Tag: Vijayanagara empire

  • ಕುಂದಾಪುರದಲ್ಲಿ ಉತ್ಕನನದ ವೇಳೆ ವಿಜಯನಗರ ಸಾಮ್ರಾಜ್ಯದ ಪ್ರಾಚ್ಯವಸ್ತುಗಳು ಪತ್ತೆ

    ಕುಂದಾಪುರದಲ್ಲಿ ಉತ್ಕನನದ ವೇಳೆ ವಿಜಯನಗರ ಸಾಮ್ರಾಜ್ಯದ ಪ್ರಾಚ್ಯವಸ್ತುಗಳು ಪತ್ತೆ

    ಉಡುಪಿ: ಊರಿನ ಹಿರಿಯರು ಹೇಳಿದ ಮಾತಿನ ಅಂದಾಜಿನಂತೆ ಉತ್ಕನನ ನಡೆಸಿದ ಹೊಸಂಗಡಿಯ ವಿದ್ಯಾರ್ಥಿಗಳು ಇತಿಹಾಸ ಕುರುಹುಗಳನ್ನು ಪತ್ತೆ ಹಚ್ಚಿದ್ದಾರೆ. ದೊಡ್ಡ ಕಂಬ, ಆನೆ ನೀರು ಕುಡಿಯುವ ಮರಿಗೆ ಮಣ್ಣಿನೊಳಗೆ ಸಿಕ್ಕಿದೆ.

    ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಂಗಡಿ ಪೇಟೆಯಲ್ಲಿ ಗತ ಕಾಲದಲ್ಲಿ ಬಳಸಲಾಗುತ್ತಿದ್ದ ಆನೆ ನೀರು ಕುಡಿಯುವ ಮರಿಗೆ ಆನೆ ಲಾಯದ ಕಂಬವನ್ನು ವಿದ್ಯಾರ್ಥಿಗಳು ಪತ್ತೆಹಚ್ಚಿದ್ದಾರೆ. ಶತಮಾನಗಳ ಹಿಂದಿನ ಕಾಲದ ಪ್ರಾಚ್ಯವಸ್ತುಗಳು ಇವಾಗಿದೆ. ರಾಜರ ಆನೆ ಕಟ್ಟುವ ಕಲ್ಲಿನ ಕಂಬ ಹಾಗೂ ಆನೆಗೆ ನೀರು ಕುಡಿಯಲು ನಿರ್ಮಿಸಿದ ಕಲ್ಲಿನ ಕೊಪ್ಪರಿಗೆ ಇದು ಎನ್ನಲಾಗಿದೆ. ಮೊದಲಿನಿಂದಲೂ ಹೊಸಂಗಡಿ ರಸ್ತೆ ಪಕ್ಕದಲ್ಲಿ ಆನೆ ಕಟ್ಟುವ ಕಂಬ ಕಾಣುತ್ತಿತ್ತು, ಇಲ್ಲಿ ಕೊಪ್ಪರಿಗೆ ಇತ್ತು ಎಂಬ ಮಾತನ್ನು ಕೇಳಿದ ವಿದ್ಯಾರ್ಥಿಗಳಾದ ಸುಹಾಸ್ ಮಲ್ಯ, ಸಮರ್ಥ, ರಿತೀಶ್ ಹಾಗೂ ಅನ್ವಿತ್ ಮಲ್ಯ ಅವರು ಆಸಕ್ತಿಯಿಂದ ಅದನ್ನು ಹುಡುಕಿದಾಗ ಮಣ್ಣಿನ ಅಡಿ ಹೂತು ಹೋಗಿದ್ದ ಆನೆ ನೀರು ಕುಡಿಯುವ ಕೊಪ್ಪರಿಗೆ ಪತ್ತೆಯಾಗಿದೆ. ಇದನ್ನೂ ಓದಿ: ಮಲಯಾಳಂ ನಟ ಎನ್.ಡಿ. ಪ್ರಸಾದ್ ನೇಣಿಗೆ ಶರಣು

