Tag: Vijayostava

  • ನಿಷೇಧಾಜ್ಞೆ ನಡುವೆಯೇ ಮಂಜಿನ ನಗರಿಯಲ್ಲಿ ವಿಜಯೋತ್ಸವ ಆಚರಣೆ

    ನಿಷೇಧಾಜ್ಞೆ ನಡುವೆಯೇ ಮಂಜಿನ ನಗರಿಯಲ್ಲಿ ವಿಜಯೋತ್ಸವ ಆಚರಣೆ

    ಮಡಿಕೇರೆ: ಬಾಬ್ರಿ ಮಸೀದಿಯನ್ನು ದ್ವಂಸಗೊಳಿಸಿದ 26ನೇ ವರ್ಷವನ್ನು ನಗರದ ವಿಶ್ವ ಹಿಂದೂಪರಿಷತ್, ಭಜರಂಗದಳ ಸಂಘಟನೆಗಳು ವಿಶೇಷ ಪೂಜೆ ಹಾಗೂ ಸಿಹಿ ಹಂಚೋ ಮೂಲಕ ಸಂಭ್ರಮಾಚರಣೆ ನಡೆಸಿದ್ದಾರೆ.

    ಒಂದೆಡೆ ಹಿಂದೂ ಪರ ಸಂಘಟನೆಗಳು ವಿಜಯೋತ್ಸವ ಆಚರಿಸಿದರೆ ಇನ್ನೊಂದೆಡೆ ಕೆಲ ಮುಸ್ಲಿಂ ಸಂಘಟನೆಗಳು ಕರಾಳ ದಿನ ಆಚರಿಸಲು ಮುಂದಾದ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮಡಿಕೇರಿಯ ಕಾಲೇಜು ರಸ್ತೆಯಲ್ಲಿರೋ ಪೇಟೆ ರಾಮಮಂದಿರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಭಜನೆ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಪೂಜೆ ನಂತರ ಎಲ್ಲರೂ ಪರಸ್ಪರ ಸಿಹಿ ತಿನ್ನೋ ಮೂಲಕ ಸಂಭ್ರಮಿಸಿದರು.

    ಪೂಜೆಯ ನಂತರ ಮಾತನಾಡಿದ ವಿಶ್ವ ಹಿಂದೂಪರಿಷತ್ ಪ್ರಮುಖ ನರಸಿಂಹ, 26 ವರ್ಷಗಳ ಹಿಂದೆ ಧೈರ್ಯವಂತ ಹಿಂದೂ ಹುತಾತ್ಮರು ವಿವಾದಿತ ಕಟ್ಟಡವನ್ನು ಕೆಡವಿದ ದಿನವಿದು. ಇದು ಸಮಸ್ತ ಹಿಂದೂ ಬಾಂಧವರಿಗೆ ಶೌರ್ಯ ದಿನವಾಗಿದೆ. ಇಂದು ವಿಶೇಷ ಪೂಜೆ ಸಲ್ಲಿಸೋ ಮೂಲಕ ಅಂದು ವಿವಾದಿತ ಕಟ್ಟಡ ಕೆಡವಿದ ಹುತಾತ್ಮರು ಹಾಗೂ ಹಿರಿಯರನ್ನು ನೆನೆಯುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅದೇ ಜಾಗದಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇನ್ನು ಎಸ್‍ಡಿಪಿಐ ಕಾರ್ಯಕರ್ತರು ನಗರದ ಇಂದಿರಾಗಾಂಧಿ ಸರ್ಕಲ್ ಬಳಿ ಇಂದು ಕರಾಳ ದಿನವನ್ನು ಆಚರಣೆ ಮಾಡಲು ಮೆರವಣಿಗೆ ಮೂಲಕ ಬರುತ್ತಿದ್ದರು. ಈ ಸಂದರ್ಭದಲ್ಲಿ ಪೋಲಿಸರು ಹಾಗೂ ಎಸ್‍ಡಿಪಿಐ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿಯನ್ನು ಪೋಲಿಸರು ತಿಳಿಗೊಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗುರುವಾರ ಮಡಿಕೇರಿಯಲ್ಲಿ 144 ಸೆಕ್ಷನ್ ಜಾರಿ

    ಗುರುವಾರ ಮಡಿಕೇರಿಯಲ್ಲಿ 144 ಸೆಕ್ಷನ್ ಜಾರಿ

    ಮಡಿಕೇರಿ: ಗುರುವಾರದಂದು ಮಂಜಿನ ನಗರಿ ಮಡಿಕೇರಿಯಲ್ಲಿ ವಿಜಯೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

    ಬಾಬರಿ ಮಸೀದಿ ದ್ವಂಸಗೊಂಡ ದಿನವಾದ ಡಿಸೆಂಬರ್ 6 ರಂದು ಕೆಲ ಸಂಘಟನೆಗಳು ವಿಜಯೋತ್ಸವವ ಆಚರಣೆಗೆ ಕರೆ ಕೊಟ್ಟಿದ್ದರೆ, ಕೆಲವು ಸಂಘಟನೆಗಳು ಕರಾಳ ದಿನವನ್ನಾಗಿ ಆಚರಿಸಲು ಮುಂದಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಮಡಿಕೇರಿ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

    ನಗರದಲ್ಲಿ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ 144 ಸೆಕ್ಷನ್ ಜಾರಿಯಾಗಲಿದ್ದು, ಕಾನೂನನ್ನು ಯಾರು ಉಲ್ಲಂಘಿಸಬಾರದು ಎಂದು ಜಿಲ್ಲಾಡಳಿತ ಆದೇಶಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv