– ದೀಪ ಆರುವ ಮುನ್ನ ಜೋರಾಗಿ ಉರಿಯುತ್ತೆ, ಅದಕ್ಕೆ ಕಾಶಪ್ಪನವರ್ ಉರಿಯುತ್ತಿದ್ದಾನೆ
– ಶ್ರೀಗಳ ಹತ್ಯೆ ವಿಚಾರ ನನಗೆ ಗೊತ್ತಿಲ್ಲ, ಬೆಲ್ಲದ್‌ರನ್ನೇ ಕೇಳಿ ಎಂದ ಶಾಸಕ
ವಿಜಯಪುರ: ಬಿಜೆಪಿಯಿಂದ (BJP) ಉಚ್ಚಾಟನೆ ಆಗಿದ್ದೀನಿ, ಹಾಗೇ ನೋಡಿದ್ರೆ 18 ವರ್ಷ ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದು, ಆದರೆ ನೋಡಿ 2 ತಿಂಗಳಲ್ಲಿ ಮತ್ತೆ ಮರಳಿ ಬಿಜೆಪಿಗೆ ಸೇರಿಸಿಕೊಳ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಉಚ್ಚಾಟನೆ ಆಗಿರೋದು ನಾನು. ಹಾಗೇ ನೋಡಿದ್ರೆ 18 ವರ್ಷ ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದು. ಆದ್ರೆ ನೋಡಿ 2 ತಿಂಗಳಲ್ಲಿ ಮತ್ತೆ ಮರಳಿ ನನ್ನನ್ನ ಸೇರಿಸಿಕೊಳ್ತಾರೆ. ಏನು ಮಾಡೋದು? ನಮ್ಮ ಶಕ್ತಿ ಇದ್ದರೆ ಎಲ್ಲರೂ ಕರೆಯುತ್ತಾರೆ. ಇಲ್ಲ ಅಂದ್ರೆ ಅಪ್ಪಾಜಿ ಎನ್ನುತ್ತ ಯಡ್ಡಿಯೂರಪ್ಪ, ವಿಜಯೇಂದ್ರ ಕೈ, ಕಾಲು ಹಿಡಿಯಬೇಕಾಗುತ್ತೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳ ಆರೋಪ
ಇದೇ ವೇಳೆ ಕೂಡಲಸಂಗಮಶ್ರೀ ವಿರುದ್ಧ ಹತ್ಯೆಗೆ ಸಂಚು ರೂಪಿಸಿದ ವಿಚಾರವಾಗಿ ಮಾತನಾಡಿದ ಅವರು, ಹತ್ಯೆಗೆ ಸಂಚು ರೂಪಿಸಿದ ಬಗ್ಗೆ ನನಗೆ ಯಾವ ಮಾಹಿತಿ ಇಲ್ಲ. ಅದರ ಬಗ್ಗೆ ಬೆಲ್ಲದ್ ಅವರನ್ನೇ ಕೇಳಿ. ನಾವು ಜಯಮೃತ್ಯುಂಜಯ ಸ್ವಾಮೀಜಿಗಳಿಗಾಗಿ 15 ಎಕರೆ ಜಮೀನು ತೆಗೆದುಕೊಂಡು ಹಾಸ್ಟೇಲ್ ಸಮೇತ ಮಠದ ವ್ಯವಸ್ಥೆ ಮಾಡುತ್ತೇವೆ. ಅದರ ಬಗ್ಗೆ ಬುಧವಾರ ನಾನು, ಸಿಸಿ ಪಾಟೀಲ್ ಸೇರಿದಂತೆ ಅನೇಕರು ಸೇರಿ ಸಭೆ ಮಾಡುತ್ತೇವೆ. ಶ್ರೀಗಳು ಅಲ್ಲಿಯೇ ಇರಲಿದ್ದಾರೆ. ಈ ಬಾರಿ ಯಾವುದೇ ರಾಜಕಾರಣಿ ಕೂಡ ಟ್ರಸ್ಟ್ನಲ್ಲಿ ಇರುವುದಿಲ್ಲ. ಕೇವಲ ಭಕ್ತರು ಮಾತ್ರ ಟ್ರಸ್ಟ್ನಲ್ಲಿ ಇರುತ್ತಾರೆ ಎಂದರು.
ಉಚ್ಚಾಟನೆ ಮಾಡಲು ಕಾಶಪ್ಪನವರ್ ಯಾರು? ಇದೇನು ರಾಜಕೀಯ ಪಕ್ಷನಾ? ಸ್ವಾಮೀಜಿಗಳ ಜೊತೆ ಭಕ್ತರಿದ್ದಾರೆ. ಯಾವಾಗಲೂ ದೀಪ ಆರುವ ಮುನ್ನ ಜೋರಾಗಿ ಉರಿಯುತ್ತೆ, ಅದಕ್ಕೆ ಕಾಶಪ್ಪನವರ್ ಉರಿಯುತ್ತಿದ್ದಾನೆ. ಇಡೀ ಸಮಾಜ ಸ್ವಾಮೀಜಿಗಳ ಜೊತೆಯಲ್ಲಿದೆ. ಆ ಟ್ರಸ್ಟ್ನಲ್ಲಿ ಅವರ ಹೆಸರು ಇಲ್ಲ ಎಂದ್ಮೇಲೆ ಅದರ ಮೇಲೆ ಆಸೆಯೂ ಕೂಡ ಇರಬಾರದು. ನಾವು ಆಸೆ ಬಿಟ್ಟು ಬಿಡಿ ಎಂದು ಹೇಳಿದ್ದೇವೆ. ಗದಗನ ಪ್ರಭಣ್ಣಾ ಹುಣಶಿಕಟ್ಟಿ, ಧಾರವಾಡದ ಅಸೂಟಿ ಎರಡು ಕುಟುಂಬದವರು ಸಮಾಜದ ಆಸ್ತಿಯನ್ನು ಖಾಸಗಿ ಟ್ರಸ್ಟ್ ಮಾಡಿಕೊಂಡಿದ್ದಾರೆ. ಅವರ ಮಕ್ಕಳು, ಮೊಮ್ಮಕಳೇ ಅದರ ಟ್ರಸ್ಟ್ನ ಸದಸ್ಯರಾಗಿರುತ್ತಾರೆ. ಬೇರೆಯವರು ಟ್ರಸ್ಟ್ನ ಸದಸ್ಯರಾಗುವ ಹಾಗಿಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ಜಮ್ಮು ಕಾಶ್ಮೀರದ ಪೇದೆಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ – ಸಿಬಿಐ ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್


















ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮಖಂಡಿ ಕಾರ್ಯಕ್ರಮಕ್ಕೆ ತಾಕತ್ತಿದ್ರೆ ಕಲ್ಲು ಹೊಡೆಸಲಿ, ಪಂಚಮಸಾಲಿ ಪ್ರತಿಜ್ಞೆ ಅಭಿಯಾನ ಜಮಖಂಡಿಯಲ್ಲಿ ನಡದೇ ನಡೆಯುತ್ತೆ. ಸಮಾಜದ ಒಳಿತಿಗಾಗಿ ಅವರು ಕೆಲಸ ಮಾಡುತ್ತಿಲ್ಲ. ಕೆಲವರು ಮುಖ್ಯಮಂತ್ರಿಯಾಗ್ಬೇಕು, ಮಂತ್ರಿ ಆಗ್ಬೇಕು ಅನ್ನೋ ನಿಟ್ಟಿನಲ್ಲಿದ್ದಾರೆ. ಮೀಸಲಾತಿ ಸಿಗೋವರೆಗೂ ನಾವು ಹೋರಾಟ ನಿಲ್ಲಿಸಲ್ಲ. ಇವರ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ. ಮುಂದೆ ಒಂದು ದಿನ ಸಮಾಜ ಇಂತವರಿಗೆ ತಕ್ಕಪಾಠ ಕಲಿಸಲಿದೆ ಎಂದರು. ಇದನ್ನೂ ಓದಿ:
ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಆರಂಭದಿಂದಲೂ ಕೆಲವರು ಮಾಡುತ್ತಿದ್ದಾರೆ. ಪಂಚಮಸಾಲಿ ಪ್ರತಿಜ್ಞೆ ಅಭಿಯಾನ ಜಮಖಂಡಿಯಲ್ಲಿ ನಡದೇ ನಡೆಯುತ್ತೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಇದನ್ನೂ ಓದಿ:
ಕೂಡಲ ಸಂಗಮ ಪೀಠಕ್ಕೆ ಪರ್ಯಾಯ ಸ್ವಾಮೀಜಿ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಮಾಜದ ಪೀಠವನ್ನು ಯಾರಿಂದಲೂ ಒಡೆಯಲು ಸಾಧ್ಯವಿಲ್ಲ. ಅವರಿಗೆ ತಾಕತ್ ಇದ್ರೆ ಒಡೆದು ತೋರಿಸಲಿ. ಪೀಠ ಬದಲಾಗಲ್ಲ, ಇದೇ ಸ್ವಾಮಿಗಳು ಪೀಠದಲ್ಲಿ ಇರ್ತಾರೆ ಎಂದು ವಿಜಯಾನಂದ ಕಾಶಪ್ಪನವರ್ ತಿಳಿಸಿದರು.