    ಕೆಳದಿ ಶಿವಪ್ಪ ನಾಯಕನ ಕಾಲದ ಹೊನ್ನಯ್ಯ ಅರಸ ಮನೆತನದವರು ಆಳ್ವಿಕೆ ನಡೆಸಿದ್ದು, ಇದು ಅವರ ಕಾಲದಲ್ಲಿಯೇ ನಿರ್ಮಿಸಿರಬಹುದು ಎಂದು ಅಂದಾಜಿಸಲಾಗಿದೆ. ಇತಿಹಾಸತಜ್ಞ ಪ್ರೊಫೆಸರ್ ಮುರುಗೇಶಿ ಈ ಬಗ್ಗೆ ಮಾತನಾಡಿ, ಈಗಿನ ಉಡುಪಿಯಲ್ಲಿ ಹಲವಾರು ರಾಜಮನೆತನಗಳು ಆಳ್ವಿಕೆಯನ್ನು ಮಾಡಿವೆ. ವನ್ಯ ಕಂಬಳಿಯವರ ರಾಜಮನೆತನ ಈಗಿನ ಕುಂದಾಪುರ ಭಾಗದಲ್ಲಿ ಆಳ್ವಿಕೆ ನಡೆಸಿತ್ತು. ವಿಜಯನಗರ ಸಾಮ್ರಾಜ್ಯದ ಸಾಮಂತ ಅರಸರುಗಳಾಗಿ ಕರಾವಳಿ ಭಾಗದಲ್ಲಿ ಹಲವಾರು ರಾಜಮನೆತನಗಳು ಆಳ್ವಿಕೆಯನ್ನು ಮಾಡಿದೆ. ಕುಂದಾಪುರ ಭಾಗದಲ್ಲಿ ಹಲವು ದೇವಸ್ಥಾನಗಳು ಈ ಸಂದರ್ಭದಲ್ಲಿ ನಿರ್ಮಾಣ ಆಗಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವನ್ನು ಕೂಡಾ ಆಳ್ವಿಕೆ ಸಂದರ್ಭ ಮೇಲ್ವಿಚಾರಣೆ ಮಾಡುತ್ತಿದ್ದರು. ಇದನ್ನೂ ಓದಿ: ದಾವೂದ್ ಇಬ್ರಾಹಿಂ ಜೊತೆ ಮಹಾರಾಷ್ಟ್ರ ಸರ್ಕಾರಕ್ಕೆ ನಂಟು? – ಬಂಡಾಯಕ್ಕೆ ಇದೇ ಕಾರಣ

    ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಪ್ರಾಚ್ಯವಶೇಷಗಳನ್ನು ವಿದ್ಯಾರ್ಥಿಗಳು ಕಂಡುಹುಡುಕಿದ್ದಾರೆ. ಆಗಿನ ಸಂದರ್ಭದಲ್ಲಿ ಪ್ರತಿ ಅರಸರು ತಮ್ಮ ಅರಮನೆಗಳಲ್ಲಿ ಆನೆಗಳನ್ನು ಸಾಕುತ್ತಿದ್ದರು. ಆನೆಗಳ ಪಾಲನೆ ಪೋಷಣೆಗಾಗಿ ಲಾಯಗಳನ್ನು ನಿರ್ಮಾಣ ಮಾಡುತ್ತಿದ್ದರು. ಇಲ್ಲಿ ಆನೆಗಳ ಕಟ್ಟುವ ಕಂಬಗಳು, ಮರಿಗೆ ಬಳಸಲಾಗುತ್ತಿತ್ತು. ಈಗ ಅದು ಲಭ್ಯವಾಗಿದೆ. ಪ್ರಾಚ್ಯ ಅವಶೇಷಗಳನ್ನು ಕಂಡು ಹುಡುಕಿದ ವಿದ್ಯಾರ್ಥಿಗಳಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

    Live Tv

  • 2012ರಲ್ಲಿ ತಮಿಳುನಾಡಿನಲ್ಲಿ ಕಳುವಾಗಿದ್ದ 500 ವರ್ಷ ಹಳೆಯ ಹನುಮಾನ್ ವಿಗ್ರಹ ಭಾರತಕ್ಕೆ ವಾಪಸ್

