Tag: Vijayendra

  • ದೊಡ್ಡಗೌಡರ ಆರೋಗ್ಯ ವಿಚಾರಿಸಿದ ಬಿಎಸ್‌ವೈ, ವಿಜಯೇಂದ್ರ

    ದೊಡ್ಡಗೌಡರ ಆರೋಗ್ಯ ವಿಚಾರಿಸಿದ ಬಿಎಸ್‌ವೈ, ವಿಜಯೇಂದ್ರ

    ಬೆಂಗಳೂರು: ಇಂದು ನಗರದ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ (BS Yediyurappa), ಪುತ್ರ ಬಿ.ವೈ ವಿಜಯೇಂದ್ರ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ (HD DeveGowda) ಅವರ ಆರೋಗ್ಯ ವಿಚಾರಿಸಿದರು. ಜೊತೆಗೆ ದೇಶದ ಮತ್ತು ರೈತರ ಹಿತಕ್ಕಾಗಿ ಸದಾ ಶ್ರಮಿಸಿದ ಈ ಮಹಾನ್ ನಾಯಕರು ಶೀಘ್ರ ಚೇತರಿಸಿಕೊಂಡು ಉತ್ತಮ ಆರೋಗ್ಯದಲ್ಲಿ ಇರಲಿ ಎಂದು ಹಾರೈಸಿದರು.

    ಸದ್ಯಕ್ಕೆ ಆಸ್ಪತ್ರೆಯಲ್ಲೇ ಚಿಕಿತ್ಸೆ
    ಇತ್ತೀಚೆಗೆ ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ (Bengaluru Manipal Hospital) ದಾಖಲಾಗಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಆರೋಗ್ಯ ಸ್ಥಿರವಾಗಿರುವುದಾಗಿ ಎಂದು ಜೆಡಿಎಸ್‌ ಪಕ್ಷ ಒಂದು ದಿನದ ಹಿಂದೆ ತಿಳಿಸಿದೆ.

    ತಾವುಗಳು ಆತಂಕಪಡುವ ಆಗತ್ಯವಿಲ್ಲ. ಮಾಜಿ ಪ್ರಧಾನಮಂತ್ರಿಗಳು ಹಾಗೂ ಜನತಾದಳ ಪಕ್ಷದ ರಾಷ್ಟ್ರೀಯ ಅಧ್ಯಕರಾದ ದೇವೇಗೌಡರು ಚೇತರಿಸಿಕೊಂಡು ಗುಣಮುಖರಾಗಿದ್ದು, ಆರೋಗ್ಯವಾಗಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ನಾಡಿನ ಜನರ ಹಾರೈಕೆ, ಪ್ರೀತಿ, ಪ್ರಾರ್ಥನೆಯೇ ಅವರಿಗೆ ಶ್ರೀರಕ್ಷೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪಕ್ಷ ಪ್ರಕಟಣೆಯಲ್ಲಿ ಮನವಿ ಮಾಡಿದೆ.

    ಹೆಚ್‌ಡಿಕೆ ಹೇಳಿದ್ದೇನು?
    ಇನ್ನೂ ದೊಡ್ಡಗೌಡರ ಆರೋಗ್ಯದ ಬಗ್ಗೆ ಅಪ್ಡೇಟ್‌ ಕೊಟ್ಟಿದ್ದ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ, ದೇವೇಗೌಡರು ಆರೋಗ್ಯವಾಗಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ 3-4 ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆ ಎಂದು 2 ದಿನಗಳ ಹಿಂದೆ ಹೇಳಿದ್ದರು.

  • ನಾಳೆ ಎನ್‌ಐಎ ತನಿಖೆಗೆ ಆಗ್ರಹಿಸಿ ಬಿಜೆಪಿಯಿಂದ ಧರ್ಮಸ್ಥಳ ಚಲೋ, ಜಾಗೃತಿ ಸಮಾವೇಶ

    ನಾಳೆ ಎನ್‌ಐಎ ತನಿಖೆಗೆ ಆಗ್ರಹಿಸಿ ಬಿಜೆಪಿಯಿಂದ ಧರ್ಮಸ್ಥಳ ಚಲೋ, ಜಾಗೃತಿ ಸಮಾವೇಶ

    ಬೆಂಗಳೂರು: ಧರ್ಮಸ್ಥಳ(Dharmasthala) ವಿರುದ್ಧ ಷಡ್ಯಂತ್ರ ಖಂಡಿಸಿ ಬಿಜೆಪಿ (BJP) ಹೋರಾಟ ತೀವ್ರಗೊಳಿಸಿದೆ. ಪ್ರಕರಣ ಎನ್ಐಎ (NIA) ತನಿಖೆಗೆ ಕೊಡುವಂತೆ ಒತ್ತಾಯಿಸಿ ನಾಳೆ ಬೃಹತ್ ಧರ್ಮಸ್ಥಳ ಚಲೋ (Dharmasthala Chalo) ಹಾಗೂ ಧರ್ಮಜಾಗೃತಿ ಸಮಾವೇಶಕ್ಕೆ ಬಿಜೆಪಿ ಮುಂದಾಗಿದೆ.

    ಧರ್ಮಸ್ಥಳ ವಿರುದ್ದ ನಡೆಯುತ್ತಿರುವ ಅಪಪ್ರಚಾರ ಹಾಗೂ ವ್ಯವಸ್ಥಿತ ಷಡ್ಯಂತ್ರ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B. Y. Vijayendra) ನೇತೃತ್ವದಲ್ಲಿ ನಾಳೆ ಧರ್ಮಸ್ಥಳ ಚಲೋ ಅಭಿಯಾನಕ್ಕೆ ಬಿಜೆಪಿ ಮುಂದಾಗಿದೆ. ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸಲು ಆಗ್ರಹ ಇಟ್ಟುಕೊಂಡು ಈ ಚಲೋ ನಡೆಯುತ್ತಿದೆ.

    ಹಿಂದೂಗಳ ಅಸ್ಮಿತೆ, ನಂಬಿಕೆ ಹಾಗೂ ಭಾವನೆಗಳಿಗೆ ಘಾಸಿ ಮಾಡುತ್ತಿರುವ ಧರ್ಮ ದ್ರೋಹಿಗಳಿಗೆ, ಹಿಂದೂ ವಿರೋಧಿಗಳಿಗೆ ಕಠಿಣ ಎಚ್ಚರಿಕೆ ನೀಡುವ ಜತೆಗೆ ಧಾರ್ಮಿಕ ಕ್ಷೇತ್ರಗಳ ರಕ್ಷಣೆಗೆ ಬದ್ಧತೆಯನ್ನು ತೋರುವುದು ಈ ಅಭಿಯಾನದ ಉದ್ದೇಶ. ಇದನ್ನೂ ಓದಿ: ಚಿನ್ನಯ್ಯನನ್ನು ಬಾಡಿಗಾರ್ಡ್‌ ಎಂದಿದ್ರು, ದೆಹಲಿಗೆ ಅವ್ರು ಕರೆದುಕೊಂಡು ಹೋಗಿದ್ರು: ಸುಜಾತ ಭಟ್‌

    ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಪಕ್ಷದ 1 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಧರ್ಮಸ್ಥಳ ಚಲೋದಲ್ಲಿ ಭಾಗವಹಿಸಲಿದ್ದಾರೆ. ನಾಳೆ ಬೆಳಗ್ಗೆ ಆಯಾಯಾ ಕ್ಷೇತ್ರಗಳಿಂದಲೇ ಪೂಜೆ ಮಾಡಿಕೊಂಡು ಧರ್ಮಸ್ಥಳಕ್ಕೆ ಯಾತ್ರೆ ಬರಲು ಸೂಚಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಬಳಿಕ ಚಾಮುಂಡೇಶ್ವರಿ ಚಲೋ: ಅಶೋಕ್

    ನಾಳೆ ಬಿಜೆಪಿ ನಾಯಕರು ಮೊದಲು ಮಂಜುನಾಥನ ದರ್ಶನ ಹಾಗೂ ವೀರೇಂದ್ರ ಹೆಗ್ಗಡೆ ಭೇಟಿ ಮಾಡಲಿದ್ದಾರೆ. ಬಳಿಕ ಮಧ್ಯಾಹ್ನ 2 ಕ್ಕೆ ಧರ್ಮಸ್ಥಳದಲ್ಲಿ ಬೃಹತ್ ಧರ್ಮ ಜಾಗೃತಿ ಸಮಾವೇಶ ನಡೆಯಲಿದೆ. ಧರ್ಮಸ್ಥಳ ವಿರುದ್ದ ಪಿತೂರಿ, ಸಂಚು ನಡೆಯುತ್ತಿದೆ. ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ವಿರುದ್ದ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಆಗಬೇಕು. ಷಡ್ಯಂತ್ರ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು ಎಂದು ಸಮಾವೇಶದಲ್ಲಿ ಆಗ್ರಹಿಸಲಾಗುತ್ತದೆ. ಸಮಾವೇಶದಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ.

    ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಪ್ರಕರಣವನ್ನು ಸರ್ಕಾರ ಎನ್‌ಐಎ ತನಿಖೆ ಕೊಡಲೇಬೇಕು ಎನ್ನುವುದು ಬಿಜೆಪಿ ಒತ್ತಾಯ. ಸರ್ಕಾರಕ್ಕೆ ಈ ಸಂಬಂಧ ಗಡುವು ನೀಡುವ ಸಾಧ್ಯತೆಯಿದ್ದು, ನಂತರ ಹೋರಾಟ ಮತ್ತಷ್ಟು ತೀವ್ರಗೊಳಿಸಲು ಬಿಜೆಪಿ ಮುಂದಾಗಿದೆ.

  • ಸರ್ಕಾರದ ವಿರುದ್ಧ ಕೇಸರಿ ಪಡೆ ʻಧರ್ಮʼ ಯುದ್ಧ – ಷಡ್ಯಂತ್ರದ ಹಿಂದಿರೋರು ಯಾರು? – ಅಪಪ್ರಚಾರಕರ ವಿರುದ್ಧ ಕ್ರಮಕ್ಕೆ ಆಗ್ರಹ

    ಸರ್ಕಾರದ ವಿರುದ್ಧ ಕೇಸರಿ ಪಡೆ ʻಧರ್ಮʼ ಯುದ್ಧ – ಷಡ್ಯಂತ್ರದ ಹಿಂದಿರೋರು ಯಾರು? – ಅಪಪ್ರಚಾರಕರ ವಿರುದ್ಧ ಕ್ರಮಕ್ಕೆ ಆಗ್ರಹ

    – ಸಿಎಂ ವಿರುದ್ಧ 24 ಕೊಲೆ ಆರೋಪ – ಎಸ್‌ಐಟಿ ರಚಿಸಲು ಅಶೋಕ್‌ ಆಗ್ರಹ
    – ಮುಸುಕುಧಾರಿಯನ್ನ ಮಂಪರು ಪರೀಕ್ಷೆಗೆ ಒಳಪಡಿಸಿ: ರವಿಕುಮಾರ್‌
    – ಯೂಟ್ಯೂಬರ್ಸ್‌ ವಿರುದ್ಧ ಕ್ರಮ ಏಕಿಲ್ಲ? – ವಿಜಯೇಂದ್ರ

    ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ (Dharmasthala Case) ಈಗ ತೀರ್ವ ಸ್ವರೂಪ ಪಡೆದುಕೊಂಡಿದೆ. ಎಸ್‌ಐಟಿ ತನಿಖೆಯಲ್ಲಿ ಈವರೆಗೆ ಯಾವುದೇ ಕಳೇಬರ ಪತ್ತೆಯಾಗದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಕೇಸರಿ ಪಡೆ ಮುಗಿಬಿದ್ದಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಲ್ಲದೇ, ಷಡ್ಯಂತ್ರದ ಹಿಂದಿರುವವರು ಯಾರು? ಎಂಬುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿವೆ. ಜೊತೆಗೆ ಈವರೆಗಿನ ತನಿಖಾ (Investigation) ಬೆಳವಣಿಗೆ ಬಗ್ಗೆ ಮಧ್ಯಂತರ ವರದಿ ಬಿಡುಗಡೆಗೆ ಆಗ್ರಹಿಸಿವೆ.

    ಪರಮೇಶ್ವರ್‌ ಉತ್ತರ ಕೊಡಲಿ; ವಿಜಯೇಂದ್ರ
    ವಿಧಾನಸೌಧ ಮುಂಭಾಗದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಿಜಯೇಂದ್ರ (BY Vijayendra), ನಿನ್ನೆ ನಮ್ಮ ಪಕ್ಷದ ಹಿರಿಯರ ನೇತ್ರತ್ವದಲ್ಲಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ಮಂಜುನಾಥ್‌ನ ದರ್ಶನ ಪಡೆದಿದ್ವಿ. ವೀರೇಂದ್ರ ‌ಹೆಗಡೆ ಅವರನ್ನೂ ಸಹ ನಾವು ಭೇಟಿ ಮಾಡಿದ್ದೇವೆ. ಅಪಪ್ರಚಾರಕ್ಕೆ ಕಡಿವಾಣ ಹಾಕಲು ಯಾಕೆ‌ ಸರ್ಕಾರ ಪ್ರಯತ್ನ ಮಾಡಿಲ್ಲ? ಇದರ ಬಗ್ಗೆ ಪರಮೇಶ್ವರ್ (Parameshwar) ಅವರು ಉತ್ತರ ಕೊಡಬೇಕು. SIT ತನಿಖೆಯ ಮಧ್ಯಂತರ ವರದಿಯನ್ನ ಕೊಡಬೇಕು. ಪರಮೇಶ್ವರ್ ಸಮಗ್ರ ಉತ್ತರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ದರ್ಶನ್‌ ಶಿಫ್ಟ್‌ಗೆ ಹೆಚ್ಚಿದ ಒತ್ತಡ – ಪರಪ್ಪನ ಅಗ್ರಹಾರದಲ್ಲೇ ಉಳಿಸಿಕೊಳ್ಳಲು ವಕೀಲರ ಹರಸಾಹಸ

    ಡಿಕೆಶಿಗೆ ಮತ್ಯಾವ ಸಮಯ ಬೇಕು?
    ಡಿಕೆ ಶಿವಕುಮಾರ್ ಅವರೇ ಷಡ್ಯಂತ್ರ ಅಂತ ಹೇಳಿದ್ರು, ಸಮಯ ಬಂದಾಗ ಹೇಳ್ತೇನೆ ಅಂದಿದ್ರು. ಡಿಕೆ ಶಿವಕುಮಾರ್ ಅವರಿಗೆ ಮತ್ಯಾವ ಸಮಯ ಬರಬೇಕು? ಅಂತ ಪ್ರಶ್ನೆ ಮಾಡಿದ್ದಾರೆ. ಮುಂದುವರಿದು.. ನಮ್ಮ ಕಾರ್ಯಕರ್ತರ ಮೇಲೆ, ಹಿಂದೂ ಕಾರ್ಯಕರ್ತರ ಮೇಲೆ ದೂರು ದಾಖಲಿಸುತ್ತಾರೆ. ಆದ್ರೆ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವವರ ಮೇಲೆ ಕ್ರಮ ಏಕಿಲ್ಲ? ಎಡಪಂಥೀಯರ ಒತ್ತಡದ ಬಗ್ಗೆ ದಿನೇಶ್ ಗುಂಡೂರಾವ್ ಹೇಳ್ತಾರೆ. ಅದರ ಹಿಂದಿರುವವರ ಬಗ್ಗೆ ಹೇಳಬೇಕು. ಯೂಟ್ಯೂಬರ್ಸ್ ಮೇಲೆ ಯಾಕೆ ಕ್ರಮವಿಲ್ಲ? ಅನ್ನೊದನ್ನ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ – ಪರಂ ಉತ್ತರ ಭಾರೀ ಕುತೂಹಲ

    24 ಕೊಲೆ ಆರೋಪಕ್ಕೂ ಎಸ್‌ಐಟಿ ರಚಿಸಿ: ಅಶೋಕ್‌
    ಇನ್ನೂ ವಿಪಕ್ಷ ನಾಯಕ ಆರ್‌. ಅಶೋಕ್‌ ಮಾತಮಾಡಿ, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದವ ಸಿಎಂ ವಿರುದ್ಧವೂ ಆರೋಪ ಮಾಡಿದ್ದಾನೆ. ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಅಂತ ರಾಜ್ಯದ ಮುಖ್ಯಮಂತ್ರಿಗಳನ್ನ ತಿಮ್ಮರೋಡಿ ಅವಮಾನ ಮಾಡಿದ್ದಾರೆ. 24 ಕೊಲೆಗಳ ಆರೋಪಕ್ಕೂ ಎಸ್‌ಐಟಿ ರಚಿಸಿ ತನಿಖೆ ಮಾಡಿಸಲಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ ಪರಿಸ್ಥಿತಿಯನ್ನ ಅಮೆರಿಕ ಸೂಕ್ಷ್ಮವಾಗಿ ಗಮನಿಸ್ತಿದೆ – ಕದನ ವಿರಾಮ ಕುಸಿಯಬಹುದು: ಮಾರ್ಕೊ ರೂಬಿಯೊ

    ಮುಸುಕುಧಾರಿಯನ್ನ ಮಂಪರು ಪರೀಕ್ಷೆಗೆ ಒಳಪಡಿಸಿ: ರವಿಕುಮಾರ್‌
    ಎಂಎಲ್‌ಸಿ ಎನ್‌. ರವಿಕುಮಾರ್‌ ಮಾತನಾಡಿ, ಧರ್ಮಸ್ಥಳದ ಪ್ರಕರಣದಲ್ಲಿ ಕೂಡಲೇ ಮುಸುಕುಧಾರಿಯನ್ನ ಬಂಧನ ಮಾಡಬೇಕು. ಅವನಿಗೆ ಮಂಪರು ಪರೀಕ್ಷೆಗೆ ಒಳ ಪಡಿಸಬೇಕು. ಬಿಜೆಪಿ ಜನಾಂದೋಲನ ಹೋರಾಟವಾಗಿ ಇದನ್ನ ನಡೆಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾವೋವಾದಿಗಳು ಇಟ್ಟಿದ್ದ ಐಇಡಿ ಸ್ಫೋಟ – ಓರ್ವ ಪೊಲೀಸ್ ಸಾವು, ಮೂವರಿಗೆ ಗಾಯ

  • ರಮೇಶ್‌ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿದ್ದೇ ವಿಜಯೇಂದ್ರ: ಮತ್ತೆ ಗುಡುಗಿದ ಯತ್ನಾಳ್

    ರಮೇಶ್‌ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿದ್ದೇ ವಿಜಯೇಂದ್ರ: ಮತ್ತೆ ಗುಡುಗಿದ ಯತ್ನಾಳ್

    – ಮಗನನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿ, ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆಯಬೇಕು ಎಂದ ಶಾಸಕ

    ವಿಜಯಪುರ: ರಮೇಶ್‌ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿದ್ದೇ ವಿಜಯೇಂದ್ರ (Vijayendra) ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಮತ್ತೆ ಗುಡುಗಿದರು.

    ಯಡಿಯೂರಪ್ಪ (Yadiyurappa) ತನ್ನ ಮಗನ ಭವಿಷ್ಯಕ್ಕಾಗಿ ನನ್ನ ಪಕ್ಷದಿಂದ ಉಚ್ಚಾಟನೆ ಮಾಡಿಸಿದ್ದಾರೆ. ಮಗನನ್ನ ಅಧ್ಯಕ್ಷ ಸ್ಥಾನದಿಂದ ಇಳಿಸಿ, ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆಯಬೇಕು. ವಿಜಯೇಂದ್ರ ಹಾಗೂ ಯಡಿಯೂರಪ್ಪ ಮೇಲೆ ಹಲವು ಕೇಸ್ ಇವೆ. ಇ.ಡಿ ವಿಚಾರಣೆಗೂ ಹಾಜರಾಗಿದ್ದಾರೆ. ಇಂದಿಲ್ಲ ನಾಳೆ ಜೈಲಿಗೆ ಹೋಗ್ತಾರೆ ಎಂದರು. ಇದನ್ನೂ ಓದಿ: ಆರ್‌ಎಸ್‌ಎಸ್ ಪ್ರ.ಕಾರ್ಯದರ್ಶಿ ಹೊಸಬಾಳೆ ಹೇಳಿಕೆ ಸಮಂಜಸವಲ್ಲ: ಪರಂ

    ಪೊಲೀಸ್ ಇಲಾಖೆಯಲ್ಲಿ ಸಲೀಂ, ಮುಶ್ರಫ್‌ರಂತಹವರನ್ನ ತಂದ್ರೆ ನಮ್ಮ ಮೇಲೆ ಕೇಸ್ ಆಗ್ತಾವೆ‌. ಮೊನ್ನೆ ವಿಜಯಪುರದಲ್ಲಿ ನನ್ನ ಮೇಲೆ ಕೇಸ್ ಹಾಕಿಸಿದ್ರು. ಸಲೀಂ ಪೊಲೀಸ್ ಇಲಾಖೆಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಯತ್ನಾಳ್ ಮೇಲೆ ಎಷ್ಟು ಕೇಸ್ ಆಗಿವೆ ಎಂದು ಮಾಹಿತಿ ಪಡೆದಿದ್ದಾರೆ. ರಾಜ್ಯದಲ್ಲಿ ಸೂಲಿಬೆಲೆ, ಪ್ರತಾಪ್ ಸಿಂಹ, ಮುತಾಲಿಕ್ ಟಾರ್ಗೆಟ್ ಆಗಿದ್ದಾರೆ ಎಂದು ದೂರಿದರು.

    ಮತ್ತೆ ಬಿಜೆಪಿ ಭಿನ್ನಮತೀಯರ ಸಭೆ ಆಗಲಿದೆ. ನಮ್ಮ ಟೀಂ ದೊಡ್ಡದಿದೆ. ತಟಸ್ಥ ಟೀಂ ಸಹ ವಿಜಯೇಂದ್ರ ವಿರುದ್ಧ ಇದೆ. ವಾರದಲ್ಲಿ ಬೆಳಗಾವಿಯಲ್ಲಿ ಸೇರ್ತಿದ್ದೇವೆ. ಅತೃಪ್ತ ಬಣದಿಂದ ಮತ್ತೊಂದು ಸಭೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಇಲ್ಲದಿದ್ರೆ ರಾಜಕೀಯ ಬಿಡ್ತೀನಿ: ರಾಜಣ್ಣ

    ದತ್ತಾತ್ರೇಯ ಹೊಸಬಾಳೆ ಹೇಳಿದ್ದು ಸತ್ಯ. ನಾವು ಅವರ ಬೆಂಬಲಕ್ಕೆ ಇದ್ದೇವೆ. ಡಾ. ಅಂಬೇಡ್ಕರ್ ಬರೆದದ್ದನ್ನ ನೂರಾರು ಸಲ ಕಾಂಗ್ರೆಸ್ ತಿದ್ದಿದೆ. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅಪಮಾನಿಸಿದೆ. ಹೆಚ್ಚು ಅಪಮಾನ ಮಾಡಿದ್ದೆ ಕಾಂಗ್ರೆಸ್. ಮೂಲ ಸಂವಿಧಾನದಲ್ಲಿ ಅಂಬೇಡ್ಕರ್ ಬರೆದ ಮೂಲ ಬರಹಗಳೇ ಇರಬೇಕು ಎಂದು RSSನ ದತ್ತಾತ್ರೇಯ ಹೊಸಬಾಳೆ ಹೇಳಿಕೆಯನ್ನ ಸಮರ್ಥಿಸಿಕೊಂಡರು.

  • ಮನೆಯೊಂದು ಮೂರು ಬಾಗಿಲು – ಶಾ ರಾಜ್ಯ ಭೇಟಿ ಸಂದರ್ಭದಲ್ಲೇ ಬಿಜೆಪಿ ಭಿನ್ನಮತ ತಾರಕಕ್ಕೆ!

    ಮನೆಯೊಂದು ಮೂರು ಬಾಗಿಲು – ಶಾ ರಾಜ್ಯ ಭೇಟಿ ಸಂದರ್ಭದಲ್ಲೇ ಬಿಜೆಪಿ ಭಿನ್ನಮತ ತಾರಕಕ್ಕೆ!

    – ವಿಜಯೇಂದ್ರ ಬದಲಾವಣೆಗೆ ಭಿನ್ನರು ಮತ್ತೆ ಪಟ್ಟು, ಪ್ರತ್ಯೇಕ ಸಭೆ
    – ರೆಬೆಲ್ಸ್ ಜತೆ ಬಹಿರಂಗವಾಗಿ ಗುರುತಿಸಿಕೊಂಡ ವಿ ಸೋಮಣ್ಣ

    ಬೆಂಗಳೂರು: ಬಿಜೆಪಿ (BJP) ಮನೆಯಲ್ಲಿ ಮತ್ತೆ ಭಿನ್ನಮತ ವಿರಾಟ್ ದರ್ಶನ. ಹೌದು, ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ಸುಳಿವು ಸಿಕ್ಕ ಕೂಡಲೇ ಭಿನ್ನರು ಅಲರ್ಟ್ ಆಗಿದ್ದಾರೆ. ಗುರುವಾರ ತಡರಾತ್ರಿ ರೆಬೆಲ್ಸ್ ತಂಡ ವಿಜಯೇಂದ್ರ (BY Vijayendra) ಬದಲಾವಣೆ ಆಗಲೇಬೇಕೆಂಬ ಸಂದೇಶ ರವಾನಿಸಿದೆ. ರೆಬೆಲ್ಸ್‌ ಜತೆ ಕೇಂದ್ರ ಸಚಿವ ವಿ ಸೋಮಣ್ಣ (V Somanna) ಬಹಿರಂಗವಾಗಿಯೇ ಗುರುತಿಸಿಕೊಂಡಿದ್ದು ಗೊಂದಲ ಮತ್ತಷ್ಟು ಸಂಕೀರ್ಣವಾದಂತಿದೆ. ಅಮಿತ್ ಶಾ (Amit Shah) ರಾಜ್ಯ ಭೇಟಿ ಸಂದರ್ಭದಲ್ಲೇ ಗುಂಪುಗಾರಿಕೆ ತಾರಕಕ್ಕೇರಿದೆ.

    ಬಿಜೆಪಿ ಗೊಂದಲ ಮುಗಿದಿದೆ ಎಂದು ಒಂದು ಕಡೆ ಹೈಕಮಾಂಡ್ ರಾಜ್ಯಾಧ್ಯಕ್ಷರ ಚುನಾವಣೆ ನಡೆಸುವ ಸುಳಿವು ಕೊಟ್ಟಿದೆ. ಆದರೆ ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ ಎನ್ನುವಂತೆ ಕಮಲ ಪಾಳಯದಲ್ಲಿ ಮತ್ತೆ ಭಿನ್ನಮತೀಯ ಚಟುವಟಿಕೆ ತೀವ್ರಗೊಂಡಿದೆ. ಯತ್ನಾಳ್ (Basangouda Patil Yatnal) ಉಚ್ಛಾಟನೆ ಬಳಿಕ ಮೌನವಾಗಿದ್ದ ಭಿನ್ನರ ಪಡೆ ಈಗ ಬೇರೊಂದು ರೂಪದಲ್ಲಿ ಪುಟಿದೆದ್ದಿದೆ. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಕೆಲವರಿಗೆ ಅತೃಪ್ತಿ ಇರೋದು ಸತ್ಯ – ಬಿವೈವಿ

    ವಿಜಯೇಂದ್ರ ಬದಲಾವಣೆಗೆ ಪಟ್ಟು ತೀವ್ರಗೊಳಿಸಿರುವ ರೆಬೆಲ್ಸ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ನೇತೃತ್ವದಲ್ಲಿ ತಡರಾತ್ರಿ ಪ್ರತ್ಯೇಕ ಸಭೆ ನಡೆಸಿದೆ. ವಿಶೇಷ ಅಂದ್ರೆ ಈ ಸಭೆಯಲ್ಲಿ ಭಾಗವಹಿಸುವ ಮೂಲಕ ಕೇಂದ್ರ ಸಚಿವ ವಿ ಸೋಮಣ್ಣ ಇದೇ ಮೊದಲ ಬಾರಿಗೆ ಭಿನ್ನರ ಜತೆ ಬಹಿರಂಗವಾಗಿ ಗುರುತಿಸಿಕೊಂಡಿದ್ದಾರೆ. ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ಅವರ ಬೆಂಗಳೂರಿನ ಫ್ಲ್ಯಾಟ್‌ನಲ್ಲಿ ಸಭೆ ನಡೆಸಿದ್ದ ಭಿನ್ನರು ಶತಾಯಗತಾಯ ವಿಜಯೇಂದ್ರ ಬದಲಾಗಲೇಬೇಕೆಂಬ ಸಂದೇಶ ರವಾನಿಸಿದ್ದಾರೆ. ವಿ ಸೋಮಣ್ಣ ಮೂಲಕ ಅಮಿತ್ ಶಾ ಅವರಿಗೆ ಭಿನ್ನರು ಈ ಸಂದೇಶ ತಲುಪಿಸಿದ್ದಾರೆ ಎನ್ನಲಾಗಿದೆ. ಜತೆಗೆ ಇದೇ ಜೂ.23, 24 ರಂದು ದೆಹಲಿಗೂ ಹೋಗಲು ರೆಬೆಲ್ಸ್ ನಿರ್ಣಯಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಚೇರಿಗೆ ದಿಢೀರ್ ಭೇಟಿ – ಅಸಮಾಧಾನಿತರ ಜೊತೆ ಮಾತುಕತೆಗೆ ಸಿದ್ಧ ಎಂದ ಬಿಎಸ್‌ವೈ

    ಗೃಹ ಸಚಿವ ಅಮಿತ್ ಶಾ ಬಿಜಿಎಸ್ ಮೆಡಿಕಲ್ ಕಾಲೇಜು ಉದ್ಘಾಟನೆಗೆ ಬೆಂಗಳೂರಿಗೆ ಬಂದಿದ್ದರು. ಅಮಿತ್ ಶಾ ಬಂದ ಸಂದರ್ಭದಲ್ಲೇ ಭಿನ್ನ ರಾಗ ಮೊಳಗಿದ್ದು ಉದ್ದೇಶಪೂರ್ವಕವಾಗಿಯೇ ಎನ್ನಲಾಗ್ತಿದೆ. ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಭಿನ್ನರ ಜತೆ ಸಂಧಾನ ಸಭೆ ನಡೆಸಿದರೂ ಅದು ಯಶಸ್ಸಾಗಲಿಲ್ಲ. ಭಿನ್ನರು ತಮ್ಮ ಪಟ್ಟು ಸಡಿಲಿಸಿಲ್ಲ.

     

    ಭಿನ್ನರ ಸಭೆ ಬಗ್ಗೆ ಮಾತಾಡಿರುವ ವಿಜಯೇಂದ್ರ, ಕೆಲವರಿಗೆ ತಮ್ಮ ವಿಚಾರದಲ್ಲಿ ಅತೃಪ್ತಿ ಇದೆ. ಎಲ್ಲವೂ ಶೀಘ್ರದಲ್ಲೇ ಸರಿ ಹೋಗಲಿದೆ. ಪ್ರಮುಖರು ಕೂತು ಸರಿಪಡಿಸ್ತೇವೆ. ಒಳಜಗಳ ಬಿಟ್ಟು ಎಲ್ರೂ ಒಟ್ಟಾಗಬೇಕಿದೆ. ಅವರ ಮನವೊಲಿಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.

    ವಿಜಯೇಂದ್ರ ವಿರುದ್ಧ ಕಳೆದೊಂದು ವಾರದಿಂದಲೂ ಭಿನ್ನರು,ಬಿಜೆಪಿ ತಟಸ್ಥರು ಹಾಗೂ ಹಿರಿಯರ ಬೆಂಬಲ ಪಡೆಯುವ ಕಸರತ್ತಿಗಿಳಿದಿದ್ರು. ಈಗಾಗಲೇ ಬೊಮ್ಮಾಯಿ, ಆರ್ ಅಶೋಕ್, ಡಿವಿಎಸ್, ವಿ ಸೋಮಣ್ಣ, ಶೋಭಾ ಕರಂದ್ಲಾಜೆ ಭೇಟಿ ಮಾಡಿ ಸಮಾಲೋಚಿಸಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿಯೊಳಗೆ ವಿಜಯೇಂದ್ರ ಪರ ಅನೇಕರು ಇಲ್ಲ ಎಂಬ ಸಂದೇಶ ಹೈಕಮಾಂಡ್‌ಗೆ ರವಾನಿಸುವ ಪ್ರಯತ್ನ ನಡೆಸಿದ್ದಾರೆ.

    ಇದೆಲ್ಲದರ ಮಧ್ಯೆ ಮಾಜಿ ಸಿಎಂ ಯಡಿಯೂರಪ್ಪ ಪುತ್ರನ ಪರ ಅಖಾಡಕ್ಕಿಳಿದಿದ್ದಾರೆ. ಗುರುವಾರ ತಡರಾತ್ರಿ ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ಅಮಿತ್ ಶಾ ಭೇಟಿ ಮಾಡಿದ ಯಡಿಯೂರಪ್ಪ ಪಕ್ಷದ ಆಂತರಿಕ ವಿಚಾರ ಚರ್ಚೆ ಮಾಡಿದ್ದಾರೆ. ವಿಜಯೇಂದ್ರ ಸಾರಥ್ಯ ಸಾಧನೆ ಬಗ್ಗೆಯೂ ಅಮಿತ್ ಶಾಗೆ ಬಿಎಸ್‌ವೈ ಸೂಕ್ಷ್ಮವಾಗಿ ಹೇಳಿದ್ದಾರೆ ಎನ್ನಲಾಗಿದೆ.

  • ಪರಿಸರ ಚಟುವಟಿಕೆಯಲ್ಲಿ ತೊಡಗುತ್ತೇನೆ – ಬಿಜೆಪಿಗೆ ಮಾಜಿ ಶಾಸಕ ಎಟಿ ರಾಮಸ್ವಾಮಿ ರಾಜೀನಾಮೆ

    ಪರಿಸರ ಚಟುವಟಿಕೆಯಲ್ಲಿ ತೊಡಗುತ್ತೇನೆ – ಬಿಜೆಪಿಗೆ ಮಾಜಿ ಶಾಸಕ ಎಟಿ ರಾಮಸ್ವಾಮಿ ರಾಜೀನಾಮೆ

    ಬೆಂಗಳೂರು: ಮಾಜಿ ಶಾಸಕ ಎಟಿ ರಾಮಸ್ವಾಮಿ (AT Ramaswamy) ಬಿಜೆಪಿಗೆ (BJP) ರಾಜೀನಾಮೆ ನೀಡಿದ್ದಾರೆ.

    ರಾಜ್ಯಾಧ್ಯಕ್ಷ ವಿಜಯೇಂದ್ರಗೆ (BY Vijayendra) ರಾಜೀನಾಮೆ ಪತ್ರ ಬರೆದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ರಾಜೀನಾಮೆ ಪತ್ರದಲ್ಲಿ ಪರಿಸರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಉಲ್ಲೇಖಿಸಿದ್ದಾರೆ.

    ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ (JDS) ತೊರೆದು ರಾಮಸ್ವಾಮಿ ಬಿಜೆಪಿ ಸೇರ್ಪಡೆಯಾಗಿದ್ದರು. ಜೆಡಿಎಸ್ ಜತೆ ಮೈತ್ರಿ ಬಳಿಕ ಅಸಮಾಧಾನಗೊಂಡು  ಬಿಜೆಪಿ ಚಟುವಟಿಕೆಗಳಿಂದ ರಾಮಸ್ವಾಮಿ ದೂರ ಉಳಿದಿದ್ದರು.

     

    ರಾಜೀನಾಮೆ ಪತ್ರದಲ್ಲಿ ಏನಿದೆ?
    ವಿಶ್ವ ತಾಪಮಾನ ವಿಪರೀತ ಏರಿಕೆಯಿಂದಾಗಿ ಹವಾಮಾನದ ಅಸಮತೋಲನ ಉಂಟಾಗಿದೆ. ಇದರಿಂದ ನೆರೆ, ಬರ, ಚಂಡಮಾರುತ, ಭೂಕಂಪನಗಳು ಸೃಷ್ಟಿಯಾಗುತ್ತಿವೆ. ನಾವು ಕುಡಿಯುವ ನೀರು, ಉಸಿರಾಡುವ ಗಾಳಿ, ಸೇವಿಸುವ ಆಹಾರ ವಿಷಪೂರಿತವಾಗಿವೆ. ಇದನ್ನೂ ಓದಿ: ಸಿದ್ದರಾಮಯ್ಯ ಅವಧಿಯಲ್ಲಿ ಬ್ರಾಹ್ಮಣರು ಸಾಫ್ಟ್‌ ಟಾರ್ಗೆಟ್‌: ಪ್ರತಾಪ್‌ ಸಿಂಹ

    ಬೆಟ್ಟ, ಗುಡ್ಡ, ಅರಣ್ಯಗಳ ನಾಶದಿಂದ ನದಿ, ತೊರೆಗಳೂ ಬತ್ತಿ ಹೋಗಿವೆ. ಅಂತರ್ಜಲ ಕುಸಿದಿದೆ. ಜೀವ ಸಂಕುಲಗಳಿಗೆ ಸಂಕಷ್ಟ ಬಂದೊದಗಿದೆ. ಈ ಹೊತ್ತಿನಲ್ಲಾದರೂ ನಾವು ಜನರಲ್ಲಿ ಜಾಗೃತಿ ಮೂಡಿಸಿ ಪರಿಸರ ಸಂರಕ್ಷಣೆ ಕಾರ್ಯ ಮಾಡಬೇಕಾಗಿದೆ.

    ಪರಿಸರ ಉಳಿದರೆ ಜೀವ ಸಂಕುಲಗಳೂ ಉಳಿಯುತ್ತವೆ. ಈ ಸನ್ನಿವೇಶದಲ್ಲಿ ರಾಜಕಾರಣಕ್ಕಿಂತ ಪರಿಸರ ಸಂರಕ್ಷಣೆ ಅತ್ಯಂತ ಮಹತ್ವವೆಂದು ಭಾವಿಸಿರುತ್ತೇನೆ. ನನ್ನ ಪೂರ್ಣ ಸಮಯವನ್ನು, ನನ್ನ ಬದುಕಿನ ಕೃಷಿಯ ಜೊತೆಗೆ ಪರಿಸರ ಸಂರಕ್ಷಣೆಯ ಕೆಲಸದಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಿರುತ್ತೇನೆ. ಈ ಬಗ್ಗೆ ಈಗಾಗಲೇ ನಾನು ಏ.11 ರಂದು ದೂರವಾಣಿ ಮೂಲಕ ತಮ್ಮ ಜೊತೆ ಮಾತನಾಡಿರುತ್ತೇನೆ. ಆದುದರಿಂದ ನಾನು ಭಾರತೀಯ ಜನತಾ ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತಿದ್ದೇನೆ. ತಾವೆಲ್ಲರೂ ತೋರಿದ ಪ್ರೀತಿ ವಿಶ್ವಾಸಕ್ಕೆ ಕೃತಜ್ಞತೆಗಳು.

  • ಭ್ರಷ್ಟ ಸರ್ಕಾರದ ದರ ಏರಿಕೆ, ಅಟ್ಟಹಾಸ ಜನರ ಮುಂದಿಡ್ತೇವೆ: ವಿಜಯೇಂದ್ರ

    ಭ್ರಷ್ಟ ಸರ್ಕಾರದ ದರ ಏರಿಕೆ, ಅಟ್ಟಹಾಸ ಜನರ ಮುಂದಿಡ್ತೇವೆ: ವಿಜಯೇಂದ್ರ

    ಬೆಂಗಳೂರು: ಭ್ರಷ್ಟ ಸರ್ಕಾರದ ದರ ಏರಿಕೆ ಹಾಗೂ ಅಟ್ಟಹಾಸವನ್ನು ಜನರ ಮುಂದಿಡಲು ಜನಾಕ್ರೋಶ ಯಾತ್ರೆ ಆರಂಭಿಸುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ಹೇಳಿದರು.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಭ್ರಷ್ಟ ಸರ್ಕಾರದ ವಿರುದ್ಧ ಇಂದಿನಿಂದ ಜನಾಕ್ರೋಶ ಯಾತ್ರೆ ನಡೆಸುತ್ತಿದ್ದೇವೆ. ಪ್ರಹ್ಲಾದ್ ಜೋಶಿಯವರು (Prahlad Joshi) ಇಂದು ಮೈಸೂರಿನಲ್ಲಿ (Mysuru) ಚಾಲನೆ ನೀಡುತ್ತಾರೆ. 4 ಹಂತಗಳಲ್ಲಿ ಹೋರಾಟ ಮಾಡುತ್ತಿದ್ದೇವೆ. ನಾವು ಪ್ರಾಮಾಣಿಕ ಹೋರಾಟ ಮಾಡುತ್ತಿದ್ದೇವೆ. ಈಗ ಯಾವುದೇ ಚುನಾವಣೆಗಳು ಇಲ್ಲದಿದ್ದರೂ ಜನರ ಪರ ಧ್ವನಿ ಎತ್ತುವುದು ನಮ್ಮ ಕರ್ತವ್ಯ. ದರ ಏರಿಕೆ, ಕಾಂಗ್ರೆಸ್ ಅಟ್ಟಹಾಸ ಜನರ ಮುಂದೆ ಇಡ್ತೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬೆಂಗಳೂರು ದೊಡ್ಡ ನಗರ, ಅಲ್ಲೊಂದು-ಇಲ್ಲೊಂದು ಕಿರುಕುಳ ಘಟನೆ ಆಗುತ್ತೆ: ಪರಮೇಶ್ವರ್ ಬೇಜವಾಬ್ದಾರಿ ಹೇಳಿಕೆ

    ಜನಾಕ್ರೋಶ ಯಾತ್ರೆಯಲ್ಲಿ ನಮ್ಮ ಪಕ್ಷದ ಎಲ್ಲಾ ನಾಯಕರೂ ಭಾಗವಹಿಸುತ್ತಾರೆ. ಪ್ರತೀ ಜಿಲ್ಲೆಗೂ ನಮ್ಮ ಜನಾಕ್ರೋಶ ಯಾತ್ರೆ ತಲುಪಲಿದೆ. ಅಯೋಗ್ಯ ಕಾಂಗ್ರೆಸ್ (Congress) ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ. ಮುಸ್ಲಿಮರ ಓಲೈಕೆ, ದಲಿತರಿಗೆ ದೋಖಾ ಮಾಡುತ್ತಿದೆ. ಈ ಸರ್ಕಾರದ ಜನ ವಿರೋಧಿ ನೀತಿಗಳನ್ನು ಜನರಿಗೆ ತಿಳಿಸುತ್ತೇವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಗಿಣಿ ದ್ವಿವೇದಿ

    ಇನ್ನೂ ಹೋರಾಟದಲ್ಲಿ ಜೆಡಿಎಸ್ (JDS) ಭಾಗವಹಿಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ನಡುವೆ ಗೊಂದಲ, ಭಿನ್ನಾಭಿಪ್ರಾಯ ಇಲ್ಲ. ಈ ಹೋರಾಟ ಬಗ್ಗೆ ಕುಮಾರಸ್ವಾಮಿ (Kumaraswamy) ಅವರಿಗೂ ಸ್ಪಷ್ಟ ಪಡಿಸಿದ್ದೇವೆ. ಈ ಹೋರಾಟ ಪ್ರತ್ಯೇಕವಾಗಿ ಮಾಡುತ್ತಿದ್ದೇವೆ ಎಂದು ಏನೂ ವ್ಯತ್ಯಾಸ ಉಂಟಾಗಿಲ್ಲ. ನಾವೂ ಅವರೂ ಹಲವು ಹೋರಾಟ ಒಟ್ಟಿಗೆ ಮಾಡಿದ್ದೇವೆ. ಪ್ರತ್ಯೇಕವಾಗಿಯೂ ಮಾಡಿದ್ದೇವೆ. ನಮ್ಮ ನಡುವೆ ಒಡಕು ಉಂಟಾಗಿಲ್ಲ. ಇದು ಸತ್ಯಕ್ಕೆ ದೂರವಾದ ಅಪವಾದ ಎಂದು ಸ್ಪಷ್ಟಪಡಿಸಿದರು.

  • ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ – ಪತ್ನಿಗೆ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್

    ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ – ಪತ್ನಿಗೆ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್

    ಮಡಿಕೇರಿ: ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪತ್ನಿಗೆ ಬರೆದಿದ್ದರು ಎನ್ನಲಾದ ಪತ್ರವೊಂದು ವೈರಲ್ ಆಗಿದೆ.

    ಇದನ್ನು ವಿನಯ್ ಸೋಮಯ್ಯ, ಬಾಮೈದ ಸುಶಾಂತ್ ಎಂಬಾತನಿಗೆ ಕಳಿಸಿಕೊಟ್ಟಿದ್ರು ಎನ್ನಲಾಗಿದೆ. ಆದ್ರೆ, ಇದನ್ನು ನಾಲ್ಕು ದಿನದ ಬಳಿಕ ಏಕೆ ರಿವೀಲ್ ಮಾಡಲಾಯ್ತು ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

    ಮತ್ತೊಂದ್ಕಡೆ, ಕೊಡಗಿನಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗಳ ಮೂಲಕ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ವಿನಯ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ವಿನಯ್‌ದು ಆತ್ಮಹತ್ಯೆ ಅಲ್ಲ.. ಕೊಲೆ ಎಂದು ಕಮಲಕಲಿಗಳು ಆಪಾದಿಸಿದ್ರು. ಸಾವಿನ ಮನೆಯಲ್ಲಿ ಕಾಂಗ್ರೆಸ್ ರಾಜಕೀಯ ಮಾಡ್ತಿದೆ ಎಂದು ಆಕ್ರೋಶ ಹೊರಹಾಕಿದ್ರು. ಇದನ್ನೂ ಓದಿ: ಸಂಸದ ಸಾಗರ್ ಖಂಡ್ರೆ ಮನೆ ವಿದ್ಯುತ್ ಸಂಪರ್ಕ ಕಡಿತ – ಅಪಾರ್ಟ್‌ಮೆಂಟ್ ಮ್ಯಾನೇಜರ್ ವಿರುದ್ಧ ಎಫ್‌ಐಆರ್

    ಆದ್ರೆ, ಬಿಜೆಪಿಯವರೇ ನಾಟಕ ಮಾಡ್ತಿದ್ದಾರೆ ಎಂದು ಪೊನ್ನಣ್ಣ ಪ್ರತ್ಯಾರೋಪ ಮಾಡಿದ್ರು. ಈ ಲೆಟರ್ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ರು. ಡೆತ್ ನೋಟ್ ಎಲ್ಲಿದೆ.. ಅದು ವಾಟ್ಸಪ್ ಮೆಸೇಜ್ ಅಂತಾ ಸಚಿವ ಪ್ರಿಯಾಂಕ್ ಖರ್ಗೆ ಕೌಂಟರ್ ಕೊಟ್ರು. ಇದನ್ನೂ ಓದಿ: ಕಾಶಿಯಲ್ಲಿ ಮುಸ್ಲಿಂ ಮಹಿಳೆಯರಿಂದ ʻಶ್ರೀರಾಮ ಆರತಿʼ – ಏಕತೆ ಸಂದೇಶ ಸಾರಿದ ರಾಮನವಮಿ ಆಚರಣೆ 

  • ಬಿಜೆಪಿ ಕಾರ್ಯಕರ್ತನದ್ದು ಆತ್ಮಹತ್ಯೆಯಲ್ಲ, ಕೊಲೆ: ವಿಜಯೇಂದ್ರ ಆರೋಪ

    ಬಿಜೆಪಿ ಕಾರ್ಯಕರ್ತನದ್ದು ಆತ್ಮಹತ್ಯೆಯಲ್ಲ, ಕೊಲೆ: ವಿಜಯೇಂದ್ರ ಆರೋಪ

    ಬೆಂಗಳೂರು: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯದು ಆತ್ಮಹತ್ಯೆ ಅಲ್ಲ, ಅದೊಂದು ಕೊಲೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ ಮಾಡಿದರು.

    ಬೆಂಗಳೂರಿನಲ್ಲಿ ಮಾತಾಡಿದ ವಿಜಯೇಂದ್ರ, ಶಾಸಕರ ವಿರುದ್ಧ ಎಫ್ಐಆರ್ ದಾಖಲಾಗದ ವಿಚಾರಕ್ಕೆ ಕಿಡಿಕಾರಿದರು. ಅಧಿಕಾರದ ದರ್ಪದಿಂದ ಕಾಂಗ್ತೆಸ್‌ನವ್ರು ಹೇಳಿಕೆ ಕೊಡ್ತಿದ್ದಾರೆ. ವಿನಯ್ ಸೋಮಯ್ಯದು ಆತ್ಮಹತ್ಯೆ ಅಲ್ಲ ಅದೊಂದು ಕೊಲೆ ಎಂದು ಆರೋಪಿಸಿದರು.

    ಇದರ ಹಿಂದೆ ಯಾರೆಲ್ಲ ದುಷ್ಟ ಶಕ್ತಿಗಳು ಇವೆ ಅಂತ ಎಲ್ಲರಿಗೂ ಗೊತ್ತಿದೆ. ಅವರಿಗೆ ಶಿಕ್ಷೆ ಆಗಲೇಬೇಕು. ನಾವು ಕಾನೂನು ಹೋರಾಟ ಮಾಡ್ತೇವೆ. ಇವತ್ತು ಕಾನೂನು ತಜ್ಞರ ಜೊತೆ ಮುಂದಿನ ಹೋರಾಟ ಬಗ್ಗೆ ಚರ್ಚೆ ಮಾಡ್ತೇನೆ ಎಂದು ತಿಳಿಸಿದರು.

  • ಉಚ್ಚಾಟನೆಯಿಂದ ಮುಜುಗರ, ಹಿನ್ನಡೆ ಆಗಿಲ್ಲ – ಹೈಕಮಾಂಡ್ ಬಳಿ ಮರಿಪರಿಶೀಲನೆ ಮನವಿ ಮಾಡಲ್ಲ: ಯತ್ನಾಳ್

    ಉಚ್ಚಾಟನೆಯಿಂದ ಮುಜುಗರ, ಹಿನ್ನಡೆ ಆಗಿಲ್ಲ – ಹೈಕಮಾಂಡ್ ಬಳಿ ಮರಿಪರಿಶೀಲನೆ ಮನವಿ ಮಾಡಲ್ಲ: ಯತ್ನಾಳ್

    ಬೆಂಗಳೂರು: ಉಚ್ಚಾಟನೆಯಿಂದ ಮುಜುಗರ, ಹಿನ್ನಡೆ ಆಗಿಲ್ಲ. ಹೈಕಮಾಂಡ್‌ ಬಳಿ ಉಚ್ಚಾಟನೆ ಮರುಪರಿಶೀಲನೆಗೆ ಮನವಿ ಮಾಡುವುದು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಹೇಳಿದರು.

    ಉಚ್ಚಾಟನೆಯಾದ ನಾಲ್ಕು ದಿನಗಳ ನಂತರ ಇಂದು ರೆಬೆಲ್ ನಾಯಕ‌ ಯತ್ನಾಳ್‌ ಮಾತನಾಡಿದರು. ಬೆಂಗಳೂರಿನಲ್ಲಿ ಪಬ್ಲಿಕ್ ಟಿವಿಗೆ ಮಾತಾಡಿದ ಅವರು, ಮೂರನೇ ಬಾರಿಗೆ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ತುಳಿಯೋದಕ್ಕೆ ಹೊರಟಿದ್ದಾರೆ. ಮೂರು ನನ್ನ ಲಕ್ಕಿ ನಂಬರ್. ಈ ಸಲ ಅವರೇ ನಾಶ ಆಗ್ತಾರೆ ಎಂದು ವಿಜಯೇಂದ್ರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ದು ವಿಜಯೇಂದ್ರ & ಡಿಕೆಶಿ, ಹನಿಟ್ರ್ಯಾಪ್‌ ಕೇಸ್‌ನಲ್ಲೂ ಇದೇ ಟೀಂ ಇದೆ – ಯತ್ನಾಳ್‌ ಬಾಂಬ್‌

    ಪಕ್ಷದಿಂದ ಉಚ್ಚಾಟನೆ ಮಾಡಿದ್ದಕ್ಕೆ ಮುಜುಗರ ಆಗಿಲ್ಲ, ಹಿನ್ನಡೆ ಆಗಿಲ್ಲ. ಉಚ್ಚಾಟನೆ ಮರುಪರಿಶೀಲನೆಗೆ ನಾನು ಹೈಕಮಾಂಡ್ ಬಳಿ ಮನವಿ ಮಾಡಲ್ಲ, ನಮ್ಮ ತಂಡದವರು ಮನವಿ ಮಾಡ್ತಾರೆ. ಯಡಿಯೂರಪ್ಪ, ಮಗ ವಿಜಯೇಂದ್ರ ಕೂಡಿ ಉಚ್ಚಾಟನೆಗೆ ಹೈಕಮಾಂಡ್ ಮೇಲೆ ಒತ್ತಡ ಹಾಕಿಸಿದರು. ಉಚ್ಚಾಟನೆ ಮಾಡಿದ್ರೆ ಬಿಜೆಪಿ ಬಿಟ್ ಹೋಗ್ತಾರೆ ಅಂತ ಮಾಡಿಸಿದ್ದಾರೆ. ನಾನು ಪಕ್ಷದಲ್ಲಿ ಇರಲಿ, ಬಿಡಲಿ. ಅಪ್ಪ ಮಗನಿಂದ ಈ ಪಕ್ಷಕ್ಕೆ ಬಿಡುಗಡೆಗೊಳಿಸುವರೆಗೂ ಹೋರಾಟ ಮಾಡ್ತೀನಿ ಎಂದು ಶಪಥ ಮಾಡಿದರು.

    ಒಬ್ಬ ಹಿಂದೂ ನಾಯಕನನ್ನ ಬಿಜೆಪಿ ಇವತ್ತು ನಡೆಸಿಕೊಂಡ ರೀತಿಯನ್ನು ಇಡೀ ರಾಜ್ಯ ನೋಡ್ತಿದೆ. ಹಿಂದೂ ನಾಯಕರನ್ನ ಮುಗಿಸಬೇಕು ಅನ್ನುವ ಕಾರ್ಯತಂತ್ರ ನಡೀತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಲಿಂಗಾಯತರು ಯಡಿಯೂರಪ್ಪ ಜೊತೆಗಿಲ್ಲ, ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡ್ತಿದ್ದಾರೆ – ಯತ್ನಾಳ್‌