Tag: Vijaya Prasad

  • ನೀವ್ಯಾರು ಮಕ್ಕಳು ಮಾಡಲ್ವಾ?: ತೋತಾಪುರಿ ಚಿತ್ರದ ಡಬಲ್ ಮೀನಿಂಗ್ ಡೈಲಾಗ್ ಸಮರ್ಥಿಸಿಕೊಂಡ ಜಗ್ಗೇಶ್

    ನೀವ್ಯಾರು ಮಕ್ಕಳು ಮಾಡಲ್ವಾ?: ತೋತಾಪುರಿ ಚಿತ್ರದ ಡಬಲ್ ಮೀನಿಂಗ್ ಡೈಲಾಗ್ ಸಮರ್ಥಿಸಿಕೊಂಡ ಜಗ್ಗೇಶ್

    ನಿನ್ನೆಯಷ್ಟೇ ಜಗ್ಗೇಶ್ ನಟನೆಯ ‘ತೋತಾಪುರಿ’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ತುಂಬಾ ಬರೀ ಡಬಲ್ ಮೀನಿಂಗ್ ಡೈಲಾಗ್ ಗಳೇ ತುಂಬಿಕೊಂಡಿವೆ. ಇಂತಹ ಸಿನಿಮಾವನ್ನು ಕುಟುಂಬ ಸಮೇತ ನೋಡುವುದಕ್ಕೆ ಆಗುತ್ತಾ ಎನ್ನುವ ಮಾತುಗಳು ಕೂಡ ಕೇಳಿ ಬಂದಿದ್ದವು. ನಿರ್ದೇಶಕ ವಿಜಯ್ ಪ್ರಸಾದ್ ಅವರ ಬಹುತೇಕ ಸಿನಿಮಾಗಳ ಡೈಲಾಗ್ ಹಾಗೆಯೇ ಏಕೆ ಎನ್ನುವ ಪ್ರಶ್ನೆಯೂ ಪತ್ರಿಕಾಗೋಷ್ಠಿಯಲ್ಲಿ ತೂರಿ ಬಂತು. ಅದಕ್ಕೆ ಜಗ್ಗೇಶ್ ಮಾರ್ಮಿಕವಾಗಿಯೇ ಸಮರ್ಥನೆ ನೀಡಿರು. ಇದನ್ನೂ ಓದಿ : ಅಪ್ಪ ಸರಿ, ಮಕ್ಕಳು ತಪ್ಪು ಸರಕಾರಕ್ಕೆ ಟಾಂಗ್ ಕೊಟ್ಟ ನಟ ಉಪೇಂದ್ರ

    ತೋತಾಪುರಿ ಒಂದೊಳ್ಳೆ ಸಿನಿಮಾ. ಆ ಡೈಲಾಗ್ ಕೇಳಿದಾಗ ಸಹಜವಾಗಿ ಡಬಲ್ ಮೀನಿಂಗ್ ಅನಿಸತ್ತೆ. ನಾವ್ಯಾರು ಆ ರೀತಿ ಮಾತೇ ಆಡಲ್ಲವಾ? ಮಾಯಮಂತ್ರದಿಂದ ಹೆಂಡತಿ ನೋಡಿದ್ರೆ ಮಕ್ಕಳ ಆಗತ್ತಾ? ನಾವ್ಯಾರು ಮಕ್ಕಳ ಮಾಡಲ್ವಾ?’ ಎಂದು ಡಬಲ್ ಮೀನಿಂಗ್ ನಲ್ಲೇ ಉತ್ತರಿಸಿದರು ಜಗ್ಗೇಶ್. ಈ ಸಿನಿಮಾದಲ್ಲಿ ಅದ್ಭುತವಾದ ಸಂದೇಶವಿದೆ. ಅದನ್ನು ಮನರಂಜನೆಯ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ಎಂದರು ಜಗ್ಗೇಶ್. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

    ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ನ ಎರಡನೇ ಸಿನಿಮಾವಿದು. ಈ ಹಿಂದೆ ರಿಲೀಸ್ ಆಗಿದ್ದ ನೀರ್ ದೋಸೆ ಕೂಡ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಈ ಸಿನಿಮಾ ಕೂಡ ನಿರೀಕ್ಷೆ ಮೂಡಿಸಿದೆ. ಮತ್ತೇ ಜಗ್ಗೇಶ್ ಮತ್ತು ವಿಜಯ್ ಪ್ರಸಾದ್ ಪ್ರೇಕ್ಷಕರಿಗೆ ಒಂದೊಳ್ಳೆ ಸಿನಿಮಾ ಕೊಡಲಿದ್ದಾರೆ ಎನ್ನುವ ಸೂಚನೆ ಕೊಡುವಂತಿದೆ ರಿಲೀಸ್ ಆಗಿರುವ ಟ್ರೈಲರ್. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ಹಿಂದೂ ಮುಸ್ಲಿಂ ಕಥೆಯನ್ನು ಸಿನಿಮಾಗಾಗಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದು, ಭಾವಕ್ಯತೆಗೆ ಹೇಳಿ ಮಾಡಿಸಿದ ಸಿನಿಮಾ ಎನ್ನಲಾಗುತ್ತಿದೆ. ಎಲ್ಲಿಯೂ ಕೋಮಗಲಭೆ ಆಗುವಂತಹ ಒಂದೇ ಒಂದು ದೃಶ್ಯವನ್ನೂ ಸಿನಿಮಾದಲ್ಲಿ ಬಳಸಿಲ್ಲವಂತೆ. ಇಡೀ ಕುಟುಂಬ ಸಮೇತ ನೋಡುವಂತಹ ಸಿನಿಮಾ ಇದಾಗಿದೆ ಎನ್ನುತ್ತಾರೆ ನಿರ್ದೇಶಕರು. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ಕೆ.ಎ.ಸುರೇಶ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಜಗ್ಗೇಶ್ ಜತೆ ಡಾಲಿ ಧನಂಜಯ್, ಹೇಮಾ ದತ್ತ್, ಅದಿತಿ ಪ್ರಭುದೇವ್ ಸೇರಿದಂತೆ ಹಲವು ಕಲಾವಿದರು ಸಿನಿಮಾದಲ್ಲಿದ್ದಾರೆ. ಈ ಸಿನಿಮಾ ಎರಡು ಪಾರ್ಟ್ ನಲ್ಲಿ ಮೂಡಿ ಬಂದಿದೆ. ಮೊದಲನೇ ಭಾಗ ಅತೀ ಶೀಘ್ರದಲ್ಲೇ ರಿಲೀಸ್ ಮಾಡಲಿದ್ದಾರಂತೆ ನಿರ್ಮಾಪಕರು.

  • ಭಾರೀ ಮೊತ್ತಕ್ಕೆ ಸೇಲ್ ಆಯ್ತು ನೀನಾಸಂ ಸತೀಶ್ ನಟನೆಯ ‘ಪೆಟ್ರೊಮ್ಯಾಕ್ಸ್’

    ಭಾರೀ ಮೊತ್ತಕ್ಕೆ ಸೇಲ್ ಆಯ್ತು ನೀನಾಸಂ ಸತೀಶ್ ನಟನೆಯ ‘ಪೆಟ್ರೊಮ್ಯಾಕ್ಸ್’

    ಸ್ಟಾರ್ ನಟ ನೀನಾಸಂ ಸತೀಶ್ ಮತ್ತು ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಷನ್ ನ ‘ಪೆಟ್ರೊಮ್ಯಾಕ್ಸ್’ ಸಿನಿಮಾದ ಡಿಜಿಟಲ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗುತ್ತಿದೆ. ಕನ್ನಡದ ಕಲರ್ಸ್ ವಾಹಿನಿಯು ಟಿವಿ ಮತ್ತು ಡಿಜಿಟಲ್ ರೈಟ್ಸ್ ಅನ್ನು ದಾಖಲೆಯ ಮೊತ್ತ ಕೊಟ್ಟು ಪಡೆದಿದೆ ಎನ್ನುತ್ತಿವೆ ಗಾಂಧಿನಗರದ ಮೂಲಗಳು. ಇದನ್ನೂ ಓದಿ : ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ

    ಈ ಕುರಿತು ನೀನಾಸಂ ಸತೀಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ‘ಟಿವಿ ಮತ್ತು ಡಿಜಿಟಲ್ ರೈಟ್ಸ್’ ಅನ್ನು ಕನ್ನಡ ಕಲರ್ಸ್ ವಾಹಿನಿಗೆ ಸೇಲ್ ಮಾಡಿದ್ದೇವೆ ಎಂದು ಪೋಸ್ಟರ್ ಹಾಕಿದರೂ, ಎಷ್ಟು ಮೊತ್ತ ಎಂದು ಅವರು ಬಹಿರಂಗ ಪಡಿಸಿಲ್ಲ. ಈ ಹಿಂದೆ ಇದೇ ವಾಹಿನಿಯಲ್ಲಿ ನೀನಾಸಂ ಸತೀಶ್ ಅವರ ಚಿತ್ರಗಳು ಭಾರೀ ಟಿ.ಆರ್.ಪಿ ತಂದುಕೊಟ್ಟಿವೆ. ಅಲ್ಲದೇ, ನೂರಾರು ಬಾರಿ ಪ್ರದರ್ಶನ ಕಂಡಿವೆ. ಹಬ್ಬ ಹರಿದಿನಗಳಲ್ಲಂತೂ ಸತೀಶ್ ಅವರ ಚಿತ್ರಗಳನ್ನೇ ವಾಹಿನಿಯು ಹೆಚ್ಚಾಗಿ ಪ್ರದರ್ಶನ ಮಾಡುತ್ತಿತ್ತು. ಹೀಗಾಗಿ ಪೆಟ್ರೊಮ್ಯಾಕ್ಸ್ ಅಧಿಕ ಮೊತ್ತ ಕೊಟ್ಟೆ ತಗೆದುಕೊಂಡಿದೆ ಎನ್ನುತ್ತಿವೆ ಮೂಲಗಳು. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್ 

    ಪೆಟ್ರೊಮ್ಯಾಕ್ಸ್ ಇದೊಂದು ವಿಭಿನ್ನ ಕಥಾ ಹಂದರ ಚಿತ್ರ. ಸತೀಶ್ ಮತ್ತು ಹರಿಪ್ರಿಯಾ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಕಾರುಣ್ಯ ರಾಮ್ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಕೂಡ ಮುಗಿದಿದ್ದು, ಕೆಲವೇ ತಿಂಗಳುಗಳಲ್ಲಿ ರಿಲೀಸ್ಗೂ ಪ್ಲ್ಯಾನ್ ಮಾಡಲಾಗಿದೆಯಂತೆ. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

    ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟ್ರೈಲರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸತೀಶ್ ಅವರ ಡೈಲಾಗ್‍ ಕಚಗುಳಿಗೆ ಅಭಿಮಾನಿಗಳು ಫಿದಾ ಆಗಿದ್ದರು. ನಿರ್ದೇಶಕ ವಿಜಯ್ ಪ್ರಸಾದ್ ಅವರ ಶೈಲಿ ಮತ್ತು ಸತೀಶ್ ಅವರ ನಟನೆ ಅಭಿಮಾನಿಗಳಿಗೆ ಭಾರೀ ಮಜಾ ಕೊಡಲಿದೆ.

  • ಬಾಗ್ಲು ತೆಗಿ ಮೇರಿ ಜಾನ್ ಹಾಡಿಗೆ ಗಲ್ಫ್ ಕನ್ನಡಿಗರ ಬಹುಪರಾಕ್: ಹಾಡೂ ಬೊಂಬಾಟ್ ಹಿಟ್

    ಬಾಗ್ಲು ತೆಗಿ ಮೇರಿ ಜಾನ್ ಹಾಡಿಗೆ ಗಲ್ಫ್ ಕನ್ನಡಿಗರ ಬಹುಪರಾಕ್: ಹಾಡೂ ಬೊಂಬಾಟ್ ಹಿಟ್

    ರೀಲ್ಸ್ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡಿನದ್ದೇ ಸದ್ದು. ನವರಸ ನಾಯಕ ಜಗ್ಗೇಶ್ ನಟನೆಯ ತೋತಾಪುರಿ ಚಿತ್ರದ ಈ ಹಾಡಿಗೆ ದೇಶ-ವಿದೇಶದಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಬಿಡುಗಡೆಯಾದಾಗಿನಿಂದಲೂ ಸಖತ್ ಸದ್ದು ಮಾಡುತ್ತಿದೆ. ದೇಶ ಮಾತ್ರವಲ್ಲದೇ ವಿದೇಶದಿಂದಲೂ ಈ ಹಾಡನ್ನು ಮೆಚ್ಚಿಕೊಂಡಿದ್ದು ‘ತೋತಾಪುರಿ’ ಹೆಚ್ಚುಗಾರಿಕೆ. ಇದನ್ನೂ ಓದಿ : ಹಾಲಿವುಡ್ ಗೆ ಹಾರಿದ ಸುದೀಪ್ ನಟನೆಯ ವಿಕ್ರಾಂತ್ ರೋಣ

    `ಬಾಗ್ಲು ತೆಗಿ ಮೇರಿ ಜಾನ್‌’ ಹಾಡು 100 ಮಿಲಿಯನ್‌ಗೂ ಅಧಿಕ ಹಿಟ್ಸ್ ದಾಖಲಿಸಿ ಮುನ್ನುಗ್ಗುತ್ತಿದೆ.  ಈ ಹಾಡಿಗೆ ಪ್ರಸ್ತುತ ಚಾನಲ್‌ವೊಂದರಲ್ಲೇ 15 ಮಿಲಿಯನ್‌ಗೂ ಅಧಿಕ ಹಿಟ್ಸ್ ದಾಖಲಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ 85 ಮಿಲಿಯನ್‌ಗೂ ಅಧಿಕ ಹಿಟ್ಸ್ ದಾಖಲಾಗಿರುವುದು `ತೋತಾಪುರಿ’ ಹೆಚ್ಚುಗಾರಿಕೆ. ಇತ್ತೀಚೆಗೆ ಬಂದ ಹಾಡುಗಳ ಪೈಕಿ ದೊಡ್ಡ ಮಟ್ಟದಲ್ಲಿ ಜನರನ್ನು ಸೆಳೆದ ಹಾಡು ಇದಾಗಿದ್ದು, ದಿನದಿಂದ ದಿನಕ್ಕೆ ಕ್ರೇಜ್‌ ಹೆಚ್ಚಿಸುತ್ತಲೇ ಇದೆ. ಯೂ ಟ್ಯೂಬ್‌ ರೀಲ್ಸ್, ಶಾರ್ಟ್ಸ್ ಹಾಗೂ ಸ್ಟೋರಿಸ್‌ಗಳಲ್ಲಿ ಈ ಹಾಡಿನ ತುಣುಕಿಗೆ ಡಾನ್ಸ್ ಮಾಡಿ ಅಪ್ಲೋಡ್‌ ಮಾಡಿರುವುದು ವಿಶೇಷ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೂ ಈ ಹಾಡು ಇಷ್ಟವಾಗಿರುವುದು `ತೋತಾಪುರಿ’ ಹಾಡಿನ ವಿಶೇಷ.

    ತೋತಾಪುರಿ ಚಿತ್ರದ ಹಾಡು, ಮೇಕಿಂಗ್ ಹಾಗೂ ತಂಡದ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡಿರುವ ಜಗ್ಗೇಶ್, ಈ ಸಿನಿಮಾಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು. ಇನ್ನು ‘ಬಾಗ್ಲು ತೆಗಿ ಮೇರಿ ಜಾನ್’ಗೆ ದುಬೈ ಕನ್ನಡಿಗರಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದ್ದು ಈ ಕಾರ್ಯಕ್ರಮದ ವಿಶೇಷ. ಇದನ್ನೂ ಓದಿ : ಸ್ಸಾರಿ… ಥಿಯೇಟರ್ ಗೆ ಬರ್ತಿಲ್ಲ ತಮಿಳಿನ ಧನುಷ್ ನಟನೆಯ ಮಾರನ್ ಸಿನಿಮಾ

    ಇತ್ತೀಚೆಗಷ್ಟೇ ಅಮೆರಿಕಾ ನೆರೆಹೊರೆಯ ರಾಷ್ಟ್ರದ ಅನಿವಾಸಿ ಕನ್ನಡಿಗರೊಂದಿಗೆ ವರ್ಚುವಲ್ ಮಾತುಕತೆ ನಡೆಸಿದ್ದ ಜಗ್ಗೇಶ್, ಇದೀಗ ಗಲ್ಫ್ ಕನ್ನಡಿಗರೊಂದಿಗೂ ‘ತೋತಾಪುರಿ’ ಬಗ್ಗೆ ವಿಶೇಷವಾಗಿ ವಿಷಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಅಪ್ಡೇಟ್ : ಯಾವಾಗ, ಏನು ಅಂತ ನೋಡ್ಕೊಂಡ್ ಬಿಡಿ

    ಈಗಾಗಲೇ ಮಿಲಿಯನ್’ಗಟ್ಟಲೆ ಹಿಟ್ಸ್ ದಾಖಲಿಸಿರುವ ಈ ಚಿತ್ರದ ಹಾಡಿಗೆ ಎಲ್ಲರೂ ತಲೆದೂಗಿಸುತ್ತಿದ್ದಾರೆ. ‘ನೀರ್ ದೋಸೆ’ ಖ್ಯಾತಿಯ ವಿಜಯಪ್ರಸಾದ್ ನಿರ್ದೇಶಿಸಿರುವ ತೋತಾಪುರಿ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಮೋನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕೆ.ಎ.ಸುರೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎರಡು ಭಾಗಗಳಲ್ಲಿ ತೋತಾಪುರಿ ತೆರೆಕಾಣಲಿರುವುದು ವಿಶೇಷ. ಇದನ್ನೂ ಓದಿ : ಖ್ಯಾತ ಗಾಯಕ ಮಿಕಾ ಸಿಂಗ್ ಸ್ವಯಂವರ : ನೀವೂ ಭಾಗಿಯಾಗಬಹುದು

    ಡಾಲಿ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ಅದಿತಿ ಪ್ರಭುದೇವ, ವೀಣಾ ಸುಂದರ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ.