Tag: Vijaya Prakash

  • ಕನ್ನಡದಲ್ಲೊಂದು ಹನುಮಾನ್ ಚಾಲಿಸಾ

    ಕನ್ನಡದಲ್ಲೊಂದು ಹನುಮಾನ್ ಚಾಲಿಸಾ

    ಹೃದಯಸ್ಪರ್ಶ ನೀಡುವ ಹೃತ್ಕಂಠ ಗಾಯಕ ನಮ್ಮ ಕನ್ನಡದ ಹೆಮ್ಮೆಯ ವಿಜಯ್ ಪ್ರಕಾಶ್ (Vijaya Prakash) ಅವರ ಧ್ವನಿಯಲ್ಲಿ ಕನ್ನಡದಲ್ಲಿ ಮೊದಲನೇ ಹನುಮಾನ ಚಾಲಿಸಾ (Hanumana Chalisa) ಕೋಟ್ಯಂತರ ಜನ ಭಾರತೀಯರು ಕಾತುರದಿಂದ ಕಾಯುತ್ತಿರುವ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠೆ ಸುಸಮಯ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಜಗತ್ತಿಗೆ ಭಕ್ತಿಯ ನಿಯಮ – ಏನೆಂದು ತೋರಿಸಿಕೊಟ್ಟ ರಾಮಭಕ್ತ ಹನುಮನ ಕುರಿತಾದ ಹನುಮಾನ್ ಚಾಲಿಸಾ ಬಿಡುಗಡೆಯಾಗಿದೆ.

    ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಮೂಡಿಬಂದಿರುವ ಹನುಮಾನ್ ಚಾಲಿಸಾ ವನ್ನು ಭಕ್ತಿ ಭಾವದ ಹೊನಲಿಗೆ ಹೃದಯಸ್ಪರ್ಶ ನೀಡುವ ಹೃತ್ಕಂಠ ಗಾಯಕ ನಮ್ಮ ಕನ್ನಡದ ಹೆಮ್ಮೆಯ ವಿಜಯ್ ಪ್ರಕಾಶ್ ಸುಶ್ರಾವ್ಯವಾಗಿ ಭಕ್ತಿಪರವಶರಾಗಿ ಹಾಡಿದ್ದಾರೆ.

    ನಿರ್ಮಾಣ ವೆಂಕಟೇಶ್ ಉತ್ತರಹಳ್ಳಿ ಅವರಿಂದ ಇದಕ್ಕೆ ಸಂಗೀತದ ಸ್ಪರ್ಶ ನೀಡಿರುವವರು ಈಗಾಗಲೇ ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಹಲವು ಚಿತ್ರಗಳಿಗೆ ಸಂಗೀತ ನೀಡಿ ಜನ ಮನ್ನಣೆಗಳಿಸಿರುವ ಲೋಕಿ ತವಸ್ಯ ಅವರು.

    ಹನುಮನ ಕುರಿತಾಗಿ ಹಲವು ಕೃತಿಗಳು, ಗೀತೆಗಳು, ಭಕ್ತಿಗೀತೆಗಳು ಬಂದಿವೆ. ಆದರೆ ಕನ್ನಡದಲ್ಲೇ ಪ್ರಪ್ರಥಮ ಬಾರಿಗೆ ಹನುಮಾನ್ ಚಾಲಿಸವನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಒಂದು ಆಲ್ಬಂ ತಯಾರಿಸಲಾಗಿದೆ. ಇಂತಹ ಒಂದು ಅದ್ಭುತ ಕೆಲಸವನ್ನು ಹನುಮನ ಅಪ್ರತಿಮ ಭಕ್ತರಾದ ವೆಂಕಟೇಶ್  ಉತ್ತರಹಳ್ಳಿ ಬಹಳ ಆಸ್ಥೆವಹಿಸಿ ತನು ಮನ ಧನವನ್ನು ಸಮರ್ಪಿಸಿ ಲಕ್ಷ್ಮಿ ವೆಂಕಟೇಶ್ವರ RG510 ಉತ್ತರಹಳ್ಳಿ ಬ್ಯಾನರ್ ಅಡಿಯಲ್ಲಿ ಈ ಆಲ್ಬಂ ಅನ್ನು ನಿರ್ಮಿಸಿದ್ದಾರೆ.

  • ವಿಜಯ್ ಪ್ರಕಾಶ್ ಧ್ವನಿಯಲ್ಲಿ ‘ಜಲಪಾತ’ ಸಾಂಗ್

    ವಿಜಯ್ ಪ್ರಕಾಶ್ ಧ್ವನಿಯಲ್ಲಿ ‘ಜಲಪಾತ’ ಸಾಂಗ್

    ಟಿ.ಸಿ.ರವೀಂದ್ರ ತುಂಬರಮನೆ ನಿರ್ಮಾಣದ, ರಮೇಶ್ ಬೇಗಾರ್ (Ramesh Begar) ನಿರ್ದೇಶನದ ‘ಜಲಪಾತ’  (Jalapata) ಚಿತ್ರಕ್ಕಾಗಿ  ರಮೇಶ್ ಬೇಗಾರ್ ಬರೆದಿರುವ ‘ಎದೆಯ ದನಿಯ ಹಾಡು ಕೇಳು’ ಎಂಬ ಪರಿಸರದ ಕುರಿತಾದ ಹಾಡು (Song) ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ಗಾಯಕ ವಿಜಯ್ ಪ್ರಕಾಶ್ (Vijaya Prakash) ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಸಾದ್ವಿನಿ ಕೊಪ್ಪ (Sadwini Koppa) ಸಂಗೀತ ನೀಡಿದ್ದಾರೆ. ಗಾಯಕಿಯಾಗಿ ಜನಪ್ರಿಯರಾಗಿರುವ ಸಾದ್ವಿನಿ, ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕಿಯಾಗಿದ್ದಾರೆ. ಖ್ಯಾತ ಗಾಯಕ ನಗರ ಶ್ರೀನಿವಾಸ ಉಡುಪ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು.

    ಜಲಪಾತ ನನ್ನ ಎರಡನೇ ನಿರ್ದೇಶನದ ಚಿತ್ರ. ಪರಿಸರದ ಕುರಿತು ಜಗೃತಿ ಮೂಡಿಸುವ ಹಾಡುಗಳು ಸಾಕಷ್ಟು ಬಂದಿದೆ. ಆದರೆ ಈ ಹಾಡು ಸ್ವಲ್ಪ ವಿಭಿನ್ನ. ಮೊದಲ ನುಡಿಯಲ್ಲಿ ಪರಿಸರ ನಮಗೆ ಏನೆಲ್ಲಾ ನೀಡಿದೆ ಎಂದು ಇದೆ. ಎರಡನೇ ನುಡಿಯಲ್ಲಿ ನಮ್ಮಿಂದ ಪರಿಸರ ಏನಾಗುತ್ತಿದೆ ಎಂದಿದೆ. ವಿಜಯ್ ಪ್ರಕಾಶ್ ಅವರ ಕಂಠದಲ್ಲಿ ಈ ಹಾಡನ್ನು ಕೇಳುವುದೆ ಸೊಗಸು. ಅಷ್ಟೇ ಚೆನ್ನಾಗಿ ಸಾದ್ವಿನಿ ಸಂಗೀತ ನೀಡಿದ್ದಾರೆ‌.  ರಜನೀಶ್, ನಾಗಶ್ರೀ ಬೇಗಾರ್ ಈ ಚಿತ್ರದ ನಾಯಕ, ನಾಯಕಿ. ಪ್ರಮೋದ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಮಲೆನಾಡ ರಂಗಭೂಮಿ ಪ್ರತಿಭೆಗಳು ಹೆಚ್ಚಾಗಿ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ದೇಶಕ ರಮೇಶ್ ಬೇಗಾರ್ ತಿಳಿಸಿದರು.

    ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಅವರು ನನ್ನ ಗುರುಗಳು ಎಂದು ಮಾತು ಪ್ರಾರಂಭಿಸಿದ ನಿರ್ಮಾಪಕ ರವೀಂದ್ರ ತುಂಬರಮನೆ, ಪರಿಸರದ ಬಗ್ಗೆ ಅರಿವು ಮೂಡಿಸುವ ಚಿತ್ರ ನಿರ್ಮಿಸಬೇಕೆಂಬ ಹಂಬಲದಿಂದ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಮಲೆನಾಡ ಸೊಗಡಿನ ಈ ಚಿತ್ರ ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು.

    ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ಕೆಲವು ಬಿಟ್ಸ್ ಗಳಿದೆ. ಈ ಹಾಡಿನ ಸಾಹಿತ್ಯ ನೋಡಿ ಈ ಹಾಡಿಗೆ ವಿಜಯ್ ಪ್ರಕಾಶ್ ಅವರ ಧ್ವನಿ ಸೂಕ್ತವೆನಿಸಿತು. ತಮ್ಮ ಕಾರ್ಯದೊತ್ತಡದ ನಡುವೆಯೂ ಈ ಹಾಡನ್ನು ಹಾಡಿದ ವಿಜಯ್ ಪ್ರಕಾಶ್ ಅವರಿಗೆ ಧನ್ಯವಾದ ಎಂದರು ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ.  ಚಿತ್ರದ ನಾಯಕ ರಜನೀಶ್ ಹಾಗೂ ನಾಯಕಿ ನಾಗಶ್ರೀ ಬೇಗಾರ್ ಜಲಪಾತ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪುನೀತ್ ಹುಟ್ಟುಹಬ್ಬಕ್ಕೆ ಹೊಸ ಸಾಂಗ್: ಒಂದಾಯಿತು ‘ಗೊಂಬೆ ಹೇಳತೈತೆ’ ಕಾಂಬಿನೇಷನ್

