Tag: vijayaprasad

  • ಟ್ರೆಂಡಿಂಗ್‌ನಲ್ಲಿ ‘ತೋತಾಪುರಿ’ ಸಾಂಗ್ – ಸಿನಿರಸಿಕರಿಂದ  2 ಮಿಲಿಯನ್ ಮೆಚ್ಚುಗೆಯ ಮುದ್ರೆ

    ಟ್ರೆಂಡಿಂಗ್‌ನಲ್ಲಿ ‘ತೋತಾಪುರಿ’ ಸಾಂಗ್ – ಸಿನಿರಸಿಕರಿಂದ  2 ಮಿಲಿಯನ್ ಮೆಚ್ಚುಗೆಯ ಮುದ್ರೆ

    ತ್ತೊಂದು ಸೆನ್ಸೇಷನ್ ಹಿಟ್ ಕೊಡೋದಕ್ಕೆ ಸಕಲ ಸಜ್ಜಾಗಿದ್ದಾರೆ ನವರಸ ನಾಯಕ ಜಗ್ಗೇಶ್ ಹಾಗೂ ವಿಜಯ ಪ್ರಸಾದ್ ಜೋಡಿ. ಈ ಕಾಂಬಿನೇಶನ್ ನೀರ್ ದೋಸೆಯಲ್ಲಿ ಮಾಡಿದ್ದ ಮ್ಯಾಜಿಕ್ ಎಲ್ಲರಿಗೂ ಗೊತ್ತೇ ಇದೆ. ಅದಕ್ಕಿಂತ ಡಬಲ್ ಧಮಾಕ ಮನರಂಜನೆ ಉಣಬಡಿಸಲು ‘ತೋತಾಪುರಿ’ ಮೂಲಕ ಪ್ರೇಕ್ಷಕರೆದುರು ಬರ್ತಿರೋದು ಗೊತ್ತಿರುವ ವಿಷ್ಯ. ಆದರೆ ಇದೀಗ ಸಿನಿಮಾ ಕೆಲಸ ಮುಗಿಸಿ ಪ್ರಚಾರ ಕಾರ್ಯ ಶುರು ಹಚ್ಚಿಕೊಂಡಿರುವ ನಿರ್ದೇಶಕ ವಿಜಯ ಪ್ರಸಾದ್   ಸಿನಿಮಾ ತಂಡ ಚಿತ್ರದ ಬಹು ನಿರೀಕ್ಷಿತ ವೀಡಿಯೋ ಸಾಂಗ್ ಬಿಡುಗಡೆ ಮಾಡಿ ಸಿನಿರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಮೊನ್ನೆ ಮೊನ್ನೆಯಷ್ಟೇ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡಿನ ಟೀಸರ್ ಝಲಕ್ ತೋರಿಸಿ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದ್ದ ಚಿತ್ರತಂಡ ಈಗ ಪೂರ್ತಿ ವೀಡಿಯೋ ಹಾಡನ್ನೇ ಬಿಡುಗಡೆ ಮಾಡಿದೆ. ‘ಬಾಗ್ಲು ತೆಗಿ ಮೇರಿ ಜಾನ್’ ಎನ್ನುವ ಅದಿತಿ ಪ್ರಭುದೇವ ‘ಸ್ವಲ್ಪ ತಡಿ ಮೇರಿ ಜಾನ್’ ಎನ್ನುವ ಜಗ್ಗೇಶ್ ಕಾಂಬಿನೇಶನ್ ನೋಡುಗರಿಗೆ ಸಖತ್ ಥ್ರಿಲ್ ನೀಡುತ್ತಿದೆ. ವಿಜಯ ಪ್ರಸಾದ್ ಸಾಹಿತ್ಯ ಕೃಷಿ, ಅನೂಪ್ ಸೀಳಿನ್ ಸಂಗೀತ, ಮುರಳಿ ಮಾಸ್ಟರ್ ಕೊರಿಯೋಗ್ರಫಿ ಹಾಡಿನ ಹೈಲೈಟ್ ಆದ್ರೆ, ಜಗ್ಗೇಶ್ ಎಕ್ಸ್ ಪ್ರೆಶನ್, ಅದಿತಿ ಪ್ರಭುದೇವ ಕ್ಯೂಟ್‌ನೆಸ್‌ ಬಾಗ್ಲು ತೆಗಿ ಮೇರಿ ಜಾನ್ ಎನರ್ಜಿಯನ್ನು ಇನ್ನಷ್ಟು ಹೆಚ್ಚಿಸಿದೆ. ಕೆಜಿಎಫ್ ಖ್ಯಾತಿಯ ಸಿಂಗರ್ ಅನನ್ಯ ಭಟ್, ವ್ಯಾಸರಾಜ್ ಸೋಸಲೆ, ಸುಪ್ರಿಯ ರಾಮ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಒಟ್ಟಿನಲ್ಲಿ ಕೇಳೋಕು, ನೋಡೋಕು ಚೆಂದ ಎನಿಸಿಕೊಂಡಿರುವ ಹಾಡು ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡು ಟ್ರೆಂಡಿಂಗ್‌ನಲ್ಲಿದೆ. ಅಷ್ಟೇ ಅಲ್ಲ, ಬಿಡುಗಡೆಯಾದ ನಲವತ್ತೆಂಟು ಗಂಟೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡು ಮತ್ತಷ್ಟು ಮೆಚ್ಚುಗೆಯತ್ತ ಸಾಗುತ್ತಿದೆ.

     

     

    ಜಗ್ಗೇಶ್ ಸಿನಿಮಾ ಅಂದ್ರೆ ಅಲ್ಲಿ ಎಂಟಟೈನ್ಮೆಂಟ್ ಅನ್ನೋದಕ್ಕೆ ಕೊರತೆ ಇರೋದಿಲ್ಲ. ನವರಸ ನಾಯಕನ ಹಾವಭಾವ ನೋಡೋದೆ ಒಂದು ಮನರಂಜನೆ. ಈ ಸಿನಿಮಾದಲ್ಲಿ ನೆಕ್ಸ್ಟ್ ಲೆವೆಲ್ ಮನರಂಜನೆಯ ರಸದೌತಣ ನೀಡಲು ಜಗ್ಗೇಶ್ ರೆಡಿಯಾಗಿದ್ದಾರೆ. ಇವರ ಜೊತೆ ನಿರ್ದೇಶಕ ವಿಜಯಪ್ರಸಾದ್ ಜೊತೆಯಾದ ಮೇಲಂತೂ ಕೇಳೋದೇ ಬೇಡ ಅಷ್ಟು ಕಾಮಿಡಿ ಫ್ಯಾಕ್ಟರ್ ಸಿನಿಮಾದಲ್ಲಿ ಇರುತ್ತೆ. ಅಂತಹದ್ದೇ ಕಾಮಿಡಿ ಎಳೆಯನ್ನಿಟ್ಟುಕೊಂಡು ಸ್ಟ್ರಾಂಗ್ ಮೆಸೇಜ್ ನೀಡೋದಕ್ಕೆ ಈ ಹಿಟ್ ಜೋಡಿ ‘ತೋತಾಪುರಿ’ಯೊಂದಿಗೆ ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೆ ಕಾಲಿಡಲಿದೆ.

     

    ಮೋನಿಫ್ಲಿಕ್ಸ್ ಸುಡಿಯೋಸ್, ಸುರೇಶ್ ಆರ್ಟ್ಸ್ ಬ್ಯಾನರ್ ನಡಿ ಕೆ.ಎ ಸುರೇಶ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡಿಗಡೆ ಮಾಡಲು ರೆಡಿಯಾಗಿದ್ದಾರೆ. ಎರಡು ಸೀಕ್ವೆಲ್ ನಲ್ಲಿ ಬಿಡುಗಡೆಯಾಗುತ್ತಿರುವ ತೋತಾಪುರಿ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ನಿರಂಜನ್ ಬಾಬು ಕ್ಯಾಮೆರಾ ಕೈಚಳಕವಿದೆ. ದತ್ತಣ್ಣ, ಸುಮನ್ ರಂಗನಾಥ್, ಡಾಲಿ ಧನಂಜಯ, ವೀಣಾ ಸುಂದರ್, ಹೇಮಾ ದತ್ ಒಳಗೊಂಡ ಕಲಾವಿದರ ಬಳಗ ಚಿತ್ರದಲ್ಲಿದೆ.

  • ಪರಿಮಳ ಲಾಡ್ಜಿನತ್ತ ಹೊರಟ ಚಿರಯವ್ವನೆ ಸುಮನ್ ರಂಗನಾಥ್!

    ಪರಿಮಳ ಲಾಡ್ಜಿನತ್ತ ಹೊರಟ ಚಿರಯವ್ವನೆ ಸುಮನ್ ರಂಗನಾಥ್!

    ಬೆಂಗಳೂರು: ನೀನಾಸಂ ಸತೀಶ್ ಮತ್ತು ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಷನ್ನಿನ ಚಿತ್ರದ ಬಗ್ಗೆ ನಿಖರ ಮಾಹಿತಿಗಳೇ ಹೊರ ಬಿದ್ದಿವೆ. ಆರಂಭದಲ್ಲಿ ಈ ಸಿನಿಮಾಗೆ ಗಣೇಶ ಮೆಡಿಕಲ್ಸ್ ಅನ್ನೋ ನಾಮಕರಣವಾಗಿತ್ತು. ಆದರೀಗ ಅದೇ ಟೀಮು ಜೊತೆ ಸೇರಿ ಪರಿಮಳ ಲಾಡ್ಜ್ ಅನ್ನೋ ಸಿನಿಮಾ ಶುರು ಮಾಡಿದೆ. ದೊಡ್ಡ ತಾರಾಗಣವಿರೋ ಈ ಚಿತ್ರದಲ್ಲಿ ನೀನಾಸಂ ಸತೀಶ್ ನಾಯಕನಾಗಿ ನಟಿಸಲಿದ್ದಾರೆ. ಸುಮನ್ ರಂಗನಾಥ್ ಕೂಡಾ ವಿಶೇಷ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ.

    ಈ ಹಿಂದೆ ಬ್ಯೂಟಿಫುಲ್ ಮನಸುಗಳು ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಪ್ರಸನ್ನ ಪರಿಮಳ ಲಾಡ್ಜಿಗೆ ಹಣ ಹೂಡಿದ್ದಾರೆ. ವಿಜಯ ಪ್ರಸಾದ್ ಚಿತ್ರಗಳೆಂದ ಮೇಲೆ ವಾಸ್ತವಿಕ ವಿಚಾರಗಳನ್ನೇ ಲಘುವಾದ ಶೈಲಿಯಲ್ಲಿ ಹೇಳೋ ಮಸ್ತ್ ಆಗಿರೋ ಕಥೆ ಇರುತ್ತದೆ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ. ಪರಿಮಳ ಲಾಡ್ಜ್ ಕಥೆಯನ್ನಂತೂ ಇಂಥಾದ್ದೇ ಮಜವಾದ ಕಥಾ ಎಳೆಯೊಂದಿಗೆ ಅವರು ರೂಪಿಸಲು ಮುಂದಾಗಿದ್ದಾರೆ. ಇದರಲ್ಲಿನ ಮಹತ್ವದ ಪಾತ್ರವೊಂದರಲ್ಲಿ ಸುಮನ್ ರಂಗನಾಥ್ ನಟಿಸಿದ್ದಾರೆ.

    ಈ ಸಿನಿಮಾ ಮೂಲಕವೇ ವರ್ಷಾಂತರಗಳ ನಂತರ ಲೂಸ್ ಮಾದ ಯೋಗಿ ಮತ್ತು ವಿಜಯ ಪ್ರಸಾದ್ ಮತ್ತೆ ಒಂದಾಗಿದ್ದಾರೆ. ಯೋಗಿ ಕೂಡಾ ಈ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಸದ್ಯಕ್ಕೆ ಇಷ್ಟು ಮಂದಿಯ ತಾರಾಗಣ ನಿಗದಿಯಾಗಿದೆ. ಸುಮನ್ ರಂಗನಾಥ್ ಕೂಡಾ ನಟಿಸೋದು ಪಕ್ಕಾ ಆಗಿದೆ. ಸುಮನ್ ಈ ಹಿಂದೆ ಸಿದ್ಲಿಂಗು, ನೀರ್ ದೋಸೆ ಮತ್ತು ತೋತಾಪುರಿ ಚಿತ್ರದಲ್ಲಿಯೂ ನಟಿಸಿದ್ದಾರೆ. ಇದೀಗ ಅವರು ಪರಿಮಳ ಲಾಡ್ಜ್ ಗೂ ಎಂಟ್ರಿ ಕೊಡಲಿದ್ದಾರೆ. ಇದು ವಿಜಯ ಪ್ರಸಾದ್ ಮತ್ತು ಸುಮನ್ ಕಾಂಬಿನೇಷನ್ನಿನ ನಾಲ್ಕನೇ ಚಿತ್ರವಾಗಿಯೂ ದಾಖಲಾಗುತ್ತದೆ.

  • 1050 ರೂ. ಕೊಟ್ಟು ಬಾಹುಬಲಿ ಚಿತ್ರ ವೀಕ್ಷಣೆ – ಸಿಎಂ ವಿರುದ್ಧ ವಿಜಯಪ್ರಸಾದ್ ಗರಂ

    1050 ರೂ. ಕೊಟ್ಟು ಬಾಹುಬಲಿ ಚಿತ್ರ ವೀಕ್ಷಣೆ – ಸಿಎಂ ವಿರುದ್ಧ ವಿಜಯಪ್ರಸಾದ್ ಗರಂ

    ಬೆಂಗಳೂರು: ದುಬೈ ಪ್ರವಾಸದಿಂದ ವಾಪಾಸ್ಸಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಸಂಜೆ ಬಾಹುಬಲಿ-2 ಚಿತ್ರ ವೀಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಸ್ಯಾಂಡಲ್ ವುಡ್ ನಟ, ನಿರ್ದೇಶಕ ವಿಜಯಪ್ರಸಾದ್ ಅವರು ಸಿಎಂ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್ಬುಕ್‍ನಲ್ಲಿ ಗರಂ ಆಗಿ ಪೋಸ್ಟ್ ಹಾಕಿದ್ದಾರೆ.

    ಸಿಎಂ ವಿರುದ್ಧ ವಿಜಯಪ್ರಸಾದ್ ಹೇಳಿದ್ದೇನು?

    ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರೇ ನಮಸ್ಕಾರಗಳು, ನನ್ನ ಒಲವು ಮತ್ತು ಬೆಂಬಲ ಬಿಜೆಪಿಗೇ ಇದ್ದರೂ ನೀವು ಮುಖ್ಯಮಂತ್ರಿ ಆದಾಗ ಸಂತೋಷಪಟ್ಟಿದ್ದೆ ಜೊತೆಗೆ ಬಹಳಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದೆ. ಯಾಕೆಂದರೆ ನೀವು ಗ್ರಾಮೀಣ ಪ್ರದೇಶದಿಂದ ಬಂದಿರುವುದಲ್ಲದೇ, ಬದುಕನ್ನ ತುಂಬಾ ತಳಮಟ್ಟದಿಂದ ನೋಡಿರುವರು. ಹಾಗಾಗಿ ಬದುಕಿನ ಬವಣೆಗಳನ್ನ ಬಹಳ ಹತ್ತಿರದ ಜೊತೆಗೆ ಸ್ಷಷ್ಟವಾಗಿ ನೋಡಿರುವ ನಿಮ್ಮಿಂದ ಹೆಚ್ಚಿನದೇ ನಿರೀಕ್ಷೆ ಮಾಡಿದ್ದೆ. ಆದರೆ ಆಗಿದ್ದು ನಿರಾಸೆ ಮಾತ್ರ.

    ಇರಲಿ, ಈಗ ಮಲ್ಟಿಪ್ಲೆಕ್ಸ್ ಗಳಲ್ಲಿ ಚಲನಚಿತ್ರ ಪ್ರದರ್ಶನ ದರ 200/- ರೂ ನಿಗದಿ ಮಾಡಿ ಅದನ್ನ ಜಾರಿಗೆ ತರುವ ಬಗ್ಗೆ ಸರಿಯಾದ ಸ್ಪಷ್ಟತೆಯೂ ನೀಡದೆ ಈಗ ನೀವೇ 1050/- ರೂ ನೀಡಿ ಬಾಹುಬಲಿ 2 ಚಿತ್ರವನ್ನ ಮಲ್ಟಿಪ್ಲೇಕ್ಸ್ ನಲ್ಲಿ ಚಿತ್ರ ವೀಕ್ಷಣೆ ಮಾಡಿರುವ ಸುದ್ದಿ ಬಂದಿದೆ….!

    ನೀವು ಪರಭಾಷೆ ಚಿತ್ರ ನೋಡಿದಿರಿ ಎಂದು ಬೇಸರವಿಲ್ಲ, ಆದರೆ ಅದಕ್ಕೆ ನೀವು ಪಾವತಿಸಿರುವ ಟಿಕೆಟ್ ದರ ಹಾಗೆ ಮಲ್ಟಿಪ್ಲೆಕ್ಸ್ ದರದ ಬಗ್ಗೆ ಹೊರಡಿಸಿರುವ ಆದೇಶ ಜಾರಿಗೆ ಬರುವ ಮೊದಲೇ ಚಿತ್ರ ವೀಕ್ಷಣೆ ಮಾಡಿದ್ದು ತುಂಬಾ ನೋವಾಗಿದೆ.

    ಇದನ್ನೂ ಓದಿ: Exclusive 200 ರೂ. ಫಿಕ್ಸ್ ಮಾಡಿ 1050 ರೂ. ತೆತ್ತು ಬಾಹುಬಲಿ ವೀಕ್ಷಿಸಿದ ಸಿಎಂ: ವಿಡಿಯೋ ನೋಡಿ

    ಮೊದಲೇ ಕನ್ನಡ ಚಿತ್ರರಂಗ ಮತ್ತು ಕನ್ನಡ ಚಿತ್ರಗಳು ಎಂತಹ ಸ್ಥಿತಿಯಲ್ಲಿದೆಯೆಂದು ನಿಮಗೇ ತಿಳಿದಿದೆ. ಹೀಗಿರುವಾಗ ನೀವೇ ಹೀಗೆ ಮಾಡಿದರೆ ಹೇಗೆ?
    ಜನತೆಯ `ಕೈ’ ಹಿಡಿಯಬೇಕಾದ ನೀವೇ `ಕೈ’ ಬಿಟ್ಟರೆ ಹೇಗೆ?

    ಯಾಕೆ ಏನಾಗಿದೆ ನಿಮಗೆ? ಕನ್ನಡ ಮಣ್ಣಿನ, ಕನ್ನಡ ಚಿತ್ರರಂಗದ, ಕನ್ನಡಿಗರ ತೇಜೋವಧೆ, ಲೂಟಿತನ ಎಲ್ಲಾ ಕಡೆಯಿಂದಲೂ, ಎಲ್ಲರಿಂದಲೂ ಇನ್ನೆಷ್ಟು ಆಗಬೇಕು?

    ಎಲ್ಲಾ ಸಾಮಾರ್ಥ್ಯ ಇರುವ ನೀವು ಅರ್ಥಪೂರ್ಣ ಮತ್ತು ಖಡಕ್ ನಿರ್ಧಾರಗಳಿಂದ ಜನತೆಯ `ಕೈ’ ಹಿಡಿಯಿರಿ. ಇದೇ ನನ್ನ ಕೋರಿಕೆ. ಬೇಸರವಾಗಿದ್ದರೇ ಕ್ಷಮೆ ಇರಲಿ. ಪ್ರಮಾಣಿಕವಾಗಿ ನಾಡು ಕಟ್ಟಲು ಯಾವ ಪಕ್ಷವಾದರೇನು, ಯಾರಾದರೇನು ಅಲ್ಲವೇ ? ಇದೆಲ್ಲದರ ಮಧ್ಯೆ ನೀವು ಬಿಡುವು ಮಾಡಿಕೊಂಡು ಕನ್ನಡ ಚಲನಚಿತ್ರ `ನಿರುತ್ತರ’ ನೋಡಿರುವುದು ಮತ್ತು ಶ್ಲಾಘಿಸಿರುವುದು ನಿಜಕ್ಕೂ ಸ್ವಾಗತಾರ್ಹ.

    ನಿರುತ್ತರ ಚಿತ್ರವನ್ನು ವೀಕ್ಷಿಸಲು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕುಳಿತಿರುವ ಸಿಎಂ