಲ್ಲಲ್ಲ ಅಂತಲ್ಲ. ಬಾದಾಮಿಯಲ್ಲಿ 100 ಕ್ಕೆ 100ರಷ್ಟು ಗೆದ್ದೇ ಗೆಲ್ಲುತ್ತೇನೆ, ಐದು ವರ್ಷ ಶಾಸಕನಾಗಿ ಆ ಜನರಿಗೆ ಕೆಲಸ ಮಾಡಿದ್ದೇನೆ, ಅವರ ಕಷ್ಟ ಸುಖಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಆದ್ದರಿಂದ ಜನರಿಗೆ ದ್ರೋಹ ಮಾಡುವ‌ ಪ್ರಶ್ನೆನೆ ಬರೋದಿಲ್ಲಾ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ರಚಿತಾ ರಾಮ್ ಟೆಂಪಲ್ ರನ್ : ಇಂದು ಮಂತ್ರಾಲಯಕ್ಕೆ ಭೇಟಿ

    ನಾನು ಎಲ್ಲಿ ಸ್ಪರ್ಧಿಸುತ್ತೇನೆ ಎನ್ನುವುದನ್ನು ನಾನು ತೀರ್ಮಾನ ಮಾಡಬೇಕು, ನನ್ನ ಕ್ಷೇತ್ರದ ತೀರ್ಮಾನವನ್ನು ಕಾಂಗ್ರೆಸ್ ಮಾಡುತ್ತದೆ. ಆದರೆ ಯಡಿಯೂರಪ್ಪ ಅವರು ತೀರ್ಮಾನ ಮಾಡಲು ಯಾರು? ಎಂದು ಕಿಡಿಕಾರಿದ ಅವರು, ನಾಯಿಗೆ ಟಿಪ್ಪು ಸುಲ್ತಾನ್ ಹೆಸರಿಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಇವೆಲ್ಲ ಮಾತಾಡಲ್ಲ ನಡೀರಿ ಎಂದು ಗರಂ ಆದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಮೋದಿ ರೋಡ್ ಶೋಗೆ ಸಿದ್ಧತೆ ಮಾಡಿಕೊಂಡಿದ್ದೇವೆ: ಶೋಭಾ ಕರಂದಾಜ್ಲೆ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಜಯಪುರದಲ್ಲಿ ಮತ್ತೆ ಭೂಕಂಪ – ಬೆಚ್ಚಿಬಿದ್ದ ಜನತೆ

    ವಿಜಯಪುರ: ಐತಿಹಾಸಿಕ ಜಿಲ್ಲೆಯಲ್ಲಿ ಮತ್ತೆ ಭೂಕಂಪದ Earthquake) ಆತಂಕ ಶುರುವಾಗಿದೆ. ಪದೇ ಪದೇ ಭೂಕಂಪನ ಆಗುತ್ತಿರುವುದಕ್ಕೆ ಜನ ಬೆಚ್ಚಿಬಿದ್ದಿದ್ದಾರೆ.

    ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲೆ ನಿರಂತರ ಮಳೆ ಸುರಿಯುತ್ತಿದೆ. ಈ ನಡುವೆ ಬುಧವಾರ ರಾತ್ರಿ 11:42ಕ್ಕೆ ಹಾಗೂ ಗುರುವಾರ ಬೆಳಗ್ಗೆ 6:19ಕ್ಕೆ ನಗರದ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಒಂದೇ ರಾತ್ರಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಇದನ್ನೂ ಓದಿ: 1 ತಿಂಗಳೊಳಗೆ ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್‍ಗಳ ಸಂಚಾರ: KSRTC ಅಧ್ಯಕ್ಷ ಎಂ.ಚಂದ್ರಪ್ಪ

    ನಗರದ ರೈಲ್ವೆಸ್ಟೇಷನ್ ಏರಿಯಾ, ರಂಭಾಪುರ ಬಡಾವಣೆ, ಬಸವೇಶ್ವರ ನಗರ, ಗೋಳಗುಮ್ಮಟ ಏರಿಯಾ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದೆ. ಪದೇ ಪದೇ ಈ ರೀತಿ ಭೂಮಿ ಕಂಪಿಸುತ್ತಿರುವುದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ 80 ಸ್ಥಾನ ಗಳಿಸಿದ್ರೆ ನನ್ನ ಬೆರಳು ಕತ್ತರಿಸಿ ಕೊಡುತ್ತೇನೆ: ಶಿವನಗೌಡ ನಾಯಕ

    ಈ ವಿಚಾರವಾಗಿ ಇತ್ತೀಚೆಗಷ್ಟೇ ವಿಧಾನ ಪರಿಷತ್‍ನಲ್ಲು ಮಾತನಾಡಿದ ಸುನೀಲಗೌಡ ಪಾಟೀಲ (Sunil Gowda Basanagowda Patil) ಅವರು, ಜಿಲ್ಲೆಯಲ್ಲಿ ಈವರೆಗೆ ಸುಮಾರು 52 ದಾರಿ ಭೂಕಂಪನವಾಗಿದೆ. ಮನೆಯ ಹೊರಗಡೆ ಮಲಗಬೇಕೆಂದರೆ ಮಳೆ ಇರುತ್ತದೆ. ಮನೆ ಒಳಗಡೆ ಕುಳಿತುಕೊಳ್ಳಬೇಕೆಂದರೆ ಭೂಕಂಪನದ ಭೀತಿಯಿದೆ. ಈ ಕುರಿತು ಜಿಲ್ಲಾಡಳಿತ ಮತ್ತು ಗಣಿ ಭೂವಿಜ್ಞಾನ ಇಲಾಖೆ ಸ್ಪಷ್ಟ ತಾಂತ್ರಿಕ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ತಜ್ಞರನ್ನು ಕರೆಯಿಸಿ ಭೂಕಂಪನಕ್ಕೆ ಕಾರಣ ಕುರಿತು ಅಧ್ಯಯನ ನಡೆಸಬೇಕು. ಈ ಮೂಲಕ ಜನರಲ್ಲಿರುವ ಭಯವನ್ನು ಹೊಗಲಾಡಿಸಬೇಕು ಎಂದು ಒತ್ತಾಯಿಸಿದ್ದರು.

    Live Tv
    [brid partner=56869869 player=32851 video=960834 autoplay=true]