    2012ರಲ್ಲಿ ತಮಿಳುನಾಡಿನಲ್ಲಿ ಕಳುವಾಗಿದ್ದ 500 ವರ್ಷ ಹಳೆಯ ಹನುಮಾನ್ ವಿಗ್ರಹ ಭಾರತಕ್ಕೆ ವಾಪಸ್

    ಚೆನ್ನೈ: ದಶಕದ ಹಿಂದೆ ತಮಿಳುನಾಡಿನ ಅರಿಯಾಲೂರಿನಿಂದ ಕದ್ದು ವಿದೇಶಕ್ಕೆ ಸಾಗಿಸಲಾಗಿದ್ದ ಹನುಮಂತನ ವಿಗ್ರಹವನ್ನು ಶೀಘ್ರದಲ್ಲೇ ಭಾರತಕ್ಕೆ ವಾಪಸ್ ತರಲಾಗುವುದು ಎಂದು ಕೇಂದ್ರ ಸಂಸ್ಕøತಿ ಸಚಿವ ಜಿ.ಕಿಶನ್ ರೆಡ್ಡಿ ಬುಧವಾರ ಹೇಳಿದ್ದಾರೆ.

    ವಿಜಯನಗರ ಸಾಮ್ರಾಜ್ಯ ಕಾಲದ 14-15ನೇ ಶತಮಾನದ ಹನುಮಂತನ ವಿಗ್ರಹವನ್ನು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಖಾಸಗಿ ಖರೀದಿದಾರರೊಬ್ಬರ ಸ್ವಾಧೀನದಲ್ಲಿ ಇದ್ದಿದ್ದನ್ನು ಪತ್ತೆ ಹಚ್ಚಲಾಗಿದೆ.

    ಈ ಬಗ್ಗೆ ನಿನ್ನೆ ಕೇಂದ್ರ ಸಚಿವ ರೆಡ್ಡಿ ಅವರು ಮಾತನಾಡಿ, ತಮಿಳುನಾಡಿನ ದೇವಸ್ಥಾನದಿಂದ ಕಳುವಾಗಿದ್ದ 500 ವರ್ಷ ಹಳೇ ಆಂಜನೇಯನ ವಿಗ್ರಹವನ್ನು ಭಾರತಕ್ಕೆ ವಾಪಸ್ ತರಲಾಗುವುದು. ಈಗಾಗಲೇ ಯುಎಸ್ ಹೋಮ್ ಲ್ಯಾಂಡ್ ಸೆಕ್ಯೂರಿಟಿ, ಈ ವಿಗ್ರಹವನ್ನು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಹಸ್ತಾಂತರ ಮಾಡಿದೆ ಎಂದು ತಿಳಿಸಿದ್ದಾರೆ.

    ಅಂದಹಾಗೇ, ಈ ಆಂಜನೇಯನ ವಿಗ್ರಹವನ್ನು ಅರಿಯಲೂರಿನ ವೆಲ್ಲೂರು ಗ್ರಾಮದ ವರದರಾಜ ಪೆರುಮಾಳ್ ದೇಗುಲದಿಂದ ಶ್ರೀದೇವಿ ಮತ್ತು ಭೂದೇವಿ ವಿಗ್ರಹಗಳೊಂದಿಗೆ 2012ರ ಏಪ್ರಿಲ್ 9ರಂದು ಕಳುವು ಮಾಡಲಾಗಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಹರ್ಷನ ಹತ್ಯೆ- ಡೀಟೈಲ್ಸ್ ಎಲ್ಲ ಹೇಳೋಕೆ ಆಗಲ್ಲ: ಆರಗ ಜ್ಞಾನೇಂದ್ರ

    2014ರಲ್ಲಿ ಕ್ರಿಸ್ಟಿ ಹರಾಜು ಕಂಪನಿ ಈ ವಿಗ್ರಹವನ್ನು ಹರಾಜಿಗೆ ಇಟ್ಟಿತ್ತು. 37,500 ಡಾಲರ್ ಕೊಟ್ಟು ಖಾಸಗಿ ವ್ಯಕ್ತಿಯೊಬ್ಬರು ಖರೀದಿ ಮಾಡಿದ್ದರು. ಆದರೆ ಇತ್ತ ಭಾರತದಲ್ಲಿ ಕಳ್ಳತನವಾದ ವಿಗ್ರಹಗಳ ಬಗ್ಗೆ ತನಿಖೆಯೂ ನಡೆಯುತ್ತಿತ್ತು.

    ತಮಿಳುನಾಡಿನ ಪೊಲೀಸರ ತಂಡ ಈ ಪ್ರಕರಣದ ವಿಚಾರವಾಗಿ ಯುಎಸ್ ಹೋಮ್ ಲ್ಯಾಂಡ್ ಸೆಕ್ಯೂರಿಟಿಯನ್ನು ಸಂಪರ್ಕಿಸಿತ್ತು ಅಂತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಆಸ್ಟ್ರೇಲಿಯಾದಲ್ಲಿ ಹರಾಜು ಕಂಪನಿಯವರಿಗಾಗಲಿ, ಅದನ್ನು ಖರೀದಿಸಿದ ವ್ಯಕ್ತಿಗಾಗಲಿ ಇದು ಕದ್ದ ವಿಗ್ರಹ ಎಂಬ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಹೇಳಲಾಗಿದೆ. ಇದನ್ನೂ ಓದಿ: ಅಗ್ನಿ ಅವಘಡ – ಕಟ್ಟಡದಿಂದ ಹಾರಿ ಜೀವ ಉಳಿಸಿಕೊಂಡ ತಾಯಿ, ಮಗಳು

    ಇತ್ತೀಚಿನ ವರ್ಷಗಳಲ್ಲಿ ಹೀಗೆ ಹಲವು ವಿಗ್ರಹಗಳನ್ನು ಭಾರತಕ್ಕೆ ವಾಪಸ್ ತರಲಾಗಿದೆ. ಹಿಂದೆಲ್ಲ ಕಳುವಾಗಿ ವಿದೇಶಕ್ಕೆ ಸಾಗಿಸಲಾಗಿದ್ದ ದೇವರ ಮೂರ್ತಿಗಳು ಒಂದೊಂದೇ ದೇಶಕ್ಕೆ ವಾಪಸ್ ಬರುತ್ತಿವೆ.

    ಎರಡು ದಶಕಗಳ ಹಿಂದೆ ಬಿಹಾರದ ಕುಂಡಲ್‍ಪುರ ದೇವಸ್ಥಾನದಿಂದ ಕಳುವಾದ ಅವಲೋಕಿತೇಶ್ವರ ಪದ್ಮಪಾಣಿ (ಬುದ್ಧ) ವಿಗ್ರಹ ಇಟಲಿಯಲ್ಲಿ ಪತ್ತೆಯಾಗಿದೆ. ಮಿಲನ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಅದನ್ನು ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಭಾರತಕ್ಕೆ ಬರಲಿದೆ. ಈ ವಿಗ್ರಹ 8-12ನೇ ಶತಮಾನದ್ದು, 2000ನೇ ಇಸವಿಯಲ್ಲಿ ಕಳುವಾಗಿತ್ತು. ವಾರಾಣಸಿಯ ದೇವಸ್ಥಾನವೊಂದರಿಂದ 100 ವರ್ಷಗಳ ಹಿಂದೆ ಕಳುವಾಗಿದ್ದ, 18ನೇ ಶತಮಾನದ ದೇವಿ ಅನ್ನಪೂರ್ಣಾ ವಿಗ್ರಹವನ್ನು 2021ರ ಅಕ್ಟೋಬರ್‍ನಲ್ಲಿ ಕೆನಡಾದ ಒಟ್ಟಾವಾದಿಂದ ವಾಪಸ್ ತರಲಾಗಿತ್ತು.

  • ಗಣರಾಜ್ಯೋತ್ಸವ- ಕರ್ನಾಟಕದಿಂದ ವಿಜಯನಗರ ಕಲಾ ಶ್ರೀಮಂತಿಕೆಯ ಸ್ತಬ್ಧಚಿತ್ರ ಪ್ರದರ್ಶನ

    ಗಣರಾಜ್ಯೋತ್ಸವ- ಕರ್ನಾಟಕದಿಂದ ವಿಜಯನಗರ ಕಲಾ ಶ್ರೀಮಂತಿಕೆಯ ಸ್ತಬ್ಧಚಿತ್ರ ಪ್ರದರ್ಶನ

    ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ರಾಜ್ಯದಿಂದ ಹಂಪಿಯ ವಿಜಯನಗರ ಕಲಾ ಶ್ರೀಮಂತಿಕೆಯನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ.

    ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಈ ಬಾರಿ ಕರ್ನಾಟಕದಿಂದ ವಿಜಯನಗರದ ಕಲಾ ಶ್ರೀಮಂತಿಕೆ ಬಿಂಬಿಸುವ ಸ್ತಬ್ಧಚಿತ್ರದ ಪ್ರದರ್ಶನ ನಡೆಯಲಿದೆ. ವಿಜಯನಗರ ಪರಿಕಲ್ಪನೆಯ ಸ್ತಬ್ಧಚಿತ್ರದಲ್ಲಿ ಅಂಜನಾದ್ರಿ ಬೆಟ್ಟ, ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕ, ಹಜಾರರಾಮ ದೇವಸ್ಥಾನ, ಉಗ್ರ ನರಸಿಂಹನ ಸ್ತಬ್ಧ ಚಿತ್ರಗಳು ಕಣ್ಮನ ಸೆಳೆಯಲಿವೆ.

    ಗಣರಾಜ್ಯೋತ್ಸವಕ್ಕೆ ಈಗಾಗಲೇ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಯೋದ್ಯೆಯ ರಾಮ ಮಂದಿರ ಹಾಗೂ ದೀಪೋತ್ಸವವನ್ನು ಸಹ ಸ್ತಬ್ಧಚಿತ್ರಗಳಲ್ಲಿ ಬಿಂಬಿಸಲಾಗುತ್ತಿದೆ. ಒಟ್ಟು 17 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ತಂಡಗಳು ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿವೆ. ರಾಜ್ಯದಿಂದ ವಿಜಯನಗರ ಸಾಮ್ರಾಜ್ಯದ ಕಲಾ ಶ್ರೀಮಂತಿಕೆಯನ್ನು ತೋರಿಸಲಾಗುತ್ತಿದೆ.

  • ಉಗ್ರಪ್ಪ ಭಾಷಣದ ವೇಳೆ ಮೋದಿ ಮೋದಿ ಎಂದು ಘೋಷಣೆ ಕೂಗಿದ ಪೇಕ್ಷಕರು..!

    ಉಗ್ರಪ್ಪ ಭಾಷಣದ ವೇಳೆ ಮೋದಿ ಮೋದಿ ಎಂದು ಘೋಷಣೆ ಕೂಗಿದ ಪೇಕ್ಷಕರು..!

    ಬಳ್ಳಾರಿ: ಕಾಂಗ್ರೆಸ್ ಸಂಸದ ಉಗ್ರಪ್ಪ ಭಾಷಣದ ವೇಳೆ ನೂರಾರು ಪೇಕ್ಷಕರು ಮೋದಿ ಮೋದಿ ಎಂದು ಘೋಷಣೆ ಕೂಗಿದ ಘಟನೆ ಹಂಪಿ ಉತ್ಸವದಲ್ಲಿ ನಡೆಯಿತು.

    ಹಂಪಿ ಉತ್ಸವ ಉದ್ಘಾಟನಾ ಸಮಾರಂಭದ ವೇಳೆ ಭಾಷಣ ಮಾಡಲು ಸಂಸದ ಉಗ್ರಪ್ಪ ಆಗಮಿಸಿದ್ದರು. ಸಂಸದರು ಭಾಷಣ ಆರಂಭಿಸುತ್ತಿದ್ದಂತೆ ಉತ್ಸವ ನೋಡಲು ಬಂದ ಪೇಕ್ಷಕರು ಮೋದಿ ಮೋದಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಜಯಘೋಷ ಮೊಳಗಿಸಿದರು. ಹೀಗಾಗಿ ಹಂಪಿ ಉತ್ಸವದಲ್ಲಿಯೂ ಮೋದಿ ಮೋದಿ ಎನ್ನುವ ಜೈಕಾರ ಕೇಳಿದ್ದು ವಿಶೇಷವಾಗಿತ್ತು. ಇದನ್ನು ಓದಿ: ಹಂಪಿ ಶಿಲ್ಪಕಲೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಿಳಿಸಿ: ನಟ ದರ್ಶನ್

    ಉದ್ಘಾಟನಾ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಚಾಲೆಂಜಿಂಗ್ ದರ್ಶನ್ ಆಗಮಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಸಚಿವರಾದ ತುಕಾರಾಂ, ಪಿ.ಟಿ.ಪರಮೇಶ್ವರ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಗೋಪಾಲಸ್ವಾಮಿ, ಶಾಸಕರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಸೋಮಶೇಖರ್ ರೆಡ್ಡಿ, ಮುನಿರತ್ನ ಅವರು ಭಾಗಿಯಾಗಿದ್ದರು. ಇದನ್ನು ಓದಿ: ಶ್ರೀಕೃಷ್ಣ ದೇವರಾಯನ ಅವತಾರ ಎತ್ತಲಿದ್ದಾರೆ ದರ್ಶನ್!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಕೃಷ್ಣ ದೇವರಾಯನ ಅವತಾರ ಎತ್ತಲಿದ್ದಾರೆ ದರ್ಶನ್!

    ಶ್ರೀಕೃಷ್ಣ ದೇವರಾಯನ ಅವತಾರ ಎತ್ತಲಿದ್ದಾರೆ ದರ್ಶನ್!

    ಬಳ್ಳಾರಿ: ಕುರುಕ್ಷೇತ್ರ ಚಿತ್ರದಲ್ಲಿ ದುಯೋರ್ಧನನಾಗಿ ಅಭಿನಯಿಸಿರುವ ನಟ ದರ್ಶನ್ ಮುಂದೆ ಶ್ರೀಕೃಷ್ಣದೇವರಾಯನ ಅವತಾರ ಎತ್ತಲಿದ್ದಾರೆ.

    ನಟ ಸೌರ್ವಭಾಮ ರಾಜಕುಮಾರ್ ಅವರ ಬಳಿಕ ಶ್ರೀಕೃಷ್ಣ ದೇವರಾಯನಾಗಿ ನಟ ದರ್ಶನ್ ಅಭಿನಯಿಸುವುದು ಪಕ್ಕಾ ಆಗಿದೆ. ಹಂಪಿ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ನಟ ದರ್ಶನ ಶ್ರೀಕೃಷ್ಣ ದೇವರಾಯ ಪಾತ್ರ ಮಾಡುವ ಮನದಾಸೆ ಹೊರಹಾಕಿದ್ದು, ಇದೇ ವೇಳೆ ನಿರ್ಮಾಪಕ ಮುನಿರತ್ನ ಶ್ರೀಕೃಷ್ಣ ದೇವರಾಯರ ಬಗ್ಗೆ ಚಿತ್ರ ನಿರ್ಮಾಣ ಮಾಡುವೆ ಎಂದು ಖಚಿತ ಪಡಿಸಿದ್ದಾರೆ. ಇದನ್ನು ಓದಿ: ಹಂಪಿ ಶಿಲ್ಪಕಲೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಿಳಿಸಿ: ನಟ ದರ್ಶನ್

    ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ನಿರ್ಮಿಸಿರುವ ಹಂಪಿಯ ಶಿಲ್ಪಗಳನ್ನ ನೂರು ವರ್ಷವಾದ್ರೂ ನಿರ್ಮಿಸಲು ಆಗಲ್ಲ. ಆ ಸ್ಮಾರಕಗಳನ್ನ ಉಳಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡಬೇಕೆಂದು ದರ್ಶನ್ ಮನವಿ ಮಾಡಿದರು. ಇದೇ ವೇಳೆ ಮಾತನಾಡಿದ ನಿರ್ಮಾಪಕ ಮುನಿರತ್ನ ಶ್ರೀಕೃಷ್ಣ ದೇವರಾಯನ ಬಗ್ಗೆ ಚಿತ್ರ ನಿರ್ಮಾಣ ಮಾಡುವೆ. ಮುತ್ತುರತ್ನಗಳನ್ನ ಮಾರಾಟ ಮಾಡುವ ಕಾಲ. ನ್ಯಾಯ ಅನ್ಯಾಯದ ಕಾಲದ ಬಗ್ಗೆ ರಾಜ್ಯದ ಜನರಿಗಾಗಿ ಚಿತ್ರ ಮಾಡುವೆ. ಶ್ರೀಕೃಷ್ಣ ದೇವರಾಯನಾಗಿ ನಟ ದರ್ಶನ್ ಅಭಿನಯಿಸಲಿದ್ದಾರೆಂದು ಘೋಷಿಸಿದರು.

    ಹಂಪಿ ಉತ್ಸಾವ ಉದ್ಘಾಟನೆ ಮಾಡಿ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಶ್ರೀಕೃಷ್ಣ ದೇವರಾಯನ ಬಗ್ಗೆ ಚಿತ್ರ ನಿರ್ಮಾಣ ಮಾಡಿದರೆ, ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಂಪಿ ಶಿಲ್ಪಕಲೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಿಳಿಸಿ: ನಟ ದರ್ಶನ್

    ಹಂಪಿ ಶಿಲ್ಪಕಲೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಿಳಿಸಿ: ನಟ ದರ್ಶನ್

    ಬಳ್ಳಾರಿ: ಐತಿಹಾಸಿಕ ಹಂಪಿ ಶಿಲ್ಪಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಿಳಿಸಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    ಹಂಪಿ ಉತ್ಸವದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ನಟ ದರ್ಶನ್, ಇನ್ನೂ ನೂರು ಶತಮಾನ ಹೋದರೂ ಹಂಪಿಯಂತಹ ಅಪೂರ್ವ ಶಿಲ್ಪಕಲೆಗಳನ್ನು ನಾವು ಕಟ್ಟುವುದಕ್ಕಾಗುವುದಿಲ್ಲ. ಆದ ಕಾರಣ ಈಗಿರುವ ಹಂಪಿಯ ಶಿಲ್ಪಕಲೆಗಳನ್ನು ಉಳಿಸಿಕೊಂಡು ಹೋಗಬೇಕು ಮತ್ತು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

    ಇಲ್ಲಿನ ಪ್ರತಿ ಶಿಲ್ಪಕಲೆಯನ್ನು ನೋಡಿದರೇ ವಿಜಯನಗರ ಸಾಮ್ರಾಜ್ಯದವರು ಅದರಲ್ಲೂ ವಿಶೇಷವಾಗಿ ಶ್ರೀಕೃಷ್ಣದೇವರಾಯ ಅವರು ಮಾಡಿರುವ ಸಾಧನೆಗಳು ಮತ್ತು ಪರಾಕ್ರಮಗಳು ತಿಳಿಯುತ್ತವೆ. ಅದನ್ನು ಉಳಿಸಿಕೊಂಡು ಹೋಗುವುದರ ಜೊತೆಗೆ ಕನ್ನಡ ಸಿನಿಮಾಗಳನ್ನು ಹೆಚ್ಚೆಚ್ಚು ನೋಡಿ ಎಂದು ಮನವಿ ಮಾಡಿದರು. ಉತ್ಸವದಲ್ಲಿ ದರ್ಶನ್‍ರನ್ನು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.

    ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಹಾಗೂ ಶಾಸಕ ಮುನಿರತ್ನ ಅವರು ಮಾತನಾಡಿ, ಶ್ರೀಕೃಷ್ಣದೇವರಾಯ ಸಿನಿಮಾನವನ್ನು ನಿರ್ಮಾಣ ಮಾಡಿಯೇ ಸಿದ್ದ. ವಜ್ರ-ವೈಡೂರ್ಯಗಳನ್ನು ಬಳ್ಳದಲ್ಲಿ ಅಳೆಯುತ್ತಿದ್ದ ಧರ್ಮದ ನಾಡು ಇದು. ಇಲ್ಲಿ ಅನೇಕ ಕುರುಹಗಳಿದ್ದು, ಎಲ್ಲ ಭಾಷೆಗಳಿಗೂ ಆಗುವಂತ ಶ್ರೀಕೃಷ್ಣದೇವರಾಯ ಚಿತ್ರ ನಿರ್ಮಾಣ ಮಾಡಲಾಗುವುದು ಮತ್ತು ಅದರಲ್ಲಿ ದರ್ಶನ್ ಅವರ ಪಾತ್ರ ಇದ್ದೇ ಇರುತ್ತದೆ ಎಂದರು.

    ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಸಚಿವರಾದ ತುಕಾರಾಂ, ಪಿ.ಟಿ.ಪರಮೇಶ್ವರ ನಾಯಕ್, ಸಂಸದ ಉಗ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಗೋಪಾಲಸ್ವಾಮಿ, ಶಾಸಕರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಸೋಮಶೇಖರ್ ರೆಡ್ಡಿ, ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ, ಹಂಪಿ ಗ್ರಾಪಂ ಅಧ್ಯಕ್ಷೆ, ಕಮಲಾಪುರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮಳಲಿ, ಜಿಪಂ ಸಿಇಒ ನಿತೀಶ್, ಎಸ್ಪಿ ಅರುಣ ರಂಗರಾಜನ್,ಹಂಪಿ ವಿಶ್ವ ಪರಂಪರೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ದಿವ್ಯಪ್ರಭು ಮತ್ತಿತರರು ಇದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv