Tag: vijayanagara accident

  • ಮದ್ಯ ಸಾಗಿಸುತ್ತಿದ್ದ ಲಾರಿ ಪಲ್ಟಿ- ಎಣ್ಣೆ ಕದಿಯಲು ಬಂದ ಜನರಿಗೆ ನಿರಾಶೆ!

    ಮದ್ಯ ಸಾಗಿಸುತ್ತಿದ್ದ ಲಾರಿ ಪಲ್ಟಿ- ಎಣ್ಣೆ ಕದಿಯಲು ಬಂದ ಜನರಿಗೆ ನಿರಾಶೆ!

    ವಿಜಯನಗರ: ಮದ್ಯ ತುಂಬಿಕೊಂಡು ಹೋಗುತ್ತಿದ್ದ ಅಬಕಾರಿ ಇಲಾಖೆಯ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ತಿಮ್ಮಲಾಪುರ ಬಳಿ ನಡೆದಿದೆ.

    ಮದ್ಯ ತುಂಬಿಕೊಂಡು ಬೆಂಗಳೂರಿನಿಂದ ಬೀದರ್‍ಗೆ ಒಯ್ಯುತ್ತಿದ್ದ ಲಾರಿ ಮಾರ್ಗ ಮಧ್ಯದಲ್ಲಿ ತಿಮ್ಮಲಾಪುರದ ರಾಷ್ಟ್ರೀಯ ಹೆದ್ದಾರಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ವೈನ್ ಸೇರಿದಂತೆ ನಾನಾ ಮದ್ಯ ಕೊಂಡೊಯ್ಯುತ್ತಿದ್ದ ಲಾರಿ ಪಲ್ಟಿಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಎಣ್ಣೆ ಬಾಟಲಿ ಕದಿಯಲು ಓಡೋಡಿ ಬಂದಿದ್ದಾರೆ. ಆದರೆ ಎಲ್ಲರೂ ನಿರಾಶೆಯಿಂದ ಹಿಂತಿರುಗಿದ್ದಾರೆ. ಇದನ್ನೂ ಓದಿ: ಹಿಂದುತ್ವ ಎಂಬುದು ರಾಜಕೀಯವಾಗಿದೆ: ರಮ್ಯಾ

    ಜನರು ಬರುವ ಹೊತ್ತಿಗಾಗಲೇ ಸ್ಥಳಕ್ಕೆ ಮರಿಯಮ್ಮನ ಹಳ್ಳಿ ಪೊಲೀಸರು ಆಗಮಿಸಿದ್ದರು. ಹೀಗಾಗಿ ಜನರು ಬಂದ ದಾರಿಗೆ ಸುಂಕ ಇಲ್ಲಾ ಎಂಬಂತೆ ಮರಳಿದ್ದಾರೆ. ಪೆÇಲೀಸರು ಸರಿಯಾದ ಸಮಯಕ್ಕೆ ಬಂದ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ, ಗ್ರಾಮಸ್ಥರ ಪಾಲಾಗುವುದು ತಪ್ಪಿದೆ. ನಂತರ ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪಕ್ಕದ ಮನೆ ಗೋಡೆ ಕುಸಿದು ದಂಪತಿ ಸಾವು