    ಪುನೀತ್ ಹುಟ್ಟುಹಬ್ಬಕ್ಕೆ ಹೊಸ ಸಾಂಗ್: ಒಂದಾಯಿತು ‘ಗೊಂಬೆ ಹೇಳತೈತೆ’ ಕಾಂಬಿನೇಷನ್

    ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬವನ್ನು ನಾನಾ ರೀತಿಯಲ್ಲಿ ಆಚರಿಸಲು ಸ್ಯಾಂಡಲ್‌ವುಡ್‌ ಸಿದ್ಧತೆ ಮಾಡಿಕೊಂಡಿದೆ. ಅಂದೇ ಅವರ ನಟನೆಯ ಜೇಮ್ಸ್ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಈಗಾಗಲೇ ಥಿಯೇಟರ್‌ಗಳು ಸಿಂಗಾರಗೊಂಡಿವೆ. ಕೆಲವು ಕಡೆ ಪುನೀತ್ ಹೆಸರಿನಲ್ಲಿ ರಕ್ತದಾನ, ಅಂಗಾಂಗ ದಾನ, ಅನ್ನ ಸಂತರ್ಪಣೆ ಹೀಗೆ ಅನೇಕ ಕೆಲಸಗಳು ನಡೆಯುತ್ತಿವೆ. ಈ ನಡುವೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಡೊಂದನ್ನು ಬರೆದದ್ದು, ಪುನೀತ್ ವ್ಯಕ್ತಿತ್ವವನ್ನು ಸಾರುವಂತಹ ಗೀತೆ ಅದಾಗಿದೆ. ಆ ಹಾಡನ್ನು ಪುನೀತ್ ಅವರ ಹುಟ್ಟು ಹಬ್ಬದ ದಿನದಂದು (ಮಾ.17) ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ : ಕಿರುತೆರೆಯ ನಟ, ನಿರ್ದೇಶಕ ರವಿಕಿರಣ್ ಪುತ್ರ ಸಿನಿಮಾಗೆ ರಂಗಕ್ಕೆ ಎಂಟ್ರಿ

    ಈ ಗೀತೆಯನ್ನು ವಿಜಯ ಪ್ರಕಾಶ್ ಹಾಡಿದ್ದು, ತಮನ್ನಾ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬರಲಿದೆ. ವಿಜಯ್ ಪ್ರಕಾಶ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ ‘ಗೊಂಬೆ ಹೇಳತೈತೆ’ ಹಾಡು ದಾಖಲೆ ರೀತಿಯಲ್ಲಿ ಕೇಳುಗರನ್ನು ತಲುಪಿತ್ತು. ಈ ಹಾಡು ಕೂಡ ಅದೇ ಮಾದರಿಯಲ್ಲಿಯೇ ಬರಲಿದೆಯಂತೆ. ಇದನ್ನೂ ಓದಿ : ಪೂಜಾ ಹೆಗ್ಡೆ ಅವಕಾಶ ಕಿತ್ತುಕೊಂಡ ರಶ್ಮಿಕಾ ಮಂದಣ್ಣ

    ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಎರಡು ಸಿನಿಮಾಗಳು ಬಂದಿದ್ದು, ಎರಡೂ ಚಿತ್ರಗಳು ಹಿಟ್ ಆಗಿವೆ. ಅಲ್ಲದೇ, ಹಾಡು ಮತ್ತು ಡಾನ್ಸ್ ಮೂಲಕ ಅತೀ ಹೆಚ್ಚು ಜನರನ್ನು ತಲುಪಿವೆ. ಇನ್ನೇನು ಮೂರನೇ ಸಿನಿಮಾ ಕೂಡ ಮೂಡಿ ಬರಬೇಕಿತ್ತು. ಅಷ್ಟರಲ್ಲಿ ಪುನೀತ್ ಅಗಲಿದರು. ಈಗ ಹಾಡಿನ ಮೂಲಕ ಪುನೀತ್ ಅವರನ್ನು ನೆನಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಸಂತೋಷ್ ಆನಂದ್ ರಾಮ್ .